Tag: zameer khan

  • ಚಾಮರಾಜಪೇಟೆಯಲ್ಲಿ ನಾಳೆ ಜಮೀರ್ ನೇತೃತ್ವದಲ್ಲೇ ಗಣೇಶೋತ್ಸವ!

    ಚಾಮರಾಜಪೇಟೆಯಲ್ಲಿ ನಾಳೆ ಜಮೀರ್ ನೇತೃತ್ವದಲ್ಲೇ ಗಣೇಶೋತ್ಸವ!

    ಬೆಂಗಳೂರು: ನಗರದ ಚಾಮರಾಜಪೇಟೆ ಶಾಸಕರ ಕಚೇರಿಯಲ್ಲಿ ಸೋಮವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಹಿಂದೂ ಸಂಘಟನೆಗಳಿಗೆ ಜಮೀರ್ ಖಾನ್ ಟಕ್ಕರ್ ಕೊಡಲು ಪ್ಲ್ಯಾನ್ ಮಾಡಿದ್ದಾರೆ.

    ಈದ್ಗಾ ಮೈದಾನದ ವಿವಾದಲ್ಲಿ ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಜಮೀರ್ ವಿರುದ್ಧ ಹಲವಾರು ಹಿಂದೂ ಸಂಘಟನೆಗಳು ಟೀಕಾ ಪ್ರಹಾರ ನಡೆಸಿತ್ತು. ಇದರ ಬೆನ್ನಲ್ಲೇ ಇದೀಗ ಗಣೇಶೋತ್ಸವಕ್ಕೆ ಅಖಿಲ ಕರ್ನಾಟಕ ಜಿ.ಜೆಡ್ ಜಮೀರ್ ಅಹ್ಮದ್ ಖಾನ್ ಒಕ್ಕೂಟ ಮುಂದಾಗಿದ್ದು ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿದೆ. ಇದನ್ನೂ ಓದಿ: ಊಟಕ್ಕಿಂತ ಹೆಚ್ಚಾಗಿದ್ಯಂತೆ ಕಾಂಡೋಮ್ ಸೆಲ್ – ಸ್ವಿಗ್ಗಿ ಸಮೀಕ್ಷೆಯಲ್ಲಿನಿದೆ?

    ಚಾಮರಾಜಪೇಟೆಯ ವರ್ತಕರ ಬೀದಿ, 4ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆಯಲ್ಲಿರುವ ಶಾಸಕರ ಕಛೇರಿಯಲ್ಲಿ ಒಂದು ದಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಿರ್ಧಾರಿಸಲಾಗಿದೆ. ಸೋಮವಾರ ಬೆಳಗ್ಗೆ 9:15 ರಿಂದ 10 ಗಂಟೆಯೊಳಗೆ ವಿದ್ಯಾಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಸಂಜೆ 4 ಗಂಟೆಗೆ ಬಾಣಬಿರುಸುಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಸಿ ನಂತರ ವಿದ್ಯಾಗಣಪತಿ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ

    Live Tv
    [brid partner=56869869 player=32851 video=960834 autoplay=true]

  • ನೀರು ಸರ್ಕಾರದ್ದು, ಕಾಸು ಮಾತ್ರ ಖಾಸಗಿಯವರ ಜೇಬಿಗೆ!

    ನೀರು ಸರ್ಕಾರದ್ದು, ಕಾಸು ಮಾತ್ರ ಖಾಸಗಿಯವರ ಜೇಬಿಗೆ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರ್ಕಾರಿ ನೀರಿನಿಂದ ಖಾಸಗಿಯವರ ಜೇಬು ಫುಲ್ ಆಗುತ್ತಿದೆ. ದುಡ್ಡು ಮಾಡೋ ಐಡಿಯಾ ಒಂದಿದ್ದರೆ ಯಾವೆಲ್ಲ ರೀತಿಯಲ್ಲಿ ದುಡ್ಡು ಮಾಡಬಹುದು ಅನ್ನೋದನ್ನು ಈ ಕಿಲಾಡಿಗಳಿಂದ ಕಲಿಯಬೇಕು. 5 ರೂ.ಗೆ 20-25 ಲೀಟರ್ ಕ್ಯಾನ್ ನೀರು ಸಿಗುವ ನೀರು ಶುದ್ಧೀಕರಣ ಘಟಕದಲ್ಲಿ ದುಡ್ಡನ್ನು ಖಾಸಗಿ ವ್ಯಕ್ತಿಗಳು ತಮ್ಮ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

