Tag: Zakir Hussain

  • ತಬಲಾ ಮಾಂತ್ರಿಕ ಜಾಕಿರ್ ಹುಸೇನ್‌ ನಿಧನ

    ತಬಲಾ ಮಾಂತ್ರಿಕ ಜಾಕಿರ್ ಹುಸೇನ್‌ ನಿಧನ

    ವಾಷಿಂಗ್ಟನ್‌: ತೀವ್ರ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ (73) ನಿಧನರಾಗಿದ್ದಾರೆ.

    ಖ್ಯಾತ ತಬಲ ವಾದಕ ಜಾಕೀರ್‌ ಹುಸೇನ್‌ ಅವರಿಗೆ ರಕ್ತದೊತ್ತಡ ಸಮಸ್ಯೆ ಇತ್ತು. ಕಳೆದ ವಾರದಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಅವರನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

    ಜಾಕೀರ್ ಹುಸೇನ್ ಅಸ್ವಸ್ಥರಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರ ಸ್ನೇಹಿತ ರಾಕೇಶ್ ಚೌರಾಸಿಯಾ ಕೆಲವೇ ಗಂಟೆಗಳ ಹಿಂದೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.

    ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾ ಅವರ ಹಿರಿಯ ಪುತ್ರರಾಗಿದ್ದ ಜಾಕಿರ್ ಹುಸೇನ್ ತಮ್ಮ ತಂದೆಯ ಹಾದಿಯಲ್ಲಿ ಸಾಗುವ ಮೂಲಕ ವಿಶ್ವ ವಿಖ್ಯಾತಿಯನ್ನು ಪಡೆದಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಅವರು ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಬೆಳಗಿದ್ದರು.

    ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಹುಸೇನ್ ಅವರಿಗೆ 1988 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪುರಸ್ಕಾರಗಳು ಲಭಿಸಿದ್ದವು.

  • ಭಾರತಕ್ಕೆ ಮೂರು ಗ್ರ್ಯಾಮಿ ಪ್ರಶಸ್ತಿ: ಜೈ ಹೋ ಎಂದ ಸಂಗೀತ ಪ್ರೇಮಿಗಳು

    ಭಾರತಕ್ಕೆ ಮೂರು ಗ್ರ್ಯಾಮಿ ಪ್ರಶಸ್ತಿ: ಜೈ ಹೋ ಎಂದ ಸಂಗೀತ ಪ್ರೇಮಿಗಳು

    ಇಂದು 66ನೇ ಸಾಲಿನ ಗ್ರ್ಯಾಮಿ ಅವಾರ್ಡ್ (Grammy Award) ಪ್ರಶಸ್ತಿ ಪ್ರಕಟವಾಗಿದ್ದು, ಭಾರತಕ್ಕೆ ಮೂರು ಪ್ರಶಸ್ತಿಗಳು ಸಂದಿವೆ. ದಿ ಮೂಮೆಂಟ್ ಆಲ್ಬಂಗಾಗಿ ಖ್ಯಾತ ಸಂಗೀತಗಾರ ಜಾಕಿರ್ ಹುಸೇನ್ (Zakir Hussain) ಅವರ ಬ್ಯಾಂಡ್ ಶಕ್ತಿಗೆ ಪ್ರಶಸ್ತಿ ಬಂದಿದ್ದು, ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂನಲ್ಲಿ ಈ ಪ್ರಶಸ್ತಿ ಸಂದಿದೆ.

    ರಾಕೇಶ್ ಚೌರಾಸಿಯಾಗೆ (Rakesh Chaurasi) ಎರಡು ಗ್ರ್ಯಾಮಿ ಅವಾರ್ಡ್ ದೊರಕಿದ್ದು, ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಹಾಗೂ ವಾದ್ಯಗಳ ವಿಭಾಗದಲ್ಲಿ ಈ ಎರಡು ಪ್ರಶಸ್ತಿಗಳನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಹಲವಾರು ಪ್ರಶಸ್ತಿಗಳು ಬೇರೆ ಬೇರೆ ಸಂಗೀತಗಾರರು ಪಡೆದುಕೊಂಡಿದ್ದಾರೆ.

