Tag: yuvaratna

  • ಮಿನಿ ಕೂಪರ್‌ನಲ್ಲಿ ಯುವರತ್ನ ಜಾಲಿ ಡ್ರೈವ್ -ವಿಡಿಯೋ ನೋಡಿ

    ಮಿನಿ ಕೂಪರ್‌ನಲ್ಲಿ ಯುವರತ್ನ ಜಾಲಿ ಡ್ರೈವ್ -ವಿಡಿಯೋ ನೋಡಿ

    ಬೆಂಗಳೂರು: ಸ್ಟಾರ್ ನಟ-ನಟಿಯರು ಬೈಕ್, ಕಾರ್ ಕ್ರೇಜ್ ಅಂದರೆ ತುಂಬಾ ಇಷ್ಟಪಡುತ್ತಾರೆ. ತಮ್ಮ ಬಿಡುವಿನ ಸಮಯದಲ್ಲಿ ಬೈಕ್ ಅಥವಾ ಕಾರಿನಲ್ಲಿ ಜಾಲಿ ಡ್ರೈವ್ ಹೋಗುತ್ತಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಯುವರತ್ನ ಸಿನಿಮಾ ತಂಡದ ಜೊತೆ ಜಾಲಿ ಡ್ರೈವ್ ಹೋಗಿದ್ದಾರೆ.

    ಪುನೀತ್ ಅವರಿಗೆ ಕಾರ್ ಕ್ರೇಜ್ ತುಂಬಾನೇ ಇದೆ. ಬಿಡುವಿನ ವೇಳೆ ತಮ್ಮ ಸ್ನೇಹಿತರ ಜೊತೆ ಜಾಲಿಯಾಗಿ ಸುತ್ತಾಟ ಮಾಡುತ್ತಾರೆ. ಹಾಗಾಗಿ ಭಾನುವಾರ ರಜೆ ಇದ್ದ ಕಾರಣಕ್ಕೆ ಪ್ರೇಮಿಗಳ ಪಾಲಿಗೆ  ಸ್ವರ್ಗತಾಣ ನಂದಿಬೆಟ್ಟಕ್ಕೆ ಯುವರತ್ನ ಅಂಡ್ ಟೀಮ್ ಭೇಟಿ ನೀಡಿತ್ತು.

    ಪುನೀತ್ ಅವರು ತಮ್ಮದೇ ಕಾರಿನಲ್ಲಿ ಫುಲ್ ಜೋಷ್ ಮೂಡಿನಲ್ಲಿ ಡ್ರೈವ್ ಮಾಡಿದ್ದಾರೆ. ಕಾರಿನಲ್ಲಿ ಹೋಗುವ ವಿಡಿಯೋವನ್ನ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಮಿನಿ ಕೂಪರ್ ಕಪ್ಪು ಬಣ್ಣದ ಕಾರನ್ನು ತಾವು ಡ್ರೈವ್ ಮಾಡುತ್ತಿದ್ದು, ಜೊತೆಗೆ ಇಬ್ಬರು ಸ್ನೇಹಿತರೊಂದಿಗೆ ನಂದಿ ನಿಸರ್ಗದ ಸೌಂದರ್ಯವನ್ನ ಎಂಜಾಯ್ ಮಾಡುತ್ತಾ ಜಾಲಿಯಾಲಿ ಡ್ರೈವ್ ಮಾಡಿಕೊಂಡು ಶೂಟಿಂಗ್ ಸ್ಪಾಟ್‍ಗೆ ಹೋಗಿದ್ದಾರೆ.

