Tag: Z+ security

  • ಮಾಜಿ ಸಿಎಂಗಳಿಗೆ ಮತ್ತೆ Z ಭದ್ರತೆ ನೀಡಲು ಸರ್ಕಾರ ನಿರ್ಧಾರ

    ಮಾಜಿ ಸಿಎಂಗಳಿಗೆ ಮತ್ತೆ Z ಭದ್ರತೆ ನೀಡಲು ಸರ್ಕಾರ ನಿರ್ಧಾರ

    ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಿಗೆ ಮತ್ತೆ Z ಭದ್ರತೆ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಈ ಹಿಂದೆಯೂ ಮಾಜಿ ಸಿಎಂಗಳಿಗೆ Z ಭದ್ರತೆ ಇತ್ತು.ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ Z ಭದ್ರತೆಯಿಂದ Y ಭದ್ರತೆಗೆ ಇಳಿಸಲಾಗಿತ್ತು. ಹೀಗಾಗಿ ಮತ್ತೆ Z ಭದ್ರತೆ ನೀಡುವಂತೆ ಮಾಜಿ ಸಿಎಂಗಳು ಸಿದ್ದರಾಮಯ್ಯಗೆ (Siddaramaiah)  ಮನವಿ ಮಾಡಿದ್ರು.

    ಕಾವೇರಿ ಹೋರಾಟ (Cauvery Protest) ಸೇರಿದಂತೆ ಹಲವು ಪ್ರತಿಭಟನೆ ಸೇರಿದಂತೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಳಕ್ಕೆ ಮಾಜಿ ಸಿಎಂಗಳು ಮನವಿ ಮಾಡಿದ್ರು. ಮಾಜಿ ಸಿಎಂಗಳ ಮನವಿ ಹಿನ್ನೆಲೆಯಲ್ಲಿ Z ಭದ್ರತೆ ಮುಂದುವರಿಸಲು ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪಟಾಕಿ ಬ್ಯಾನ್: ಸಿದ್ದರಾಮಯ್ಯ

    ಶೀಘ್ರವೇ ಮಾಜಿ ಸಿಎಂಗಳಿಗೆ Z ಭದ್ರತೆ ನೀಡಲು ಆದೇಶ ಹೊರಡಿಸುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಒಂದು ವೇಳೆ Z ಭದ್ರತೆ ಜಾರಿ ಆದರೆ ಮಾಜಿ ಸಿಎಂಗಳಾದ ಯಡಿಯೂರಪ್ಪ, ಎಸ್.ಎಂ.ಕೃಷ್ಣ ಕುಮಾರಸ್ವಾಮಿ, ಸದಾನಂದಗೌಡ, ಬಸವರಾಜ್ ಬೊಮ್ಮಾಯಿ ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್ ಈ ಸೌಲಭ್ಯ ಲಭ್ಯವಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊಟ್ಟೆ ಕೇಸ್‌ – ಸಿದ್ದರಾಮಯ್ಯಗೆ ಈಗ ಝಡ್‌ ಶ್ರೇಣಿಯ ಭದ್ರತೆ

    ಮೊಟ್ಟೆ ಕೇಸ್‌ – ಸಿದ್ದರಾಮಯ್ಯಗೆ ಈಗ ಝಡ್‌ ಶ್ರೇಣಿಯ ಭದ್ರತೆ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಬೆಂಗಳೂರಿನಲ್ಲಿ ಝಡ್‌ ಶ್ರೇಣಿಯ ಭದ್ರತೆಯನ್ನು ನೀಡಲಾಗಿದೆ.

    ಕೊಡಗಿನಲ್ಲಿ ಮೊಟ್ಟೆ ಎಸೆತ ಪ್ರಕರಣದ ಬಳಿಕ ಈಗ ಸಿದ್ದರಾಮಯ್ಯಗೆ ಎಸ್ಕಾರ್ಟ್‌ ಹೆಚ್ಚಿಸಲಾಗಿದೆ. ಅಧಿಕಾರಿಗಳು, ಸಿಬ್ಬಂದಿ ಸೇರಿ 21 ಮಂದಿಯನ್ನು ನಿಯೋಜನೆ ಮಾಡಲಾಗಿದೆ.

