Tag: yuvaratna

  • ಮಾರ್ಚ್ 17ಕ್ಕೆ `ಯುವರತ್ನ’ ಸಿನಿಮಾ ಮತ್ತೆ ತೆರೆಗೆ

    ಮಾರ್ಚ್ 17ಕ್ಕೆ `ಯುವರತ್ನ’ ಸಿನಿಮಾ ಮತ್ತೆ ತೆರೆಗೆ

    ನ್ನಡ ಚಿತ್ರರಂಗದಲ್ಲಿ ಮಾರ್ಚ್ 17ಕ್ಕೆ ಎರಡೆರಡು ಸಂಭ್ರಮ. ಒಂದು ಅಪ್ಪು ಅವರ ಹುಟ್ಟುಹಬ್ಬ ಮತ್ತೊಂದು `ಕಬ್ಜ’ ಸಿನಿಮಾ ಬಹುಭಾಷೆಗಳಲ್ಲಿ ತೆರೆಕಾಣುತ್ತಿದೆ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 49ನೇ ವರ್ಷದ ಹುಟ್ಟುಹಬ್ಬವನ್ನ (Birthday) ಅದ್ದೂರಿಯಾಗಿ ಆಚರಿಸಲು ಅಪ್ಪು ಫ್ಯಾನ್ಸ್ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಲೈಗರ್ ಬ್ಯೂಟಿ ಜೊತೆ ಹಸೆಮಣೆ ಏರಲಿದ್ದಾರೆ `ಆಶಿಕಿ 2′ ಹೀರೋ

    ಪುನೀತ್ ರಾಜ್‌ಕುಮಾರ್ ಅವರು ಅಗಲಿ 2 ವರ್ಷಗಳಾಗಿದೆ. ಆದರೆ ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ. ಕಳೆದ ವರ್ಷದಂತೆ ಈ ಬಾರಿ ಕೂಡ ಅಪ್ಪು ಫ್ಯಾನ್ಸ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮಾರ್ಚ್ 17ರಂದು ಏನೆಲ್ಲಾ ವಿಶೇಷತೆಗಳು ಇರುತ್ತೆ ಅನ್ನೋದರ ಮಾಹಿತಿ ಇಲ್ಲಿದೆ.

    ಅಪ್ಪು ಹುಟ್ಟುಹಬ್ಬಕ್ಕೆ ಬೆಂಗಳೂರಿನ ಜೆಪಿ ನಗರದ ಸಿದ್ಧಲಿಂಗೇಶ್ವರ ಚಿತ್ರಮಂದಿರ ವಿಶೇಷವಾಗಿ ರೆಡಿಯಾಗಿದೆ. ನಾಳೆ ಅಪ್ಪು ಅಭಿನಯದ `ಯುವರತ್ನ’ (Yuvaratna) ಸಿನಿಮಾವನ್ನು ವಿಶೇಷವಾಗಿ ಉಚಿತ ಪ್ರದರ್ಶನ ಮಾಡಲಾಗುತ್ತಿದೆ. ಯುವರತ್ನ ಸಿನಿಮಾ ರಾತ್ರಿ 9.30ಕ್ಕೆ ವಿಶೇಷ ಪ್ರದರ್ಶನ ಮಾಡಲಾಗುತ್ತೆ. ಆ ಬಳಿಕ ರಾತ್ರಿ 12 ಗಂಟೆಗೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ. ಮಾರ್ಚ್ 12ರ ಬೆಳಗ್ಗೆ 9 ಗಂಟೆಗೆ ರಕ್ತದಾನ ಶಿಬಿರವನ್ನು ಅಪ್ಪು ಫ್ಯಾನ್ಸ್ ಹಮ್ಮಿಕೊಂಡಿದ್ದಾರೆ. ಜೆಪಿ ನಗರದ ದೊಡ್ಮನೆ ಅಭಿಮಾನಿಗಳ ಸಂಘ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಉಳಿದಂತೆ ಹಲವೆಡೆ ಅಪ್ಪು ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತೆ.

    ಅಪ್ಪು ನಟನೆಯ ಕೊನೆಯ ಸಾಕ್ಷ್ಯಚಿತ್ರ `ಗಂಧದಗುಡಿ’ ಮಾರ್ಚ್ 17ರಂದು ಒಟಿಟಿಗೆ ಲಗ್ಗೆ ಇಡುತ್ತಿದೆ. ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ. ಜೊತೆಗೆ ಅದೇ ದಿನ `ಕಬ್ಜ’ ಚಿತ್ರ ಕೂಡ ತೆರೆ ಕಾಣುತ್ತಿದ್ದು, ಚಿತ್ರತಂಡವು ಸಿನಿಮಾವನ್ನ ಪುನೀತ್‌ಗೆ ಅರ್ಪಣೆ ಮಾಡ್ತಿದ್ದಾರೆ.

  • ಕೊನೆಗೂ ಮರಳಿ ಬಂತು ಪುನೀತ್ ರಾಜ್‌ಕುಮಾರ್ ಖಾತೆಗೆ ಬ್ಲೂ ಟಿಕ್

    ಕೊನೆಗೂ ಮರಳಿ ಬಂತು ಪುನೀತ್ ರಾಜ್‌ಕುಮಾರ್ ಖಾತೆಗೆ ಬ್ಲೂ ಟಿಕ್

    ಟ ಪುನೀತ್ ರಾಜ್‌ಕುಮಾರ್, ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಜೀವಂತ. ಅವರ ಸಿನಿಮಾಗಳ ಮೂಲಕ ಜತೆಗೆ ಅವರು ಮಾಡಿರುವ ಸಾಮಾಜಿಕ ಕಾರ್ಯಗಳ ಮೂಲಕ ಎಂದು ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂಬುದಕ್ಕೆ ಈ ಸನ್ನಿವೇಶವೇ ಸಾಕ್ಷಿ. ಕೆಲ ದಿನಗಳ ಟ್ವಿಟರ್ ಸಂಸ್ಥೆ ಪುನೀತ್ ರಾಜ್‌ಕುಮಾರ್ ಖಾತೆಯಿಂದ ಬ್ಲೂ ಟಿಕ್ ತೆಗೆದು ಹಾಕಿತ್ತು. ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಅಭಿಮಾನಿಗಳ ಭಾವನೆಗೆ ಗೌರವ ಕೊಟ್ಟು, ಪುನೀತ್ ಖಾತೆಗೆ ಬ್ಲೂ ಟಿಕ್ ಮರಳಿ ಕೊಡಲಾಗಿದೆ.

