Tag: Zero Traffic

  • 3 ಗಂಟೆಯಲ್ಲಿ 300 ಕಿಮೀ ಕ್ರಮಿಸಿ 7 ದಿನದ ಮಗುವಿನ ಜೀವ ಉಳಿಸಿದ ಹೀರೋ

    3 ಗಂಟೆಯಲ್ಲಿ 300 ಕಿಮೀ ಕ್ರಮಿಸಿ 7 ದಿನದ ಮಗುವಿನ ಜೀವ ಉಳಿಸಿದ ಹೀರೋ

    – ಅಂಬುಲೆನ್ಸ್‌ ಚಾಲಕನಿಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

    ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಖಾಸಗಿ ಆಸ್ಪತ್ರೆ ಅಂಬುಲೆನ್ಸ್‌ ಚಾಲಕ (Ambulance Driver) ಶಿಜು ವರ್ಗಿಸ್ ಅವರು Zero Traffic ವ್ಯವಸ್ಥೆ ಇಲ್ಲದೆಯೂ 300 ಕಿಮೀ ದೂರವನ್ನು ಕೇವಲ 3 ಗಂಟೆ ಅವಧಿಯಲ್ಲಿ ಕ್ರಮಿಸಿ 7 ದಿನದ ಹೆಣ್ಣು ಮಗುವಿನ ಜೀವ ಉಳಿಸಿದ್ದಾರೆ. ಅಂಬುಲೆನ್ಸ್‌ ಚಾಲಕನ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಮಡಿಕೇರಿ (Madikeri) ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 7 ದಿನದ ಹೆಣ್ಣು ಮಗುವಿಗೆ ತೀವ್ರ ಉಸಿರಾಟದ ತೊಂದರೆ ಉಂಟಾಗಿತ್ತು. ಈ ವೇಳೆ ಮಗುವನ್ನು ತುರ್ತು ಚಿಕಿತ್ಸೆಗಾಗಿ 300 ಕಿಮೀ ದೂರದಲ್ಲಿದ್ದ ಕೇರಳದ ಪೆರಂದಲ್‌ ಮಣ್ಣನ್‌ ಊರಿನಲ್ಲಿರೋ ಖಾಸಗಿ ಆಸ್ಪತ್ರೆಗೆ (Private Hospital) ಕರೆದೊಯ್ಯಬೇಕಿತ್ತು.

    ವೈದ್ಯರ ಸಲಹೆ ಮೇರೆಗೆ ಚಾಲಕ ಶಿಜು ವರ್ಗಿಸ್ ಜೀರೋ ಟ್ರಾಫಿಕ್‌ ವ್ಯವಸ್ಥೆ ಇಲ್ಲದೆಯೂ 300 ಕಿಮೀ ದೂರವನ್ನು 3 ಗಂಟೆಯಲ್ಲಿ ಕ್ರಮಿಸಿ, ಮಗುವಿಗೆ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮೊಂಡುವಾದ ಬಿಟ್ಟು ರಾಜ್ಯಕ್ಕೆ ಅನ್ಯಾಯವಾಗುತ್ತಿರೋದನ್ನ ಹರೀಶ್ ಪೂಂಜಾ ಒಪ್ಪಿಕೊಳ್ಳಬೇಕು: ದಿನೇಶ್ ಗುಂಡೂರಾವ್

    ಕಿರಿದಾದ ದುರ್ಗಮ ರಸ್ತೆಯಲ್ಲಿ ಮಡಿಕೇರಿಯಿಂದ ವಿರಾಜಪೇಟೆ ಮಾರ್ಗವಾಗಿ ಕೊಡಗಿನ ಗಡಿಭಾಗದವರೆಗೆ ಅಂಬುಲೆನ್ಸ್‌ ಚಾಲನೆ ಮಾಡಿದ್ದಾರೆ. ಶಿಜು ವರ್ಗಿಸ್ ಅವರ ಈ ಸಾಹಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಗೃಹಿಣಿ ಸಾವು ಕೇಸ್‌ಗೆ ಟ್ವಿಸ್ಟ್ – ಪತಿಯೇ ಮಾಸ್ಟರ್ ಮೈಂಡ್, ಸ್ನೇಹಿತನ ಪತ್ನಿಯ ಕೊಲೆ ರಹಸ್ಯವೂ ಬಯಲು

  • ಬದುಕೋ ಸಾಧ್ಯತೆ ಮೊದಲೇ ತೀರಾ ಕಡಿಮೆಯಿತ್ತು – ಹಾಸನ ಮಗು ಸಾವಿನ ಪ್ರಕರಣಕ್ಕೆ ನಿಮ್ಹಾನ್ಸ್ ಸ್ಪಷ್ಟನೆ

    ಬದುಕೋ ಸಾಧ್ಯತೆ ಮೊದಲೇ ತೀರಾ ಕಡಿಮೆಯಿತ್ತು – ಹಾಸನ ಮಗು ಸಾವಿನ ಪ್ರಕರಣಕ್ಕೆ ನಿಮ್ಹಾನ್ಸ್ ಸ್ಪಷ್ಟನೆ

