Tag: Zainab Ravdjee

  • ಗರ್ಲ್ ಫ್ರೆಂಡ್ ಝೈನಬ್ ಮದ್ವೆಯಾದ ನಾಗಾರ್ಜುನ ಪುತ್ರ ಅಖಿಲ್

    ಗರ್ಲ್ ಫ್ರೆಂಡ್ ಝೈನಬ್ ಮದ್ವೆಯಾದ ನಾಗಾರ್ಜುನ ಪುತ್ರ ಅಖಿಲ್

    ತೆಲಗು ನಟ ನಾಗಾರ್ಜುನ (Nagarjuna) ಅವರ ಮಗ ಅಖಿಲ್ ಅಕ್ಕಿನೇನಿ (Akhil Akkineni) ತಮ್ಮ ಗೆಳತಿ ಝೈನಾಬ್ (Zainab Ravdjee) ಅವರನ್ನು ಮದುವೆಯಾಗಿದ್ದಾರೆ. ಮದುವೆ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನೆರವೇರಿದೆ.

    ಮದುವೆಯ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಚಿತ್ರದಲ್ಲಿ ಅಖಿಲ್ ಬಿಳಿ ಕುರ್ತಾ ಮತ್ತು ಧೋತಿಯಲ್ಲಿ ಧರಿಸಿದ್ದು, ಜೈನಾಬ್ ಬಿಳಿ ರೇಷ್ಮೆ ಸೀರೆಯನ್ನು ಧರಿಸಿದ್ದರು. ಇನ್ನೂ ಮದುವೆ ನಡೆದ ಅನ್ನಪೂರ್ಣ ಸ್ಟುಡಿಯೋವನ್ನು ಅಖಿಲ್ ಅವರ ಅಜ್ಜ, ದಂತಕಥೆ ನಟ ಅಕ್ಕಿನೇನಿ ನಾಗೇಶ್ವರ ರಾವ್ ಸ್ಥಾಪನೆ ಮಾಡಿದ್ದರು.

    ಸಮಾರಂಭದಲ್ಲಿ ಚಿರಂಜೀವಿ, ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನ, ಶೋಭಿತಾ ಧೂಲಿಪಾಲ ಮತ್ತು ನಾಗ ಚೈತನ್ಯ ಸೇರಿದಂತೆ ತೆಲುಗು ಚಲನಚಿತ್ರೋದ್ಯಮದ ಹಲವಾರು ಪ್ರಮುಖ ನಟ ನಟಿಯರು ಪಾಲ್ಗೊಂಡಿದ್ದರು. ವಿವಾಹಕ್ಕೂ ಮುನ್ನ ಉತ್ಸಾಹಭರಿತ ಬರಾತ್ ಸಮಾರಂಭವನ್ನು ನಡೆಸಲಾಯಿತು, ಅಲ್ಲಿ ಚೈತನ್ಯ ಸಾಂಪ್ರದಾಯಿಕ ಕೆಂಪು ಕುರ್ತಾದಲ್ಲಿ ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದರು.

    ನಿರ್ದೇಶಕ ಪ್ರಶಾಂತ್ ನೀಲ್, ಚಿರಂಜೀವಿ, ದಗ್ಗುಬಾಟಿ ವೆಂಕಟೇಶ್ ಮತ್ತು ನಾಗಾರ್ಜುನ ಸೇರಿದಂತೆ ಅನೇಕ ಅತಿಥಿಗಳು ಸಹ ವಿವಾಹದಲ್ಲಿ ಭಾಗಿಯಾಗಿದ್ದರು. ಅಖಿಲ್ ಮತ್ತು ಝೈನಾಬ್‌ರ ನಿಶ್ಚಿತಾರ್ಥ ಕಳೆದ ನವೆಂಬರ್‌ನಲ್ಲಿ ನಡೆದಿತ್ತು. ಇದಕ್ಕೂ ಮೊದಲು ಎರಡು ವರ್ಷಗಳ ಕಾಲ ಅವರು ಡೇಟಿಂಗ್‌ನಲ್ಲಿದ್ದರು.

    ಅಖಿಲ್ ತಮ್ಮ ತಂದೆಯ ಚಲನಚಿತ್ರ ಸಿಸಿಂದ್ರಿದಲ್ಲಿ ಬಾಲನಟನಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ಏಜೆಂಟ್ (2023), ಮಿಸ್ಟರ್ ಮಜ್ನು (2019), ಹಲೋ! (2017) ಮತ್ತು ಅಖಿಲ್ (2015) ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

  • ಜೂನ್‌ನಲ್ಲಿ ಝೈನಾಬ್ ಜೊತೆ ಅಖಿಲ್ ಅಕ್ಕಿನೇನಿ ಮದುವೆ?

    ಜೂನ್‌ನಲ್ಲಿ ಝೈನಾಬ್ ಜೊತೆ ಅಖಿಲ್ ಅಕ್ಕಿನೇನಿ ಮದುವೆ?

