Tag: zee5

  • ಮಾರಿಗಲ್ಲು ವೆಬ್ ಸರಣಿ : ಅಪ್ಪು ಕನಸು ನನಸು

    ಮಾರಿಗಲ್ಲು ವೆಬ್ ಸರಣಿ : ಅಪ್ಪು ಕನಸು ನನಸು

    ಭಾರತದ ಪ್ರಖ್ಯಾತ ಹಾಗೂ ಬೃಹತ್ ಓಟಿಟಿ ವೇದಿಕೆಯಾದ ಜೀ5, ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಸಹಯೋಗದಲ್ಲಿ ಒಂದು ವೆಬ್ ಸರಣಿಯನ್ನು ಘೋಷಿಸಿದ್ದು, ಇದೀಗ ಅದರ ಶೀರ್ಷಿಕೆಯನ್ನು ಘೋಷಿಸಿ ಮತ್ತೊಮ್ಮೆ ಸುದ್ದಿಯಾಗಿದೆ. ಮಾರಿಗಲ್ಲು (Marigallu) ಎಂಬ ಶೀರ್ಷಿಕೆಯುಳ್ಳ ಈ ವೆಬ್‌ಸರಣಿ ಕರ್ನಾಟಕ ಜಾನಪದವನ್ನು ಹೇಳುವ ಒಂದು ದೈವಿಕ ಥ್ರಿಲ್ಲರ್ ಆಗಿದೆ. ಈ ಕಥೆಯು ಸದೃಢ ಸಾಂಸ್ಕೃತಿಕ ಮತ್ತು ಐತಿಹಾಸಿಕ ಆಧಾರಗಳನ್ನು ಹೊಂದಿರುತ್ತದೆ ಎಂಬುದು ಗಮನಾರ್ಹ ಸಂಗತಿ.

    ನಾಲ್ಕನೇ ಶತಮಾನದ ಕದಂಬರ ಆಳ್ವಿಕೆಯನ್ನು ಹೊಂದಿರುವ ಈ ಕಥೆಯು, ಕದಂಬರ ಪ್ರಥಮ ರಾಜನಾದ ಮಯೂರ ಶರ್ಮನ ಪರಂಪರೆಯನ್ನು ಸಂಭ್ರಮಿಸುತ್ತಿದೆ. ಕದಂಬರ ಕಾಲದಿಂದಲೂ `ಮಾರಿ’ ಎಂಬ ದೇವತೆಯಿಂದ ಕಾಪಾಡಲ್ಪಟ್ಟಿರುವ ನಿಧಿಯ ಕುರಿತಾಗಿ ಕಥೆಯನ್ನು ಹೆಣೆದಿದ್ದು, ನಂಬಿಕೆ, ಸ್ವಾರ್ಥ, ದುರಾಸೆ ಮುಂತಾದ ಭಾವನೆಗಳಿಗೆ ಒಳಗಾಗಿ ಪಾತ್ರಗಳು ಯಾವ ರೀತಿ ವರ್ತಿಸುತ್ತಾರೆ, ನಿಧಿಯ ರಹಸ್ಯವನ್ನು ಹೇಗೆ ಭೇದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅಷ್ಟೆ ಅಲ್ಲದೆ ಈ ಕಥೆಯು ಸಾಂಸ್ಕೃತಿಕ ಶ್ರೀಮಂತಿಕೆ, ದೈವ ಭಕ್ತಿ, ಜಾನಪದ ಮುಂತಾದ ವಿಷಯಗಳನ್ನೂ ಒಳಗೊಂಡಿರುತ್ತದೆ.ಇದನ್ನೂ ಓದಿ: ಕಾಂತಾರದಿಂದ ಗುಡ್ ನ್ಯೂಸ್ : ಟ್ರೇಲರ್ ರಿಲೀಸ್ ಡೇಟ್ ಫಿಕ್ಸ್

