Tag: Zero Traffic

  • ನವಜಾತ ಶಿಶುವಿಗೆ ಹೃದಯ ಕಾಯಿಲೆ – ಝೀರೋ ಟ್ರಾಫಿಕ್‍ನಲ್ಲಿ ಬೆಂಗಳೂರಿಗೆ ರವಾನೆ

    ನವಜಾತ ಶಿಶುವಿಗೆ ಹೃದಯ ಕಾಯಿಲೆ – ಝೀರೋ ಟ್ರಾಫಿಕ್‍ನಲ್ಲಿ ಬೆಂಗಳೂರಿಗೆ ರವಾನೆ

    ಹುಬ್ಬಳ್ಳಿ: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಒಂದು ತಿಂಗಳ ಹಸುಗೂಸನ್ನು ನಗರದ ಸ್ಪರ್ಶ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಅಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್‍ನಲ್ಲಿ ಕೊಂಡೊಯ್ಯಲಾಗಿದೆ.

    ಬುಧವಾರ ರಾತ್ರಿ 11.45ರ ವೇಳೆ ಹುಬ್ಬಳ್ಳಿಯಿಂದ ವಾಹನ ಹೊರಟಿದೆ. ಅದರ ಉಸ್ತುವಾರಿಯನ್ನು ಉತ್ತರ ಸಂಚಾರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರತನಕುಮಾರ ಜೀರಗ್ಯಾಳ ಹಾಗೂ ಸಿಬ್ಬಂದಿ ವಹಿಸಿಕೊಂಡಿದ್ದಾರೆ.

    ಮಗು ಹುಟ್ಟುವಾಗಲೇ ಹೃದಯದಲ್ಲಿ ಚಿಕ್ಕ ರಂಧ್ರವಿತ್ತು. ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ ಕಾರಣ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

    ಸದ್ಯ ಪೊಲೀಸರ ಸಹಕಾರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

  • 1 ವರ್ಷ 4 ತಿಂಗ್ಳ ಕಂದಮ್ಮನ ಜೀವ ಉಳಿಸಲು ಶಿವಮೊಗ್ಗದಿಂದ ಬೆಂಗ್ಳೂರಿಗೆ ಝೀರೋ ಟ್ರಾಫಿಕ್

    1 ವರ್ಷ 4 ತಿಂಗ್ಳ ಕಂದಮ್ಮನ ಜೀವ ಉಳಿಸಲು ಶಿವಮೊಗ್ಗದಿಂದ ಬೆಂಗ್ಳೂರಿಗೆ ಝೀರೋ ಟ್ರಾಫಿಕ್

    – ಅಪ್ಪ-ಅಮ್ಮನ ಜಗಳದಲ್ಲಿ ಮಗುವಿನ ಮೇಲೆ ಮಚ್ಚಿನೇಟು
    – ಸಾವು ಬದುಕಿನ ನಡುವಿನ ಹೋರಾಟದಲ್ಲಿ ಕಂದಮ್ಮ

    ಶಿವಮೊಗ್ಗ: ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆ ಪತಿ-ಪತ್ನಿ ಜಗಳದಲ್ಲಿ ಪುಟ್ಟ ಕಂದಮ್ಮವೊಂದು ಮಚ್ಚಿನಿಂದ ಹಲ್ಲೆಗೊಳಗಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ನಡೆದಿದೆ. ಇದನ್ನೂ ಓದಿ:  7 ದಿನದ ಹಸುಗೂಸಿಗೆ ಹೃದಯ ಸಮಸ್ಯೆ – ಝೀರೋ ಟ್ರಾಫಿಕ್‍ನಲ್ಲಿ ಶಿವಮೊಗ್ಗದಿಂದ ಬೆಂಗ್ಳೂರಿಗೆ ರವಾನೆ

    ಹಿರಂನಾಜ್ ಹಲ್ಲೆಗೊಳಗಾದ ಒಂದು ವರ್ಷ ನಾಲ್ಕು ತಿಂಗಳಿನ ಹೆಣ್ಣು ಮಗು. ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ವೇದಾನಗರ ನಿವಾಸಿ ಜೀಷನ್ ಮತ್ತು ಹಾಜರಾಬಾನು ದಂಪತಿಯ ಮಗುವಾಗಿದೆ. ಕಳೆದ ಶುಕ್ರವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜೀಷನ್ ಹಾಗೂ ಹಾಜರಾಬಾನು ದಂಪತಿ ನಡುವೆ ಜಗಳ ನಡೆದಿದೆ. ಇದನ್ನೂ ಓದಿ: ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ

    ಈ ವೇಳೆ ಜೀಷನ್ ತನ್ನ ಪತ್ನಿ ಹಾಜರಾಬಾನು ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆಗ ಮಗು ಅಡ್ಡ ಬಂದ ಪರಿಣಾಮ ಮಚ್ಚಿನ ಏಟು ಮಗುವಿನ ಮೇಲೆ ಬಿದ್ದಿದ್ದು, ಕಂದಮ್ಮ ಗಂಭೀರವಾಗಿ ಗಾಯಗೊಂಡಿದೆ. ಈ ಬಗ್ಗೆ ಕಡೂರು ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

    ಗಂಭೀರ ಗಾಯಗೊಂಡ ಮಗುವನ್ನು ತಕ್ಷಣ ಕಡೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಾರದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಝೀರೋ ಟ್ರಾಫಿಕ್ ಮೂಲಕ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ರವಾನಿಸಲಾಗಿದೆ.