    ಫೇಮಸ್ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಟ್ವಿಟರ್ ಬ್ಲೂ ಟಿಕ್ ನೀಡುತ್ತಾರೆ. ಈ ಮೂಲಕ ನಟ ನಟಿಯರ ಅಧಿಕೃತ ಖಾತೆ ಯಾವುದು ಅಂತಾ ಸೂಚಿಸುತ್ತದೆ. ಇದರಿಂದ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಸ್ಟಾರ್‌ಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳನ್ನ ಹಂಚಿಕೊಳ್ಳಬಹುದು. ಹಾಗೆಯೇ ದೀರ್ಘ ಕಾಲದವೆರೆಗೆ ಆ ಖಾತೆ ಆಕ್ಟೀವ್ ಇಲ್ಲದೇ ಇದ್ದರೆ ಬ್ಲೂ ಟಿಕ್ ಅನ್ನು ತೆಗೆದು ಹಾಕಲಾಗುತ್ತದೆ. ಅದೇ ರೀತಿ ಪುನೀತ್ ರಾಜ್‌ಕುಮಾರ್ ಖಾತೆಯ ವಿಚಾರದಲ್ಲಿ ಆಗಿತ್ತು. ಇದನ್ನೂ ಓದಿ:ಬ್ರೇಕಪ್ ನಂತರ ಸ್ಟಾರ್ ನಟಿ ಸಹೋದರನ ಜೊತೆ ಇಲಿಯಾನಾ ಡೇಟಿಂಗ್

    ಪುನೀತ್ ಖಾತೆಯಿಂದ ಬ್ಲೂ ಟಿಕ್ ತೆಗೆದು ಹಾಕಿದಕ್ಕೆ ಅಪ್ಪು ಫ್ಯಾನ್ಸ್ ಫುಲ್ ಗರಂ ಆಗಿದ್ದರು. ಜತೆಗೆ ಭಾವುಕರಾಗಿದ್ದರು. ಈ ಪರಿಣಾಮವಾಗಿ ಈಗ ಅಪ್ಪು ಖಾತೆಗೆ ಟ್ವಿಟರ್ ಬ್ಲೂ ಟಿಕ್ ನೀಡಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈ ಕುರಿತು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಕೂಡ ಟ್ವೀಟ್ ಮಾಡಿ, ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳ ಪ್ರೀತಿಗೆ ಅದೆಷ್ಟು ಪವರ್ ಇದೆ ಎಂಬುದನ್ನ ಸಾರಿ ಹೇಳುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬರಲಿವೆ ಪುನೀತ್ ನಟನೆಯ ‘ಯುವರತ್ನ’ ಸಿನಿಮಾದ ಅನ್ ಕಟ್ ಸೀನ್ಸ್ : ನಿರ್ದೇಶಕ ಸಂತೋಷ್ ಆನಂದ್

    ಬರಲಿವೆ ಪುನೀತ್ ನಟನೆಯ ‘ಯುವರತ್ನ’ ಸಿನಿಮಾದ ಅನ್ ಕಟ್ ಸೀನ್ಸ್ : ನಿರ್ದೇಶಕ ಸಂತೋಷ್ ಆನಂದ್

    ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಸಿನಿಮಾ ಕಳೆದ ವರ್ಷ ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವಂತೆ ದುಡ್ಡು ತಂದು ಕೊಡದೇ ಇದ್ದರೂ, ಆ ಸಿನಿಮಾದ ಆಶಯದಿಂದಾಗಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸರಕಾರಿ ಕಾಲೇಜುಗಳ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನಿಟ್ಟುಕೊಂಡು ಮಾಡಿರುವ ಚಿತ್ರದಲ್ಲಿ ಸಮಾಜದ ಕಾಳಜಿ ಎದ್ದು ಕಾಣುತ್ತಿತ್ತು. ಹೀಗಾಗಿ ಯುವರತ್ನ ಸಿನಿಮಾ ಪುನೀತ್ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಇದನ್ನೂ ಓದಿ : ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ

    ಡಾ.ರಾಜ್ ಕುಮಾರ್ ಈ ಹಿಂದೆ ಕಾಲೇಜು ವಿದ್ಯಾರ್ಥಿಗಳಿಗೆ ಸಪ್ಲೈ ಆಗುತ್ತಿದ್ದ ಡ್ರಗ್ಸ್ ಕುರಿತಾದ ಚಿತ್ರವೊಂದನ್ನು ಮಾಡಿದ್ದರು. ಯುವರತ್ನ ಸಿನಿಮಾದಲ್ಲೂ ಅಂತಹ ದೃಶ್ಯಗಳಿದ್ದವು. ಆ ಎರಡೂ ಸಿನಿಮಾಗಳನ್ನು ಅಭಿಮಾನಿಗಳು ಹೋಲಿಕೆ ಮಾಡಿದ್ದರು. ಆ ಸಿನಿಮಾ ಕೆಲವು ದೃಶ್ಯಗಳನ್ನು ತೆರೆಗೆ ತಂದಿರಲಿಲ್ಲ ನಿರ್ದೇಶಕರು. ಈಗ ಆ ದೃಶ್ಯಗಳನ್ನು ತರುವ ಆಲೋಚನೆ ಮಾಡಿದ್ದಾರೆ. ಇದನ್ನೂ ಓದಿ : ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಪುನೀತ್ ಅಭಿಮಾನಿಯೊಬ್ಬ ಟ್ವಿಟರ್ ಮೂಲಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ‘ಸಂತು ಅಣ್ಣ ನಿಮ್ಮಿಂದ ನಾವು ಇನ್ನೇನು ಕೇಳೋಕೆ ಆಗಲ್ಲ. ಆದರೆ, ಯುವರತ್ನ ಚಿತ್ರದ ಡಿಲಿಟೆಡ್ ಸೀನ್ಸ್ ಹಾಗೂ ಬಿಜಿಎಂ ಮಾತ್ರ ಕೇಳ್ತೀವಿ. ದಯವಿಟ್ಟು ಬಿಡಿ ಅಣ್ಣ’ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

