Tag: yuvanidhi scheme

  • ಆ.14ಕ್ಕೆ ಯುವನಿಧಿ ಯೋಜನೆಯಡಿ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ

    ಆ.14ಕ್ಕೆ ಯುವನಿಧಿ ಯೋಜನೆಯಡಿ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ

    ಬೆಂಗಳೂರು ಗ್ರಾಮಾಂತರ: ಆಗಸ್ಟ್‌ 14 ರಂದು ಯುವನಿಧಿ ಯೋಜನೆಯಡಿ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ ಆಯೋಜಿಸಲಾಗಿದೆ.

    ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ‘ಯುವನಿಧಿ’ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ನೋಂದಣಿಯು ಚಾಲ್ತಿಯಲ್ಲಿದ್ದು, 2025ನೇ ಸಾಲಿನಲ್ಲಿ ಪದವಿ/ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಯೋಜನೆಯ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಮಾದಗೊಂಡನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ‘ಯುವನಿಧಿ ಯೋಜನೆಯ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ’ವನ್ನು ಆಯೋಜಿಸಲಾಗಿದೆ. ಆ.14ರ ಬೆಳಗ್ಗೆ 10 ರಿಂದ ಸಾಯಂಕಾಲ 4 ಗಂಟೆ ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದಗೊಂಡನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ.

    ಈ ಯೋಜನೆಯಡಿ 2023 ಹಾಗೂ 2024ರಲ್ಲಿ ತೇರ್ಗಡೆಯಾಗಿ ಅರ್ಜಿ ಸಲ್ಲಿಸದೇ ಇರುವವರು ಕೂಡ ಅರ್ಜಿ ಸಲ್ಲಿಸಬಹುದು. ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೂಚಿತ ವಿದ್ಯಾರ್ಹತೆಗಳಲ್ಲಿ ತೇರ್ಗಡೆಯಾದ ದಿನಾಂಕದಿಂದ 180 ದಿನ ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ (ವೃತಿಪರ ಕೋರ್ಸ್‌ಗಳು ಸೇರಿದಂತೆ) ಪ್ರತಿ ತಿಂಗಳು 3,000 ರೂ. ನಿರುದ್ಯೋಗ ಭತ್ಯೆ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1.500 ರೂ. ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲಾಗುತ್ತದೆ. ನಿರುದ್ಯೋಗ ಭತ್ಯೆಯನ್ನು ಫಲಾನುಭಾವಿಗಳ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮೂಲಕ ವರ್ಗಾವಣೆ ಮಾಡಲಾಗುತ್ತದೆ.

    ಪದವಿ/ಡಿಪ್ಲೋಮಾ ನಂತರ ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸುತ್ತಿರುವವರು, ಶಿಶಿಕ್ಷು ವೇತನವನ್ನು ಪಡೆಯುತ್ತಿರುವವರು, ಸರ್ಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು, ರಾಜ್ಯ ಹಾಗೂ ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿರುವವರು ಹಾಗೂ ಕರ್ನಾಟಕದಲ್ಲಿ ಕನಿಷ್ಠ ಆರು ವರ್ಷಗಳಿಗಿಂತ ಕಡಿಮೆ ವಾಸವಿಲ್ಲದಿರುವ ಅಭ್ಯರ್ಥಿಗಳು ಯುವನಿಧಿ ಯೋಜನೆಗೆ ಅರ್ಹರಾಗುವುದಿಲ್ಲ.

  • ನಿರುದ್ಯೋಗ ಸಮಸ್ಯೆ ಬಗೆಹರಿಸ್ಬೇಕು, ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು: ಸಿಎಂ

    ನಿರುದ್ಯೋಗ ಸಮಸ್ಯೆ ಬಗೆಹರಿಸ್ಬೇಕು, ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು: ಸಿಎಂ

    ಶಿವಮೊಗ್ಗ: ಎರಡು ವರ್ಷದವರೆಗೆ ಭತ್ಯ ಕೊಡುತ್ತೇವೆ. ಸ್ಕಿಲ್ ಟ್ರೈನಿಂಗ್ ಸಹ ಕೊಡುತ್ತೇವೆ. ನಿರುದ್ಯೋಗ (Unemployment) ಸಮಸ್ಯೆ ಬಗೆಹರಿಸಬೇಕು. ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah0 ಹೇಳಿದ್ದಾರೆ.

