Tag: YuvaNidhi

  • `ಯುವನಿಧಿ’ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿ ಇಶಾ ಆಸಿಫ್‌

    `ಯುವನಿಧಿ’ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿ ಇಶಾ ಆಸಿಫ್‌

    ಮಡಿಕೇರಿ: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʻಯುವನಿಧಿʼಯಿಂದ (Yuvanidhi) ತನ್ನ ಖಾತೆಗೆ ಪ್ರತಿ ತಿಂಗಳು ಜಮೆಯಾಗುತ್ತಿದ್ದ 3,000 ರೂ. ಹಣ ಕೂಡಿಟ್ಟು ಮುಂದಿನ ಭವಿಷ್ಯಕ್ಕಾಗಿ ವಿದ್ಯಾರ್ಥಿನಿಯೋರ್ವಳು ಲ್ಯಾಪ್‌ಟಾಪ್‌ (LapTop) ಖರೀದಿಸಿದ ಅಪರೂಪದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ.

    ಸೋಮವಾರಪೇಟೆ ಪಟ್ಟಣದ ನಿವಾಸಿಯೂ ಆಗಿರುವ ಪದವೀಧರೆ ಇಶಾ ಆಸಿಫ್ ಯನ್ನ ಖಾತೆಗೆ ಬಂದ ಗ್ಯಾರಂಟಿ ಹಣ (Guarantee Scheme Money) ಕೂಡಿಟ್ಟು ಲ್ಯಾಪ್‌ಟಾಪ್‌ ಖರೀದಿಸಿದ್ದಾರೆ. ಅಲ್ಲದೇ ಈ ರೀತಿ ಉಚಿತವಾಗಿ ಬರುವ ಹಣವನ್ನು ಕೂಡಿಟ್ಟು ಪೋಷಕರಿಗೆ ಹೆಚ್ಚಿನ ಹೊರೆಯಾಗದಂತೆ ಮುಂದಿವ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವಂತೆ ಇಶಾ ಸಲಹೆ ನೀಡಿದ್ದಾರೆ. ಇದನ್ನೂ ಓದಿ: Ramanagara | ಸರ್ಕಾರದ ಇ ಸ್ವತ್ತು ಸಾಫ್ಟ್‌ವೇರ್ ಹ್ಯಾಕ್ ಮಾಡಿ ದಾಖಲೆಗಳ ತಿದ್ದುಪಡಿ – ಮೂವರ ಬಂಧನ

    ಈ ಹಿನ್ನೆಲೆಯಲ್ಲಿ ಯುವನಿಧಿ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿಯನ್ನು ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಅಭಿನಂದಿಸಲಾಯಿತು. ಇದನ್ನೂ ಓದಿ: Vijayapura | ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ – ಯುವಕ ಸಾವು

    ಸೋಮವಾರಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಿ.ಎಂ ಕಾಂತರಾಜ್ ತಾಲ್ಲೂಕು ಪಂಚಾಯಿತಿ ಸಿ.ಇ.ಒ ಪರಮೇಶ್ ಕುಮಾ‌ರ್ ಹಾಗು ಸರ್ವ ಸದಸ್ಯರು ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

  • ಎಷ್ಟು ಜನರಿಗೆ ಯುವನಿಧಿ ಸಿಕ್ಕಿದೆ? ಬಜೆಟ್‌ನಲ್ಲಿ ಲೆಕ್ಕ ನೀಡಿದ ಸಿಎಂ

    ಎಷ್ಟು ಜನರಿಗೆ ಯುವನಿಧಿ ಸಿಕ್ಕಿದೆ? ಬಜೆಟ್‌ನಲ್ಲಿ ಲೆಕ್ಕ ನೀಡಿದ ಸಿಎಂ

    ಬೆಂಗಳೂರು: ನಿರುದ್ಯೋಗ ಭತ್ಯೆ ನೀಡುವುದರೊಂದಿಗೆ ಈ ಯುವಕರಿಗೆ ಇಂಡಸ್ಟ್ರಿ ಲಿಂಕೆಜ್ ಸೆಲ್ ಅಡಿ ಭವಿಷ್ಯ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರು 2025-26ನೇ ಬಜೆಟ್‌ನಲ್ಲಿ ತಿಳಿಸಿದರು.

    ಈ ಬಾರಿ ದಾಖಲೆಯ 16ನೇ ಬಜೆಟ್ ಮಂಡಿಸುತ್ತಿರುವ ಸಿಎಂ, ನಿರುದ್ಯೋಗಿಗಳಾಗಿರುವ ಪದವೀಧರರಿಗೆ ಹಾಗೂ ಡಿಪ್ಲೋಮ ಪಡೆದವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲು ನಮ್ಮ ಸರ್ಕಾರವು ‘ಯುವನಿಧಿ’ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈಗಾಗಲೇ ಸುಮಾರು 2.58 ಲಕ್ಷ ಯುವಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, 286 ಕೋಟಿ ರೂ. ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದರು. ಇದನ್ನೂ ಓದಿ: Olympics 2028 | ತರಬೇತಿಗಾಗಿ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ಪ್ರೋತ್ಸಾಹ ಧನ

    ಯುವನಿಧಿ ಯೋಜನೆ ಮೂಲಕ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂಪಾಯಿ ಮತ್ತು ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ ಮಾಸಿಕ 1500 ರೂ. ನೀಡಲಾಗುತ್ತದೆ. ಯುವ ನಿಧಿ ಯೋಜನೆಯಿಂದ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ಮಾತ್ರ ನೀಡಲಾಗುತ್ತದೆ. ಫಲಾನುಭವಿಗೆ 2 ವರ್ಷಗಳ ನಂತರ ಅಥವಾ 2 ವರ್ಷದೊಳಗೆ ಕೆಲಸ ಸಿಕ್ಕರೆ ತಕ್ಷಣವೇ ನಿರುದ್ಯೋಗ ಭತ್ಯೆ ನಿಲ್ಲಿಸಲಾಗುತ್ತದೆ. ಇದನ್ನೂ ಓದಿ: ಮಲ್ಟಿಪ್ಲೆಕ್ಸ್ ಟಿಕೆಟ್ ದರ 200 ರೂ.ಗೆ ಸೀಮಿತ – ಕನ್ನಡ ಚಿತ್ರಗಳಿಗೆ OTT

    ನಮ್ಮ ಸರ್ಕಾರದ ಹಿಂದಿನ ಆಡಳಿತಾವಧಿಯಲ್ಲಿ, ಮುಖ್ಯಮಂತ್ರಿಗಳು ಕೌಶಲ್ಯ ಕರ್ನಾಟಕ ಪ್ರಾರಂಭಿಸಲಾಗಿತ್ತು. ಯೋಜನೆಯನ್ನು (ಸಿಎಂಕೆಕೆವೈ) ಪ್ರಾರಂಭಿಸಲಾಗಿತ್ತು. ಪ್ರಸ್ತುತ, ರಾಜ್ಯದ ಯುವಕರಿಗೆ ಉದ್ಯೋಗಾರ್ಹತೆ ಮತ್ತು ಉದ್ಯಮಶೀಲತೆಯನ್ನು ಇನ್ನಷ್ಟು ಉತ್ತೇಜಿಸಲು ಯೋಜನೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಸಿಎಂಕೆಕೆವೈ 2.0 ಅನ್ನು ಜಾರಿಗೊಳಿಸಲಾಗುವುದು. ಈ ಯೋಜನೆಯಡಿ ಸಾಂಪ್ರದಾಯಿಕ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಈ ಕೆಳಗಿನ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಅನುದಾನ ಘೋಷಣೆಯಾಗಿದ್ದರೂ ಬಿಡುಗಡೆಯಾಗಿಲ್ಲ: ಬಜೆಟ್ ಭಾಷಣದಲ್ಲಿ ಕೇಂದ್ರಕ್ಕೆ ಸಿದ್ದು ಗುದ್ದು

    ರಾಜ್ಯದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಜರ್ಮನ್, ಇಟಾಲಿಯನ್, ಸ್ಪ್ಯಾನಿಷ್ ಮತ್ತು ಇತರೆ ವಿದೇಶೀ ಭಾಷಾ ಕೌಶಲ್ಯ ತರಬೇತಿ ನೀಡಲಾಗುವುದು. ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಮೂಲಕ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸೂಕ್ತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನವನ್ನು ಒದಗಿಸಲು `ನನ್ನ ವೃತ್ತಿ, ನನ್ನ ಆಯ್ಕೆ’ ಕಾರ್ಯಕ್ರಮದಡಿ ಸರ್ಕಾರಿ ಶಾಲಾ/ಕಾಲೇಜುಗಳಲ್ಲಿನ 2.30 ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಅಬಕಾರಿ ಇಲಾಖೆಗೆ 40,000 ಕೋಟಿ ತೆರಿಗೆ ಸಂಗ್ರಹ ಟಾರ್ಗೆಟ್‌

    ವಿಶ್ವ ಕೌಶಲ್ಯ ಸ್ಪರ್ಧೆಯ ಪೂರ್ವಸಿದ್ಧತೆಗಾಗಿ ಆಯೋಜಿಸಲಾಗುವ ರಾಷ್ಟ್ರೀಯ ಮಟ್ಟದ ಇಂಡಿಯಾ ಸ್ಕಿಲ್-2026 ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುತ್ತದೆ. ಅಳಿವಿನಂಚಿನಲ್ಲಿರುವ ಪಾರಂಪರಿಕ ಮತ್ತು ಪ್ರಾದೇಶಿಕ ಕೌಶಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು 2,000 ಅಭ್ಯರ್ಥಿಗಳಿಗೆ ಅಗತ್ಯವಿರುವ ಟೂಲ್‌ಕಿಟ್‌ಗಳೊಂದಿಗೆ ಅಲ್ಪಾವಧಿ ತರಬೇತಿಯನ್ನು ನೀಡಲಾಗುವುದು. ಲಂಬಾಣಿ ಜನಾಂಗದ ಕಸೂತಿ ಕಲೆಯ ಬಗ್ಗೆ ತರಬೇತಿಯನ್ನು 1.000 ಅಭ್ಯರ್ಥಿಗಳಿಗೆ ದಾವಣಗೆರೆ ಮತ್ತು ಬೀದರ್ ಜಿಲ್ಲೆಗಳಲ್ಲಿನ ಕೌಶಲ್ಯ ತರಬೇತಿ ಕೇಂದ್ರಗಳಲ್ಲಿ ನೀಡಲಾಗುವುದು ಎಂದರು. ಇದನ್ನೂ ಓದಿ: ಬೆಂಗಳೂರು ನಗರ ವಿವಿ ಇನ್ಮುಂದೆ ಪ್ರಧಾನಿ ಮನಮೋಹನ್ ಸಿಂಗ್ ವಿವಿ

    ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆ ಕೈಗೊಳ್ಳಲು ತ್ವರಿತ ಸಾಲ ಸೌಲಭ್ಯ ಒದಗಿಸಿ, ಆರ್ಥಿಕ ಅಗತ್ಯತೆಗಳ ಪೂರೈಕೆ ಮತ್ತು ಭದ್ರತೆ ಒದಗಿಸಿ, ಉಳಿತಾಯ ಮತ್ತು ಉದ್ಯಮಶೀಲತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ `ಅಕ್ಕ ಕೋ-ಆಪರೇಟಿವ್ ಸೊಸೈಟಿ’ ಸ್ಥಾಪಿಸಲಾಗುವುದು. `ಗೃಹಲಕ್ಷ್ಮಿ’ ಯೋಜನೆಯ ಯಜಮಾನಿಯರನ್ನು ಸ್ವಸಹಾಯ ಗುಂಪುಗಳ ಸದಸ್ಯರುಗಳನ್ನಾಗಿಸಿ ರಾಜ್ಯಮಟ್ಟದಲ್ಲಿ `ಅಕ್ಕ ಕೋ-ಆಪರೇಟಿವ್ ಸೊಸೈಟಿ’ ವ್ಯಾಪ್ತಿಗೆ ತರಲಾಗುವುದು ಎಂದು ಹೇಳಿದರು.

