Tag: Z+ category

  • ಮುಖೇಶ್ ಅಂಬಾನಿಗೆ Z+ ಭದ್ರತೆ

    ಮುಖೇಶ್ ಅಂಬಾನಿಗೆ Z+ ಭದ್ರತೆ

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಗೆ (Mukesh Ambani) ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಝಡ್ ಪ್ಲಸ್ ಭದ್ರತೆಯನ್ನು (Z+ category) ನೀಡಿದೆ.

    ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಉದ್ಯಮಿ ಅಂಬಾನಿಗೆ ಭದ್ರತೆಯನ್ನು (Security) ಹೆಚ್ಚಿಸುವ ಕುರಿತು ಕೇಂದ್ರ ನಿರ್ಧಾರವನ್ನು ತೆಗೆದುಕೊಂಡಿದೆ. ಅಂಬಾನಿಗೆ ಬರುತ್ತಿರುವ ಬೆದರಿಕೆಗಳ ಕುರಿತಂತೆ ಕೇಂದ್ರ ಗುಪ್ತಚರ ಸಂಸ್ಥೆ ಹಾಗೂ ಭದ್ರತಾ ಸಂಸ್ಥೆಗಳ ಮಾಹಿತಿ ಆಧರಿಸಿ ಕೇಂದ್ರ ಗೃಹ ಸಚಿವಾಲಯವು ಈ ಶಿಫಾರಸು ಮಾಡಿದೆ.

    ಕಳೆದ ವರ್ಷ ಮುಖೇಶ್ ಅಂಬಾನಿ ಅವರ ಮುಂಬೈಯಲ್ಲಿರುವ ಆಂಟಿಲಿಯಾ ನಿವಾಸದ ಹೊರಗೆ 20 ಸ್ಫೋಟಕ ಜಿಲೆಟಿನ್ ಸ್ಟಿಕ್‌ಗಳು ಹಾಗೂ ಬೆದರಿಕೆ ಪತ್ರವಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು.  ಅದಾದ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಅದಾದ ಬಳಿಕ ಇದೀಗ ಮತ್ತೆ ಅಂಬಾನಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಇದೀಗ ಮತ್ತೇ ಭದ್ರತೆಯನ್ನು ಹೆಚ್ಚಿಸಿದೆ. ಇದನ್ನೂ ಓದಿ: ನೆಹರೂ-ಗಾಂಧಿ ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್ ಶೂನ್ಯ: ದಿಗ್ವಿಜಯ ಸಿಂಗ್

    2013ರಿಂದ ಅಂಬಾನಿಗೆ ಪಾವತಿ ಆಧಾರದ ಮೇಲೆ ಸಿಆರ್‌ಪಿಎಫ್ ಕಮಾಂಡೊಗಳ ಝೆಡ್ ಭದ್ರತೆಯನ್ನು ಒದಗಿಸಲಾಗಿತ್ತು. ಹಾಗೂ ಅವರ ಪತ್ನಿ ನೀತಾ ಅಂಬಾನಿ ಅವರಿಗೂ ಸಶಸ್ತ್ರ ಪಡೆಯ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಇತ್ತೀಚಿನ ಬ್ಲೂಮ್‍ಬರ್ಗ್ ಸೂಚ್ಯಂಕದ ಪ್ರಕಾರ ಮುಖೇಶ್ ಅಂಬಾನಿ ವಿಶ್ವದ 10ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.  ಇದನ್ನೂ ಓದಿ: ಪ್ರವೀಣ್ ಪತ್ನಿಗೆ ಗ್ರೂಪ್ ಸಿ ಹುದ್ದೆ- ಸರ್ಕಾರ ಆದೇಶ

    Live Tv
    [brid partner=56869869 player=32851 video=960834 autoplay=true]