  • ಡಿಸಿಎಂಗಾಗಿ 4 ಬಾರಿ ಝೀರೋ ಟ್ರಾಫಿಕ್ – ಬಿಸಿಲಿನಲ್ಲಿ ನಿಂತು ಹೈರಾಣದ ಜನತೆ

    ಡಿಸಿಎಂಗಾಗಿ 4 ಬಾರಿ ಝೀರೋ ಟ್ರಾಫಿಕ್ – ಬಿಸಿಲಿನಲ್ಲಿ ನಿಂತು ಹೈರಾಣದ ಜನತೆ

    ಚಿಕ್ಕಮಗಳೂರು: ದೋಸ್ತಿ ಸರ್ಕಾರದಲ್ಲಿ ಡಿಸಿಎಂ ಪರಮೇಶ್ವರ್ ಝೀರೋ ಟ್ರಾಫಿಕ್ ಸೌಲಭ್ಯ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು. ಈಗ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಝೀರೋ ಟ್ರಾಫಿಕ್ ಪಡೆದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಡಿಸಿಎಂ ಅಶ್ವಥ್ ನಾರಾಯಣ್‍ಗಾಗಿ ಪೊಲೀಸರು ಒಂದಲ್ಲ ಎರಡಲ್ಲ ನಾಲ್ಕು ಬಾರೀ ಝಿರೋ ಟ್ರಾಫಿಕ್ ಸೌಲಭ್ಯ ನೀಡಿದ್ದು, ಬಿಸಿಲಿನಲ್ಲಿ ನಿಂತು ಚಿಕ್ಕಮಗಳೂರಿನ ಜನ ಹೈರಾಣಾಗಿ ಹೋಗಿದ್ದಾರೆ.

    ಇಂದು ಚಿಕ್ಕಮಗಳೂರು ಪ್ರವಾಸದಲ್ಲಿರೋ ಡಿಸಿಎಂ ಅಶ್ವಥ್ ನಾರಾಯಣ್ 4 ಬಾರಿ ಝಿರೋ ಟ್ರಾಫಿಕ್ ಬಳಸಿದ್ದಾರೆ. ಚಿಕ್ಕಮಗಳೂರು ನಗರದ ತೊಗರಿಹಂಕಲ್, ಹನುಮಂತಪ್ಪ ವೃತ್ತ, ಮಲಂದೂರು ಸರ್ಕಲ್ ನಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಬಿಸಿಲಲ್ಲೇ ನಿಂತು ವಾಹನ ಸವಾರರು ರೇಗಾಡಿದ್ದಾರೆ.

    ಈ ಹಿಂದೆ ಟ್ರಾಫಿಕ್ ವಿಚಾರದ ಬಗ್ಗೆ ಮಾತನಾಡಿದ್ದ ಡಿಸಿಎಂ ಅಶ್ವಥ್ ನಾರಾಯಣ್, ನಾನು ಜನರ ಜೊತೆ ಬೆಳೆದು ಬಂದವನು. ಜನರಿಗೆ ತೊಂದರೆಯಾಗುವ ರೀತಿಯಲ್ಲಿ ನಡೆದುಕೊಳ್ಳಲ್ಲ. ನನಗೆ ಝೀರೋ ಟ್ರಾಫಿಕ್ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ನಾನು ಜನರಿಗೆ ಅನಾನುಕೂಲತೆ ಆಗಾದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ. ನಾನು ಯಾವುದೇ ಕಾರಣಕ್ಕೂ ಝಿರೋ ಟ್ರಾಫಿಕ್ ಉಪಯೋಗಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಒಂದೇ ದಿನದಲ್ಲಿ ನಾಲ್ಕು ಬಾರಿ ಝಿರೋ ಟ್ರಾಫಿಕ್ ಬಳಸಿದ್ದು ಚರ್ಚೆಗೆ ಕಾರಣವಾಗಿದೆ.

    ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರು ಝಿರೋ ಟ್ರಾಫಿಕ್ ತೆಗೆದುಕೊಳ್ಳಬಾರದು. ಝಿರೋ ಟ್ರಾಫಿಕ್‍ನಿಂದ ಸಂಚಾರ ಅಸ್ತವ್ಯಸ್ತವಾಗಲಿದೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಇದರಿಂದಾಗಿ ಜನರಿಗೆ ಕೆಟ್ಟ ಸಂದೇಶ ಹೋಗಿ ಪಕ್ಷಕ್ಕೆ ಮುಜುಗರ ಆಗಲಿದೆ ಎಂದು ಬಿಜೆಪಿ ಹೈಕಮಾಂಡ್ ಈ ಹಿಂದೆ ಎಚ್ಚರಿಕೆ ನೀಡಿತ್ತು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.

  • ಸಾರ್ವಜನಿಕರಿಗೆ ತೊಂದರೆಯಾಗುತ್ತೆ, ಝಿರೋ ಟ್ರಾಫಿಕ್ ಬೇಡ: ಬಸವರಾಜ ಬೊಮ್ಮಾಯಿ

    ಸಾರ್ವಜನಿಕರಿಗೆ ತೊಂದರೆಯಾಗುತ್ತೆ, ಝಿರೋ ಟ್ರಾಫಿಕ್ ಬೇಡ: ಬಸವರಾಜ ಬೊಮ್ಮಾಯಿ

    ಹಾವೇರಿ: ಝಿರೋ ಟ್ರಾಫಿಕ್ ಬೇಡ ಹಾಗೂ ಜಿಲ್ಲೆಗೆ ಭೇಟಿ ನೀಡಿದಾಗೊಮ್ಮೆ ಗಾರ್ಡ್ ಆಫ್ ಆನರ್ ಬೇಡ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್, ಫೇಸ್‍ಬುಕ್ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿವರು, ‘ಝಿರೋ ಟ್ರಾಫಿಕ್‍ನಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಝಿರೋ ಟ್ರಾಫಿಕ್ ಬೇಡ. ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಿಗೆ ಶುಕ್ರವಾರ ಭೇಟಿ ನೀಡಿದ್ದಾಗ ಝಿರೋ ಟ್ರಾಫಿಕ್‍ನಿಂದ ಸಾರ್ವಜನಿಕರಿಗೆ ಉಂಟಾದ ಸಮಸ್ಯೆಯನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