  • ಶಿವಮೊಗ್ಗದಲ್ಲಿ ಯುವನಿಧಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

    ಶಿವಮೊಗ್ಗದಲ್ಲಿ ಯುವನಿಧಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

    ಶಿವಮೊಗ್ಗ: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚಾಲನೆ ನೀಡಿದರು.

    ಶಿವಮೊಗ್ಗದ ಫ್ರೀಡಂ ಪಾರ್ಕ್ (Freedom Park Shivamogga) ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಂಬಾಳೆ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ಇನ್ಮುಂದೆ ಯುವನಿಧಿ (Yuvanidhi Scheme) ಯೋಜನೆಯಡಿ ಡಿಪ್ಲೋಮಾ ವ್ಯಾಸಂಗ ಮುಗಿಸಿರುವವರಿಗೆ 1,500 ರೂ., ಪದವಿ ಮುಗಿಸಿರುವವರಿಗೆ 3 ಸಾವಿರ ರೂ. ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಲಿದೆ.

    ಸರ್ಕಾರದಿಂದ ಹಣ ವರ್ಗಾವಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar), ಸಚಿವರಾದ ಮಧು ಬಂಗಾರಪ್ಪ, ಶರಣ ಪ್ರಕಾಶ ಪಾಟೀಲ್, ಕೆ.ಜೆ.ಜಾರ್ಜ್, ಮಂಕಾಳ ವೈದ್ಯ, ನಾಗೇಂದ್ರ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ್ವರ, ಶಾಂತನಗೌಡ, ಜೆಡಿಎಸ್ ಶಾಸಕಿ ಶಾರದ ಪೂರ್ಯನಾಯ್ಕ, ಬಿಜೆಪಿ ಶಾಸಕ ಚನ್ನಬಸಪ್ಪ, ಬಿ.ವೈ.ರಾಘವೇಂದ್ರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ನಾನೂ ಅಯೋಧ್ಯೆಗೆ ಹೋಗುತ್ತೇನೆ: ಸಿದ್ದರಾಮಯ್ಯ

    ಕಾರ್ಯಕ್ರಮದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಉತ್ತರಕನ್ನಡ ಫಲಾನುಭವಿಗಳು, ಕಾರ್ಯಕರ್ತರು ಹೀಗೆ ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದಾರೆ.

  • ಸರ್ಕಾರದ 5ನೇ ಗ್ಯಾರಂಟಿ‌ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ

    ಸರ್ಕಾರದ 5ನೇ ಗ್ಯಾರಂಟಿ‌ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ

    – 5 ಲಕ್ಷ 20 ಸಾವಿರ ಮಂದಿ ಲಾಭ ಪಡೆಯಲಿದ್ದಾರೆ
    – ಜ. 12 ರಂದು ಶಿವಮೊಗ್ಗ ಫಲಾನುಭವಿಗಳ ಖಾತೆಗೆ ಹಣ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸರ್ಕಾರದ 5ನೇ ಗ್ಯಾರಂಟಿ‌ ʼಯುವನಿಧಿ ಯೋಜನೆʼ (Yuvanidhi Scheme) ನೋಂದಣಿ ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಯಿತು.

    ನಗರದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಸಿಎಂ ಮತ್ತು ಗಣ್ಯರು, ಓರ್ವ ಯುವತಿ ಹಾಗೂ ಯುವಕನನ್ನ ವೇದಿಕೆ ಮೇಲೆ ಕರೆಸಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಬಳಿಕ ಸಿಎಂ ಹಾಗೂ ಡಿಸಿಎಂ ಯುವನಿಧಿ ಯೋಜನೆ ಪೋಸ್ಟರ್ ಬಿಡುಗಡೆ ಮಾಡಿದರು. ಇದೇ ವೇಳೆ ಸಿಎಂ ಅವರು ಯುವನಿಧಿ ಯೋಜನೆಯ ಲೋಗೋ ಬಿಡುಗಡೆ ಮಾಡಿದರು. ನಂತರ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

    ಸಚಿವ ಶರಣು ಪ್ರಕಾಶ್ ಪಾಟೀಲ್ ಮಾತನಾಡಿ, ಚುನಾವಣೆ ಮುನ್ನ 5 ಗ್ಯಾರಂಟಿ ಯೋಜನೆ ಬಗ್ಗೆ ವಾಗ್ದಾನ ಮಾಡಲಾಗಿತ್ತು. ಭಾರತದ ಇತಿಹಾಸದಲ್ಲಿ ನಮ್ಮ ಸರ್ಕಾರ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಸಿಎಂ ಅವರು ಮೊದಲ ಸಂಪುಟದಲ್ಲಿ 5 ಗ್ಯಾರಂಟಿಗಳಿಗೆ ಒಪ್ಪಿಗೆ ಕೊಟ್ಟರು. ಇದು ಐತಿಹಾಸಿಕ ನಿರ್ಣಯ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. 2013-18 ವರೆಗೆ ಉತ್ತಮ ಆಡಳಿತ ಕೊಟ್ಟಿದ್ದವು. 2023 ರಲ್ಲಿ ಜನ ನಂಬಿಕೆ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಜನರಿಗೆ ಕೊಟ್ಟ ಮಾತಿನಂತೆ 4 ಗ್ಯಾರಂಟಿ ಕಾರ್ಯಗತ ಮಾಡಿದ್ದೇವೆ‌. ಇಂದು 5ನೇ ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದರು.

    ನಮ್ಮ ಗ್ಯಾರಂಟಿ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತಿದೆ. ನಮ್ಮ ಸರ್ಕಾರ ಬಡವರ ಮನೆಗೆ ಬೊಕ್ಕಸದ ಬಹುಪಾಲು ಹಣ ಕೊಡುತ್ತಿದ್ದೇವೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಇವೆಲ್ಲವೂ ಜಾರಿ ಆಗಿದೆ. ಮಾತು ಕೊಟ್ಟಂತೆ ನಡೆದಿದ್ದೇವೆ. ವಿಪಕ್ಷಗಳು ವಿಳಂಬ ಆಯ್ತು ಅಂತಾರೆ. ಆದರೆ ವಿಳಂಬವಾಗಿಲ್ಲ. ನಾವು ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ಜಾರಿ ಮಾಡ್ತಿದ್ದೇವೆ. ಯುವನಿಧಿ ದೇಶದಲ್ಲಿ ವಿಶೇಷ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಇದನ್ನೂ ಓದಿ: PublicTV Explainer: ‘ಯುವನಿಧಿ’ ಪಡೆಯಲು ಈ ವಿಷಯ ಗೊತ್ತಿರಲಿ..

    ಯುವಕ-ಯುವತಿಯರ ನೆರವಿಗಾಗಿ ಸರ್ಕಾರ ಬಂದಿದೆ. 2022-23 ರಲ್ಲಿ ಪಾಸ್ ಆಗಿರೋರು ಸೇವಾಸಿಂಧು, ಕರ್ನಾಟಕ ಒನ್, ಬೆಂಗಳೂರು ಒನ್ ನಲ್ಲಿ ಉಚಿತವಾಗಿ ರಿಜಿಸ್ಟರ್ ಮಾಡಿಕೊಳ್ಳಬಹುದು. ಯುವಕರಿಂದ ನಾವು ಯಾವುದೇ ಕೆಲಸ ಇಲ್ಲ ಅಂತ ಸೆಲ್ಫ್ ಡಿಕ್ಲರೇಷನ್‌ ಮಾತ್ರ ಕೇಳಿದ್ದೇವೆ. 5 ಲಕ್ಷ 20 ಸಾವಿರ ಯುವಕ-ಯುವತಿಯರು ಇದರ ಲಾಭ ಪಡೆಯಲಿದ್ದಾರೆ. ಎರಡು ವರ್ಷಗಳ ಕಾಲ ಹಣ ಕೊಡಲಿದ್ದೇವೆ. ಹಣದ ಜೊತೆ ರಿಜಿಸ್ಟರ್ ಆಗೋರಿಗೆ ಸ್ಕಿಲ್ ಕೊಡುವ ಪ್ರಯತ್ನ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಅದರಂತೆ ಯುವಕ-ಯುವತಿಯರಿಗೆ ಸ್ಕಿಲ್ ತರಬೇತಿ ಕೊಡ್ತಿದ್ದೇವೆ ಎಂದರು.

    ನಮ್ಮ ‌ಇಲಾಖೆಯಲ್ಲಿ ಕಲಿಕೆ ಜೊತೆ ಕೌಶಲ್ಯ ಜಾರಿ ಮಾಡ್ತಿದ್ದೇವೆ. ಕಂಪನಿಗಳಲ್ಲಿ ಖಾಲಿ ಇರೋ ಹುದ್ದೆಗೆ ಬೇಕಾದ ಸ್ಕಿಲ್ ಟ್ರೈನಿಂಗ್ ಕೊಡುವ ಕೆಲಸ ಮಾಡ್ತಿದ್ದೇವೆ. ಸ್ಕಿಲ್ ಅಥಾರಿಟಿ ಸ್ಥಾಪನೆ ಮಾಡೋ ಕೆಲಸ ಮಾಡ್ತಿದ್ದೇವೆ. ಈ ರಾಜ್ಯದ ಜನ ಇಟ್ಟ ಭರವಸೆ ಈಡೇರಿಸೋ ಕೆಲಸ ಮಾಡ್ತೀವಿ. ಜನ ಪರವಾದ ಕೆಲಸ ಮಾಡ್ತೀವಿ. ಜನವರಿ 12 ರಂದು ವಿವೇಕಾನಂದ ಜಯಂತಿ ದಿನ ಶಿವಮೊಗ್ಗದಲ್ಲಿ ಫಲಾನುಭವಿಗಳ ಖಾತೆಗೆ ಹಣ ಹಾಕ್ತೀವಿ ಎಂದು ಸಚಿವರು ಮಾಹಿತಿ ನೀಡಿದರು.

    ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಸಚಿವರಾದ ಶರಣು ಪ್ರಕಾಶ್ ಪಾಟೀಲ್, ಸುಧಾಕರ್, ನಾಗೇಂದ್ರ, ಪ್ರಿಯಾಂಕ್ ಖರ್ಗೆ ಸೇರಿ ಹಲವು ಭಾಗಿಯಾಗಿದ್ದಾರೆ.