    ಚಂದು ಎಂಬ ಅಭಿಮಾನಿಯ ಈ ಕೋರಿಕೆಗೆ ಪ್ರತಿಕ್ರಿಯೆ ನೀಡಿರುವ ಸಂತೋಷ್ ಆನಂದ್ ರಾಮ್ “ಈಗಲೇ ಎಲ್ಲವನ್ನೂ ರಿಲೀಸ್ ಮಾಡುವುದಕ್ಕೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಖಂಡಿತಾ ಎಲ್ಲವನ್ನೂ ಅಭಿಮಾನಿಗಳಿಗೆ ಕೊಡುತ್ತೇವೆ. ನಮ್ ಪವರ್ ಸ್ಟಾರ್ ಯಾವತ್ತಿಗೂ ತೆರೆಯ ಮೇಲೆ ಇರಬೇಕು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಯುವರತ್ನ ಸಿನಿಮಾದ ಅನ್ ಕಟ್ ದೃಶ್ಯಗಳನ್ನು ನೋಡುವಂತಹ ಭಾಗ್ಯವನ್ನು ಅವರು ಅಭಿಮಾನಿಗಳಿಗೆ ಕಲ್ಪಿಸಲಿದ್ದಾರೆ.

  • Exclusive – ಬೆಂಗಳೂರು ಚಿತ್ರೋತ್ಸವ ಅವಾರ್ಡ್ 2021 : ಅತ್ಯುತ್ತಮ ಪಾಪ್ಯುಲರ್ ಚಿತ್ರ ಯುವರತ್ನ, ಅತ್ಯುತ್ತಮ ಕನ್ನಡ ಚಿತ್ರ ದೊಡ್ಡ ಹಟ್ಟಿ ಬೋರೇಗೌಡ

    Exclusive – ಬೆಂಗಳೂರು ಚಿತ್ರೋತ್ಸವ ಅವಾರ್ಡ್ 2021 : ಅತ್ಯುತ್ತಮ ಪಾಪ್ಯುಲರ್ ಚಿತ್ರ ಯುವರತ್ನ, ಅತ್ಯುತ್ತಮ ಕನ್ನಡ ಚಿತ್ರ ದೊಡ್ಡ ಹಟ್ಟಿ ಬೋರೇಗೌಡ

    ಏಳು ದಿನಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ 13ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭ ಇಂದು ಬೆಂಗಳೂರಿನ ಜೆ.ಎನ್.ಟಾಟಾ ಆಡಿಟೋರಿಯಂನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರೋತ್ಸವದಲ್ಲಿ ಭಾಗಿಯಾಗಿ, ನಾನಾ ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಸಿನಿಮಾಗಳಿಗೆ  ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡಿದರು.

    ಮುಖ್ಯ ಅಥಿಗಳಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್. ಜೈರಾಜ್, ಚಿತ್ರೋತ್ಸವದ ಕಲಾತ್ಮಾಕ ನಿರ್ದೇಶಕ ನರಹರಿರಾವ್, ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಮುಂತಾದವರು ಭಾಗಿಯಾಗಿದ್ದರು.

    2021 ನೇ ಸಾಲಿನ ಪ್ರಶಸ್ತಿಗಳು

    ಕನ್ನಡ ಪಾಪ್ಯೂಲರ್ ಎಂಟರ್ ಟೇನ್ಮೆಂಟ್ : ಮೋಸ್ಟ್ ಪಾಪ್ಯುಲರ್ ಕನ್ನಡ ಸಿನಿಮಾ ಅವಾರ್ಡ್

    ಅತ್ಯುತ್ತಮ ಚಿತ್ರ : ಯುವರತ್ನ  ( ನಿರ್ದೇಶಕ ಸಂತೋಷ್ ಆನಂದರಾವ್)

    ಅತ್ಯುತ್ತಮ ಎರಡನೇ ಸಿನಿಮಾ : ರಾಬರ್ಟ್   ( ನಿರ್ದೇಶಕ ತರುಣ್ ಸುಧೀರ್)

    ಅತ್ಯುತ್ತಮ ಮೂರನೇ ಸಿನಿಮಾ : ಲವ್ ಕೋಟಿಗೊಬ್ಬ  ( ನಿರ್ದೇಶಕ ಶಿವಕಾರ್ತಿಕ್)

    ಪೊಗರು (ಸ್ಪೇಷಲ್ ಜ್ಯೂರಿ ಅವಾರ್ಡ್ )

     ಕನ್ನಡ ಸಿನಿಮಾ ಕಾಂಪಿಟೇಷನ್ : ಬೆಸ್ಟ್ ಫಿಲ್ಮ್ ಅವಾರ್ಡ್

    ಅತ್ಯುತ್ತಮ ಚಿತ್ರ : ದೊಡ್ಡ ಹಟ್ಟಿ ಬೋರೇಗೌಡ ( ನಿರ್ದೇಶಕ ರಘುಕೆ.ಎಂ)

    ಅತ್ಯುತ್ತಮ ಎರಡನೇ ಸಿನಿಮಾ : ದಂಡಿ  (ನಿರ್ದೇಶಕ ವಿಶಾಲ್ ರಾಜ್ )

    ಅತ್ಯತ್ತಮ ಮೂರನೇ ಸಿನಿಮಾ : ದೇವರ ಕಾಡು  ( ನಿರ್ದೇಶಕ ಅಮರ್ ಎಲ್)

    ಕೇಕ್ (ಸ್ಪೇಷಲ್ ಜ್ಯೂರಿ ಅವಾರ್ಡ್ )