    ಮೂರು ಪಾಳಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸಬೇಕು. ಎಲ್ಲೇ ಹೋದರೂ ಮುಂಜಾಗ್ರತೆ ವಹಿಸುವಂತೆ ಪ್ರತಿ ಸಿಬ್ಬಂದಿಗೆ ಸೂಚಿಸಲಾಗಿದೆ.

     

    ಬೆಗಳೂರಿನಿಂದ ಹೊರ ಹೋಗುವ ವೇಳೆ ಹೈವೇ ಪ್ಯಾಟ್ರೋಲಿಂಗ್, ಸ್ಥಳೀಯ ಪೊಲೀಸರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಗೃಹ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ನಾಟಿ ಕೋಳಿ ಊಟ ಮಾಡಿ ಅಂಬಾರಿಗೆ ಪುಷ್ಪಾರ್ಚನೆ: ಸಿದ್ದು ವಿರುದ್ಧ ಪ್ರತಾಪ್‌ ಸಿಂಹ ಕಿಡಿ

    ಸಿದ್ದರಾಮಯ್ಯ ಅಲ್ಲದೇ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿಗೆ ಝಡ್ ಶ್ರೇಣಿಯ ಭದ್ರತೆ ನೀಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಗೆ ಝಡ್ ಪ್ಲಸ್ ಶ್ರೇಣಿಯ ಭದ್ರತೆ ನೀಡಲಾಗಿದೆ.

     

    ಜಿಲ್ಲಾ ಪ್ರವಾಸದ ವೇಳೆ ಸಂದರ್ಭಾನುಸಾರ ಸಿಬ್ಬಂದಿ ಹೆಚ್ಚಿಸಲು ಎಲ್ಲ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಪತಿ ಚುನಾವಣೆಯ BJP ಅಭ್ಯರ್ಥಿ ದ್ರೌಪದಿ ಮುರ್ಮುಗೆ ʼZ’ ಭದ್ರತೆ

    ರಾಷ್ಟ್ರಪತಿ ಚುನಾವಣೆಯ BJP ಅಭ್ಯರ್ಥಿ ದ್ರೌಪದಿ ಮುರ್ಮುಗೆ ʼZ’ ಭದ್ರತೆ

    ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರಿಗೆ ʼಝಡ್‌ʼ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರ್ಕಾರ ಕಲ್ಪಿಸಲಿದೆ.

    ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯಿಂದ 24 ಗಂಟೆಗಳ ಕಾಲ ‘Z’ ಶ್ರೇಣಿಯ ಸಶಸ್ತ್ರ ಭದ್ರತೆಯನ್ನು ಸರ್ಕಾರ ಒದಗಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಾರ್ಥನೆ ಸಲ್ಲಿಸುವ ಮೊದಲು ದೇವಸ್ಥಾನದ ನೆಲ ಗುಡಿಸಿದ ದ್ರೌಪದಿ ಮುರ್ಮು

    ಮಂಗಳವಾರ ಸಂಜೆ ಗೃಹ ಸಚಿವಾಲಯದಿಂದ ಬಂದ ಆದೇಶದ ನಂತರ ಸಿಆರ್‌ಪಿಎಫ್ ಬುಧವಾರ ಬೆಳಿಗ್ಗೆಯಿಂದ ಮುರ್ಮು ಅವರಿಗೆ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬಿಜೆಪಿಯು ಜಾರ್ಖಂಡ್‌ನ ಮಾಜಿ ಗವರ್ನರ್ ದ್ರೌಪದಿ ಮುರ್ಮು ಅವರನ್ನು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಾಗಿ ಮಂಗಳವಾರ ಹೆಸರಿಸಿದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

