Tag: yuva film

  • ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಯುವರಾಜ್‌ಕುಮಾರ್‌, ಸಪ್ತಮಿ ನಟನೆಯ ‘ಯುವ’ ಸಿನಿಮಾ

    ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಯುವರಾಜ್‌ಕುಮಾರ್‌, ಸಪ್ತಮಿ ನಟನೆಯ ‘ಯುವ’ ಸಿನಿಮಾ

    ನ್ನಡ ಕಿರುತೆರೆಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ‘ಯುವ’ (Yuva Film) ಸಿನಿಮಾವನ್ನು ಪ್ರಸಾರ ಮಾಡಲಿದೆ. ಜೊತೆಗೆ ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶವನ್ನು ಸುವರ್ಣ ವಾಹಿನಿಯು ನೀಡುತ್ತಿದೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಕ್ಷಿತ್, ರಾಜ್ ಬಿ ಶೆಟ್ಟಿ

    ಇದೇ ಮೊದಲ ಬಾರಿಗೆ ದೊಡ್ಮನೆಯ ಕುಡಿ, ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜ್ ಕುಮಾರ್ (Yuva Rajkumar) ‘ಯುವ’ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಜೊತೆಗೆ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ (Sapthami Gowda) ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಥಿಯೇಟರ್‌ನಲ್ಲಿ ಜನ ಮನ ಗೆದ್ದ ‘ಯುವ’ ಸಿನಿಮಾ ಇದೀಗ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಸಿನಿಮಾದ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು, ಈ ವಾರಾಂತ್ಯದಲ್ಲಿ ನೋಡುಗರಿಗೆ ಭರ್ಜರಿ ಮನರಂಜನೆ ಸಿಗೋದಂತು ಖಚಿತ.

    ಅಷ್ಟೇ ಅಲ್ಲದೆ, ವಾಹಿನಿಯು ನೋಡುಗರಿಗೊಂದು ಸುವರ್ಣಾವಕಾಶವನ್ನು ನೀಡುತ್ತಿದೆ. ‘ಯುವ’ ಸಿನಿಮಾ ನೋಡ್ತಿರುವಾಗ ವಾಹಿನಿಯ ಲೋಗೋ ಕೆಳಗಡೆ ಎಷ್ಟು ಬಾರಿ ಬೈಕ್ ಚಿತ್ರ ಬರುತ್ತದೆ ಎಂಬುದನ್ನು ನೋಡಿ, ಸರಿಯಾದ ಉತ್ತರ ಕೊಟ್ಟ ಅದೃಷ್ಟಶಾಲಿ ವಿಜೇತರಿಗೆ ‘ಯುವ’ ಸಿನಿಮಾದಲ್ಲಿ ಯುವರಾಜ್ ಕುಮಾರ್ ಬಳಸಿರೋ ಬೈಕ್ ಬಹುಮಾನವಾಗಿ ಸಿಗಲಿದೆ.

    ಯುವರಾಜ್ ಕುಮಾರ್ ಹಾಗೂ ಸಪ್ತಮಿ ಗೌಡ ಅಭಿನಯದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ ‘ಯುವ’ ಇದೇ ಭಾನುವಾರ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ.

  • ಯುವರಾಜ್‌ಕುಮಾರ್‌ ಡಿವೋರ್ಸ್ ನೋಟಿಸ್ ವಿಚಾರವಾಗಿ ಶ್ರೀದೇವಿ ಫಸ್ಟ್ ರಿಯಾಕ್ಷನ್

    ಯುವರಾಜ್‌ಕುಮಾರ್‌ ಡಿವೋರ್ಸ್ ನೋಟಿಸ್ ವಿಚಾರವಾಗಿ ಶ್ರೀದೇವಿ ಫಸ್ಟ್ ರಿಯಾಕ್ಷನ್

    ದೊಡ್ಮನೆ ಕುಡಿ ಯುವರಾಜ್‌ಕುಮಾರ್ (Yuva Rajkumar) ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಪತ್ನಿ ಮಾನಸಿಕ ಕಿರುಕುಳ ಕೊಡ್ತಿದ್ದಾರೆ ಎಂದು ಉಲ್ಲೇಖಿಸಿ ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಯುವ ನೀಡಿರುವ ಡಿವೋರ್ಸ್ ನೋಟಿಸ್ ವಿಚಾರವಾಗಿ ಶ್ರೀದೇವಿ (Sridevi) ಪಬ್ಲಿಕ್ ಟಿವಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ಏನಾಗಿದೆ ಅನ್ನೋ ವಿಷಯ ಚಿತ್ರರಂಗ ಮತ್ತು ಮಾಧ್ಯಮದಲ್ಲಿ ಅನೇಕರಿಗೆ ತಿಳಿದಿದೆ. ನಾನು ಈಗಾಗಲೇ ಲೀಗಲ್ ನೋಟಿಸ್‌ಗೆ ಉತ್ತರಿಸಿದ್ದೇನೆ. ವಿಚ್ಛೇದನ ಅರ್ಜಿ ಪ್ರತಿಯು ಇನ್ನೂ ನನ್ನ ಕೈ ತಲುಪಿಲ್ಲ. ನನಗೆ ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ಎಲ್ಲರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತೀರಾ ಎಂದು ಭಾವಿಸುತ್ತೇನೆ ಎಂದು ಶ್ರೀದೇವಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ನಿವೇದಿತಾ ಕೋಟ್ಯಂತರ ರೂಪಾಯಿ ಜೀವನಾಂಶಕ್ಕೆ ಬೇಡಿಕೆಯಿಟ್ಟಿಲ್ಲ: ಚಂದನ್‌ ಶೆಟ್ಟಿ

    7 ವರ್ಷಗಳು ಪ್ರೀತಿಸಿ ಮದುವೆಯಾಗಿದ್ದ ಯುವ ಮತ್ತು ಶ್ರೀದೇವಿ ಜೋಡಿ ಈಗ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಜೂನ್ 6ರಂದು ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಯುವರಾಜ್‌ಕುಮಾರ್, ಜುಲೈ 4ರಂದು ವಿಚಾರಣೆಗೆ ನಿಗದಿಯಾಗಿದೆ. ಕಳೆದ 6 ತಿಂಗಳಿಂದ ಇಬ್ಬರ ಡಿವೋರ್ಸ್ ಸುದ್ದಿ ಹರಿದಾಡುತ್ತಿತ್ತು. ಕೆಲ ತಿಂಗಳುಗಳಿಂದ ಇಬ್ಬರೂ ಜೊತೆಯಾಗಿ ಕೂಡ ವಾಸಿಸುತ್ತಿಲ್ಲ. ಇನ್ನೂ ‘ಯುವ’ ಸಿನಿಮಾದ ಪ್ರಚಾರ ಕಾರ್ಯದಲ್ಲಿಯೂ ಕೂಡ ಶ್ರೀದೇವಿ ಭಾಗಿಯಾಗಿರಲಿಲ್ಲ. ಸದ್ಯ ಶ್ರೀದೇವಿ ಅವರು ವಿದೇಶದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

    ಮೈಸೂರು ಮೂಲದ ಶ್ರೀದೇವಿರನ್ನು ಯುವ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯ ಮೇರೆಗೆ 2018ರಲ್ಲಿ ಯುವರಾಜ್‌ಕುಮಾರ್ ನಿಶ್ಚಿತಾರ್ಥ ನಡೆಯಿತು. 2019ರ ಮೇ 26ರಂದು ಅದ್ಧೂರಿಯಾಗಿ ಇಬ್ಬರ ಮದುವೆ ಜರುಗಿತ್ತು.

