Tag: Zameer Ahmed Khan

  • ಬಿಜೆಪಿ-ಜೆಡಿಎಸ್‌ ಶಾಸಕರು ಸಂಪರ್ಕದಲ್ಲಿದ್ದರೆ ಕರ್ಕೊಂಡು ಹೋಗಲಿ ನೋಡೋಣ – ಜಮೀರ್‌ಗೆ ಅಶ್ವಥ್‌ ನಾರಾಯಣ್ ಸವಾಲು

    ಬಿಜೆಪಿ-ಜೆಡಿಎಸ್‌ ಶಾಸಕರು ಸಂಪರ್ಕದಲ್ಲಿದ್ದರೆ ಕರ್ಕೊಂಡು ಹೋಗಲಿ ನೋಡೋಣ – ಜಮೀರ್‌ಗೆ ಅಶ್ವಥ್‌ ನಾರಾಯಣ್ ಸವಾಲು

    – ಸಿದ್ದರಾಮಯ್ಯ ನಮ್ಮನ್ನ ತೋರಿಸಿ ಸಿಎಂ ಕುರ್ಚಿ ಭದ್ರ ಮಾಡಿಕೊಳ್ತಿದ್ದಾರೆ ಎಂದ ಮಾಜಿ ಡಿಸಿಎಂ

    ಮಂಡ್ಯ: ಸಚಿವ ಜಮೀರ್‌ ಅವರಿಗೆ ಬಿಜೆಪಿ – ಜೆಡಿಎಸ್‌ ಶಾಸಕರು (BJP – JDS MLAs) ಸಂಪರ್ಕದಲ್ಲಿದ್ದರೆ ಕರೆದುಕೊಂಡು ಹೋಗಲಿ ನೋಡೋಣ ಅಂತ ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್ (Ashwath Narayan) ಸವಾಲು ಹಾಕಿದ್ದಾರೆ.

    ಬಿಜೆಪಿ-ಜೆಡಿಎಸ್‌ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಸಚಿವ ಜಮೀರ್‌ (Zameer Ahmed Khan) ಹೇಳಿಕೆಗೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಅವರು, ಜಮೀರ್‌ ನಿನ್ನ ಸಂಪರ್ಕದಲ್ಲಿದ್ದರೆ ಏನ್ ಬೇಕಾದ್ರು ಮಾಡಪ್ಪ.. ನಿನಗೆ ಅಡ್ಡ ಬಂದವರು ಯಾರಪ್ಪ..? ತಾಕತ್ತಿದ್ದರೇ ಮಾಡಿ ತೋರಿಸಪ್ಪ.. ಅಂತ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಿಂದ UP ರಸ್ತೆ ಸಾರಿಗೆ ಸಂಸ್ಥೆಗೆ ಬಂಫರ್ – 45 ದಿನಗಳಲ್ಲಿ ವರ್ಷದ ಆದಾಯ

    ಗಾಜಿನ ಮನೆಯಲ್ಲಿದ್ದವರೆಲ್ಲ ನಮಗೆ ಸವಾಲು ಹಾಕ್ತಾರೆ. ಜಮೀರ್ ಅವರ ಸಂಪರ್ಕದಲ್ಲಿ ಬಿಜೆಪಿ-ಜೆಡಿಎಸ್‌ ಶಾಸಕರು ಇದ್ದರೆ ಅದೇನು ಮಾಡ್ತಾರೋ ಮಾಡಿ ತೋರಿಸಲಿ ಎಂದಿದ್ದಾರೆ. ಇದನ್ನೂ ಓದಿ: ಪ್ರಪಂಚದಾದ್ಯಂತ ಜನ ಭಾರತಕ್ಕೆ ಬರಲು ಇಚ್ಛಿಸುತ್ತಾರೆ, ತಿಳಿದುಕೊಳ್ಳಲು ಬಯಸುತ್ತಾರೆ – ಮೋದಿ

    ನಾವು ಸರ್ಕಾರ ಮಾಡ್ತೀವಿ ಅಂತ ಎಲ್ಲೂ ಹೇಳಿಲ್ಲ. 65 ಜನ ಇದ್ದವರು ಸರ್ಕಾರ ಮಾಡಲು ಆಗುತ್ತಾ? ನಗು ನಗುತ್ತಾ ಮಾತನಾಡೋದು ನನ್ನ ಅಭ್ಯಾಸ. ನಾನು ಯಾರ ಮೇಲೂ ದ್ವೇಷ ಮಾಡಲ್ಲ ಕಾಂಗ್ರೆಸ್ ರೀತಿ ಕೀಳುಮಟ್ಟದ ರಾಜಕಾರಣ ಮಾಡಲ್ಲ. ಕಾಂಗ್ರೆಸ್‌ನವರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತ ನಾವು ಯಾವತ್ತಾದ್ರೂ ಹೇಳಿದ್ದೀವಾ? ಇಲ್ಲಿಂದ ಯಾರು ಹೋಗುವವರು ಇದ್ದಾರೆ ಅವರನ್ನ ಕರ್ಕೊಂಡು ಹೋಗಲಿ ಎಂದು ಹೇಳಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರ ಸುಭದ್ರವಾಗಿದೆ, ಅದೃಷ್ಟ ಒಲಿದು ಬಂದಾಗ ಡಿಕೆಶಿ ಸಿಎಂ ಆಗ್ತಾರೆ: ಜಿಟಿಡಿ

    ಕಾಂಗ್ರೆಸ್‌ ಪಕ್ಷದಲ್ಲಿ ಒಳಜಗಳ ನಡೆಯುತ್ತಿದೆ, ನಮ್ಮನ್ನ ತೋರಿಸಿ ಜಗಳವನ್ನ ಸರಿಪಡಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಹ ನಮ್ಮನ್ನ ತೋರಿಸಿ ಸಿಎಂ ಸ್ಥಾನ ಭದ್ರ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಬ್ಲ್ಯಾಕ್‌ಮೇಲ್‌ ತಂತ್ರ ಮಾಡ್ತಿದ್ದಾರೆ ಎಂದು ದೂರಿದರಲ್ಲದೇ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದೇ ತರ್ತೀವಿ ಎಂದು ಶಪಥ ಮಾಡಿದ್ದಾರೆ.

  • ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಮುಟ್ಟಿದ್ರೆ ಭಸ್ಮ ಆಗ್ತಾರೆ – ಸಚಿವ ಜಮೀರ್ ಬ್ಯಾಟಿಂಗ್‌

    ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಮುಟ್ಟಿದ್ರೆ ಭಸ್ಮ ಆಗ್ತಾರೆ – ಸಚಿವ ಜಮೀರ್ ಬ್ಯಾಟಿಂಗ್‌

    ಬಳ್ಳಾರಿ: ಸಿದ್ದರಾಮಯ್ಯ (Siddaramaiah) ಬೆಂಕಿ ಇದ್ದಂತೆ, ಮುಟ್ಟಿದ್ರೆ ಭಸ್ಮ ಆಗ್ತಾರೆ ಅಂತ ಸಚಿವ ಜಮೀರ್‌ ಅಹ್ಮದ್‌ ಖಾನ್‌ (Zameer Ahmed Khan) ಮುಖ್ಯಮಂತ್ರಿಗಳ ಪರ ಬ್ಯಾಟಿಂಗ್‌ ಮಾಡಿದ್ದಾರೆ.

    ಪವರ್‌ ಫೈಟ್‌ ಬಗ್ಗೆ ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗಲ್ಲ, ಮುಟ್ಟಿದ್ರೆ ಭಸ್ಮ ಆಗ್ತಾರೆ. ಸಿಎಂ, ಕೆಪಿಸಿಸಿ ಸ್ಥಾನ ಖಾಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ (DK Shivakumar) ಇದ್ದಾರೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಖಾಲಿ ಇದ್ರೆ ತಾನೇ ಚರ್ಚೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶ್ರೀ ಸಾಯಿ ಮಿನರಲ್ಸ್ ಗಣಿಗಾರಿಕೆ ಅಕ್ರಮ ಕೇಸ್‌ – ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ SIT

    ಸಿಎಂ ಸಿದ್ದರಾಮಯ್ಯ ಖುರ್ಚಿ ಮುಟ್ಟೋಕೆ ಸಾಧ್ಯ ಏನ್ರಿ? ಅದೊಂಥರ ಬೆಂಕಿ ಅದು, ಬೆಂಕಿ ಮುಟ್ಟಿದ್ರೆ ಸುಟ್ಟೋಗ್ತಾರೆ. ಸಿದ್ದರಾಮಯ್ಯ ಬೆಂಕಿ ಇದ್ದಂತೆ, ನಾವು ಟಗರು ಅಂತೀವಿ. ಆ ಬೆಂಕಿ ಮುಟ್ಟೋಕೆ ಸಾಧ್ಯವಿಲ್ಲ, ಮುಟ್ಟಿದ್ರೆ ಭಸ್ಮ ಆಗ್ತಾರೆ ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹೇಮಾವತಿ ಎಡದಂಡೆ ನಾಲೆಗಳಿಗಿಲ್ಲ ನೀರು – ಕೆ.ಆರ್ ಪೇಟೆ, ನಾಗಮಂಗಲ ರೈತರು ಕಂಗಾಲು

    ನಮ್ಮ ಪಕ್ಷ ಹೈಕಮಾಂಡ್ ಪಕ್ಷ, ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧ. ಹೈಕಮಾಂಡ್ ಬದಲಾವಣೆ ಮಾಡಬೇಕು ಅಂತ ನಿರ್ಧಾರ ಮಾಡಿದ್ರೆ ನಾವು ಅಭಿಪ್ರಾಯ ತಿಳಿಸಬಹುದು. ಆದ್ರೆ ಹೈಕಮಾಂಡ್‌ ಯಾವುದೇ ನಿರ್ಧಾರಕ್ಕೆ ಇನ್ನೂ ಬಂದಿಲ್ಲ. ನಮ್ಮ ಪಕ್ಷದವರು ಯಾರೂ ಕೂಡ ಸಿದ್ದರಾಮಯ್ಯ ಬದಲಾವಣೆ ಮಾಡಲಿ ಅಂತಲೂ ಹೇಳಿಲ್ಲಾ. ಎಲ್ಲಾ ಸಮಾಜಕ್ಕೂ ಸಿಎಂ ಆಗಬೇಕು ಅಂತ ಆಸೆ ಇರುತ್ತೆ. ದಲಿತ, ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ, ಲಿಂಗಾಯತ ಸಮುದಾಯ ಎಲ್ಲರೂ ಸಿಎಂ ಆಗಬೇಕು ಅಂತಾರೆ. ತೀರ್ಮಾನ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 43 ಕೋಟಿ ಕೊಟ್ರೆ ಅಮೆರಿಕದ ʻಗೋಲ್ಡ್‌ ಕಾರ್ಡ್‌ʼ – ಪೌರತ್ವ ಪಡೆಯಲು ಶ್ರೀಮಂತ ವಲಸಿಗರಿಗೆ ಟ್ರಂಪ್‌ ಆಫರ್‌

  • ಜಮೀರ್‌ ಪುತ್ರನ ಕಲ್ಟ್‌ ಶೂಟಿಂಗ್‌ಗೆ ಸರ್ಕಾರದಿಂದ ಬ್ರೇಕ್‌ – ಚಿತ್ರೀಕರಣ ಸ್ಥಗಿತ

    ಜಮೀರ್‌ ಪುತ್ರನ ಕಲ್ಟ್‌ ಶೂಟಿಂಗ್‌ಗೆ ಸರ್ಕಾರದಿಂದ ಬ್ರೇಕ್‌ – ಚಿತ್ರೀಕರಣ ಸ್ಥಗಿತ

    ಕೊಪ್ಪಳ: ಸರ್ಕಾರದ ಆದೇಶವನ್ನು ಉಲ್ಲೇಂಘಿಸಿದಕ್ಕೆ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer Ahmed Khan) ಪುತ್ರ ಝೈದ್ ಖಾನ್ (Zaid Khan)​ ಮತ್ತು ರಚಿತಾ ರಾಮ್ (Rachita Ram) ಅಭಿನಯದ ಕಲ್ಟ್‌ (Cult) ಸಿನಿಮಾದ ಶೂಟಿಂಗ್‌ಗೆ ಅರಣ್ಯ ಇಲಾಖೆ ಶಾಕ್‌ ನೀಡಿದ್ದು ಚಿತ್ರೀಕರಣ ಸ್ಥಗಿತಗೊಂಡಿದೆ.