  • ಪುನೀತ್ ದೇವರ ಸ್ವರೂಪದಲ್ಲಿದ್ದರು, ಆದ್ರೆ ನಮಗೆ ತಿಳಿಯಲಿಲ್ಲ: ಸೋನು ಗೌಡ

    ಪುನೀತ್ ದೇವರ ಸ್ವರೂಪದಲ್ಲಿದ್ದರು, ಆದ್ರೆ ನಮಗೆ ತಿಳಿಯಲಿಲ್ಲ: ಸೋನು ಗೌಡ

    ಬೆಂಗಳೂರು: ಪುನೀತ್ ಅವರು ದೇವರ ಸ್ವರೂಪದಲ್ಲಿದ್ದರು. ಆದರೆ ಅದು ನಮಗೆ ಗೊತ್ತಾಗಲಿಲ್ಲ. ಅವರಲ್ಲಿ ಈಶ್ವರನಂತಹ ನಟರಾಜನ ಕಲೆ, ಲಕ್ಷ್ಮೀ, ಸರಸ್ವತಿ, ಅನ್ನ ಪೂರ್ಣೇಶ್ವರಿ, ಗುರು ರಾಯರಂತಹ ತಾಳ್ಮೆ ಎಲ್ಲ ರೀತಿಯ ದೇವರ ಗುಣಗಳಿದ್ದವು ಎಂದು ನಟಿ ಸೋನು ಗೌಡ ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಯ ನೋವು ಚಿತ್ರರಂಗವನ್ನು ಕಾಡುತ್ತಿದೆ. ಈ ಮಧ್ಯೆ ಪುನೀತ್ ಜೊತೆ ನಟಿಸಿದ್ದ ನಟಿ ಸೋನುಗೌಡ ಅವರು, ಪುನೀತ್ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಶೂಟಿಂಗ್, ತಿಂಡಿ ಬಿಟ್ಟು ಪುನೀತ್‍ಗೆ ಪ್ರಪಂಚವೇ ಗೊತ್ತಿರಲಿಲ್ಲ – ಅಪ್ಪು ನೆನೆದು ಸಹೋದರಿ ಲಕ್ಷ್ಮೀ ಕಣ್ಣೀರು

    ಪುನೀತ್ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅಪ್ಪು ಸರ್ ಇನ್ನಿಲ್ಲ ಎಂದು ನನ್ನ ತಂಗಿ ಕರೆ ಮಾಡಿ ಹೇಳಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಇಂದಿಗೂ ಅವರ ಸಾವನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಅಪ್ಪು ಅವರ ದೊಡ್ಡ ಅಭಿಮಾನಿ. ನನ್ನನ್ನು ನೀವು ಯಾರ ಜೊತೆ ನಟಿಸಲು ಇಷ್ಟಪಡುತ್ತೀರಾ ಎಂದು ಯಾರಾದರೂ ಕೇಳಿದರೆ ನಾನು ಮೊದಲು ಅಪ್ಪು ಸರ್ ಹೆಸರನ್ನು ಹೇಳುತ್ತಿದೆ. ಇದು ಅವರಿಗೂ ತಿಳಿದಿತ್ತು. ನಾನು ಅವರ ಬಳಿ ಅನೇಕ ಬಾರಿ ನಿಮ್ಮೊಂದಿಗೆ ಚಿತ್ರದಲ್ಲಿ ಕೆಲಸ ಮಾಡಲೇಬೇಕು ನೀವು ನನಗೊಂದು ಅವಕಾಶ ನೀಡಲೇಬೇಕೆಂದು ಹೇಳಿಕೊಂಡಿದ್ದೆ. ಆಗ ಹೊಸ ಸ್ಕ್ರೀಪ್ಟ್ ತೆಗೆದುಕೊಂಡು ಬನ್ನಿ ನಿಮಗೆ ಸೂಟ್ ಆಗುತ್ತದೆ ಎಂದರೆ ಖಂಡಿತ ಅವಕಾಶ ನೀಡುತ್ತೇನೆ ಎಂದಿದ್ದರು ಅಂತ ತಿಳಿಸಿದ್ದಾರೆ.

    ನನ್ನ ಮೊದಲ ಮೂವಿ ಇಂತಿ ನಿನ್ನ ಪ್ರೀತಿಯಗೆ ಅಪ್ಪು ಅವರು ಕ್ಲಾಪ್ ಮಾಡಿದ್ದರು. ಪರಮೇಶ ಪಾನವಾಲಾ ಸಿನಿಮಾದ ಶೂಟಿಂಗ್ ವೇಳೆ ಅವರನ್ನು ಸಾಕಷ್ಟು ಬಾರಿ ಭೇಟಿಯಾಗುತ್ತಿದೆ. ಆದಾದ ನಂತರ ಯುವರತ್ನ ಶೂಟಿಂಗ್ ಸಮಯದಲ್ಲಿ ಅವರ ಮನೆಗೆ ಊಟಕ್ಕೆ ಅಂತ ಹೋಗಿದ್ದೆ. ಪುನೀತ್ ಅವರು ತಿಂಡಿ ಪ್ರಿಯರು ಹಾಗಾಗಿ ಯಾವಾಗಲೂ ಏನಾದರೂ ಊಟ ತರಿಸಿಕೊಡುತ್ತಿದ್ದರು. ಯಾವತ್ತು ತಾನೊಬ್ಬ ಸ್ಟಾರ್ ನಟನಂತೆ ನಡೆದುಕೊಂಡಿಲ್ಲ. ಸದಾ ಸ್ನೇಹಿತರಂತೆ ಇರುತ್ತಿದ್ದರು. ಆದರೆ ಇಂದು ಅಪ್ಪು ಅವರು ನನ್ನನ್ನು ಎಲ್ಲಿದಲೋ ನೋಡುತ್ತಿದ್ದಾರೆ. ನಾನು ಮಾಡುತ್ತಿರುವ ಕೆಲಸದಲ್ಲಿದ್ದಾರೆ ಅನಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಅಪ್ಪು ಇಷ್ಟೆಲ್ಲ ಸಮಾಜಕ್ಕೆ ದಾನ ಮಾಡಿದ್ದಾನೆ ಎಂದುಕೊಂಡಿರಲಿಲ್ಲ: ಗೋವಿಂದರಾಜು