  • ʻಯುವ ನಿಧಿʼಗೆ ಡಿಸೆಂಬರ್‌ 26 ರಿಂದ ಅರ್ಜಿ ಸಲ್ಲಿಕೆ ಆರಂಭ – ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌

    ʻಯುವ ನಿಧಿʼಗೆ ಡಿಸೆಂಬರ್‌ 26 ರಿಂದ ಅರ್ಜಿ ಸಲ್ಲಿಕೆ ಆರಂಭ – ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌

    ಬೆಳಗಾವಿ: ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಗೆ (Yuva Nidhi Scheme) ಡಿಸೆಂಬರ್‌ 26 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಪದವೀಧರರು ಸೇವಾಸಿಂಧು (Seva Sindhu) ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌ ತಿಳಿಸಿದ್ದಾರೆ.

    ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ (Belagavi) 2023ರ ವರ್ಷದಲ್ಲಿ ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರರು ಮತ್ತು ಡಿಪ್ಲೋಮಾ ಪಡೆದ ನಿರುದ್ಯೋಗಿ ವಿದ್ಯಾವಂತರಿಗೆ ಕರ್ನಾಟಕ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಾವತಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಡಿಸೆಂಬರ್ 26ರಿಂದ ಅರ್ಜಿ ಸಲ್ಲಿಕೆ ಕಾರ್ಯ ಆರಂಭವಾಗಲಿದ್ದು, ಸೇವಾಸಿಂಧು ಪೋರ್ಟಲ್ ಮೂಲಕ ಅರ್ಹರು ಅರ್ಜಿ ಸಲ್ಲಿಸಬಹುದು. 2024ರ ಜನವರಿ ತಿಂಗಳಿನಿಂದ ಈ ಯೋಜನೆ ಜಾರಿಗೆ ಬರಲಿದೆ. ಅರ್ಹ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ದೊರೆಯಲಿದೆ. ಸದರಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಆರಂಭಿಸಬೇಕು. ಎಲ್ಲ ಅರ್ಹ ನಿರುದ್ಯೋಗಿಗಳಿಗೆ ಅಗತ್ಯ ಮಾಹಿತಿ ನೀಡಲು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    ಯುವನಿಧಿ ಯೋಜನೆ ಎಂದರೇನು?
    ಕರ್ನಾಟಕ ರಾಜ್ಯ ಸರ್ಕಾರವು ಪದವಿ ಹಾಗೂ ಡಿಪ್ಲೋಮಾ ಕೋರ್ಸ್‌ಗಳನ್ನು 2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ 2023 ರಲ್ಲಿ ತೇರ್ಗಡೆಯಾದ ಕರ್ನಾಟಕ ರಹವಾಸಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಯೋಜನೆಯಾಗಿದೆ. ಪದವೀದಧರರಿಗೆ 3,000 ರೂ. ಮತ್ತು ಡಿಪ್ಲೊಮಾ ತೇರ್ಗಡೆಯಾದವರಿಗೆ 1,500 ರೂ. ನಿರುದ್ಯೋಗ ಭತ್ಯೆಯನ್ನು 2 ವರ್ಷದವರೆಗೆ ನೀಡಲಾಗುವುದು. ಇದನ್ನೂ ಓದಿ: PublicTV Explainer: ‘ಯುವನಿಧಿ’ ಪಡೆಯಲು ಈ ವಿಷಯ ಗೊತ್ತಿರಲಿ..

    ಯುವನಿಧಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬಹುದು?
    ಅಭ್ಯರ್ಥಿಗಳು ಸೇವಾ ಸಿಂಧು ಜಾಲತಾಣದಲ್ಲಿ ಅರ್ಜಿ ಸಲ್ಲಿಸುವುದು. https://sevasindhugs.karnataka.gov.in/

    ಯುವನಿಧಿ ಯೋಜನೆಯ ಫಲಾನುಭವಿಗಳಾಗಲು ಅರ್ಹತೆಗಳೇನು?
    ಪದವಿ/ಡಿಪ್ಲೊಮಾ ಕೋರ್ಸ್‌ಗಳನ್ನು 2022-23ನೇ ಸಾಲಿನಲ್ಲಿ ವ್ಯಾಸಂಗ ಮಾಡಿರಬೇಕು. 2023 ರಲ್ಲಿ ತೇರ್ಗಡೆಯಾಗಿದ್ದು, 180 ದಿನಗಳ ವರೆಗೆ ನಿರುದ್ಯೋಗಿಗಳಾಗಿ ಅಭ್ಯರ್ಥಿಗಳು ಕನಿಷ್ಠ 6 ವರ್ಷ ಕರ್ನಾಟಕ ರಹವಾಸಿಗಳಾಗಿರಬೇಕು. ಇದನ್ನೂ ಓದಿ: ಏಪ್ರಿಲ್ 20, 21 ರಂದು ಸಿಇಟಿ ಪರೀಕ್ಷೆ – ಜನವರಿ 10 ರಿಂದ ಅರ್ಜಿ ಸಲ್ಲಿಕೆ ಆರಂಭ: ಕೆಇಎ

    ಯುವನಿಧಿ ಯೋಜನೆಗೆ ಯಾರು ಅನರ್ಹರು?
    ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರು, ಸ್ವ-ಉದ್ಯೋಗಿಗಳು, ಕನಿಷ್ಠ 6 ವರ್ಷ ಕರ್ನಾಟಕ ರಹವಾಸಿಗಳಲ್ಲದವರು ಮತ್ತು ಪದವಿ/ಡಿಪ್ಲೊಮಾ ಕೋರ್ಸನ್ನು ಕರ್ನಾಟಕ ಹೊರತಾಗಿ ಬೇರೆ ರಾಜ್ಯದಲ್ಲಿ ವ್ಯಾಸಂಗ ಮಾಡಿದವರು, ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವವರು ಅನರ್ಹರು.

  • PublicTV Explainer: ‘ಯುವನಿಧಿ’ ಪಡೆಯಲು ಈ ವಿಷಯ ಗೊತ್ತಿರಲಿ..

    PublicTV Explainer: ‘ಯುವನಿಧಿ’ ಪಡೆಯಲು ಈ ವಿಷಯ ಗೊತ್ತಿರಲಿ..

    – ಅರ್ಜಿ ಸಲ್ಲಿಕೆ ಹೇಗೆ? ಯಾರು ಅರ್ಹರು? ನೋಂದಣಿ ಯಾವಾಗಿನಿಂದ?
    – ಸಂಪೂರ್ಣ ಮಾಹಿತಿ ಈ ಸುದ್ದಿ ಓದಿ..

    ರ್ನಾಟಕ ಸರ್ಕಾರದ 5 ನೇ ಹಾಗೂ ಯುವ ಸಮುದಾಯವನ್ನು ಕೇಂದ್ರೀಕರಿಸಿರುವ ‘ಯುವನಿಧಿ’ ಗ್ಯಾರಂಟಿ ಜಾರಿಗೆ ಸಿದ್ಧತೆ ನಡೆದಿದೆ. ಯುವನಿಧಿ ಗ್ಯಾರಂಟಿಗೆ ನೋಂದಣಿ ಹಾಗೂ ಚಾಲನೆ ದಿನಾಂಕವನ್ನು ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ.

    ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಐದು ಗ್ಯಾರಂಟಿಗಳ ಜಾರಿ ಕುರಿತು ಭರವಸೆ ನೀಡಿತ್ತು. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ (ಶಕ್ತಿ ಯೋಜನೆ), ಮನೆ ಯಜಮಾನಿಗೆ ತಿಂಗಳಿಗೆ 2,000 ರೂ. ಸಹಾಯಧನ (ಗೃಹಲಕ್ಷ್ಮಿ), ಅನ್ನಭಾಗ್ಯ, ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌ (ಗೃಹಜ್ಯೋತಿ) ಯೋಜನೆಗಳನ್ನು ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡಿದೆ. ಉಳಿದಿದ್ದ ಕೊನೆ ಯೋಜನೆ ‘ಯುವನಿಧಿ’ (ಪದವಿ, ಡಿಪ್ಲೊಮಾ ವ್ಯಾಸಂಗ ಮಾಡಿದವರಿಗೆ ನಿರುದ್ಯೋಗ ಭತ್ಯೆ)ಯನ್ನು ಜಾರಿಗೆ ತರಲು ಸರ್ಕಾರ ತಯಾರಿ ನಡೆಸಿದೆ. ಇದನ್ನೂ ಓದಿ: ಜ.12 ಕ್ಕೆ ಯುವ‌ನಿಧಿ ಹಣ ವರ್ಗಾವಣೆ; ಡಿ.26 ರಿಂದ ನೋಂದಣಿಗೆ ಚಾಲನೆ: ಸಚಿವ ಶರಣಪ್ರಕಾಶ್ ಪಾಟೀಲ್

    ಏನಿದು ಯುವನಿಧಿ ಯೋಜನೆ? ಅರ್ಜಿ ಸಲ್ಲಿಕೆ ಹೇಗೆ? ಅರ್ಹ ಫಲಾನುಭವಿಗಳು ಯಾರು? ಯೋಜನೆಗೆ ಯಾರು ಅನರ್ಹರು? ಅರ್ಜಿ ಸಲ್ಲಿಕೆಗೆ ಕೊನೆ ದಿನ ಯಾವಾಗ? ಹೀಗೆ ಹಲವಾರು ಪ್ರಶ್ನೆಗಳು ಯುವಜನರನ್ನು ಕಾಡುತ್ತಿರಬಹುದು. ಯುವನಿಧಿ ಯೋಜನೆ ಕುರಿತು ಸಂಪೂರ್ಣ ವಿವರ ಇಲ್ಲಿದೆ.

    ಯುವನಿಧಿ ಯೋಜನೆ ಎಂದರೇನು?
    ಕರ್ನಾಟಕ ರಾಜ್ಯ ಸರ್ಕಾರವು ಪದವಿ ಹಾಗೂ ಡಿಪ್ಲೋಮಾ ಕೋರ್ಸ್‌ಗಳನ್ನು 2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ 2023 ರಲ್ಲಿ ತೇರ್ಗಡೆಯಾದ ಕರ್ನಾಟಕ ರಹವಾಸಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಯೋಜನೆಯಾಗಿದೆ. ಪದವೀದಧರರಿಗೆ 3,000 ರೂ. ಮತ್ತು ಡಿಪ್ಲೊಮಾ ತೇರ್ಗಡೆಯಾದವರಿಗೆ 1,500 ರೂ. ನಿರುದ್ಯೋಗ ಭತ್ಯೆಯನ್ನು 2 ವರ್ಷದವರೆಗೆ ನೀಡಲಾಗುವುದು.

    ಯುವನಿಧಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬಹುದು?
    ಅಭ್ಯರ್ಥಿಗಳು ಸೇವಾ ಸಿಂಧು ಜಾಲತಾಣದಲ್ಲಿ ಅರ್ಜಿ ಸಲ್ಲಿಸುವುದು. https://sevasindhugs.karnataka.gov.in/

    ಯುವನಿಧಿ ಯೋಜನೆಯ ಫಲಾನುಭವಿಗಳಾಗಲು ಅರ್ಹತೆಗಳೇನು?
    ಪದವಿ/ಡಿಪ್ಲೊಮಾ ಕೋರ್ಸ್‌ಗಳನ್ನು 2022-23ನೇ ಸಾಲಿನಲ್ಲಿ ವ್ಯಾಸಂಗ ಮಾಡಿರಬೇಕು. 2023 ರಲ್ಲಿ ತೇರ್ಗಡೆಯಾಗಿದ್ದು, 180 ದಿನಗಳ ವರೆಗೆ ನಿರುದ್ಯೋಗಿಗಳಾಗಿ ಅಭ್ಯರ್ಥಿಗಳು ಕನಿಷ್ಠ 6 ವರ್ಷ ಕರ್ನಾಟಕ ರಹವಾಸಿಗಳಾಗಿರಬೇಕು. ಇದನ್ನೂ ಓದಿ: 5 ಗ್ಯಾರಂಟಿ ಜಾರಿಗೆ ತೆರಿಗೆ ಏರಿಕೆ, 85ಸಾವಿರ ಕೋಟಿ ಸಾಲಕ್ಕೆ ನಿರ್ಧಾರ – ಯಾವ ತೆರಿಗೆ ಎಷ್ಟು ಏರಿಕೆ?

    ಯುವನಿಧಿ ಯೋಜನೆಗೆ ಯಾರು ಅನರ್ಹರು?
    ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರು, ಸ್ವ-ಉದ್ಯೋಗಿಗಳು, ಕನಿಷ್ಠ 6 ವರ್ಷ ಕರ್ನಾಟಕ ರಹವಾಸಿಗಳಲ್ಲದವರು ಮತ್ತು ಪದವಿ/ಡಿಪ್ಲೊಮಾ ಕೋರ್ಸನ್ನು ಕರ್ನಾಟಕ ಹೊರತಾಗಿ ಬೇರೆ ರಾಜ್ಯದಲ್ಲಿ ವ್ಯಾಸಂಗ ಮಾಡಿದವರು, ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವವರು ಅನರ್ಹರು.

    ಯುವನಿಧಿ ಯೋಜನೆಗೆ ಕರ್ನಾಟಕದ ರಹವಾಸಿ ಎಂದರೆ ಯಾರು?
    ಕರ್ನಾಟಕದ ರಹವಾಸಿ ಎಂದರೆ ಕರ್ನಾಟಕದಲ್ಲಿ ಪದವಿ/ಡಿಪ್ಲೊಮಾ ವ್ಯಾಸಂಗದ ವರೆಗೆ ಕನಿಷ್ಠ 6 ವರ್ಷ ವಾಸವಿರಬೇಕು.

    *ಕರ್ನಾಟಕದ ರಹವಾಸಿ ಎಂದು ಹೇಗೆ ಪರಿಶೀಲಿಸಲಾಗುವುದು?*
    ಕರ್ನಾಟಕದಲ್ಲಿ 6 ವರ್ಷಗಳ ‘ವಾಸವಿರುವ ವಿದ್ಯಾರ್ಥಿ’ ಎಂದು ಈ ಕೆಳಗಿನಂತೆ ಪರಿಶೀಲಿಸಲಾಗುತ್ತದೆ:
    * ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ/ಅಂಕಪಟ್ಟಿಗಳು ಅಥವಾ
    * ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಮತ್ತು ಡಿಪ್ಲೊಮಾ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ ಅಥವಾ
    * ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ನೋಂದಣಿ ಸಂಖ್ಯೆ ಮತ್ತು ಪದವಿ ಪ್ರಮಾಣ ಪತ್ರ ಅಥವಾ
    * ಪಡಿತರ ಚೀಟಿ ನೀಡಿದ ದಿನಾಂಕ ಮತ್ತು ಪದವಿ ಪ್ರಮಾಣ ಪತ್ರ.

    ಯುವನಿಧಿ ಯೋಜನೆಗೆ ಪ್ರಯೋಜನಗಳನ್ನು ಪಡೆಯುವ ಅಭ್ಯರ್ಥಿ ನೋಂದಾಯಿಸಲು 180 ದಿನಗಳು ಪೂರ್ಣಗೊಳ್ಳುವವರೆಗೆ ಕಾಯಬೇಕೆ?
    ಇಲ್ಲ.. ಪದವಿ/ಡಿಪ್ಲೋಮಾ ಫಲಿತಾಂಶ ಪ್ರಕಟವಾದ ನಂತರದಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

    ಯುವನಿಧಿ ಯೋಜನೆಯಡಿ ನೋಂದಾಯಿಸಿದ ತಕ್ಷಣವೇ ಸೌಲಭ್ಯಗಳನ್ನು ಅಭ್ಯರ್ಥಿಗೆ ನೀಡಲಾಗುವುದೇ?
    ನೋಂದಾಯಿತ ಅಭ್ಯರ್ಥಿಗಳು ಪದವಿ/ಡಿಪ್ಲೊಮಾ ತೇರ್ಗಡೆಯಾದ ನಂತರ 180 ದಿನಗಳನ್ನು ಪೂರೈಸಿರಬೇಕು. ಅಂತಹ ಅಭ್ಯರ್ಥಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು.

    ಯುವನಿಧಿ ಯೋಜನೆಯಡಿ ಸೌಲಭ್ಯಗಳನ್ನು ಅಭ್ಯರ್ಥಿಗೆ ಎಲ್ಲಿಯವರೆಗೆ ನೀಡಲಾಗುವುದು?
    ಯೋಜನೆಯಲ್ಲಿ ನೋಂದಾಯಿಸಿದ ನಂತರ 2 ವರ್ಷದ ವರೆಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು. ಇದನ್ನೂ ಓದಿ: ಬಿಜೆಪಿಗರು ಜಮೀರ್ ವಿಮಾನದ ಬಗ್ಗೆ ಮಾತಾಡೋ ಬದಲು ಪ್ರಧಾನಿಗಳಿಂದ ಬರ ಪರಿಹಾರ ಕೊಡಿಸಲಿ: ರಾಮಲಿಂಗಾರೆಡ್ಡಿ

    ಅಭ್ಯರ್ಥಿಗಳು ತಮ್ಮ ಪ್ರಮಾಣ ಪತ್ರಗಳನ್ನು NAD ಪೋರ್ಟಲ್‌ನಲ್ಲಿ ಇಂದೀಕರಿಸಿದ ಬಗ್ಗೆ ಹೇಗೆ ಪರಿಶೀಲಿಸಿಕೊಳ್ಳಬಹುದು?
    ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ NAD ಪೋರ್ಟಲ್ ಲಿಂಕ್‌ನ್ನು ಬಳಸಿಕೊಂಡು ಅಭ್ಯರ್ಥಿಗಳು ತಮ್ಮ ಪ್ರಮಾಣ ಪತ್ರಗಳು ಇಂದೀಕರಿಸಲಾಗಿದೆ ಎಂದು ತಿಳಿದುಕೊಳ್ಳಲು ಪದವಿ/ಡಿಪ್ಲೊಮಾ ಪತ್ರಗಳಲ್ಲಿರುವ ನೋಂದಣಿ ಸಂಖ್ಯೆಯನ್ನು ಲಾಗಿನ್ ಮಾಡಿ ಪರಿಶೀಲಿಸಿಕೊಳ್ಳಬಹುದು.

    ವಿಶ್ವವಿದ್ಯಾನಿಲಯಗಳು ಮತ್ತು ಮಂಡಳಿಗಳು NAD ನಲ್ಲಿ ಪದವಿ/ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಅಪ್‌ಲೋಡ್‌ ಮಾಡದಿದ್ದ ಪಕ್ಷದಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲವೇ?
    ವಿಶ್ವವಿದ್ಯಾನಿಲಯಗಳು ಮತ್ತು ಮಂಡಳಿಗಳು NAD ನಲ್ಲಿ ಪದವಿ/ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಅಫ್‌ಲೋಡ್ ಮಾಡದಿದ್ದ ಪಕ್ಷದಲ್ಲಿ ಅಭ್ಯರ್ಥಿಗಳು ಮ್ಯಾನ್ಯುಲ್ (Manual) ಆಗಿ ಅಪ್‌ಲೋಡ್ ಮಾಡಬಹುದು. ನಂತರ ದಾಖಲಾತಿಗಳನ್ನು ಪರಿಶೀಲಿಸಲಾಗುವುದು. ಅಂತಹ ಅಭ್ಯರ್ಥಿಗಳ ದತ್ತಾಂಶವನ್ನು ಸಂಬಂಧಪಟ್ಟ ವಿಶ್ವವಿದ್ಯಾನಿಲಯಗಳಿಗೆ ಇಂದೀಕರಿಸಲು ಕ್ರಮವಹಿಸುವಂತೆ ಕಳುಹಿಸಿಕೊಡಲಾಗುವುದು.

    ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುಂಚಿತವಾಗಿ ಖಚಿತಪಡಿಸಿಕೊಳ್ಳಬೇಕಾದ ಇತರ ದಾಖಲೆಗಳು ಯಾವುವು?
    ಅಭ್ಯರ್ಥಿಗಳು ಆಧಾರ್ ಸೀಡೆಡ್ ಬ್ಯಾಂಕ್ ಖಾತೆ, ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ ಬಗ್ಗೆ ಮುಂಚಿತವಾಗಿ ಖಚಿತಪಡಿಸಿಕೊಳ್ಳತಕ್ಕದ್ದು.

    ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ನೀಡಬೇಕಾದ ಘೋಷಣೆಗಳೇನು?
    ಅಭ್ಯರ್ಥಿಗಳು ತಾನು ಕರ್ನಾಟಕ ರಹವಾಸಿಯೆಂದು, ಸರ್ಕಾರಿ/ಖಾಸಗಿ ಉದ್ಯೋಗದಲ್ಲಿಲ್ಲವೆಂದು, ಸ್ವ-ಉದ್ಯೋಗಿಯಲ್ಲವೆಂದು ಮತ್ತು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿಲ್ಲವೆಂದು ಅರ್ಜಿಯ ಪ್ರಾರಂಭದಲ್ಲಿಯೇ ಘೋಷಣೆ ಮಾಡಬೇಕಾಗುತ್ತದೆ.

    ಅಭ್ಯರ್ಥಿಗಳು ಉದ್ಯೋಗ ದೊರಕಿದ ನಂತರ ಏನು ಮಾಡಬೇಕು?
    ಅಭ್ಯರ್ಥಿಗಳು ಉದ್ಯೋಗ ದೊರಕಿದ ತಕ್ಷಣ ಪ್ರತಿ ತಿಂಗಳು 25 ನೇ ತಾರೀಖಿನೊಳಗೆ ಘೋಷಣೆ ಮಾಡುವ ಸಂದರ್ಭದಲ್ಲಿ ಉದ್ಯೋಗಿಯೆಂದು ಘೋಷಿಸಬೇಕು.