    ಝಿರೋ ಟ್ರಾಫಿಕ್ ಜೊತೆಗೆ ಜಿಲ್ಲೆಗೆ ಭೇಟಿ ನೀಡಿದಾಗ ಪ್ರತಿ ಬಾರಿಯೂ ಗಾರ್ಡ್ ಆಫ್ ಹಾನರ್ ಸಲ್ಲಿಸುವುದು ಬೇಡ. ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಝಿರೋ ಟ್ರಾಫಿಕ್‍ನಿಂದಾಗಿ ಮಾಜಿ ಡಿಸಿಎಂ ಪರಮೇಶ್ವರ್ ಅವರು ವಿವಾದಕ್ಕೆ ಗುರಿಯಾಗಿದ್ದರು. ಈ ವಿಚಾರವಾಗಿ ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್, ತಮ್ಮ ಉಪ ಮುಖ್ಯಮಂತ್ರಿಗಳಿಗೆ ಝಿರೋ ಟ್ರಾಫಿಕ್ ಸೌಲಭ್ಯ ಪಡೆಯದಂತೆ ಖಡಕ್ ಸೂಚನೆ ನೀಡಿದೆ.

    ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರು ಝಿರೋ ಟ್ರಾಫಿಕ್ ತೆಗೆದುಕೊಳ್ಳಬಾರದು. ಝಿರೋ ಟ್ರಾಫಿಕ್‍ನಿಂದ ಸಂಚಾರ ಅಸ್ತವ್ಯಸ್ತವಾಗಲಿದೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಇದರಿಂದಾಗಿ ಜನರಿಗೆ ಕೆಟ್ಟ ಸಂದೇಶ ಹೋಗಿ ಪಕ್ಷಕ್ಕೆ ಮುಜುಗರ ಆಗಲಿದೆ ಎಂದು ಬಿಜೆಪಿ ಹೈಕಮಾಂಡ್ ಇತ್ತೀಚೆಗಷ್ಟೇ ಎಚ್ಚರಿಕೆ ನೀಡಿತ್ತು.

    ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಸಿ.ಎನ್.ಅಶ್ವಥ್ ನಾರಾಯಣ ಅವರು, ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಝಿರೋ ಟ್ರಾಫಿಕ್ ವ್ಯವಸ್ಥೆಯ ಅನುಕೂಲವನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದರು.

  • ಮಂಗಳೂರಿಗೆ ಆಗಮಿಸಿದ ದಲೈ ಲಾಮಾ

    ಮಂಗಳೂರಿಗೆ ಆಗಮಿಸಿದ ದಲೈ ಲಾಮಾ

    – ಝೀರೋ ಟ್ರಾಫಿಕ್ ಮೂಲಕ ಕರೆತಂದ ಅಧಿಕಾರಿಗಳು

    ಮಂಗಳೂರು: ಟಿಬೆಟಿಯನ್ ಧರ್ಮ ಗುರು ದಲೈ ಲಾಮಾ ಅವರು ಇಂದು ಮಂಗಳೂರಿಗೆ ಆಗಮಿಸಿದ್ದು, ಮೂರು ದಿನಗಳ ಕಾಲ ಮಂಗಳೂರಿನಲ್ಲಿಯೇ ತಂಗಲಿದ್ದಾರೆ.

    ದಲೈ ಲಾಮಾ ಆಗಮಿಸುವ ಸೂಚನೆ ತಿಳಿದಿದ್ದರಿಂದ ಮಂಗಳೂರು ವಿಮಾನ ನಿಲ್ದಾಣದ ಹೊರಗಡೆ ಟಿಬೆಟಿಯನ್ ಸಾಂಪ್ರದಾಯಿಕ ನೃತ್ಯದ ಮೂಲಕ ಅವರನ್ನು ಸ್ವಾಗತಿಸಲಾಯಿತು. ಅಲ್ಲದೆ ವಿಮಾನ ನಿಲ್ದಾಣದ ಸುತ್ತ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಖಾಸಗಿ ಹೋಟೆಲ್‍ನಲ್ಲಿ ತಂಗಿರುವ ಅವರನ್ನು ಭಾರೀ ಭದ್ರತೆಯಲ್ಲಿ ಝೀರೋ ಟ್ರಾಫಿಕ್ ಮೂಲಕ ವಿಮಾನ ನಿಲ್ದಾಣದಿಂದ ನಗರಕ್ಕೆ ಕರೆ ತರಲಾಯಿತು.

    ಆಗಸ್ಟ್ 30 ರಂದು ನಗರದ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯಲಿರುವ ನಯನ ಅಖಿಲ ಭಾರತ ಕ್ಯಾಥೊಲಿಕ್ ಶಾಲಾ ಒಕ್ಕೂಟದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲಿದ್ದು, 31 ರಂದು ಅವರು ಬೆಂಗಳೂರಿಗೆ ತೆರಳಲಿದ್ದಾರೆ.

    ಮಧ್ಯಾಹ್ನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ್, ಉಪ ಪೊಲೀಸ್ ಆಯುಕ್ತ ಅರುಣಾಂಶು ಗಿರಿ, ಲಕ್ಷ್ಮೀ ಗಣೇಶ್ ಅವರು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು.

