Tag: Z Plus Security

  • PMO ಅಧಿಕಾರಿಯೆಂದು Z Plus ಸೆಕ್ಯೂರಿಟಿ ಪಡೆದು ಶ್ರೀನಗರದಲ್ಲಿ ಓಡಾಡಿದ್ದ ವಂಚಕ ಅರೆಸ್ಟ್

    PMO ಅಧಿಕಾರಿಯೆಂದು Z Plus ಸೆಕ್ಯೂರಿಟಿ ಪಡೆದು ಶ್ರೀನಗರದಲ್ಲಿ ಓಡಾಡಿದ್ದ ವಂಚಕ ಅರೆಸ್ಟ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಪ್ರಧಾನಮಂತ್ರಿ ಕಾರ್ಯಾಲಯದ ಹಿರಿಯ ಅಧಿಕಾರಿ ( PMO Official) ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಗುಜರಾತ್‍ನ ವಂಚಕನೊಬ್ಬ ಪೊಲೀಸರು ಬಂಧಿಸಿದ್ದಾರೆ.

    ವಂಚಕನನ್ನು ಕಿರಣ್ ಭಾಯ್ ಪಟೇಲ್ ಎಂದು ಗುರುತಿಸಲಾಗಿದೆ. ಕಿರಣ್ ಭಾಯ್ ಪಟೇಲ್ ಈ ವರ್ಷದ ಆರಂಭದಲ್ಲಿ ಶ್ರೀನಗರಕ್ಕೆ ( Srinagar) 2 ಬಾರಿ ಭೇಟಿ ನೀಡಿದ್ದ. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದ. ಅಷ್ಟೇ ಅಲ್ಲದೇ ಝಡ್ ಪ್ಲಸ್ ಭದ್ರತೆ ( Z-plus security), ಬುಲೆಟ್ ಪ್ರೂಫ್ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ, ಪಂಚತಾರಾ ಹೋಟೆಲ್‍ನಲ್ಲಿ ಅಧಿಕೃತ ವಸತಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡಿದ್ದ.

    ಪ್ರಧಾನಿ ಕಾರ್ಯಾಲಯದಲ್ಲಿ ಕಾರ್ಯತಂತ್ರ ಮತ್ತು ಪ್ರಚಾರಕ್ಕಾಗಿ ಹೆಚ್ಚುವರಿ ನಿರ್ದೇಶಕರಂತೆ ನಾಟಕ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಜಮ್ಮು ಕಾಶ್ಮೀರದ ವಿವಿಧೆಡೆಯಲ್ಲಿ ಭದ್ರತಾ ಪಡೆ ಹಾಗೂ ಪೊಲೀಸರ ಬೆಂಗಾವಲಿನಲ್ಲಿ ವಿವಿಧೆಡೆ ಸಂಚರಿಸಿದ್ದ. ದೂಧಪತ್ರಿಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದ. ಆದರೆ ಈ ಸಂಬಂಧ ಪೊಲೀಸರು ಅನುಮಾನಗೊಂಡಿದ್ದಾರೆ. ಅಷ್ಟೇ ಅಲ್ಲದೇ ಗುಪ್ತಚರ ಸಂಸ್ಥೆಯು ಜೆಕೆ ಪೊಲೀಸರಿಗೆ ಎಚ್ಚರಿಕೆ ನೀಡಿದೆ ಎಂದು ಮೂಲಗಳ ತಿಳಿಸಿವೆ. ಇದನ್ನೂ ಓದಿ: ನಾನು ಕನಸು, ಮನಸ್ಸಿನಲ್ಲಿಯೂ ಜಾತಿ ರಾಜಕಾರಣ ಮಾಡಿಲ್ಲ: ಸಿ.ಟಿ ರವಿ

