Tag: Zee Kannada

  • ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusive

    ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusive

    ಲರ್ಸ್ ವಾಹಿನಿಯ ಮಜಾ ಭಾರತ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಹಲವು ಸೀಸನ್ ಗಳನ್ನು ನಡೆಸಿಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್, ಇದೀಗ ಜೀ ಕನ್ನಡ ವಾಹಿನಿಗೆ ಜಿಗಿದಿದ್ದಾರೆ. ಇನ್ನೇನು ಶುರುವಾಗಬೇಕಿರುವ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4ರಲ್ಲಿ ರಚಿತಾ ಜಡ್ಜ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಸದ್ದಿಲ್ಲದೇ ರಚಿತಾ ರಾಮ್ ಅವರ ಪ್ರೋಮೋ ಶೂಟಿಂಗ್ ಕೂಡ ವಾಹಿನಿ ಮಾಡಿದೆ. ಇದನ್ನೂ ಓದಿ : ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ಒಲವಿನ ಉಡುಗೊರೆಗೆ 35 ವರ್ಷ


    ಕಳೆದ ಮೂರು ಸೀಸನ್ ಗಳಲ್ಲಿ ಹಿರಿಯ ನಟಿ ಲಕ್ಷ್ಮೀ, ಮುಖ್ಯಮಂತ್ರಿ ಚಂದ್ರು ಹಾಗೂ ವಿಜಯ ರಾಘವೇಂದ್ರ ನಿರ್ಣಾಯಕರಾಗಿದ್ದರು. ಈ ಬಾರಿ ಮೂವರು ಜಡ್ಜ್ ಆಗಿ ಇರುವುದಿಲ್ಲ ಎನ್ನುವ ಸುದ್ದಿಯಿದೆ. ರವಿಚಂದ್ರನ್, ರಚಿತಾ ರಾಮ್ ಮತ್ತು ಇನ್ನೋರ್ವ ಖ್ಯಾತ ಕಲಾವಿದರು ಈ ಸ್ಥಾನವನ್ನು ತುಂಬಲಿದ್ದಾರೆ.
    ಈಗಾಗಲೇ ರವಿಚಂದ್ರನ್ ಅವರ ಪ್ರೋಮೋ ಶೂಟ್ ಕೂಡ ಆಗಿದೆ. ಮಕ್ಕಳು ರವಿಚಂದ್ರನ್ ಅವರನ್ನು ಕಿಡ್ನ್ಯಾಪ್ ಮಾಡಿದ ವಿಡಿಯೋಗಳು ಹರಿದಾಡುತ್ತಿವೆ. ಕೆಲವೇ ದಿನಗಳಲ್ಲಿ ರಚಿತಾ ರಾಮ್ ಅವರ ಪ್ರೋಮೋ ಕೂಡ ಬರಲಿದೆಯಂತೆ. ಇದನ್ನೂ ಓದಿ : ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ


    ಹೈದರಾಬಾದ್ ವಿಮಾನ ನಿಲ್ದಾಣ, ರಾಮೋಜಿರಾವ್ ಫಿಲ್ಮಸಿಟಿಯಲ್ಲಿ ರಚಿತಾ ರಾಮ್ ಇರುವ ಪ್ರೋಮೋವನ್ನು ಚಿತ್ರೀಕರಿಸಿದ್ದಾರೆ ರೋಮೋ ಚಿತ್ರಖ್ಯಾತಿಯ ಶೇಖರ್. ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಈ ಭಾಗದ ಚಿತ್ರೀಕರಣ ನಡೆದಿದೆ. ಇದನ್ನೂ ಓದಿ : ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?


    ರಚಿತಾ ರಾಮ್ ಜೀ ಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಇದೇ ಮೊದಲೇನೂ ಅಲ್ಲ. ಹತ್ತು ವರ್ಷಗಳ ಹಿಂದೆ ಪ್ರಸಾರವಾದ ‘ಅರಸಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಅದು ಅವರ ಮೊದಲ ಸೀರಿಯಲ್ ಕೂಡ ಆಗಿತ್ತು. ಹತ್ತು ವರ್ಷಗಳ ನಂತರ ಅವರು ಮತ್ತೆ ಜೀ ಕನ್ನಡ ವಾಹಿನಿಯ ಬಳಗಕ್ಕೆ ಸೇರಿದ್ದಾರೆ.