    ಅಭ್ಯರ್ಥಿಗಳು ತಪ್ಪು ಘೋಷಣೆ ನೀಡಿದರೆ ಅಥವಾ ಉದ್ಯೋಗ ಪಡೆದಿರುವುದನ್ನು ಘೋಷಿಸಲು ವಿಫಲವಾದರೆ ಕೈಗೊಳ್ಳುವ ಕ್ರಮಗಳೇನು?
    ತಪ್ಪು ಘೋಷಣೆ ನೀಡಿದಲ್ಲಿ ಅಥವಾ ಉದ್ಯೋಗ ಪಡೆದಿರುವುದನ್ನು ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ. ಪಾವತಿಸಿದ ಮೊತ್ತವನ್ನು ಕಾನೂನಿನ ಪ್ರಕಾರ ವಸೂಲಿ ಮಾಡಲಾಗುವುದು. ಇದನ್ನೂ ಓದಿ: ಶಾಲೆಗಳಲ್ಲಿ ಮಕ್ಕಳಿಂದಲೇ ಶೌಚಾಲಯ ಕ್ಲೀನ್ ಪ್ರಕರಣ ತನಿಖೆ ಆಗಬೇಕು: ಜಿ.ಪರಮೇಶ್ವರ್

    ಅಭ್ಯರ್ಥಿಗಳು ಈ ಯೋಜನೆಯಡಿ ನೋಂದಾಯಿಸಿದ ನಂತರ ಸಿಗುವ ಇತರೆ ಪ್ರಯೋಜನಗಳೇನು?
    ನೋಂದಾಯಿತ ಅಭ್ಯರ್ಥಿಗಳ ದತ್ತಾಂಶವು ಸ್ಕಿಲ್ ಕನೆಕ್ಟ್ ಪೋರ್ಟಲ್‌ಗೆ ಜೋಡಣೆಯಾಗಿ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಧೀರ್ಘಾವಧಿ/ಅಲ್ಪಾವಧಿ ತರಬೇತಿಗಳನ್ನು ಪಡೆಯುವಲ್ಲಿ ಮತ್ತು ಈಗಾಗಲೇ ನೋಂದಾಯಿಸಿಕೊಂಡ ಉದ್ಯೋಗದಾತರು ಅಭ್ಯರ್ಥಿಗಳ ದತ್ತಾಂಶವನ್ನು ಬಳಸಿಕೊಂಡು ಉದ್ಯೋಗ ಹೊಂದಾಣಿಕೆ ಮಾಡುವರು.

    ಯುವನಿಧಿ ಯೋಜನೆಯಡಿ ಪ್ರಯೋಜನ ಪಡೆಯಲು ಪ್ರತಿ ತಿಂಗಳು ನೋಂದಾಯಿಸಬೇಕೆ?
    ಯುವನಿಧಿ ಯೋಜನೆಯಡಿ ಒಮ್ಮೆ ಮಾತ್ರ ನೋಂದಾಯಿಸಿಕೊಂಡು ಪ್ರತಿ ತಿಂಗಳ 25ನೇ ತಾರೀಖಿನೊಳಗೆ ಉದ್ಯೋಗದ ಸ್ಥಿತಿಯ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಳ್ಳತಕ್ಕದ್ದು.

    ಪ್ರತಿ ತಿಂಗಳು 25ನೇ ತಾರೀಖು ಅಥವಾ ಅದಕ್ಕಿಂತ ಮೊದಲು ನಿರುದ್ಯೋಗಿ ಆಗಿರುವ ಕುರಿತು ಘೋಷಣೆ ಮಾಡದಿದ್ದಲ್ಲಿ ಏನಾಗುತ್ತದೆ?
    ಪ್ರತಿ ತಿಂಗಳು ಘೋಷಣೆ ಮಾಡದಿದ್ದಲ್ಲಿ 90 ದಿನಗಳ ನಂತರ ನಿಷ್ಕ್ರಿಯಗೊಳಿಸಲಾಗುವುದು.

    ಯೋಜನೆಗೆ ನೋಂದಾಯಿಸುವಾಗ ಶುಲ್ಕ ಪಾವತಿಸಬೇಕೆ?
    ಇಲ್ಲ. ಇದು ಉಚಿತ ಸೇವೆಯಾಗಿರುತ್ತದೆ.

    ಈ ಯೋಜನೆಗೆ ನೋಂದಾಯಿಸಲು ಕೊನೆಯ ದಿನಾಂಕ ಯಾವಾಗ?
    ಅಭ್ಯರ್ಥಿಗಳು ಪದವಿ/ಡಿಪ್ಲೊಮಾ 2023 ರಲ್ಲಿ ತೇರ್ಗಡೆಯಾದ ನಂತರದಿಂದ ಅರ್ಜಿ ಸಲ್ಲಿಸಲು 2 ವರ್ಷದವರೆಗೆ ಅರ್ಹರಿರುತ್ತಾರೆ.

    ನೋಂದಣಿ ನಂತರ ನಾನು ಯಾವುದೇ ಸ್ವೀಕೃತಿಯನ್ನು ಪಡೆಯಬಹುದೇ?
    ಅರ್ಜಿದಾರರು ಸಮರ್ಪಕವಾಗಿ ಅರ್ಜಿ ಸಲ್ಲಿಸಿದ ಅಂತಿಮ ಹಂತದಲ್ಲಿ ಸ್ವಯಂಚಾಲಿತವಾಗಿ ಸ್ವೀಕೃತಿಯು ಸೃಜಿಸುತ್ತದೆ. ಸ್ವೀಕೃತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು.

    ಎನ್.ಎ.ಡಿ (NAD- National Academic Depository) ಎಂದರೇನು?
    ಎನ್.ಎ.ಡಿ ಎಂಬುದು ನಿರಂತರವಾಗಿ 24/7 ಆನ್‌ಲೈನ್ ಸೇವೆ ನೀಡುವ ಶೈಕ್ಷಣಿಕ ದತ್ತಾಂಶಗಳಾದ ಪ್ರಮಾಣ ಪತ್ರಗಳು, ಡಿಪ್ಲೊಮಾಗಳ, ಪದವಿಗಳ, ಅಂಕಪಟ್ಟಿಗಳ ಇತ್ಯಾದಿಗಳ ಮಾಹಿತಿ ಕಣಜವಾಗಿದ್ದು, ಶೈಕ್ಷಣಿಕ ಸಂಸ್ಧೆಗಳು/ ಮಂಡಳಿಗಳು/ ಅರ್ಹ ಮೌಲ್ಯಂಕನ ಸಂಸ್ಧೆಗಳು ಅಧಿಕೃತವಾಗಿ ಡಿಜಿಟಲೀಕರಣ ಮಾಡಿ ಶೇಖರಿಸಿರುವ ದತ್ತಾಂಶವಾಗಿರುತ್ತದೆ. NAD ಸಂಸ್ಧೆಯು ಅಭ್ಯರ್ಥಿಗಳಿಗೆ ಸರಳವಾಗಿ ಶೈಕ್ಷಣಿಕ ಮಾಹಿತಿಯು ಲಭಿಸುವಂತೆ ಮಾಡುವುದಲ್ಲದೇ ಮೌಲೀಕರಿಸಿ, ದತ್ತಾಂಶವನ್ನು ನೈಜ್ಯಗೊಳಿಸಿ ಸಂರಕ್ಷಿಸಿರುತ್ತದೆ.

    ಯುವನಿಧಿ ಯೋಜನೆಗೆ NAD ಸಂಸ್ಧೆಯು ಹೇಗೆ ಸಂಬಂಧಿತವಾಗಿರುತ್ತದೆ?
    ಕರ್ನಾಟಕ ರಾಜ್ಯದ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು ಒಂದೇ ಮೂಲದಲ್ಲಿ ನಿರಂತರವಾಗಿ ಶೈಕ್ಷಣಿಕವಾಗಿ ದತ್ತಾಂಶವನ್ನು ಒದಗಿಸುವ NAD ಸಂಸ್ಧೆಯು ಯುವನಿಧಿ ಯೋಜನೆಯ ಫಲಾನುಭವಿಗಳ ದಾಖಲಾತಿಗಳ/ಪ್ರಮಾಣ ಪತ್ರಗಳ ನೈಜತೆಗಳನ್ನು ಪರಿಶೀಲಿಸಲು ಅನುವು ಮಾಡುವ ಪ್ರಕ್ರಿಯೆಯಾಗಿರುತ್ತದೆ.

    ಯುವನಿಧಿ ಯೋಜನೆಗೆ ಯಾವ ಯಾವ ಶೈಕ್ಷಣಿಕ ದಾಖಲಾತಿಗಳ ಅವಶ್ಯಕತೆಗಳು ಇರುತ್ತವೆ?
    ಪದವೀಧರರಾಗಿದ್ದಲ್ಲಿ ಅವರ ಎಸ್‌ಎಸ್‌ಎಲ್‌ಸಿ/ಪಿಯುಸಿ ಮತ್ತು ಪದವಿ ಶೈಕ್ಷಣಿಕ ಪ್ರಮಾಣ ಪತ್ರಗಳು ಹಾಗೂ ಡಿಪ್ಲೊಮಾ ತೇರ್ಗಡೆಯಾಗಿದ್ದಲ್ಲಿ ಎಸ್‌ಎಸ್‌ಎಲ್‌ಸಿ/ಪಿಯುಸಿ ಮತ್ತು ಡಿಪ್ಲೊಮಾ ಶೈಕ್ಷಣಿಕ ಪ್ರಮಾಣ ಪತ್ರಗಳ ಅವಶ್ಯಕತೆ ಇರುತ್ತದೆ. ಇದನ್ನೂ ಓದಿ: ಕಾಂಗ್ರೆಸ್‍ನ ಮಾಜಿ ಶಾಸಕ ಸೇರಿ, 8 ಮಂದಿಯಿಂದ ಅತ್ಯಾಚಾರ – ಕೇಸ್ ದಾಖಲು

    ತಾತ್ಕಾಲಿಕ ಪದವಿ ಪ್ರಮಾಣ ಪತ್ರ ಎಂದರೇನು? (PDC)
    ಅಭ್ಯರ್ಥಿಯು ಆಯಾ ವಿಶ್ವವಿದ್ಯಾನಿಲಯಗಳಿಂದ ಪದವಿ ತೇರ್ಗಡೆಯಾದ ನಂತರ ನೀಡುವ ತಾತ್ಕಾಲಿಕ ಪದವಿ ಪ್ರಮಾಣ ಪತ್ರವಾಗಿರುತ್ತದೆ. ಹಾಗೆಯೇ ಡಿಪ್ಲೊಮಾ ತೇರ್ಗಡೆಯಾದ ನಂತರವೂ ತಾತ್ಕಾಲಿಕ ಡಿಪ್ಲೊಮಾ ಪ್ರಮಾಣ ಪತ್ರವನ್ನು ಆಯಾ ಶೈಕ್ಷಣಿಕ ಸಂಸ್ಧೆಗಳು/ಮಂಡಳಿಗಳು ವಿತರಿಸುವ ಪ್ರಮಾಣ ಪತ್ರವಾಗಿರುತ್ತದೆ.

    ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಶೈಕ್ಷಣಿಕ ಪ್ರಮಾಣ ಪತ್ರವನ್ನು ನಾನು ಪಡೆದಿರಬೇಕು?
    ಅಭ್ಯರ್ಥಿಗಳು ಆಯಾ ವಿಶ್ವವಿದ್ಯಾನಿಲಯಗಳಿಂದ ನೀಡಿದ ಪದವಿ ಪ್ರಮಾಣ ಪತ್ರ ಹಾಗೂ ನೋಂದಣಿ ಸಂಖ್ಯೆ ಮತ್ತು ಡಿಪ್ಲೊಮಾ ಕಾಲೇಜು/ಮಂಡಳಿಯಿಂದ ನೀಡಿರುವಂತಹ ಪ್ರಮಾಣಪತ್ರ ಹಾಗೂ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಮೂದಿಸಬೇಕಾಗಿರುತ್ತದೆ.

