Tag: Yuvarathna

  • ಮೈಸೂರಿನಲ್ಲಿ ‘ಯುವರತ್ನ’ನಿಗೆ ಭರ್ಜರಿ ಸ್ವಾಗತ- ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡ ಅಪ್ಪು

    ಮೈಸೂರಿನಲ್ಲಿ ‘ಯುವರತ್ನ’ನಿಗೆ ಭರ್ಜರಿ ಸ್ವಾಗತ- ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡ ಅಪ್ಪು

    ಮೈಸೂರು: ಯುವರತ್ನ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಯುವರತ್ನ ಚಿತ್ರ ತಂಡ ಸಿನಿಮಾ ಪ್ರಚಾರ ರ್ಯಾಲಿ ನಡೆಸಿತು.

    ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ ಹೂ ಮಳೆ ಸುರಿಸುತ್ತಾ ಬರ ಮಾಡಿಕೊಂಡರು. ನಟ ಡಾಲಿ ಧನಂಜಯ, ಚಿತ್ರದ ನಿರ್ದೇಶಕ ಸಂತೋಷ್ ಜೊತೆ ಇದ್ದರು.

    ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಮೂಲಕ ಇಡೀ ಚಿತ್ರ ತಂಡವನ್ನು ಸ್ವಾಗತಿಸಿದರು. ಡಾಲಿ ಧನಂಜಯ, ಯುವ ರತ್ನ ಚಿತ್ರದ ಡೈಲಾಗ್ ಹೇಳಿ ಅಭಿಮಾನಿಗಳ ರಂಜಿಸಿದರು. ಪುನೀತ್ ರಾಜಕುಮಾರ್, ಮೈಸೂರಿನ ಮಹಾರಾಜರು, ಸರ್.ಎಂ. ವಿಶ್ವೇಶ್ವರಯ್ಯ ಇವರೆಲ್ಲರನ್ನು ನೆನೆದು ಮೈಸೂರಿನ ನೆನಪುಗಳ ಬಿಚ್ಚಿಟ್ಟರು. ಯುವರತ್ನ ಚಿತ್ರದ ಹಾಡು ಹೇಳಿ, ನೃತ್ಯ ಮಾಡಿ ರಂಜಿಸಿದರು.

    ಈ ಹಿಂದೆ ಕಲಬುರಗಿ ಹಾಗೂ ಬಳ್ಳಾರಿಗೂ ಪುನೀತ್ ಭೇಟಿ ನೀಡಿ ದೇವಾಲಯಗಳ ದರ್ಶನ ಪಡೆದು ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದರು. ಎರಡೂ ಜಿಲ್ಲೆಯಲ್ಲಿಯೂ ‘ಯುವರತ್ನ’ನಿಗೂ ಅದ್ಧೂರಿ ಸ್ವಾಗತ ಕೋರಲಾಗಿತ್ತು.

  • ನಮ್ಮ ಕುಟುಂಬಕ್ಕೂ ಬಳ್ಳಾರಿಗೂ ಅವಿನಾಭಾವ ಸಂಬಂಧ ಇದೆ: ಪುನೀತ್ ರಾಜ್‍ಕುಮಾರ್

    ನಮ್ಮ ಕುಟುಂಬಕ್ಕೂ ಬಳ್ಳಾರಿಗೂ ಅವಿನಾಭಾವ ಸಂಬಂಧ ಇದೆ: ಪುನೀತ್ ರಾಜ್‍ಕುಮಾರ್

    – ಕೊರೊನಾ ನಿಯಮ ಪಾಲಿಸಿ ಸಿನಿಮಾ ನೋಡಿ

    ಬಳ್ಳಾರಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಏಪ್ರಿಲ್ 1ರಿಂದ ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಇಂದು ಪುನೀತ್ ರಾಜ್ ಕುಮಾರ್, ಡಾಲಿ ಧನಂಜಯ್ ಇಂದು ಬಳ್ಳಾರಿಗೆ ಆಗಮಿಸಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಜನ ಕಾತುರದಿಂದ ಕಾದಿದ್ದರು.