  • ಪಾರುಗೆ ಒಲಿದು ಬಂದ ಕಂಕಣಭಾಗ್ಯ

    ಪಾರುಗೆ ಒಲಿದು ಬಂದ ಕಂಕಣಭಾಗ್ಯ

    ಬೆಂಗಳೂರು: ಸದಾ ನವನವೀನ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ನೀಡುವ ಮೂಲಕ ಜೀ ಕನ್ನಡವಾಹಿನಿ ಕನ್ನಡಿಗರ ಮನೆಮಾತಾಗಿದೆ. ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ರಿಯಾಲಿಟಿ ಷೋಗಳು ಹಾಗೂ ವಿಶಿಷ್ಟ ಕಥಾಹಂದರವುಳ್ಳ ಧಾರಾವಾಹಿಗಳನ್ನು ನೀಡುವ ಮೂಲಕ ಕನ್ನಡಿಗರಿಗೆ ಮನರಂಜನೆಯ ಮಹಾಪೂರವನ್ನೇ ಒದಗಿಸುತ್ತಿದೆ. ಕಿರುತೆರೆಯ ಸಾಂಪ್ರದಾಯಿಕ ಚೌಕಟ್ಟನ್ನೂ ಮೀರಿ, ಸತತವಾಗಿ ವೀಕ್ಷಕರಿಗೆ ಹೊಸ ಅಲೆಯ ಕಥೆಗಳನ್ನು ಕಟ್ಟಿಕೊಡುತ್ತಿದೆ. ಅಂಥ ಹೊಸ ಅಲೆಯ ಧಾರಾವಾಹಿಗಳಲ್ಲಿ ‘ಪಾರು’ ಧಾರಾವಾಹಿಯೂ ಒಂದು. ಈಗಾಗಲೇ ‘ಪಾರು’ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದು ಮುನ್ನಡೆದಿದೆ.

    ಅರಸನ ಕೋಟೆಯ ಅಖಿಲಾಂಡೇಶ್ವರಿಯ ಪಾತ್ರದಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಮಾಗಿದ ಅಭಿನಯ, ದಿಟ್ಟ ಮಾತುಗಳು ಇದರ ಜೊತೆ ನಾಯಕಿ ಪಾರುವಿನ ಮುಗ್ಧತೆ, ಆದಿತ್ಯನ ಶಿಸ್ತು, ಪ್ರೀತಮ್ ಮಾಡುವ ತರಲೆಗಳು ವೀಕ್ಷಕರನ್ನು ಇನ್ನೂ ಹೆಚ್ಚಾಗಿ ತಲುಪುವಂತೆ ಮಾಡಿದೆ. ಪಕ್ಕಾ ಸಿನಿಮಾ ಶೈಲಿಯ ಮೇಕಿಂಗ್ ವೀಕ್ಷಕರನ್ನು ಸೆಳೆಯುತ್ತಿದೆ. ಅದ್ದೂರಿ ಬಂಗಲೆಗಳು, ಪಾತ್ರಧಾರಿಗಳ ಕಾಸ್ಟೂಮ್ಸ್, ಖಡಕ್ ಡೈಲಾಗ್‍ಗಳು ವೀಕ್ಷಕರಿಗೆ ಹೊಸತನ ನೀಡಿದೆ. ಪಾರು ಧಾರಾವಾಹಿಯಲ್ಲಿನ ಗಟ್ಟಿ ಕಥಾಹಂದರ ಪ್ರತಿ ಎಪಿಸೋಡನ್ನು ವೀಕ್ಷಕರನ್ನು ಕಾತುರದಿಂದ ಕಾಯುವಂತೆ ಮಾಡಿದೆ.