    ಈ ಹಿನ್ನೆಲೆಯಲ್ಲಿ ಆತನನ್ನು ಪರಿಶೀಲಿಸಿದ ಪೊಲೀಸರು ಶ್ರೀನಗರದ ಹೋಟೆಲ್‍ನಲ್ಲಿ ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರ ತಂಡವೂ ತನಿಖೆಗೆ ಸಹಾಯ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಿರಣ್ ಪಟೇಲ್ 10 ದಿನಗಳ ಹಿಂದೆಯೇ ಬಂಧಿಸಲಾಗಿದ್ದು, ಅದನ್ನು ಪೊಲೀಸರು ರಹಸ್ಯವಾಗಿಟ್ಟಿದ್ದರು. ಆದರೆ ನ್ಯಾಯಾಂಗ ಬಂಧನ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

    ಕಿರಣ್ ಪಟೇಲ್‍ನ ಟ್ವಿಟ್ಟರ್‌ನಲ್ಲಿ ಬಿಜೆಪಿ ಗುಜರಾತ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ಸಿನ್ಹ್ ವಘೇಲಾ ಸೇರಿದಂತೆ ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾನೆ. ಅಷ್ಟೇ ಅಲ್ಲದೇ ವರ್ಜೀನಿಯಾದ ಕಾಮನ್‍ವೆಲ್ತ್ ವಿವಿಯಿಂದ ಪಿಹೆಚ್‍ಡಿ, ಐಐಎಂ ತಿರುಚ್ಚಿಯಿಂದ ಎಂಬಿಎ ಮತ್ತು ಬಿ.ಇ ಕಂಪ್ಯೂಟರ್ ಎಂಜಿನಿಯರ್ ಎಂದು ಬರೆದುಕೊಂಡಿದ್ದಾನೆ.

    ನಕಲಿ ಅಧಿಕಾರಿಯನ್ನು ಪತ್ತೆ ಹಚ್ಚುವಲ್ಲಿ ವಿಫಲರಾದ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನನ್ನ ಆಡು ಭಾಷೆ, ನನ್ನ ಸಂಸ್ಕೃತಿ, ನನ್ನ ಹೋರಾಟ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ: ಶಿವಲಿಂಗೇಗೌಡ

  • ರಾಹುಲ್ ಗಾಂಧಿಯಿಂದ 113 ಬಾರಿ ಭದ್ರತಾ ನಿಯಮ ಉಲ್ಲಂಘನೆ: CRPF

    ರಾಹುಲ್ ಗಾಂಧಿಯಿಂದ 113 ಬಾರಿ ಭದ್ರತಾ ನಿಯಮ ಉಲ್ಲಂಘನೆ: CRPF

    ನವದೆಹಲಿ: ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ರಾಹುಲ್ ಗಾಂಧಿ (Rahul Gandhi) ಹಲವು 113 ಬಾರಿ ಭದ್ರತಾ ನಿಯಮ ಉಲ್ಲಂಘನೆ ಮಾಡಿರುವುದಾಗಿ ಕೇಂದ್ರದ ಅರೆಸೇನಾ ಪಡೆ ಸಿಆರ್‌ಪಿಎಫ್ (CRPF) ಹೇಳಿದೆ.

    ಡಿಸೆಂಬರ್ 24ರ ಯಾತ್ರೆಯಲ್ಲಿ ಭದ್ರತಾ ವೈಫಲ್ಯ ಉಂಟಾಗಿರುವುದಾಗಿ ಕಾಂಗ್ರೆಸ್ ಮಾಡಿರುವ ಆರೋಪಗಳಿಗೆ ಸಿಆರ್‌ಪಿಎಫ್ ಪ್ರತಿಕ್ರಿಯಿಸಿದೆ. ಇದನ್ನೂ ಓದಿ: ಎರಡು ಬಾರಿ ಮಾತ್ರ ಮಗನ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಹೀರಾಬೆನ್!

    ಪೊಲೀಸರು (Police) ರಾಹುಲ್ ಗಾಂಧಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಬಗ್ಗೆ ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (KC Venugopal) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದಿದ್ದರು. ರಾಷ್ಟ್ರರಾಜಧಾನಿಯಲ್ಲಿ ಭದ್ರತಾ ವೈಫಲ್ಯವಾಗಿರುವ ಆರೋಪವನ್ನು ಭದ್ರತಾ ಪಡೆಯು ನಿರಾಕರಿಸಿದೆ.