    ಬೆಂಗಳೂರು: ಬುಧವಾರ ಹಾಸನದಿಂದ (Hassan) ಬೆಂಗಳೂರಿಗೆ (Bengaluru) ಜೀರೋ ಟ್ರಾಫಿಕ್‌ನಲ್ಲಿ (Zero Traffic) ಬಂದರೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ (NIMHANS Hospital) ಬೆಡ್ ನೀಡದೇ ಹೋಗಿದ್ದಕ್ಕೆ 1 ವರ್ಷದ ಮಗು (Child) ಸಾವನ್ನಪ್ಪಿರುವ ಪ್ರಕರಣಕ್ಕೆ ಆಸ್ಪತ್ರೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ನಿಮ್ಹಾನ್ಸ್ ಸ್ಥಾನಿಕ ಅಧಿಕಾರಿ ಡಾ. ಶಶಿಧರ್, ನಮಗೆ ಹಾಸನದ ಸರ್ಕಾರಿ ಆಸ್ಪತ್ರೆಯಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಮಗು ಆಸ್ಪತ್ರೆಗೆ ತಲುಪುವ 1 ಗಂಟೆ ಮೊದಲು ಮಾಹಿತಿ ಬಂದಿತ್ತು. ಅಂಬುಲೆನ್ಸ್ ಚಾಲಕರೊಬ್ಬರು ಹಾಸನ ಮೆಡಿಕಲ್ ಕಾಲೇಜಿನ ರಿಪೋರ್ಟ್ ತೋರಿಸಿದ್ದರು. ಅದನ್ನು ನೋಡಿದಾಗಲೇ ನಮ್ಮ ವೈದ್ಯರು ಮಗು ಬದುಕುವ ಸಾಧ್ಯತೆ ತೀರಾ ಕಡಿಮೆಯಾಗಿತ್ತು, ಇಲ್ಲಿಗೆ ಕರೆತರುವ ಅಗತ್ಯವಿಲ್ಲ ಅಂತಾ ಹೇಳಿದ್ದೆವು ಎಂದು ತಿಳಿಸಿದರು.

    ನಾವು ಮಗುವನ್ನು ಆಸ್ಪತ್ರೆಗೆ ತಂದ ಬಳಿಕ ಅಂಬುಲೆನ್ಸ್‌ನಲ್ಲೇ ಪರೀಕ್ಷೆ ಮಾಡಿದ್ದೇವೆ. ಅಂಬುಲೆನ್ಸ್ನಲ್ಲಿಯೇ ಮಗು ವೆಂಟೀಲೇಟರ್‌ನಲ್ಲಿ ಇತ್ತು. ಆದರೆ 10 ನಿಮಿಷದ ಬಳಿಕ ಮಗುವನ್ನು ಒಳಗಡೆ ಚಿಕಿತ್ಸೆಗೆ ಕಳುಹಿಸಿದ್ದೇವೆ. ಆದರೆ 2 ಗಂಟೆ ಚಿಕಿತ್ಸೆ ಕೊಟ್ಟರೂ ಮಗು ಬದುಕಲಿಲ್ಲ. ಸತತ 2 ಗಂಟೆಯ ಕಾಲ ಮಗುವನ್ನು ಬದುಕಿಸಲು ಪ್ರಯತ್ನ ಪಟ್ಟಿದ್ದೇವೆ. ನಮ್ಮ ಕಡೆಯಿಂದ ಏನೇನು ಮಾಡಲು ಸಾಧ್ಯವಿತ್ತೋ ಎಲ್ಲಾ ಎಫರ್ಟ್ ಹಾಕಿದ್ದೇವೆ. ಆದರೆ ಮಗುವನ್ನು ಬದುಕಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: 262 ಅಂಬುಲೆನ್ಸ್‌ ಸೇರ್ಪಡೆ – ವ್ಯವಸ್ಥೆ ಬಲಪಡಿಸುವತ್ತ ಇದು ನಮ್ಮ ಮೊದಲ ಹೆಜ್ಜೆ : ದಿನೇಶ್ ಗುಂಡೂರಾವ್

    ಮಗು ಮೃತದೇಹ ಹಸ್ತಾಂತರ ತಡವಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರಕ್ಕೆ ಪೊಲೀಸರು ಉತ್ತರಿಸಬೇಕು. ಪೊಲೀಸರು ಅವರ ರಿಪೋರ್ಟ್ ಮಾಡಿ ಮೃತದೇಹವನ್ನು ಪಡೆಯಬೇಕು. ಇಲ್ಲಿಯವರೆಗೆ ಪೊಲೀಸರು ಆ ಕೆಲಸವನ್ನು ಮಾಡಿಲ್ಲ ಎಂದು ಆರ್‌ಎಂಒ ಡಾ. ಶಶಿಧರ್ ಹೇಳಿದ್ದಾರೆ. ಇದನ್ನೂ ಓದಿ: ಪತ್ನಿ ಮೇಲೆ ವಿಪರೀತ ಸಂಶಯ – ಚಾಕುವಿನಿಂದ 5 ಬಾರಿ ಇರಿದು, ನೇಣಿಗೆ ಶರಣಾದ ಪತಿ

