Tag: Yuvraj

  • ಯಾವುದೇ ಹಾಡನ್ನು ಕದ್ದಿಲ್ಲ, ಕಾನೂನು ಸಮರಕ್ಕೆ ಸಿದ್ಧ: ಚಂದನ್‌ ಶೆಟ್ಟಿ

    ಯಾವುದೇ ಹಾಡನ್ನು ಕದ್ದಿಲ್ಲ, ಕಾನೂನು ಸಮರಕ್ಕೆ ಸಿದ್ಧ: ಚಂದನ್‌ ಶೆಟ್ಟಿ

    ಹುಬ್ಬಳ್ಳಿ: ನಾನು ಯಾವುದೇ ಹಾಡು, ಹಾಡಿನ ಸಾಲನ್ನು ಕದ್ದಿಲ್ಲ ಎಂದು ಗಾಯಕ ಚಂದನ್‌ ಶೆಟ್ಟಿ (Chandan Shetty) ಹೇಳಿದ್ದಾರೆ.

    ಕಾಟನ್ ಕ್ಯಾಂಡಿ (Cotton Candy) ಹಾಡಿನ ತುಣುಕುಗಳನ್ನು ಕದಿಯಲಾಗಿದೆ ಎಂಬ ಆರೋಪವನ್ನು ಗಾಯಕ ಚಂದನ ಶೆಟ್ಟಿ ತಳ್ಳಿಹಾಕಿದ್ದಾರೆ.

    ಹುಬ್ಬಳ್ಳಿಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು ಇದು ಕಾಕತಾಳೀಯ. ನಾನು ಯಾವುದೇ ಹಾಡು, ಹಾಡಿನ ಸಾಲು, ಟ್ಯೂನ್ ಕದ್ದಿಲ್ಲ. ಯಾವುದೋ ವಿವ್ ಇಲ್ಲದ ಸಾಂಗ್ ಕದ್ದು ನಾನು ಹಾಡು ಮಾಡುವ ಪರಿಸ್ಥಿತಿ ಬಂದಿಲ್ಲ ಎಂದು ಹೇಳಿದರು.

     

    ಈ ಕುರಿತು ಕಾನೂನು ಹೋರಾಟ ಮಾಡಲು ಸಿದ್ಧನಿದ್ದೇನೆ. ನಾನು ಬಹಳಷ್ಟು ಕಷ್ಟಪಟ್ಟು ಹಾಡು ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಟನ್ ಕ್ಯಾಂಡಿ V/S ವೈ ಬುಲ್ ರ‍್ಯಾಪರ್‌ ವಾರ್ – ಚಂದನ್ ಶೆಟ್ಟಿ ಮೇಲೆ ಟ್ಯೂನ್ ಕದ್ದ ಆರೋಪ

    ಏನಿದು ವಿವಾದ?
    ಹೊಸ ವರ್ಷಕ್ಕೆ ರಿಲೀಸ್ ಆದ ಕಾಟನ್ ಕ್ಯಾಂಡಿ ಸಾಂಗ್ ಟ್ಯೂನ್ ನಾನು ಆರು ವರ್ಷದ ಹಿಂದೆ ಮಾಡಿದ ವೈ ಬುಲ್ (Y Bull) ಪಾರ್ಟಿ ಸಾಂಗ್ ಟ್ಯೂನ್ ಒಂದೇ ಇದೆ ಎಂದು ಯುವರಾಜ್ ಹೇಳಿದ್ದಾರೆ. ಮೊದಲ ಪಲ್ಲವಿ, ಸೆಕೆಂಡ್ ಚರಣವನ್ನು ಚಂದನ್‌ ಶೆಟ್ಟಿ ಕಾಪಿ ಮಾಡಿದ್ದಾರೆ. ಆರು ವರ್ಷಗಳ ಹಿಂದೆ ತುಂಬಾನೇ ಕಷ್ಟಪಟ್ಟು ಹಣ ಕೂಡಿಟ್ಟು ರ‍್ಯಾಪ್‌ ಸಾಂಗ್ ಮಾಡಿದ್ದೇನೆ ಎಂದು ಯುವರಾಜ್‌ (Yuvraj) ಪಬ್ಲಿಕ್‌ ಟಿವಿಗೆ ತಿಳಿಸಿದ್ದಾರೆ.

  • ಲೀಲಾವತಿ ಅಂತಿಮ ದರ್ಶನಕ್ಕೆ ಬಂದ ಮೊಮ್ಮಗ ಮತ್ತು ಸೊಸೆ

    ಲೀಲಾವತಿ ಅಂತಿಮ ದರ್ಶನಕ್ಕೆ ಬಂದ ಮೊಮ್ಮಗ ಮತ್ತು ಸೊಸೆ

    ಗಲಿದ ಹಿರಿಯ ಚೇತನ ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಲೀಲಾವತಿ ಅವರ ಸೊಸೆ, ಅಂದರೆ ವಿನೋದ್ ರಾಜ್ ಅವರ ಪತ್ನಿ ಅನು (Anu) ಮತ್ತು ಲೀಲಾವತಿ (Leelavati) ಮೊಮ್ಮಗ  ಯುವರಾಜ್ (Yuvraj) ಆಗಮಿಸಿದ್ದಾರೆ. ನಿನ್ನೆ ರಾತ್ರಿಯೇ ಅವರು ಚೆನ್ನೈನಿಂದ ಹೊರಟು ನೆಲಮಂಗಲ ತಲುಪಿ, ಇಂದು ಅಂತಿಮ ದರ್ಶನ ಪಡೆದಿದ್ದಾರೆ.