    Live Tv

  • ನಾನು ಸ್ವತಂತ್ರ ಹಕ್ಕಿ, ಮುಕ್ತವಾಗಿ ಜೀವಿಸಲು ಬಯಸುತ್ತೇನೆ: ಓವೈಸಿ

    ನಾನು ಸ್ವತಂತ್ರ ಹಕ್ಕಿ, ಮುಕ್ತವಾಗಿ ಜೀವಿಸಲು ಬಯಸುತ್ತೇನೆ: ಓವೈಸಿ

    ನವದೆಹಲಿ: ಝಡ್ ಶ್ರೇಣಿಯ ಭದ್ರತೆಗೆ ಒಪ್ಪಿಕೊಳ್ಳಿ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನವಿ ಮಾಡಿದ್ದಾರೆ.

    ಇತ್ತೀಚೆಗಷ್ಟೇ ದಾಳಿಗೊಳಗಾಗಿದ್ದ ಅಸಾದುದದ್ಧಿನ್ ಓವೈಸಿ ಅವರಿಗೆ ಸರ್ಕಾರ ಝಡ್ ಶ್ರೇಣಿ ಭದ್ರತೆ ಒಪ್ಪಿಕೊಳ್ಳುವಂತೆ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ಈ ಕುರಿತಾಗಿ ಮಾತನಾಡಿದ, ಒವೈಸಿ ಅವರು ಮಾರಕಾಸ್ತ್ರಗಳನ್ನು ಹೊಂದಿರುವ ಜನರು ನನ್ನ ಸುತ್ತಲೂ ಇರಬೇಕೆಂದು ನಾನು ಬಯಸುವುದಿಲ್ಲ. ನಾನು ಸ್ವತಂತ್ರ ಹಕ್ಕಿ. ಮುಕ್ತವಾಗಿ ಜೀವಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶವನ್ನು ಒಡೆದು ಆಳುವ ಕಾಂಗ್ರೆಸ್‌ ತುಕ್ಡೆ ತುಕ್ಡೆ ಗ್ಯಾಂಗ್‌ ಲೀಡರ್‌: ನರೇಂದ್ರ ಮೋದಿ


    ರಾಜ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ ಅವರು, ಕಾರಿನ ಮೇಲೆ ದಾಳಿ ನಡೆಸಿದ ಬಳಿಕ ಸರ್ಕಾರ ನೀಡಿರುವ ಝಡ್ ಕೆಟಗರಿ ಭದ್ರತೆಯನ್ನು ಸ್ವೀಕರಿಸಿ. ಓವೈಸಿ ಇನ್ನೂ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಸರ್ಕಾರದ ಮೌಲ್ಯಮಾಪನವು ಕಂಡುಹಿಡಿದಿದೆ. ಆದರೆ ಹೈದರಾಬಾದ್ ಸಂಸದರು ಸಿಆರ್‍ಪಿಎಫ್ ರಕ್ಷಣೆ ಪಡೆಯಲು ನಿರಾಕರಿಸಿದ್ದಾರೆ. ಒವೈಸಿ ಅವರು ನಮಗೆ ಕಳುಹಿಸಿದ ಮೌಖಿಕ ಮಾಹಿತಿಯ ಪ್ರಕಾರ, ಅವರು ಭದ್ರತೆಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ತಕ್ಷಣವೇ ಭದ್ರತೆಯನ್ನು ತೆಗೆದುಕೊಳ್ಳುವಂತೆ ಮತ್ತು ನಮ್ಮ ಮತ್ತು ಅವರ ಸುರಕ್ಷತೆಯ ಬಗ್ಗೆ ತಿಳಿಸುವಂತೆ ನಾನು ಈ ಸದನದ ಮೂಲಕ ಓವೈಸಿ ಅವರನ್ನು ವಿನಂತಿಸುತ್ತೇನೆ ಎಂದು ಶಾ ಮೇಲ್ಮನೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಖಡ್ಗ, ಭಯ, ದಬ್ಬಾಳಿಕೆಯಿಂದ ತನ್ವೀರ್ ಸೇಠ್ ಆಗಿದ್ದಾರೆ: ಪ್ರತಾಪ್ ಸಿಂಹ