    ವಿಶ್ವವಿದ್ಯಾನಿಲಯ ನೋಂದಣಿ ಸಂಖ್ಯೆ (University Registration Number) ಎಂದರೇನು?
    ವಿಶ್ವವಿದ್ಯಾನಿಲಯ ನೋಂದಣಿ ಸಂಖ್ಯೆ ಎಂದರೆ ಆಯಾ ಅಭ್ಯರ್ಥಿಗಳು ಶೈಕ್ಷಣಿಕ ಸಂಸ್ಧೆಗೆ/ವಿಶ್ವವಿದ್ಯಾನಿಲಯಗಳ ಕೋರ್ಸ್‌ಗಳಿಗೆ ಪ್ರವೇಶಾತಿಯನ್ನು ಪಡೆದ ನಂತರ ನೀಡುವ ವಿಶೇಷ ನೋಂದಣಿ ಸಂಖ್ಯೆಯಾಗಿರುತ್ತದೆ.

    ಎಲ್ಲಿ ನನಗೆ ವಿಶ್ವವಿದ್ಯಾನಿಲಯದ ನೋಂದಣಿ ಸಂಖ್ಯೆ ಲಭಿಸುತ್ತದೆ?
    ವಿಶ್ವವಿದ್ಯಾನಿಲಯಗಳು/ಶೈಕ್ಷಣಿಕ ಸಂಸ್ಧೆಗಳು/ಮಂಡಳಿಗಳು ಅಭ್ಯರ್ಥಿಗಳಿಗೆ ನೀಡುವ ಪದವಿ/ಡಿಪ್ಲೊಮಾ/ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳ ಮೇಲೆ ನಮೂದಿಸಿರುವ ಸಂಖ್ಯೆಯು ಲಭ್ಯವಿರುತ್ತದೆ.

    NAD ಪೋರ್ಟಲ್‌ನಲ್ಲಿ ನನ್ನ ಪ್ರಮಾಣ ಪತ್ರಗಳು (ದಾಖಲೆಗಳು) ಲಭ್ಯವಿದೆಯೇ ಎಂಬುದನ್ನು ತಿಳಿಯುವುದು ಹೇಗೆ?
    ಅರ್ಜಿದಾರರು NAD portal ಜಾಲತಾಣ https://nad.karnataka.gov.in ರಲ್ಲಿ ವಿಶ್ವವಿದ್ಯಾನಿಲಯಗಳು/ ಶೈಕ್ಷಣಿಕ ಸಂಸ್ಧೆಗಳು/ ಮಂಡಳಿಗಳು ಪ್ರವೇಶಾತಿ ಸಂದರ್ಭದಲ್ಲಿ ನೀಡುವ ಪದವಿ/ ಡಿಪ್ಲೊಮಾ/ ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳ ಮೇಲೆ ನಮೂದಿಸಿರುವ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ದತ್ತಾಂಶವು ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಖಾತರಿ ಪಡಿಸಿಕೊಳ್ಳಬಹುದು.

    ಒಂದು ವೇಳೆ ನನ್ನ ಪ್ರಮಾಣ ಪತ್ರಗಳು NAD portal ನಲ್ಲಿ ಲಭ್ಯವಿಲ್ಲದಿದ್ದಲ್ಲಿ ಏನು ಮಾಡಬೇಕು?
    ಅಭ್ಯರ್ಥಿಗಳು ಅವರಿಗೆ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳಿಗೆ/ ಶೈಕ್ಷಣಿಕ ಸಂಸ್ಧೆಗಳಿಗೆ/ ಮಂಡಳಿಗೆ ಸಂಪರ್ಕಿಸಿ ಇಂದೀಕರಿಸುವಂತೆ ಕೋರುವುದು.

    ನನಗೆ ವಿಶ್ವವಿದ್ಯಾನಿಲಯವು ಭೌತಿಕ ಪ್ರಮಾಣ ಪತ್ರಗಳನ್ನು/ ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳನ್ನು ನೀಡದಿದ್ದಲ್ಲಿ ಎಲ್ಲಿ ಪಡೆಯಬಹುದು?
    ಅಭ್ಯರ್ಥಿಗಳು ದಾಖಲೆಗಳನ್ನು ಪಡೆಯಲು DigiLocker portal ಜಾಲತಾಣ https://accounts.digilocker.gov.in/signup/smart_v2 ದಲ್ಲಿ ಲಾಗಿನ್ ಆಗಿ ಡಿಜಿಟೀಕರಿಸಿದ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

    ಯುವನಿಧಿ ಯೋಜನೆಗೆ ನಾನು ಯಾವಾಗ ಅರ್ಜಿ ಸಲ್ಲಿಸಬೇಕು?
    ಅರ್ಜಿದಾರರು ಅವರ ಪದವಿ/ ಡಿಪ್ಲೋಮಾ ತೇರ್ಗಡೆಯಾಗಿ ಫಲಿತಾಂಶ ಬಂದ ನಂತರ (2022-23 ಶೈಕ್ಷಣಿಕ ವರ್ಷ ಮತ್ತು 2023 ಫಲಿತಾಂಶ ತೇರ್ಗಡೆ ವರ್ಷ) ಅರ್ಜಿಸಲ್ಲಿಸಬಹುದು ಆದರೆ ಪದವಿ/ ಡಿಪ್ಲೊಮಾ ತೇರ್ಗಡೆಯಾದ 180 ದಿವಸಗಳ ನಂತರ ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರು. ಇದನ್ನೂ ಓದಿ: ದೆಹಲಿಗೆ ಹೋಗಿರುವ ಕುರಿತು ಜಗದೀಶ್ ಶೆಟ್ಟರ್ ಸ್ಪಷ್ಟನೆ

    ಯುವನಿಧಿ ಯೋಜನೆಯಲ್ಲಿ ನಾನು ಅರ್ಹನಾಗುವ ಮುಂಚೆ ಯಾವ ದಿನಾಂಕವನ್ನು ಲೆಕ್ಕಚಾರ ಮಾಡಿ 180 ದಿವಸಗಳೆಂದು ಪರಿಗಣಿಸಿ ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹತೆ ಬರುತ್ತದೆ?
    ಅಭ್ಯರ್ಥಿಗಳು ತಮ್ಮ ಪದವಿ/ ಡಿಪ್ಲೊಮಾ ಫಲಿತಾಂಶ ಪ್ರಕಟವಾದ ದಿನದಿಂದ 180 ದಿವಸಗಳವರೆಗೆ ಅಥವಾ ನಂತರವೂ ಅರ್ಜಿಸಲ್ಲಿಸಲು ಅರ್ಹರಿರುತ್ತಾರೆ. ಆದರೆ ಫಲಿತಾಂಶ ಪ್ರಕಟವಾಗಿ 180 ದಿವಸಗಳ ಅವಧಿಯನ್ನು ಪೂರೈಸಿದ ಅಭ್ಯರ್ಥಿಗಳಿಗೆ ಮಾತ್ರ ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರಾಗುತ್ತಾರೆ.

    ನನ್ನ ವಿಶ್ವವಿದ್ಯಾನಿಲಯವು ಇಲ್ಲಿಯವರೆಗೆ ಪದವಿ/ ಡಿಪ್ಲೊಮಾ ಪ್ರಮಾಣ ಪತ್ರಗಳನ್ನು ನೀಡಿರುವುದಿಲ್ಲ. ನಾನು ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳನ್ನು DigiLocker portal ಖಾತೆಯಲ್ಲಿ ಪಡೆಯಬಹುದೇ?
    ಹೌದು, ಅಭ್ಯರ್ಥಿಗಳು ಅವರುಗಳ ಪದವಿ/ ಡಿಪ್ಲೊಮಾ/ ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳನ್ನು DigiLocker ಖಾತೆಯಲ್ಲಿ ಪಡೆಯಬಹುದು.

    ಯುವನಿಧಿ ಯೋಜನೆಗೆ ಕೇವಲ ಕರ್ನಾಟಕದ ಶೈಕ್ಷಣಿಕ ಸಂಸ್ಧೆಗಳನ್ನು ಪರಿಗಣಿಸಲಾಗಿದಯೇ?
    ಹೌದು, ಈ ಯೋಜನೆಯು ಕರ್ನಾಟಕದ ನಿರುದ್ಯೋಗ ಯುವಕ, ಯುವತಿಯರಿಗೆ ಸೀಮಿತಗೊಳಿಸಿರುವುದಲ್ಲದೇ ಯುವನಿಧಿ ಅರ್ಜಿ ನಮೂನೆಯಲ್ಲಿ ಕರ್ನಾಟಕದ ಶೈಕ್ಷಣಿಕ ಸಂಸ್ಧೆಗಳ ದತ್ತಾಂಶವನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ದಾಖಲಿಸಲಾಗಿರುತ್ತದೆ.

    ನನ್ನ ಪದವಿ/ ಡಿಪ್ಲೊಮಾ/ ತಾತ್ಕಾಲಿಕ ಪ್ರಮಾಣ ಪತ್ರದಲ್ಲಿ ಫಲಿತಾಂಶ ಪ್ರಕಟಿತ ದಿನಾಂಕದ ಆಧಾರದನ್ವಯ 180 ದಿವಸಗಳೊಳಗೆ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರುವುದಿಲ್ಲ. ನಾನು ಕೂಡ ಅರ್ಹನೇ?
    ಅರ್ಜಿದಾರರು ಯುವನಿಧಿ ಯೋಜನೆಯಲ್ಲಿ ಅರ್ಜಿಸಲ್ಲಿಸಲು 2 ವರ್ಷದವರೆವಿಗೂ ತಮ್ಮ ಪದವಿ/ ಡಿಪ್ಲೊಮಾ ಫಲಿತಾಂಶದ ನಂತರ ಅವಕಾಶವಿರುತ್ತದೆ. ಈ ಅವಧಿಯಲ್ಲಿ ಯಾವಾಗ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೋ ಹಾಗೂ ಅಂತಹವರಿಗೆ 2 ವರ್ಷಕ್ಕೆ ಸೀಮಿತವಾಗಿ ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ.

    ಯುವನಿಧಿ ಯೋಜನೆಗೆ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದೇ?
    ಇಲ್ಲ, ಅರ್ಜಿದಾರರು 2022-23 ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023 ರಲ್ಲಿ ತೇರ್ಗಡೆಯಾಗಿದ್ದಲ್ಲಿ ಮಾತ್ರ ಅರ್ಹರು.