    ಯುವರತ್ನ ತಂಡ ಈಗಾಗಲೇ ಮೈಸೂರು, ಬೆಂಗಳೂರು, ಮಂಗಳೂರು, ಧಾರವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಶೂಟಿಂಗ್ ಮುಗಿಸಿದೆ. ಇದೀಗ ಸಿನಿಮಾದ ಮುಖ್ಯವಾದ ದೃಶ್ಯಕ್ಕಾಗಿ ಪ್ರೇಮಿಗಳು ಸ್ವರ್ಗತಾಣ ನಂದಿಬೆಟ್ಟಕ್ಕೆ ಹೋಗಿದ್ದಾರೆ. ನಂದಿ ಬೆಟ್ಟದ ಲೊಕೇಷನ್‍ನಲ್ಲಿ ಕೆಲವು ಸೆಟ್‍ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪುನೀತ್ ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ವಿಶೇಷವೆಂದರೆ ನಟ ದಿಗಂತ್ ಇದೇ ಮೊದಲ ಬಾರಿಗೆ ಚಿತ್ರದಲ್ಲಿ ಜಿಲ್ಲಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀರ್ ಅವರಿಗೆ ಜೋಡಿಯಾಗಿ ಸಾಯೇಷಾ ಸೈಗಲ್ ಅಭಿನಯಿಸಿದ್ದಾರೆ.

    https://www.instagram.com/p/B0u2AGiC4s2/

  • ಧಾರವಾಡ ಜನತೆಗೆ ಪುನೀತ್ ರಾಜ್‍ಕುಮಾರ್ ಅಭಿನಂದನೆ

    ಧಾರವಾಡ ಜನತೆಗೆ ಪುನೀತ್ ರಾಜ್‍ಕುಮಾರ್ ಅಭಿನಂದನೆ

    ಧಾರವಾಡ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ವಿಡಿಯೋ ಮೂಲಕ ಧಾರವಾಡ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.

    ‘ಯುವರತ್ನ’ ಚಿತ್ರದ ಶೂಟಿಂಗ್‍ಗೆ ಸಹಕರಿಸಿದ ಹಿನ್ನೆಲೆಯಲ್ಲಿ ಪುನೀತ್ ರಾಜಕುಮಾರ್ ಧಾರವಾಡಿಗರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕಳೆದ ವಾರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜ್‍ನಲ್ಲಿ ಯುವರತ್ನ ಚಿತ್ರದ ಚಿತ್ರೀಕರಣ ನಡೆದಿತ್ತು. ಚಿತ್ರೀಕರಣ ನಡೆದ ಸ್ಥಳಗಳ ದೃಶ್ಯಗಳ ಜೊತೆಗೆ ಹಿನ್ನೆಲೆ ಧ್ವನಿ ಮೂಲಕ ಅಪ್ಪು ಅಭಿನಂದನೆ ಸಲ್ಲಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಎಲ್ಲ ನನ್ನ ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಇತ್ತೀಚೆಗೆ ನಾನು ಯುವರತ್ನ ಸಿನಿಮಾವನ್ನು ಧಾರವಾಡದಲ್ಲಿ ಶೂಟ್ ಮಾಡಿದ್ದೇವೆ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಶೂಟಿಂಗ್ ಮಾಡಿದ್ದೀವಿ. ಅಲ್ಲಿಗೆ ಬಂದಾಗ ಅಲ್ಲಿ ನೋಡಿದ ಕಟ್ಟಡ, ವಿದ್ಯಾರ್ಥಿಗಳು, ಉಪಾನ್ಯಾಸಕರು ಹಾಗೂ ಡಿಸಿ ಹಾಗೂ ಶೂಟಿಂಗ್‍ಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.