  • ‘ಯುವ’ನ ಚೊಚ್ಚಲ ಚಿತ್ರವನ್ನು ಹಾಡಿ ಹೊಗಳಿದ ನಾಗಾರ್ಜುನ್

    ‘ಯುವ’ನ ಚೊಚ್ಚಲ ಚಿತ್ರವನ್ನು ಹಾಡಿ ಹೊಗಳಿದ ನಾಗಾರ್ಜುನ್

    ದೊಡ್ಮನೆ ಕುಡಿ ಯುವರಾಜ್‌ಕುಮಾರ್ (Yuva Rajkumar) ನಟನೆಯ ‘ಯುವ’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬೆನ್ನಲ್ಲೇ ಟಾಲಿವುಡ್ ನಾಗಾರ್ಜನ್ ಅಕ್ಕಿನೇನಿ ‘ಯುವ’ (Yuva Film) ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಯುವ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದಲ್ಲಿರುವ ಮಿತ್ರರಿಗೆ ಎಲ್ಲರಿಗೂ ನಮಸ್ಕಾರ, ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಯುವ ಸಿನಿಮಾ ಮೊನ್ನೆ ಶುಕ್ರವಾರ ರಿಲೀಸ್ ಆಗಿದೆ. ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಯುವ ಚಿತ್ರ ಹಿಟ್ ಕೂಡ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಹೈದರಾಬಾದ್‌ನಲ್ಲಿಯೂ ಚಿತ್ರ ಹಿಟ್ ಆಗಿದೆ ಎಂದು ನಾಗಾರ್ಜುನ್ ಮಾತನಾಡಿದ್ದಾರೆ. ವಿಡಿಯೋ ಮೂಲಕ ವಿಶ್‌ ಮಾಡಿದ್ದಾರೆ. ಇದನ್ನೂ ಓದಿ:8 ವರ್ಷಗಳ ಬಳಿಕ ಟಾಲಿವುಡ್‌ಗೆ ಕಮ್‌ಬ್ಯಾಕ್ ಆದ ‘ವೀರಕನ್ನಡಿಗ’ ನಟಿ

    ಈ ವೇಳೆ, ವರನಟ ರಾಜ್‌ಕುಮಾರ್ ಅವರನ್ನು ನಾಗಾರ್ಜುನ್ ಸ್ಮರಿಸಿದ್ದಾರೆ. ತೆಲುಗು ಮಂದಿಗೂ ಅವರೆಂದರೆ ಇಷ್ಟ. ಇನ್ನೂ ನಿಮ್ಮ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದೀರಿ. ನಿಮ್ಮ ಮುಂದಿನ ಹೆಜ್ಜೆಗೆ ಶುಭವಾಗಲಿ ಎಂದು ದೊಡ್ಮನೆ ಕುಡಿಗೆ ತೆಲುಗು ನಟ ನಾಗಾರ್ಜುನ್ ಶುಭಹಾರೈಸಿದ್ದಾರೆ.

    ‘ಯುವ’ ಸಿನಿಮಾ ಇದೇ ಮಾರ್ಚ್.29ಕ್ಕೆ ರಿಲೀಸ್ ಆಗಿದೆ. ಯುವ ಮತ್ತು ಸಪ್ತಮಿ ಗೌಡ (Sapthami Gowda) ಜೋಡಿ ನೋಡುಗರ ಗಮನ ಸೆಳೆದಿದೆ. ಸಂತೋಷ್ ಆನಂದ್‌ರಾಮ್ (Santhosh Anandram) ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಸಂಸ್ಥೆ ‘ಯುವ’ (Yuvafilm) ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

  • ‘ಬೊಂಬೆ ಹೇಳುತೈತೆ’ ಸಾಂಗ್ ಕೇಳುತ್ತಿದ್ದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಣ್ಣೀರು

    ‘ಬೊಂಬೆ ಹೇಳುತೈತೆ’ ಸಾಂಗ್ ಕೇಳುತ್ತಿದ್ದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಣ್ಣೀರು

    ದೊಡ್ಮನೆ ಕುಡಿ ಯುವರಾಜ್‌ಕುಮಾರ್ ಅವರು ‘ಯುವ’ (Yuva) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇದೇ ಮಾರ್ಚ್ 29ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಮಾ.23ರಂದು ಹೊಸಪೇಟೆಯಲ್ಲಿ ಯುವ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ವೇಳೆ, ಬೊಂಬೆ ಹೇಳುತೈತೆ ಸಾಂಗ್ ಕೇಳಿ ಪುನೀತ್ ಪತ್ನಿ ಅಶ್ವಿನಿ ಕಣ್ಣೀರಿಟ್ಟಿದ್ದಾರೆ.

    ಗಾಯಕ ವಿಜಯ್ ಪ್ರಕಾಶ್ ಅವರು ‘ರಾಜಕುಮಾರ’ ಸಿನಿಮಾದ ‘ಬೊಂಬೆ ಹೇಳುತೈತೆ’ ಹಾಡು ಹಾಡುತ್ತಿದ್ದ ವೇಳೆ ವೇದಿಕೆ ಎದುರಿಗೆ ಕೂತಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಬಳಿಕ ವೇದಿಕೆಯಲ್ಲಿ ಅವರು ಮಾತು ಆರಂಭಿಸುತ್ತಿದ್ದಂತೆಯೇ ಅಭಿಮಾನಿಗಳ ಅಪ್ಪು ಜಯಘೋಷ ಮುಗಿಲು ಮುಟ್ಟಿದೆ. ನಂತರ ಮಾತನಾಡಿದ ಅಶ್ವಿನಿ (Ashwini Puneethrajkumar) ಅವರು, ‘ಯುವ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ. ಯುವ ಹೊಸ ಜರ್ನಿಗೆ ಶುಭಹಾರೈಸಿದ್ದಾರೆ.

    ಇನ್ನೂ ಇದೇ ವೇಳೆ, ಯುವ ಸಿನಿಮಾ ಶುರುವಾಗಿದ್ದು ಹೇಗೆ ಎಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ರಿವೀಲ್ ಮಾಡಿದ್ದಾರೆ. ಅಶ್ವಿನಿ ಅವರು ಯುವನನ್ನು ವಿಜಯ್ ಕಿರಗಂದೂರು ಲಾಂಚ್ ಮಾಡಬೇಕು ಎಂದು ಹೇಳುತ್ತಾರೆ. ಆ ನಂತರ ವಿಜಯ್ ಅವರು ನನಗೆ ತಿಳಿಸಿದ್ದರು. ನೀನು ಯುವನನ್ನು ಲಾಂಚ್ ಮಾಡಬೇಕು ಅಂತ. ಅಂದಿನ ಒಂದು ಫೋನ್ ಕರೆ ಇವತ್ತು ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ವಿಜಯ್ ಕಿರಗಂದೂರು ಸರ್ ಕೂಡ ಒಂದೇ ಮಾತು ಹೇಳಿದ್ದು, ಗುರು (ಯುವ) ಲಾಂಚ್ ಮಾಡುವುದು ಒಂದು ಜವಾಬ್ದಾರಿಯಾಗಿ ತೆಗೆದುಕೊಳ್ಳಬೇಕು. ನಾವು ಸಿನಿಮಾವನ್ನು ನಿಲ್ಲಿಸಬೇಕು ಅಂತ ಹೇಳಿರೋದನ್ನು ಸ್ಮರಿಸಿದ್ದರು. ಇದನ್ನೂ ಓದಿ:ಬಾಲಿವುಡ್‌ನಲ್ಲಿ ರಿಮೇಕ್ ಆಗಲಿದೆ ‘ಉಪ್ಪೇನಾ’ ಚಿತ್ರ- ನಾಯಕಿ ಯಾರು?

    ಅಂದಹಾಗೆ, ಯುವಗೆ ಜೋಡಿಯಾಗಿ ಸಪ್ತಮಿ ಗೌಡ (Sapthami Gowda) ನಟಿಸಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಧಾರಾಣಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಯುವ ಚಿತ್ರದ ಹಾಡು, ಟ್ರೈಲರ್ ಸಿಕ್ಕಾಪಟ್ಟೆ ಮೋಡಿ ಮಾಡಿದೆ. ರಿಲೀಸ್‌ಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

  • ನಮ್ಮ ಚಿಕ್ಕಪ್ಪ ಇಲ್ಲೇ ಇದ್ದಾರೆ, ನನ್ನ ಶಕ್ತಿಯಾಗಿ ನಿಂತಿದ್ದಾರೆ- ‘ಯುವ’ ಭಾವುಕ

    ನಮ್ಮ ಚಿಕ್ಕಪ್ಪ ಇಲ್ಲೇ ಇದ್ದಾರೆ, ನನ್ನ ಶಕ್ತಿಯಾಗಿ ನಿಂತಿದ್ದಾರೆ- ‘ಯುವ’ ಭಾವುಕ

    ‘ಯುವ’ (Yuva) ಸಿನಿಮಾ ಪ್ರಿ-ರಿಲೀಸ್ ಕಾರ್ಯಕ್ರಮ ಹೊಸೆಪೇಟೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ‘ಯುವ’ ಸಿನಿಮಾದ ಇವೆಂಟ್‌ನಲ್ಲಿ ನಾನು ಹೋದ ಕಡೆಯೆಲ್ಲಾ ಅಪ್ಪು ಮಗ ಬಂದ ಅಂತ ಕರೆಯುತ್ತಾರೆ ಎಂದು ಅಪ್ಪುರನ್ನು (Puneeth Rajkumar)  ಸ್ಮರಿಸಿ ಯುವರಾಜ್‌ಕುಮಾರ್ ಭಾವುಕರಾಗಿದ್ದಾರೆ.

