Tag: Yugadi Festival

  • ಯುಗಾದಿ ಹಿಂದೂಗಳ ಹೊಸ ವರ್ಷ, ಹಸಿರಿಗೆ ಹೊಸ ಉಸಿರಿನ ಹಬ್ಬ

    ಯುಗಾದಿ ಹಿಂದೂಗಳ ಹೊಸ ವರ್ಷ, ಹಸಿರಿಗೆ ಹೊಸ ಉಸಿರಿನ ಹಬ್ಬ

    ಯುಗಾದಿ.. ಇದು ಹಿಂದೂಗಳ ಹೊಸ ವರ್ಷ, ಚಂದ್ರಮಾನ ಪಂಚಾಂಗದ ಪ್ರಕಾರ ಹೊಸ ವರ್ಷ ಪ್ರಾರಂಭವಾಗಿದ್ದು ಈ ದಿನ. ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನವನ್ನು ಹಿಂದೂಗಳ ಪ್ರಕಾರ ಹೊಸ ವರ್ಷದ ಮೊದಲ ದಿನವೆಂದು ಆಚರಿಸಲಾಗುತ್ತದೆ.

    ಹಿಂದೂ ಪಂಚಾಂಗದಲ್ಲಿ ಚೈತ್ರ ಮಾಸದಿಂದಲೇ ವರ್ಷದ ಆರಂಭವಾಗುತ್ತದೆ. ಈ ಹಬ್ಬ ಚಂದ್ರಮಾನ ಪಂಚಾಂಗವನ್ನು ಅನುಸರಿಸುತ್ತದೆ. ಇನ್ನು ಬ್ರಹ್ಮ ಯುಗಾದಿಯ ದಿನ ಇಡೀ ಬ್ರಹ್ಮಾಂಡವನ್ನೇ ಸೃಷ್ಟಿಸಿದನು ಎನ್ನಲಾಗುತ್ತದೆ. ಹೀಗಾಗಿ ಯುಗಾದಿ ಹಬ್ಬವನ್ನು ಹೊಸ ವರ್ಷದ ಅಥವಾ ಹೊಸ ಪ್ರಾರಂಭದ ಸಂಕೇತವಾಗಿ ಆಚರಿಸಲಾಗುತ್ತದೆ.

    ಗ್ರಹಗತಿಗಳ ಪ್ರಕಾರ, ಯುಗಾದಿಯ ದಿನ ಸೂರ್ಯನು ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಈ ಮೂಲಕ ಸೂರ್ಯ ಮತ್ತು ಚಂದ್ರರ ಹೊಸ ಚಕ್ರ ಪ್ರಾರಂಭಗೊಳ್ಳುತ್ತದೆ.

    ನೈಸರ್ಗಿಕವಾಗಿ ಯುಗಾದಿ ಹಬ್ಬವು ಹೊಸತನ ತಂದು ಕೊಡುತ್ತದೆ. ಚೈತ್ರ ಮಾಸದಲ್ಲಿ ವಸಂತ ಋತು ಪ್ರಾರಂಭವಾಗಿ, ನಿಸರ್ಗದಲ್ಲಿಯೂ ಹೊಸತನ ಹುಟ್ಟಿಕೊಳ್ಳುತ್ತದೆ. ಹೊಸ ಎಲೆಗಳು, ಚಿಗುರು ಹಾಗೂ ಇಡೀ ಪ್ರಕೃತಿ ಹಸಿರಿನಿಂದ ಕಂಗೊಳಿಸುತ್ತದೆ. ಹಸಿರಿಗೂ ಉಸಿರು ನೀಡುವ ಈ ಹಬ್ಬ ಯುಗಾದಿಯಾಗಿದೆ.