  • ಮೈಸೂರಿನಿಂದ ಜೀವಂತ ಹೃದಯ ಸೇರಿ ವಿವಿಧ ಅಂಗಾಂಗಗಳು ರವಾನೆ

    ಮೈಸೂರಿನಿಂದ ಜೀವಂತ ಹೃದಯ ಸೇರಿ ವಿವಿಧ ಅಂಗಾಂಗಗಳು ರವಾನೆ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಿಂದ ಮತ್ತೊಂದು ಹೃದಯ ಸೇರಿ ವಿವಿಧ ಅಂಗಾಂಗಗಳನ್ನು ಬೆಂಗಳೂರಿಗೆ ರವಾನಿಸಲಾಗಿದೆ.

    ಧರ್ಮ ಎಸ್.ಎ (28) ಪಿರಿಯಾಪಟ್ಟಣ ತಾಲೂಕು ಸೂಳೇಕೋಟೆ ಗ್ರಾಮದ ನಿವಾಸಿಯಾಗಿದ್ದು, ರಸ್ತೆ ಅಪಘಾತದಿಂದ ಗಾಯಗೊಂಡು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತದಲ್ಲಿ ಧರ್ಮ ತಲೆಗೆ ಪೆಟ್ಟು ಬಿದ್ದು ಕೋಮಾಗೆ ಹೋಗಿದ್ದರು. ಹೀಗಾಗಿ ಬದುಕುಳಿಯುವ ಸಾಧ್ಯತೆ ಕಡಿಮೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ.

    ಮೈಸೂರಿನ ನಾರಾಯಣ ಹೃದಯಾಲಯದ ವೈದ್ಯರು ಅಪೋಲೋ ಆಸ್ಪತ್ರೆಯಲ್ಲಿ ಧರ್ಮ ಅವರ ಅಪರೇಷನ್ ಮಾಡಿದ್ದಾರೆ. ಸದ್ಯ ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಧರ್ಮ ಅಂಗಾಂಗವನ್ನು ರವಾನಿಸಲಾಗಿದೆ.

    ಮೈಸೂರಿನಿಂದ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ಮೂರು ಹಂತದಲ್ಲಿ ಅಂಗಾಂಗ ರವಾನೆ ಆಗಿದೆ. ಧರ್ಮ ಅವರ ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ, ಶ್ವಾಸಕೋಶವನ್ನು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ, ಕಿಡ್ನಿಯನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ನೀಡಲಾಗಿದೆ.

    ಮೈಸೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ಮೂಲಕ ಅಂಗಾಂಗಳು ರವಾನಿಸಲಾಗಿದೆ.

  • ತೊಲಗಿತು ತೊಲಗಿತು ಝೀರೋ ಟ್ರಾಫಿಕ್ ತೊಲಗಿತು – ರಾಜಣ್ಣ ಬೆಂಬಲಿಗರಿಂದ ವ್ಯಂಗ್ಯ

    ತೊಲಗಿತು ತೊಲಗಿತು ಝೀರೋ ಟ್ರಾಫಿಕ್ ತೊಲಗಿತು – ರಾಜಣ್ಣ ಬೆಂಬಲಿಗರಿಂದ ವ್ಯಂಗ್ಯ

    ತುಮಕೂರು: ತೊಲಗಿತು ತೊಲಗಿತು ಝೀರೋ ಟ್ರಾಫಿಕ್ ತೊಲಗಿತು ಎಂದು ಘೋಷಣೆ ಕೂಗುವ ಮೂಲಕ ಕೆ.ಎನ್ ರಾಜಣ್ಣ ಅವರ ಬೆಂಬಲಿಗರು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‍ ಗೆ ವ್ಯಂಗ್ಯವಾಡಿದ್ದಾರೆ.

    ಇಂದು ನಗರದ ಟೌನ್ ಹಾಲ್ ವೃತ್ತದಲ್ಲಿ ಕೆ.ಎನ್.ರಾಜಣ್ಣ ಬೆಂಬಲಿಗರು ಝೀರೋ ಟ್ರಾಫಿಕ್ ತೊಲಗಿತು. ತುಮಕೂರು ಜನರಿಗೆ ನೆಮ್ಮದಿ ಬಂತು ಎಂದು ಜಿ.ಪರಮೇಶ್ವರ್ ವಿರುದ್ಧ ಘೋಷಣೆ ಕೂಗಿದ್ದಾರೆ. ಜಿ. ಪರಮೇಶ್ವರ್ ಉಪಮುಖ್ಯಮಂತ್ರಿ ಆಗಿದ್ದಾಗ ಝೀರೋ ಟ್ರಾಫಿಕ್‍ನಲ್ಲಿ ಓಡಾಡುತ್ತಿದ್ದರು. ಇದರಿಂದ ತುಮಕೂರು ಜನತೆ ತೊಂದರೆ ಅನುಭವಿಸಿದ್ದರು. ಈಗ ಮೈತ್ರಿ ಸರ್ಕಾರ ಪತನವಾಗಿ ಮಂತ್ರಿಗಿರಿ ಹೋಗಿದ್ದರಿಂದ ತುಮಕೂರು ಜನರಿಗೆ ಝೀರೋ ಟ್ರಾಫಿಕ್‍ನಿಂದ ಮುಕ್ತಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಈ ವಿಚಾರಕ್ಕೆ ಪರಮೇಶ್ವರ್ ವಿರುದ್ಧ ಕಿಡಿಕಾರಿದ್ದ ಕೆ.ಎನ್ ರಾಜಣ್ಣ, ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ಹೋಗಿರುವುದರಿಂದ ತುಮಕೂರಿನಲ್ಲಿ ಟ್ರಾಫಿಕ್ ಸಮಸ್ಯೆ ತಪ್ಪಿದೆ. ಪದೇ ಪದೇ ಪರಮೇಶ್ವರ್ ತುಮಕೂರಿಗೆ ಬರುತ್ತಿದ್ದರಿಂದ ಟ್ರಾಫಿಕ್ ಸಮಸ್ಯೆ ಇತ್ತು, ಸದ್ಯ ಅದು ಇಲ್ಲ ಎಂದು ಹೇಳಿದ್ದರು.