    ‘ಯುವ’ ಚಿತ್ರದ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಇಡೀ ಕುಟುಂಬ ಹಾಜರಿ ಹಾಕುವ ಮೂಲಕ ಸಾಥ್ ನೀಡಿದ್ದರು. ಯುವರಾಜ್‌ಕುಮಾರ್ ಅಪ್ಪುಗೆ ಮಗನಿದ್ದಂತೆ, ‘ಯುವ’ ಅಪ್ಪು ಮಗನೇ ಎಂದು ರಾಘಣ್ಣ (Raghavendra Rajkumar) ಭಾವುಕರಾದರು. ರಾಘಣ್ಣ ಮಾತಿಗೆ ಹೊಸಪೇಟೆ ಜನತೆ ಖುಷಿಪಟ್ಟರು.

    ನಮ್ಮ ತಂದೆನೇ ಹೇಳಿಬಿಟ್ರು ಅಪ್ಪು ಮಗ ಅಂತ. ನಾನು ಎಲ್ಲೇ ಹೋದರೂ ಜನ ಅಪ್ಪು ಮಗ ಬಂದ. ಅಪ್ಪು ಮಗ ಬಂದ ಅಂತ ಹೇಳುತ್ತಾರೆ. ನನಗೆ ಎಷ್ಟು ಸಂತೋಷ ಆಗುತ್ತದೆ ಗೊತ್ತಾ? ಎಂದು ಯುವ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಚಿಕ್ಕಪ್ಪ ಇಲ್ಲೇ ಇದ್ದಾರೆ. ಅವರು ನನ್ನ ಶಕ್ತಿಯಾಗಿ ನನ್ನ ಜೊತೆ ನಿಂತಿದ್ದಾರೆ. ಅವರು ನನ್ನ ಕೈ ಹಿಡಿದು ನಡೆಸುತ್ತಿದ್ದಾರೆ. ಇಲ್ಲಿವರೆಗೂ ಕರೆದುಕೊಂಡು ಬಂದು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಇನ್ಮುಂದೆ ನೀವು ಹೇಗೆ ಹೇಳ್ತಿರೋ ಹಾಗೆ ಎಂದು ಯುವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

    ಸುಮಾರು ಜನ ಹೇಳುತ್ತಾರೆ. ಏನು ರಾಜ್‌ಕುಮಾರ್ ಕುಟುಂಬ. ಅವರಿಗೇನು ಎಲ್ಲಾ ಸುಲಭ. ಯಾಕೆ ಓದುತ್ತಾರೆ? ಸುಮ್ಮನೆ ಅವರ ತಂದೆ ತಾಯಿ ಹೆಸರು ಕೇಳಿದರೆ ಸಾಕು ಸಿನಿಮಾಗೆ ಬರುತ್ತಾರೆ ಅಂತ. ಆದರೆ, ಅದು ಅಷ್ಟು ಈಸಿಯಾಗಿಲ್ಲ. ನನ್ನ ಸುಮಾರು ವರ್ಷದ ಕನಸು ನಾನು ಇಲ್ಲಿ ಬಂದು ನಿಲ್ಲಬೇಕು ಅಂತ. ಚಿಕ್ಕ ವಯಸ್ಸಿನಿಂದಲೇ ಎಲ್ಲರೂ ಡಿಸೈಡ್ ಮಾಡಿಬಿಟ್ಟರು. ನೀನು ಆ್ಯಕ್ಟರ್ ಆಗ್ತೀಯಾ ಅಂತ. ನನಗೆ ಎಲ್ಲರೂ ನನ್ನ ಫ್ಯೂಚರ್ ಡಿಸೈಡ್ ಮಾಡ್ತಿದ್ದಾರೆ ಅಂದ್ರೆ, ನಾನೇನು ಮಾಡಲಿ. ನನ್ನ ಆಸೆಯೇನು? ಅದಕ್ಕೆ ನಾನು ಸಿನಿಮಾ ಚಿತ್ರರಂಗವೇ ಬೇಡ ಅಂದೆ. ಆದರೆ, ನನ್ನ ಮನಸ್ಸಿನಲ್ಲಿ ಸಿನಿ ಚಿತ್ರರಂಗಕ್ಕೆ ಬರಬೇಕು ಅನ್ನೋ ಆಸೆಯಿತ್ತು ಎಂದಿದ್ದಾರೆ. ನನ್ನ ಆಸೆ ನಾನು ಬಿಡಲ್ಲ. ಕಷ್ಟಪಟ್ಟು ಪ್ರಾಕ್ಟೀಸ್ ಮಾಡಿದೆ ಎಂದು ಯುವ ಮಾತನಾಡಿದ್ದಾರೆ.

     

    View this post on Instagram

     

    A post shared by Hombale Films (@hombalefilms)

    ನಿಮ್ಮ ಮುಂದೆ ಬಂದು ನಿಲ್ಲಬೇಕು ಅಂದರೆ, ಏನಾದ್ರೂ ಒಂದು ಕಾನ್ಫಿಡೆನ್ಸ್ ಇರಬೇಕಲ್ವಾ? ಏನೂ ಮಾಡದೇ ಏನು ಬಂದು ಕಿತ್ತಾಕ್ಲಿ ಇಲ್ಲಿ? ನೀವು ಬಂದು ಕೇಳಲ್ವಾ? ನಿಮಗೆ ಹಕ್ಕಿಲ್ವಾ? ಇವತ್ತು ನಮ್ಮ ಇಡೀ ಮನೆ. ಇಡೀ ಕುಟುಂಬ ನಡೆಯುತ್ತಿರೋದೇ ನಿಮ್ಮಿಂದ. ಇದು ಸತ್ಯವಾದ ಮಾತು. ನಿಮ್ಮೆಲ್ಲರಿಗೂ ಗೊತ್ತು, ನನಗೆ ಬೇರೆ ಕೆಲಸ ಇಲ್ಲ. ನಮಗೆ ಗೊತ್ತಿರೋದೇ ಸಿನಿಮಾ. ನಿಮ್ಮೆಲ್ಲರಿಗೆ ಸಂತೋಷ ಹಾಗೂ ಪ್ರೀತಿ ಕೊಡುವುದೇ ಜವಾಬ್ದಾರಿ ಎಂದು ಯುವ ಹೇಳಿದ್ದಾರೆ.

    ನಮ್ಮ ಚಿಕ್ಕಪ್ಪ ಯಾವಾಗಲೋ ಹೇಳಿದ್ರಂತೆ ವಿಜಯ್ ಕಿರಗಂದೂರು ಸರ್‌ಗೆ ನೀವು ಗುರು ಸಿನಿಮಾ ಮಾಡಬೇಕು ಅಂತ. ಆ ಮೇಲೆ ನಮ್ಮ ಆಂಟಿ ಹೇಳಿದ್ರು. ನೀವೇ ಗುರುನಾ ಲಾಂಚ್ ಮಾಡಬೇಕು ಅಂತ. ಆ ಮೇಲೆ ಎಷ್ಟೋ ಜನ ಸಂತೋಷ್ ಸರ್‌ಗೆ ನೀವು `ಯುವ’ ಜೊತೆ ಸಿನಿಮಾ ಮಾಡಿ ಅಂತ. ಅದು ನನಗೆ ಗೊತ್ತು. ಈ ಸಿನಿಮಾ ಆಗಿದ್ದೇ ನಿಮ್ಮಿಂದ. ನೀವೇ ಕರೆದುಕೊಂಡು ಬಂದಿದ್ದೀರ. ನೀವೇ ನಿಲ್ಲಿಸಿದ್ದೀರ. ಇಲ್ಲಿಂದ ನೀವು ಹೇಗೆ ಕರಕೊಂಡು ಹೋಗ್ತೀರಾ ಅದು ನಿಮಗೆ ಬಿಟ್ಟಿದ್ದು, ನನಗೆ ದಾರಿ ಕಾಣದೇ ಇರುವ ಸಂದರ್ಭದಲ್ಲಿ ಹೊಂಬಾಳೆ ಸಂಸ್ಥೆ ಸಾಥ್ ನೀಡಿದ್ದಾರೆ ಎಂದು ಯುವ ರಾಜ್‌ಕುಮಾರ್ (Yuva Rajkumar) ಮಾತನಾಡಿದ್ದಾರೆ.