    ಯುಗಾದಿಯಂದು ಪಂಚಾಂಗ ಶ್ರವಣ, ಜ್ಯೋತಿಷಿಗಳು ಹೊಸ ವರ್ಷದ ಭವಿಷ್ಯವನ್ನು ಯುಗಾದಿ ಎಂದು ಪ್ರಾರಂಭಿಸುತ್ತಾರೆ. ಯುಗಾದಿಯನ್ನು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಸಂತ ಕಾಲದ ಜೊತೆ ಜೊತೆಗೆ ಹೊಸ ಬೆಳೆಗಳಿಗೆ ನಾಂದಿ ಹಾಡುತ್ತದೆ.

    ಐತಿಹಾಸಿಕವಾಗಿ ಹೇಳುವುದಾದರೆ, ಶಾಲಿವಾಹನ ಇದೇ ದಿನದಂದು ವಿಜಯ ಸಾಧಿಸಿ ತನ್ನ ಆಡಳಿತವನ್ನು ಪ್ರಾರಂಭಿಸುತ್ತಾನೆ. ಹೀಗಾಗಿ ಯುಗಾದಿಯೆಂದು ಶಾಲಿವಾಹನ ಶಕೆ ಪ್ರಾರಂಭವಾಯಿತು. ಹೀಗೆ ಯುಗಾದಿ ಹಲವು ಹೊಸತನಗಳಿಗೆ ಹೊಸ ಹುರುಪನ್ನು ಹಾಗೂ ನವಚೇತನವನ್ನು ನೀಡುವ ಮೂಲಕ ಹೊಸ ವರ್ಷಕ್ಕೆ ಬುನಾದಿಯಾಗುತ್ತದೆ.

    ಎಲ್ಲರೂ ಸಂಭ್ರಮದಿಂದ ಆಚರಿಸುವ ಈ ಯುಗಾದಿ ಎಲ್ಲರಲ್ಲೂ ಹೊಸ ಆರಂಭಕ್ಕೆ ದಾರಿ ಮಾಡಿಕೊಡಲಿ, ಹಿಂದೂಗಳ ಹೊಸ ವರ್ಷ ಎಲ್ಲರ ಮನೆ-ಮನಗಳಲ್ಲಿ ಹೊಸತನ್ನು ತರಲಿ.

    ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!

  • ಇಸ್ಪೀಟ್ ಆಡೋರಿಗೆ ಪೊಲೀಸರು ತೊಂದರೆ ಕೊಡದಂತೆ ಆದೇಶಿಸಿ: ಹೆಚ್‌ಡಿಕೆ ಮನವಿ

    ಇಸ್ಪೀಟ್ ಆಡೋರಿಗೆ ಪೊಲೀಸರು ತೊಂದರೆ ಕೊಡದಂತೆ ಆದೇಶಿಸಿ: ಹೆಚ್‌ಡಿಕೆ ಮನವಿ

    ರಾಮನಗರ: ಯುಗಾದಿ ಹಬ್ಬದ ಸಂದರ್ಭದಲ್ಲಿ ಹಳ್ಳಿ ಜನರು ಇಸ್ಪೀಟು ಆಡುವ ಸಂಪ್ರದಾಯ ಹಿಂದಿನಿಂದಲೂ ಬೆಳೆದು ಬಂದಿದೆ. ಅವರಿಗೆ ಪೊಲೀಸರು ತೊಂದರೆ ಕೊಡದಂತೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

    ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಳ್ಳಿಗಾಡಿನಲ್ಲಿ ಯುಗಾದಿ ಹಬ್ಬದ ವೇಳೆ ಎಲ್ಲರೂ ಮನೆಯಲ್ಲೇ ಇರುತ್ತಾರೆ. ರೈತರು ಹಬ್ಬದ ಮಾರನೇ ದಿನದಿಂದಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಿರುವುದರಿಂದ ಆ ಎರಡು ದಿನ ಇಸ್ಪೀಟು ಆಡಿ ಸಂತಸ ಪಡುತ್ತಾರೆ. ಇದು ಸಂಪ್ರದಾಯವಾದ್ದರಿಂದ ಪೊಲೀಸರು ಜನರಿಗೆ ತೊಂದರೆ ಕೊಡದಂತೆ ಸರ್ಕಾರ ನಿರ್ದೇಶನ ನೀಡುವುದು ಒಳ್ಳೆಯದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೇಕೆದಾಟು ವಿಚಾರವಾಗಿ ʼಸುಳ್ಳಿನಯಾತ್ರೆʼ ಹೊರಟವರ ಜಾತಕ ಬೆತ್ತಲಾಗ್ತಿದೆ: ಹೆಚ್‌ಡಿಕೆ 

