Tag: Yuva Brigade activist

  • ಹಿಂದೂ ಸಮಾಜ ಉಳಿಸುತ್ತಿರುವವರು ಮೇಲ್ಜಾತಿ ಹುಡುಗರಲ್ಲ: ಯತ್ನಾಳ್‌

    ಹಿಂದೂ ಸಮಾಜ ಉಳಿಸುತ್ತಿರುವವರು ಮೇಲ್ಜಾತಿ ಹುಡುಗರಲ್ಲ: ಯತ್ನಾಳ್‌

    ಮೈಸೂರು: ಹಿಂದೂ ಸಮಾಜ ಉಳಿಸುತ್ತಿರುವವರು ಮೇಲ್ಜಾತಿ ಹುಡುಗರಲ್ಲ. ದಲಿತರು, ನಾಯಕರು, ಹಿಂದುಳಿದ ಸಮಾಜದ ಯುವಕರು ಉಳಿಸುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಹೇಳಿದರು.

    ತಿ.‌ ನರಸೀಪುರದಲ್ಲಿ ಯುವ ಬ್ರಿಗೇಡ್ (Yuva Brigade) ಕಾರ್ಯಕರ್ತ ವೇಣುಗೋಪಾಲ ನಾಯಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೂಂಡಾಗಿರಿ ವಾತಾವರಣವಿದೆ. ಹಿಂದೂಗಳು ಜೀವನ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಹನುಮ ಜಯಂತಿ ಮಾಡುವುದು ಕೆಲವು ಜನರಿಗೆ ಭಯ ಹುಟ್ಟಿಸಿದೆ. ಕೇಸರಿ ಶಾಲು, ತಿಲಕ ಹಾಕಿಕೊಂಡರೆ ಹುಷಾರ್ ಅಂತ ರಾಜ್ಯದ ಮಂತ್ರಿ ಪೊಲೀಸರಿಗೆ ಹೇಳುತ್ತಾರೆ. ಇದೇನೂ ಪಾಕಿಸ್ತಾನವಾ ಎಂದು ಖಾರವಾಗಿ ಪ್ರಶ್ನಿಸಿದರು. ಇದನ್ನೂ ಓದಿ: ಯುವಬ್ರಿಗೇಡ್‌ ಕಾರ್ಯಕರ್ತನ ಹತ್ಯೆ ಕೇಸ್ – ಸತ್ಯ ಶೋಧನೆಗಿಳಿದಿದ್ದ ಬಿಜೆಪಿಗೆ ಶಾಕ್!

    ಹಿಂದೂ ಸಮಾಜ ಉಳಿಸಲು ಶ್ರೀಮಂತರ ಮಕ್ಕಳು ಬರಲ್ಲ. ಹಿಂದೂ ಸಮಾಜ ಉಳಿಸುತ್ತಿರೋರು ಮೇಲ್ಜಾತಿ ಹುಡುಗರಲ್ಲ. ದಲಿತರು, ನಾಯಕರು, ಹಿಂದುಳಿದ ಸಮಾಜದ ಯುವಕರು ಉಳಿಸುತ್ತಿದ್ದಾರೆ. ಗಣಪತಿ ಕೂರಿಸಲು ಹಿಂದಿನ ಸರ್ಕಾರದ ಅವಧಿಯಲ್ಲಿ ಹಲವು ನಿರ್ಬಂಧ ಹೇರಲಾಗಿತ್ತು. ಆಗ ಸಿಎಂ ಬೊಮ್ಮಾಯಿಗೆ ಫೋನ್ ಮಾಡಿ ನೀವು ಕರ್ನಾಟಕದ ಸಿಎಂ ಹ್ಹಾ ಅಥವಾ ಲಾಹೋರ್ ಸಿಎಂ ಹ್ಹಾ ಅಂತ ಪ್ರಶ್ನಿಸಿದ್ದೆ ಎಂದು ತಿಳಿಸಿದರು.