    ಅಂದಹಾಗೆ, ‘ಯುವ’ ಸಿನಿಮಾ ಇದೇ ಮಾರ್ಚ್ 29ಕ್ಕೆ ರಿಲೀಸ್ ಆಗುತ್ತಿದೆ. ಯುವಗೆ ನಾಯಕಿಯಾಗಿ ಕಾಂತಾರ ಬೆಡಗಿ ಸಪ್ತಮಿ ಗೌಡ ನಟಿಸಿದ್ದಾರೆ. ಚಿತ್ರದಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಮಾರ್ಚ್ 2ರಂದು ರಿಲೀಸ್ ಆಗಲಿದೆ ‘ಯುವ’ ಚಿತ್ರದ ಮೊದಲ ಸಾಂಗ್

    ಮಾರ್ಚ್ 2ರಂದು ರಿಲೀಸ್ ಆಗಲಿದೆ ‘ಯುವ’ ಚಿತ್ರದ ಮೊದಲ ಸಾಂಗ್

    ಗಂಡು ಮೆಟ್ಟಿದ ನಾಡಲ್ಲೇ ‘ಯುವ’ (Yuva Film) ಪಟ್ಟಾಭಿಷೇಕದ ಮೆರವಣಿಗೆಗೆ ಚಾಲನೆ ಸಿಕ್ಕಲಿದೆ. ಅಣ್ಣಾವ್ರು-ಅಪ್ಪು ಹೆಸರನ್ನ ಹೃದಯದಲ್ಲಿ ಇಟ್ಟು ಪೂಜಿಸುವ ಹುಬ್ಬಳ್ಳಿಯಲ್ಲಿ ‘ಯುವ’ ರಣಕಹಳೆ ಮೊಳಗಿಸಲಿದ್ದಾರೆ. ಬ್ಲಡ್‌ಲೈನ್ ದಾಟುವ ಸಾಹಸ ಮಾಡಿದವರಿಗೆ ಆ ಜಾಗದಲ್ಲೇ ಎಚ್ಚರಿಕೆಯ ಗಂಟೆ ಮೊಳಗಿಸಲು ಬರುತ್ತಿದ್ದಾರೆ. ‘ಯುವ’ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಇಲ್ಲಿದೆ.

    ‘ಯುವ’ ಸಿನಿಮಾ ದೊಡ್ಮನೆಗೆ ಯುವರಾಜ. ಸಮಸ್ತ ದೊಡ್ಮನೆ ಅಭಿಮಾನಿ ದೇವರುಗಳ ಭರವಸೆ. ಕುಟುಂಬದ ಆಸ್ತಿ. ಕರುನಾಡಿಗೆ ಭಕ್ತಿ. ದೊಡ್ಮನೆ ನಯಾ ರಾಜಕುಮಾರ ಪಟ್ಟಾಭಿಷೇಕ ನಡೆಯೋದು ಮಾರ್ಚ್ 28ಕ್ಕೆ. ಅದಕ್ಕೀಗ ಸಂಪೂರ್ಣ ಸಿದ್ಧತೆ ನಡೆದಿದ್ದು, ಮಾರ್ಚ್ 2ರಂದು ಹುಬ್ಬಳ್ಳಿಯಲ್ಲಿ ರಣಕಹಳೆ ಮೊಳಗಲಿದೆ. ಇದನ್ನೂ ಓದಿ:ತೆರೆಯ ಮೇಲೆ ಕಬಡ್ಡಿ ಆಟಗಾರನ ದುರಂತದ ಕಥೆ: ಪರ್ಶು ಚಿತ್ರಕ್ಕೆ ಸುನಿ ಸಾಥ್

    ಯುವರಾಜ್‌ಕುಮಾರ್ (Yuvarajkumar) ಗ್ರ್ಯಾಂಡ್ ಎಂಟ್ರಿಯ ‘ಯುವ’ ಚಿತ್ರದ ಫಸ್ಟ್ ಸಿಂಗಲ್ ಚಾಮರಾಜನಗರದಲ್ಲಿ ನಡೆಯಬೇಕಿತ್ತು. ಆದರೀಗ ಜಾಗ ಬದಲಾಗಿದೆ. ಮಾರ್ಚ್ 2ರಂದು ಹುಬ್ಬಳ್ಳಿಯಲ್ಲಿ ‘ಯುವ’ ಮೊದಲ ಹಾಡು ರಿಲೀಸ್ ಆಗ್ತಿರೋದು ವಿಶೇಷ. ಆ ದಿನದಿಂದಲೇ ‘ಯುವ’ ಚಿತ್ರಕ್ಕೆ ಪ್ರಚಾರ ಸಿಗಲಿದೆ.

    ಚಾಮರಾಜನಗರದಲ್ಲಿ ನಡೆಯಬೇಕಿದ್ದ ‘ಯುವ’ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ರಿಲೀಸ್ ಹುಬ್ಬಳ್ಳಿಗೆ ಶಿಫ್ಟ್ ಆಗಿದೆ. ಕಾರಣಾಂತರದಿಂದ ಗಂಡು ಮೆಟ್ಟಿದ ನಾಡಲ್ಲಿ ಅಣ್ಣಾವ್ರ ಕಟ್ಟಾ ಭಕ್ತರಿರುವ ಮಣ್ಣಿನಲ್ಲಿ ಅಣ್ಣಾವ್ರ ಮೊಮ್ಮಗ ಮೊದಲ ಬಾರಿಗೆ ಚಿತ್ರದ ಕುರಿತಾದ ವೇದಿಕೆಯಲ್ಲಿ ಹುಬ್ಬಳ್ಳಿ ಜನರೆದುರು ಖುಷಿ ಹಂಚಿಕೊಳ್ತಾರೆ. ಬಳಿಕ ಒಂದೊಂದಾಗೇ ಪ್ರಚಾರ ಪ್ರಕ್ರಿಯೆಗಳು ಪ್ರಾರಂಭವಾಗುತ್ತೆ. ಬಳಿಕ ಹೊಸಪೇಟೆ ಬೆಂಗಳೂರು ಹೀಗೆ ಹಲವು ಕಡೆ ಪ್ರಚಾರದ ಪ್ರಯಾಣ ನಡೆಯುತ್ತಿರುತ್ತೆ. ಹೀಗೆ ಮಾರ್ಚ್ ತುಂಬೆಲ್ಲಾ ಯುವ ಮೆರವಣಿಗೆ ಶುರುವಾಗಲಿದೆ.