    ಯುವನಿಧಿಗೆ (Yuvanidhi) ಚಾಲನೆ ಕೊಟ್ಟ ಬಳಿಕ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಇಂದು ಐತಿಹಾಸಿಕ ದಿನವಾಗಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಇಲ್ಲಿ ಸೇರಿದ್ದಾರೆ. ನಿಮ್ಮೆಲ್ಲರ ಎದುರಿನಲ್ಲಿ ಯುವನಿಧಿಗೆ ಚಾಲನೆ ಕೊಡ್ತಿದ್ದೇವೆ. ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿದ್ದೆವು. ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ಮಭಾಗ್ಯ, ಯುವನಿಧಿ ಎಲ್ಲಾ ಭರವಸೆ ನೀಡಿದ್ದೆವು ಎಂದು ಹೇಳಿದರು.

    ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಆಹಾರ ಪದಾರ್ಥ ಬೆಲೆ ಗಗನಕ್ಕೇರಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ವರ್ಗಕ್ಕೆ ಆರ್ಥಿಕ ಶಕ್ತಿ ತುಂಬಬೇಕು. ಬೆಲೆ ಏರಿಕೆ ಸಂದರ್ಭದಲ್ಲಿ ಜೀವನ ಸಾಗಿಸೋದು ಕಷ್ಟವಾಗುತ್ತದೆ. ಅನೇಕ ಭರವಸೆ ಕೊಟ್ಟಿದ್ದೆವು. ಐದು ಗ್ಯಾರಂಟಿ ಜಾರಿಗೆ ತಂದೇ ತರುತ್ತೇವೆ ಎಂದಿದ್ದೆವು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವನಿಧಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

    ಬಹಳ ಜನ ಯುವನಿಧಿ ಏಕೆ ಜಾರಿಗೆ ತಂದಿಲ್ಲ ಅಂತಿದ್ದರು. ನಿರುದ್ಯೋಗಿ ಭತ್ಯೆ ಕೊಡುವ ಭರವಸೆ ನೀಡಿದ್ದೆವು. ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಗ್ಯಾರಂಟಿ ಯೋಜನೆಯ ಜಾರಿ ಬಗ್ಗೆ ಭರವಸೆ ಕೊಟ್ಟಿದ್ದೆವು. ಸಮಾಜದಲ್ಲಿ 100ಕ್ಕೆ 50ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರಿಗೆ ಬಸ್‍ನಲ್ಲಿ ಉಚಿತ ಪ್ರಯಾಣ ಸೌಲಭ್ಯ ಕೊಟ್ಟಿದ್ದು ನಮ್ಮ ಸರ್ಕಾರ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. 1 ಕೋಟಿ 65 ಲಕ್ಷ ಕುಟುಂಬ ಗೃಹ ಜ್ಯೋತಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

    ಅನ್ನಭಾಗ್ಯ ಯೋಜನೆಯಲ್ಲಿ (Annabhagya Scheme) 10 ಕೆಜಿ ಅಕ್ಕಿ ಕೊಡ್ತೀವಿ ಅಂದಿದ್ದೆವು. ಅಕ್ಕಿ ಸಿಗಲಿಲ್ಲ, ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಅದರ ಬದಲಿಗೆ ಬಿಪಿಎಲ್ ಕಾರ್ಡ್ ನವರಿಗೆ 170 ರೂಪಾಯಿ ಹಣ ಕೊಡ್ತಿದ್ದೇವೆ. 1 ಕೋಟಿ 18 ಲಕ್ಷ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ಕೊಡ್ತಿದ್ದೇವೆ. ಎರಡು ವರ್ಷದವರೆಗೆ ಭತ್ಯ ಕೊಡುತ್ತೇವೆ. ಸ್ಕಿಲ್ ಟ್ರೈನಿಂಗ್ ಸಹ ಕೊಡುತ್ತೇವೆ. ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ಯುವಕ-ಯುವತಿಯರಿಗೆ ಆತ್ಮಸ್ಥೆರ್ಯ ಹೆಚ್ಚಿಸಬೇಕು ಎಂದು ಹೇಳಿದರು.