    ಹಿಂದೂ ಕಾರ್ಯಕರ್ತರು ಯಾವುದೇ ಸಂಧಾನಕ್ಕೂ ಒಬ್ಬರೇ ಹೋಗಬೇಡಿ. ಪೊಲೀಸರನ್ನು ಹೇಗೆ ಉಪಯೋಗಿಸಿ ಕೊಳ್ಳಬೇಕು ಎಂದು ಯುಪಿ ಸಿಎಂ ನೋಡಿ ಕಲಿಯಬೇಕು. ಹಿಂದೂ ಧರ್ಮದ ಮೇಲೆ ಬಹು ವರ್ಷದಿಂದ ಸಂಘರ್ಷ ನಡೆದಿದೆ. ಸಂವಿಧಾನವನ್ನೇ ಬದಲಾಯಿಸುತ್ತಾರೆ ಎಂದು ಸುಳ್ಳು ಹಬ್ಬಿಸುತ್ತಾರೆ. ಸೂರ್ಯ-ಚಂದ್ರ ಇರುವವರೆಗೂ ಸಂವಿಧಾನ ಇರುತ್ತದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ – 6 ಜನರ ಮೇಲೆ ಎಫ್‌ಐಆರ್, ಇಬ್ಬರು ಅರೆಸ್ಟ್

    ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಶ್ರದ್ಧಾಂಜಲಿಗೆ ಅನುಮತಿ ಕೊಡಲು ನಿರಾಕರಿಸುವುದು ಕ್ರೂರ ಮನಃಸ್ಥಿತಿ. ಕೊಲೆ ಮಾಡಿದವರಿಗಿಂತ ಅನುಮತಿ ನಿರಾಕರಿಸಿದವರ ಕ್ರೌರ್ಯ ಹೆಚ್ಚಿದೆ. ಸ್ವಾಮೀಜಿಗಳು, ತರುಣರು ಬದುಕಲು ಸಾಧ್ಯವಿಲ್ಲ ಎಂಬ ಸ್ಥಿತಿ ಬಂದಿದೆ. ಹಿಂದೂ ಸಮಾಜವನ್ನು ತಲೆ ಎತ್ತದಂತೆ ಮಾಡಲು ಇಂತಹ ಕೊಲೆಗಳನ್ನು ಮಾಡಲಾಗುತ್ತಿದೆ ಕಿಡಿಕಾರಿದರು.

    ಹನುಮ ಜಯಂತಿಯನ್ನು ಮುಂದಿನ ವರ್ಷ ಅದ್ಧೂರಿಯಾಗಿ ಮಾಡಬೇಕು. ಈ ಸಾವುಗಳನ್ನು ನಾವು ಮರೆಯಬಾರದು. ಈ ಸಾವಿನ ಹಿಂದೆ ನಿಂತು ಬೆಂಬಲ ಕೊಡುವವರು ಹೆಚ್ಚಿದ್ದಾರೆ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುವಬ್ರಿಗೇಡ್‌ ಕಾರ್ಯಕರ್ತನ ಹತ್ಯೆ ಕೇಸ್ – ಸತ್ಯ ಶೋಧನೆಗಿಳಿದಿದ್ದ ಬಿಜೆಪಿಗೆ ಶಾಕ್!

    ಯುವಬ್ರಿಗೇಡ್‌ ಕಾರ್ಯಕರ್ತನ ಹತ್ಯೆ ಕೇಸ್ – ಸತ್ಯ ಶೋಧನೆಗಿಳಿದಿದ್ದ ಬಿಜೆಪಿಗೆ ಶಾಕ್!

    – ಕೊಲೆ ಪ್ರಕರಣದ 4ನೇ ಆರೋಪಿ ನಗರಪಾಲಿಕೆ ಬಿಜೆಪಿ ಸದಸ್ಯೆಯ ಸಹೋದರ ಅನ್ನೋದು ಬಹಿರಂಗ

    ಮೈಸೂರು: ಯುವ ಬ್ರಿಗೇಡ್ ಕಾರ್ಯಕರ್ತನ (Yuva Brigade Activist Murder) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಶೋಧನೆಗೆ ಇಳಿದಿದ್ದ ಬಿಜೆಪಿಗೆ (BJP) ಆರಂಭದಲ್ಲೇ ಶಾಕ್ ಎದುರಾಗಿದೆ. ಕೊಲೆ ಪ್ರಕರಣದ ನಾಲ್ಕನೇ ಆರೋಪಿಯು ನಗರ ಪಾಲಿಕೆಯ ಬಿಜೆಪಿ ಸದಸ್ಯೆಯೊಬ್ಬರ ಸಹೋದರ ಎಂಬುದು ತಿಳಿದುಬಂದಿದೆ.