    ಬೆಳಗ್ಗೆ 11 ಗಂಟೆಯ ಸುಮಾರಿಗೆ ಬಳ್ಳಾರಿಯ ಶಕ್ತಿ ದೇವತೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಆಗಮಿಸಿದ ಪವರ್ ಸ್ಟಾರ್ ಹಾಗೂ ಡಾಲಿ ಧನಂಜಯ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಮನೆಗೆ ಆಗಮಿಸಿದರು. ಅಲ್ಲಿ ಪುನೀತ್ ಗೆ ಅದ್ಧೂರಿಯಾಗಿ ಸ್ವಾಗತ ನೀಡಲಾಯಿತು. ಕ್ರೇನ್ ಮೂಲಕ ಹೂ ಹಾಕಿ ಕೆಲ ಕಾಲ ಅವರ ಮನೆಯಲ್ಲಿ ವಿಶ್ರಾಂತಿ ಪಡೆದರು. ಅಲ್ಲಿಯೂ ಸಹ ಅಭಿಮಾನಿಗಳು ದೊಡ್ಡ ದಂಡೆ ನೆರೆದಿತ್ತು, ಬಳಿಕ ಎಂ.ಜಿ ಪೆಟ್ರೋಲ್ ಬಂಕ್ ಬಳಿ ಹಾಕಲಾಗಿದ್ದ ಸ್ಟೇಜ್ ನಲ್ಲಿ ಅಭಿಮಾನಿಗಳಿಗೆ ನಟರು ಕೈ ಬೀಸಿದ್ರು.

    ಇದೇ ವೇಳೆಯಲ್ಲಿ ಮಾತನಾಡಿದ ಅಪ್ಪು, ನಮ್ಮ ತಂದೆ ರಾಜ್‍ಕುಮಾರ್ ಅವರ ಕಾಲದಿಂದಲೂ ಬಳ್ಳಾರಿಗೂ ನಮಗೂ ಅವಿನಾಭಾವ ಸಂಬಂಧ ಇದೆ. ಅಪ್ಪಾಜಿ ಹೆಸರಲ್ಲಿ ಬಳ್ಳಾರಿಯಲ್ಲಿ ಪಾರ್ಕ್ ಕೂಡಾ ಇದೆ. ಸಾಕಷ್ಟು ಸಮಾಜ ಸೇವೆ ಅಪ್ಪಾಜಿ ಹೆಸರಲ್ಲಿ ಇಲ್ಲಿನ ಜನರು ಮಾಡುತ್ತಿದ್ದಾರೆ. ನನ್ನ ಅರಸು, ಪವರ್ ಸಿನಿಮಾ ಆಡಿಯೋವನ್ನು ಬಳ್ಳಾರಿಯಲ್ಲಿ ರಿಲೀಸ್ ಆಗಿದೆ. ದೊಡ್ಡಮನೆ ಹುಡುಗ ಸೇರಿದಂತೆ ಹಲವಾರು ಚಿತ್ರಗಳಿಗೆ ಬಳ್ಳಾರಿಯಲ್ಲಿ ಶೂಟಿಂಗ್ ನಡೆದಿದೆ ಎಂದರು.

    ಯುವರತ್ನ ಚಿತ್ರ ಏಪ್ರಿಲ್ ಒಂದ ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಕಲಬುರಗಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಪ್ರಚಾರದ ವೇಳೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇಂದು ಬಳ್ಳಾರಿಯಲ್ಲಿಯೂ ಸಹ ಉತ್ತಮ ಸ್ಪಂದನೆ ದೊರೆತಿದೆ. ಜನ ನನ್ನನ್ನು ತುಂಬಾ ಪ್ರೀತಿ ಮಾಡುತ್ತಾರೆ. ದುರ್ಗಮ್ಮ ದೇವಸ್ಥಾನ ದರ್ಶನ ಪಡೆದಿರುವೆ. ನನಗೂ ನನ್ನ ಸಿನಿಮಾಕ್ಕೂ ಆಶೀರ್ವಾದ ಮಾಡಿದ್ದಾರೆ. ಬಳ್ಳಾರಿ ಜನರು ನನ್ನ ಮತ್ತು ನಮ್ಮ ಕುಟುಂಬವನ್ನು ಹೆಚ್ಚು ಪ್ರೀತಿ ಮಾಡುತ್ತಾರೆಂದರು. ಚಿತ್ರಮಂದಿರಕ್ಕೆ ಬಂದು ಸರ್ಕಾರ ಪ್ರಕಟಿಸಿರುವ ಕೊರೊನಾ ನಿಯಮ ಪಾಲಿಸಿ, ಸಿನಿಮಾ ನೋಡಿ ಎಂದು ಇದೇ ವೇಳೆ ಅಪ್ಪು ಮನವಿ ಮಾಡಿದರು.