    ಎಲ್ಲರೂ ತುಂಬಾ ಅವಕಾಶ ಕೊಟ್ಟರು. ಧಾರವಾಡದಲ್ಲಿ ಇದ್ದಾಗ ಉತ್ತರ ಕರ್ನಾಟಕ ಜನರ ಪ್ರೀತಿ ನನಗೆ ತುಂಬಾ ಸಂತೋಷ ಕೊಟ್ಟಿತು. ಕೆಲವರಿಗೆ ಫೋಟೋ ತೆಗೆಸಿಕೊಳ್ಳಲು ಸಿಗಲು ಆಗಿರಕ್ಕಿಲ್ಲ ಅದಕ್ಕೆ ಕ್ಷಮಿಸಿ. ಧಾರವಾಡಿಗರು ಶೂಟಿಂಗ್ ಸಮಯದಲ್ಲಿ ತೋರಿದ ಪ್ರೀತಿ ನನ್ನ ಜೀವಮಾನದಲ್ಲಿ ಮರೆಯೋದಿಲ್ಲ ಎಂದು ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ.

    ಈ ವಿಡಿಯೋ 1 ನಿಮಿಷ 24 ಸೆಕೆಂಡ್‍ನ ವಿಡಿಯೋ ಮೂಲಕ ಅಪ್ಪು ಅಭಿನಂದನೆ ಸಲ್ಲಿಸಿದ ಬಳಿಕ ಟ್ವಿಟ್ಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ‘ಯುವರತ್ನ’ನಿಗೆ ಜೋಡಿಯಾದ್ರು ಸಯ್ಯೇಷಾ ಸೈಗಲ್

    ‘ಯುವರತ್ನ’ನಿಗೆ ಜೋಡಿಯಾದ್ರು ಸಯ್ಯೇಷಾ ಸೈಗಲ್

    ಬೆಂಗಳೂರು: ರಾಜಕುಮಾರ ಹಿಟ್ ಸಿನಿಮಾ ಬಳಿಕ ಮತ್ತೆ ಒಂದಾಗಿರುತ್ತಿರುವ ನಿರ್ದೇಶಕ ಆನಂದ್ ರಾಮ್ ಹಾಗೂ ನಟ ಪುನೀತ್ ರಾಜ್‍ಕುಮಾರ್ ಅವರ ಯುವರತ್ನ ಸಿನಿಮಾಗೆ ಕಾಲಿವುಡ್ ನಟಿ ಸಯ್ಯೇಷಾ ಸೈಗಲ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

    ಸಿನಿಮಾದ ಟೈಟಲ್ ಅನಾವರಣ ಮಾಡಿ ಚಿತ್ರೀಕರಣ ಆರಂಭಿಸಿದ್ದ ಯುವರತ್ನ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಸಂತೋಷ್ ಆನಂದ್ ರಾಮ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಅಭಿಮಾನಿಗಳ ಕುತೂಹಲಕ್ಕೆ ಉತ್ತರಿಸಿದ್ದಾರೆ.

    ಯುವರತ್ನ ಸಿನಿಮಾ ಘೋಷಣೆ ಆದ ದಿನದಿಂದಲೂ ಕೂಡ ಚಿತ್ರ ನಾಯಕಿ ಬಗ್ಗೆ ಅಭಿಮಾನಿಗಳು ಸಾಕಷ್ಟು ಕುತೂಹಲ ಹೊಂದಿದ್ದರು. ಟಾಲಿವುಡ್ ನಟಿ ತಮನ್ನಾ ಸೇರಿದಂತೆ ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ಅವರೊಂದಿಗೆ ಅಭಿನಯಿಸಿದ್ದ ಅನುಪಮಾ ಪರಮೇಶ್ವರನ್ ಅವರ ಹೆಸರು ಕೂಡ ಕೇಳಿ ಬಂದಿತ್ತು.