  • ಹಾಸನದಿಂದ ಜೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಅರ್ಧ ಗಂಟೆ ಚಿಕಿತ್ಸೆಗೆ ವಿಳಂಬ – ನಿಮಾನ್ಸ್‌ನಲ್ಲಿ ಕಂದಮ್ಮ ಸಾವು

    ಹಾಸನದಿಂದ ಜೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಅರ್ಧ ಗಂಟೆ ಚಿಕಿತ್ಸೆಗೆ ವಿಳಂಬ – ನಿಮಾನ್ಸ್‌ನಲ್ಲಿ ಕಂದಮ್ಮ ಸಾವು

    ಬೆಂಗಳೂರು: 10 ಅಡಿ ಎತ್ತರದಿಂದ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು (Child) ಹಾಸನದಿಂದ (Hassan) ಜೀರೋ ಟ್ರಾಫಿಕ್‌ನಲ್ಲಿ (Zero traffic) ಬೆಂಗಳೂರಿನ ನಿಮಾನ್ಸ್ (NIMHANS) ಆಸ್ಪತ್ರೆಗೆ ಕರೆದುಕೊಂಡು ಬಂದರೂ ಬೆಡ್ ಕೊಡದೇ ವೈದ್ಯರು ನಿರ್ಲಕ್ಷ್ಯವಹಿಸಿದ್ದಕ್ಕೆ 1 ವರ್ಷದ ಕಂದಮ್ಮ ಸಾವನ್ನಪ್ಪಿದೆ.

    1 ವರ್ಷದ ಮಗು ತಾಯಿ ಕೈಯಿಂದ 10 ಅಡಿ ಮೇಲಿಂದ ಜಾರಿ ಕೆಳಗೆ ಬಿದ್ದಿತ್ತು. ತಲೆಗೆ ತೀವ್ರವಾದ ಗಾಯವಾಗಿ, ಅಸ್ವಸ್ಥವಾಗಿದ್ದ ಮಗುವನ್ನು ಪೋಷಕರು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್‌ಗೆ ಹೋಗುವಂತೆ ಅಲ್ಲಿನ ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆ ಮಗುವನ್ನು ಜೀರೋ ಟ್ರಾಫಿಕ್‌ನಲ್ಲಿ ಕೊಂಡೊಯ್ದಿದ್ದು, ಆಸ್ಪತ್ರೆಯಲ್ಲಿ ಬೆಡ್ ಕಾಯ್ದಿರಿಸುವಂತೆ ನಿಮಾನ್ಸ್ ಆಡಳಿತ ಮಂಡಳಿಗೆ ಹಾಸನ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.

    ಜೀರೋ ಟ್ರಾಫಿಕ್‌ನಲ್ಲಿ ಮಗುವನ್ನು ಹಾಸನದಿಂದ ನಿಮಾನ್ಸ್‌ಗೆ ಕೇವಲ 1 ಗಂಟೆ 40 ನಿಮಿಷದಲ್ಲಿ ತಲುಪಿಸಲಾಗಿತ್ತು. ಆದರೆ ಬೆಡ್ ಖಾಲಿಯಿಲ್ಲ ಎಂದು ಆಡಳಿತ ಮಂಡಳಿ ಮಗುವನ್ನು ಆಸ್ಪತ್ರೆಯ ಆವರಣದಲ್ಲಿಯೇ ನಿಲ್ಲಿಸಿದೆ. ಮಗುವಿಗೆ ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೆ ಬೇಜವಾಬ್ದಾರಿ ತೋರಿದ್ದಲ್ಲದೇ ಸುಮಾರು ಅರ್ಧ ಗಂಟೆಯಿಂದ ಮಗುವನ್ನು ಅಂಬುಲೆನ್ಸ್‌ನಲ್ಲಿಯೇ ಇರಿಸಲಾಗಿತ್ತು. ಇದನ್ನೂ ಓದಿ: ಹಣಕಾಸಿನ ವಿಚಾರಕ್ಕೆ ಟಿಪ್ಪರ್ ಹರಿಸಿ ವ್ಯಕ್ತಿಯ ಹತ್ಯೆ – ಇಬ್ಬರು ಗಂಭೀರ

    ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆ ಮಗುವಿನ ಆಕ್ಸಿಜನ್ ಲೆವೆಲ್ ಕಡಿಮೆಯಾಗಿ ಮೃತಪಟ್ಟಿದೆ. ಮಗುವಿಗೆ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ತೋರಿದ್ದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಆಕ್ರಂದನ ಮುಗಿಲುಮುಟ್ಟಿದೆ.