    ಕಳೆದ ಕೆಲ ದಿನಗಳಿಂದ ಕಲ್ಟ್ ಚಿತ್ರ ತಂಡವು ಹಂಪಿ ಸೇರಿದಂತೆ ನಾನಾ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ಅದೇ ರೀತಿಯಾಗಿ ತಾಲೂಕಿನ ರಂಗಾಪೂರ, ಸಣಾಪೂರ ಕೆರೆ ಭಾಗದಲ್ಲಿ ಚಿತ್ರೀಕರಣಕ್ಕೆ ಸೆಟ್‌ ಹಾಕಿತ್ತು.

    ಸಣಾಪೂರ ಗ್ರಾಮದ ತುಂಗಭದ್ರಾ ನದಿ (Tungabhadra River) ದಡದಲ್ಲಿ ಬೆಂಕಿ ಹಚ್ಚಿ ಚಿತ್ರೀಕರಣ ಮಾಡಲು ಮುಂದಾಗಿದೆ. ಅನುಮತಿ ಪಡೆಯದೇ ಶೂಟಿಂಗ್‌ಗೆ ಮುಂದಾಗಿದ್ದಕ್ಕೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ತಡೆ ನೀಡಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಅರಣ್ಯದಲ್ಲಿ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ

    ಶೂಟಿಂಗ್‌ಗೆ ಸಿದ್ಧತೆ ಮಾಡಿಕೊಂಡಿದ್ದ ಸ್ಥಳ ಅರಣ್ಯ ಪ್ರದೇಶ ಹಾಗೂ ನೀರುನಾಯಿ ಸಂರಕ್ಷಿತ ಪ್ರದೇಶವಾಗಿರುವ ಕಾರಣ ಅರಣ್ಯ ಇಲಾಖೆ ಚಿತ್ರೀಕರಣವನ್ನು ತಡೆ ಹಿಡಿದಿದೆ.

    ಪರವಾನಿಗೆ ಪಡೆದ ನಂತರ ಚಿತ್ರೀಕರಣ ಮಾಡಲು ಅವಕಾಶ ನೀಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಕಲ್ಟ್ ಚಿತ್ರ ತಂಡಕ್ಕೆ ಸೂಚನೆಯನ್ನು ನೀಡಿದ್ದಾರೆ.

    ಅರಣ್ಯ (Forest) ಪ್ರದೇಶದಲ್ಲಿ ಸಿನಿಮಾ, ಸಾಕ್ಷ್ಯಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ಚಿತ್ರೀಕರಣಕ್ಕೆ (Shooting) ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಪ್ರಕಟಿಸಿದೆ.

  • ಐದು ವರ್ಷವೂ ಸಿದ್ದರಾಮಯ್ಯ ಸಿಎಂ: ಜಮೀರ್

    ಐದು ವರ್ಷವೂ ಸಿದ್ದರಾಮಯ್ಯ ಸಿಎಂ: ಜಮೀರ್

    ಕೊಪ್ಪಳ: ಐದು ವರ್ಷವೂ ಸಿದ್ದರಾಮಯ್ಯ (Siddaramaiah) ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದರು.

    ಕೊಪ್ಪಳದಲ್ಲಿ (Koppal) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ ಸಿಎಂ ಖುರ್ಚಿ ಖಾಲಿ ಇಲ್ಲ. ಈ ಬಗ್ಗೆ ಚರ್ಚೆಯೂ ಅಗತ್ಯ ಇಲ್ಲ. ಅದರಂತೆ ಕೆಪಿಸಿಸಿ ಅಧ್ಯಕ್ಷರ ಖುರ್ಚಿಯೂ ಖಾಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಗ್ಗೆ ಸತೀಶ್ ಜಾರಕಿಹೊಳಿ ಮಾತನಾಡಿರಬಹುದು. ಅದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಕೆಪಿಸಿಸಿ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ ಎಂದರು. ಇದನ್ನೂ ಓದಿ: ಕಳೆದ 1 ತಿಂಗಳಿಂದ ಸಿಕ್ತಿಲ್ಲ ಹೊಸ ಡಿಎಲ್‌, ಆರ್‌ಸಿ‌ ಸ್ಮಾರ್ಟ್ ಕಾರ್ಡ್; 15 ದಿನದಲ್ಲಿ ಸಮಸ್ಯೆ ಬಗೆಹರಿಯುತ್ತೆ: ರಾಮಲಿಂಗಾರೆಡ್ಡಿ

    ಮುಡಾ ಹಗರಣದಲ್ಲಿ (MUDA Scam) ಸಿದ್ದರಾಮಯ್ಯ ಪಾತ್ರ ಸ್ವಲ್ಪವೂ ಇಲ್ಲ. ಸಿದ್ದರಾಮಯ್ಯ ಅವರನ್ನು ಅಲುಗಾಡಿಸಿದರೆ ಕಾಂಗ್ರೆಸ್‌ಗೆ ತೊಂದರೆ ಆಗುತ್ತದೆ ಎಂದು ಬಿಜೆಪಿಗರು ಕಿರಿಕಿರಿ ಮಾಡುತ್ತಿದ್ದಾರೆ. ಇದೆಲ್ಲ ನಡೆಯುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: Kolar| ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಟ್ಯಾಂಕರ್ ಪಲ್ಟಿ

    ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ನಡುವಿನ ಜಗಳ ಬಿಜೆಪಿ ಆಂತರಿಕ ವಿಚಾರ. ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಯಾರೂ ಆಹ್ವಾನಿಸಿಲ್ಲ. ಅಷ್ಟಕ್ಕೂ ಅವರು ಬರುವುದೂ ಇಲ್ಲ. ಇದೆಲ್ಲ ಅವರಿಬ್ಬರ ನಾಟಕ. ಬಿಜೆಪಿಯಲ್ಲಿ ಬೇಳೆ ಬೇಯಿಸಿಕೊಳ್ಳಲು, ಕಾಂಗ್ರೆಸ್‌ನಿಂದ ಆಹ್ವಾನ ಇದೆ ಎಂದು ಶ್ರೀರಾಮುಲು ಹೇಳಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಇನ್‌ಸ್ಟಾಗ್ರಾಂ ಪ್ರೇಯಸಿ ಆತ್ಮಹತ್ಯೆ ಕೇಸ್ – ಪ್ರಿಯಕರ ಅರೆಸ್ಟ್

  • ಮೂರು ಹಸು ಕೊಡಿಸಿದ ಜಮೀರ್ ಅಹಮದ್

    ಮೂರು ಹಸು ಕೊಡಿಸಿದ ಜಮೀರ್ ಅಹಮದ್

    ಬೆಂಗಳೂರು: ಕೊಟ್ಟ ಮಾತಿನಂತೆ ಚಾಮರಾಜಪೇಟೆ (Chamarajpet) ಶಾಸಕ, ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer Ahmed Khan) ಅವರು ಮೂರು ಹಸುಗಳನ್ನು ನೀಡಿದ್ದಾರೆ.

    ವಿನಾಯಕ ನಗರದಲ್ಲಿ ನಡೆದ ಹಸುವಿನ ಕೆಚ್ಚಲು ಕೊಯ್ದ ಅಹಿತಕರ ಘಟನೆ (Bengaluru Cow Horror Case) ಹಿನ್ನೆಲೆಯಲ್ಲಿ ಹಸುವಿನ ಮಾಲೀಕ ಕರ್ಣ ಅವರ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಅವರಿಗೆ ಸಚಿವ ಜಮೀರ್ ಅಹಮದ್ ಖಾನ್ ಅವರು ಮೂರು ಲಕ್ಷ ರೂ. ವೆಚ್ಚದಲ್ಲಿ ಮೂರು ಹಸು ಖರೀದಿಸಿ ನೀಡಿದರು.  ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದ ಪ್ರಕರಣ – ಮಾಲೀಕನಿಗೆ 2 ಹಸು, 1 ಕರು ನೀಡಿದ ಪಿ.ಸಿ ಮೋಹನ್‌

    ಈ ವೇಳೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ಅತುಶ್, ಗೌಸಿ, ವಿನಾಯಕ್, ಪ್ರಸಾದ್ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ ಅಮುದಾ, ಹಸು ನಿರಾಕರಿಸಿದ ನನ್ನ ಸಹೋದರನ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಜಮೀರಣ್ಣ ಅವರು ಒಳ್ಳೆ ಮನಸ್ಸಿನಿಂದ ಹಸು ಕೊಡಿಸಿದ್ದಾರೆ. ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದು, ನಾವು ಶಾಸಕರ ಜತೆ ಇದ್ದೇವೆ ಎಂದು ಹೇಳಿದರು.

     

  • ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ: ಜಮೀರ್

    ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ: ಜಮೀರ್

    – ಹಸುವಿನ ಕೆಚ್ಚಲು ಕೊಯ್ದ ಘಟನಾ ಸ್ಥಳಕ್ಕೆ ಜಮೀರ್ ಭೇಟಿ

    ಬೆಂಗಳೂರು: ಪ್ರಾಣಿಗಳ ಮೇಲೆ ಯಾಕೆ ದ್ವೇಷ? ಈ ಥರ ಮಾಡಿದವನು ಮನುಷ್ಯನೇ ಅಲ್ಲ. ಏನೇ ದ್ವೇಷ, ಗಲಾಟೆ ಇದ್ದರೂ ಈ ಥರ ಮಾಡಬಾರದು ಎಂದು ಸಚಿವ ಜಮೀರ್ ಅಹ್ಮದ್ (Zameer Ahmed Khan) ಹೇಳಿದ್ದಾರೆ.

    ಚಾಮರಾಜಪೇಟೆಯಲ್ಲಿ (Chamrajpet) ಹಸುಗಳ ಕೆಚ್ಚಲು (Cow’s Udder) ಕೊಯ್ದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗಳನ್ನು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಕನ್ನಡತಿ, ಮದ್ದೂರಿನ ಸೊಸೆಗೆ ಮಿಸೆಸ್ ಇಂಡಿಯಾ ಕಿರೀಟ

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು, ಮುಖ್ಯಮಂತ್ರಿಗಳು ಬಳ್ಳಾರಿಯಲ್ಲಿ ಇದ್ದೆವು. ವಿಚಾರ ಗೊತ್ತಾದ ತಕ್ಷಣ ಮುಖ್ಯಮಂತ್ರಿಗಳು ಕಮೀಷನರ್‌ಗೆ ಕರೆ ಮಾಡಿ ಅದು ಯಾರೇ ಆಗಿರಲಿ, ಕೂಡಲೇ ಬಂಧಿಸುವಂತೆ ಹೇಳಿದ್ದಾರೆ. ನಾನು ಕೂಡ ಪೊಲೀಸರಿಗೆ ಹೇಳಿದ್ದೇನೆ. ಯಾರೇ ಆದರೂ ಅವನ ಮೇಲೆ ಕಠಿಣ ಕ್ರಮ ಆಗಬೇಕು. ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ. ಅವರ ಕುಟುಂಬದ ಜೊತೆಗೆ ನಾನು ಇದ್ದೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಚಿರತೆ ಕಾಟಕ್ಕೆ ಬೆಚ್ಚಿಬಿದ್ದ ಬನಶಂಕರಿ ಲೇಔಟ್‌ ಜನರು