    ಭಾರತಕ್ಕೆ ಈ ಬಾರಿ ಮೂರು ಗ್ರ್ಯಾಮಿ ಪ್ರಶಸ್ತಿಗಳು ಬಂದಿರುವುದಕ್ಕೆ ರಿಕಿ ಕೇಜ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಯ ಸಂದೇಶವನ್ನು ಹಂಚಿಕೊಂಡಿದ್ದಾರೆ.

  • ಮಾಜಿ ರಾಷ್ಟ್ರಪತಿ ಮೊಮ್ಮಗನ ಮದುವೆ ಮಾಡಿದ ಮಹಿಳಾ ಖಾಜಿ

    ಮಾಜಿ ರಾಷ್ಟ್ರಪತಿ ಮೊಮ್ಮಗನ ಮದುವೆ ಮಾಡಿದ ಮಹಿಳಾ ಖಾಜಿ

    ನವದೆಹಲಿ: ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಅವರ ಮರಿಮೊಮ್ಮಗನ ವಿವಾಹವನ್ನು ಮಹಿಳಾ ಖಾಜಿ ನೆರವೇರಿಸಿದ್ದಾರೆ.

    ರೆಹಮಾನ್ ಮತ್ತು ಉರ್ಸಿಲಾ ಅಲಿ ದಾಂಪತ್ಯಕ್ಕೆ ಕಾಲಿಟ್ಟ ನವಜೋಡಿಗಳಾಗಿದ್ದಾರೆ. ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಅವರ ಮೊಮ್ಮಗ ರೆಹಮಾನ್ ವಿವಾಹವನ್ನು ಮಹಿಳಾ ಖಾಜಿ ನೆರವೇರಿಸಿದರು. ಮದುವೆ ಸಮಾರಂಭದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ – 29 ಮಂದಿ ಕಾರ್ಯಕರ್ತರ ವಿರುದ್ಧ ಪ್ರಕರಣ

    ಯೋಜನಾ ಆಯೋಗದ ಸದಸ್ಯರಾದ ಸೈಯದಾ ಸೈಯದೈನ್ ಹಮೀದ್ ಅವರು ರೆಹಮಾನ್ ಮತ್ತು ಉರ್ಸಿಲಾ ಅಲಿ ಅವರ ನಿಕಾಹ್ ಪೂರ್ಣಗೊಳಿಸಲು ಖಾಜಿಯ ಕರ್ತವ್ಯಗಳನ್ನು ವಹಿಸಿಕೊಂಡರು. ವರನ ಮುತ್ತಜ್ಜಿ ಬೇಗಂ ಸಯೀದಾ ಖುರ್ಷಿದ್ ಸ್ಥಾಪಕ ಅಧ್ಯಕ್ಷರಾಗಿದ್ದು, ಮುಸ್ಲಿಂ ಮಹಿಳಾ ವೇದಿಕೆಯ ಆಶ್ರಯದಲ್ಲಿ ಮದುವೆ ಮಾಡಲಾಗಿದೆ.

     

    View this post on Instagram

     

    A post shared by India Today (@indiatoday)

    ನಿಕಾಹ್ ಆಚರಣೆಗೆ ಖುರಾನ್ ಆದೇಶಗಳು, ಸಾಕ್ಷಿಗಳು ಮತ್ತು ಖಾಜಿ ಆಗಿದ್ದರೆ, ಈ ನಿಕಾಹ್ನಾಮದ ಹೆಚ್ಚುವರಿ ಮಹತ್ವವೆಂದರೆ ಇಕ್ರಾರ್ನಾಮ (ಒಪ್ಪಂದ) ಇದು ವಧುವರ, ಪರಸ್ಪರ ಒಪ್ಪಿದ ಷರತ್ತುಗಳನ್ನು ಸೇರಿಸುತ್ತದೆ. ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳಿಗೆ ಸಂಬಂಧಿಸಿದೆ. ಹೇಳಿಕೆಯ ಪ್ರಕಾರ ವೈವಾಹಿಕ ಜೀವನದ ಎಲ್ಲಾ ಅಂಶಗಳನ್ನು ಗೌರವಿಸುತ್ತದೆ.