  • ಎಲ್ಲಿಗೆ ಬಂತು ‘ಯುವ’ ಸಿನಿಮಾ- ಇಲ್ಲಿದೆ ಬಿಗ್ ಅಪ್‌ಡೇಟ್

    ಎಲ್ಲಿಗೆ ಬಂತು ‘ಯುವ’ ಸಿನಿಮಾ- ಇಲ್ಲಿದೆ ಬಿಗ್ ಅಪ್‌ಡೇಟ್

    ಡಾರ್ಲಿಂಗ್ ಪ್ರಭಾಸ್ (Prabhas) ‘ಸಲಾರ್’ (Salaar) ಜೊತೆ ಯುವ ಯುದ್ಧ ಆರಂಭ ಮಾಡ್ತಾರಾ? ಸಲಾರ್ ರಿಲೀಸ್ ಹೊತ್ತಿನಲ್ಲಿ ಯುವ ಬಿಗ್ ಅಪ್‌ಡೇಟ್ ಕೊಡ್ತಾರಾ? ಸದ್ಯ ಯುವ ಸಿನಿಮಾ ಯಾವ ಹಂತದಲ್ಲಿದೆ. ಎನು ಹೇಳ್ತಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್? ದೊಡ್ಮನೆ ಕುಡಿಯ ಮೊದಲ ಸಿನಿಮಾಗೆ ಹೊಂಬಾಳೆ ಸಂಸ್ಥೆ ಮಾಡ್ತಿರುವ ಪ್ಲಾನ್ ಏನು? ಇಲ್ಲಿದೆ ಮಾಹಿತಿ

    ‘ಯುವ’ (Yuva Film) ಇದೊಂದು ಹೆಸರು ಬಹಳಷ್ಟು ಮನಸ್ಸುಗಳಿಗೆ ಭರವಸೆ ಮೂಡಿಸಿದೆ. ಅಪ್ಪು ಇಲ್ಲದ ಹೊತ್ತಿನಲ್ಲಿ ಕಂಗಾಲಾಗಿದ್ದ ಕಣ್ಣುಗಳಿಗೆ ಆಸರೆಯಾಗಿದೆ. ಟೈಟಲ್ ಟೀಸರ್‌ನಿಂದ ಯುವರಾಜ್ ಕುಮಾರ್ ಮೆರವಣಿಗೆ ಶುರು ಮಾಡಿದ್ರು. ಈಗ ಈ ಮೆರವಣಿಗೆ ಮಹಾಜಾತ್ರೆ ರೂಪ ತಾಳ್ತಿದೆ. ಪ್ಯಾನ್ ಇಂಡಿಯಾ ಸಲಾರ್ ಸಿನಿಮಾ ಜೊತೆ ಯುವ ಬಿಗ್ ಅಪ್‌ಡೇಟ್ ಕೊಡಲು ಪ್ಲಾನ್ ಆಗ್ತಿದೆ. ಅಂದುಕೊಂಡಂತೆ ಆದರೆ ‘ಸಲಾರ್’ ಸಿನಿಮಾ ರಿಲೀಸ್ ಜೊತೆಗೆ ಥೇಟರ್‌ನಲ್ಲಿ ಯುವ ಸಿನಿಮಾದ ಟ್ರೈಲರ್ ಕೂಡ ಬರೊ ಸಾಧ್ಯತೆ ಇದೆ. ಇದನ್ನೂ ಓದಿ:ಅಪ್ಪು ಕನಸಿಗೆ ಮಹತ್ವದ ನಿರ್ಧಾರ ಕೈಗೊಂಡ ಅಶ್ವಿನಿ ಪುನೀತ್‌ ರಾಜ್‌ಕುಮಾರ್

    ಸದ್ಯ ಯುವ ಸಿನಿಮಾದ ಶೂಟಿಂಗ್ ಜೋರಾಗಿ ಆಗ್ತಿದೆ. ಹಗಲು-ರಾತ್ರಿ ಒಂದು ಮಾಡಿ ಯುವ ಸಿನಿಮಾನ ಮತ್ತಷ್ಟು ಚೆಂದವಾಗಿ ತೆರೆಗೆ ತರಲು ಸಂತೋಷ್ ಆನಂದ್ ರಾಮ್ ಆಂಡ್ ಟೀಮ್ ಕೆಲಸ ಮಾಡ್ತಿದೆ. ಸುಮಾರು ನಲವತ್ತರಿಂದ ಐವತ್ತು ದಿನಗಳ ಶೂಟಿಂಗ್ ಕಂಪ್ಲೀಟ್ ಆಗಿದೆ. ಇನ್ನು 30 ದಿನಗಳ ಚಿತ್ರೀಕರಣ ಮಾಡಿದ್ರೆ ಯುವ ಸಿನಿಮಾದ ಮಾತಿನ ಹಂತ ಪೂರ್ತಿಯಾಗುತ್ತೆ. ಈಗಾಗ್ಲೇ ಕೆಲವು ಫೈಟ್ ಸೀನ್‌ಗಳನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಟಾಕಿ ಆದ್ಮೇಲೆ ಸಾಂಗ್ಸ್ ಬಗ್ಗೆ ಪ್ಲ್ಯಾನ್ ಮಾಡ್ತಿವಿ ಅಂತಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.

    ಸೆಪ್ಟೆಂಬರ್ ಅಂತ್ಯಕ್ಕೆ ‘ಯುವ’ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಲಿದೆ ಅನ್ನೋದು ತಂಡದ ಮಾಹಿತಿ. ‘ಸಲಾರ್’ ಸಿನಿಮಾ ಈಗಾಗ್ಲೇ ರಿಲೀಸ್ ಡೇಟ್ ಫೈನಲ್ ಆಗಿದೆ. ಸೆಪ್ಟೆಂಬರ್‌ನಲ್ಲಿ ಸಲಾರ್ ಸಿನಿಮಾ ಬರುವ ಹೊತ್ತಿಗೆ ಯುವ ಟ್ರೇಲರ್ ಕೂಡ ರೆಡಿಯಾಗಿರುತ್ತೆ. ಪ್ರಭಾಸ್ ಸಿನಿಮಾ ನೋಡಲು ಥೇಟರ್‌ಗೆ ಬರುವ ಆಡಿಯನ್ಸ್‌ಗೆ ‘ಯುವ’ ಟ್ರೇಲರ್ ತೋರಿಸಲು ಸಜ್ಜಾಗ್ತಿದೆ ಹೊಂಬಾಳೆ ಸಂಸ್ಥೆ. ಆದ್ರೆ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಇದರ ಬಗ್ಗೆ ಏನೂ ರಿವೀಲ್ ಮಾಡಿಲ್ಲ. ಯುವ ಕಂಟೆಂಟ್ ಕೊಡಲು ಪ್ಲಾನ್ ಆಗ್ತಿದೆ ಅನ್ನೋದು ಮೂಲಗಳ ಮಾಹಿತಿ.

    ‘ಯುವ’ ಟೈಟಲ್ ಟೀಸರ್ ನೋಡಿ ವಾಹ್ ಅಂತ ಥ್ರಿಲ್ ಆಗಿದ್ರು ದೊಡ್ಮನೆ ಅಭಿಮಾನಿಗಳು. ನಮ್ಮ ಅಪ್ಪುನ ಮತ್ತೆ ನೋಡಿದಂಗಾಯ್ತು ಅಂತ ಖುಷಿ ಪಟ್ರು ಪವರ್ ಸ್ಟಾರ್ ಅಭಿಮಾನಿಗಳು. ಡಿಸೆಂಬರ್ 22ಕ್ಕೆ ಯುವರಾಜ್ ಕುಮಾರ್ ತಮ್ಮ ‘ಯುವ’ ಸಿನಿಮಾ ಮೂಲಕ ನಿಮ್ಮ ಮನದಂಗಳಕ್ಕೆ ಬರುತ್ತಿದ್ದಾರೆ. ಈಗ ಯುವ ಸಿನಿಮಾ ಫೈನಲ್ ಶೆಡ್ಯೂಲ್ ಫಿಕ್ಸ್ ಆಗಿದೆ. ಯುವ ಮೆರವಣಿಗೆ ಮತ್ತಷ್ಟು ಮಗದಷ್ಟು ಸ್ಪೆಷಲ್ ಮಾಡಲು ಹೊಂಬಾಳೆ ಸಂಸ್ಥೆ ಸಜ್ಜಾಗ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್

    ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್

    ಯುವರಾಜ್‌ಕುಮಾರ್ (Yuva Rajkumar) ಹಾಗೂ ಶ್ರೀದೇವಿ (Sridevi)  ದಂಪತಿ ತಾತನ ಮನೆಯ ಮಡಿಲಲ್ಲಿ ಒಂದು ದಿನ ಕಳೆದಿದ್ದಾರೆ. ದೊಡ್ಮನೆಯ ಮೂರನೇ ತಲೆಮಾರಿನ ಕುಡಿ ಅಣ್ಣಾವ್ರು ಹುಟ್ಟಿ ಬೆಳೆದ ಜಾಗದಲ್ಲಿ ಓಡಾಡಿದ್ದಾರೆ. ಆ ಪುಟ್ಟ ಗುಡಿಸಲಲ್ಲಿ ಜೋಗುಳ ಕೇಳಿಸಿಕೊಂಡಿದ್ದ ರಾಜ್‌ಕುಮಾರ್ ದೇವರನ್ನು ನೆನೆದು ಆಶೀರ್ವಾದ ಬೇಡಿದ್ದಾರೆ. ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಹಾಕಿಕೊಟ್ಟ ಹಾದಿಯಲ್ಲಿ ಹೊಸ ಕುದುರೆ ಓಡುತ್ತಿದೆ. ಏನೆಂದು ಬೇಡಿಕೊಂಡರು ಯುವರಾಜ್‌ಕುಮಾರ್ ? ಅಪ್ಪು ನೆನೆದು ಯಾಕೆ ಭಾವುಕರಾದರು? ಯುವ ಸಿನಿಮಾ ಎಲ್ಲಿಗೆ ಬಂದಿದೆ? ಏನಾಯ್ತು.. ಇಲ್ಲಿದೆ ಅಪ್‌ಡೇಟ್