    ನಾಳೆ ಅವರ ಮನೆ ಬಳಿ ಹೋಗಿ ಹೊಸ ಹಸುಗಳನ್ನು ಕೊಡಿಸಿ. ಹಸು ಕೊಡಿಸೋ ಜವಾಬ್ದಾರಿ ನಿನ್ನದು ಎಂದು ವಿನಯ್ ಎಂಬಾತನಿಗೆ ಜಮೀರ್ ಸೂಚನೆ ನೀಡಿದರು. ಇದನ್ನೂ ಓದಿ: ಮೊಬೈಲ್ ಕೊಡಿಸದ್ದಕ್ಕೆ ಮಗ ಆತ್ಮಹತ್ಯೆ – ಅದೇ ಹಗ್ಗಕ್ಕೆ ನೇಣು ಬಿಗಿದು ತಂದೆ ಸೂಸೈಡ್

  • ಹಸುವಿನ ಕೆಚ್ಚಲು ಕೊಯ್ದ ನೀಚರನ್ನು ಬಂಧಿಸದಿದ್ದರೇ ಜಮೀರ್ ವಿರುದ್ಧ ಹೋರಾಟ: ಮುತಾಲಿಕ್ ಎಚ್ಚರಿಕೆ

    ಹಸುವಿನ ಕೆಚ್ಚಲು ಕೊಯ್ದ ನೀಚರನ್ನು ಬಂಧಿಸದಿದ್ದರೇ ಜಮೀರ್ ವಿರುದ್ಧ ಹೋರಾಟ: ಮುತಾಲಿಕ್ ಎಚ್ಚರಿಕೆ

    ಧಾರವಾಡ: ಇಂದು ಬೆಳಗ್ಗೆ ಚಾಮರಾಜಪೇಟೆಯ (Chamrajpet) ಒಬ್ಬನ ಮಾಲೀಕತ್ವದಲ್ಲಿ ಇದ್ದ ನಾಲ್ಕು ಹಸುವಿನ ಕೆಚ್ಚಲು ಕೊಯ್ದಿದ್ದಾರೆ. ಇದು ನೀಚ ಕೃತ. ಇಸ್ಲಾಮಿಕ್ ಶಕ್ತಿಯ ಪ್ರದರ್ಶನ ಆಗುತ್ತಿದೆ, ರಾಕ್ಷಸ ಕೃತ್ಯಕ್ಕೆ ಇದು ಉದಾಹರಣೆ ಎಂದು ಶ್ರೀರಾಮ ಸೇನೆ (Sri Ram Sena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalk) ಕಿಡಿಕಾರಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ (Zameer Ahmed Khan) ಇದು ನಿಮ್ಮ ಕ್ಷೇತ್ರದಲ್ಲಿ ಆಗಿದೆ. ಇದನ್ನು ತಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಹಸು ಹಿಂದೂಗಳಿಗೆ ಅತ್ಯಂತ ಪೂಜ್ಯ ಪ್ರಾಣಿ. ಅದು ಬರೀ ಪ್ರಾಣಿ ಅಲ್ಲಾ, ಅದು ನಮಗೆ ಅನ್ನ ಹಾಕುತ್ತೆ, ಗೊಬ್ಬರ ಕೊಡುತ್ತೆ, ಔಷಧಿ ಕೊಡುತ್ತದೆ. ರೈತರ ಬೆನ್ನೆಲುಬು ಅದು. ಅದರ ಕೆಚ್ಚಲು ಕೊಯ್ದ ನೀಚರನ್ನು ಒದ್ದು ಒಳಗಡೆ ಹಾಕದಿದ್ದರೇ ಶ್ರೀರಾಮ ಸೇನೆಯಿಂದ ಜಮೀರ್ ವಿರುದ್ಧ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ, ಇದು ಎಚ್ಚರಿಕೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಾಮೀನಿಗೆ ಮೇಲ್ಮನವಿ ಬಳಿಕ ದರ್ಶನ್‌ಗೆ ಬೆಂಗಳೂರು ಪೊಲೀಸರಿಂದ ಮತ್ತೊಂದು ಶಾಕ್‌!

    ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಇದೆ. ಕಾನೂನು ಇದ್ದರೂ ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣ ಹಿನ್ನೆಲೆಯಲ್ಲಿ ನಿರಂತರ ಗೋಹತ್ಯೆ ಆಗುತ್ತಿದೆ. ನಿರಂತರ ಕಸಾಯಿ ಖಾನೆಗೆ ಹಸು ಹೋಗುತ್ತಿವೆ. ಇವತ್ತು ಅದನ್ನು ತಡೆಯಬೇಕು. ಇವತ್ತು ಆದ ಘಟನೆ ನೋಡಲು ಆಗುತ್ತಿಲ್ಲ. ಅದು ನಮ್ಮ ತಾಯಿ. ಜಮೀರ್‌ಗೆ ಮಾನಾ ಮರ್ಯಾದೆ ಇದ್ದರೇ ರಾಕ್ಷಸಿ ಕೃತ್ಯ ಮಾಡಿದವರನ್ನು ಒದ್ದು ಒಳಗೆ ಹಾಕಿ. ಇಲ್ಲದಿದ್ದರೇ ಹೋರಾಟಕ್ಕೆ ಸಿದ್ದ ಎಂದು ಸವಾಲು ಹಾಕುತ್ತೇನೆ ಎಂದು ಗುಡುಗಿದರು. ಇದನ್ನೂ ಓದಿ: ಗಂಡುಮಕ್ಕಳು ಮಾತ್ರ ಕೆಟ್ಟವರು, ಹುಡುಗಿಯರು ಏನೇ ಮಾಡಿದ್ರೂ ಲೆಕ್ಕಕ್ಕೆ ಬರಲ್ಲ – ಸಾಯುವ ಮುನ್ನ ಯುವಕ ಮಾಡಿದ್ದ ವೀಡಿಯೋ ವೈರಲ್ 

