Tag: Z symbol

  • ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್ – ಇದು ರಷ್ಯಾದ ಯುದ್ಧದ ಸಂಕೇತ!

    ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್ – ಇದು ರಷ್ಯಾದ ಯುದ್ಧದ ಸಂಕೇತ!

    ಕೀವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸಿದಾಗಿನಿಂದ ಅಲ್ಲಿನ ಹಲವು ಕಟ್ಟಡಗಳಲ್ಲಿ, ವಾಹನಗಳಲ್ಲಿ ಕೆಲವು ನಿಗೂಢ ಸಂಕೇತಗಳು ಮೂಡುತ್ತಿವೆ. ಇದೀಗ ಉಕ್ರೇನ್ ಗಡಿ ಬಳಿಯಲ್ಲಿರುವ ರಷ್ಯಾದ ಟ್ಯಾಂಕ್, ಮಿಲಿಟರಿ ಟ್ರಕ್‌ಗಳಲ್ಲಿ Z ಗುರುತು ಕಾಣಿಸುತ್ತಿವೆ.

    ಇಲ್ಲಿಯವರೆಗೆ ವಾಹನ ಹಾಗೂ ಮಿಲಿಟರಿ ಯಂತ್ರಗಳಲ್ಲಿ ಕೇವಲ Z ಚಿನ್ಹೆ ಮಾತ್ರ ಇರದೇ O, X, A, V ಚಿನ್ಹೆಗಳೂ ಕಾಣಿಸಿಕೊಂಡಿದ್ದವು. ಆದರೆ ಈ ಚಿನ್ಹೆಗಳ ಹಿನ್ನೆಲೆ ಏನು, ಇದನ್ನು ಏಕೆ ಬರೆಯಲಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

    ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್‌ಗಳಲ್ಲಿ ಹಲವರು ಈ ನಿಗೂಢ ಸಂಕೇತಗಳ ಬಗೆಗೆ ವಿವರಿಸಿದ್ದಾರೆ. ಹಲವರು ತಮ್ಮ ತಮ್ಮ ಅಭಿಪ್ರಾಯ ಹಾಗೂ ವ್ಯಾಖ್ಯಾನ ನೀಡಿದ್ದಾರೆ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    Z ಎಂದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ ಹಾಗೂ V ಎಂದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ತಮ್ಮ ತಮ್ಮ ಪಡೆಗಳನ್ನು ಗುರುತಿಸಲು ಈ ರೀತಿಯಾಗಿ ಸಂಕೇತಗಳನ್ನು ಬರೆಯಲಾಗಿದೆ ಎನ್ನಲಾಗುತ್ತಿದೆ. ಕುತೂಹಲಕಾರಿ ಸಂಗತಿಯೆoದರೆ  ಸಿರಿಲಿಕ್ ರಷ್ಯನ್ ವರ್ಣಮಾಲೆಯಲ್ಲಿ Z ಹಾಗೂ V ಅಕ್ಷರಗಳೇ ಅಸ್ಥಿತ್ವದಲ್ಲಿ ಇಲ್ಲ.

    ಇನ್ನೂ ಕೆಲವರು ರಷ್ಯಾದ ಪಡೆಗಳು ಪರಸ್ಪರ ದಾಳಿಯಿಂದ ರಕ್ಷಿಸಿಕೊಳ್ಳಲು ತಮ್ಮ ಟ್ಯಾಂಕ್‌ಗಳಲ್ಲಿ ಈ ರೀತಿಯ ಅಕ್ಷರಗಳನ್ನು ಬರೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ- ಕಟ್ಟಡ ತೊರೆಯುವಂತೆ ಅಧಿಕಾರಿಗಳ ಸೂಚನೆ

    ರಷ್ಯಾದ ರಕ್ಷಣಾ ಸಚಿವಾಲಯ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ Z ಹಾಗೂ V ಅಕ್ಷರಗಳ ವಿನ್ಯಾಸದ ಗ್ರಾಫಿಕ್ಸ್ಒಂದನ್ನು ಹಂಚಿಕೊಂಡಿದೆ. ಆದರೆ ಈ ಎರಡು ಅಕ್ಷರಗಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ವಿವರಣೆಗಳನ್ನು ನೀಡಿಲ್ಲ.

    ಒಟ್ಟಿನಲ್ಲಿ Z ಅಕ್ಷರ ರಷ್ಯಾ ಸೈನ್ಯದ ಸಂಕೇತ ಎನ್ನಲಾಗುತ್ತಿದೆ. ದೇಶಾದ್ಯಂತ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಈ ಗುರುತನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಕೇವಲ ಯುದ್ಧದ ಟ್ಯಾಂಕ್‌ಗಳಲ್ಲಿ ಮಾತ್ರವಲ್ಲದೇ ನಾಗರಿಕರೂ ತಮ್ಮ ವಾಹನಗಳಲ್ಲಿ ಈ ಸಂಕೇತವನ್ನು ಬಳಸುತ್ತಿರುವುದು ಗಮನಾರ್ಹವಾಗಿದೆ.

  • Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    ಕೀವ್: ರಷ್ಯಾ, ಉಕ್ರೇನ್ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸುತ್ತಿದೆ. ಈ ನಡುವೆ ರಷ್ಯಾದ ಮಿಲಿಟರಿ ಪಡೆಯ ಯುದ್ಧ ಟ್ಯಾಂಕ್ ಮತ್ತು ವಾಹನಗಳ ಮೇಲಿರುವ ಝಡ್ (Z) ಮಾರ್ಕ್ ತೀವ್ರ ಚರ್ಚೆಗೆ ಕಾರಣವಾಗಿದೆ.

    ಏನಿದು Z ಮಾರ್ಕ್
    ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮೂರನೇ ದಿನವಾದ ಇಂದು ಉಕ್ರೇನ್‍ನ ಕೀವ್ ನಗರದಲ್ಲಿ ಕ್ಷಿಪಣಿ, ಬಾಂಬ್‍ಗಳ ಸುರಿಮಳೆಗೈದಿದೆ. ಈ ಎಲ್ಲದರ ನಡುವೆ ರಷ್ಯಾದ ಯುದ್ಧ ಟ್ಯಾಂಕರ್, ಬಂಕರ್ ಮತ್ತು ಎಲ್ಲಾ ಯುದ್ಧೋಪಕರಣಗಳ ಮೇಲೆ Z ಮಾರ್ಕ್ ಒಂದು ಎಲ್ಲರ ಗಮನಸೆಳೆಯುತ್ತಿದೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಸಾಮಾಜಿಕ ಜಾಲತಾಣಗಳಲ್ಲೂ ಕೂಡ Z ಮಾರ್ಕ್‍ನ ಟ್ಯಾಂಕರ್‌ಗಳ ವೀಡಿಯೋ ವೈರಲ್ ಆಗುತ್ತಿದೆ. ಆದರೆ ಈ ಮಾರ್ಕಿಂಗ್ ಬಗ್ಗೆ ರಷ್ಯಾ ಆರ್ಮಿ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಅಲ್ಲದೇ ಈ Z ಅಕ್ಷರ ರಷ್ಯಾದ ವರ್ಣಮಾಲೆಗಲಲ್ಲೂ ಇಲ್ಲ ಇದು ಸಿರಿಲಿಕ್ ಲಿಪಿಯಾಗಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.

    ಈ ಮಾರ್ಕಿಂಗ್ ಬಗ್ಗೆ ಇದೀಗ ಎಲ್ಲಡೆ ಮಾತುಕತೆ ಆರಂಭವಾಗಿದ್ದು, ರಕ್ಷಣಾ ತಜ್ಞರ ಪ್ರಕಾರ, ಉಕ್ರೇನ್ ಮತ್ತು ರಷ್ಯಾ ಸೇನೆಯ ಸೈನಿಕರು ಮತ್ತು ಯುದ್ಧ ಉಪಕರಣಗಳ ವ್ಯತ್ಯಾಸಕ್ಕಾಗಿ ಈ ಚಿಹ್ನೆ ಬಳಸಲಾಗುತ್ತಿದೆ. ಈ ಎರಡು ದೇಶಗಳ ಮಿಲಿಟರಿ ಪಡೆ ಟ್ಯಾಂಕ್‍ಗಳು ಒಂದೇ ರೀತಿ ಇರುವುದರಿಂದ ರಷ್ಯಾ ಈ ರೀತಿ ಮಾಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

    ರಷ್ಯಾದ ಬಲಿಷ್ಠ ಯುದ್ಧ ಟ್ಯಾಂಕರ್ T-72 ತದ್ರೂಪಿಯಾಗಿ ಉಕ್ರೇನ್‍ನ ಯುದ್ಧ ಟ್ಯಾಂಕರ್ T-80 ಇದೆ. ಈ ಎಲ್ಲಾ ಕಾರಣಗಳನ್ನು ಮನಗಂಡು ರಷ್ಯಾ ತನ್ನ ಯುದ್ಧೋಪಕರಣಗಳಿಗೆ Z ಮಾರ್ಕ್ ಮಾಡಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಉಕ್ರೇನ್‍ನ ಬಹುಮಹಡಿ ಕಟ್ಟಡಕ್ಕೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ – ಭೀಕರ ದೃಶ್ಯ ವೈರಲ್

    ಈ ಹಿಂದೆ 1944ರಲ್ಲಿ ನಾರ್ಮಂಡಿ ವಶ ಪಡೆಯುವ ವೇಳೆ ಮಿತ್ರ ರಾಷ್ಟ್ರಗಳಿಗೆ ತಿಳಿಯಲೆಂದು ಅಮೆರಿಕ ತನ್ನ ಸೇನಾ ವಾಹನಗಳ ಮೇಲೆ ಕಪ್ಪು ಮತ್ತು ಬಿಳಿ ಪಟ್ಟಿಗಳನ್ನು ಹಾಕಿಕೊಂಡಿತ್ತು.