    ವಿನೋದ್ ರಾಜ್ (Vinod Raj) ಮದುವೆ ವಿಚಾರವಾಗಿ ಹಲವಾರು ಗೊಂದಲಗಳು ಇದ್ದವು. ತಾಯಿಗಾಗಿ ವಿನೋದ್ ಮದುವೆ ಆಗದೇ, ತಾಯಿಯ ಸೇವೆಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ವಿನೋದ್ ರಾಜ್ ಮದುವೆ ಆಗಿರುವ ಸುದ್ದಿಯನ್ನು ನಿರ್ದೇಶಕರೊಬ್ಬರು ಫೋಟೋ ಸಮೇತ ವಿವರಿಸಿದ್ದರು. ವಿನೋದ್ ರಾಜ್ ಮದುವೆ ವಿಚಾರವನ್ನು ಸ್ವತಃ ಲೀಲಾವತಿ ಮತ್ತು ವಿನೋದ್ ರಾಜ್ ಕೂಡ ಒಪ್ಪಿಕೊಂಡಿದ್ದರು.

    ಗಣ್ಯರ ದರ್ಶನ ನಂತರ ಅಂತ್ಯಕ್ರಿಯೆ

    ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅಂತಿಮ ಸಂಸ್ಕಾರವನ್ನು (Cremation) ಅವರ ನೆಚ್ಚಿನ ತೋಟದಲ್ಲಿ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ನೆಲಮಂಗಲದ ಸೋಲದೇವನಹಳ್ಳಿ (Soladevanahalli) ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.

    ಈಗಾಗಲೇ ಜೆಸಿಬಿ ಮೂಲಕ ಫಾರ್ಮ್‌ಹೌಸ್‌ನಲ್ಲಿ ಸಮಾಧಿ ತೆಗೆಯುವ ಕಾರ್ಯ ಆರಂಭಗೊಂಡಿದ್ದು, ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆಗೆ ತರಯಾರಿ ಶುರುವಾಗಿದೆ. ಮತ್ತೊಂದೆಡೆ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್‌ ಅಧಿಕಾರಿಗಳು ಬರುವ ಗಣ್ಯರಿಗೆ ಅಂತಿಮ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

     

    ಬೆಳಗ್ಗೆ 9:30ರ ವರೆಗೆ ಸಾರ್ವಜನಿಕರಿಗೆ ಪಾರ್ಥಿವ ಶರೀರ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೈದಾನ ಸುತ್ತ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ. ಬೆಳಗ್ಗೆಯಿಂದಲೇ ಸಾರ್ವಜನಿಕರು ದರ್ಶನ ಪಡೆಯುತ್ತಿದ್ದು, ಎಲ್ಲರೂ ಲೀಲಾವತಿ ಅವರ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ. ಬೆಳಗ್ಗೆ 11 ಗಂಟೆ ವೇಳೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಲಿದ್ದಾರೆ. ಇತರ ಗಣ್ಯರೂ ಅಂತಿಮ ದರ್ಶನ ಪಡೆದ ಬಳಿಕ ಅಂತ್ಯಕ್ರಿಯೆ ಕಾರ್ಯ ನೆರವೇರಲಿದೆ

  • ಶಾಕುಂತಲೆ ‘ಕೋಟಿ’ ರಹಸ್ಯ – ‘ಡೀಲ್ ಸ್ಟಾರ್’ ಯುವರಾಜನ ಜಾಲದಲ್ಲಿ ರಾಧಿಕಾ?

    ಶಾಕುಂತಲೆ ‘ಕೋಟಿ’ ರಹಸ್ಯ – ‘ಡೀಲ್ ಸ್ಟಾರ್’ ಯುವರಾಜನ ಜಾಲದಲ್ಲಿ ರಾಧಿಕಾ?

    – ಲೆಕ್ಕ ತಪ್ಪಿದ ಸ್ಯಾಂಡಲ್‍ವುಡ್ ಸ್ವೀಟಿಗೆ ತಪ್ಪಿದ್ದಲ್ಲ ಸಂಕಷ್ಟ?
    – ರಾಧಿಕಾ ಕುಮಾರಸ್ವಾಮಿ ಕೋಟಿ ರಹಸ್ಯ

    ಬೆಂಗಳೂರು: ವಂಚಕ ಯುವರಾಜನ ಬಳಿಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹಣ ಪಡೆದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಯುವರಾಜನ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ನಟಿ ರಾಧಿಕಾ ಕುಮಾರಸ್ವಾಮಿ, ಐತಿಹಾಸಿಕ ಕಥೆಯುಳ್ಳ ನಾಟ್ಯರಾಣಿ ಶಕುಂತಲೆ ಸಿನಿಮಾಗಾಗಿ 75 ಲಕ್ಷ ರೂ. ಪಡೆದಿರೋದಾಗಿ ಹೇಳಿದ್ದರು. ಯುವರಾಜ್ 15 ಲಕ್ಷ ನೀಡಿದ್ರೆ, ಮತ್ತೊಬ್ಬರ ಖಾತೆಯಿಂದ 60 ಲಕ್ಷ ಜಮೆ ಆಗಿತ್ತು ಅಂತ ಹೇಳಿದ್ದರು.