    ಅಣ್ಣಾವ್ರು..ಮೂರು ಅಕ್ಷರಗಳ ಈ ಶಬ್ದ ಕೇಳಿದರೆ ಕನ್ನಡಿಗರು ಎದ್ದು ನಿಲ್ಲುತ್ತಾರೆ. ಅದೊಂದು ಕಣ್ಣಿಗೆ ಕಂಡ ದೇವರನ್ನು ನೆನೆದು ಕಣ್ಣೀರು ಹಾಕುತ್ತಾರೆ. ಇದ್ದರೆ ಇರಬೇಕಪ್ಪಾ ನಮಗೆ ರಾಜ್ಕುಮಾರ್‌ರಂಥ ಮಗ ಎಂದು ಭಾವುಕರಾಗುತ್ತಾರೆ. ಅದು ಅಣ್ಣಾವ್ರು ಗಳಿಸಿದ ಆಸ್ತಿ. ಕನ್ನಡಿಗರ ಮನದಲ್ಲಿ ಬೇರು ಬಿಟ್ಟ ಕಿತ್ತಿ ಒಗೆಯಲಾದ ಶಕ್ತಿ. ರಾಜ್ ಕೇವಲ ಸಿನಿಮಾದಿಂದ ಮಾತ್ರ ನಮ್ಮಲ್ಲಿ ಪ್ರೀತಿ ಹುಟ್ಟಿಸಲಿಲ್ಲ. ಅದನ್ನು ಮೀರಿದ ಜೀವನ ಪಾಠ ಕಲಿಸಿದರು. ಎಷ್ಟೇ ಎತ್ತರಕ್ಕೆ ಬೆಳೆದರೂ ನಿಂತ ನೆಲ ಮರೆಯಬೇಡ ಹತ್ತಿ ಬಂದ ಏಣಿಯನ್ನು ದೂರ ತಳ್ಳಬೇಡ ಇದನ್ನೆಲ್ಲ ಅವರು ಹೇಳಲಿಲ್ಲ. ಹಾಗೆಯೇ ಬದುಕಿ ಬಿಟ್ಟರು. ಆ ಹಾದಿಯಲ್ಲಿ ಶಿವಣ್ಣ, ರಾಘಣ್ಣ- ಅಪ್ಪು ನೀರು ಚೆಲ್ಲುತ್ತಾ ನಡೆದರು. ಇದನ್ನೂ ಓದಿ:‘ಪೊನ್ನಿಯಿನ್ ಸೆಲ್ವನ್’ ಸ್ಟಾರ್ ಜಯಂರವಿ ಹೊಸ ಚಿತ್ರಕ್ಕೆ ಕೃತಿ ಶೆಟ್ಟಿ, ಕಲ್ಯಾಣಿ ಸಾಥ್

    ಅಪ್ಪು…ಅದೊಂದು ಜೀವವನ್ನು ನೆನೆಸಿಕೊಳ್ಳುವುದೇ ಸಣ್ಣ ಕರುಳಿಗೆ ಸಂಕಟ. ಎಲ್ಲೇ ರಾಜರತ್ನನ ಭಾವಚಿತ್ರ ನೋಡಲಿ…ಯಾರೇ ಆಗಿರಲಿ…ಕ್ಷಣ ಮನಸು ಕಲ್ಲವಿಲ…ಅಲ್ಲಕಲ್ಲೋಲ. ನಿಜಕ್ಕೂ ಪುನೀತ್ ನಮ್ಮ ಜೊತೆ ಇಲ್ಲವಾ? ಅದು ಸಾಧ್ಯವಾಗಿದ್ದು ಸತ್ಯವಾ? ಈ ಪ್ರಶ್ನೆಗಳೆ ಎದೆಯಲ್ಲಿ ಜೋಕಾಲಿ. ಏನು ಮಾಡಿದರೂ…ಎಷ್ಟು ನಿತ್ರಾಣವಾದರೂ. ಇಲ್ಲ…ಅಪ್ಪು ಮತ್ತೆ ಕಣ್ಣ ಮುಂದೆ ನಿಲ್ಲುವುದಿಲ್ಲ. ಅದನ್ನು ಅರಗಿಸಿಕೊಳ್ಳಲಾಗದೆ ನಾವು ಹೈರಾಣುವುದು ತಪ್ಪುವುದಿಲ್ಲ. ಇದೇ ಅಪ್ಪು, ಅಪ್ಪಾಜಿಯ ಜೀವಜ್ಜೀವ ಕೂಸಾಗಿದ್ದರು. ಕೊನೇ ಮಗ…ಅಚ್ಚೆ ಅಚ್ಚೇ ಮಾಡಿ ಬೆಳೆಸಿದ ಕಂದನ ಸಾವನ್ನು ಅಪ್ಪ ಅಮ್ಮ ನೋಡಲಿಲ್ಲವಲ್ಲ…ಅದೇ ಅಗತ್ಯಕ್ಕಿಂತ ಹೆಚ್ಚಲ್ಲದ ಸಮಾಧಾನ.

    ಪುನೀತ್ ಕೂಡ ಗಾಜನೂರಿಗೆ (Gajunuru) ಹೋಗುತ್ತಿದ್ದರು. ಬಾಲ್ಯದಲ್ಲಿ ಹಳ್ಳಿಯ ಮಣ್ಣಿನಲ್ಲಿ ಮಗುವಾಗುತ್ತಿದ್ದರು. ತೋಟದಲ್ಲಿ ಹಣ್ಣು ಕೀಳುತ್ತಾ, ಬಾವಿಯಲ್ಲಿ ಈಜಾಡುತ್ತಾ, ಹೊಟ್ಟೆ ಹಸಿದಾಗ ಅಜ್ಜಿ ಕೈ ತುತ್ತು ಹೊಟ್ಟೆಗಿಳಿಸುತ್ತಾ ಬೆಳೆದರು. ದೊಡ್ಡವರಾದ ಮೇಲೂ ಆ ನೆನಪನ್ನು ಅಳಿಸಿ ಹಾಕಲಿಲ್ಲ. ಗಾಜನೂರಿನ ಸುತ್ತ ಮುತ್ತ ಶೂಟಿಂಗ್ ನಡೆದರೆ ಸಾಕು…ಅಪ್ಪ ಹುಟ್ಟಿದ ಮನೆಯ ಕದ ತಟ್ಟುತ್ತಿದ್ದರು. ಈಗ ಅದನ್ನೇ ಮಾಡುತ್ತಿದ್ದಾರೆ ಯುವರಾಜ್‌ಕುಮಾರ್. ತಾತನ ಜೊತೆ ಇದೇ ಹಳ್ಳಿಯಲ್ಲಿ ಓಡಾಡಿದ್ದು, ತುತ್ತು ಗಂಟಲಿಗೆ ಇಳಿಸಿದ್ದನ್ನು ನೆನೆಯುತ್ತಾರೆ. ಅಪ್ಪು ಚಿಕ್ಕಪ್ಪನ ಹೆಗಲ ಮೇಲೆ ಕುಂತಿದ್ದು…ಎಲ್ಲವೂ ಈಗತಾನೇ ಅರಳಿದ ಹೂವಿನ ಘಮಲು. ಮತ್ತೆ ಅದೇ ಗುಡಿಸಲಿ ಮುಂದೆ ಯುವ ದಂಪತಿ…