    ಒಮ್ಮೆ ಯುವರತ್ನ ಸಿನಿಮಾದಲ್ಲಿ ಒಂದು ಲಾಯರ್ ಪಾತ್ರವಿದೆ ಅಭಿನಯಿಸುತ್ತೀರಾ ಎಂದು ಕರೆಬಂದಿತ್ತು. ನಂತರ ಆಡಿಶನ್‍ಗೆ ಹೋಗಿದ್ದೆ, ಆದ್ರೆ ನೇರವಾಗಿ ಫೋಟೋ ಶೂಟ್ ಮಾಡಿ ನೀವು ಸೆಲೆಕ್ಟ್ ಆಗಿದ್ದೀರಾ ಎಂದು ತಿಳಿಸಿದ್ದರು. ದೇವರ ಅನುಗ್ರಹದಿಂದ ಯುವರತ್ನ ಸಿನಿಮಾದಲ್ಲಿ ಅಪ್ಪು ಅವರೊಂದಿಗೆ ಕೊನೆಗೂ ಅಭಿನಯಿಸಲು ಅವಕಾಶ ಸಿಕ್ಕಿತು. ನನಗೆ ಅಪ್ಪು ಅವರ ಡ್ಯಾನ್ಸ್, ಫೈಟ್ ಅವರು ಮಾತನಾಡುವ ರೀತಿ ನನಗೆ ಬಹಳ ಇಷ್ಟ. ಪುನೀತ್ ಅವರ ಇಷ್ಟು ಸಮಾಜ ಸೇವೆ ಮಾಡಿದ್ದಾರೆ ಅಂತ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ

    46 ಸಂಖ್ಯೆಗೂ ಪುನೀತ್ ಅವರಿಗೂ ಇರುವ ಸಂಬಂಧವನ್ನೆಲ್ಲಾ ನೋಡುತ್ತಿದ್ದರೆ, ಪುನೀತ್ ಅವರು ದೇವರ ಸ್ವರೂಪದಲ್ಲಿದ್ದರು. ಆದರೆ ಅದು ನಮಗೆ ಗೊತ್ತಾಗಲಿಲ್ಲ ಅನಿಸುತ್ತದೆ. ಅವರಲ್ಲಿ ಈಶ್ವರನಂತಹ ನಟರಾಜನ ಕಲೆ, ಲಕ್ಷ್ಮೀ, ಸರಸ್ವತಿ, ಅನ್ನ ಪೂರ್ಣೇಶ್ವರಿ, ಗುರು ರಾಯರಂತಹ ತಾಳ್ಮೆ ಎಲ್ಲ ರೀತಿಯ ದೇವರ ಗುಣಗಳಿದ್ದವು. ಯಾವತ್ತು ಅವರು ಯಾರಿಗೂ ಬೈದು ಮಾತನಾಡಿಸಲಿಲ್ಲ. ಅಪ್ಪು ಅವರು ಯಾವಾಗಲೂ ನಮ್ಮ ಜೊತೆಯಲ್ಲಿಯೇ ಇದ್ದಾರೆ ಎಂಬ ಭಾವನೆ ನನಗಿದೆ ಎಂದು ನುಡಿದಿದ್ದಾರೆ.

  • ಪುನೀತ್‍ಗೆ ‘ಒನ್ ಮ್ಯಾನ್ ಶೋ’ ಅಂದ ರಕ್ಷಿತ್ ಶೆಟ್ಟಿ

    ಪುನೀತ್‍ಗೆ ‘ಒನ್ ಮ್ಯಾನ್ ಶೋ’ ಅಂದ ರಕ್ಷಿತ್ ಶೆಟ್ಟಿ

    ಬೆಂಗಳೂರು: ಚಿತ್ರರಂಗದಲ್ಲಿ ನಟರ ಮಧ್ಯೆ ಪೈಪೋಟಿ ಸಹಜ. ಹಾಗೆಯೇ ಒಳ್ಳೆಯ ಸಿನಿಮಾಗಳು ಬಂದಾಗ ಒಬ್ಬರಿಗೊಬ್ಬರು ಪ್ರಶಂಶಿಸುವುದು ಕೂಡ ಕಾಮನ್. ಸದ್ಯ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ವೀಕ್ಷಿಸಿದ ನಟ ರಕ್ಷಿತ್ ಶೆಟ್ಟಿ ಪುನೀತ್ ನಟನೆಗೆ ಫಿದಾ ಆಗಿದ್ದಾರೆ.

    ಸೋಮವಾರ ರಾತ್ರಿ ಯುವರತ್ನ ಸಿನಿಮಾ ನೋಡುವ ಬಗ್ಗೆ ಟ್ವೀಟ್ ಮಾಡಿದ್ದ ರಕ್ಷಿತ್, ಸಿನಿಮಾ ವೀಕ್ಷಿಸಿದ ನಂತರ ಪುನೀತ್ ಅಭಿನಯಕ್ಕೆ ಮಾರು ಹೋಗಿದ್ದಾರೆ. ಈ ಬಗ್ಗೆ ರಕ್ಷಿತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒನ್ ಮ್ಯಾನ್ ಶೋ.. ಅಪ್ಪು ಸರ್.. ಎಂದು ಕ್ಯಾಪ್ಷನ್ ಹಾಕುವ ಮೂಲಕ ಟ್ವೀಟ್ ಮಾಡಿದ್ದಾರೆ.

    ಪುನೀತ್ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಸಿನಿಮಾ ವೀಕ್ಷಿಸಲು ಶೇ.50 ರಷ್ಟು ಜನ ವೀಕ್ಷಿಸಲು ಸರ್ಕಾರ ಅನುಮತಿ ನೀಡಿದಾಗ, ಯುವರತ್ನ ಚಿತ್ರತಂಡಕ್ಕೆ ಬೆಂಬಲವಾಗಿ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದರು. ಕೆಲವು ದಿನಗಳ ಬಳಿಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂತೆಗೆದುಕೊಂಡಾಗ, ಪುನೀತ್ ರಾಜ್‍ಕುಮಾರ್ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು. ಈ ವೇಳೆ ರಕ್ಷಿತ್ ಶೆಟ್ಟಿಗೆ ಕೂಡ ಪುನೀತ್ ಧನ್ಯವಾದ ಹೇಳುವುದನ್ನು ಮರೆಯಲಿಲ್ಲ.