  • ಗೃಹ ಸಚಿವ ಎಂಬಿ ಪಾಟೀಲ್‍ಗೆ ಚಾಟಿ ಬೀಸಿದ ಸ್ಪೀಕರ್ ರಮೇಶ್ ಕುಮಾರ್

    ಗೃಹ ಸಚಿವ ಎಂಬಿ ಪಾಟೀಲ್‍ಗೆ ಚಾಟಿ ಬೀಸಿದ ಸ್ಪೀಕರ್ ರಮೇಶ್ ಕುಮಾರ್

    ಬೆಂಗಳೂರು: ದೋಸ್ತಿ ಸರ್ಕಾರದ ವಿಶ್ವಾತ ಮತಯಾಚನೆ ಮೇಲಿನ ಚರ್ಚೆ ಸದನದಲ್ಲಿ ಮುಂದುವರಿದಿದ್ದು, ಈ ಸಂದರ್ಭದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಗೃಹ ಸಚಿವ ಎಂಬಿ ಪಾಟೀಲ್ ಅವರಿಗೆ ಖಾರವಾಗಿ ಚಾಟಿ ಬೀಸಿದ ಪ್ರಸಂಗ ನಡೆಯಿತು.

    ಸದನದಲ್ಲಿ ಮಾತನಾಡಿದ ಶಾಸಕ ಎಟಿ ರಾಮಸ್ವಾಮಿ ಅವರು ರಾಜೀನಾಮೆ ನೀಡಿ ತೆರಳಿದ ಅತೃಪ್ತರ ವಿರುದ್ಧ ಗುಡುಗಿದರು. ಶಾಸಕರು ಸ್ವಾಭಿಮಾನಿಗಳಾಗಿದ್ದರೆ, ಕರ್ನಾಟಕ ಬಿಟ್ಟು ಹೋಗುತ್ತಿರಲಿಲ್ಲ. ಇಂದು ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮರ್ಯಾದೆ ತೆಗೆದಿದ್ದಾರೆ. ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಗೊತ್ತಿದೆ. ಅಧಿಕಾರ ಹಸ್ತಾಂತರದ ಬಗ್ಗೆಯೂ ಸಿಎಂ ಅವರಿಗೆ ಹೇಳಿದ್ದೆ ಎಂದರು.

    ರಾಜ್ಯದಲ್ಲಿ ಆಡಳಿತ ಪಕ್ಷಕ್ಕಿಂತ ಹೆಚ್ಚಿನ ಜವಾಬ್ದಾರಿ ವಿರೋಧ ಪಕ್ಷಕ್ಕಿದೆ. ಆದರೆ ಸೇವೆ ಮಾಡುವ ಉದ್ದೇಶ ಒಂದೇ ಆಗಿದ್ದರೆ ಅಲ್ಲೇ ಕೂರಬಹುದಲ್ವೇ. ಆ ಮೂಲಕ ಆಡಳಿತ ಪಕ್ಷವನ್ನು ಸರಿ ದಾರಿಗೆ ತರುವ ಕೆಲಸ ಮಾಡಬಹುದು. ಆದರೆ ನಿಮಗೆ ಬೇರೆ ಉದ್ದೇಶ ಇರಬಹುದು ಎಂದರು.

    ಇದೇ ಸಂದರ್ಭದಲ್ಲಿ ಅತೃಪ್ತ ಶಾಸಕರ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಅವರು, ಅತೃಪ್ತರಿಗೆ ರಾಕ್ಷಸಿಯ ಪ್ರವೃತ್ತಿ ಹೆಚ್ಚಾಗಿದೆ. ಆಡಳಿತ ಜೀವಂತವಾಗಿದೆಯೋ ಇಲ್ಲವೋ, ಅತೃಪ್ತರಿಗೆ ಝೀರೋ ಟ್ರಾಫಿಕ್ ನಲ್ಲಿ ಹೋಗೋಕೆ ಹೇಗೆ ಅನುಮತಿ ನೀಡಿದ್ರಿ ಎಂದು ಗೃಹ ಸಚಿವ ಎಂಬಿ ಪಾಟೀಲರ ವಿರುದ್ಧ ವಾಗ್ದಾಳಿ ನಡೆಸಿದರು.