    ರಾಧಿಕಾ ಹೇಳಿಕೆ ಬೆನ್ನಲ್ಲೇ ಸಿಸಿಬಿ ವಿಚಾರಣೆ ನಡೆಸಿ ಕೆಲ ಮಾಹಿತಿಯನ್ನ ಪಡೆದುಕೊಂಡಿತ್ತು. ಈ ವೇಳೆ ಯುವರಾಜ್ ಮತ್ತು ರಾಧಿಕಾ ಇಬ್ಬರನ್ನ ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಇದೀಗ ರಾಧಿಕಾ ಕುಮಾರಸ್ವಾಮಿ ಶಕುಂತಲೆ ಸಿನಿಮಾಗಾಗಿ ಬರೋಬ್ಬರಿ 1 ಕೋಟಿ 25 ಲಕ್ಷ ರೂಪಾಯಿ ಪಡೆದಿರುವ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಯುವರಾಜ್ ನಿಂದ ರಾಧಿಕಾ ಕುಮಾರಸ್ವಾಮಿ ಪಡೆದ ಹಣವನ್ನೆಲ್ಲಾ ಜಪ್ತಿ ಮಾಡಿರುವ ಸಿಸಿಬಿ ಪೊಲೀಸರು ನ್ಯಾಯಾಲಯದ ಸುಪರ್ದಿಗೆ ನೀಡಲು ಸಿದ್ಧತೆ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ 75 ಲಕ್ಷ ರೂ. ಹಣ ಪಡೆಯಲಾಗಿದೆ ಎಂದು ರಾಧಿಕಾ ಹೇಳಿದ್ದರು. ಈಗ ರಾಧಿಕಾ ಸುಳ್ಳು ಹೇಳಿದ್ರಾ ಅನ್ನೋ ಪ್ರಶ್ನೆಯೊಂದು ಉತ್ತರವನ್ನು ಹುಡುಕುತ್ತಿದೆ. ಯುವರಾಜ್ ವಿರುದ್ಧ ದೂರು ಸಲ್ಲಿಸಿರುವ ಮೈಸೂರಿನ ವಿಜಯ್ ಎಂಬವರು ರಾಧಿಕಾರ ಖಾತೆಗೆ 60 ಲಕ್ಷ ಹಣ ಜಮೆ ಮಾಡಿದ್ರು ಎನ್ನಲಾಗಿದೆ.

    ದೂರುದಾರನ ಖಾತೆಯಿಂದಲೇ ಹಣ ಬಂದಿದ್ದರಿಂದ ರಾಧಿಕಾ ಕುಮಾರಸ್ವಾಮಿ ಸಂಕಷ್ಟದಲ್ಲಿ ಸಿಲುಕಿಕೊಳ್ತಾರಾ ಅನ್ನೋ ಚರ್ಚೆಗಳು ಆರಂಭಗೊಂಡಿವೆ. ಇದೀಗ ಪತ್ತೆಯಾಗಿರುವ ಹೆಚ್ಚುವರಿ 50 ಲಕ್ಷ ರೂ.ಗಾಗಿ ಸಿಸಿಬಿ ಮತ್ತೊಮ್ಮೆ ರಾಧಿಕಾ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

  • ರಾಜಕಾರಣಿ ಜೊತೆಗಿನ ರಾಧಿಕಾ ಕುಮಾರಸ್ವಾಮಿ ಫೋಟೋ ವೈರಲ್

    ರಾಜಕಾರಣಿ ಜೊತೆಗಿನ ರಾಧಿಕಾ ಕುಮಾರಸ್ವಾಮಿ ಫೋಟೋ ವೈರಲ್

    ಬೆಂಗಳೂರು: ಮಾಜಿ ಸಚಿವ ಮುರುಗೇಶ್ ನಿರಾಣಿ ಜೊತೆಗೆ ರಾಧಿಕಾ ಕುಮಾರಸ್ವಾಮಿ ಇರುವ ಫೋಟೋ ವೈರಲ್ ಆಗಿದೆ. ಯುವರಾಜ್ ಅಲಿಯಾಸ್ ಸ್ವಾಮಿ ವಂಚನೆ ಕೇಸ್‍ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ವಂಚನೆ ಕೇಸ್‍ನಲ್ಲಿ ಯುವರಾಜ್‍ನನ್ನು ಈಗಾಗಲೇ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆಯಷ್ಟೇ ರಾಧಿಕಾ ಕುಮಾರಸ್ವಾಮಿ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಗಾಗಿದ್ದರು. ಯುವರಾಜ್ ಮೊಬೈಲ್‍ನಲ್ಲಿ ರಾಧಿಕಾ ಕುಮಾರಸ್ವಾಮಿ-ನಿರಾಣಿ ಜೊತೆಗಿರುವ ಫೋಟೋ ಪತ್ತೆಯಾಗಿದೆ ಎನ್ನಲಾಗಿದೆ. ರಾಧಿಕಾ ವಿಚಾರಣೆಗೆ ಹಾಜರಾದ ಮರುದಿನವೇ ನಿರಾಣಿ ಜೊತೆಗಿನ ಫೋಟೋ ಹರಿದಾಡುತ್ತಿದೆ.