    ಕಥಾಹಂದರದ ಬಗ್ಗೆ ಹೇಳುವುದಾದರೆ ಅಖಿಲಾಂಡೇಶ್ವರಿಯ ಮನೆಗೆ ಬರುವ ನಾಯಕಿ ಪಾರು ಅವರ ಮನೆಯಲ್ಲೇ ಅಡುಗೆ ಕೆಲಸಕ್ಕೆ ಸೇರುತ್ತಾಳೆ. ಅಖಿಲಾಂಡೇಶ್ವರಿಯ ಶಿಸ್ತಿನ ಅರಮನೆಯಲ್ಲಿ ಬರುವ ಸಂಕಷ್ಟಗಳನ್ನು ಎದುರಿಸುತ್ತಲೇ ಮುಂದೆ ಸಾಗುತ್ತಾಳೆ. ಮುಂದೆ ಅಖಿಲಾಂಡೇಶ್ವರಿ ಸಾಮ್ರಾಜ್ಯಕ್ಕೇ ರಾಯಭಾರಿಯಾಗುತ್ತಾಳೆ. ಈಗ ನಾಯಕಿ ಪಾರು ಬದುಕಲ್ಲೊಂದು ನಾಟಕೀಯ ತಿರುವು ಎದುರಾಗಿದೆ. ಪಾರುವಿಗೆ ಮದುವೆಯ ಯೋಗ ಕೂಡಿಬಂದಿದೆ. ಅದೂ ಯಾರೊಂದಿಗೆ ಗೊತ್ತಾ? ಅಖಿಲಾಂಡೇಶ್ವರಿಯ ಹಿರಿಯ ಮಗ ಆದಿತ್ಯ ಗ್ರೂಪ್ ಆಫ್ ಕಂಪನೀಸ್ ಒಡೆಯ ಆದಿತ್ಯನೊಂದಿಗೆ. ಆದಿತ್ಯ ಮತ್ತು ಪಾರು ಇಬ್ಬರ ಮದುವೆ ಅದ್ಧೂರಿಯಾಗಿ ನೆರವೇರಿದೆ. ಮದುವೆಯ ಎಲ್ಲಾ ಶಾಸ್ತ್ರ ಸಂಪ್ರದಾಯಗಳನ್ನು ಭರ್ಜರಿಯಾಗಿ ಚಿತ್ರೀಕರಿಸಲಾಗಿದೆ.

    ಅಖಿಲಾಂಡೇಶ್ವರಿಯನ್ನು ಸದಾ ದೇವತೆಯಂತೆ ಆರಾಧಿಸುವ, ಅವರ ಮಾತನ್ನು ವೇದವಾಕ್ಯದಂತೆ ಪಾಲಿಸುವ ಪಾರು ಅಖಿಲಾಂಡೇಶ್ವರಿಯ ಮಗನನ್ನು ಮದುವೆಯಾಗಲು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಸಹಜವಾಗಿಯೇ ಕಾಡುತ್ತದೆ. ಇದಕ್ಕೆಲ್ಲ ಉತ್ತರ ಪಾರು ಮುಂದಿನ ಸಂಚಿಕೆಗಳಲ್ಲಿ ಸಿಗಲಿದೆ. ಪಾರು ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.

  • ಮತ್ತೆ ಶುರು ಡ್ರಾಮಾ ಜ್ಯೂನಿಯರ್ಸ್ ಸೀಸನ್ 3 ಹವಾ!

    ಮತ್ತೆ ಶುರು ಡ್ರಾಮಾ ಜ್ಯೂನಿಯರ್ಸ್ ಸೀಸನ್ 3 ಹವಾ!