    ನಾಗಾರ್ಜುನ ಅಕ್ಕಿನೇನಿ ಪುತ್ರ ಅಖಿಲ್ ಅಕ್ಕಿನೇನಿ (Akhil Akkineni) ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಜೂನ್‌ನಲ್ಲಿ ಗೆಳತಿ ಝೈನಾಬ್ ಜೊತೆ ಅಖಿಲ್ ಮದುವೆ ಫಿಕ್ಸ್ ಆಗಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಕನ್ನಡ ತಮಿಳಿನಿಂದ ಹುಟ್ಟಿದೆ ಎಂದ ಕಮಲ್ ಹಾಸನ್ ಮಾತು ಒಪ್ಪಲ್ಲ- ಜಗ್ಗೇಶ್ ಖಂಡನೆ

    ಬಹುಕಾಲದ ಗೆಳತಿ ಝೈನಾಬ್ (Jainab (Ravdjee) ಜೊತೆ ಅಖಿಲ್ ಜೂನ್ 6ರಂದು ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆ ನಡೆಯಲಿದೆ ಎಂದು ವರದಿ ಆಗಿದೆ. ಬಳಿಕ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದುವೆ ಆರತಕ್ಷತೆ ಕಾಯಕ್ರಮ ಜರುಗಲಿದೆ ಎನ್ನಲಾಗಿದೆ. ಈ ಬಗ್ಗೆ ಅಕ್ಕಿನೇನಿ ಕುಟುಂಬದಿಂದ ಅಧಿಕೃತ ಮಾಹಿತಿ ಘೋಷಿಸಬೇಕಿದೆ. ಇದನ್ನೂ ಓದಿ:ಹೃತಿಕ್ ರೋಷನ್ ಜೊತೆ ಸಿನಿಮಾ- ‘ಹೊಂಬಾಳೆ ಫಿಲಂಸ್’ನಿಂದ ಗುಡ್ ನ್ಯೂಸ್

    ಝೈನಾಬ್ ರಾವಡ್ಜಿ ಅವರನ್ನು ಅಖಿಲ್ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡರು. ಈ ಬಗ್ಗೆ ಸ್ವತಃ ನಾಗಾರ್ಜುನ ರಿವೀಲ್ ಮಾಡಿದ್ದರು.

  • ಝೈನಾಬ್ ಜೊತೆ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ಅಖಿಲ್ ಅಕ್ಕಿನೇನಿ

    ಝೈನಾಬ್ ಜೊತೆ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ಅಖಿಲ್ ಅಕ್ಕಿನೇನಿ

    ಟಾಲಿವುಡ್ ನಟ ನಾಗಾರ್ಜುನ ಅವರ ಪುತ್ರ ಅಖಿಲ್ ಅಕ್ಕಿನೇನಿ (Akhil Akkineni) ಅವರು ಝೈನಾಬ್ ರಾವಡ್ಜಿ (Zainab Ravdjee) ಅವರೊಂದಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಾಗಾರ್ಜುನ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಯುವ ಜೋಡಿಗೆ ಶುಭ ಹಾರೈಸುವಂತೆ ಕೇಳಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಸೆಕೆಂಡ್ ಹ್ಯಾಂಡ್ ಎಂದು ಟೀಕಿಸಿದರು: ಸಮಂತಾ

    ನಾಗಚೈತನ್ಯ ಅವರ ಎರಡನೇ ಮದುವೆಗೆ ಮುನ್ನವೇ ಅಖಿಲ್ ನಿಶ್ಚಿತಾರ್ಥ ನೆರವೇರಿದೆ. ಗುಟ್ಟಾಗಿ ಅಖಿಲ್ ಎಂಗೇಜ್‌ಮೆಂಟ್ ನಡೆದಿದ್ದು, ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಮ್ಮ ಮಗನ ನಿಶ್ಚಿತಾರ್ಥವನ್ನು ಘೋಷಿಸಲು ನಮಗೆ ಸಂತೋಷವಾಗುತ್ತಿದೆ. ಅಖಿಲ್ ಅಕ್ಕಿನೇನಿ ಹಾಗೂ ನಮ್ಮ ಸೊಸೆಗೆ ಝೈನಾಬ್ ರಾವಡ್ಜಿ ಅವರ ನಿಶ್ಚಿತಾರ್ಥವನ್ನು ನೆರವೇರಿಸಿದ್ದೇವೆ. ಝೈನಾಬ್ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿರುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ಯುವ ದಂಪತಿಗಳನ್ನು ಅಭಿನಂದಿಸಲು ದಯವಿಟ್ಟು ನಮ್ಮೊಂದಿಗೆ ಸೇರಿ ಮತ್ತು ಅವರಿಗೆ ಪ್ರೀತಿ, ಸಂತೋಷ ಮತ್ತು ನಿಮ್ಮ ಆಶೀರ್ವಾದ ನೀಡಿ ಹಾರೈಸಬೇಕು ಎಂದು ಮನವಿ ಮಾಡಿದ್ದಾರೆ.

    ಅಂದಹಾಗೆ, ಈ ಹಿಂದೆ ಶ್ರಿಯಾ ಭೂಪಾಲ್ ಎಂಬುವವರ ಜೊತೆ ಅಖಿಲ್ ನಿಶ್ಚಿತಾರ್ಥ ನಡೆದಿತ್ತು. ಕೆಲ ಮನಸ್ತಾಪಗಳಿಂದ ಈ ಜೋಡಿ ಬ್ರೇಕಪ್‌ ಮಾಡಿಕೊಂಡರು. ಈಗ ಝೈನಾಬ್ ಜೊತೆ ಅಖಿಲ್ ಎಂಗೇಜ್ ಆಗಿದ್ದಾರೆ.