    ಈ ನಡುವೆ ಅತೃಪ್ತರಿಗೆ ಝೀರೋ ಟ್ರಾಫಿಕ್ ಕೊಟ್ಟ ವಿಚಾರ ಗೃಹ ಸಚಿವರಿಂದ ಸ್ಪಷ್ಟನೆ ನೀಡಲು ಯತ್ನಿಸಿದರು. ರಾಜ್ಯಪಾಲರಿಂದ ಅತೃಪ್ತರಿಗೆ ರಕ್ಷಣೆ ಕೊಡಬೇಕು ಎಂದು ಪೊಲೀಸರಿಗೆ ಸೂಚನೆ ಇತ್ತು. ನೇರವಾಗಿ ಪೊಲೀಸರಿಗೆ ನಿರ್ದೇಶನ ನೀಡಲಾಗಿತ್ತು. ಶಾಸಕರಿಗೆ ಹೆಸರು ಬರೆದು ರಕ್ಷಣೆ ಕೊಡಬೇಕು ಎಂಬ ಆದೇಶ ನೀಡಲಾಗಿತ್ತು. ಅವರ ಚಲನವಲನಗಳಿಗೆ ಪೊಲೀಸ್ ಸೂಕ್ತ ಭದ್ರತೆಯನ್ನು ನೀಡಬೇಕಾಗಿ ಹೆಚ್‍ಎಎಲ್ ಪೊಲೀಸರಿಗೂ, ಕಮೀಷನರ್‍ಗೆ ಪತ್ರ ಬರೆಯಲಾಗಿತ್ತು ಎಂದರು.

    ಸಚಿವರ ಉತ್ತರಕ್ಕೆ ಸಮಾಧಾನಗೊಂಡ ಸ್ಪೀಕರ್ ಅವರು, ಝೀರೋ ಟ್ರಾಫಿಕ್ ಯಾರು ಯಾರಿಗೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಕೂಡಲೇ ತಮ್ಮ ಹೇಳಿಕೆ ಸ್ಪಷ್ಟನೆ ಕೊಟ್ಟ ಎಂಬಿ ಪಾಟೀಲ್ ಅವರು, ಅತೃಪ್ತರಿಗೆ ಝೀರೋ ಟ್ರಾಫಿಕ್ ಕೊಟ್ಟಿಲ್ಲ, ಸೂಚನೆಯೂ ಬಂದಿಲ್ಲ ಎಂದರು. ಈ ಮಾತಿಗೆ ಮತ್ತಷ್ಟು ಅಸಮಾಧಾನಗೊಂಡ ಅವರು, ನಿಮಗೇ ಈ ಹೇಳಿಕೆ ನೀಡಲು ಒಪ್ಪಿಗೆ ಇದೆಯಾ, ನಾಳೆ ಅಪರಾಧಿಗಳಿಗೆ ರಕ್ಷಣೆ ಕೊಡಿ. ಒಬ್ಬ ಗೃಹ ಸಚಿವರಾಗಿ ಈ ಹೇಳಿಕೆ ಕೊಡುತ್ತೀರಿ. ಇಡೀ ದೇಶ ನೋಡಿದೆ ಅವರಿಗೆ ಝೀರೋ ಟ್ರಾಫಿಕ್ ಕೊಟ್ಟಿರುವುದು ಎಂದರು.

    ತಮ್ಮ ವಾದವನ್ನು ಮುಂದುವರಿಸಿದ ಸಚಿವರು, ಅವರಿಗೆ ಝೀರೋ ಟ್ರಾಫಿಕ್ ಕೊಟ್ಟಿಲ್ಲ ಎಂದರು. ಇದರ ನಡುವೆ ಮಧ್ಯ ಪ್ರವೇಶ ಮಾಡಿದ ಹೆಚ್‍ಕೆ ಪಾಟೀಲ್ ಅವರು, ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದರು. ಬಳಿಕ ಮಾತನಾಡಿದ ಸ್ಪೀಕರ್, ಝೀರೋ ಟ್ರಾಫಿಕ್ ಕೊಟ್ಟಿದ್ದೀರಾ ಎಂಬುವುದು ನನಗೆ ಗೊತ್ತಿದೆ ಎಂದರು. ಆ ಬಳಿಕ ನಾನು ಈ ಬಗ್ಗೆ ವಿಡಿಯೋ ಕ್ಲೀಪಿಂಗ್ ನೀಡುತ್ತೇನೆ ಎಂದರು.

    ಗೃಹ ಸಚಿವರ ಉತ್ತರದಿಂದ ಮತ್ತಷ್ಟು ಅಸಮಾಧಾನಗೊಂಡ ಎಟಿ ರಾಮಸ್ವಾಮಿ ಅವರು, ಇಂತಹ ಉತ್ತರವನ್ನು ಗೃಹ ಸಚಿವರು ಕೊಡುತ್ತಾರೆ. ಇಂತಹ ಮಾತನ್ನ ಕೇಳಿ ನಾನು ಒಂದು ಕ್ಷಣವೂ ಇಲ್ಲಿ ಇರಲು ಸಾಧ್ಯವಿಲ್ಲ ಎಂದರು. ಕೂಡಲೇ ನಾನು ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಾಳೆ ವಿವರ ನೀಡುತ್ತೇನೆ ಎಂದರು.

  • ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ

    ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ

    ಬೆಂಗಳೂರು: ಸ್ಪೀಕರ್ ಕಚೇರಿಗೆ ಆಗಮಿಸಲಿರುವ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ.

    ಅತೃಪ್ತ ಶಾಸಕರು ಖುದ್ದಾಗಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕರು ವಿಶೇಷ ವಿಮಾನದಲ್ಲಿ ಇಂದು ಸಂಜೆ 5ಕ್ಕೆ ಎಚ್‍ಎಎಲ್ ತಲುಪಲಿದ್ದಾರೆ. ಬಳಿಕ ಅವರು ಆದಷ್ಟು ಬೇಗ ಸ್ಪೀಕರ್ ಕಚೇರಿ ತಲುಪಬೇಕಿದೆ. ಹೀಗಾಗಿ ಎಚ್‍ಎಎಲ್‍ನಿಂದ ವಿಧಾನಸೌಧದವೆರಗೂ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೂ ಓದಿ:ಪರಿಶೀಲನೆಗೆ ಸಮಯ ಬೇಕು – ಸುಪ್ರೀಂ ಮುಂದೆ ಸ್ಪೀಕರ್ ಮಂಡಿಸಿದ ವಾದವೇನು?