    ಬೆಂಗಳೂರು: ರಿಯಾಲಿಟಿ ಶೋಗಳಲ್ಲಿ ನಿರೀಕ್ಷೆಗೂ ಮೀರಿ ತನ್ನದೇ ಸಂಚಲನ ಮೂಡಿಸಿದ ವಾಹಿನಿ ಜೀ ಕನ್ನಡ ಪ್ರೇಕ್ಷಕರ ಬೇಕು ಬೇಡಗಳನ್ನು ಅರ್ಥೈಸಿಕೊಂಡು ಇಲ್ಲಿಯವರೆಗೂ ಹತ್ತು ಹಲವು ಸದಭಿರುಚಿಯ ವಿಭಿನ್ನ ಪ್ರಯೋಗಗಳನ್ನು ಮಾಡುತ್ತ ಹೊಸ ದಾಖಲೆಗಳಿಗೆ ನಾಂದಿ ಹಾಡುತ್ತಿದೆ. ರಿಯಾಲಿಟಿ ಶೋ ಚಿತ್ರೀಕರಣ ಮತ್ತು ಪ್ರಸಾರ ಎರಡೂ ಜನರಿಂದ ದೂರವಾಗಿ ನಡೆಯುವಂತ ಪ್ರಕ್ರಿಯೆ. ಇಲ್ಲಿ ಪ್ರೇಕ್ಷಕರಿಗೂ ನಟರಿಗೂ ನೇರ ಮುಖಾಮುಖಿ ಇರುವುದಿಲ್ಲ. ಆದರೆ ರಂಗಭೂಮಿ ಜನರ ನೇರಸಂಪರ್ಕಕ್ಕೆ ಮತ್ತು ಸಂವಹನಕ್ಕೆ ಒಳಪಡುವಂತದ್ದು.

    ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ ಮುಗ್ಧ ಮನಸ್ಸಿನ ಮಕ್ಕಳ ನಟನಾ ಕೌಶಲ್ಯಕ್ಕೆ ಮತ್ತು ಅವರ ಅಭಿನಯ ಸಾಮರ್ಥ್ಯಕ್ಕೆ ವೇದಿಕೆಯನ್ನು ಒದಗಿಸುವ ಒಂದು ಉತ್ತಮ ಶೋ. ಈ ಶೋ ಕೇವಲ ಮನರಂಜನೆಯನ್ನಷ್ಟೇ ನೀಡದೇ, ವಿನೂತನ, ವಿಭಿನ್ನ ಪ್ರಯೋಗಗಳನ್ನು ಮಾಡಿ ಹೊಸ ದಾಖಲೆಗಳಿಗೆ ನಾಂದಿ ಹಾಡಿದೆ. ಅಭಿನಯದ ಜೊತೆಗೆ ರಂಗಭೂಮಿಯ ವಿವಿಧ ಮಜಲುಗಳನ್ನು ಪರಿಚಯಿಸುವುದರ ಜೊತೆಗೆ ಸಾಮಾಜಿಕ ಸಂದೇಶಗಳನ್ನು ನೀಡುತ್ತ ಪ್ರೇಕ್ಷಕರಿಂದ ಇದೊಂದು ಅದ್ಭುತವಾದ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಕನ್ನಡ ಚಿತ್ರರಂಗಕ್ಕೆ ಹತ್ತು ಹಲವು ಬಾಲ ಕಲಾವಿದರನ್ನು ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಆರಂಭವಾದ ಡ್ರಾಮಾ ಜ್ಯೂನಿಯರ್ಸ್ ಸೀಸನ್ 1 ಮತ್ತು ಸೀಸನ್ 2 ಎಂಬ ಅತ್ಯದ್ಭುತ ಯಶಸ್ಸಿನ ಕಾರ್ಯಕ್ರಮವನ್ನು ಪರಿಚಯಿಸಿದ್ದಲ್ಲದೇ, ಅದು ಕರ್ನಾಟಕವಲ್ಲದೇ ದೇಶ ವಿದೇಶದ ಕನ್ನಡಿಗರಲ್ಲೆರೂ ಅದರ ಒಂದು ಭಾಗವಾಗುವಂತೆ ಮಾಡಿದ ಕೀರ್ತಿ ಜೀ ವಾಹಿನಿಗೆ ಸಲ್ಲುತ್ತದೆ. ಅದರ ಮುಂದುವರಿದ ಅಧ್ಯಾಯವೆಂಬಂತೆ ಡ್ರಾಮಾ ಜ್ಯೂನಿಯರ್ಸ್ ಸೀಸನ್ 3 ಆರಂಭಗೊಳ್ಳುತ್ತಿದ್ದು ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಸಾಕ್ಷಿಯಾಗುತ್ತಿದೆ.