    ವಿವೇಕಾನಂದ (Vivekananda) ಅವರ ಜಯಂತಿ ದಿನವೇ ಯುವನಿಧಿ ಕಾರ್ಯಕ್ರಮ ಚಾಲನೆ ಕೊಡಬೇಕು ಅಂತಾ ಚಾಲನೆ ಕೊಟ್ಟಿದ್ದೇವೆ. 70 ಸಾವಿರ ಮಂದಿ ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿಸಿಕೊಂಡವರಿಗೆ ಸರ್ಕಾರ ಎರಡು ವರ್ಷದ ಅವಧಿಗೆ ಮಾಸಾಶನ ಕೊಡುತ್ತೇವೆ. ಯುವಕರಿಗೆ ಎರಡು ವರ್ಷದೊಳಗೆ ಕೆಲಸ ಸಿಕ್ಕರೆ ಈ ಯೋಜನೆ ನಿಲ್ಲಿಸುತ್ತೇವೆ. ವಿವೇಕಾನಂದರು ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಅಂದ್ರು. ಯಾವ ಸಮಾಜ ಹಸಿದವರಿಗೆ ಅನ್ನ ಕೊಡಲ್ಲ ಆ ಸಮಾಜದಲ್ಲಿ, ಧರ್ಮದಲ್ಲಿ ನಂಬಿಕೆ ಇಲ್ಲ. ವಿವೇಕಾನಂದರು ಈ ಮಾತನ್ನು ಹೇಳಿದ್ದರು. ರಾಜೀವ್ ಗಾಂಧಿ ಅವರು ವಿವೇಕಾನಂದ ಜಯಂತಿ ಆರಂಭಿಸಿದ್ದು, ವಿವೇಕಾನಂದರು ಯುವಕ ಯುವತಿಯರ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದರು. ನಿರುದ್ಯೋಗ ಬೆಳೆಯುತ್ತಿದೆ. 100 ಕ್ಕೆ 10.5 ನಿರುದ್ಯೋಗ ಬೆಳೆದಿದೆ. 5.5 ರಿಂದ 10.5 ಕ್ಕೆ ನಿರುದ್ಯೋಗ ಏರಿಕೆ ಆಗ್ತಿದೆ. ರಾಜ್ಯದ 1 ಕೋಟಿ 50 ಲಕ್ಷ ಕುಟುಂಬಗಳು ಸರ್ಕಾರದಿಂದ ಪ್ರತಿ ತಿಂಗಳು 5-6 ಸಾವಿರ ರೂ ಹಣ ಪಡೆಯುತ್ತಿವೆ ಎಂದು ತಿಳಿಸಿದರು.

    ಆರ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿದಾಗ ಮಾತ್ರ ದೇಶ ಅಭಿವೃದ್ಧಿ ಆಗ್ತದೆ ಅಂತಾ ಅಂಬೇಡ್ಕರ್ ಹೇಳಿದ್ರು. ಅದರಲ್ಲಿ ನಂಬಿಕೆ ಇಟ್ಟುಕೊಂಡಿರುವವರು ನಾವು. ಸಾಮಾಜಿಕ ಆರ್ಥಿಕ ಶಕ್ತಿ ಬಲಗೊಳ್ಳಬೇಕು. ಸರ್ವ ಜನಾಂಗದ ಶಾಂತಿಯ ತೋಟ ಈಡಿ ರಾಜ್ಯದಲ್ಲಿ, ದೇಶದಲ್ಲಿ ನಿರ್ಮಾಣ ಆಗಬೇಕು. ಆ ಕಾರ್ಯ ಈ ಜಿಲ್ಲೆಯಿಂದಲೇ ಆಗಲಿ. ಈ ಫ್ರೀಡಂ ಪಾರ್ಕಿಗೆ ಅಲ್ಲಮ ಪ್ರಭು ಹೆಸರು ಇಡಬೇಕು ಅಂತಾ ಮಧು ಬಂಗಾರಪ್ಪ ಹೇಳಿದ್ದಾರೆ. ಚನ್ನಬಸಪ್ಪ ಅವರೇ ಅಲ್ಲಮ ಪ್ರಭು ನಿಮ್ಮ ಜಿಲ್ಲೆಯವರು, 12 ನೇ ಶತಮಾನದವರು. ಅಲ್ಲಮ ಪ್ರಭು ಹೆಸರಿಡೋದು ಸೂಕ್ತ ಅಂತಾ ನನಗೆ ಅನಿಸುತ್ತದೆ. ಭದ್ರಾವತಿ ಎಂಪಿಎಂ ಕಾರ್ಖಾನೆ ಬಗ್ಗೆ ಇನ್ನೊಂದು ದಿನ ಮಾತನಾಡ್ತೇನೆ. ಎಂಪಿಎಂ ಪರ ನಾನು ಯಾವಾಗಲು ಇರುತ್ತೇನೆ.