    ಯುವರಾಜ್‌ಕುಮಾರ್, ಶ್ರೀದೇವಿ…ಇಬ್ಬರೂ ಬಿಡುವು ಮಾಡಿಕೊಂಡು ಗಾಜನೂರಿಗೆ ಹೋಗಿದ್ದಾರೆ. ಊರಿನ ತುಂಬಾ ಸುತ್ತಾಡಿದ್ದಾರೆ. ಬಾಲ್ಯದ ನೆನಪುಗಳಿಗೆ ಮರು ಜೀವ ನೀಡಿದ್ದಾರೆ. ತಾತನ ಜೊತೆ ಬಂದಿದ್ದು ಸಂಭ್ರಮ.ಅಪ್ಪು ಜೊತೆ ಇರಲಾರದ್ದು ತೀರಲಾಗದ ಸಂಕಟ. ಎರಡನ್ನೂ ಒಟ್ಟೊಟ್ಟಿಗೇ ಅನುಭವಿಸುತ್ತಾ. ಆ ಇಬ್ಬರು ದೇವರ ಆಶೀರ್ವಾದ ಬೇಡಿದ್ದಾರೆ. ನಿಮ್ಮ ಹೆಸರನ್ನು ಉಳಿಸಿ ಬೆಳೆಸುವ ಶಕ್ತಿ ಕೊಡು ಎಂದು ಕೈ ಮುಗಿದಿದ್ದಾರೆ. ಕಾರಣ ಯುವ ಸಿನಿಮಾ ಕೆಲವೇ ತಿಂಗಳಲ್ಲಿ ಮೆರವಣಿಗೆ ಹೊರಡಲಿದೆ. ಅಪ್ಪು ಬಿಟ್ಟು ಹೋದ ಜಾಗವನ್ನು ತುಂಬಬೇಕಾದ ಅಗತ್ಯ ಹಾಗೂ ಜವಾಬ್ದಾರಿ ಯುವ ಹೆಗಲ ಮೇಲಿದೆ. ದೊಡ್ಮನೆ ಬಾವುಟ ಹಾರಿಸುವ ಶಪಥ ಬಾಕಿ ಇದೆ.

    ‘ಯುವ’ (Yuva Kannada Film) ಚಿತ್ರ ಈಗಾಗಲೇ ಶೇಕಡಾ ಐವತ್ತರಷ್ಟು ಮುಗಿದಿದೆ. ಸಂತೋಷ್ ಆನಂದ್‌ರಾಮ್ (Santhosh Anandram) ಕ್ಯಾಮೆರಾ ಹಿಂದೆ ನಿಂತು…ಯುವ ರಾಜನ ಕಿರೀಟಕ್ಕೆ ಮುತ್ತಿನ ಹರಳನ್ನು ಪೋಣಿಸುತ್ತಿದ್ದಾರೆ. ಯುವ ಕೂಡ ಅಷ್ಟೇ ನಿಯತ್ತಿನಿಂದ ಬಣ್ಣ ಹಚ್ಚುತ್ತಿದ್ದಾರೆ. ಹೊಂಬಾಳೆ ಸಂಸ್ಥೆ (Hombale Films) ಖಜಾನೆ ತೆಗೆದು ಕುಳಿತಿದೆ. ಎಲ್ಲರ ಕಣ್ಣಲ್ಲಿ ಮನಸಲ್ಲಿ ಒಂದೇ ಒಂದು ಆಸೆ ಒಂದೇ ಒಂದು ಗುರಿ ಅದೇ ಯುವರಾಜನ ಮಹಾ ಜಾತ್ರೆ. ಕನ್ನಡಿಗರು ಮತ್ತೆ ದೊಡ್ಮನೆಯ ಕುಡಿಯನ್ನು ಹೊತ್ತು ಮೆರೆಸಬೇಕು. ಅಪ್ಪು ನೋವನ್ನು ಮರೆಸಬೇಕು. ಇದಷ್ಟೇ ಕಾಳಜಿ ಕಕ್ಕುಲಾತಿ. ಅಣ್ಣಾವ್ರ ಮೊಮ್ಮಗ, ಅಪ್ಪು ಚಿಕ್ಕಪ್ಪನ ಮಗನಿಗೆ ನವಿಲು ಗರಿ ಬೀಸಣಿಕೆ ಬೀಸದಿರುತ್ತಾರಾ ಕನ್ನಡಿಗರು?

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ಪು ಆಶೀರ್ವಾದದಿಂದಲೇ ಯುವನಿಗೆ ಅಭಿಮಾನಿಗಳ ಪ್ರೀತಿ ಸಿಗುತ್ತಿರೋದು- ರಾಘವೇಂದ್ರ ರಾಜ್‌ಕುಮಾರ್

    ಅಪ್ಪು ಆಶೀರ್ವಾದದಿಂದಲೇ ಯುವನಿಗೆ ಅಭಿಮಾನಿಗಳ ಪ್ರೀತಿ ಸಿಗುತ್ತಿರೋದು- ರಾಘವೇಂದ್ರ ರಾಜ್‌ಕುಮಾರ್

    ದೊಡ್ಮನೆ ಕುಡಿ ಯುವರಾಜ್‌ಕುಮಾರ್ (Yuva Rajkumar)  ಅವರು ಏ.23ರಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು (Birthday)  ಅಭಿಮಾನಿಗಳ ಜೊತೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಆಚರಿಸಿದ್ದಾರೆ. ಈ ವೇಳೆ ಪುನೀತ್ ಅವರನ್ನ ನೆನೆದು ಯುವ- ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಭಾವುಕರಾಗಿದ್ದಾರೆ.

    ರಾಜ್ಯದ ಬೇರೆ ಬೇರೆ ಕಡೆಯಿಂದ ಬಂದು ಯುವ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಅಭಿಮಾನಿಗಳು ಮತ್ತು ಕುಟುಂಬದ ಜೊತೆಯಲ್ಲಿ ಯುವ ಹುಟ್ಟುಹಬ್ಬವನ್ನ  ಆಚರಿಸಿಕೊಂಡಿದ್ದಾರೆ. ಈ ವೇಳೆ ಅಪ್ಪುನ ನೆನೆದು ಮಗ ಯುವನಿಗೆ ರಾಘವೇಂದ್ರ ರಾಜ್‌ಕುಮಾರ್ ಸಲಹೆ ನೀಡಿದ್ದಾರೆ. ಹ್ಯಾಪಿ ಬರ್ತ್‌ಡೇ ಮಗನೆ. ಅಭಿಮಾನಿಗಳ ಆಶೀರ್ವಾದ ನಿನ್ನ ಮೇಲೆ ಸದಾ ಇರಲಿ. ಅವರನ್ನು ಚೆನ್ನಾಗಿ ನೋಡಿಕೋ ಎಂದು ಪುತ್ರನಿಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ. ಈ ಪ್ರೀತಿ ಸಿಗುತ್ತಿರುವುದು ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಂದ ಎಂದು ಕೂಡ ರಾಘಣ್ಣ ಹೇಳಿದ್ದಾರೆ. ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಯಶ್ ವೀಡಿಯೋ ವೈರಲ್