    ರಾಹುಲ್ ಗಾಂಧಿಗೆ ಅವರಿಗೆ `ಝಡ್ ಪ್ಲಸ್’ (Z Plus Security) ಭದ್ರತೆ ನೀಡಲಾಗಿದ್ದು, ಭಾರತ್ ಜೋಡೋ ಯಾತ್ರೆಯು ಪಂಜಾಬ್, ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶಿಸಿದಾಗ ಅಗತ್ಯ ಭದ್ರತೆ ಖಚಿತಪಡಿಸುವಂತೆ ಕಾಂಗ್ರೆಸ್ ಕೋರಿದೆ. ಇದನ್ನೂ ಓದಿ: ಹೀರಾಬೆನ್ ಅಗಲಿಕೆಗೆ ಗಣ್ಯರ ಸಂತಾಪ

    ರಾಜ್ಯದ ಪೊಲೀಸರು ಹಾಗೂ ಇತರೆ ಭದ್ರತಾ ಇಲಾಖೆಗಳ ಸಮನ್ವಯದೊಂದಿಗೆ ಸಿಆರ್‌ಪಿಎಫ್ ರಾಹುಲ್ ಗಾಂಧಿ ಅವರಿಗೆ ಅಗತ್ಯ ಭದ್ರತೆಯನ್ನು ಒಗಿಸಿತ್ತು. ಡಿಸೆಂಬರ್ 24ರ ಕಾರ್ಯಕ್ರಮಕ್ಕಾಗಿ ಎರಡು ದಿನ ಮುಂಚಿತವಾಗಿಯೇ ಭದ್ರತಾ ಸಂಪರ್ಕ ಸುಧಾರಣೆ (ಎಎಸ್‌ಎಲ್) ನಡೆಸಲಾಗಿತ್ತು ಎಂದು ಸಿಆರ್‌ಪಿಎಫ್ ಹೇಳಿದೆ. ಪ್ರಮುಖ ಕಾರ್ಯಕ್ರಮಗಳಲ್ಲಿ ವಿಐಪಿಗಳ ಭದ್ರತೆಗಾಗಿ ಭದ್ರತಾ ಪಡೆಗಳು ಯೋಜನೆ ರೂಪಿಸಲು ನಡೆಸುವ ಸಭೆಯನ್ನು ಎಎಸ್‌ಎಲ್ ಎನ್ನಲಾಗುತ್ತದೆ.

    ದೆಹಲಿಯಲ್ಲಿ ಯಾತ್ರೆಯ ದಿನ ಭದ್ರತೆಗೆ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನು ಪೂರ್ಣವಾಗಿ ಅನುಸರಿಸಲಾಗಿದೆ. ಈ ಬಗ್ಗೆ ದೆಹಲಿ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಆದ್ರೆ ರಾಹುಲ್ ಗಾಂಧಿ ಅವರು ಪದೇ ಪದೇ ಭದ್ರತಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ. ಸುರಕ್ಷತೆಗಾಗಿ ಭದ್ರತೆ ನಿಯೋಜಿಸಿದ್ದರೆ, ರಕ್ಷಣೆಗೆ ಒಳಪಟ್ಟಿರುವ ವ್ಯಕ್ತಿಯೇ ಭದ್ರತಾ ನಿಯಮ ಮುರಿಯುವಂತೆ ಮಾಡಿದ್ದಾರೆ. ಅವರಿಗೂ ಇದನ್ನು ಆಗಾಗ್ಗೆ ತಿಳಿಸಲಾಗಿದೆ ಎಂದು ಪ್ರತಿ ಆರೋಪ ಮಾಡಿದೆ.

    Live Tv
    [brid partner=56869869 player=32851 video=960834 autoplay=true]