  • ಜ.12 ಕ್ಕೆ ಯುವ‌ನಿಧಿ ಹಣ ವರ್ಗಾವಣೆ; ಡಿ.26 ರಿಂದ ನೋಂದಣಿಗೆ ಚಾಲನೆ: ಸಚಿವ ಶರಣಪ್ರಕಾಶ್ ಪಾಟೀಲ್

    ಜ.12 ಕ್ಕೆ ಯುವ‌ನಿಧಿ ಹಣ ವರ್ಗಾವಣೆ; ಡಿ.26 ರಿಂದ ನೋಂದಣಿಗೆ ಚಾಲನೆ: ಸಚಿವ ಶರಣಪ್ರಕಾಶ್ ಪಾಟೀಲ್

    ಬೆಂಗಳೂರು: ಡಿ.26 ರಂದು ಯುವನಿಧಿ (Yuvanidhi) ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು, ವಿವೇಕಾನಂದ ಜಯಂತಿ ದಿನ ಶಿವಮೊಗ್ಗದಲ್ಲಿ ಯುವನಿಧಿ ಗ್ಯಾರಂಟಿ ಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Sharan Prakash Patil) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಸೆಂಬರ್ 26 ರಂದು ಸಿಎಂ ಸಿದ್ದರಾಮಯ್ಯ ಯುವನಿಧಿ ಗ್ಯಾರಂಟಿ ಕಾರ್ಯಕ್ರಮದ ಲೋಗೋ ಅನಾವರಣ ಮಾಡಲಿದ್ದಾರೆ. ಪದವಿ ಮುಗಿಸಿದವರಿಗೆ 3,000 ರೂ., ಡಿಪ್ಲೊಮಾ ಮಾಡಿದವರಿಗೆ 2,000 ರೂ. ನಿರುದ್ಯೋಗ ಭತ್ಯೆ ನೀಡಲಿದ್ದೇವೆ. ಯುವನಿಧಿ ಕಾರ್ಯಕ್ರಮ ವಿಳಂಬ ಆಗಿಲ್ಲ. ಪದವಿ ಮುಗಿಸಿ ಆರು ತಿಂಗಳ ನಂತರ ಈ ಯೋಜನೆಯನ್ನು ಪಲಾನುಭವಿಗಳಿಗೆ ತಲುಪಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೀರಶೈವ ಸಮಾವೇಶಕ್ಕೆ ಸಚಿವ ಎಂ.ಬಿ. ಪಾಟೀಲ್ ಸಿಡಿಮಿಡಿ

    ಅಂದಹಾಗೆ ರಾಜ್ಯದಲ್ಲಿ ಯುವನಿಧಿ ಯೋಜನೆಗೆ ಅಂದಾಜು 5,29,153 ಫಲಾನುಭವಿಗಳನ್ನ ಗುರುತಿಸಲಾಗಿದ್ದು, 4,81,000 ಪದವೀಧರರು, 48,153 ಡಿಪ್ಲೊಮಾ ತೇರ್ಗಡೆಯಾದವರು ಇದ್ದಾರೆ. 2023-24 ರಲ್ಲಿ ನಿರುದ್ಯೋಗ ಭತ್ಯೆ ನೀಡಲು 250 ಕೋಟಿ ಅನುದಾನ ಮೀಸಲು ಇಡಲಾಗಿದೆ. ಅಲ್ಲದೆ ಈ ಯೋಜನೆಯ ಫಲಾನುಭವಿಗಳಾಗಲು ಕನ್ನಡಿಗರಾಗಿರಬೇಕು. ಆರು ವರ್ಷಗಳ ಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು ಎಂದು ಮಾಹಿತಿ ನೀಡಿದ್ದಾರೆ.

    ಸೇವಾಸಿಂಧು ಪೋರ್ಟಲ್ ಮೂಲಕ ಇದಕ್ಕೆ ಅರ್ಜಿ ಸಲ್ಲಿಸಬಹುದು. ಪ್ರತಿ ತಿಂಗಳು ನಿರುದ್ಯೋಗಿ ಸ್ಥಿತಿಯ ಬಗ್ಗೆ ಮಾಹಿತಿಯನ್ನ ಆಧಾರ್ ಓಟಿಪಿ ಮೂಲಕ ಸ್ವಯಂ ಘೋಷಣೆ ಮಾಡಬೇಕು. ಅರ್ಹ ಅಭ್ಯರ್ಥಿಗಳ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಂಸದರಿಗೇ ರಕ್ಷಣೆ ಇಲ್ಲ, ಬೇರೆಯವ್ರಿಗೆ ಹೇಗೆ ಎಂದು ಪ್ರಶ್ನಿಸಿದ ನಮ್ಮನ್ನೂ ಅಮಾನತು ಮಾಡಿದ್ರು: ಡಿಕೆ‌ ಸುರೇಶ್

    ಅಭ್ಯರ್ಥಿಗಳು ಯುವನಿಧಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಒನ್ ಬಾಪೂಜಿ ಸೇವಾ ಕೇಂದ್ರಗಳು. ಗ್ರಾಮ ಒನ್ ಕೇಂದ್ರಗಳನ್ನು ಬಳಸಿ ಅರ್ಜಿ ಸಲ್ಲಿಸಬಹುದು. ಪೋರ್ಟಲ್‌ನಲ್ಲಿ ಸಂಬಂಧಿಸಿದ ಎಲ್ಲಾ ದಾಖಲೆ ಸಲ್ಲಿಸಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ, ಸಿಇಟಿ ಸಂಖ್ಯೆ, ರೇಷನ್ ಕಾರ್ಡ್, ಪದವಿ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೇಳಿದ್ದಾರೆ.

  • ಸರ್ಕಾರದಿಂದ ಕರ್ನಾಟಕ ಯುವ ನಿಧಿ ಯೋಜನೆ ಜಾರಿ- ಷರತ್ತುಗಳೇನು?

    ಸರ್ಕಾರದಿಂದ ಕರ್ನಾಟಕ ಯುವ ನಿಧಿ ಯೋಜನೆ ಜಾರಿ- ಷರತ್ತುಗಳೇನು?

    ಬೆಂಗಳೂರು: ನಿರುದ್ಯೋಗ ಭತ್ಯೆ ಪಾವತಿಸಲು “ಕರ್ನಾಟಕ ಯುವ ನಿಧಿ (Yuvanidhi) ಯೋಜನೆ” ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿ, ಮಾರ್ಗಸೂಚಿ ಪ್ರಕಟಿಸಿದೆ.

    ರಾಜ್ಯದಲ್ಲಿ 2022-23 ರಲ್ಲಿ ತೇರ್ಗಡೆಯಾದ ಪದವೀಧರ, ನಿರುದ್ಯೋಗಿ (UnEmployers) ಗಳಿಗೆ ಪ್ರತಿ ತಿಂಗಳು 3,000 ರೂ.ಗಳು ಹಾಗೂ ಡಿಪ್ಲೋಮಾ (Diploma) ಹೊಂದಿದ ನಿರುದ್ಯೋಗಳಿಗೆ ಪ್ರತಿ ತಿಂಗಳು 1,500 ರೂ. ಗಳನ್ನು ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    2003ರ ವರ್ಷದಲ್ಲಿ ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ, ನಿರುದ್ಯೋಗಿಗಳಿಗೆ ಈ ಯೋಜನೆ ಅನ್ವಯವಾಗಲಿದೆ. ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನಿರುದ್ಯೋಗ ಭತ್ಯೆಯ ಫಲಾನುಭವಿಗಳಾಗಿರುತ್ತಾರೆ. ಇದನ್ನೂ ಓದಿ: 5 ಗ್ಯಾರಂಟಿ ಘೋಷಣೆ – ಯಾವ ಯೋಜನೆಗೆ ಎಷ್ಟು ಹಣ ಬೇಕು?

    ಪರತ್ತು ಮತ್ತು ನಿಬಂಧನೆಗಳು:
    1. ಪದವಿ (Degree) / ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆಯು ಅನ್ವಯವಾಗುತ್ತದೆ.
    2. ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ವಗತಗೊಳಿಸಲಾಗುವುದು.
    3. ಭತ್ಯೆಯನ್ನು CBT ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.
    4. ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು

    ಯೋಜನೆಗೆ ಅರ್ಹರಾಗದೇ ಇರುವವರು ಯಾರು..?
    1. ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರಿಸುವವರು.
    2. ಶಿಶಿಕ್ಷು (Apprentice) ವೇತನವನ್ನು ಪಡೆಯುತ್ತಿರುವವರು.
    3. ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು.
    4. ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‍ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು. ಇದನ್ನೂ ಓದಿ: 180 ದಿನಗಳಾದರೂ ಕೆಲಸ ಸಿಗದ ನಿರುದ್ಯೋಗಿಗಳಿಗೆ ಯುವ ನಿಧಿ

  • ರಾಜಸ್ಥಾನದಲ್ಲಿ ಘೋಷಿಸಿದ 3,500 ರೂ. ಭತ್ಯೆಯನ್ನೇ ಇನ್ನೂ ಕೊಟ್ಟಿಲ್ಲ – ಕಾಂಗ್ರೆಸ್ ಗ್ಯಾರಂಟಿಗೆ ಬಿಜೆಪಿ ಕಿಡಿ

    ರಾಜಸ್ಥಾನದಲ್ಲಿ ಘೋಷಿಸಿದ 3,500 ರೂ. ಭತ್ಯೆಯನ್ನೇ ಇನ್ನೂ ಕೊಟ್ಟಿಲ್ಲ – ಕಾಂಗ್ರೆಸ್ ಗ್ಯಾರಂಟಿಗೆ ಬಿಜೆಪಿ ಕಿಡಿ

    ಬೆಂಗಳೂರು: ಒಂದೆಡೆ ಪ್ರಧಾನಿ ಮೋದಿ (Narendra Modi) ಹೋದಲ್ಲಿ ಬಂದಲ್ಲಿ, ರಾಜಕೀಯ ಪಕ್ಷಗಳು ಎಗ್ಗಿಲ್ಲದೇ ಘೋಷಿಸ್ತಿರೋ ಉಚಿತ ಕೊಡುಗೆಗಳಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತೆ ಅಂತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ (Congress) ಮತದಾರರನ್ನ ಸೆಳೆಯಲು ನಿರಂತರವಾಗಿ ಒಂದಾದ ಮೇಲೊಂದರಂತೆ ಉಚಿತ ಕೊಡುಗೆಗಳ ಘೋಷಣೆ ಮಾಡುತ್ತಿದೆ. ಇದಕ್ಕೆ ಬಿಜೆಪಿ ಸಹ ತಿರುಗೇಟು ನೀಡಿದ್ದು, ಕಾಂಗ್ರೆಸ್ ಪಕ್ಷದ ಈ ಉಚಿತ ಭರವಸೆಗಳನ್ನು ಈಡೇರಿಸಲು ಆಗಲ್ಲ ಎಂದು ಕಿಡಿ ಕಾರಿದೆ.