    ಸದ್ಯ ಚಿತ್ರತಂಡ 21 ವರ್ಷದ ಸಯ್ಯೇಷಾ ಸೈಗಲ್ ಅವರನ್ನು ಫಿಕ್ಸ್ ಮಾಡಿದ್ದು, ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದ ಇವರು ತಮಿಳಿನ ವಿಜಯಮ್ ರವಿ ಅವರ ‘ವನಮಗಂ’ ಚಿತ್ರದಲ್ಲಿ ನಟಿಸಿ ತಮ್ಮ ಗ್ಲಾಮರ್ ಲುಕ್ ಹಾಗೂ ನಟನೆಯ ಮೂಲಕ ಗಮನಸೆಳೆದಿದ್ದರು. ಇದಕ್ಕೂ ಮುನ್ನ ಟಾಲಿವುಡ್ ನಟ ನಾಗರ್ಜುನ ಅವರ ಪುತ್ರ ಅನಿಲ್ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು. ಅಲ್ಲದೇ ಬಾಲಿವುಡ್‍ನಲ್ಲಿ ವಿಜಯ್ ದೇವಗನ್ ಅವರೊಂದಿಗೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಸಯ್ಯೇಷಾ ಅವರಿಗೆ ಇದು ಡೆಬ್ಯೂ ಸಿನಿಮಾ ಆಗಿದೆ.

    https://www.instagram.com/p/BLqJRv0AJEw/

    ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ಯುವರತ್ನ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. `ರಾಜಕುಮಾರ’ ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ನಟನ ಕಾಂಬಿನೇಷನ್ ಬರುತ್ತಿರುವ 2ನೇ ಚಿತ್ರ ಯುವರತ್ನ. ಈಗಾಗಲೇ ಫೆಬ್ರವರಿ 14 ರಂದು ಚಿತ್ರೀಕರಣ ಆರಂಭವಾಗಿದ್ದು, ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ 16 ವರ್ಷಗಳ ಹಿಂದೆ ತೆರೆಕಂಡಿದ್ದ `ಅಭಿ’ ಚಿತ್ರದ ಬಳಿಕ ಪುನೀತ್ ಮತ್ತೆ ಕಾಲೇಜ್ ಸ್ಟೂಡೆಂಟ್ ಆಗಿದ್ದಾರೆ.

    ಉಳಿದಂತೆ ನಟಿ ಸಯ್ಯೇಷಾ ಸೈಗಲ್ ಕಳೆದ ಕೆಲ ದಿನಗಳ ಹಿಂದೆಯಷ್ಟೇ ತಮಿಳು ನಟ ಆರ್ಯ ಅವರೊಂದಿನ ಪ್ರೀತಿಯ ವಿಚಾರವನ್ನು ರಿವೀಲ್ ಮಾಡಿ ಸುದ್ದಿಯಾಗಿದ್ದರು. ಮಾರ್ಚ್ ತಿಂಗಳನಲ್ಲಿ ಇಬ್ಬರ ವಿವಾಹ ನಿಗದಿಯಾಗಿದೆ. ಸಯ್ಯೇಷಾ ಸೈಗಲ್ ನಟ ನಿರ್ಮಾಪಕ ಸಮೇತ್ ಸೈಗಲ್ ಮತ್ತು ನಟಿ ಶಹೀನ್ ಬಾನು ಅವರ ಪುತ್ರಿಯಾಗಿದ್ದಾರೆ.

    https://www.instagram.com/p/BNRfxrmA5Bl/

    https://www.instagram.com/p/BRsX-sxBD-G/

    https://www.instagram.com/p/Bb1LUKQnILv/

    https://www.instagram.com/p/BuFjpHbjZkI/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಬ್ಬಳ್ಳಿಗೆ ಬಂದಿಳಿದ ಪವರ್ ಸ್ಟಾರ್- ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

    ಹುಬ್ಬಳ್ಳಿಗೆ ಬಂದಿಳಿದ ಪವರ್ ಸ್ಟಾರ್- ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

    ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

    ಧಾರವಾಡದಲ್ಲಿ ಯುವರತ್ನ ಚಿತ್ರ ಶೂಟಿಂಗ್ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ನಂತರ ಅಲ್ಲಿಂದ ಕಾರಿನಲ್ಲಿ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪುನೀತ್ ಅವರು ವಿಮಾನ ನಿಲ್ಧಾನಕ್ಕೆ ಬಂದಿಳೀಯುತ್ತಿದ್ದಂತೆಯೇ ಅಭಿಮಾನಿಗಳು ಪುನೀತ್ ಅವರಿಗೆ ಶಾಲ್ ಹೊದಿಸಿ, ಮೈಸೂರು ಟೋಪಿ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ್ರು.