    ಫೆಬ್ರವರಿ 3, 2022 ರಂದು ಉತ್ತರ ಪ್ರದೇಶದಲ್ಲಿ ಓವೈಸಿ ಅವರ ಕಾರಿನ ಮೇಲೆ ಗುಂಡು ಹಾರಿಸಲಾಗಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಿ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು. ಹೀಗಾಗಿ ಓವೈಸಿ ಅವರಿಗೆ ಕೇಂದ್ರ ಸರ್ಕಾರ ಭದ್ರತೆಯನ್ನು ನೀಡುವುದಾಗಿ ಹೇಳಿತ್ತು. ಆದರೆ ಭದ್ರತೆಯನ್ನು ಓವೈಸಿ ನಿರಾಕರಿಸಿದ್ದಾರೆ.

  • ನಾನು ಸಾವಿಗೆ ಹೆದರಲ್ಲ – Z ಶ್ರೇಣಿಯ ಭದ್ರತೆ ತಿರಸ್ಕರಿಸಿದ ಓವೈಸಿ

    ನಾನು ಸಾವಿಗೆ ಹೆದರಲ್ಲ – Z ಶ್ರೇಣಿಯ ಭದ್ರತೆ ತಿರಸ್ಕರಿಸಿದ ಓವೈಸಿ

    ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡು ಹಾರಿಸಿದ ಪ್ರಕರಣ ಸಂಬಂಧ ಅವರಿಗೆ ಝೆಡ್ ಶ್ರೇಣಿಯ ಭದ್ರತೆ ನೀಡಲು ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಆದರೆ ಈ ಭದ್ರತೆಯನ್ನು ಇದೀಗ ಓವೈಸಿ ನಿರಾಕರಿಸಿದ್ದಾರೆ.

    ಈ ವಿಚಾರವನ್ನು ಇಂದು ಲೋಕಸಭಾ ಕಲಾಪದಲ್ಲಿ ಪ್ರಸ್ತಾಪಿಸಿದ ಓವೈಸಿ, ನಾನು ಸಾವಿಗೆ ಹೆದರಲ್ಲ. ಹೀಗಾಗಿ ನನಗೆ ಕೇಂದ್ರ ನೀಡುತ್ತಿರುವ ಝೆಡ್ ಮಾದರಿಯ ಭದ್ರತೆ ಬೇಡ, ಅದನ್ನು ನಾನು ನಿರಾಕರಿಸುತ್ತೇನೆ. ನನ್ನನ್ನು ‘ಎ’ ವರ್ಗದ ನಾಗರಿಕನನ್ನಾಗಿ ಗುರುತಿಸಿ. ನಾನು ಇನ್ನೂ ಸುಮ್ಮನಿರಲು ಸಾಧ್ಯವಿಲ್ಲ, ದಯಮಾಡಿ ನನಗೆ ನ್ಯಾಯ ಕೊಡಿ. ಯಾರು ನನ್ನ ವಾಹನದ ಮೇಲೆ ಗುಂಡು ಹಾರಿಸಿದರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಅಲ್ಲದೆ ಆ ದುಷ್ಕರ್ಮಿಗಳನ್ನು ಭಯೋತ್ಪಾದನಾ ವಿರೋಧಿ ಕೇಸ್ ದಾಖಲಿಸಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಲೋಕಸಭೆ ಕಲಾಪದಲ್ಲಿ ಹಿಜಬ್ ಚರ್ಚೆ – ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಆಗ್ರಹ