    ಬಿಜೆಪಿ ನಾಯಕರ ಪ್ರಕಾರ, ಕಾಂಗ್ರೆಸ್‌ ಘೋಷಣೆ ಮಾಡಿರುವ ನಾಲ್ಕು ಗ್ಯಾರಂಟಿಗಳಿಗೆ 60 ರಿಂದ 65 ಸಾವಿರ ಕೋಟಿ ಬೇಕಾಗುತ್ತೆ. ಅಷ್ಟೊಂದು ದುಡ್ಡು ಒದಗಿಸಿ, ಈ ಭರವಸೆ ಈಡೇರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಈ ಬೆನ್ನಲ್ಲೇ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ವಿತರಣೆ ಮಾಡುವ ನೆಪದಲ್ಲಿ ಮತದಾರರ ದತ್ತಾಂಶ ಸಂಗ್ರಹ ಮಾಡ್ತಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಇದನ್ನೂ ಓದಿ: ಮೋದಿ ಯುವಜನರನ್ನ ಸ್ವಾವಲಂಬಿಗಳಾಗಿ ಮಾಡಿದ್ರೆ, ಕಾಂಗ್ರೆಸ್‌ 3 ಸಾವಿರ ಕೊಡ್ತೀನಿ ಅಂತಿದೆ – ತೇಜಸ್ವಿ‌ ಸೂರ್ಯ

    ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಉಚಿತ ಯೋಜನೆಗಳ ಆಮಿಷ ಒಡ್ಡುವ ಕೆಲಸ ಮಾಡ್ತಿದ್ದಾರೆ. ಮತದಾರರ ವೋಟರ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಕಲೆಕ್ಟ್ ಮಾಡ್ತಿದ್ದಾರೆ. ಫೋನ್ ಪೇ, ಗೂಗಲ್ ಪೇ ನಂಬರ್ಸ್ ಕಲೆಕ್ಟ್ ಮಾಡುತ್ತಿದ್ದಾರೆ. ಇದನ್ನು ತಡೆದು, ಕಾಂಗ್ರೆಸ್ ವಿರುದ್ಧ ಕ್ರಮ ತಗೋಬೇಕು ಎಂದು ಮನವಿ ಮಾಡಿದೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 10 ಲಕ್ಷ ಯುವಕರಿಗೆ ಉದ್ಯೋಗ – ರಾಹುಲ್ ಗಾಂಧಿ ಭರವಸೆ

    ಕಾಂಗ್ರೆಸ್‌ ಯುವಕ್ರಾಂತಿ ಸಮಾವೇಶದಲ್ಲಿ 2 ವರ್ಷಗಳವರೆಗೆ ಪ್ರತಿ ತಿಂಗಳು ನಿರುದ್ಯೋಗಿ (Unemployment) ಪದವೀಧರರಿಗೆ 3 ಸಾವಿರ ರೂ. ಹಾಗೂ ನಿರುದ್ಯೋಗಿ ಡಿಪ್ಲೊಮಾ ಪದವೀಧರರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡುವ `ಯುವನಿಧಿ’ (YuvaNidhi) ಯೋಜನೆಯನ್ನ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್‌ ಈವರೆಗೆ ನೀಡಿರುವ ಭರವಸೆಗಳಿಗೆ ಎಷ್ಟು ವೆಚ್ಚ ಆಗಬಹುದು? ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಎಷ್ಟಿದೆ? ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಕೊಟ್ಟಿದ್ದ ಭರವಸೆಗಳು ಏನಾಗಿವೆ ಎಂಬುದನ್ನ ದಾಖಲೆ ಸಮೇತ ಮುಂದಿಟ್ಟಿದೆ.

    ಕಾಂಗ್ರೆಸ್ (Punjab) ಗ್ಯಾರಂಟಿಗೆ ಬಿಜೆಪಿ ಕಿಡಿ: ಪಂಜಾಬ್‌ನಲ್ಲಿ ಕಾಂಗ್ರೆಸ್‌ 2017ರಲ್ಲಿ ನೀಡಿದಂತೆ ನಿರುದ್ಯೋಗಿಗಳಿಗೆ 2000 ರೂ. ಭತ್ಯೆ ನೀಡುವ ಭರವಸೆ ಈಡೇರಿಸಿಲ್ಲ. 2018ರಲ್ಲಿ ರಾಜಸ್ಥಾನದಲ್ಲಿ‌ ನಿರುದ್ಯೋಗಿಗಳಿಗೆ 3,500 ರೂ. ಭತ್ಯೆ ಭರವಸೆಯನ್ನೂ ಭಾಗಶಃ ಈಡೇರಿಸಿಲ್ಲ (ಎರಡೂವರೆ ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಕುಟುಂಬಗಳನ್ನು ಕಾಂಗ್ರೆಸ್ ಈ ಯೋಜನೆಯಿಂದ ಹೊರಗಿಟ್ಟಿದೆ.. 18 ಲಕ್ಷ ನಿರುದ್ಯೋಗಿಗಳಿದ್ದಾರೆ). 2018ರಲ್ಲಿ ಛತ್ತೀಸ್‌ಘಡ ಸರ್ಕಾರ ಹೇಳಿದಂತೆ ನಿರುದ್ಯೋಗಿಗಳಿಗೆ 2,500 ರೂ. ಭತ್ಯೆ ಭರವಸೆಯನ್ನು ಈಡೇರಿಸಿಲ್ಲ (ಎರಡೂವರೆ ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಕುಟುಂಬಗಳನ್ನು ಕಾಂಗ್ರೆಸ್ ಈ ಯೋಜನೆಯಿಂದ ಹೊರಗಿಟ್ಟಿದೆ.. 3000 ಕೋಟಿ ಬೇಕಿದ್ದ ಜಾಗದಲ್ಲಿ 250 ಕೋಟಿ ಮೀಸಲಿಟ್ಟಿದೆ). ಹಿಮಾಚಲ ಪ್ರದೇಶದಲ್ಲಿ 1 ಲಕ್ಷ ಸರ್ಕಾರಿ ಉದ್ಯೋಗ ನೀಡುವ ಭರವಸೆಯಯನ್ನೂ ಕಾಂಗ್ರೆಸ್ ಈಡೇರಿಸಿಲ್ಲ. ಈ ಪಟ್ಟಿಯಲ್ಲಿ ಇದೊಂದು ಸುಳ್ಳಿನ ಗ್ಯಾರಂಟಿ ಕಾರ್ಡ್‌ ಸೇರಿದೆ ಎಂದು ಬಿಜೆಪಿ ಕಿಡಿ ಕಾರಿದೆ.

    ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ (ಸಿಎಂಐಇ ಪ್ರಕಾರ): ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಇದೆ ಎಂದು ಸಿಎಂಐಇ ಹೇಳಿದೆ. ಜನವರಿ ತಿಂಗಳಲ್ಲಿ ರಾಜ್ಯದಲ್ಲಿದ್ದ ನಿರುದ್ಯೋಗ ಪ್ರಮಾಣ ಶೇ.2.5 (ರಾಜಸ್ಥಾನದಲ್ಲಿ ಶೇ.28, ದೆಹಲಿಯಲ್ಲಿ ಶೇ.20ರಷ್ಟಿದೆ), ಫೆಬ್ರವರಿ ತಿಂಗಳಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ ಶೇ. 1.8ಕ್ಕೆ ಇಳಿಕೆಯಾಗಿದೆ ಎಂದು ಹೇಳಲಾಗಿದೆ.

  • ಮೋದಿ ಯುವಜನರನ್ನ ಸ್ವಾವಲಂಬಿಗಳಾಗಿ ಮಾಡಿದ್ರೆ, ಕಾಂಗ್ರೆಸ್‌ 3 ಸಾವಿರ ಕೊಡ್ತೀನಿ ಅಂತಿದೆ – ತೇಜಸ್ವಿ‌ ಸೂರ್ಯ

    ಮೋದಿ ಯುವಜನರನ್ನ ಸ್ವಾವಲಂಬಿಗಳಾಗಿ ಮಾಡಿದ್ರೆ, ಕಾಂಗ್ರೆಸ್‌ 3 ಸಾವಿರ ಕೊಡ್ತೀನಿ ಅಂತಿದೆ – ತೇಜಸ್ವಿ‌ ಸೂರ್ಯ

    ಬೆಂಗಳೂರು: `ಯುವಕ್ರಾಂತಿ’ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ (Rahul Gandhi) 2 ವರ್ಷಗಳವರೆಗೆ ಪ್ರತಿ ತಿಂಗಳು ನಿರುದ್ಯೋಗಿ (Unemployment) ಪದವೀಧರರಿಗೆ 3 ಸಾವಿರ ರೂ. ಹಾಗೂ ನಿರುದ್ಯೋಗಿ ಡಿಪ್ಲೊಮಾ ಪದವೀಧರರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡುವ `ಯುವನಿಧಿ’ (YuvaNidhi) ಯೋಜನೆಯನ್ನ ಘೋಷಣೆ ಮಾಡಿದ್ದಾರೆ.

    ಕಾಂಗ್ರೆಸ್ ಘೋಷಣೆ ಮಾಡಿರುವ 4ನೇ ಗ್ಯಾರಂಟಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi_Surya) ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ.: ಕಾಂಗ್ರೆಸ್‌ 4ನೇ ಗ್ಯಾರಂಟಿ ಘೋಷಣೆ

    `ಒಂದೆಡೆ ಪ್ರಧಾನಿ ನರೇಂದ್ರ ಮೋದಿ (NarendraModi) ಅವರು, ಸ್ಟಾರ್ಟ್ಅಪ್, ಡಿಜಿಟಲ್ ಇಂಡಿಯಾ (Digital India), ಮುದ್ರಾ ಮತ್ತು ಇನ್ನಿತರ ಯೋಜನೆಗಳಿಂದ ಯುವಜನರನ್ನು ಸ್ವಾವಲಂಭಿಗಳಾಗಿ ಮಾಡಲು ಪ್ರಯತ್ನಿಸುತ್ತಿದ್ದರೇ, ಇನ್ನೊಂದೆಡೆ ರಾಹುಲ್‌ಗಾಂಧಿ ಅವರು 3 ಸಾವಿರ ರೂ. ಭತ್ಯೆ ಕೊಡುವ ಮಹಾನ್ ಯೋಜನೆಯನ್ನು ಕರ್ನಾಟಕದ ಯುವಜನತೆಗೆ ಘೋಷಿಸುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದಿನ ಆಶಾದಾಯಿ ಯುವ ಪೀಳಿಗೆಯಿಂದ ಕಾಂಗ್ರೆಸ್ ಪಕ್ಷ ಎಷ್ಟು ದೂರ ಸರಿದಿದೆ ಎಂಬುದಕ್ಕೆ ಇದು ನಿದರ್ಶನ. ದೇಶದ ಆಶಾದಾಯಕ, ಭರವಸೆಯ ಯುವಜನತೆಗೆ ನಿರುದ್ಯೋಗಿ ಕಾಂಗ್ರೆಸ್ ಪಕ್ಷವು ಮಾಡುತ್ತಿರುವ ದ್ರೋಹ ಅಕ್ಷಮ್ಯ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 10 ಲಕ್ಷ ಯುವಕರಿಗೆ ಉದ್ಯೋಗ – ರಾಹುಲ್ ಗಾಂಧಿ ಭರವಸೆ

    ಈಗಾಗಲೇ ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ, 200 ಯೂನಿಟ್ ವಿದ್ಯುತ್ ಉಚಿತ, ಕುಟುಂಬದ ಓರ್ವ ಮಹಿಳೆಗೆ 2 ಸಾವಿರ ರೂ. ನೀಡುವುದಾಗಿ ಘೋಷಿಸಿರುವ ಕಾಂಗ್ರೆಸ್ ತನ್ನ 4ನೇ ಗ್ಯಾರಂಟಿಯಾಗಿ `ಯುವನಿಧಿ’ ಯೋಜನೆಯನ್ನ ಘೋಷಣೆ ಮಾಡಿದೆ.