    ವೆಬ್ ಸರಣಿ ಕುರಿತಾಗಿ ಮಾತನಾಡಿದ ನಿರ್ಮಾಪಕಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್, “ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಹಾಗೂ ಜನರ ಜೀವನವನ್ನು ಪ್ರತಿಬಿಂಬಿಸುವ ಕಥೆಗಳನ್ನು ನಾವು ಹೆಚ್ಚು ನಂಬುತ್ತೇವೆ ಮತ್ತು ಅಂತಹ ಕಥೆಗಳಿಗೆ ಉತ್ತೇಜನ ನೀಡುತ್ತೇವೆ. “ಮಾರಿಗಲ್ಲು” ಅಂತಹ ಒಂದು ಕಥೆಯಾಗಿದೆ. ಈ ಕಥೆಯು ಕೇವಲ ರಹಸ್ಯ, ಥ್ರಿಲ್, ಆಕ್ಷನ್‌ಗಳನ್ನು ಒಳಗೊಳ್ಳದೆ, ಕರ್ನಾಟಕ ಜಾನಪದ ಸಂಸ್ಕೃತಿ, ದೈವ ಭಕ್ತಿ ಮುಂತಾದವುಗಳ್ಳನ್ನೂ ಒಳಗೊಂಡಿರುವ ವಿಭಿನ್ನ ಮಿಶ್ರಣವಾಗಿದೆ. ಇದು ಪ್ರತಿಯೊಬ್ಬರು ಕಣ್ಣರಳಿಸಿ ನೋಡುವಂಥಾ ಥ್ರಿಲ್ಲರ್ ಕಥೆಯಾಗಲಿದೆ” ಎಂದು ಹೇಳಿದರು.

    ಕನ್ನಡ ಜೀ5 ಬಿಸಿನೆಸ್ ಮುಖ್ಯಸ್ಥ ಶ್ರೀ ದೀಪಕ್ ಶ್ರಿರಾಮುಲು ಮಾತನಾಡಿ, ” ‘ಮಾರಿಗಲ್ಲು’ ನಾವು ಹಿಂದೆಂದೂ ಮಾಡದ ಪ್ರಯೋಗವಾಗಿದೆ. ದುರಾಸೆ, ರಹಸ್ಯ, ಮೋಹ, ದೈವ ಭಕ್ತಿ ಮುಂತಾದ ಅನೇಕ ವಿಷಯಗಳ ವಿಭಿನ್ನ ಮಿಶ್ರಣವಾದ ಈ ಕಥೆ ಕನ್ನಡ ನಾಡಿನ ಜಾನಪದವನ್ನು ಕೂಡ ಎತ್ತಿ ಹಿಡಿಯಲಿದೆ. ಕದಂಬ ವಂಶಸ್ಥರ ಸಾಧನೆಗಳನ್ನು ಜೀವಂತವಾಗಿಸುವ ಪ್ರಯತ್ನವನ್ನು ಇದರಲ್ಲಿ ಕಾಣಬಹುದು. ‘ಮಾರಿ’ ದೇವತೆಯಿಂದ ಕಾಯಲ್ಪಟ್ಟಿದ ಕದಂಬರ ನಿಧಿಯ ಕಳವು ಮತ್ತು ಹುಡುಕಾಟದ ಸುತ್ತ ಇಡೀ ಕಥೆಯನ್ನು ಹೆಣೆಯಲಾಗಿದೆ. ಈ ಥ್ರಿಲ್ಲರ್ ವೆಬ್ ಸರಣಿಯನ್ನು ಪ್ರೇಕ್ಷಕರ ಮುಂದಿಡಲು ನಾವು ಉತ್ಸುಕರಾಗಿದ್ದೇವೆ” ಎಂದು ತಿಳಿಸಿದರು.

    ಮತ್ತೊಂದು ವಿಶೇಷವೆಂದರೆ, ಇಂತಹ ಕುತೂಹಲಕಾರಿ ಕಥೆಗಳನ್ನು ಪ್ರೇಕ್ಷಕರಿಗೆ ಓಟಿಟಿ ವೇದಿಕೆಗಳ ಮೂಲಕ ಲಭ್ಯಗೊಳಿಸಬೇಕೆಂಬುದು ಪುನೀತ್ ರಾಜಕುಮಾರ್ ಅವರ ಕನಸಾಗಿತ್ತು. ಉತ್ತಮ ಗುಣಮಟ್ಟದ ಕಥೆಗಳನ್ನು ಜನರಿಗೆ ಓಟಿಟಿಯ ಮೂಲಕ ನೀಡಬೇಕೆಂಬ ಅವರ ಆ ಕನಸಿಗೆ “ಮಾರಿಗಲ್ಲು” ಮುನ್ನುಡಿಯಾಗಲಿದೆ.ಇದನ್ನೂ ಓದಿ: ಟಾಕ್ಸಿಕ್‌ ಫೈನಲ್‌ ಶೂಟಿಂಗ್‌ ಮುನ್ನ ಲಂಡನ್‌ಗೆ ಹಾರಿದ ಯಶ್!

