Tag: yuva film

  • Exclusive: ʻಯುವ’ ಚಿತ್ರಕ್ಕೆ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದು ಹೇಗೆ?

    Exclusive: ʻಯುವ’ ಚಿತ್ರಕ್ಕೆ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದು ಹೇಗೆ?

    ಚಂದನವನದ ಚೆಂದದ ನಟಿ ಸಪ್ತಮಿ ಗೌಡ (Saptami Gowda) ಈಗಾಗಲೇ `ಕಾಂತಾರ’ (Kantara Film) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿದ್ದಾರೆ. ಈ ಬೆನ್ನಲ್ಲೇ ದೊಡ್ಮನೆ ಕುಡಿ `ಯುವ’ (Yuva Film)  ರಾಜ್‌ಕುಮಾರ್‌ಗೆ ನಾಯಕಿಯಾಗಿ ಸೆಲೆಕ್ಟ್ ಆಗಿದ್ದು ಹೇಗೆ? ಎಂಬುದರ ಬಗ್ಗೆ ನಟಿ ಸಪ್ತಮಿ ಇದೀಗ ಪಬ್ಲಿಕ್ ಟಿವಿ ಡಿಜಿಟಲ್ ಮಾಹಿತಿ ನೀಡಿದ್ದಾರೆ.

    `ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರು. ಡಾಲಿಗೆ ನಾಯಕಿಯಾಗಿ ಮೊದಲ ಸಿನಿಮಾದಲ್ಲೇ ಸೈ ಎನಿಸಿಕೊಂಡರು. ಬಳಿಕ `ಕಾಂತಾರ’ (Kantara) ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗುವ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದರು. ಇದನ್ನೂ ಓದಿ: ನಟಿ ಇಲಿಯಾನ ಡಿ ಕ್ರೂಸ್ ಗೆ ಬ್ಯಾನ್ ಬಿಸಿ: ಫಿಲ್ಮ್ ಚೇಂಬರ್ ನಿರ್ಧಾರ

    ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ `ದಿ ವಾಕ್ಸಿನ್ ವಾರ್’ ಚಿತ್ರದಲ್ಲಿ ಕೂಡ ಸಪ್ತಮಿ (Saptami Gowda) ಮೇಜರ್ ರೋಲ್ ಪ್ಲೈ ಮಾಡ್ತಿದ್ದಾರೆ. ಈ ಮೂಲಕ ಬಿಟೌನ್ ಅಂಗಳಕ್ಕೂ ನಟಿ ಲಗ್ಗೆ ಇಟ್ಟಿದ್ದಾರೆ. ಈಗ ಹೊಂಬಾಳೆ ಸಂಸ್ಥೆ ನಿರ್ಮಾಣದ `ಯುವ’ ಚಿತ್ರಕ್ಕೆ ಕಾಂತಾರ ನಟಿ ಆಯ್ಕೆಯಾಗಿದ್ದು ಹೇಗೆ? ಎಂಬುದನ್ನ ರಿವೀಲ್ ಮಾಡಿದ್ದಾರೆ.

    ಕಳೆದ ಶನಿವಾರ (ಫೆ.4)ರಂದು ಸಂಜೆ ಕೆಸಿಸಿ ಕಾರ್ಯಕ್ರಮಕ್ಕೆ ತನ್ನ ತಾಯಿಯೊಂದಿಗೆ ನಟಿ ಸಪ್ತಮಿ ತೆರಳುತ್ತಿದ್ದರು. ಈ ವೇಳೆ ಹೊಂಬಾಳೆ ಸಂಸ್ಥೆ ಟೀಂ ಕಡೆಯಿಂದ ನಟಿಗೆ ಕಾಲ್ ಬಂದಿದೆ. ಆಫೀಸ್‌ಗೆ ಬನ್ನಿ ಎಂದಷ್ಟೇ ಹೇಳಲಾಗಿದೆ. ಬಳಿದ ಚಿತ್ರತಂಡಕ್ಕೆ ಸಪ್ತಮಿ ಭೇಟಿ ನೀಡಿದ್ದಾರೆ. ಬಳಿಕ ಯುವ ರಾಜ್‌ಕುಮಾರ್ (Yuva Rajkumar) ಅವರ ಪಕ್ಕ ನಿಲ್ಲಿಸಿ ಫೋಟೋ ಕ್ಲಿಕ್ಕಿಸಲಾಗಿದೆ. ನಂತರ `ಯುವ’ ಚಿತ್ರಕ್ಕೆ ನೀವೇ ಹೀರೋಯಿನ್ ಎಂದು ಸರ್ಪ್ರೈಸ್ ನೀಡಿದ್ದಾರೆ. ಈ ಚಿತ್ರಕ್ಕೆ ತಾನೇ ನಾಯಕಿ ಎಂದು‌ ಒಂದು ಸಣ್ಣ ಸುಳಿವು ಇಲ್ಲದೇ ಆಫೀಸ್‌ಗೆ ಬಂದ ಸಪ್ತಮಿಗೆ ಇದು ನಿಜಕ್ಕೂ ಗುಡ್ ನ್ಯೂಸ್ ಆಗಿತ್ತು ಎಂದು ಖುಷಿಯಿಂದ ಮಾತನಾಡಿದ್ದಾರೆ. ಯುವ ರಾಜ್‌ಕುಮಾರ್‌ಗೆ ಜೋಡಿಯಾಗಿರೋದು, ಕಾಂತಾರ ಬಳಿಕ ಮತ್ತೆ `ಹೊಂಬಾಳೆ ಸಂಸ್ಥೆ’ಯ ಜೊತೆ ಕೈಜೋಡಿಸಿರುವುದು ಖುಷಿಯಿದೆ ಎಂದು ಸಪ್ತಮಿ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.