    ಯುವರಾಜ್ ಅಲಿಯಾಸ್ ಸ್ವಾಮಿ ರಾಜಕಾರಣಿಗಳ ಜೊತೆಗೆ ಫೋಟೋದಲ್ಲಿದ್ದಾನೆ. ಉಪ ಮುಖ್ಯಮಂತ್ರಿ, ಸಚಿವರು, ಎಂಎಲ್‍ಸಿ ಜೊತೆಗೆ ಯುವರಾಜ್ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ. ಈ ಹಿಂದೆ ಯುವರಾಜ್ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಸನ್ಮಾನ ಮಾಡಿದ್ದನು. ಸಚಿವ ವಿ.ಸೋಮಣ್ಣ, ಎಂಎಲ್‍ಸಿ ಯೋಗೇಶ್ವರ್ ಜೊತೆಗೆ ಯುವರಾಜ್ ಫೋಟೋವನ್ನು ತೆಗೆಸಿಕೊಂಡಿದ್ದಾನೆ. ಕಾಂಗ್ರೆಸ್ ಉಸ್ತುವಾರಿ ಆಗಿದ್ದ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ. ಬೆಂಗಳೂರು ಪೊಲೀಸ್ ಅಯುಕ್ತರಾಗಿದ್ದ ಭಾಸ್ಕರ್ ರಾವ್ ಅವರಿಗೂ ಯುವರಾಜ ಸನ್ಮಾನ ಮಾಡಿದ್ದಾನೆ.

    ಯುವರಾಜ್ ವಂಚನೆ ಕೇಸ್‍ನಲ್ಲಿರುವ ರಾಧಿಕಾ ಕುಮಾರಸ್ವಾಮಿ ಪ್ರೆಸ್‍ಮೀಟ್ ನಡೆಸಿದ್ದರು. ಅಷ್ಟೊಂದು ಮೊತ್ತದ ಹಣ ನನ್ನ ಖಾತೆಗೆ ಬಂದಿಲ್ಲ. ಅವರು ನನಗೆ 17 ವರ್ಷಗಳಿಂದ ಗೊತ್ತು. ಸಿನಿಮಾ ವಿಚಾರವಾಗಿ ಭೇಟಿಯಾಗಿದ್ದೇವೆ ಬೇರೆ ಯಾವುದೇ ವ್ಯವಹಾರ ಇಲ್ಲ ಎಂದು ಹೇಳಿದ್ದರು. ನಂತರ ಸಿಸಿಬಿ ವಿಚಾರಗೆ ಬರುವಂತೆ ರಾಧಿಕಾ ಕುಮಾರ್ ಸ್ವಾಮಿಗೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾಧಿಕಾ ಮತ್ತು ಯುವರಾಜ್‍ನಿಗೆ ವಿಚಾರಣೆ ನಡೆದಿತ್ತು. ಮತ್ತೊಮ್ಮೆ ವಿಚಾರಣೆಗೆ ಕರೆದರೆ ಬರುತ್ತೇನೆ ಎಂದು ನಗು ಮುಖದಿಂದ ರಾಧಿಕಾ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಹೇಳಿದ್ದರು. ಆದರೆ ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

  • 1.5 ಕೋಟಿ ಬಂದಿಲ್ಲ, ಸ್ವಾಮಿ ಖಾತೆಯಿಂದ ಬಂದಿರೋದು 15 ಲಕ್ಷ – ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ

    1.5 ಕೋಟಿ ಬಂದಿಲ್ಲ, ಸ್ವಾಮಿ ಖಾತೆಯಿಂದ ಬಂದಿರೋದು 15 ಲಕ್ಷ – ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ

    – ನಾಟ್ಯ ರಾಣಿ ಶಾಂತಲಾ ಸಿನಿಮಾಕ್ಕೆ ಮುಂಗಡ ಹಣ
    – ಸ್ವಾಮಿ ಬಾವನ ಖಾತೆಯಿಂದ 60 ಲಕ್ಷ ರೂ. ಜಮೆ
    – 17 ವರ್ಷಗಳಿಂದ ಸ್ವಾಮಿಗೂ ನಮ್ಮ ಕುಟುಂಬಕ್ಕೂ ಪರಿಚಯ
    – ನನ್ನ ಬಗ್ಗೆ ಸ್ವಾಮಿ ಹೇಳಿದ್ದ ಭವಿಷ್ಯ ನಿಜವಾಗಿತ್ತು

    ಬೆಂಗಳೂರು: ನನಗೆ ಯುವರಾಜ್‌ ಅವರ ಖಾತೆಯಿಂದ 15 ಲಕ್ಷ ರೂ.ಹಣ ಬಂದಿದೆ ಹೊರತು 1.5 ಕೋಟಿ ರೂ. ಹಣ ಬಂದಿಲ್ಲ ಎಂದು ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

    ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರ ಹೆಸರಲ್ಲಿ ವಂಚನೆ ಮಾಡಿ ಸದ್ಯ ಸಿಸಿಬಿಯಿಂದ ಬಂಧನಕ್ಕೆ ಒಳಗಾದ ಯುವರಾಜ್‌ ಅಲಿಯಾಸ್‌ ಸ್ವಾಮಿಯಿಂದ 1.5 ಕೋಟಿ ರೂ. ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ.

    ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು?
    1. ಸ್ವಾಮಿ ಮತ್ತು ನಮ್ಮ ಕುಟುಂಬಕ್ಕೆ ಸುಮಾರು 17 ವರ್ಷಗಳ ಪರಿಚಯ. ಈ ಹಿಂದೆ ನನ್ನ ತಂದೆಯವರಲ್ಲಿ ಒಂದು ಪೂಜೆ ಮಾಡಬೇಕು ಎಂದು ಹೇಳಿದ್ದರು. ಆ ಪೂಜೆಯನ್ನು ತಂದೆ ಮಾಡಿರಲಿಲ್ಲ. ಇದಾದ ಬಳಿಕ ತಂದೆಯವರು ಮೃತಪಟ್ಟರು. ಮೇ ತಿಂಗಳಿನಲ್ಲಿ ಪೂಜೆ ಮಾಡದ್ದಕ್ಕೆ ತಂದೆ ಮೃತಪಟ್ಟಿರಬಹುದು ಎಂಬ ಕೊರಗು ತಾಯಿಗೆ ಇತ್ತು. ಇದಾದ ನಂತರ ಅವರ ಜೊತೆ ಈ ವಿಚಾರಕ್ಕೆ ಮಾತನಾಡುತ್ತಿದ್ದೆ.

    2. ಐತಿಹಾಸಿಕಾ ಸಿನಿಮಾ ಮಾಡುವ ಕನಸು ನನ್ನಲ್ಲಿತ್ತು.  ನಾಟ್ಯ ರಾಣಿ ಶಾಂತಲಾ ಸಿನಿಮಾ ಮಾಡಲು ಸ್ವಾಮಿ ನನ್ನ ಜೊತೆ ಮಾತನಾಡಿದ್ದರು. ಈ ವೇಳೆ ನನ್ನ ಮಗಳ ಹೆಸರಿನಲ್ಲಿ ಬ್ಯಾನರ್‌ ತೆರೆದಿದ್ದೇನೆ. ನಿಮ್ಮ ಬ್ಯಾನರ್‌ ಮತ್ತು ನಮ್ಮ ಬ್ಯಾನರ್‌ ಅಡಿ ಸಿನಿಮಾ ಮಾಡುವ ಎಂದು ಹೇಳಿದ್ದರು. ಇದಕ್ಕೆ ನಾನು ಸಿನಿಮಾ ಮಾಡಿದರೆ ಒಂದೇ ಬ್ಯಾನರ್‌ನಲ್ಲಿ ಮಾಡಬೇಕು. ಎರಡು ಬ್ಯಾನರ್‌ ಜೊತೆಯಾಗಿ ಮಾಡುವುದು ಬೇಡ ಎಂದು ತಿಳಿಸಿದ್ದೆ. ಕೊನೆಗೆ ಅವರ ಮಗಳ ಬ್ಯಾನರ್‌ ಅಡಿ ಅಡಿಯಲ್ಲೇ ಸಿನಿಮಾ ಮಾಡುವ ಎಂದು ಹೇಳಿದ್ದರು. ಈ ಪ್ರಸ್ತಾಪಕ್ಕೆ ನಾನು ಒಪ್ಪಿಕೊಂಡೆ. ಈ ಸಂಬಂಧ ಮಾರ್ಚ್‌,  ಫೆಬ್ರವರಿ  ಮಧ್ಯೆ ನನ್ನ ಖಾತೆಗೆ ಮುಂಗಡವಾಗಿ 15 ಲಕ್ಷ ರೂ. ಹಾಕಿದರು. ಇದಾದ ಬಳಿಕ ಅವರ ಬಾವನ ಖಾತೆಯಿಂದ 60 ಲಕ್ಷ ರೂ. ಹಣ ನನ್ನ ಖಾತೆಗೆ ಬಂದಿದೆ. 1.50 ಕೋಟಿ ರೂ. ಹಣ ನನಗೆ ಬಂದಿಲ್ಲ.

    3. ನಾನು ಕಪ್ಪು ಹಣ ತೆಗೆದುಕೊಂಡಿಲ್ಲ. ಬ್ಯಾಂಕ್‌ ಖಾತೆಯ ಮೂಲಕ ಹಣ ವರ್ಗಾವಣೆಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳೋಣ ಎಂದು ಹೇಳುತ್ತಿದ್ದೆ. ಈ ವೇಳೆ ಅವರು ಈಗ ನಾನು ಬ್ಯುಸಿ ಇದ್ದೇನೆ ಎಂದು ಹೇಳಿದ್ದರು. ನಾನು ಕೊರೊನಾ ಕಾರಣದಿಂದ ಬೆಂಗಳೂರಿನಲ್ಲಿ ಇರಲಿಲ್ಲ. ಮಂಗಳೂರಿನಲ್ಲಿ ಇದ್ದೆ. ಹೀಗಾಗಿ ಭೇಟಿ ಮಾಡಿ ಒಪ್ಪಂದ ಮಾಡಲು ಸಾಧ್ಯವಾಗಿರಲಿಲ್ಲ.