    2 ಲೀಟರ್ ನೀರಿಗೆ 2 ರೂ. ಕೊಡಬೇಕು, 25 ಲೀಟರ್ ನೀರಿಗಾದ್ರೆ 10 ರೂ. ಕೊಡಬೇಕು. ಹೀಗೆ ತರಕಾರಿ ವ್ಯಾಪಾರಕ್ಕೆ ಕೂತ ಹಾಗೆ ವಿಕ್ಟೋರಿಯಾ ಆಸ್ಪತ್ರೆಯ ಅವರಣದಲ್ಲಿ ಸರ್ಕಾರಿ ಬಿಟ್ಟಿ ನೀರನ್ನು ಮಾರಾಟ ಮಾಡೋಕೆ ಕೆಲ ಖಾಸಗಿ ವ್ಯಕ್ತಿಗಳು ಕುಳಿತುಬಿಟ್ಟಿದ್ದಾರೆ. 5 ರೂ. ಶಾಸಕರ ಅನುದಾನದಲ್ಲಿ ಲಕ್ಷಗಟ್ಟಲೆ ವೆಚ್ಚಮಾಡಿ ನೀರಿನ ಶುದ್ಧೀಕರಣ ಘಟಕ ತೆರೆಯಲಾಗಿದೆ. ಆದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರ ಸ್ಪೆಷಲ್ ರೇಟು. ಆಸ್ಪತ್ರೆಗೆ ನೀಡುವ 25 ಲೀಟರ್ ಕ್ಯಾನ್‍ಗೆ 10 ರೂ. ಪಡೆದು ಖಾಸಗಿ ವ್ಯಕ್ತಿಗಳು ನೀರು ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ 2 ಲೀಟರ್ ಕ್ಯಾನ್‍ಗೆ 2 ರೂ. ಆ ಲೆಕ್ಕದಲ್ಲಿ 25 ಲೀಟರ್ ನೀರಿಗೆ ಭರ್ತಿ 25 ರೂಪಾಯಿಯಂತೆ ಖಾಸಗಿ ವ್ಯಕ್ತಿಗಳು ಜೇಬಿಗೆ ದುಡ್ಡು ಬರ್ತಿ ಮಾಡಿಕೊಳ್ಳುತ್ತಿದ್ದಾರೆ.

    ಇಷ್ಟು ದುಡ್ಡು ಸುಲಿಗೆ ಮಾಡೋದಾದರೆ ಇಲ್ಲಿ ಎಂಎಲ್‍ಎ ಜಮೀರ್ ಫೋಟೋ ಯಾಕೆ ಹಾಕಬೇಕು, ಹಾಗಿದ್ದರೆ ಸರ್ಕಾರ ಲಕ್ಷಗಟ್ಟಲೆ ಹಣ ವೆಚ್ಚ ಮಾಡಿ ಈ ನೀರಿನ ಘಟಕ ನಿರ್ಮಿಸಿದ್ದು ಇಂತಹ ದುಡ್ಡು ಮಾಡೋರಿಗೆ ಸಹಾಯ ಮಾಡೋದಕ್ಕಾ ಎಂದು ಪ್ರಶ್ನೆ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಈ ಘಟಕ ನಿರ್ವಹಣೆ ಮಾಡೋರನ್ನು ಕೇಳಿದರೆ, ಬೇರೆ ಕಡೆಗಳಲ್ಲಿರುವ ನೀರಿನ ಘಟಕಕ್ಕೂ ನಮ್ಮಲ್ಲಿರುವ ನೀರಿನ ಘಟಕಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎನ್ನುವುದನ್ನ ನೋಡಿ. ನಾವು ಇಲ್ಲಿ ಸ್ವಚ್ಚತೆ ಕಾಪಾಡುತ್ತೇವೆ. ಅದಕ್ಕೆ ಅಷ್ಟು ದುಡ್ಡು ಎಂದು ಬಿಂದಾಸ್ ಆಗಿ ಹೇಳುತ್ತಿದ್ದಾರೆ.