    ಆಕಳಿನ ಕೆಚ್ಚಲು ಕೊಯ್ದದ್ದನ್ನು ನೋಡಿದರೆ ಮನುಷ್ಯ ನೋಡಿ ಸುಮ್ಮನೆ ಇರಲು ಆಗಲ್ಲ. ಇದನ್ನು ಖಂಡಿಸುತ್ತೇನೆ. ನಿಮ್ಮ ಒಳಗೆ ಇರುವ ಬಾಂಗ್ಲಾದೇಶದವರ ಕುಕೃತ್ಯಕ್ಕೆ ಉತ್ತರ ನೀವೇ ಕೊಡಬೇಕು. ನೀವೇ ಒದ್ದು ಒಳಗೆ ಹಾಕಬೇಕು. ಆ ಕ್ಷೇತ್ರದ ಸಚಿವರು ನೀವು, ಅದು ನಿಮ್ಮ ಜವಾಬ್ದಾರಿ. ಹಿಂದೂ ಜನ ನಿಮಗೆ ವೋಟು ಹಾಕಿದ್ದಾರೆ. ಆ ಹಿಂದೂಗಳಿಗೆ ನ್ಯಾಯ ಒದಗಿಸಬೇಕಾದರೆ ಅವರನ್ನು ಬಂಧಿಸಿ. ನಮ್ಮ ತೇಜಸ್ವಿಗೌಡ ಬೆಳಗ್ಗೆಯಿಂದ ಅಲ್ಲೇ ಇದ್ದಾರೆ. ಪೊಲೀಸರು ಇದನ್ನು ತಡೆಯಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ಬಾಲಕ ಬಲಿ – ಟ್ರಕ್‌ ಚಕ್ರ ಹರಿದು ತಲೆ ಛಿದ್ರ

  • ಜಮೀರ್ ಹೇಳಿಕೆಯನ್ನ ಸಮಾಜ ಒಪ್ಪಲ್ಲ : ಬೊಮ್ಮಾಯಿ

    ಜಮೀರ್ ಹೇಳಿಕೆಯನ್ನ ಸಮಾಜ ಒಪ್ಪಲ್ಲ : ಬೊಮ್ಮಾಯಿ

    40% ಅರೋಪ – ಉಪ ಚುನಾವಣೆ ಫಲಿತಾಂಶದ ನಂತರ ಮಾತಾಡ್ತೇನೆ

    ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D Kumaraswamy) ಅವರ ಕುರಿತು ವಸತಿ ಸಚಿವ ಜಮೀರ್ ಅಹಮದ್ (Zameer Ahmed Khan) ನೀಡಿರುವ ಹೇಳಿಕೆ ನಾಗರೀಕ ಸಮಾಜ ಒಪ್ಪುವಂಥದ್ದಲ್ಲ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಒಂದು ಗೌರವ ಇದ್ದೇ ಇರುತ್ತದೆ. ಶ್ರೀಮಂತ ಇರಲಿ, ಬಡವ ಇರಲಿ, ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತದೆ. ಹಾಗಾಗಿ ಯಾರೂ ಯಾರನ್ನೂ ಕೊಂಡುಕಳ್ಳಲು ಆಗುವುದಿಲ್ಲ. ಇದರ ಅರಿವು ಇರುವವರು ಯಾರೂ ಹೀಗೆ ಮಾತನಾಡುವುದಿಲ್ಲ ಎಂದಿದ್ದಾರೆ.

    ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ 40% ಕಮಿಷನ್ ಆರೋಪ ಸುಳ್ಳು ಎಂದು ಲೋಕಾಯುಕ್ತ ವರದಿಯಲಿ ಉಲ್ಲೇಖ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಆ ವಿಚಾರದ ಬಗ್ಗೆ ಈಗ ಮಾತನಾಡುವುದಿಲ್ಲ. ಈಗಾಗಲೇ ನಮ್ಮ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಮಾತನಾಡಿದ್ದಾರೆ. ಉಪಚುನಾವಣೆ ಫಲಿತಾಂಶ ಬಂದ ನಂತರ ನಾನು ಮಾತನಾಡುತ್ತೇನೆ. ಅಲ್ಲೀವರೆಗೂ ನಾನು ಮಾತನಾಡುವುದಿಲ್ಲ ಎಂದಿದ್ದಾರೆ.

    40% ಕಮಿಷನ್‌ ಆರೋಪದ ಬಗ್ಗೆ ಯಾವುದು ಸತ್ಯ ಯಾವುದು ಅಸತ್ಯ ಎನ್ನುವ ಬಗ್ಗೆ ನ.23ರ ನಂತರ, ಉಪ ಚುನಾವಣಾ ಫಲಿತಾಂಶ ಬಂದ ನಂತರವೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

  • ಒಂದೇ ದಿನ ಮೂವರು ಗರ್ಭಿಣಿಯರು ಸಾವು – ಇನ್ನೂ ಬಳ್ಳಾರಿಗೆ ಮುಖ ಮಾಡದ ಜಮೀರ್‌

    ಒಂದೇ ದಿನ ಮೂವರು ಗರ್ಭಿಣಿಯರು ಸಾವು – ಇನ್ನೂ ಬಳ್ಳಾರಿಗೆ ಮುಖ ಮಾಡದ ಜಮೀರ್‌

    – ಮೂವರು ಗರ್ಭಿಣಿಯರು ಸಾವು, ಐಸಿಯುನಲ್ಲಿ ನಾಲ್ವರಿಗೆ ಚಿಕಿತ್ಸೆ
    – ಚುನಾವಣಾ ಪ್ರಚಾರದಲ್ಲಿ ಜಮೀರ್‌ ಬ್ಯುಸಿ

    ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ (Ballari District Hospital) ಮೂವರು ಬಾಣಂತಿಯರ ಸರಣಿ ಸಾವು ಇಡೀ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಅಷ್ಟೇ ಅಲ್ಲದೇ ಸರ್ಕಾರಿ ಆಸ್ಪತ್ರೆಗಳ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ದೊಡ್ಡ ದುರಂತ ನಡೆದರೂ ಇನ್ನೂ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಜಿಲ್ಲೆಯ ಕಡೆ ಮುಖ ಮಾಡಿಲ್ಲ.