    ಕರ್ನಾಟಕದಾದ್ಯಂತ 30 ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ಅಭಿನಯ ಕೌಶಲ್ಯದ ಹಿನ್ನೆಲೆಯುಳ್ಳ 30 ಮಕ್ಕಳನ್ನು ಆಯ್ಕೆ ಮಾಡಿಕೊಂಡಿದ್ದು, ಆ 30 ಮಕ್ಕಳು ಮೆಗಾ ಆಡಿಷನ್ ನಲ್ಲಿ ಭಾಗಿಯಾಗಲು ತಯಾರಾಗಿದ್ದಾರೆ. ಹೊಸ ಹೊಸ ಪ್ರಯೋಗಗಳು, ಹೊಸ ಪ್ರಯತ್ನದೊಂದಿಗೆ ಹಿಂದೆಂದೂ ನೋಡಿರದಂತ, ಹಿಂದೆಂದೂ ಕೇಳಿರದಂತ ಮನರಂಜನೆ ಈ ಒಂದು ಕಾರ್ಯಕ್ರಮದಲ್ಲಿ ನಿಮಗಾಗಿ ಎದುರುಗೊಳ್ಳುತ್ತಿದೆ.

    ಇನ್ನುಳಿದಂತೆ ಕಾರ್ಯಕ್ರಮಕ್ಕೆ ಅಂದದ ಮೆರುಗೆಂಬಂತೆ ತೀರ್ಪುಗಾರರಾಗಿ ಜೂಲಿ ಲಕ್ಷ್ಮಿ, ಮುಖ್ಯಮಂತ್ರಿ ಚಂದ್ರು ಹಾಗು ವಿಜಯರಾಘವೇಂದ್ರ ಇದ್ದಾರೆ. ಮಕ್ಕಳಿಂದ ಹಿಡಿದು ವಯೋಮಾನದವರಿಗೆಲ್ಲರಿಗು ಪ್ರೀತಿ ಪಾತ್ರರಾದ ಮಾಸ್ಟರ್ ಆನಂದ್ ತಮ್ಮ ಮಾತಿನ ಚಟಾಕಿಯ ಮೂಲಕ ನಿರೂಪಣೆಯನ್ನು ನೀಡಲಿದ್ದಾರೆ. ಅಂದುಕೊಂಡಿರುವಂತೆ ಎಲ್ಲವೂ ಅತ್ಯದ್ಭುತವಾಗಿ ಸಜ್ಜುಗೊಳ್ಳುತ್ತಿದ್ದು, ಪ್ರೇಕ್ಷಕರಿಗೆ ವಿವಿಧ ಆಯಾಮಗಳಲ್ಲಿ ಮನರಂಜನೆ ನೀಡಲು ಸಜ್ಜಾಗಿ ಬರ್ತಾ ಇದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಸೀಸನ್ 3 ಸ್ಪರ್ಧಿಗಳು ಇನ್ನು ಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ತಪ್ಪದೆ ಹಾಜರಾಗುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರಿಗಮಪ ರಿಯಾಲಿಟಿ ಶೋಗೆ ಮಹಾಗುರು ಎಂಟ್ರಿನಲ್ಲಿಯೇ ಸಂಚಲನ ಮೂಡಿಸುತ್ತಿದೆ ನ್ಯೂ ವರ್ಷನ್ ಸಾಂಗ್