    ಕಳೆದವಾರವಷ್ಟೇ `ಯುವ’ ಚಿತ್ರದ ಅಫಿಷಿಯಲ್ ಟೀಸರ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಫ್ಯಾನ್ಸ್‌ಗೆ ಹೊಂಬಾಳೆ ಸಂಸ್ಥೆ (Hombale Films) ಗುಡ್ ನ್ಯೂಸ್ ನೀಡಿದ್ದರು. ಈಗ ನಾಯಕಿ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಸದ್ಯದಲ್ಲಿಯೇ `ಯುವ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಈ ವರ್ಷ ಡಿಸೆಂಬರ್ 22ರಂದು ಸಿನಿಮಾ ತೆರೆ ಅಪ್ಪಳಿಸಲಿದೆ.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್

  • Exclusive:`ಯುವ’ ರಾಜ್‌ಕುಮಾರ್- ಸಪ್ತಮಿ ಗೌಡ ಫೋಟೋಶೂಟ್

    Exclusive:`ಯುವ’ ರಾಜ್‌ಕುಮಾರ್- ಸಪ್ತಮಿ ಗೌಡ ಫೋಟೋಶೂಟ್

    ದೊಡ್ಮನೆ ಕುಡಿ ಯುವರಾಜ್‌ಕುಮಾರ್ `ಯುವ’ (Yuva) ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೇ `ಯುವ’ ಚಿತ್ರದ ಮುಹೂರ್ತ ಅದ್ದೂರಿಯಾಗಿ ಮಾಡಲಾಯಿತು. ಟೈಟಲ್ ಅನಾವರಣ ಮಾಡುವ ಮೂಲಕ ದೂಳೆಬ್ಬಿಸಿದ್ದಾಯ್ತು. ಈಗ ಯುವಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಲಿದ್ದಾರೆ. ಈ ಜೋಡಿಯ Exclusive ಫೋಟೋಶೂಟ್ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಲಭ್ಯವಾಗಿದೆ. ಇದನ್ನೂ ಓದಿ: Breaking: ಯುವ ರಾಜ್‌ಕುಮಾರ್‌ಗೆ ನಾಯಕಿಯಾದ `ಕಾಂತಾರ’ ಬ್ಯೂಟಿ ಸಪ್ತಮಿ

    `ಯುವ’ ಸಿನಿಮಾ ಶುರುವಾಗುವ ಮುಂಚೆಯೇ ಯುವ ರಾಜ್‌ಕುಮಾರ್ (Yuva Rajkumar) ಯಾರು ನಾಯಕಿಯಾಗಿ ಬರುತ್ತಾರೆ ಎಂದು ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಇದೀಗ ಯುವಗೆ ನಾಯಕಿಯಾಗುವ ಲಕ್ಕಿ ನಟಿ ಯಾರು ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ದೊಡ್ಮನೆ ಕುಡಿ ಯುವಗೆ ನಾಯಕಿಯಾಗಿ `ಕಾಂತಾರ’ ಬ್ಯೂಟಿ ಸಪ್ತಮಿ ಗೌಡ (Saptami Gowda) ಕಾಣಿಸಿಕೊಳ್ಳಲಿದ್ದಾರೆ. ಯುವ (Yuva) ಜೊತೆ ರೊಮ್ಯಾನ್ಸ್ ಮಾಡಲು ಸಪ್ತಮಿ ರೆಡಿಯಾಗಿದ್ದಾರೆ. ಚಿತ್ರದಲ್ಲಿ ಸಪ್ತಮಿ ಪಾತ್ರಕ್ಕೆ ಹೆಚ್ಚಿನ ಆದ್ಯತೆಯಿದ್ದು, ಪವರ್‌ಫುಲ್ ಪಾತ್ರದ ಮೂಲಕ ನಟಿ ಬಿಗ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಚಂದನವನದ ಚೆಂದದ ಜೋಡಿಯಾಗಿ ಮಿಂಚಲು ಯುವ ಮತ್ತು ಸಪ್ತಮಿ ಗೌಡ ಸಜ್ಜಾಗಿದ್ದಾರೆ. ಹೊಚ್ಚ ಹೊಸ ಕಥೆಯೊಂದಿಗೆ ಬೆಳ್ಳಿತೆರೆಯಲ್ಲಿ ಅಬ್ಬರಿಸಲಿದ್ದಾರೆ. ಯುವ ಪರ್ವಗೆ ಕೌಂಟ್‌ಡೌನ್‌ ಶುರುವಾಗಿದೆ.

    `ಯುವ’ ಸಿನಿಮಾವನ್ನ ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಡಿದ್ದರೆ, ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ವರ್ಷ ಡಿಸೆಂಬರ್ 22ಕ್ಕೆ ಯುವ ಸಿನಿಮಾ ತೆರೆಗೆ ಅಬ್ಬರಿಸಲಿದೆ.