    ನ.9 ರಂದು ಹೆರಿಗೆಗೆ ಬಂದಿದ್ದ ಏಳು ಗರ್ಭಿಣಿಯರು ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ (Ballari District Hospital) ಸಿಸೇರಿಯನ್‌ಗೆ ಒಳಗಾಗಿದ್ದರು. ನ.10 ರಂದು ನಂದಿನಿ ಮತ್ತು ಲಲಿತಮ್ಮ ಸಾವನ್ನಪ್ಪಿದ್ದರೆ ನ.13 ರಂದು ರೋಜಮ್ಮ ಮೃತಪಟ್ಟಿದ್ದರು. ಉಳಿದ ನಾಲ್ವರು ಬಾಣಂತಿಯರು ಬಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಜಿಲ್ಲಾಸ್ಪತ್ರೆಯಲ್ಲಿ ಮೃತರಾದ ಬಾಣಂತಿಯರು
    ಜಿಲ್ಲಾಸ್ಪತ್ರೆಯಲ್ಲಿ ಮೃತರಾದ ಬಾಣಂತಿಯರು

    ಈ ಘಟನೆಯ ಬಗ್ಗೆ ಕೇವಲ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎನ್ನುವ ಸಂದೇಶವನ್ನು ಮಾತ್ರ ಜಮೀರ್‌ ಕಳುಹಿಸಿದ್ದಾರೆ. ಆದರೆ ಇಲ್ಲಿ ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಏನು? ಈ ಅವಘಡಕ್ಕೆ ಕಾರಣ ಏನು? ಯಾಕಾಯ್ತು ಎನ್ನುವುದರ ಬಗ್ಗೆ ಆತ್ಮಾವಲೋಕನ ಮಾಡಿಯೇ ಇಲ್ಲ.

    ಕರ್ನಾಟಕ ಉಪಚುನಾವಣೆಯ (Karnataka By Election) ಬಳಿಕ ಸದ್ಯ ಮಹಾರಾಷ್ಟ್ರ ಚುನಾವಣೆಯಲ್ಲಿ ಸಚಿವ ಜಮೀರ್ ಫುಲ್‌ ಬ್ಯುಸಿಯಾಗಿದ್ದಾರೆ. ಹೀಗಾಗಿ ಸಚಿವರಿಗೆ ಜನರ ಹಿತಕ್ಕಿಂತ ಚುನಾವಣೆಯೇ ಹೆಚ್ಚಾಗಿದ್ದಕ್ಕೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: ರಸ್ತೆ ಅಗಲೀಕರಣಕ್ಕಾಗಿ 70ಕ್ಕೂ ಹೆಚ್ಚು ಮನೆಗಳ ನೆಲಸಮ – ನೋಟಿಸ್‌ ನೀಡದೆ ತೆರವು ಆರೋಪ

     

    ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ತನಿಖಾ ತಂಡ ರಚಿಸಿ ತನಿಖೆಗೆ ಆದೇಶಿಸಿತ್ತು. ಡಾ. ಸವಿತಾ ಸಿ, ಡಾ.ಭಾಸ್ಕರ್ ಬಿ, ಡಾ. ಹರ್ಷಾ ಟಿಆರ್ ಅವರನ್ನು ಒಳಗೊಂಡಿರುವ ತನಿಖಾ ತಂಡ ಈಗಾಗಲೇ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ತನಿಖೆ ಮುಕ್ತಾಯಗೊಳಿಸಿದ್ದು, ಕೆಲವೊಂದು ಲ್ಯಾಬ್ ವರದಿಗೆ ಕಾಯುತ್ತಿದೆ. ಹೀಗಾಗಿ ಇಂದು ಬಹುತೇಕ ಎಲ್ಲಾ ದಾಖಲೆಗಳು ಕೈ ಸೇರುವ ಸಾಧ್ಯತೆ ಇದ್ದು ಇಂದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಿದ್ದಾರೆ.

    ಸಾವಿಗೆ ಕಾರಣ ಏನು?
    ಮೂವರು ತಾಯಂದಿರ ಸಾವಿಗೆ ಅಸಲಿ ಕಾರಣ ಇನ್ನೂ ತಿಳಿದು ಬಾರದೇ ಇದ್ದರೂ ಮೇಲ್ನೋಟಕ್ಕೆ ಇದು ಮೆಡಿಕಲ್ ರಿಯಾಕ್ಷನ್ ಎನ್ನುವ ಅನುಮಾನ ಶುರುವಾಗಿದೆ. ಮೂವರ ಸಾವಿಗೆ IV Fluid ಔಷಧಿಯೇ ಕಾರಣ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಯಾಕೆಂದರೆ ಸಿಸೇರಿಯನ್ ಬಳಿಕ ವೈದ್ಯರು ಐವಿ ಫ್ಲೂಯಿಡ್ ಹಾಗೂ ಎನ್‌ಎಸ್‌ಎಲ್‌ ಗ್ಲುಕೋಸ್‌ ಹಾಕಿದ್ದರು. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ(KSMSCL) ಕಳುಹಿಸಿದ್ದ ಗ್ಲುಕೋಸ್‌ಗಳನ್ನು ನ. 9 ರಂದು ಹಾಕಲಾಗಿತ್ತು. ಆ ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿ ನ.10 ರಂದು ನಂದಿನಿ ಹಾಗೂ ಲಲಿತಮ್ಮ ಮೃತಪಟ್ಟಿದ್ದರು. ಕೂಡಲೇ ಇನ್ನುಳಿದ ಐದು ಬಾಣಂತಿಯರನ್ನು ಬಿಮ್ಸ್‌ಗೆ ರವಾನೆ ಮಾಡಲಾಗಿತ್ತು.