    ಸರಿಗಮಪ ರಿಯಾಲಿಟಿ ಶೋಗೆ ಮಹಾಗುರು ಎಂಟ್ರಿನಲ್ಲಿಯೇ ಸಂಚಲನ ಮೂಡಿಸುತ್ತಿದೆ ನ್ಯೂ ವರ್ಷನ್ ಸಾಂಗ್

    ಬೆಂಗಳೂರು: ಸಂಗೀತ ಪ್ರತಿಭೆಯನ್ನು ಗುರುತಿಸುವ ಜೀ ಕನ್ನಡ ವಾಹಿನಿಯ ಜೂನಿಯರ್. ಸರಿಗಮಪ ರಿಯಾಲಿಟಿ ಶೋ ಇಂದಿನಿಂದ ಪ್ರಾರಂಭವಾಗಲಿದೆ. ಈ ಬಾರಿ  ನಾದ ಬ್ರಹ್ಮ ಹಂಸಲೇಖ ಮಹಾಗುರುಗಳಾಗಿ ನವ ಪ್ರತಿಭೆಗಳಿಗೆ ಸಂಗೀತ ಪಾಠವನ್ನು ಹೇಳಲಿದ್ದಾರೆ.

    ಇಂದು ಜೀ ವಾಹಿನಿ ತನ್ನ ಫೇಸ್ ಬುಕ್ ನಲ್ಲಿ ಹಳೆಯ ಎವರ್ ಗ್ರೀನ್ ಹಾಡುಗಳಿಗೆ ನ್ಯೂ ವರ್ಷನ್ ಹಾಡಿರುವ ವಿಡಿಯೋವನ್ನು ಅಪ್ಲೋಡ್ ಮಡಿಕೊಂಡಿದೆ. ವಿಶೇಷವೆಂದರೆ ಸರಿಗಮಪ ರಿಯಾಲಿಟಿ ಶೋನ ಹಳೆಯ ಆವೃತ್ತಿಯ ಜೂನಿಯರ್ ಮತ್ತು ಸೀನಿಯರ್ ಸ್ಪರ್ಧಿಗಳ ಸುಮಧುರ ಕಂಠದಲ್ಲಿ ಹಾಡು ಮೂಡಿದೆ. ವಿಡಿಯೋದಲ್ಲಿ ಇಂಪನಾ, ಅರವಿಂದ್, ಸಾನ್ವಿ ಶೆಟ್ಟಿ ಸೇರಿದಂತೆ ಹಲವರ ಕಂಠದಲ್ಲಿ ಹಾಡನ್ನು ಕೇಳಬಹುದು.

    ಈಗಾಗಲೇ ಜೀ ವಾಹಿನಿಗೆ ಹಂಸಲೇಖ ಎಂಟ್ರಿ ಆಗುತ್ತಿರುವ ವಿಷಯವನ್ನು ಅಭಿಮಾನಿಗಳಿಗೆ ವಿಶೇಷ ಪ್ರೋಮೋಗಳ ಮೂಲಕ ತಿಳಿಸಿದೆ. ಈ ಆವೃತ್ತಿಯಲ್ಲಿ ರಾಜೇಶ್ ಕೃಷ್ಣಣ್ ವೈಯಕ್ತಿಕ ಕಾರಣಗಳಿಂದ ತೀರ್ಪುಗಾರರ ಸ್ಥಾನದಿಂದ ಹೊರ ಬಂದಿದ್ದು, ಅವರ ಗುರು ಹಂಸಲೇಖ ಮಹಾಗುರುಗಳಾಗಿ ಬಂದಿದ್ದಾರೆ. ಎಂದಿನಂತೆ ವಿಜಯ್ ಪ್ರಕಾಶ್ ಮತ್ತು ಅರ್ಜುನ್ಯ ಜನ್ಯ ತೀರ್ಪುಗಾರರಾಗಿ ಹಂಸಲೇಖ ಅವರಿಗೆ ಸಾಥ್ ನೀಡಲಿದ್ದಾರೆ. ಮಾತಿನ ಚಿನುಕುರುಳಿ ಅನುಶ್ರೀ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

  • ಕಲಬುರಗಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿಗಳು-2, ಸರಿಗಮಪ ಆಡಿಷನ್

    ಕಲಬುರಗಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿಗಳು-2, ಸರಿಗಮಪ ಆಡಿಷನ್

    ಕಲಬುರುಗಿ: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್ ಟು ಮತ್ತು ಸರಿಗಮಪ ಲಿಟಲ್ ಚಾಂಪ್ಸ್ ಸೀಜನ್ 14ರ ಆಡಿಷನ್ ಕಲಬುರುಗಿಯಲ್ಲಿ ನಡೆಯಿತು. ನೂರಾರು ಮಕ್ಕಳು ಆಡಿಷನ್‍ನಲ್ಲಿ ಪಾಲ್ಗೊಂಡರು.