    ಅತ್ತ ಆಸ್ಪತ್ರೆಯಲ್ಲಿ ಬೆಡ್ ಕೊಡದೆ ವೈದ್ಯರು ನಿರ್ಲಕ್ಷ್ಯವಹಿಸಿದರೆ, ಇತ್ತ ಪೊಲೀಸರು ಹಾಗೂ ಅಂಬುಲೆನ್ಸ್ ಚಾಲಕರ ನಡುವೆ ವಾಗ್ವಾದ ನಡೆದಿದೆ. ನಿಮಾನ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿ ಮೃತ ಮಗುವನ್ನು ವಿಧಾನಸೌಧದ ಮುಂದೆ ತಂದು ಪೋಷಕರು ಹಾಗೂ ಅಂಬುಲೆನ್ಸ್ ಚಾಲಕರು ಪ್ರತಿಭಟನೆಗೆ ಯೋಜಿಸಿದ್ದಾರೆ. ಇದನ್ನೂ ಓದಿ: ಹಾರಾಟದಲ್ಲಿದ್ದ ವಿಮಾನದಲ್ಲೇ ಗಂಡ, ಹೆಂಡತಿ ಗಲಾಟೆ – ಬ್ಯಾಂಕಾಕ್‍ಗೆ ಹೊರಟಿದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್

  • ನನಗೆ ಜೀರೊ ಟ್ರಾಫಿಕ್‌ ಯಾಕೆ ಕೊಟ್ರಿ – ಪೊಲೀಸ್‌ ಆಯುಕ್ತರ ಮೇಲೆ ಸಿಎಂ ಗರಂ

    ನನಗೆ ಜೀರೊ ಟ್ರಾಫಿಕ್‌ ಯಾಕೆ ಕೊಟ್ರಿ – ಪೊಲೀಸ್‌ ಆಯುಕ್ತರ ಮೇಲೆ ಸಿಎಂ ಗರಂ

    ಮೈಸೂರು: ತನಗೆ ಬೇಡ ಎಂದಿದ್ದರೂ ಜೀರೊ ಟ್ರಾಫಿಕ್‌ (Zero Traffic) ವ್ಯವಸ್ಥೆ ಕಲ್ಪಿಸಿದ್ದ ಮೈಸೂರು ಪೊಲೀಸ್‌ ಆಯುಕ್ತರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗರಂ ಆದರು. ನನಗೆ ಜೀರೊ ಟ್ರಾಫಿಕ್‌ ಯಾಕೆ ಮಾಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

    ಮೈಸೂರು (Mysuru) ವಿಮಾನ ನಿಲ್ದಾಣದಿಂದ ಜಿಲ್ಲಾ ಪಂಚಾಯಿತಿಗೆ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಜೀರೊ ಟ್ರಾಫಿಕ್ಸ್‌ ಸೌಲಭ್ಯ ಕಲ್ಪಿಸಿದ್ದಕ್ಕಾಗಿ ಪೊಲೀಸ್‌ ಆಯುಕ್ತರ ಮೇಲೆ ಗರಂ ಆದರು. “ಜೀರೊ ಟ್ರಾಫಿಕ್‌ ಏಕೆ ಮಾಡಿದ್ದೀರಾ? ನನಗೆ ಜೀರೊ ಟ್ರಾಫಿಕ್‌ ಸೌಲಭ್ಯ ಬೇಡ ಅಂತ ಹೇಳಿರೋದು ನಮಗೆ ಗೊತ್ತಿದೆಯಾ ಎಂದು ಸಿಎಂ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಿಯುಸಿ ಫೇಲ್ ಆದ ಪ್ರಿಯಾಂಕ್ ಖರ್ಗೆ ಎಂಜಿನಿಯರ್ ಸೂಲಿಬೆಲೆ ಪದವಿ ಕೇಳ್ತಾರೆ: ಭರತ್ ಶೆಟ್ಟಿ ವ್ಯಂಗ್ಯ

    ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದಾಗ ಏನನ್ನೂ ಮಾತನಾಡದೇ ಪೊಲೀಸ್‌ ಆಯುಕ್ತರು ನಿಂತಿದ್ದರು. ಆಗ “DONT DO THAT” ಎಂದು ಸಿದ್ದರಾಮಯ್ಯ ಅವರು ಪೊಲೀಸ್ ಆಯುಕ್ತರಿಗೆ ಖಡಕ್ ವಾರ್ನಿಂಗ್ ಮಾಡಿದರು.

    ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ಜೀರೊ ಟ್ರಾಫಿಕ್‌ ಸೌಲಭ್ಯ ತ್ಯಜಿಸಿದ್ದರು. ಇದನ್ನೂ ಓದಿ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಹೊಸ ಬಾಂಬ್

    “ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೊ ಟ್ರಾಫಿಕ್‌ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಪೊಲೀಸ್‌ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ” ಎಂದು ತಿಳಿಸಿದ್ದರು.

  • ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ – ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಶಿಫ್ಟ್

    ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ – ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಶಿಫ್ಟ್

    ಶಿವಮೊಗ್ಗ: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವ ಸಲುವಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ಮೂಲಕ ಕಳುಹಿಸಲಾಯಿತು.