    sಹೀಗೆ ಹಣ ಮಾಡಲು ಬಂಡವಾಳನೂ ಹಾಕ್ಬೇಕಾಗಿಲ್ಲ, ಇತ್ತ ಕೆಲಸವೂ ಇಲ್ಲ. ಕೂತಲ್ಲಿಯೇ ಇವರಿಗೆ ಬಿಟ್ಟಿಯಾಗಿ ಕಾಸು ಮಾತ್ರ ಬರುತ್ತಿದೆ. ಆದ್ದರಿಂದ ಈ ಬಗ್ಗೆ ಮಾಜಿ ಸಚಿವ ಜಮೀರ್ ಖಾನ್ ಅವರ ಕ್ಷೇತ್ರದ ವ್ಯಾಪ್ತಿಗೆ ಬರುವ ನೀರಿನ ಘಟಕದಲ್ಲಿ ಹೀಗೆ ದುಡ್ಡು ಮಾಡುತ್ತಿರುವ ಕಿಲಾಡಿಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಮಾಜಿ ಸಚಿವರಿಗೆ ಟ್ರಾಫಿಕ್ ನಿಯಮ ಅನ್ವಯ ಆಗಲ್ವಾ? ರಸ್ತೆಯಲ್ಲಿಯೇ ಬಸ್ ಪಾರ್ಕ್

    ಮಾಜಿ ಸಚಿವರಿಗೆ ಟ್ರಾಫಿಕ್ ನಿಯಮ ಅನ್ವಯ ಆಗಲ್ವಾ? ರಸ್ತೆಯಲ್ಲಿಯೇ ಬಸ್ ಪಾರ್ಕ್

    -ಪಾರ್ಕ್ ಮಾಡ್ಬೇಡಿ ಅನ್ನೋರು ಇಲ್ಲ

    ಬೆಂಗಳೂರು: ಸಿಕ್ಕಸಿಕ್ಕ ರಸ್ತೆಯಲ್ಲಿ ವಾಹನ ಪಾರ್ಕ್ ಮಾಡುವಂತಿಲ್ಲ, ಕೆಟ್ಟು ನಿಂತ ವಾಹನಗಳನ್ನು ಪಾರ್ಕ್ ಮಾಡಿದರೆ ಗಂಟೆಗಳ ಲೆಕ್ಕದಲ್ಲಿ ಫೈನ್ ಹಾಕುತ್ತಾರೆ. ಆದರೆ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ ಅನ್ನು ಚಾಮರಾಜಪೇಟೆಯ ರೋಡ್‍ನಲ್ಲಿ ಪಾರ್ಕ್ ಮಾಡಲಾಗುತ್ತಿದೆ.

    ರಸ್ತೆ ಕಿರಿದಾಗಿದರೂ ಬಿಂದಾಸ್ ಆಗಿ ಬಸ್‍ಗಳನ್ನು ಚಾಮರಾಜಪೇಟೆಯ ರಸ್ತೆಯಲ್ಲಿ ಪಾರ್ಕ್ ಮಾಡಲಾಗಿದೆ. ಹೀಗೆ ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡುವ ವಾಹನಕ್ಕೆ ಒಂದು ಸಾವಿರ ದಂಡ ವಿಧಿಸಬೇಕು. ಆದರೆ ಜಮೀರ್ ಅವರ ಬಸ್ಸಿಗೆ ದಂಡ ಬಿಡಿ ಬಸ್ ಅನ್ನು ರಸ್ತೆಯಲ್ಲಿ ಪಾರ್ಕ್ ಮಾಡಬೇಡಿ ಎಂದು ಪೊಲೀಸರು ಹೇಳುತ್ತಿಲ್ಲ.

    ಕೆಟ್ಟು ನಿಂತ ಬಸ್‍ಗಳನ್ನು ಕೂಡ ಇನ್ನೊಂದು ಸಿಗ್ನಲ್ ಪಕ್ಕದ ರಸ್ತೆಯಲ್ಲಿ ವರ್ಷಾನುಗಟ್ಟಲೆಯಿಂದ ಪಾರ್ಕ್ ಮಾಡಲಾಗಿದೆ. ಟ್ರಾಫಿಕ್ ನಿಯಮದ ಪ್ರಕಾರ ಕೆಟ್ಟು ನಿಂತ ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡಿದರೆ, ಗಂಟೆಗಳ ಲೆಕ್ಕದಲ್ಲಿ ದಂಡ ವಿಧಿಸಬೇಕು. ಆದರೆ ಜಮೀರ್ ಬಸ್‍ಗೆ ಇದ್ಯಾವುದು ಅನ್ವಯವಾಗಲ್ವಾ ಎಂಬ ಪ್ರಶ್ನೆಯೊಂದು ಮೂಡಿದೆ.