    ಶಾಸಕರಿಗೆ ಭದ್ರತೆ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ. ಹೀಗಾಗಿ ವಿಧಾನಸೌಧದ ಸುತ್ತ-ಮುತ್ತ 500ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದಾರೆ. ಮಾರ್ಷಲ್‍ ಗಳ  ಜೊತೆಗೆ  ಮಫ್ತಿಯಲ್ಲೂ  ಪೊಲೀಸರು ಭದ್ರತೆ ಒದಗಿಸುತ್ತಿದ್ದಾರೆ.  ಈ ಮೂಲಕ ಅತೃಪ್ತ ಶಾಸಕರು ಭಾರೀ ಭದ್ರತೆಯ ನಡುವೆ ಆಗಮಿಸಿ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ.

  • ಡಿಸಿಎಂಗಾಗಿ ಮತ್ತೆ ಝೀರೋ ಟ್ರಾಫಿಕ್ – 20 ನಿಮಿಷ ಶಾಲಾ ವಿದ್ಯಾರ್ಥಿಗಳಿಗೆ ಫುಲ್ ಕಿರಿಕಿರಿ

    ಡಿಸಿಎಂಗಾಗಿ ಮತ್ತೆ ಝೀರೋ ಟ್ರಾಫಿಕ್ – 20 ನಿಮಿಷ ಶಾಲಾ ವಿದ್ಯಾರ್ಥಿಗಳಿಗೆ ಫುಲ್ ಕಿರಿಕಿರಿ

    – ಶಾಲಾ ಮಕ್ಕಳ ಬಳಿ ಕ್ಷಮೆ ಕೇಳುವೆ
    – ಬಿಜೆಪಿಗೆ ಮತ ಹಾಕಿದ್ರೂ ಸಂಕಷ್ಟಕ್ಕೆ ಸ್ಪಂದಿಸ್ತೇವೆ

    ಬೆಂಗಳೂರು: ಉಪಮುಖ್ಯಮಂತ್ರಿ ಅವರು ಮತ್ತೆ ಮತ್ತೆ ಝೀರೋ ಟ್ರಾಫಿಕ್‍ನಲ್ಲಿ ಹೋಗುತ್ತಿದ್ದು, ಇದೀಗ ಪರಮೇಶ್ವರ್ ಅವರ ಝೀರೋ ಟ್ರಾಫಿಕ್ ಪರಿಣಾಮದಿಂದ ಶಾಲಾ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗಿದೆ.

    ಆರ್.ಟಿ.ನಗರ ಪೊಲೀಸ್ ಠಾಣೆ ಬಳಿ ರಸ್ತೆ ಅಗಲೀಕರಣ ವೀಕ್ಷಣೆಗೆಂದು ಡಿಸಿಎಂ ಪರಮೇಶ್ವರ್ ಬಂದಿದ್ದರು. ಈ ಸಂದರ್ಭದಲ್ಲಿ ಪರಮೇಶ್ವರ್ ಕಾರಿನ ಹಿಂದೆ ಬೆಂಬಲಿಗರ ಸಾಲು ಸಾಲು ಕಾರುಗಳಿದ್ದವು. ಇದರಿಂದಾಗಿ ಖಾಸಗಿ ಶಾಲಾ ಬಸ್ಸಿಗೆ ತೊಂದರೆಯಾಗಿದೆ. ಪರಮೇಶ್ವರ್ ಸ್ಥಳಕ್ಕೆ ಬಂದು 20 ನಿಮಿಷ ಆದರೂ ಶಾಲಾ ಮಕ್ಕಳ ಬಸ್ ಸಿಗ್ನಲ್‍ನಲ್ಲೇ ನಿಲ್ಲಿಸಿದ್ದರು. ಕೊನೆಗೆ 20 ನಿಮಿಷಗಳ ನಂತರ ಬಸ್ ಬಿಟ್ಟಿದ್ದಾರೆ. ಇದರಿಂದ ಜನ ಪ್ರತಿನಿಧಿಗಳಿಂದ ಶಾಲಾ ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಡಿಸಿಎಂ ಪರಮೇಶ್ವರ್ ಸಿಟಿ ರೌಂಡ್ಸ್ ಮಾಡುತ್ತಿದ್ದಾರೆ. ದಿಣ್ಣೂರು ಮುಖ್ಯ ರಸ್ತೆ ಅಗಲಿಕರಣ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ತಪಾಸಣೆ ಮಾಡಿದ್ದಾರೆ. ಆರ್.ಟಿ.ನಗರ ಪೊಲೀಸ್ ಠಾಣೆಯಿಂದ ದಿನ್ನೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಡಿಸಿಎಂ ಟೇಪ್ ಹಿಡಿದು ಅಳತೆ ಮಾಡಿಸಿದ್ದಾರೆ. ಡಿಸಿಎಂ ಪರಮೇಶ್ವರ್ ಗೆ ಹೆಬ್ಬಾಳ ಶಾಸಕ ಭೈರತಿ ಸುರೇಶ್, ಮೇಯರ್ ಗಂಗಾಂಬಿಕೆ, ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.