    ಭದ್ರತೆ ನೀಡುವಂತೆ ಕೇಂದ್ರ ಆದೇಶ:
    ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡು ಹಾರಿಸಿದ ಘಟನೆ ದೆಹಲಿ-ಮೀರತ್ ಇ-ವೇನಲ್ಲಿ ಛಜರ್ಸಿ ಟೋಲ್ ಬಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಓವೈಸಿಗೆ ಭದ್ರತೆಗೆ ಕೇಂದ್ರ ಸರ್ಕಾರ ಝಡ್ ಮಾದರಿಯ ಭದ್ರತೆ ನೀಡಲು ಆದೇಶ ನೀಡಿದ್ದು, ಸಿಆರ್ ಪಿಎಫ್‍ನ Z ಕೆಟಗರಿ ಭದ್ರತೆ ಇರಲಿದೆ. ಪ್ರಾಣ ಬೆದರಿಕೆ ಇರುವವರಿಗೆ 4-6 NSG ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 22 ಸಿಬ್ಬಂದಿ ಇರುವುದು ‘Z Z category ಭದ್ರತೆಯಾಗಿದೆ. ಇದನ್ನು ದೆಹಲಿ ಪೊಲೀಸ್ ಅಥವಾ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಅಥವಾ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಸಿಬ್ಬಂದಿ ಕಾರ್ ಜೊತೆಗೆ ಭದ್ರತೆಗೆ ಒದಗಿಸುತ್ತಾರೆ. ಇದನ್ನೂ ಓದಿ: ಕಾಂಗ್ರೆಸ್‌ ಕೆಲಸ ಮಾಡಿದ್ದರೆ, ನಾನು ರಾಜಕೀಯಕ್ಕೆ ಬರುವ ಅಗತ್ಯವಿರುತ್ತಿರಲಿಲ್ಲ: ಕೇಜ್ರಿವಾಲ್‌

    ನಿನ್ನೆ ನಡೆದಿದ್ದೇನು?:
    ಉತ್ತರಪ್ರದೇಶದ ಮೀರತ್‍ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಓವೈಸಿ ವಾಹನದ ಮೇಲೆ 3-4 ಸುತ್ತು ಗುಂಡು ಹಾರಿಸಲಾಗಿತ್ತು. ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಳಿಕ ಓರ್ವನನ್ನು ಬಂಧಿಸಲಾಗಿತ್ತು. ಈ ಸಂಬಂಧ ಟ್ವೀಟ್ ಮಾಡಿದ್ದ ಓವೈಸಿ, ಎಲ್ಲರೂ ಸುರಕ್ಷಿತವಾಗಿರುವುದಾಗಿ ಮಾಹಿತಿ ನೀಡಿದ್ದರು. ಅಲ್ಲದೆ ಗುಂಡು ಹಾರಿಸಿದ ವ್ಯಕ್ತಿ ಆಯುಧಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುವುದಾಗಿ ತಿಳಿಸಿದ್ದರು. ನಾನು ಮೀರತ್ ನಿಂದ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಟೋಲ್ ಬಳಿ ಇಬ್ಬರು ದುಷ್ಕರ್ಮಿಗಳು ನನ್ನ ವಾಹನದ ಮೇಲೆ 4 ಸುತ್ತು ಗುಂಡು ಹಾರಿಸಿದ್ದಾರೆ. ಇವರ ಜೊತೆ ಇನ್ನೂ 3-4 ಮಂದಿ ಇದ್ದರು. ಗುಂಡು ಹಾರಿಸಿದ ಪರಿಣಾಮ ನನ್ನ ವಾಹನ ಪಂಕ್ಚರ್ ಆಯಿತು. ಹೀಗಾಗಿ ನಾನು ಬೇರೆ ವಾಹನದಲ್ಲಿ ಅಲ್ಲಿಂದ ತೆರಳಿದೆ ಎಂದು ಓವೈಸಿ ತಮ್ಮ ಟ್ವೀಟ್ ನಲ್ಲಿ ವಿವರಿಸಿದ್ದರು.