  • ಬಾಕ್ಸಿಂಗ್ ರಿಂಗ್‍ನಲ್ಲಿ ಅಪ್ಪು, ಯುವರತ್ನದ ಹೊಸ ಸ್ಟಿಲ್ ರಿವೀಲ್

    ಬಾಕ್ಸಿಂಗ್ ರಿಂಗ್‍ನಲ್ಲಿ ಅಪ್ಪು, ಯುವರತ್ನದ ಹೊಸ ಸ್ಟಿಲ್ ರಿವೀಲ್

    ಬೆಂಗಳೂರು: ಬಹುನಿರೀಕ್ಷಿತ ಯುವರತ್ನ ಸಿನಿಮಾ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವಾಗಲೇ ಲಾಕ್‍ಡೌನ್ ಘೋಷಣೆಯಾಯಿತು. ಬಳಿಕ ಚಿತ್ರ ತಂಡ ಹೆಚ್ಚು ಅಪ್‍ಡೇಟ್ ನೀಡುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಎರಡನೇ ಹಂತದ ಡಬ್ಬಿಂಗ್ ಕಾರ್ಯ ಆರಂಭಿಸಿರುವುದಾಗಿ ತಿಳಿಸಿತ್ತು. ಇದೀಗ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಹೌದು ಸಿನಿಮಾ ಚಟುವಟಿಕೆಗಳು ನಿಂತರೂ ಚಿತ್ರ ತಂಡ ಸಾಮಾಜಿಕ ಜಾಲತಾಣಗಳ ಮೂಲಕ ಆಗಾಗ ಅಪ್‍ಡೇಟ್‍ಗಳನ್ನು ನೀಡುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಎರಡನೇ ಹಂತದ ಡಬ್ಬಿಂಗ್ ಕಾರ್ಯ ಪ್ರಾರಂಭವಾಗಿರುವುದಾಗಿ ತಿಳಿಸಿತ್ತು. ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಟ್ವೀಟ್ ಮಾಡಿ ಎರಡನೇ ಹಂತದ ಡಬ್ಬಿಂಗ್ ಪ್ರಾರಂಭವಾಗಿರುವ ಕುರಿತು ಮಾಹಿತಿ ನೀಡಿದ್ದರು.

    ಇದೀಗ ಚಿತ್ರ ತಂಡ ಮತ್ತೊಂದು ಸುದ್ದಿಯನ್ನು ಹೊರ ಬಿಟ್ಟಿದ್ದು, ಹೊಸ ಸ್ಟಿಲ್ ಬಿಡುಗಡೆ ಮಾಡಿದೆ. ಹೌದು ಯುವರತ್ನ ಸಿನಿಮಾದ ‘ಪವರ್ ಆಫ್ ಯೂತ್’ ಹಾಡಿನ ಸ್ಟಿಲ್ ಒಂದನ್ನು ಬಿಡುಗಡೆ ಮಾಡಿದ್ದು, ಸಂತೋಷ್ ಆನಂದರಾಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಕಮೆಂಟ್‍ಗಳ ಮೂಲಕ ಅಭಿಪ್ರಾಯ ತಿಳಿಸುತ್ತಿದ್ದಾರೆ.

    ಈ ಸ್ಟಿಲ್ ತುಂಬಾ ವಿಶೇಷವಾಗಿದ್ದು, ಅಪ್ಪು ಬಾಕ್ಸಿಂಗ್ ರಿಂಗ್‍ನಲ್ಲಿ ಸ್ಟೈಲಿಶ್ ಆಗಿ ನಿಂತಿದ್ದಾರೆ. ಹಿಂದೆ ಹಸಿರು ಬಣ್ಣದ ಲೈಟ್‍ಗಳಿದ್ದು, ಸಂಭ್ರಮಿಸುತ್ತಿರುವ ಭಂಗಿಯಲ್ಲಿ ಅಪ್ಪು ಪೋಸ್ ನೀಡಿದ್ದಾರೆ. ಅಲ್ಲದೆ ಅಪ್ಪು ಇತ್ತೀಚೆಗೆ ಫುಲ್ ವರ್ಕೌಟ್ ಮಾಡುವುದರಲ್ಲಿ ನಿರತರಾಗಿದ್ದು, ಈ ಸ್ಟಿಲ್‍ನಲ್ಲಿ ಸಹ ಸಣ್ಣಗಾದಂತೆ ಕಾಣುತ್ತಿದ್ದಾರೆ. ಹಾಡಿನ ಚಿತ್ರೀಕರಣದ ಸಮಯದಲ್ಲಿ ಈ ಫೋಟೋ ತೆಗೆದಿದ್ದು, ಹಿಂದೆ ನೃತ್ಯ ಕಲಾವಿದರೂ ಇದ್ದಾರೆ.

    ಇದೀಗ ಅಪ್ಪು ಸ್ಟಿಲ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಈ ಹಿಂದೆ ಸಹ ಪುನೀತ್ ಅವರ ಸಿನಿಮಾದಲ್ಲಿನ ಲುಕ್, ಟ್ವಿಟ್ಟರ್‍ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಈಗಾಗಲೇ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.