    ಈ ದಿನ ನಾನು ತಮ್ಮನನ್ನು ನೆನಪಿಸಿಕೊಳ್ಳಲೇಬೇಕು. ಅವನ ಆಶೀರ್ವಾದದಿಂದಲೇ ಇದೆಲ್ಲ ನಡೆಯುತ್ತಿರೋದು. ಅಪ್ಪು ಸಿನಿಮಾ ರಿಲೀಸ್ ಆದ್ಮೇಲೆ ತಮ್ಮನ ಬರ್ತ್‌ಡೇ ಆಗಿತ್ತು. ಆಗ ಕೂಡ ಅಭಿಮಾನಿಗಳು ಇದೇ ರೀತಿ ಸೆಲೆಬ್ರೇಟ್ ಮಾಡಿದ್ದರು. ಅದನ್ನು ನೋಡಿ ಅಪ್ಪಾಜಿ ಖುಷಿಪಟ್ಟಿದ್ದರು. ಆ ದೃಶ್ಯ ಇಂದು ನನಗೆ ನೆನಪಾಗುತ್ತಿದೆ. ಈ ವರ್ಷ ನನ್ನ ಮಗ ಸಿನಿಮಾ ಇಂಡಸ್ಟ್ರಿಯಲ್ಲಿ ಹುಟ್ಟುತ್ತಿದ್ದಾನೆ. ಮಗನ ಹುಟ್ಟುಹಬ್ಬ ಇಷ್ಟು ಜೋರಾಗಿ ಆಚರಣೆ ಮಾಡಿದರೆ ಯಾವ ತಂದೆಗೆ ಖುಷಿ ಆಗಲ್ಲ ಹೇಳಿ. ಅಭಿಮಾನಿ ದೇವರುಗಳು ಎಂದರೆ ನಿಜಕ್ಕೂ ದೇವರುಗಳು ಎಂದು ರಾಘಣ್ಣ ಹೇಳಿದ್ದಾರೆ. ಇದನ್ನೆಲ್ಲ ನೋಡೋಕೆ ನನ್ನ ಜೀವ ಇದೆಯಲ್ಲ ಅಂತ ನನಗೆ ಖುಷಿ ಆಗುತ್ತದೆ. ಜನರ ಆಶೀರ್ವಾದ ಅವನ ಮೇಲೆ ಯಾವಾಗಲೂ ಇರಲಿ. ಅವನ ಸಿನಿಮಾ ಶೂಟಿಂಗ್ ಈಗ ಶುರುವಾಗಿದೆ. ಅವನ ಮೇಲೆ ಭಾರ ಹಾಕಬೇಡಿ. ಚೆನ್ನಾಗಿ ಮಾಡು ಎಂದು ಹಾರೈಸಿ ಎಂದು ಅಭಿಮಾನಿಗಳಲ್ಲಿ ರಾಘವೇಂದ್ರ ರಾಜ್‌ಕುಮಾರ್ ಕೇಳಿಕೊಂಡಿದ್ದಾರೆ.

    ಹುಟ್ಟುಹಬ್ಬದ ಸಂಭ್ರಮದ ನಡುವೆ ಯುವ ರಾಜ್‌ಕುಮಾರ್ ಮಾತನಾಡಿ, ಅಭಿಮಾನಿಗಳ ಪ್ರೀತಿಗೆ ಚಿರಋಣಿ, ಈ ಪ್ರೀತಿಗೆ ಮಾತಿಲ್ಲ. ಯುವ ಸಿನಿಮಾ ನಡೆಯುತ್ತಿದೆ. ಡಿಸೆಂಬರ್‌ಗೆ ಸಿನಿಮಾ ರಿಲೀಸ್ ಆಗುತ್ತದೆ. ಸಿಕ್ಕಾಪಟ್ಟೆ ಖುಷಿಯಾಗುತ್ತಿದೆ. ಎಲ್ಲಾ ಕಡೆಯಿಂದ ಅಭಿಮಾನಿಗಳು ಬರುತ್ತಿದ್ದಾರೆ. ಪುನೀತ್ ಚಿಕ್ಕಪ್ಪನ ಬಗ್ಗೆ ಹೇಳೋಕೆ ಮಾತಿಲ್ಲ. ಕಂಠೀರವ ಸ್ಟುಡಿಯೋಗೆ ಹೋಗುತ್ತೇನೆ. ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾತನಾಡಿದ್ದಾರೆ.

    ಈ ವೇಳೆ ಹೊಂಬಾಳೆ ಸಂಸ್ಥೆ (Hombale Films) ಕೂಡ, ‘ಯುವ’ ಸಿನಿಮಾ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಯುವ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

  • ಹೊಂಬಾಳೆ ಫಿಲ್ಮ್ಸ್‌ಬಿಗ್ ಅಪ್‌ಡೇಟ್- ಯುವನ ಯುಗಾರಂಭ

    ಹೊಂಬಾಳೆ ಫಿಲ್ಮ್ಸ್‌ಬಿಗ್ ಅಪ್‌ಡೇಟ್- ಯುವನ ಯುಗಾರಂಭ

    ಸ್ಯಾಂಡಲ್‌ವುಡ್ (Sandalwood) ಬಹುನಿರೀಕ್ಷಿತ ‘ಯುವ’ (Yuva) ಸಿನಿಮಾದ ಅಪ್‌ಡೇಟ್‌ಗಾಗಿ ಎದುರು ನೋಡ್ತಿದ್ದ ಫ್ಯಾನ್ಸ್‌ಗೆ ಹೊಂಬಾಳೆ ಫಿಲ್ಮ್ಸ್‌ಇದೀಗ ಅಪ್‌ಡೇಟ್ ಕೊಟ್ಟಿದೆ. ಯುವರಾಜ್‌ಕುಮಾರ್ (Yuva Rajkumar) ನಟನೆಯ ಚೊಚ್ಚಲ ಸಿನಿಮಾದ ಫಸ್ಟ್ ಡೇ, ಫಸ್ಟ್ ಶೆಡ್ಯೂಲ್ ಶೂಟಿಂಗ್ ಏ.9ರಂದು ಶುರುವಾಗಿದೆ.

    ಅಪ್ಪು ಹಾದಿಯಲ್ಲೇ ಯುವರಾಜ್‌ಕುಮಾರ್ ಅವರು ಇದೀಗ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್, ಟೀಸರ್‌ನಿಂದ ಅಬ್ಬರಿಸಿದ್ದ ಯುವರಾಜ್‌ಕುಮಾರ್ ಕ್ಯಾಮೆರಾ ಮುಂದೆ ಬರಲು ಭರ್ಜರಿ ವರ್ಕೌಟ್ ಜೊತೆ ಸಾಕಷ್ಟು ತಯಾರಿ ಮಾಡಿಕೊಂಡು ಬರುತ್ತಿದ್ದಾರೆ.‌ ಇದನ್ನೂ ಓದಿ:ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣದಲ್ಲಿ ಹೊಸ ತಿರುವು

    ಸಿನಿಮಾ ಶೂಟಿಂಗ್‌ಗೆ ಯಾಕಿಷ್ಟು ತಡ, ಟೀಸರ್ ರಿಲೀಸ್ ಬಳಿಕ ಯುವ & ಟೀಂ ಏನ್ಮಾಡ್ತಿತ್ತು ಎಂಬ ಮಾಹಿತಿ ಇಲ್ಲಿದೆ. ತಮ್ಮ ಮೊದಲ ಸಿನಿಮಾಗಾಗಿ ಯುವ ಡ್ಯಾನ್ಸ್, ಫೈಟ್, ಜಿಮ್‌ನಲ್ಲಿ ವರ್ಕೌಟ್‌ ಅಂತಾ ಬ್ಯುಸಿಯಾಗಿದ್ದರು. ಬಳಿಕ ‘ಯುವ’ ಸಿನಿಮಾದ ವರ್ಕ್‌ಶಾಪ್‌ನಲ್ಲಿ ಭಾಗಿಯಾಗುತ್ತಿದ್ದರು. ಯುವ- ಸಪ್ತಮಿ ಗೌಡ ಇಬ್ಬರು ತಮ್ಮ ಪಾತ್ರಕ್ಕಾಗಿ ತೆರೆಮರೆಯಲ್ಲಿ ಸಕಲ ತಯಾರಿ ಮಾಡಿಕೊಂಡೆ ಕ್ಯಾಮೆರಾ ಮುಂದೆ ಬರುತ್ತಿದ್ದಾರೆ.

     

    View this post on Instagram

     

    A post shared by Hombale Films (@hombalefilms)

    Hombale Films ನಿಮಾರ್ಣದ ಯುವ ಸಿನಿಮಾದ ಶೂಟಿಂಗ್ (ಏ.9) ಭಾನುವಾರದಿಂದ ಶುರುವಾಗಿದೆ. ಬೆಂಗಳೂರಿನ ಹೆಚ್‌ಎಂಟಿ ಅಂಗಳದಲ್ಲಿ ಅದ್ದೂರಿ ಸೆಟ್ ಹಾಕಿ ಫಸ್ಟ್ ಡೇ ಶೂಟಿಂಗ್ ಶುರು ಮಾಡಲಾಗಿದೆ. ಯುವಗೆ ಡೈರೆಕ್ಟರ್‌ ಸಂತೋಷ್‌ ಆನಂದ್‌ರಾಮ್‌ ಕ್ಲಾಪ್‌ ಮಾಡಿದ್ದಾರೆ. ಈ ಕುರಿತ ಫೋಟೋ, ಹೊಂಬಾಳೆ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.