    ಜಿಲ್ಲೆಯ ಭದ್ರಾವತಿಯ ಯುವತಿ ರಾಧಿಕಾ (18) ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ನಗರದ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚುವರಿ ಚಿಕಿತ್ಸೆ ಅಗತ್ಯವಿದ್ದ ಕಾರಣ ವೈದ್ಯರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಇದನ್ನೂ ಓದಿ: ಹಣಕ್ಕಾಗಿ ಮೊಮ್ಮಗಳನ್ನೇ ಮಾರಾಟ ಮಾಡಿದ ಪಾಪಿ ಅಜ್ಜ

    ತುರ್ತಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಬೇಕಿದ್ದರಿಂದ ರಾಧಿಕಾ ಪೋಷಕರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಪೋಷಕರ ಮನವಿಗೆ ತಕ್ಷಣವೇ ಸ್ಪಂದಿಸಿದ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದರು. ಹಾಗಾಗಿ ಇಂದು ಮಧ್ಯಾಹ್ನ 2.30ರ ಸುಮಾರಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಅಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ನಲ್ಲಿ ಕರೆದೊಯ್ಯಲಾಯಿತು.

  • ಸಿಎಂಗೆ ಜೀರೊ ಟ್ರಾಫಿಕ್ ಕಲ್ಪಿಸಲು ಅಂಗಡಿ ಮುಂಗಟ್ಟು ಬಂದ್‌ – ಜನರ ಆಕ್ರೋಶ

    ಸಿಎಂಗೆ ಜೀರೊ ಟ್ರಾಫಿಕ್ ಕಲ್ಪಿಸಲು ಅಂಗಡಿ ಮುಂಗಟ್ಟು ಬಂದ್‌ – ಜನರ ಆಕ್ರೋಶ

    ಗದಗ: ನಗರದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿಗೆ ಜೀರೊ ಟ್ರಾಫಿಕ್ಸ್‌ ಕಲ್ಪಿಸಲು ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿನ ಹೂ, ಹಣ್ಣು, ಕಾಯಿ ಮಾರಾಟ ಮಾಡುತ್ತಿದ್ದ ಸಣ್ಣಪುಟ್ಟ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು.

    ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ನಗರಕ್ಕೆ ಭೇಟಿ ನೀಡಿದ್ದರು. ಮೊದಲಿಗೆ ತೋಂಟದಾರ್ಯ ಲಿಂಗೈಕ್ಯ ಸಿದ್ದಲಿಂಗ ಮಹಾಸ್ವಾಮಿ ಐಕ್ಯ ಮಂಟಪ ಕಟ್ಟಡ ಉದ್ಘಾಟನೆ ಮಾಡಿದರು. ನಂತರ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಕವಿಗವಾಯಿಗಳ ಮಠಕ್ಕೆ ಭೇಟಿ ನೀಡಿದರು. ಇದನ್ನೂ ಓದಿ: ಪಾಪ ಈಶ್ವರಪ್ಪ – ಕಾಂಗ್ರೆಸ್ ಕಾಲದಲ್ಲಿ ನಡೆದ ಪರ್ಸಂಟೇಜ್ ಬಗ್ಗೆ ಯಾರು ಮಾತನಾಡಲಿಲ್ಲ: ಹೆಚ್‍ಡಿ.ರೇವಣ್ಣ

    ಸೆಕ್ಯೂರಿಟಿ ಚೆಕ್‌ಗಾಗಿ ಬೆಳಗ್ಗೆ ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದಿದ್ದ ಪೊಲೀಸರು ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದ್ದರು. ಬೆಳಗ್ಗೆ 10:50ಕ್ಕೆ ಸಿಎಂ ಗದಗ ನಗರಕ್ಕೆ ಬಂದಿದ್ದರು. ಬೆಳಗ್ಗೆಯಿಂದಲೇ ಶ್ರೀಮಠದ ಆವರಣದಲ್ಲಿನ 10 ಕ್ಕೂ ಹೆಚ್ಚು ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಬೆಳಗಿನ ಜಾವ ಆಶ್ರಮಕ್ಕೆ ಬರುವ ಭಕ್ತರನ್ನೇ ನಂಬಿಕೊಂಡು ಇಲ್ಲಿ ವ್ಯಾಪಾರ ನಡೆಯುತ್ತೆ. ಪೊಲೀಸರು ಏಕಾಏಕಿ ಅಂಗಡಿ ಬಂದ್ ಮಾಡಿಸಿದ್ದರಿಂದ ಒಂದು ಅಂಗಡಿಗೆ ಕನಿಷ್ಠ 1,000 ರೂ. ವ್ಯಾಪಾರ ನಷ್ಟವಾಗಿದೆ.