    4. ನಮ್ಮ ಕುಟುಂಬದ ಜೊತೆ ಉತ್ತಮ ಸಂಬಂಧ ಇದ್ದ ಕಾರಣ ನಾನು ಅವರ ಬ್ಯಾನರ್‌ನಲ್ಲಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೆ. ಸಿನಿಮಾ ಬಿಟ್ಟರೆ ನನಗೂ ಅವರಿಗೂ ಬೇರೆ ಯಾವುದೇ ಸಂಬಂಧ ಇಲ್ಲ. ಯಾವುದೇ ವ್ಯವಹಾರ ನಡೆಸಿಲ್ಲ.

    5. ಸಿನಿಮಾದವರ ಜೊತೆ ರಾಜಕಾರಣಿಗಳ ಪರಿಚಯ ಇರುವುದು ಸಾಮಾನ್ಯ. ಸಿನಿಮಾ ರಿಲೀಸ್‌ ಅಥವಾ ಬೇರೆ ಯಾವುದೇ ಕಾರ್ಯಕ್ರಮ ಅವರನ್ನು ಕರೆಸುವ ಸಂಬಂಧ ಮಾತುಕತೆ ಮಾಡಿದ್ದೇನೆಯೇ ಹೊರತು ಬೇರೆ ಯಾವುದೇ ಮಾತುಕತೆ ನಡೆಸಿಲ್ಲ. ಬೇರೆ ಮಾತುಕತೆ ನಡೆಸಿದ್ದರೆ ದಾಖಲೆ ತೋರಿಸಿ.

    6. ಇಲ್ಲಿಯವರೆಗೆ ನಮಗೆ ಮೋಸ ಆಗಿದೆಯೋ ಹೊರತು ನಾವು ಯಾರಿಗೂ ಮೋಸ ಮಾಡಿಲ್ಲ. ಯಾರಿಗೂ ನಾನು ಅವರ ಜೊತೆ ಮಾತನಾಡಿ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿಲ್ಲ. ನೀವು ಅವರ ವಾಟ್ಸಪ್‌ ಡಿಪಿ ನೋಡಿದರೆ ಎಷ್ಟು ದೊಡ್ಡ ಜನರ ಜೊತೆ ಅವರ ಸಂಪರ್ಕವಿದೆ ಎಂಬುದನ್ನು ತಿಳಿಯಬಹುದು. ಅಷ್ಟು ದೊಡ್ಡ ದೊಡ್ಡ ವ್ಯಕ್ತಿಗಳೇ ಮೋಸ ಹೋಗಿರುವಾಗ ನಾವು ಮೋಸ ಹೋಗಿರುವುದು ಬಹಳ ಸಣ್ಣ ವಿಚಾರ.

    7. 60 ಲಕ್ಷ ಹಣವನ್ನು ಯಾರು ಹಾಕಿದ್ದಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಬ್ಯಾಂಕ್‌ ದಾಖಲೆಗಳಲ್ಲಿಇದೆ ಮತ್ತು ಇದು ವೈಟ್‌ ಮನಿ. ಅಷ್ಟೇ ಅಲ್ಲದೇ ಅವರು ಕುಟುಂಬ ಪರಿಚಯದ ವ್ಯಕ್ತಿ ಆಗಿದ್ದರು. ಒಂದು ಎರಡು ಬಾರಿ ಅವರ ಕುಟುಂಬ ಸದಸ್ಯರನ್ನು ಪರಿಚಯ ಮಾಡಿಸಿದ್ದರು. ಸ್ವಾಮಿಯವರು ನನ್ನ ಬಾವ ದುಡ್ಡನ್ನು ಜಮೆ ಮಾಡಿದ್ದಾರೆ ಎಂದು ನನಗೆ ತಿಳಿಸಿದ್ದರು. ಈ ಕಾರಣದಿಂದ ನಾನು ಹಣ ಹಾಕಿದ್ದು ಯಾರು? ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಲ್ಲ

    8. ನಾನು ಯಾವುದೇ ಸಿನಿಮಾಕ್ಕೆ ಒಪ್ಪಂದ ಮಾಡಿಕೊಂಡು ಹಣ ಪಡೆಯುವುದಿಲ್ಲ. ಬಾಯಿ ಮಾತಿನಲ್ಲೇ ಒಪ್ಪಿ ಡೇಟ್ಸ್‌ ಕೊಡುತ್ತೇನೆ. ಈ ಕಾರಣಕ್ಕೆ ಸಿನಿಮಾ ಮಾಡುವ ಮೊದಲೇ ಒಪ್ಪಂದ ಮಾಡಿಕೊಂಡಿರಲಿಲ್ಲ.