    ಮೇಹತಾ ಶಾಲೆಯಲ್ಲಿ ಬೆಳಗ್ಗೆ ಆರಂಭವಾದ ಆಡಿಷನ್ ಸಂಜೆಯವರೆಗೆ ಕೂಡಾ ಮುಂದುವರೆಯಿತು. 13 ಸೀಜನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಸರಿಗಮಪ ರಾಜ್ಯಾದ್ಯಂತ ಬಹಳ ಪ್ರಸಿದ್ಧಿ ಪಡೆದಿದೆ.

    ಎಲ್ಲಾ ಮೂವತ್ತು ಜಿಲ್ಲೆಗಳಲ್ಲಿ ಮತ್ತು ಮಹಾ ನಗರಗಳಲ್ಲಿ ಆಡಿಷನ್ ನಡೆಯುತ್ತಿದ್ದು ಪ್ರತಿಭೆಗಳ ಹುಡುಕಾಟ ನಡೆಯುತ್ತಿದೆ. ಜೀ ವಾಹಿನಿಯ ಸುಮಾರು 50ಕ್ಕಿಂತಲೂ ಹೆಚ್ಚು ಸಿಬ್ಬಂದಿ ಆಡಿಷನ್‍ನಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕಲಬುರಗಿ ನಗರದ ಸೇರಿದಂತೆ ಜಿಲ್ಲೆಯ ಹಲವೆಡೆಯಿಂದ 300ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.

    ಹಾಸ್ಯದ ಬಗ್ಗೆ ಆಸಕ್ತಿಯಿರುವವರು, ಸಂಗೀತ ಕಲಿತ ಮಕ್ಕಳು ಖುಷಿ ಖುಷಿಯಾಗಿ ಆಡಿಷನ್‍ನಲ್ಲಿ ಪಾಲ್ಗೊಂಡರು. ಇನ್ನು ತಮ್ಮ ಮಕ್ಕಳನ್ನು ಈ ಆಡಿಷನ್‍ನಲ್ಲಿ ಭಾಗವಹಿಸಲು ಅವರ ಪೋಷಕರು ಅಷ್ಟೇ ಕಾತುರದಿಂದ ಕಾಯುತ್ತಿರುವುದು ಸರ್ವೇ ಸಾಮಾನ್ಯವಾಗಿತ್ತು.

  • ಉಡುಪಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿ-2, ಸರಿಗಮಪ ಆಡಿಷನ್

    ಉಡುಪಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿ-2, ಸರಿಗಮಪ ಆಡಿಷನ್

    ಉಡುಪಿ: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್ ಟು ಮತ್ತು ಸರಿಗಮಪ ಲಿಟಲ್ ಚಾಂಪ್ಸ್ ಸೀಜನ್ 14ರ ಆಡಿಷನ್ ಉಡುಪಿಯಲ್ಲಿ ನಡೆಯಿತು. ನೂರಾರು ಮಕ್ಕಳು ಆಡಿಷನ್‍ನಲ್ಲಿ ಪಾಲ್ಗೊಂಡರು. ಬೆಳಗ್ಗೆ ಆರಂಭವಾದ ಆಡಿಷನ್ ಸಂಜೆಯವರೆಗೆ ಕೂಡಾ ಮುಂದುವರೆಯಿತು. 13 ಸೀಜನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಸರಿಗಮಪ ರಾಜ್ಯಾದ್ಯಂತ ಬಹಳ ಪ್ರಸಿದ್ಧಿ ಪಡೆದಿದೆ.