    ಧಾರವಾಡದಲ್ಲಿ ಸುಮಾರು ಆರು ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಯಲಿದೆ. ಧಾರವಾಡ ನಗರದ ಯೂನಿವರ್ಸಿಟಿ, ಕರ್ನಾಟಕ ಕಾಲೇಜು ಸೇರಿದಂತೆ ಹಲವು ಕಡೆ ಚಿತ್ರದ ಶೂಟಿಂಗ್ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ದರ್ಶನ್ ನಂತ್ರ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಲ್ಲಿ ಮನವಿ

    ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ‘ರಾಜಕುಮಾರ’ ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ನಟನ ಕಾಂಬಿನೇಷನ್ ಯುವರತ್ನ ಚಿತ್ರದಲ್ಲಿ ಒಟ್ಟಾಗಿದ್ದು, ಫೆಬ್ರವರಿ 14 ರಂದು ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ 16 ವರ್ಷಗಳ ಹಿಂದೆ ತೆರೆಕಂಡಿದ್ದ ‘ಅಭಿ’ ಚಿತ್ರದ ಬಳಿಕ ಪುನೀತ್ ಮತ್ತೆ ಕಾಲೇಜ್ ಸ್ಟೂಡೆಂಟ್ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವರತ್ನಕ್ಕೆ ಮಿಲ್ಕಿ ಬ್ಯೂಟಿಯ ಹೊಳಪು ಸಿಗೋ ಮುನ್ಸೂಚನೆ!

    ಯುವರತ್ನಕ್ಕೆ ಮಿಲ್ಕಿ ಬ್ಯೂಟಿಯ ಹೊಳಪು ಸಿಗೋ ಮುನ್ಸೂಚನೆ!

    ಬೆಂಗಳೂರು: ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ತಮನ್ನಾ ಮಿಂಚಲಾರಂಭಿಸಿದ ಘಳಿಗೆಯಿಂದಲೇ ಅವರು ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆಂಬ ಮಾತೂ ಕೇಳಿ ಬರಲಾರಂಭಿಸಿತ್ತು. ಇದರ ಸುತ್ತ ಹರಡಿಕೊಂಡಿದ್ದ ರೂಮರುಗಳೂ ಸಾಕಷ್ಟಿವೆ. ಆದರೆ ಅದೇಕೋ ಈವರೆಗೂ ಅದಕ್ಕೆ ಕಾಲ ಮಾತ್ರ ಕೂಡಿ ಬಂದಿರಲಿಲ್ಲ. ಆದರೀಗ ಆ ಕಾಲ ಸನ್ನಿಹಿತವಾದ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ.

    ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಎರಡನೇ ಬಾರಿ ಯುವರತ್ನ ಚಿತ್ರದ ಮೂಲಕ ಒಂದಾಗಿದ್ದಾರೆ. ಇತ್ತೀಚೆಗಷ್ಟೇ ಈ ಟೈಟಲ್ಲು ಅನಾವರಣಗೊಂಡಿತ್ತು. ಆದರೆ ಆ ಕ್ಷಣದಿಂದಲೇ ಈ ಚಿತ್ರಕ್ಕೆ ಯಾರು ನಾಯಕಿಯಾಗಲಿದ್ದಾರೆಂಬ ಬಗ್ಗೆಯೂ ಕುತೂಹಲವಿತ್ತು. ಇದೀಗ ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿಯಾಗಲಿದ್ದಾರೆಂಬ ರೂಮರ್ ಹರಡಿಕೊಂಡಿದೆ.