    ಸಿದ್ದರಾಮಯ್ಯ, ಯಡಿಯೂರಪ್ಪ ಭೇಟಿ ಕೊಟ್ಟಾಗಲೂ ಬಂದ್‌ ಆಗಿರಲಿಲ್ಲ
    ಇತ್ತೀಚೆಗೆ ವೀರೇಶ್ವರ ಪುಣ್ಯಾಶ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿದ್ದರು. ಆಗಲೂ ಮಠದ ಆವರಣದಲ್ಲಿನ ಮಳಿಗೆಗಳನ್ನು ಬಂದ್ ಮಾಡಿಸಿರಲಿಲ್ಲ. ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗಲೂ ಮಠಕ್ಕೆ ಭೇಟಿ ನೀಡಿದ್ದರು. ಯಾರೇ ಗಣ್ಯ ವ್ಯಕ್ತಿಗಳು ಬಂದರೂ ಮಠಕ್ಕೆ ಭೇಟಿ ಕೊಡುತ್ತಾರೆ.‌ ಆದರೆ ಯಾವ ಸಂದರ್ಭದಲ್ಲೂ ಅಂಗಡಿ ಬಂದ್ ಮಾಡಿಸಿದ ಉದಾಹರಣೆಗಳಿಲ್ಲ. ಬಂದ್‌ ಮಾಡಿಸಲು ಬಂದಿದ್ದ ಪೊಲೀಸರು ಬೇರೆಯೇ ಕಾರಣ ಕೊಟ್ಟಿದ್ದರು ಎಂದು ಸ್ಥಳೀಯ ವ್ಯಾಪಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾವೆಲ್ಲಾ ಬಾರ್‌ನಲ್ಲಿ ಕುಡಿದಿದ್ವಿ, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು – ಸ್ನೇಹಿತರು ಹೇಳಿದ್ದೇನು?

    Basavaraj Bommai

    ಜೀರೋ ಟ್ರಾಫಿಕ್‌ನಿಂದಾಗಿ ಜನರು ಅನೇಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾಮನ್ ಮ್ಯಾನ್ ಎಂದು ಹೇಳಿಕೊಂಡು ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸೆಕ್ಯೂರಿಟಿ ನೆಪದಲ್ಲಿ ಅತೀ ಸಾಮಾನ್ಯ ವ್ಯಾಪಾರಸ್ಥರಿಗೆ ಜಿಲ್ಲೆಯ ಪೊಲೀಸರು ತೊಂದರೆ ಕೊಡುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸಿದ್ದಾರೆ.

  • ಮಧ್ಯರಾತ್ರಿ ಸಿಎಂಗೆ ಝೀರೋ ಟ್ರಾಫಿಕ್‌ – ಅರ್ಧಗಂಟೆ ಸರ್ವಿಸ್‌ ರಸ್ತೆಯಲ್ಲಿ ನಿಂತ ವಾಹನಗಳು

    ಮಧ್ಯರಾತ್ರಿ ಸಿಎಂಗೆ ಝೀರೋ ಟ್ರಾಫಿಕ್‌ – ಅರ್ಧಗಂಟೆ ಸರ್ವಿಸ್‌ ರಸ್ತೆಯಲ್ಲಿ ನಿಂತ ವಾಹನಗಳು

    ಬೆಂಗಳೂರು: ಮಧ್ಯರಾತ್ರಿ 12 ಗಂಟೆಯ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಝೀರೋ ಟ್ರಾಫಿಕ್‌ನಲ್ಲಿ ಸಂಚರಿಸಿದ್ದಾರೆ.

    ಬುಧವಾರ ಸಿಎಂ ಹಾನಗಲ್‌ ವಿಧಾನಸಭಾ ಉಪಚುನಾವಣೆಯ ಪ್ರಚಾರಕ್ಕೆ ತೆರಳಿದ್ದರು. ಪ್ರಚಾರ ಮುಗಿಸಿ ರಾತ್ರಿ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್‌ನಲ್ಲಿ ಮರಳಿದ್ದಾರೆ.

    ಶಿಗ್ಗಾಂವಿಯ ತಡಸ ಕ್ರಾಸ್‍ನಿಂದ ಹುಬ್ಬಳ್ಳಿವರೆಗೂ ಬೊಮ್ಮಾಯಿ ಅವರಿಗೆ ಝೀರೋ ಟ್ರಾಫಿಕ್ ನೀಡಲಾಗಿತ್ತು. ಬೇರೆ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಪೊಲೀಸರು ಅವಕಾಶ ನೀಡಿರಲಿಲ್ಲ. ರಸ್ತೆಗೆ ಇಳಿಯಲು ಅವಕಾಶ ನೀಡದ ಕಾರಣ ಸರ್ವಿಸ್‌ ರಸ್ತೆಯಲ್ಲೇ ಇತರೇ ವಾಹನಗಳು ನಿಂತಿದ್ದವು. ಪೊಲೀಸರು ತಡೆದ ಪರಿಣಾಮ ಸುಮಾರು 20 ನಿಮಿಷದಿಂದ ಅರ್ಧಗಂಟೆಯವರೆಗೂ ವಾಹನಗಳು ಸರ್ವಿಸ್‌ ರಸ್ತೆಯಲ್ಲೇ ನಿಂತಿದ್ದವು. ಇದನ್ನೂ ಓದಿ: ಮರದ ಜೊತೆ ನಟಿ ನಯನತಾರಾ ಮದುವೆ