    HDK

    ಇದೇ ವೇಳೆ ಹಲಾಲ್ ಕಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಹಿಂದೂ, ಮುಸ್ಲಿಂ ಇನ್ನಾವುದೇ ಸಮಾಜವು ಪರಸ್ಪರ ಬಾಂಧವ್ಯದಿಂದ ಇರುವ ವಾತಾವರಣ ಇತ್ತು. ಕರಾವಳಿ ಭಾಗದಲ್ಲಿ ಮಾತ್ರ ಕೆಲವರು ಅವರೇ ವಿವಾದ ಹುಟ್ಟುಹಾಕಿಕೊಂಡಿದ್ದರು. ಆದರೆ ಇಂದು ಪ್ರತಿದಿನ ಹಿಂದುತ್ವದ ಹೆಸರಿನಲ್ಲಿ ಭಾವನಾತ್ಮಕವಾಗಿ ಮಾತನಾಡುತ್ತಾ ಸಮಾಜದ ಶಾಂತಿ ಕದಡುವ ಕೆಲಸವಾಗುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ನೀರಿನ ಮುಂದೆ ʼಕಪಟ ನಾಟಕʼ ಮಾಡುವ ಸಿದ್ದಹಸ್ತ, ಕಲ್ಲುಬಂಡೆಗಳನ್ನೇ ನುಂಗಿದ ʼರಕ್ಕಸ ರಾಜಕಾರಣ’ 

    HDK

    ಹಬ್ಬದ ಹೊಸತೊಡಕು ಮಾಡುವ ಸಂದರ್ಭದಲ್ಲಿ ಮಾಂಸಾಹಾರ ಸೇವನೆ ಮಾಡುವವರು ಹಲಾಲ್ ಮಾಡಿದ್ದಾರೋ ಇಲ್ಲವೋ ಎಂದು ನೋಡುವುದಿಲ್ಲ. ಹಾಗೇ ತಂದು ಹಬ್ಬದ ಅಡುಗೆ ಮಾಡುತ್ತಾರೆ. ಇಲ್ಲಿಯವರೆಗೆ ಇಲ್ಲದ ಹಲಾಲ್ ಕಟ್ ವಿಚಾರ ಈಗ ಮಾತನಾಡಿದ್ದೇಕೆ? ಇದಕ್ಕಾಗಿಯೇ ಇವರು ಸದನದಲ್ಲಿ ಕುಳಿತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

  • ಕೊರೊನಾ ತೊಲಗಿದ್ಮೇಲೆ ಹಬ್ಬ ಆಚರಿಸೋಣ ಎಂದ ಪ್ರಣೀತಾ

    ಕೊರೊನಾ ತೊಲಗಿದ್ಮೇಲೆ ಹಬ್ಬ ಆಚರಿಸೋಣ ಎಂದ ಪ್ರಣೀತಾ

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ಯೂಟ್ ಬೆಡಗಿ ಪೊರ್ಕಿ ಖ್ಯಾತಿಯ ಪ್ರಣೀತಾ ಸುಭಾಶ್ ಅವರು ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದರ ಮಧ್ಯೆಯೇ ಮನೆಯವರೊಂದಿಗೆ ಸಿಂಪಲ್ ಆಗಿ ಹಬ್ಬನವನ್ನು ಆಚರಿಸಿದ್ದಾರೆ. ಈ ವೇಳೆ ಅಭಿಮಾನಿಗಳಿಗೂ ಸಲಹೆ ನೀಡಿದ್ದು, ಕೊರೊನಾ ವಿರುದ್ಧದ ಹೋರಾಟ ಮುಗಿಯುವ ವರೆಗೆ ಹೆಚ್ಚು ಜನ ಸೇರಿ ಹಬ್ಬ ಆಚರಿಸುವುದು ಬೇಡ ಎಂದು ಕರೆ ನೀಡಿದ್ದಾರೆ.