    9. 16 ವರ್ಷದ ಹಿಂದೆಯೇ ನನಗೆ ಹೆಣ್ಣು ಮಗು ಆಗುತ್ತದೆ ಎಂದು ಭವಿಷ್ಯ ಹೇಳಿದ್ದರು. ಅವರು ಹೇಳಿದ್ದ ಭವಿಷ್ಯ ನಿಜವಾಗಿತ್ತು. ಇದಾದ ಬಳಿಕ ಮನೆಯಲ್ಲಿ ಅವರು ಹೇಳಿದ ಪೂಜೆಗಳನ್ನು ಮಾಡುತ್ತಿದ್ದರು. ನನ್ನ ತಂದೆಯವರು ಸ್ವಾಮಿ ಅವರಿಗೆ ಈ ಹಿಂದೆ ಸಹಾಯ ಮಾಡಿದ್ದರು. ಹೀಗಾಗಿ ನಾನು ಅವರ ಜೊತೆ ನಂಬಿಕೆಯನ್ನು ಇಟ್ಟುಕೊಂಡಿದ್ದೆ. ಈಗ ಮಾಧ್ಯಮಗಳಲ್ಲಿ ಸುದ್ದಿ ನೋಡಿ ನನಗೆ ಒಮ್ಮೆ ಶಾಕ್‌ ಆಗಿದೆ. ಸ್ವಾಮಿ ಜೊತೆ ಸಿನಿಮ ಬಿಟ್ಟರೆ ಬೇರೆ ಯಾವುದೇ ವ್ಯವಹಾರಿಕಾ ಸಂಬಂಧ ಇಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಡೀಲಿಂಗ್‌ ಮಾಡಿಲ್ಲ. ನನ್ನ ಮೇಲೆ ಬಂದಿರುವ ಆರೋಪಕ್ಕೆ ಉತ್ತರ ನೀಡಲೆಂದೇ ಈ ಸುದ್ದಿಗೋಷ್ಠಿಗೆ ನಿಮ್ಮನ್ನು ಕರೆದಿದ್ದೇನೆ. ಮುಂದೆಯೂ ಯಾವುದೇ ಆರೋಪ ಬಂದರೆ ನನ್ನನ್ನು ಸಂಪರ್ಕಿಸಿ. ಎಲ್ಲದ್ದಕ್ಕೂ ನಾನು ಉತ್ತರ ನೀಡುತ್ತೇನೆ.

  • ಹೊಸ ಯೂಟ್ಯೂಬ್ ಚಾನೆಲ್ ತೆರೆದ ವಾರ್ನರ್ ಕಾಲೆಳೆದ ಯುವರಾಜ್

    ಹೊಸ ಯೂಟ್ಯೂಬ್ ಚಾನೆಲ್ ತೆರೆದ ವಾರ್ನರ್ ಕಾಲೆಳೆದ ಯುವರಾಜ್

    ನವದೆಹಲಿ: ಹೊಸ ಯೂಟ್ಯೂಬ್ ಚಾನೆಲ್ ತೆರೆದ ಆಸೀಸ್ ಆಟಗಾರ ಡೇವಿಡ್ ವಾರ್ನರ್ ಅವರನ್ನು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಕಾಲೆಳೆದಿದ್ದಾರೆ.

    ಡೇವಿಡ್ ವಾರ್ನರ್ ಅವರು ಸದ್ಯ ಯುಇಎಯಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿದ್ದಾರೆ. ತನ್ನ ನಾಯಕತ್ವದ ಸನ್‍ರೈಸಸ್ ಹೈದರಾಬಾದ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ನಿನ್ನೆ ನಡೆದ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಹೈದರಾಬಾದ್ ತಂಡ 69 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು.

    ಈ ನಡುವೆ ಇಂದು ಟ್ವೀಟ್ ಮಾಡಿರುವ ಡೇವಿಡ್ ವಾರ್ನರ್ ಅವರು, ಎಲ್ಲರಿಗೂ ನಮಸ್ಕಾರ, ನಾನು ಈಗ ತಾನೇ ನನ್ನ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಓಪನ್ ಮಾಡಿದ್ದೇನೆ. ಜೊತೆಗೆ ಹೊಸ ವಿಡಿಯೋವನ್ನು ಅದರಲ್ಲಿ ಹಾಕಿದ್ದೇನೆ. ನನ್ನ ಟ್ವಿಟ್ಟರಿನಲ್ಲಿ ಆ ಯೂಟ್ಯೂಬ್ ಚಾನೆಲಿನ ಲಿಂಕ್ ಇದ್ದು, ಎಲ್ಲರೂ ಹೋಗಿ ವಿಡಿಯೋ ನೋಡಿ. ಜೊತೆಗೆ ಫಾಲೋ ಮಾಡುವುದನ್ನು ಮರೆಯಬೇಡಿ ಎಂದು ಬರೆದುಕೊಂಡಿದ್ದರು.