    ತಮನ್ನಾ ಈ ಹಿಂದೆ ನಿಖಿಲ್ ಕುಮಾರ್ ನಟನೆಯ ಜಾಗ್ವಾರ್ ಚಿತ್ರದ ಹಾಡೊಂದರಲ್ಲಿ ಕುಣಿದಿದ್ದರು. ಪುನೀತ್ ರಾಜ್ ಕುಮಾರ್ ಅವರ ಜೊತೆ ಜಾಹೀರಾತಿನಲ್ಲಿಯೂ ನಟಿಸಿದ್ದರು. ಭಾರೀ ನಿರೀಕ್ಷೆ ಹುಟ್ಟಿಸಿರೋ ಕೆಜಿಎಫ್ ಚಿತ್ರದಲ್ಲಿನ ವಿಶೇಷ ಹಾಡೊಂದರಲ್ಲಿಯೂ ತಮನ್ನಾ ಕಾಣಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿಯೇ ಅವರು ತಾನು ಕನ್ನಡ ಚಿತ್ರದಲ್ಲಿ ನಟಿಸಲು ತಯಾರಿರೋದಾಗಿ ಹೇಳಿಕೊಂಡಿದ್ದರು. ಇದೀಗ ಅವರು ಪುನೀತ್ ನಟನೆಯ ಯುವರತ್ನ ಚಿತ್ರಕ್ಕೆ ನಾಯಕಿಯಾಗಲಿದ್ದಾರೆಂಬ ಮಾತು ಎಲ್ಲೆಡೆ ಕೇಳಿ ಬರಲಾರಂಭಿಸಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ದೇವರು ಒಳ್ಳೆದು ಮಾಡಲ್ಲ: ಪುನೀತ್ ರಾಜ್‍ಕುಮಾರ್

    ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ದೇವರು ಒಳ್ಳೆದು ಮಾಡಲ್ಲ: ಪುನೀತ್ ರಾಜ್‍ಕುಮಾರ್

    – ಅಭಿಮಾನಿಗಳ ಪರ `ಯುವರತ್ನ’ ಬ್ಯಾಟಿಂಗ್

    ಬೆಂಗಳೂರು: ಎಂದಿಗೂ ನಾವು ಹಾಗೂ ಅಭಿಮಾನಿಗಳು ಒಂದೆ. ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ದೇವರು ಒಳ್ಳೆದು ಮಾಡಲ್ಲ ಎಂದು ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ.

    ನಗರದ ಕಾವೇರಿ ಸಿನಿಮಾ ಮಂದಿರದಲ್ಲಿ ಪುನೀತ್ ಅಭಿನಯದ 29ನೇ ಸಿನಿಮಾದ ಟೈಟಲ್ `ಯುವರತ್ನ’ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ನಮ್ಮನ್ನ ಪ್ರೀತಿಯಿಂದ ಈ ಮಟ್ಟಕ್ಕೆ ಕರೆದುಕೊಂಡು ಬಂದಿದ್ದೀರಿ. ಅಭಿಮಾನಿಗಳಿಗೆ ಸದಾ ಧನ್ಯವಾದಗಳನ್ನು ಹೇಳುತ್ತೇನೆ. ಅಭಿಮಾನಿಗಳನ್ನ ಎಂದಿಗೂ ಬೇರೆ ವಿಚಾರಕ್ಕೆ ಬಳಸಿಕೊಂಡಿಲ್ಲ, ಬಳಸಿಕೊಳ್ಳುವುದಿಲ್ಲ. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ದೇವರು ಒಳ್ಳೆಯದು ಮಾಡಲ್ಲ. ನಮ್ಮ ಕುಟುಂಬಕ್ಕೆ 50 ವರ್ಷಗಳಿಂದ ಅಭಿಮಾನಿಗಳ ಪ್ರೀತಿ ಸಿಕ್ಕಿದೆ ಎಂದರು.