    ಮುಖ್ಯಮಂತ್ರಿಗಳು ತಮ್ಮ ಸಂಚಾರಕ್ಕೆ ಝೀರೋ ಟ್ರಾಫಿಕ್ ಬಳಸಬಹುದು. ಇದು ಅವರಿಗೆ ನೀಡಲಾಗಿರುವ ಪರಮಾಧಿಕಾರ. ಆದರೆ ಮಧ್ಯರಾತ್ರಿ 25 ಕಿಲೋಮೀಟರ್ ದೂರ ಕ್ರಮಿಸಲು ಝೀರೋ ಟ್ರಾಫಿಕ್ ಬೇಕಿತ್ತಾ? ಅದು ಹೈವೆಯಲ್ಲಿ ಬೇಕಿತ್ತಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ನಾನು ಸಿಎಂ ಅಲ್ಲ. ಕಾಮನ್‌ ಮ್ಯಾನ್‌. ಸರಳ ರಾಜಕಾರಣಿ ಎಂದು ಬಸವರಾಜ ಬೊಮ್ಮಾಯಿ ಅವರೇ ಹಲವು ವೇದಿಕೆಯಲ್ಲಿ ಹೇಳಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಿರುವಾಗ ಮಧ್ಯರಾತ್ರಿ ವಾಹನಗಳ ಸಂಚಾರ ಕಡಿಮೆ ಇರುತ್ತದೆ. ಈ ಸಮಯದಲ್ಲೂ ಝೀರೋ ಟ್ರಾಫಿಕ್‌ ಬೇಕಿತ್ತೇ ಎನ್ನುವುದು ಕಾಮನ್‌ ಮ್ಯಾನ್‌ ಪ್ರಶ್ನೆ.

  • ನನಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡ: ಅರಗ ಜ್ಞಾನೇಂದ್ರ

    ನನಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡ: ಅರಗ ಜ್ಞಾನೇಂದ್ರ

    ಬೆಂಗಳೂರು: ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಪೊಲೀಸ್ ಅಧಿಕಾರಿಗಳಿಗೆ ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ.

    ಎಲ್ಲರಂತೆ ನಾನೂ ಸಂಚರಿಸುತ್ತೇನೆ. ನನಗಾಗಿ ಯಾವುದೇ ವಿಶೇಷ ಸೌಲಭ್ಯ ಬೇಡ ಎಂದು ಹೇಳುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದನ್ನೂ ಓದಿ : 3 ದಿನಗಳ ಹಿಂದೆ ಝೀರೋ ಟ್ರಾಫಿಕ್ – ಇಂದು ಮಾಜಿ ಸಿಎಂಗೆ ಟ್ರಾಫಿಕ್ ಬಿಸಿ

    ರಾಜ್ಯದ ಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸಲು ಅವಕಾಶವಿದೆ. ಆದರೆ ಮಂತ್ರಿಗಳಿಗೆ ಈ ವಿಶೇಷ ಸೌಲಭ್ಯವಿಲ್ಲ. ಅವಕಾಶ ಇಲ್ಲದೇ ಇದ್ದರೂ ಕೆಲ ಮಂತ್ರಿಗಳು ಪ್ರಭಾವ ಬಳಸಿ ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸುತ್ತಾರೆ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುತ್ತದೆ. ಇದನ್ನೂ ಓದಿ : ಡಿಸಿಎಂಗೆ ಇನ್ನೂ ಹೋಗಿಲ್ಲ ಝೀರೋ ಟ್ರಾಫಿಕ್ ಮೋಹ

    ಈ ಹಿಂದೆ ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದ ಜಿ ಪರಮೇಶ್ವರ ಅವರು ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸಿದ್ದು ಟೀಕೆ ಗುರಿಯಾಗಿತ್ತು. ಈ ಬಾರಿ ಪ್ರಮಾಣವಚನ ಸಮಾರಂಭಕ್ಕೆ ಶಶಿಕಲಾ ಜೊಲ್ಲೆಯವರು ತಡವಾಗಿ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ರಾಜಭವನದವರೆಗೆ ಝೀರೋ ಟ್ರಾಫಿಕ್ ನಲ್ಲಿ ಬಂದಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು.

  • 22ರ ಯುವತಿಗೆ ತುರ್ತು ಶಸ್ತ್ರ ಚಿಕಿತ್ಸೆ- ಅಂಬುಲೆನ್ಸ್‌ಗೆ ದಾರಿ ಕೊಟ್ಟು ಶುಭಕೋರಿದ ಜನ

    22ರ ಯುವತಿಗೆ ತುರ್ತು ಶಸ್ತ್ರ ಚಿಕಿತ್ಸೆ- ಅಂಬುಲೆನ್ಸ್‌ಗೆ ದಾರಿ ಕೊಟ್ಟು ಶುಭಕೋರಿದ ಜನ

    – ಪುತ್ತೂರಿನಿಂದ ಬೆಂಗ್ಳೂವರೆಗೂ ಸಹಕರಿಸಿದ ಸ್ಥಳೀಯರು

    ಚಿಕ್ಕಮಗಳೂರು: ತುರ್ತು ಶಸ್ತ್ರಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದೊಯ್ಯುವಾಗ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಜನ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಡ್ರೈವರ್ ಹಾಗೂ ಯುವತಿಗೆ ಶುಭಕೋರಿದ್ದಾರೆ.

    ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿ ಮೂಲದ 22 ವರ್ಷದ ಸುಹಾನ ಶ್ವಾಸಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಳು. ಯುವತಿಗೆ ತುರ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದು ಝೀರೋ ಟ್ರಾಫಿಕ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    ಪುತ್ತೂರಿನಿಂದ ಬೆಂಗಳೂರಿಗೆ ಸುಮಾರು 7-8 ಗಂಟೆ ಸಮಯದ ಮಾರ್ಗವನ್ನ 3 ಗಂಟೆ 45 ನಿಮಿಷಕ್ಕೆ ತಲುಪುವ ಸಾಧ್ಯತೆ ಇದೆ. ಸುಹಾನ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಲಂಗ್ಸ್ ಟ್ರಾನ್ಸ್ ಪ್ಲಾಂಟ್ ತುರ್ತು ಶಸ್ತ್ರ ಚಿಕಿತ್ಸೆಯ ತುರ್ತು ಅಗತ್ಯವಿದ್ದು, ಪುತ್ತೂರಿನಿಂದ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಝೀರೋ ಟ್ರಾಫಿಕ್ ನಲ್ಲಿ ಕೊಂಡೊಯ್ಯಲಾಗಿದೆ.

    ಈ ವೇಳೆ ಅಂಬುಲೆನ್ಸ್ ಗೆ ಪುತ್ತೂರಿನಿಂದ ಬೆಂಗಳೂರಿನವರೆಗೂ ದಾರಿಯುದ್ದಕ್ಕೂ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯರು ಕೂಡ ಸಹಕರಿಸಿದ್ದಾರೆ. ಅಂಬುಲೆನ್ಸ್ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಬರುತ್ತಿದ್ದಂತೆ ಸ್ಥಳೀಯರು ಅಂಬುಲೆನ್ಸ್‍ಗೆ ದಾರಿ ಮಾಡಿಕೊಟ್ಟು ಡ್ರೈವರ್ ಹಾಗೂ ಯುವತಿಗೆ ಶುಭ ಕೋರಿದ್ದಾರೆ. ಸುಮಾರು 390 ಕಿ.ಮೀ. ದೂರದ ಮಾರ್ಗದುದ್ದಕ್ಕೂ ಪೊಲೀಸ್ ಇಲಾಖೆ ಕೂಡ ಝೀರೋ ಟ್ರಾಫಿಕ್‍ಗೆ ಎಲ್ಲಾ ವ್ಯವಸ್ಥೆ ಮಾಡಿದೆ.

  • ಶಿವಮೊಗ್ಗದಿಂದ ಬೆಂಗ್ಳೂರಿಗೆ ಝೀರೋ ಟ್ರಾಫಿಕ್‍ನಲ್ಲಿ ಎರಡೂವರೆ ತಿಂಗಳ ಮಗು ರವಾನೆ

    ಶಿವಮೊಗ್ಗದಿಂದ ಬೆಂಗ್ಳೂರಿಗೆ ಝೀರೋ ಟ್ರಾಫಿಕ್‍ನಲ್ಲಿ ಎರಡೂವರೆ ತಿಂಗಳ ಮಗು ರವಾನೆ

    ಶಿವಮೊಗ್ಗ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಎರಡೂವರೆ ತಿಂಗಳ ಹೆಣ್ಣು ಮಗುವೊಂದನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಇಂದು ಸಂಜೆ ಝೀರೋ ಟ್ರಾಫಿಕ್ ಮೂಲಕ ಕಳುಹಿಸಲಾಗಿದೆ.

    ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ನಿವಾಸಿಯಾಗಿರುವ ಇಸ್ಮಾಯಿಲ್ ಹಾಗೂ ತಶ್ರತ್ ದಂಪತಿಯ ಎರಡನೇ ಮಗು ಹುಟ್ಟಿನಿಂದಲೇ ಹೃದಯ ಸಮಸ್ಯೆಯಿಂದ ಬಳಲುತಿತ್ತು. ಈ ಕಂದಮ್ಮನಿಗೆ ಈಗಾಗಲೇ ಮೂರು ಬಾರಿ ಶಸ್ತ್ರ ಚಿಕಿತ್ಸೆ ಸಹ ನಡೆಸಲಾಗಿದೆ. ಅಲ್ಲದೇ ಕಳೆದೊಂದು ವಾರದ ಹಿಂದೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿತ್ತು.

    ಮಗುವಿಗೆ ಇಂದು ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಗುವಿನ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಈ ಹಿಂದೆ ಚಿಕಿತ್ಸೆ ನೀಡಿದ್ದ ವೈದ್ಯರಿಂದಲೇ ಚಿಕಿತ್ಸೆ ಅಗತ್ಯ ಇರುವ ಕಾರಣ ಮತ್ತೆ ಅಗತ್ಯ ಸೌಲಭ್ಯದೊಂದಿಗೆ ಶಿವಮೊಗ್ಗದಿಂದ ಚನ್ನಗಿರಿ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಅಂಬ್ಯುಲೆನ್ಸ್ ನಲ್ಲಿ ಝೀರೋ ಟ್ರಾಫಿಕ್ ಮೂಲಕ ಕಳುಹಿಸಲಾಯಿತು.