    ಡೇವಿಡ್ ವಾರ್ನರ್ ಅವರ ಈ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಯುವರಾಜ್ ಸಿಂಗ್ ಅವರು, ಹೌದಾ. ಆದರೆ ಈ ಯೂಟ್ಯೂಬ್ ಚಾನೆಲ್ ಅಲ್ಲಿ ನಿಮ್ಮ ಡ್ಯಾನ್ಸ್ ವಿಡಿಯೋ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ. ಡೇವಿಡ್ ವಾರ್ನರ್ ಅವರು ತಮ್ಮ ಮಕ್ಕಳು ಮತ್ತು ಪತ್ನಿಯ ಜೊತೆ ಹಲವಾರು ಡ್ಯಾನ್ಸ್ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    ಕೊರೊನಾ ಲಾಕ್‍ಡೌನ್ ವೇಳೆ ಟಿಕ್‍ಟಾಕ್‍ನಲ್ಲಿ ಬಹಳ ಜನಪ್ರಿಯವಾಗಿದ್ದ ಡೇವಿಡ್ ವಾರ್ನರ್ ಕೆಲ ಹಿಂದಿ, ತಮಿಳು ಮತ್ತು ತೆಲುಗು ಚಿತ್ರದ ಟಿಕ್‍ಟಾಕ್ ವಿಡಿಯೋ ಮಾಡಿ ಭಾರತದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ತಮ್ಮ ಮಕ್ಕಳು ಮತ್ತು ಪತ್ನಿಯ ಜೊತೆ ಹಿಂದಿ ಹಾಡುಗಳಿಗೆ ಫನ್ನಿ ಡ್ಯಾನ್ಸ್ ಮಾಡಿ ತಮ್ಮ ಟಿಕ್‍ಟಾಕಿನಲ್ಲಿ ಹಾಕಿಕೊಂಡಿದ್ದರು. ತಮ್ಮ ಮಗಳ ಮನವಿಯ ಮೇರೆಗೆ ಟಿಕ್‍ಟಾಕ್‍ಗೆ ಬಂದಿದ್ದ ವಾರ್ನರ್ ಕೆಲ ದಿನಗಳ ನಂತರ ಟಿಕ್‍ಟಾಕ್‍ನಲ್ಲಿ ಸ್ಟಾರ್ ಆಗಿದ್ದರು.

  • ಕ್ರಿಕೆಟ್ ನಿವೃತ್ತಿ ವಿಚಾರವನ್ನು ಪ್ರಕಟಿಸಿದ ಯುವರಾಜ್

    ಕ್ರಿಕೆಟ್ ನಿವೃತ್ತಿ ವಿಚಾರವನ್ನು ಪ್ರಕಟಿಸಿದ ಯುವರಾಜ್

    ನವದೆಹಲಿ: 2019ರ ವಿಶ್ವಕಪ್ ಟೂರ್ನಿಯ ಬಳಿಕ ತಮ್ಮ ನಿವೃತ್ತಿ ಬಗ್ಗೆ ಯೋಚಿಸುವುದಾಗಿ ಟೀಂ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.

    ಮುಂದಿನ ಐಪಿಎಲ್ ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿಯಲಿರುವ ಅವರು, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ 2019 ರ ವಿಶ್ವಕಪ್ ವೇಳೆವರೆಗೂ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದು ಬಳಿಕ ನಿವೃತ್ತಿಯ ಬಗ್ಗೆ ಚಿಂತನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ಕ್ರಿಕೆಟ್ ವೃತ್ತಿ ಜೀವನದ ಆರಂಭ 6, 7 ವರ್ಷಗಳ ಕಾಲ ಉತ್ತಮವಾಗಿ ಆಡಿದ್ದೇನೆ. ನಂತರ ಅವಧಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾದವು. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಿತು. ಆದರೆ ಕ್ಯಾನ್ಸರ್ ನಿಂದ ಗುಣಮುಖನಾದೆ. ಬಳಿಕ ತಂಡದಲ್ಲಿ ನನಗೆ ನಿರಂತರವಾಗಿ ಅವಕಾಶ ಸಿಗಲಿಲ್ಲ. ಕೆಲವು ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು ಎಂದರು.

    ಯುವರಾಜ್ ಸಿಂಗ್ 2017 ಜೂನ್ ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. 2011ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ತಂಡದಲ್ಲಿ ನಿರಂತರವಾಗಿ ಆಡಿದ್ದ ಯುವಿ ಆನಂತರ ಕ್ಯಾನ್ಸರ್ ನಿಂದ ಬಳಲಿದ್ದರು. ಆದರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದು ಬಂದ ಅವರು ಬಳಿಕ ಫಾರ್ಮ್ ಸಮಸ್ಯೆಯಿಂದ ಬಳಲಿದ್ದರು.

    ಇದೇ ವೇಳೆ ಆಫ್ರಿಕಾ ವಿರುದ್ಧದ ಸಿಮೀತ ಓವರ್ ಗಳ ಸರಣಿಯಲ್ಲಿ ಟೀಂ ಇಂಡಿಯಾ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದರು. ಅಲ್ಲದೇ ಮುಂಬರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವು ಪಡೆಯಲು ಕೊಹ್ಲಿ ಗಮನ ಹರಿಸಬೇಕಿದೆ. ತಂಡದ ಪ್ರತಿಯೊಬ್ಬ ಆಟಗಾರರು ಸ್ಥಿರ ಪ್ರದರ್ಶನ ನೀಡಬೇಕಿದೆ ಎಂದರು.