    ಎಲ್ಲಾ ಮೂವತ್ತು ಜಿಲ್ಲೆಗಳಲ್ಲಿ ಮತ್ತು ಮಹಾ ನಗರಗಳಲ್ಲಿ ಆಡಿಷನ್ ನಡೆಯುತ್ತಿದ್ದು ಪ್ರತಿಭೆಗಳ ಹುಡುಕಾಟ ನಡೆಯುತ್ತಿದೆ. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಮುಂಭಾಗದ ಮೈದಾನದಲ್ಲಿ ಈ ಆಡೀಷನ್ ನಡೆಯಿತು. ಜೀ ವಾಹಿನಿಯ ಸುಮಾರು 50ಕ್ಕಿಂತಲೂ ಹೆಚ್ಚು ಸಿಬ್ಬಂದಿ ಆಡಿಷನ್‍ನಲ್ಲಿ ಪಾಲ್ಗೊಂಡರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್, ದೀಕ್ಷಾ ರಾಮಕೃಷ್ಣ, ಹರ್ಷ ಮೈಸೂರು, ಧನುಶ್ ನೇತೃತ್ವದ ಟೀಂ ಪ್ರತಿಭೆಗಳನ್ನು ಆಯ್ಕೆ ಮಾಡಿದರು. ಹಾಸ್ಯದ ಬಗ್ಗೆ ಆಸಕ್ತಿಯಿರುವವರು, ಸಂಗೀತ ಕಲಿತ ಮಕ್ಕಳು ಖುಷಿ ಖುಷಿಯಾಗಿ ಆಡಿಷನ್‍ನಲ್ಲಿ ಪಾಲ್ಗೊಂಡರು.

    ಅಸಿಸ್ಟೆಂಟ್ ಪ್ರೋಗ್ರಾಂ ಪ್ರೊಡ್ಯೂಸರ್ ಸತೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಳಗೆ ಅಡಗಿರುವ ಪ್ರತಿಭೆಗಳನ್ನು ಹೊರ ತರುವ ಕೆಲಸ ಜೀ ವಾಹಿನಿ ಮಾಡುತ್ತಿದೆ. ರಾಜ್ಯದ ಜನಕ್ಕೆ ಇದೊಂದು ಅವಕಾಶ. ಎಲ್ಲರೂ ಇದನ್ನು ಉಪಯೋಗ ಮಾಡಿಕೊಳ್ಳಬೇಕು. ಸಾವಿರಾರು ಮಂದಿ ಸಂಗೀತ ಕಲಿತಿರುತ್ತಾರೆ. ಆದರೆ ಅದಕ್ಕೆ ಸೂಕ್ತವಾದ ಒಂದು ವೇದಿಕೆ ಸಿಕ್ಕಿರುವುದಿಲ್ಲ. ಜೀ ಕನ್ನಡ ವಾಹಿನಿ ಅಂತದ್ದೊಂದು ವೇದಿಕೆ ಪಡಿಸಿರುವಾಗ ಜನ ಉಪಯೋಗಿಸಿಕೊಳ್ಳಿ ಎಂದು ಕರೆ ನೀಡಿದರು.

    ಕಳೆದ ಬಾರಿ ಸರಿಗಮಪದ ಆಡಿಷನ್‍ನಲ್ಲಿ ಪಾಲ್ಗೊಂಡಿದ್ದೆ. ಎರಡನೇ ಸುತ್ತಿಗೆ ಹೋಗಿದ್ದೆ. ಈ ಬಾರಿ ಕೂಡಾ ಆಡೀಷನ್ ಕೊಟ್ಟಿದ್ದೇನೆ. ಅದೃಷ್ಟ ಇದ್ದರೆ ಆಯ್ಕೆಯಾಗುತ್ತೇನೆ. ತುಂಬಾ ಜನ ವಿದ್ಯಾರ್ಥಿಗಳು ಬಂದಿದ್ದಾರೆ. ಕಾಂಪಿಟೇಷನ್ ಟಫ್ ಆಗಿದೆ. ಆದ್ರೆ ಇಲ್ಲಿ ಪಾಲ್ಗೊಂಡಿದ್ದು ಬಹಳ ಖುಷಿಯಾಗಿದೆ ಎಂದು ಉಡುಪಿಯ ಐಶ್ವರ್ಯ ಹೇಳಿದರು.