  • ವೆಬ್ ಸಿರೀಸ್‌ಗಾಗಿ ಬಣ್ಣ ಹಚ್ಚಿದ ಲೂಸಿಯಾ ನಿರ್ದೇಶಕ ಪವನ್

    ವೆಬ್ ಸಿರೀಸ್‌ಗಾಗಿ ಬಣ್ಣ ಹಚ್ಚಿದ ಲೂಸಿಯಾ ನಿರ್ದೇಶಕ ಪವನ್

    ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ಗೌಡ ನೇತೃತ್ವದ ಕೆಆರ್‌ಜಿ ಸ್ಟುಡಿಯೋಸ್ (KRG Studios) ಕಡಿಮೆ ಅವಧಿಯಲ್ಲಿಯೇ ಸಿನಿಮಾ ನಿರ್ಮಾಣ ಹಾಗೂ ಸಿನಿಮಾ ವಿತರಣೆ ವಿಭಾಗದಲ್ಲಿ ಹೆಸರುಗಳಿಸಿಕೊಂಡಿದೆ. ಭಿನ್ನ, ಗುಣಮಟ್ಟದ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ಮಿಸುತ್ತಿರುವ ಕೆಆರ್‌ಜಿ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ.

    ಚಿತ್ರ ನಿರ್ಮಾಣ ಹಾಗೂ ವಿತರಣೆಯಲ್ಲಿ ಹೆಸರು ಮಾಡಿರುವ ಕೆಆರ್‌ಜಿ ಸ್ಟುಡಿಯೋ ವೆಬ್ ಸಿರೀಸ್ ನಿರ್ಮಾಣಕ್ಕಿಳಿದಿದೆ. Zee5 ಜೊತೆ ಕೈ ಜೋಡಿಸುವ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ವೆಬ್ ಸರಣಿಗಳನ್ನು ಉಣಬಡಿಸುವ ತವಕದಲ್ಲಿದೆ. ಅದರ ಮೊದಲ ಭಾಗವಾಗಿ ಶೋಧ (Shodha Web Series) ಎಂಬ ವೆಬ್ ಸಿರೀಸ್‌ಗೆ ಕೆಆರ್‌ಜಿ ಬಂಡವಾಳ ಹೂಡಿದೆ.

    ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿ, ಪ್ರೆಸೆಂಟ್ ಮಾಡುತ್ತಿರುವ ಶೋಧ ವೆಬ್ ಸರಣಿಗೆ ಸುನಿಲ್ ಮೈಸೂರು ಆಕ್ಷನ್ ಕಟ್ ಹೇಳಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಮನಸಾರೆ, ಪಂಚರಂಗಿ, ಲೈಫು ಇಷ್ಟೇನೆ ಮತ್ತು ಕಲ್ಟ್ ಸೈಕಲಾಜಿಕಲ್ ಥ್ರಿಲ್ಲರ್ ಲೂಸಿಯಾ ಸಿನಿಮಾಗಳ ಮೂಲಕ ನಟನೆ ಹಾಗೂ ನಿರ್ದೇಶನದಲ್ಲಿ ಹೆಸರು ಮಾಡಿರುವ ಪವನ್ ಕುಮಾರ್ (Pawan Kumar) ಶೋಧ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ಶೋಧ ವೆಬ್ ಸರಣಿ ಬಗ್ಗೆ ಮಾತನಾಡಿರುವ ಪವನ್ ಕುಮಾರ್, ಶೋಧದಲ್ಲಿ ನಟಿಸುವುದು ನನಗೆ ಸಂಪೂರ್ಣವಾಗಿ ಹೊಸ ಪ್ರಯಾಣವಾಗಿದೆ. ಬರವಣಿಗೆ ಮತ್ತು ನಿರ್ದೇಶನದಿಂದ ಬಂದ ನಂತರ, ಕ್ಯಾಮೆರಾ ಮುಂದೆ ಹೆಜ್ಜೆ ಹಾಕುವುದು, ಭಾವನೆಗಳನ್ನು ಹೊಸ ರೀತಿಯಲ್ಲಿ ಅನ್ವೇಷಿಸಲು ಇದು ನನಗೆ ಸವಾಲು ಹಾಕಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಅಯ್ಯನ ಮನೆ ಸೂಪರ್ ಸಕ್ಸಸ್ ಬಳಿಕ Zee5ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಮತ್ತೊಂದು ವೆಬ್ ಸರಣಿಯೇ ಶೋಧ. ಆಗಸ್ಟ್ 22ರಂದು ಶೋಧ ವೆಬ್ ಸಿರೀಸ್ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ಅಯ್ಯನ ಮನೆ ವೆಬ್ ಸರಣಿಗೆ ಭರಪೂರ ಮೆಚ್ಚುಗೆ ಸಿಕ್ಕಿದ್ದು, ಈಗ ಶೋಧ ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದೆ.

  • ಓಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’

    ಓಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಥಿಯೇಟರ್ ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಅತೀ ಕಡಿಮೆ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರವು ದಾಖಲೆಯ ರೀತಿಯಲ್ಲಿ ಬಾಕ್ಸ್ ಆಫೀಸಿನಲ್ಲಿ ಕಮಾಲ್ ಮಾಡಿತ್ತು. ಇದೀಗ ಓಟಿಟಿಯಲ್ಲೂ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿಯೂ ಕೂಡ ಸಖತ್ ಸದ್ದು ಮಾಡಿದೆ. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

    ಜೀ 5 ಓಟಿಟಿ ವೇದಿಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದ್ದು,  ವಾರಾಂತ್ಯಕ್ಕೆ 90 ಲಕ್ಷ ಜನರು ಈ ಸಿನಿಮಾವನ್ನು ವೀಕ್ಷಿಸಿದ್ದಾರಂತೆ. 3 ಕೋಟಿ ನಿಮಿಷ ವೀಕ್ಷಣೆ ಪಡೆದಿದೆ ಎನ್ನಲಾಗುತ್ತಿದೆ. ಈ ಓಟಿಟಿ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ವೀಕ್ಷಣೆ ಪಡೆದ ಮೊದಲ ಸಿನಿಮಾ ಇದಾಗಿದೆಯಂತೆ. ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

    ವಿವೇಕ್ ಅಗ್ನಿಹೋತ್ರಿ ಈ ಸಿನಿಮಾದ ನಿರ್ಮಾಣಕ್ಕೆ ಮುಂದಾದಾಗ ಹಾಕಿಕೊಂಡ ಬಜೆಟ್ ಕೇಲವ ಹತ್ತು ಕೋಟಿಯಂತೆ. ಆನಂತರ 15 ಕೋಟಿ ಖರ್ಚಾಗಿದೆ. ಆದರೆ, ಥಿಯೇಟರ್ ನಿಂದ ಬಂದದ್ದು, 250 ಕೋಟಿಗೂ ಹೆಚ್ಚು. ಅಲ್ಲದೇ, ಓಟಿಟಿ ಕೂಡ ಕೋಟಿ ಕೋಟಿ ಲೆಕ್ಕದಲ್ಲೇ ಹಕ್ಕುಗಳನ್ನು ಖರೀದಿಸಿದೆ. ಹೀಗಾಗಿ ಈ ಮಾದರಿಯ ಸಿನಿಮಾಗಳಲ್ಲಿ ಅತೀ ಹೆಚ್ಚು ಸಂಪಾದಿಸಿದ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದನ್ನೂ ಓದಿ : ನಾಲ್ಕೈದು ವರ್ಷ ಪ್ರಶಾಂತ್ ನೀಲ್ ತೆಲುಗಿನಲ್ಲೇ ಲಾಕ್ : ಮತ್ತೆ ರಕ್ತದ ಹಿಂದೆ ಬಿದ್ದ ಕೆಜಿಎಫ್ ಡೈರೆಕ್ಟರ್

    ಥಿಯೇಟರ್ನಲ್ಲಿ ಈ ಸಿನಿಮಾ ರಿಲೀಸ್ ಆದಾಗ, ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಓಟಿಟಿಯಲ್ಲಿ ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಹಾಗಾಗಿ ನೋಡುಗರ ಸಂಖ್ಯೆ ಸಹಜವಾಗಿ ಹೆಚ್ಚಾಗಿದೆ.