    ಸದ್ಯ ರಕ್ಷಿತ್ ಶೆಟ್ಟಿ ಚಾರ್ಲಿ 999 ಸಿನಿಮಾದಲ್ಲಿ ಅಭಿನಯಿಸಿದ್ದು, ಸಿನಿಮಾ ಮುಂಬರುವ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ.

  • ಸರ್ಕಾರದ ನಿರ್ಧಾರವನ್ನು ಗೌರವಿಸುವುದು ನಮ್ಮ ಕರ್ತವ್ಯ: ಕಿಚ್ಚ ಸುದೀಪ್

    ಸರ್ಕಾರದ ನಿರ್ಧಾರವನ್ನು ಗೌರವಿಸುವುದು ನಮ್ಮ ಕರ್ತವ್ಯ: ಕಿಚ್ಚ ಸುದೀಪ್

    – ಗೆದ್ದು ಬೀಗುವಂತೆ ಯುವರತ್ನಗೆ ಶುಭ ಹಾರೈಕೆ

    ಬೆಂಗಳೂರು: ಥಿಯೇಟರ್ ಗಳಲ್ಲಿ ಶೇ.50ರಷ್ಟು ಭತೀಗೆ ಅವಕಾಶ ನೀಡಿರುವ ಸರ್ಕಾರದ ನಿರ್ಧಾರವನ್ನು ನಾವು ಗೌರವಿಸಬೇಕಾಗಿದೆ ಎಂದು ಸ್ಯಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ನಟ, ಥಿಯೇಟರ್ ಗಳಲಿ ಮತ್ತೆ ಶೇ.50ರಷ್ಟು ಆಸನಗಳನ್ನು ಭರ್ತಿ ಮಾಡಬೇಕು ಎಂದರೆ ನಿಜಕ್ಕೂ ಇದೊಂದು ಶಾಕಿಂಗ್ ಬೆಳವಣಿಗೆಯಾಗಿದೆ. ಸರ್ಕಾರದ ನಿರ್ಧಾರದಿಂದ ಈಗ ತಾನೇ ಬಿಡುಗಡೆ ಆದ ಚಿತ್ರಕ್ಕೆ ಆತಂಕ ಎದುರಾಗಿದೆ. ಸರ್ಕಾರದ ನಿಯಮಗಳನ್ನು ಗೌರವಿಸುವುದು ಕೂಡ ನಮ್ಮ ಕರ್ತವ್ಯವಾಗುತ್ತದೆ. ಆದರೂ ಇಂತಹ ಸಂದರ್ಭವನ್ನು ಎದುರಿಸಿ ಗೆದ್ದು ಬರುವ ಶಕ್ತಿ ಯುವರತ್ನ ತಂಡಕ್ಕೆ ಸಿಗಲಿ ಎಂದು ಆಶಿಸುವುದಾಗಿ ಅವರು ತಿಳಿಸಿದರು.

    ರಾಜ್ಯದಲ್ಲಿ ಮಾಹಾಮಾರಿ ಕೊರೊನಾ ವೈರಸ್ ಅಬ್ಬರ ಮತ್ತೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಕಲಬುರಗಿ, ಬೀದರ್ ಹಾಗೂ ಧಾರವಾಡ ಜಿಲ್ಲೆಗಳ ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ಭರ್ತಿಗೆ ಸರ್ಕಾರ ಆದೇಶ ಹೊರಡಿಸಿತ್ತು.

    ಸರ್ಕಾರದ ಈ ನಿರ್ಧಾರಕ್ಕೆ ನಟ ಪುನೀತ್ ರಾಜ್ ಕುಮಾರ್ ತೀವ್ರ ಆಕ್ಷೇಪ ಹಾಗೂ ಬೇಸರ ಹೊರಹಾಕಿದ್ದರು. ಯಾಕಂದರೆ ಪುನೀತ್ ನಟನೆಯ ಯುವರತ್ನ ಚಿತ್ರ ಬಿಡುಗಡೆಯಾಗಿ ಕೇವಲ 2 ದಿನಕ್ಕೆ ಸರ್ಕಾರ ಈ ನಿರ್ಬಂದ ಹೇರಿದ್ದ ಕಾರಣ ನಟ ಆಕ್ರೋಶ ಹೊರಹಾಕಿದ್ದರು. ಕೇವಲ ಪುನೀತ್ ರಾಜ್ ಕುಮಾರ್ ಮಾತ್ರವಲ್ಲದೆ ಚಂದನವನದ ಇತರರು ಕೂಡ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.

  • ಯುವರತ್ನ ಸೇರಿದಂತೆ ಎಲ್ಲಾ ಕನ್ನಡ ಸಿನಿಮಾಗಳನ್ನು ನೋಡಿ, ಆಶೀರ್ವದಿಸಿ: ಪುನೀತ್

    ಯುವರತ್ನ ಸೇರಿದಂತೆ ಎಲ್ಲಾ ಕನ್ನಡ ಸಿನಿಮಾಗಳನ್ನು ನೋಡಿ, ಆಶೀರ್ವದಿಸಿ: ಪುನೀತ್

    – ಸಿನಿಮಾಕ್ಕೆ ಬರುವಾಗ ಮಾಸ್ಕ್ ಧರಿಸಿ, ಕೊರೊನಾ ನಿಯಮ ಪಾಲಿಸಿ
    – ಮಂಡ್ಯದ ಅಭಿಮಾನಕ್ಕೆ ಬೆಲೆ ಇಲ್ಲ

    ಮಂಡ್ಯ: ಯುವರತ್ನ ಸೇರಿದಂತೆ ಎಲ್ಲಾ ಕನ್ನಡ ಸಿನಿಮಾಗಳನ್ನು ನೋಡಿ ಆಶೀರ್ವದಿಸಿ. ಹಾಗೆಯೇ ಸಿನಿಮಾ ನೋಡಲು ಬರುವಾಗ ಮಾಸ್ಕ್ ಧರಿಸಿ, ಕೊರೊನಾ ನಿಯಮ ಪಾಲಿಸಿ ಎಂದು ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