    ಫೋಟೋ ಸಮೇತ ಓವೈಸಿ ಟ್ವೀಟ್ ಮಾಡಿದ್ದು, ಫೋಟೋದಲ್ಲಿ ಓವೈಸಿ ಇದ್ದ ಕಾರಿಗೆ ಗುಂಡು ತಾಗಿರುವುದನ್ನು ಹಾಗೂ ಟೈಯರ್ ಗಳು ಪಂಕ್ಚರ್ ಆಗಿರುವುದನ್ನು ಕಾಣಬಹುದಾಗಿದೆ. ಘಟನೆ ನಡೆದ ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು.

  • ಓವೈಸಿಗೆ ಝಡ್ ಮಾದರಿಯ ಭದ್ರತೆ ನೀಡಿದ ಕೇಂದ್ರ ಸರ್ಕಾರ

    ಓವೈಸಿಗೆ ಝಡ್ ಮಾದರಿಯ ಭದ್ರತೆ ನೀಡಿದ ಕೇಂದ್ರ ಸರ್ಕಾರ

    ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡು ಹಾರಿಸಿದ ಘಟನೆ ದೆಹಲಿ-ಮೀರತ್ ಇ-ವೇನಲ್ಲಿ ಛಜರ್ಸಿ ಟೋಲ್ ಬಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ( Z )ಝಡ್ ಮಾದರಿಯ ಭದ್ರತೆ ನೀಡಲು ಕೇಂದ್ರ ಸರ್ಕಾರ ಆದೇಶ ನೀಡಿದೆ.

    ಓವೈಸಿಗೆ ಭದ್ರತೆಗೆ ಕೇಂದ್ರ ಸರ್ಕಾರ ಝಡ್ ಮಾದರಿಯ ಭದ್ರತೆ ನೀಡಲು ಆದೇಶ ನೀಡಿದ್ದು, ಸಿಆರ್‌ಪಿಎಫ್‌ನ Z ಕೆಟಗರಿ ಭದ್ರತೆ ಇರಲಿದೆ. ಪ್ರಾಣ ಬೆದರಿಕೆ ಇರುವವರಿಗೆ 4-6 NSG ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 22 ಸಿಬ್ಬಂದಿ ಇರುವುದು ‘ಝಡ್ ಕೆಟಗರಿ’ ಭದ್ರತೆಯಾಗಿದೆ. ಇದನ್ನು ದೆಹಲಿ ಪೊಲೀಸ್ ಅಥವಾ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ((ITBP) ಅಥವಾ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF)) ಸಿಬ್ಬಂದಿ   ಕಾರ್ ಜೊತೆಗೆ  ಭದ್ರತೆಗೆ ಒದಗಿಸುತ್ತಾರೆ. ಇದನ್ನೂ ಓದಿ:  ದೆಹಲಿಯತ್ತ ತೆರಳುತ್ತಿದ್ದ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ

    ನಡೆದಿದ್ದೇನು?: ಉತ್ತರಪ್ರದೇಶದ ಮೀರತ್‍ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಓವೈಸಿ ವಾಹನದ ಮೇಲೆ 3-4 ಸುತ್ತು ಗುಂಡು ಹಾರಿಸಲಾಗಿದೆ. ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಳಿಕ ಓರ್ವನನ್ನು ಬಂಧಿಸಲಾಗಿತ್ತು.