    ಬಸ್ ಪಾರ್ಕ್ ಮಾಡಿದರಿಂದ ವಾಹನ ಸವಾರರಿಗೆ ಸಂಚರಿಸಲು ಕಷ್ಟವಾಗುತ್ತದೆ. ಜಮೀರ್ ಅವರು ಸಂಚಾರ ಮಾಡುವ ಬಸ್ ಪಾರ್ಕ್ ಮಾಡುವ ಜೊತೆ ಕೆಟ್ಟು ಹೋದ ಬಸ್‍ಗಳನ್ನು ಕೂಡ ಪಾರ್ಕ್ ಮಾಡುತ್ತಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಬಸ್‍ಗಳನ್ನು ಪಾರ್ಕ್ ಮಾಡಲಾಗಿದೆ. ಆದರೆ ಇದೂವರೆಗೂ ಪೊಲೀಸರು ದಂಡ ವಿಧಿಸಿಲ್ಲ.

  • ಸರ್ಕಾರ ನಿಮ್ಮೊಂದಿಗೆ ಇದೆ, ಕೂತು ಮಾತಾಡೋಣ – ಮನ್ಸೂರ್‌ಗೆ ಜಮೀರ್ ಖಾನ್ ಸಂದೇಶ

    ಸರ್ಕಾರ ನಿಮ್ಮೊಂದಿಗೆ ಇದೆ, ಕೂತು ಮಾತಾಡೋಣ – ಮನ್ಸೂರ್‌ಗೆ ಜಮೀರ್ ಖಾನ್ ಸಂದೇಶ

    ಬೆಂಗಳೂರು: ಸರ್ಕಾರ ನಿಮ್ಮೊಂದಿಗೆ ಇದೆ, ಕೂತು ಮಾತಾಡೋಣ ಎಂದು ಸಚಿವ ಜಮೀರ್ ಖಾನ್ ಅವರು ಐಎಂಎ ಮಾಲೀಕ ಮನ್ಸೂರ್ ಖಾನ್ ಬಳಿ ಮಾಧ್ಯಮಗಳ ಮೂಲಕ ಕೇಳಿಕೊಂಡಿದ್ದಾರೆ.

    ಜಮೀರ್ ಖಾನ್ ಮಾಧ್ಯಮಗಳ ಜೊತೆ ಮಾತನಾಡಿದ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಅದಕ್ಕೆ, ‘ಐಎಂಎ ಜ್ಯುವೆಲ್ಸ್ ಮಾಲೀಕ ಜನಾಬ್ ಮೊಹಮ್ಮದ್ ಮನ್ಸೂರ್ ಖಾನ್‍ಗೆ ಸಂದೇಶ’ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಮಾಧ್ಯಮಗಳ ಮೂಲಕ ನಾನು ಒಂದು ವಿಚಾರವನ್ನು ಹೇಳಲು ಬಯಸುತ್ತೇನೆ. ಮನ್ಸೂರ್ ಖಾನ್ ಬನ್ನಿ ನೀವು ಭಯಪಡಬೇಡಿ. ನಿಮ್ಮೊಂದಿಗೆ ನಾವೇದ್ದೇವೆ, ಈ ಸರ್ಕಾರವಿದೆ. ಆಗಿದ್ದು ಆಗಿಹೋಯ್ತು. ನೀವು ಆಡಿಯೋದಲ್ಲಿ ಹೇಳಿರುವುದು ಸತ್ಯವಾದ್ರೆ ಮುಖಾಮುಖಿಯಾಗಿ ಕುಳಿತುಕೊಳ್ಳಿ, ನಿಮ್ಮ ಜೊತೆ ನಾವೇದ್ದೇವೆ. ನೀವು ಯಾರಿಗೆ ದುಡ್ಡು ಕೊಟ್ಟಿದ್ದೀರಾ ಅದನ್ನ ಹೇಳಿ. ಆ ದುಡ್ಡನ್ನು ರಿಕವರಿ ಮಾಡೋಣ ಅದನ್ನು ಬಡವರಿಗೆ ಹಂಚೋಣ. ನೀವು ಯಾವ ರಾಜಕಾರಣಿಗೆ ದುಡ್ಡು ಕೊಟ್ಟಿದ್ದೀರ ಎನ್ನುವುದ್ದನ್ನು ಹೇಳಿ. ಅದನ್ನು ರಿಕವರಿ ಮಾಡೋಣ, ಬಡವರ ದುಡ್ಡನ್ನು ಬಡವರಿಗೆ ಹಂಚೋಣ. ಮನ್ಸೂರ್ ಖಾನ್ ಬಂದು ಹೇಳಿದ್ರೆ ಎಲ್ಲಾ ಸತ್ಯ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

    https://twitter.com/BZZameerAhmed/status/1138504249271312390