     

  • ಚನ್ನಪಟ್ಟಣದಲ್ಲಿ ನಿಖಿಲ್ ಗೆಲುವು ನಿಶ್ಚಿತ: ಸಂಸದ ಯದುವೀರ್ ವಿಶ್ವಾಸ

    ಚನ್ನಪಟ್ಟಣದಲ್ಲಿ ನಿಖಿಲ್ ಗೆಲುವು ನಿಶ್ಚಿತ: ಸಂಸದ ಯದುವೀರ್ ವಿಶ್ವಾಸ

    ಮಡಿಕೇರಿ: ರಾಜ್ಯದಲ್ಲಿ ಮೂರು ಕ್ಷೇತ್ರದ ಉಪಾಚುನಾವಣೆಯಾದ ಹಿನ್ನೆಲೆ ಮೂರು ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಅದರಲ್ಲೂ ಹೈವೋಲ್ಟೇಜ್ ಕ್ಷೇತ್ರ ಚನ್ನಪಟ್ಟಣದಲ್ಲಿ (Channapatna) ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ನಿಶ್ಚಿತ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕೊಡಗು ಜಿಲ್ಲೆ ಮಡಿಕೇರಿ (Madikeri) ತಾಲೂಕಿನ ಮಕ್ಕಂದೂರು ಗ್ರಾಮದಲ್ಲಿ ‘ಪಬ್ಲಿಕ್ ಟಿವಿ’ಯೊಂದಿಗೆ ಮಾತಾನಾಡಿದ ಅವರು, ಚನ್ನಪಟ್ಟಣದಲ್ಲಿ ಚುನಾವಣೆ ಸಂದರ್ಭ ಗ್ರೌಂಡ್ ರಿಪೋರ್ಟ್ ನೋಡಿದಾಗ ಅಲ್ಲಿನ ಜನರು ಮೈತ್ರಿ ಪಕ್ಷದ ಅಭ್ಯರ್ಥಿ ಪರವಾಗಿ ಇದ್ದರು. ಹಾಗಾಗಿ ನಮ್ಮಗೆ ವಿಶ್ವಾಸ ಇದೆ, ಎನ್‌ಡಿಎ ಪರವಾಗಿ ಗೆಲುವು ಆಗುತ್ತದೆ ಎಂಬ ಭರವಸೆಯನ್ನು ಕ್ಷೇತ್ರದ ಜನರು ತುಂಬಿದ್ದಾರೆ ಎಂದರು. ಇದನ್ನೂ ಓದಿ: ಅಪ್ರಾಪ್ತೆ ಪತ್ನಿಯ ಜೊತೆಗಿನ ಸಮ್ಮತಿಯ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮ – ಬಾಂಬೆ ಹೈಕೋರ್ಟ್

    ಇಬ್ಬರಲ್ಲಿ ಯಾರಿಗೆ ಗೆಲುವು ಆದ್ರೂ ಕೂದಲೆಳೆಯ ಅಂತರದಲ್ಲಿ ಆಗಬಹುದು. ಜಮೀರ್ ಅಹ್ಮದ್ (Zameer Ahmed Khan) ಅವರ ಮಾತಿನಿಂದ ಮತಗಳು ವಿಭಜನೆಯಾಗಿದೆ ಎಂಬ ಸಿ.ಪಿ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರಕ್ರಿಯಿಸಿ, ಅವರನ್ನೇ ಇನ್ನಷ್ಟು ನೇರವಾಗಿ ಪ್ರಶ್ನೆ ಮಾಡಬೇಕಾಗುತ್ತದೆ. ನಮ್ಮ ದೃಷ್ಟಿಕೋನದಲ್ಲಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎಲ್ಲಾ ರೀತಿಯ ವಿಜಯವನ್ನು ಸಾಧಿಸುತ್ತಾರೆ. ನಮಗೂ ಅವರು ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು. ಇದನ್ನೂ ಓದಿ: ಜಮೀರ್‌ ನಿಯತ್ತಾಗಿ ಬಸ್ ಓಡಿಸಿ ಬಂದ ದುಡ್ಡಾ ಅದು? ನಾಲ್ವರಿಂದ ನಾನು ಕೆಟ್ಟೆ: ಹೆಚ್‌ಡಿಕೆ ಕಿಡಿ

    ನಾವು ಪ್ರಚಾರಕ್ಕೆ ಹೋಗಿದ ಸಂದರ್ಭದಲ್ಲಿ ಅಲ್ಲಿನ ಗ್ರೌಂಡ್ ರಿಪೋರ್ಟ್‌ನಲ್ಲೇ ಜನರ ನಾಡಿ ಮಿಡಿತ ನೋಡಿದ್ದೇವೆ. ನಾವು ಹಾಗು ರಾಜ್ಯದ ಅನೇಕ ನಾಯಕರು ಅಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ಮತದಾರರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ರೀತಿಯ ಪ್ರತಿಕ್ರಿಯೆ ಮೊದಲೇ ಬಂದಿರುವುದರಿಂದ ಈಗಾಗಲೇ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಗೆಲ್ಲುವಿನ ವಾತಾವರಣ ಸೃಷ್ಟಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಲಕ್ಷ ಲಕ್ಷ ವಂಚನೆ – ಆರೋಪಿ ಅರೆಸ್ಟ್