    ಸಿನಿಮಾ ಪ್ರಮೋಷನ್‍ಗಾಗಿ ಮೈಸೂರು ಬಳಿಕ ಮಂಡ್ಯಕ್ಕೆ ತೆರಳಿದ ಅಪ್ಪುಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಜೆಸಿಬಿ ಮೂಲಕ ಹೂಮಳೆ ಸುರಿಸಿ ಅಪ್ಪುಗೆ ಸ್ವಾಗತ ಕೋರಲಾಯಿತು. ಕಿರಗಂದೂರು ಗೇಟ್ ಬಳಿ ನೂರಾರು ಅಭಿಮಾನಿಗಳು ಅಪ್ಪು ಅಪ್ಪು ಎಂದು ಕೂಗಿದರು.

    ಕಿರಗಂದೂರು ಯುವರತ್ನ ಸಿನಿಮಾ ನಿರ್ಮಾಪಕ ವಿಜಯ್ ಅವರ ಹುಟ್ಟೂರಾಗಿದ್ದು, ಹೀಗಾಗಿ ಕಿರಗಂದೂರು ಗೇಟ್ ಬಳಿಯಿಂದ ಸಿಲ್ವರ್ ಜ್ಯುಬಿಲಿ ಪಾರ್ಕ್‍ವರೆಗೂ ಬೈಕ್ ರ್ಯಾಲಿ ನಡೆಸಲಾಯಿತು. ಬೆಳ್ಳಿ ರಥದಲ್ಲಿ ಪುನೀತ್ ರಾಜ್‍ಕುಮಾರ್ ರೋಡ್ ಷೋ ಮಾಡಿದ್ರು. ಈ ವೇಳೆ ನಟ ಡಾಲಿ ಧನಂಜಯ, ನಿರ್ದೇಶಕ ಸಂತೋಷ್, ನಿರ್ಮಾಪಕ ವಿಜಯ್ ಕಿರಗಂದೂರು ಸಾಥ್ ನೀಡಿದರು. ನಂತರ ಸಿಲ್ವರ್ ಜ್ಯುಬಿಲಿ ಪಾರ್ಕ್‍ನಲ್ಲಿ ಕಾರ್ಯಕ್ರಮ ನೆರವೇರಿತು.

    ಇದೇ ವೇಳೆ ಡ್ಯಾನ್ಸ್ ಮಾಡುವಂತೆ ಪುನೀತ್ ಮುಂದೆ ಅಭಿಮಾನಿಗಳು ಬೇಡಿಕೆ ಇಟ್ಟರು. ಈ ಹಿನ್ನೆಲೆಯಲ್ಲಿ ಯುವರತ್ನ ಸಿನಿಮಾದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳನ್ನು ಅಪ್ಪು ರಂಜಿಸಿದರು.

    ಬಳಿಕ ಮಾತನಾಡಿದ ಪುನೀತ್, ಮಂಡ್ಯದ ಅಭಿಮಾನಕ್ಕೆ ಬೆಲೆ ಇಲ್ಲ. ಮಂಡ್ಯದ ಊಟ, ಅಭಿಮಾನಿಗಳ ಪ್ರೀತಿ ತುಂಬಾ ಇಷ್ಟ. ಕನ್ನಡ ಸಿನಿಮಾ, ಕಲಾವಿದರ ಮೇಲೆ ಮಂಡ್ಯ ಜನ ಅಪಾರ ಪ್ರೀತಿ ಇಟ್ಟಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ಬೆಲೆ ಇಲ್ಲ. ಕನ್ನಡ ಸಿನಿಮಾ, ಕಲಾವಿದರ ಮೇಲೆ ಹೀಗೇ ನಿರಂತರವಾಗಿ, ಪ್ರೀತಿ ಇರಲಿ. ಯುವರತ್ನ ಸೇರಿದಂತೆ ಎಲ್ಲಾ ಕನ್ನಡ ಸಿನಿಮಾಗಳನ್ನು ನೋಡಿ, ಆಶೀರ್ವದಿಸಿ. ಸಿನಿಮಾಕ್ಕೆ ಬರುವಾಗ ಮಾಸ್ಕ್ ಧರಿಸಿ, ಕೊರೋನಾ ನಿಯಮ ಪಾಲಿಸಿ ಎಂದು ಹೇಳಿದರು.

  • ಫೀಲ್ ದಿ ಪವರ್ – ದಾಡಿ ಬಿಟ್ಟು ರಗಡ್ ಲುಕ್‍ನಲ್ಲಿ ಯುವರತ್ನ

    ಫೀಲ್ ದಿ ಪವರ್ – ದಾಡಿ ಬಿಟ್ಟು ರಗಡ್ ಲುಕ್‍ನಲ್ಲಿ ಯುವರತ್ನ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಸಿನಿಮಾದ 5ನೇ ಸಾಂಗ್ ಇಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಿದೆ.

    ಫೀಲ್ ದಿ ಪವರ್ ಎಂಬ ಲಿರಿಕಲ್‍ನಿಂದ ಪ್ರಾರಂಭವಾಗುವ ಈ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್(10 ಲಕ್ಷ)ಕ್ಕೂ ಅಧಿಕ ವಿವ್ಸ್ ಪಡೆದುಕೊಂಡಿದ್ದು, ಯೂಟ್ಯೂಬ್‍ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಈ ಹಾಡಿನಲ್ಲಿ ಅಪ್ಪು ದಾಡಿ ಬಿಟ್ಟು, ಕೈನಲ್ಲಿ ಗನ್ ಹಿಡಿದು, ರಗಡ್ ಲುಕ್‍ನಲ್ಲಿ ಮಿಂಚಿರುವ ಫೋಟೋ ಇದೆ. ಈ ಹಾಡಿಗೆ ಶಂಕರ್ ಶೇಷಗಿರಿ ಕಂಠದಾನ ಮಾಡಿದ್ದು, ಸಂತೋಷ್ ಆನಂದ್ ರಾಮ್ ಸಾಹಿತ್ಯ ರಚಿಸಿದ್ದಾರೆ. ಜೊತೆಗೆ ಈ ಹಾಡಿನಲ್ಲಿ ಪುನೀತ್‍ಗೆ ಜಾನಿ ನೃತ್ಯ ನಿರ್ದೇಶನ ಮಾಡಿದ್ದು, ಎಸ್ ತಮನ್ ಸಂಗೀತಾ ಸಂಯೋಜಿಸಿದ್ದಾರೆ.