    ಈ ಸಂಬಂಧ ಟ್ವೀಟ್ ಮಾಡಿರುವ ಓವೈಸಿ, ಎಲ್ಲರೂ ಸುರಕ್ಷಿತವಾಗಿರುವುದಾಗಿ ಮಾಹಿತಿ ನೀಡಿದ್ದರು. ಅಲ್ಲದೆ ಗುಂಡು ಹಾರಿಸಿದ ವ್ಯಕ್ತಿ ಆಯುಧಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುವುದಾಗಿ ತಿಳಿಸಿದ್ದರು. ನಾನು ಮೀರತ್ ನಿಂದ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಟೋಲ್ ಬಳಿ ಇಬ್ಬರು ದುಷ್ಕರ್ಮಿಗಳು ನನ್ನ ವಾಹನದ ಮೇಲೆ 4 ಸುತ್ತು ಗುಂಡು ಹಾರಿಸಿದ್ದಾರೆ. ಇವರ ಜೊತೆ ಇನ್ನೂ 3-4 ಮಂದಿ ಇದ್ದರು. ಗುಂಡು ಹಾರಿಸಿದ ಪರಿಣಾಮ ನನ್ನ ವಾಹನ ಪಂಕ್ಚರ್ ಆಯಿತು. ಹೀಗಾಗಿ ನಾನು ಬೇರೆ ವಾಹನದಲ್ಲಿ ಅಲ್ಲಿಂದ ತೆರಳಿದೆ ಎಂದು ಓವೈಸಿ ತಮ್ಮ ಟ್ವೀಟ್ ನಲ್ಲಿ ವಿವರಿಸಿದ್ದರು.

    ಫೋಟೋ ಸಮೇತ ಓವೈಸಿ ಟ್ವೀಟ್ ಮಾಡಿದ್ದು, ಫೋಟೋದಲ್ಲಿ ಓವೈಸಿ ಇದ್ದ ಕಾರಿಗೆ ಗುಂಡು ತಾಗಿರುವುದನ್ನು ಹಾಗೂ ಟೈಯರ್ ಗಳು ಪಂಕ್ಚರ್ ಆಗಿರುವುದನ್ನು ಕಾಣಬಹುದಾಗಿದೆ. ಘಟನೆ ನಡೆದ ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಇದೀಗ ಅವರಿಗೆ Z ಮಾದರಿಯ ಭದ್ರತೆ ನೀಡಲು ಕೇಂದ್ರ ಸರ್ಕಾರ ಆದೇಶ ನೀಡಿದೆ.

  • ಅಂಬಾನಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆ ತೆಗೆಯಿರಿ – ಅರ್ಜಿ ವಜಾಗೊಳಿಸಿದ ಕೋರ್ಟ್

    ಅಂಬಾನಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆ ತೆಗೆಯಿರಿ – ಅರ್ಜಿ ವಜಾಗೊಳಿಸಿದ ಕೋರ್ಟ್

    ಮುಂಬೈ: ಏಷ್ಯಾದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆಯನ್ನು ತೆಗೆದುಹಾಕಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.

    ಮಹಾರಾಷ್ಟ್ರದ ಮುಂಬೈನ ಅಂಧೇರಿ ಪ್ರದೇಶದ ನಿವಾಸಿ ಹಿಮಾಂಶು ಅಗರ್‌ವಾಲ್ ಈ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದರು. ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಅಗರ್‌ವಾಲ್, ಅಂಬಾನಿ ಹಾಗೂ ಅವರ ಕುಟುಂಬಕ್ಕೆ ಭದ್ರತೆ ನೀಡುವುದರಿಂದ ರಾಜ್ಯ ಹಾಗೂ ತೆರಿಗೆ ಪಾವತಿದಾರರಿಗೆ ಹೊರೆಯಾಗಲಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

    ಇದೇ ಸಂದರ್ಭದಲ್ಲಿ ಅಂಬಾನಿ ಪರ ವಕೀಲರು ಸ್ಪಷ್ಟಪಡಿಸಿ, ಕುಟುಂಬವೂ ಭದ್ರತೆಯ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದೆ. ಹೀಗಾಗಿ ತೆರಿಗೆ ಪಾವತಿಸುವವರ ಮೇಲೆ ಯಾವುದೇ ಹೊರೆಯಾಗುವುದಿಲ್ಲ ಎಂದು ವಾದಿಸಿದರು. ವಾದವನ್ನು ಆಲಿಸಿದ ನ್ಯಾಯಮೂರ್ತಿ ರಂಜಿತ್ ಮೋರ್ ನೇತೃತ್ವದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿತು.

    ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಭದ್ರತಾ ಪಡೆ (ಎಸ್‍ಪಿಜಿ)ಯಿಂದ ಭದ್ರತೆ ನೀಡಲಾಗಿದ್ದು, ಉಳಿದಂತೆ ಬೆದರಿಕೆ ಇರುವವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತದೆ. ಝಡ್ ಪ್ಲಸ್ ಭದ್ರತೆಯನ್ನು ರಾಷ್ಟ್ರೀಯ ಭದ್ರತಾ ದಳ(ಎನ್‍ಎಸ್‍ಜಿ) ನೀಡುತ್ತದೆ. ಎಂಪಿ5 ಬಂದೂಕುಗಳು, ಅಧುನಿಕ ಗ್ಯಾಜೆಟ್‍ಗಳು, ಬೆಂಗಾವಲು ವಾಹನಗಳನ್ನು ಹೊಂದಿದೆ ಎಂದು ಅಗರ್‌ವಾಲ್ ಅವರ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

    ಮುಕೇಶ್ ಅಂಬಾನಿಯವರ ಕುಟುಂಬ ರಾಜಕೀಯದಲ್ಲಿ ಭಾಗವಹಿಸದಿರುವುದರಿಂದ ಕುಟುಂಬಕ್ಕೆ ಯಾವುದೇ ಬೆದರಿಕೆ ಇಲ್ಲ. ಹೀಗಾಗಿ ಸೈದ್ಧಾಂತಿಕ ಸಂಘರ್ಷಕ್ಕೆ ಕಾರಣಗಳಿಲ್ಲ. ಅಲ್ಲದೆ ಅಂಬಾನಿಯವರ ಮೇಲೆ ಈವರೆಗೆ ದಾಳಿ ನಡೆಸಿರುವ ಹಾಗೂ ದಾಳಿ ನಡೆಸಲು ಪ್ರಯತ್ನಿಸಿರುವ ಪ್ರಕರಣಗಳಿಲ್ಲ. ದೊಡ್ಡ ಬುಸಿನೆಸ್ ಕಂಪನಿ ಸಿಇಓ ಆಗಿರುವವರು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಾರೆ ಎಂದು ಅಗರ್‍ವಾಲ್ ತಿಳಿಸಿದ್ದಾರೆ.

    ಜನಸಾಮಾನ್ಯರಿಗೆ ಹೋಲಿಸಿದರೆ ಪೊಲೀಸರ ಅನುಪಾತ ಕಡಿಮೆ ಇದೆ. ಹೀಗಾಗಿ ಭದ್ರತೆಯನ್ನು ತೆಗೆಯಬೇಕು. ಪೊಲೀಸ್ ಸಿಬ್ಬಂದಿ ಕೊರತೆಯಿಂದಾಗಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. 666 ಜನರಿಗೆ ಒಬ್ಬ ಪೊಲೀಸ್ ಹಾಗೂ ಪ್ರತಿ ವಿಐಪಿಗೆ ಮೂವರು ಪೊಲೀಸರಿದ್ದಾರೆ. ಇದು ಸಾರ್ವಜನಿಕ ಹಿತದೃಷ್ಟಿಯಿಂದ ಸಲ್ಲಿಸಿದ ಅರ್ಜಿಯಾಗಿದ್ದು, ಇದರ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ಕೋರಿದ್ದರು. ನ್ಯಾಯಾಲಯ ಅರ್ಜಿದಾರರ ವಾದವನ್ನು ಮಾನ್ಯ ಮಾಡದೇ ತಿರಸ್ಕರಿಸಿದೆ.