    ಹನುಮ ಜಯಂತಿ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಿವಾಸಕ್ಕೆ ಇಂದು ಬಿಜೆಪಿ ತಂಡ ಭೇಟಿ ನೀಡಿತು. ಅಷ್ಟೇ ಅಲ್ಲ, ಸತ್ಯಶೋಧನೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿತ್ತು. ಇದನ್ನೂ ಓದಿ: ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ – 6 ಜನರ ಮೇಲೆ ಎಫ್‌ಐಆರ್, ಇಬ್ಬರು ಅರೆಸ್ಟ್

    ಸತ್ಯ ಶೋಧನೆಗಿಳಿದ ಬಿಜೆಪಿಗೆ ಆರಂಭದಲ್ಲೇ ಶಾಕ್ ಎದುರಾಗಿದೆ. ಪ್ರಕರಣದ ಆರೋಪಿಯೊಬ್ಬ ಮೈಸೂರು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯೆಯೊಬ್ಬರ ಸಹೋದರ ಎಂಬ ಸತ್ಯ ಬಹಿರಂಗವಾಗಿದೆ. ಪ್ರ‍್ರಕರಣದ ನಾಲ್ಕನೇ ಆರೋಪಿ ಶಂಕರ್ ಅಲಿಯಾಸ್ ತುಪ್ಪಾ ಮೈಸೂರು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆಯ ಸಹೋದರ.

    ಪ್ರಕರಣದ ಎ1 ಆರೋಪಿ ಮಣಿಕಂಠ, ಸಂದೇಶ-ಎ2, ಅನಿಲ್-ಎ3, ಶಂಕರ್ ಅಲಿಯಾಸ್ ತುಪ್ಪಾ-ಎ4, ಮಂಜು-ಎ5, ಹ್ಯಾರಿಸ್-ಎ6 ಆರೋಪಿಗಳಾಗಿದ್ದಾರೆ. ಪ್ರಕರಣದ ಆರೋಪಿಯ ವಿಚಾರ ತಿಳಿದ ಬಿಜೆಪಿಗೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಇದೀಗ ಸತ್ಯ ಶೋಧನೆಗಿಳಿದ ಬಿಜೆಪಿ ತಂಡದ ಸದಸ್ಯರು ಮೈಸೂರಿಗೆ ಬರುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಪುನೀತ್ ಫೋಟೋ ತೆಗೆಸಿದ್ದೇ ಯುವಬ್ರಿಗೇಡ್ ಕಾರ್ಯಕರ್ತನ ಕೊಲೆಗೆ ಕಾರಣವೇ? – ಮೃತನ ಪತ್ನಿ ಹೇಳಿದ್ದೇನು?

    ವೇಣುಗೋಪಾಲ್ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪ್ರತಾಪ್‌ಸಿಂಹ, ಶಾಸಕ ಶ್ರೀವತ್ಸ, ಮಾಜಿ ಸಚಿವ ಸಿ.ಎನ್. ಅಶ್ವಥ್ ನಾರಾಯಣ್, ಮಾಜಿ ಶಾಸಕರಾದ ಎನ್. ಮಹೇಶ್, ಪ್ರೀತಮ್ ಗೌಡ ಹಾಗೂ ತಂಡದ ಇತರ ಸದಸ್ಯರಾದ ಅರಣ್ಯ ವಸತಿ ಮತ್ತು ವಿಹಾರ ನಿಗಮ ಮಾಜಿ ಅಧ್ಯಕ್ಷ ಅಪ್ಪಣ್ಣ, ಪರಿಷತ್ ಮಾಜಿ ಸದಸ್ಯ ಪ್ರೊ. ಮಲ್ಲಿಕಾರ್ಜುನ, ಬಿಜೆಪಿ ಸದಸ್ಯರಾದ ವೈ.ವಿ. ರವಿಶಂಕರ್, ಮಂಗಳಾ ಸೋಮಶೇಖರ್ ಭೇಟಿ ನೀಡಲಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಸೋಮವಾರ ಪ್ರಕರಣದ A1 ಮತ್ತು A2 ಆರೋಪಿಗಳಾದ ಮಣಿಕಂಠ ಅಲಿಯಾಸ್ ಕೊಳೆ ಮಣಿ, ಸಂದೇಶ್‌ನನ್ನು ಪೊಲೀಸರು ಬಂಧಿಸಿದ್ದರು. ಇಂದು ನಾಲ್ವರನ್ನು ಬಂಧಿಸಿದ್ದಾರೆ. A3 ಅನಿಲ್, A4 ಶಂಕರ್ ಅಲಿಯಾಸ್ ತುಪ್ಪ, A5 ಮಂಜು ಹಾಗೂ A6 ಹ್ಯಾರಿಸ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ – 6 ಜನರ ಮೇಲೆ ಎಫ್‌ಐಆರ್, ಇಬ್ಬರು ಅರೆಸ್ಟ್

    ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ – 6 ಜನರ ಮೇಲೆ ಎಫ್‌ಐಆರ್, ಇಬ್ಬರು ಅರೆಸ್ಟ್

    ಮೈಸೂರು: ಟಿ. ನರಸೀಪುರದಲ್ಲಿ (T. Narseepur) ಹನುಮ ಜಯಂತಿ (Hanuman Jayanti) ಮೆರವಣಿಗೆ ವೇಳೆ ಗಲಾಟೆ ನಡೆದು ಯುವಬ್ರಿಗೇಡ್ ಕಾರ್ಯಕರ್ತನನ್ನು (Yuva Brigade Activist) ಬಾಟಲಿಯಿಂದ ಇರಿದು ಕೊಂದಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು 6 ಜನರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.

    ಜುಲೈ 8ರಂದು ಟಿ. ನರಸೀಪುರದಲ್ಲಿ ಹನುಮ ಜಯಂತಿ ಮೆರವಣಿಗೆ ನಡೆದಿದ್ದು, ದೇವಸ್ಥಾನದ ಬಳಿ ಯಾವ ವಾಹನವನ್ನು ಬಿಡದಂತೆ ತಡೆದಿದ್ದಕ್ಕೆ ಹಾಗೂ ಪುನೀತ್ ರಾಜ್‌ಕುಮಾರ್ ಫೋಟೋವನ್ನು ತೆಗೆಯಲು ಹೇಳಿದ್ದಕ್ಕೆ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಹಾಗೂ ಆರೋಪಿಗಳ ನಡುವೆ ಜಗಳ ಉಂಟಾಗಿತ್ತು. ವೇಣುಗೋಪಾಲ್ ಯಾವುದೇ ಕಾರಣಕ್ಕೂ ದೇವಸ್ಥಾನದ ಬಳಿ ಬೈಕ್ ನಿಲ್ಲಿಸಲು ಬಿಡುವುದಿಲ್ಲ ಎಂದು ಹೇಳಿದ್ದಕ್ಕೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಗಲಾಟೆ ತೆಗೆದು ಕೊಲೆ ಮಾಡಲಾಗಿದೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಪುನೀತ್ ಫೋಟೋ ತೆಗೆಸಿದ್ದೇ ಯುವಬ್ರಿಗೇಡ್ ಕಾರ್ಯಕರ್ತನ ಕೊಲೆಗೆ ಕಾರಣವೇ? – ಮೃತನ ಪತ್ನಿ ಹೇಳಿದ್ದೇನು?

    ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು 6 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಮಣಿಕಂಠ, ಸಂದೇಶ್, ಅನಿಲ್, ಶಂಕರ್, ಮಂಜು ಹಾಗೂ ಹ್ಯಾರಿಸ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಪ್ರಮುಖ ಆರೋಪಿಗಳಾದ ಮಣಿಕಂಠ ಹಾಗೂ ಸಂದೇಶ್ ಬಂಧನವಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಸೆರೆಗೆ ತಂಡ ರಚಿಸಲಾಗಿದೆ. ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಯ ಕೈವಾಡ ಇಲ್ಲ. ಘಟನಾ ಸ್ಥಳದಲ್ಲಿ ಹ್ಯಾರಿಸ್ ಸರ್ವಿಸ್ ಸೆಂಟರ್ ಇತ್ತು. ಸಹಜವಾಗಿ ಘಟನೆ ನಡೆದಾಗ ಆತನು ಕೂಡಾ ಸ್ಥಳದಲ್ಲಿದ್ದ. ಘಟನೆಗೆ ಯಾವುದೇ ಕೋಮು ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಹನುಮ ಜಯಂತಿ ವೇಳೆ ಗಲಾಟೆ – ಬಾಟಲಿಯಿಂದ ಇರಿದು ಯುವಬ್ರಿಗೇಡ್ ಕಾರ್ಯಕರ್ತನ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]