    ಪ್ರೇಕ್ಷಕರಿಂದ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏಪ್ರಿಲ್ 1 ರಂದು ಬಿಡುಗಡೆಯಾಗಿಲಿರುವ ಯುವರತ್ನ ಸಿನಿಮಾ ಪುನೀತ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾವಾಗಿದ್ದು, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

    ಯುವರತ್ನ ಸಿನಿಮಾದಲ್ಲಿ ಪುನೀತ್‍ಗೆ ಜೋಡಿಯಾಗಿ ಸುಯೇಶಾ ಹಾಗೂ ಸೋನು ಗೌಡ ಮಿಂಚಿದ್ದಾರೆ. ಈ ಮುನ್ನ ಪುನೀತ್ ರಾಜ್ ಕುಮಾರ್ ಅಭಿನಯದ ರಾಜುಕುಮಾರ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಸಿನಿಮಾದ ಪ್ರಮುಖ ಪಾತ್ರದಲ್ಲಿ ಧನಂಜಯ್, ಪ್ರಕಾಶ್‍ರಾಜ್ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

  • ಈ ಬಾರಿ ಹುಟ್ಟುಹಬ್ಬ ಆಚರಿಸಲ್ಲ, ಮಾ.20ಕ್ಕೆ ಮೈಸೂರಲ್ಲಿ ಸಿಗೋಣ: ಪುನೀತ್

    ಈ ಬಾರಿ ಹುಟ್ಟುಹಬ್ಬ ಆಚರಿಸಲ್ಲ, ಮಾ.20ಕ್ಕೆ ಮೈಸೂರಲ್ಲಿ ಸಿಗೋಣ: ಪುನೀತ್

    ಬೆಂಗಳೂರು: ಕೊರೊನಾ ಹಿನ್ನೆಲೆ ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದಿಲ್ಲ ಎಂದು ನಟ ಪುನೀತ್ ರಾಜ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ, ದಯವಿಟ್ಟು ಯಾರೂ ಮನೆಗೆ ಬರಬೇಡಿ. ಮಾರ್ಚ್ 20ರಂದು ಮೈಸೂರಿನಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ ಅಲ್ಲಿಯೇ ಸಿಗೋಣ ಎಂದು ಹೇಳಿದ್ದಾರೆ.

    ಹುಟ್ಟುಹಬ್ಬದ ದಿನ ನಾನು ಮನೆಯಲ್ಲಿ ಇರುವುದಿಲ್ಲ. ನಾವು ಕುಟುಂಬಸ್ಥರೆಲ್ಲ ಸೇರಿ ದೇವಸ್ಥಾನಕ್ಕೆ ಹೋಗೋಣ ಎಂದುಕೊಂಡಿದ್ದೇವೆ. ಹೀಗಾಗಿ ಅಲ್ಲಿಂದ ಮುಗಿಸಿ ಬಂದಮೇಲೆ ಒಟ್ಟಿಗೆ ಮಾರ್ಚ್ 20ಕ್ಕೆ ಮೈಸೂರಲ್ಲಿ ಸಿಗೋಣ ಎಂದು ಹುಟ್ಟುಹಬ್ಬ ಆಚರಿಸಿಕೊಳ್ಳುವ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಜನ ಈಗೀಗ ಚಿತ್ರಮಂದಿರಕ್ಕೆ ಬರೋಕೆ ಶುರು ಮಾಡಿದ್ದಾರೆ. ನಮ್ಮ ಚಿತ್ರ ಏಪ್ರಿಲ್ 1ಕ್ಕೆ ತೆರೆಗೆ ಬರುತ್ತಿರುವುದು ಖುಷಿ ವಿಷಯ. ಯುವರತ್ನ ಸಿನಿಮಾ ಯುವಕರಿಗೆ, ವಿದ್ಯಾರ್ಥಿಗಳಿಗೆ ಸಂದೇಶ ಇರುವ ಚಿತ್ರವಾಗಿದೆ. ಜೀವನದ ಮೌಲ್ಯ ಈ ಚಿತ್ರದಲ್ಲಿದೆ ಎಂದು ಪುನೀತ್ ರಾಜ್‍ಕುಮಾರ್ ವಿವರಿಸಿದರು.

    ಪೈರಸಿ ಬಗ್ಗೆ ಮಾತನಾಡಿದ ಅಪ್ಪು, ಪೈರಸಿ ತಂತ್ರಜ್ಞಾನ ಜೋರಾಗಿಬಿಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಾವೇ ಬದಲಾಗಬೇಕು, ಈ ರೀತಿ ಮಾಡುವವರು ಯಾರಾದರೂ ಕಂಡುಬಂದರೆ ಜನರೇ ನೋಟಿಸ್ ಮಾಡಿ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ತಿಳಿಸಿದರು.

    ಮಾರ್ಚ್ 20ರಂದು ಮೈಸೂರಿನಲ್ಲಿ ಪ್ರಿ ರಿಲೀಸ್ ಇವೆಂಟ್ ನಡೆಯುತ್ತಿದ್ದು, ಮಹಾರಾಜಾ ಗ್ರೌಂಡ್ ನಲ್ಲಿ ‘ಯುವ ಸಂಭ್ರಮ’ ಹೆಸರಿನಲ್ಲಿ ಕಾರ್ಯಕ್ರಮ ಇರಲಿದೆ. 27ರಂದು ಹೈದ್ರಾಬಾದ್‍ನಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. 17 ರಂದು ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಸರ್ಪ್ರೈಸ್ ಟೀಸರ್ ಕೂಡ ರಿಲೀಸ್ ಆಗುತ್ತೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.