    ಸುಸಜ್ಜಿತ ರಸ್ತೆ ಮಾಡಿ, ಸುವ್ಯವಸ್ಥಿತವಾಗಿ ಮಾಡಿಕೊಟ್ಟರೆ ರಸ್ತೆ ಅಗಲೀಕರಣ ಅವಶ್ಯಕತೆ ಇಲ್ಲ. ರಸ್ತೆಗಳಲ್ಲೂ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳೇ ತುಂಬಿಕೊಂಡಿವೆ. ರಸ್ತೆಗಳು ಕಸದ ತೊಟ್ಟಿಯಾಗಿದೆ. ಜೊತೆಗೆ ರಸ್ತೆ ತುಂಬಾ ಗುಂಡಿಗಳೇ ತುಂಬಿವೆ. ಈ ಸಮಸ್ಯೆಯನ್ನು ಮೊದಲು ಪರಿಹಾರ ಮಾಡಿ. ರಸ್ತೆ ಅಗಲೀಕರಣ ಅವಶ್ಯಕತೆ ಇರುವುದಿಲ್ಲ ಎಂದು ಸಾರ್ವಜನಿಕರು ಡಿಸಿಎಂ ರೌಂಡ್ಸ್ ವೇಳೆ ದೂರು ನೀಡಿದ್ದಾರೆ.

    ದಿಣ್ಣೂರು ಮುಖ್ಯರಸ್ತೆ ಅಗಲೀಕರಣ ಬಹಳ ದಿನಗಳಿಂದ ಮಾಡಲು ಒತ್ತಡವಿತ್ತು. ನೀಲಿನಕ್ಷೆ ಪಾಲಿಕೆ ಸಿದ್ಧಪಡಿಸಿ ಹಣ ಒದಗಿಸಲಾಗಿದೆ. 80 ಅಡಿ ಅಗಲೀಕರಣ ಮಾಡಲು ಅಂದಾಜು ಮಾಡಲಾಗಿದೆ. ಇದಕ್ಕಾಗಿ ಅಂಗಡಿ, ಮನೆ ಒಡೆಯಬೇಕಾಗುತ್ತದೆ. ಎರಡು ಭಾಗದಲ್ಲಿ 10 ಅಡಿ ಅಗಲೀಕರಣ ಮಾಡಿ ಎಂದು ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸ್ಥಳೀಯರ ನಷ್ಟ ಭರಿಸುವ ಬಗ್ಗೆಯೂ ಚರ್ಚೆಯಾಗುತ್ತಿದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

    ಡಿಸಿಎಂ ಕ್ಷಮೆ:
    ಶಾಲಾ ಮಕ್ಕಳಿಗೆ ಝೀರೋ ಟ್ರಾಫಿಕ್ ಅಡ್ಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ನಾನು ಶಾಲಾ ಮಕ್ಕಳ ಬಳಿ ಕ್ಷಮೆ ಕೇಳುವೆ. ಜೊತೆಗೆ ಎಲ್ಲರಿಗೂ ಕ್ಷಮೆ ಕೇಳುವೆ. ನಮ್ಮಿಂದ ಯಾರಿಗೆ ಬೇಸರ ಆಗಬಾರದು. ಪೊಲೀಸರಿಗೆ ಅಂಬುಲೆನ್ಸ್, ಶಾಲಾ ವಾಹನಗಳಿಗೆ ಅಡ್ಡಿ ಮಾಡಬೇಡಿ ಎಂದು ಹೇಳಿದ್ದೆ. ಆದರೂ ಈ ರೀತಿ ಕೆಲವೊಮ್ಮೆ ಆಗಿದೆ. ಇದು ನನಗೂ ಬೇಸರ ತಂದಿದೆ. ಮತ್ತೊಮ್ಮೆ ಹೀಗೆ ಆಗಲ್ಲ ಎಂದು ಶಾಲಾ ಮಕ್ಕಳ  ಮತ್ತು ಪೋಷಕರ ಬಳಿ ಕ್ಷಮೆ ಕೇಳಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಎಲ್ಲರಿಗೂ ಮತ ಹಾಕಿದ್ದೀರಿ. ಯಾರಿಗೆ ಮತ ಹಾಕಿದ್ದೀರಿ, ಹಾಕಿಲ್ಲ ಅಂತ ಗೊತ್ತಿಲ್ಲ. ಆದರೆ ಬಿಜೆಪಿಗೆ ಹೆಚ್ಚು ಮತ ಹಾಕಿದ್ದೀರಿ, ಪರವಾಗಿಲ್ಲ. ಜನಸಮುದಾಯಕ್ಕೆ ತೊಂದರೆ ಆಗಬಾರದು ಅಷ್ಟೇ. ಜನರ ಸಂಕಷ್ಟಕ್ಕೆ ಮೈತ್ರಿ ಸರ್ಕಾರ ಸ್ಪಂದಿಸಲಿದೆ ಎಂದರು.

    ಹಲವೆಡೆ ಶುದ್ಧವಿಲ್ಲದ ನೀರು ಕೊಡುತ್ತಾರೆ ಎಂಬ ಮಾಹಿತಿ ಇದೆ. ಯಾಕೆ ಹೀಗೆ ಆಗುತ್ತೆ ಗೊತ್ತಿಲ್ಲ. ಅಪಾರ್ಟ್ ಮೆಂಟ್‍ಗಳ ಸೌಲಭ್ಯ ನೀಡುವುದರಲ್ಲಿ ವಂಚನೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬಿಬಿಎಂಪಿ, ಬಿಡಿಎ ಜನರಿಗೆ ಅನುಕೂಲ ಮಾಡಿಕೊಡಲು ಬದ್ಧನಾಗಿದ್ದೇನೆ ಎಂದು ಅಪಾರ್ಟ್ ಮೆಂಟ್ ನೀರಿನ ಪೂರೈಕೆ ಬಗ್ಗೆ ಡಿಸಿಎಂ ಗರಂ ಆಗಿದ್ದರು.