    ಅಭಿಮಾನಿಗಳ ಪ್ರೀತಿಗೆ ನಾವು ಇದುವರೆಗೂ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಆದ್ರು ನಮಗೆ ನೀವು ನೀಡುವ ಪ್ರೀತಿ ಮುಂದುವರಿಯುತ್ತದೆ. ಒಳ್ಳೆ ಸಿನಿಮಾ ಮಾಡುವ ಮೂಲಕ ನಿಮ್ಮನ್ನು ರಂಜಿಸಿ ನಿಮಗೆ ಸಂತೋಷ ಪಡಿಸುತ್ತೇವೆ. ನಮ್ಮಿಂದ ಸಾಧ್ಯವಾಗುವುದು ಇಷ್ಟೇ. ಒಂದು ವರ್ಷದ ಬಳಿಕ ರಾಜಕುಮಾರ ಸಿನಿಮಾ ಬಳಿಕ ಅದೇ ಜೋಡಿ ನಿಮ್ಮ ಮುಂದೆ ಬರುತ್ತಿದೆ. ಅದೇ ಪ್ರೊಡಕ್ಷನ್ ನಲ್ಲಿ ಮಾಡುತ್ತಿರುವುದು ಮತ್ತೊಂದು ಖುಷಿ ನೀಡಿದೆ. ಸಿನಿಮಾ ಟೈಟಲ್ ಬಗ್ಗೆ ಅವರೇ ಯೋಚನೆ ಮಾಡಿ `ಯುವರತ್ನ’ ಎಂದು ಇಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು ಕೂಡ ನಮಗೇ ಸಾಥ್ ನೀಡಿದ್ದಾರೆ ಎಂದರು. ನಗರದ ಕಾವೇರಿ ಸಿನಿಮಾ ಮಂದಿರದಲ್ಲಿ ಶೀರ್ಷಿಕೆ ಅನಾವರಣ ಮಾಡಲಾಯಿತು. ನಿಮ್ಮ ಬೆಂಬಲ ನಮಗೆ ಹೀಗೆ ಮುಂದುವರಿಯಲಿ ಎಂದು ಮನವಿ ಮಾಡಿದರು.

    ಪುನೀತ್ ಅವರು ಈ ಹೇಳಿಕೆ ಏಕೆ ನೀಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಕೆಲ ದಿನಗಳ ಹಿಂದೆ ನಿರ್ದೇಶಕ ಪ್ರೇಮ್ ಅವರು ವಿಲನ್ ಚಿತ್ರದ ಕುರಿತು ಕೆಟ್ಟದಾಗಿ ಮಾತನಾಡಿದ ಸಿನಿ ಅಭಿಮಾನಿಗಳ ವಿರುದ್ಧ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಪ್ರೇಮ್ ಅವರ ಈ ಮಾತಿಗೆ ಹೀಗೆ ಹೇಳಿದ್ದಾರಾ ಎನ್ನುವ ಚರ್ಚೆ ಈಗ ಆರಂಭವಾಗಿದೆ.

    ಅಂಧ ಅಭಿಮಾನಿಯಾದ ವಿನುತಾ ಹಾಗೂ ಮಹೇಶ್ ಅವರಿಂದ ಯವರತ್ನ ಟೈಟಲ್ ಲಾಂಚ್ ಮಾಡಿಸಿದ ಸಿನಿಮಾ ತಂಡ ಇದೇ ವೇಳೆ ಖುಷಿ ಹಂಚಿಕೊಂಡಿತು. ರಾಜನ ಮಗ ಯುವರಾಜ, ಹೀಗಾಗಿ ಯುವರತ್ನ ಎಂದು ಟೈಟಲ್ ನೀಡಿದ್ದೇವೆ. ಸಿನಿಮಾದಲ್ಲಿ ಅಪ್ಪು 16 ವರ್ಷದ ಬಳಿಕ ಚಿತ್ರದ ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/PRK_Trends/status/1057928931712610307