    ಪ್ರಣೀತಾ ಅವರು ಪೊರ್ಕಿ ಸಿನಿಮಾ ನಂತರ ಸ್ಯಾಂಡಲ್‍ವುಡ್‍ನಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಆದರೆ ತಮಿಳು ಹಾಗೂ ಬಾಲಿವುಡ್ ನಲ್ಲಿ ಅವರಿಗೆ ಅವಕಾಶ ಹುಡುಕಿಕೊಂಡು ಬಂತು. ಹೀಗಾಗಿ ತಮಿಳು ಹಾಗೂ ಹಿಂದಿಯಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಹಿಂದಿಯ ಹಂಗಾಮಾ-2 ಸಿನಿಮಾದಲ್ಲಿ ಪ್ರಣೀತಾ ಬ್ಯುಸಿಯಾಗಿದ್ದು, ಕೊರೊನಾ ವೈರಸ್ ಹಿನ್ನೆಲೆ ಚಿತ್ರೀಕರಣವನ್ನು ಬಂದ್ ಮಾಡಲಾಗಿದೆ. ಹೀಗಾಗಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

    https://www.instagram.com/p/B-JKcd3g7JV/

    ಕುಟುಂಬದ ಜೊತೆಗೆ ಹಬ್ಬವನ್ನೂ ಆಚರಿಸಿರುವ ಅವರು ಸಡಗರದಿಂದ ಆಚರಿಸದೇ ಸಿಂಪಲ್ ಆಗಿ ಹಬ್ಬ ಮಾಡಿದ್ದಾರೆ. ಇದರ ಜೊತೆಗೆ ಅಭಿಮಾನಿಗಳಿಗೂ ಸಲಹೆ ನೀಡಿದ್ದು, ಯಾವುದೇ ಕಾರಣಕ್ಕೂ ಹೆಚ್ಚು ಜನ ಸೇರಿ ಹಬ್ಬ ಆಚರಿಸಬೇಡಿ, ಇದೀಗ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳಬೇಕಿದೆ. ಹೀಗಾಗಿ ಈ ವರ್ಷ ಸಾಧಾರಣವಾಗಿ ಹಬ್ಬ ಆಚರಿಸಿ ಕೊರೊನಾ ಪಿಡುಗು ತೊಲಗಿದ ಮೇಲೆ ಸಂಭ್ರಮದಿಂದ ಹಬ್ಬ ಆಚರಿಸಬಹುದು ಎಂದು ಕರೆ ನೀಡಿದ್ದಾರೆ.

    ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಯುಗಾದಿ ನಮ್ಮ ಹಿಂದೂಗಳ ಹೊಸ ವರ್ಷ, ಈ ಹಬ್ಬದಲ್ಲಿ ಬೇವು ಬೆಲ್ಲದ ಮೂಲಕ ಸುಖ ದುಃಖಗಳನ್ನು ಸಮನಾಗಿಸ್ವೀಕರಿಸುವುದಾಗಿದೆ. ಬೇವು ನಮ್ಮ ಕಷ್ಟ ಹಾಗೂ ದುಃಖಗಳನ್ನು ಪ್ರತಿನಿಧಿಸಿದರೆ, ಬೆಲ್ಲ ನಮ್ಮ ಸಂತಸದ ಕ್ಷಣಗಳನ್ನು ಸೂಚಿಸುತ್ತಿದೆ. ನಮ್ಮ ಜೀವನದಲ್ಲಿ ಇವೆರಡೂ ಬಹಳ ಮುಖ್ಯ. ಇದೀಗ ನಾವು ಮನೆಯಲ್ಲಿ ದಿಗ್ಬಂಧನದಲ್ಲಿದ್ದೇವೆ. ಹೀಗಾಗಿ ಸರಳವಾಗಿ ಹಬ್ಬ ಆಚರಿಸೋಣ. ನಾನೂ ಸಹ ನಮ್ಮ ಕುಟುಂಬದವರೊಂದಿಗೆ ಸಾಧಾರಣವಾಗಿ ಹಬ್ಬ ಆಚರಿಸುತ್ತಿದ್ದೇನೆ. ನೀವೂ ಅದನ್ನೇ ಪಾಲಿಸಿ. ಹೀಗೇ ನಾವು ಸ್ವಯಂ ದಿಗ್ಬಂಧನ ವಿಧಿಸಿಕೊಂಡರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸುತ್ತೇವೆ. ಅವತ್ತೇ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ಈಗ ನಡೆಯುತ್ತಿರುವುದನ್ನು ಬೇವು ತಿಂದ ಸಂದರ್ಭ ಎಂದು ಭಾವಿಸಬೇಕು. ಹೀಗಾಗಿ ಸಿಂಪಲ್ ಯುಗಾದಿಯ ಶುಭಾಯಶ ಎಂದು ವಿಡಿಯೋ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ.

    ಪ್ರಣೀತಾ ಅವರು ಸದ್ಯ ಹಿಂದಿಯ ಹಂಗಾಮಾ-2 ಚಿತ್ರದಲ್ಲಿ ನಟಿಸುತ್ತಿದ್ದು, ಇದರಲ್ಲಿ ಮಿಝಾನ್ ಜಫ್ರಿ, ಪರೇಷ್ ರಾವಲ್ ಹಾಗೂ ಶಿಲ್ಪಾ ಶೆಟ್ಟಿ ಯವರ ಜೊತೆಗೆ ಪ್ರಣೀತಾ ಸಹ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಸಾಕಷ್ಟು ಸದ್ದು ಮಾಡುತ್ತಿದ್ದು, ಕಾಮಿಡಿ ಸಿನಿಮಾ ಕುರಿತ ಕುತೂಹಲ ಹೆಚ್ಚಾಗಿದೆ. ಈ ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶಿಸುತ್ತಿದ್ದಾರೆ.

    ಕನ್ನಡದ ಪೊರ್ಕಿ ಸೇರಿದಂತೆ ತಮಿಳಿನ ಸಗುನಿ, ತೆಲುಗಿನ ಅತ್ತಾರಿಂಟಿಕಿ ದಾರೆದಿ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಪ್ರಣೀತಾ ನಟಿಸಿದ್ದಾರೆ. ಇದೀಗ ಹಾಸ್ಯ ಪ್ರಧಾನ ಬಾಲಿವುಡ್ ಚಿತ್ರ ಹಂಗಾಮಾ-2ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • ಇಂದು ನಿಖಿಲ್ ಪ್ರಚಾರಕ್ಕೆ ಬ್ರೇಕ್

    ಇಂದು ನಿಖಿಲ್ ಪ್ರಚಾರಕ್ಕೆ ಬ್ರೇಕ್

    ಬೆಂಗಳೂರು: ಮಂಡ್ಯದಲ್ಲಿ ಬಿರುಸಿನಿಂದ ಪ್ರಚಾರ ಮಾಡುತ್ತಿದ್ದ ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಕೊಂಚ ರಿಲ್ಯಾಕ್ಸ್ ತೆಗೆದುಕೊಂಡಿದ್ದು, ಇಂದು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಚಾರವನ್ನು ಕ್ಯಾನ್ಸಲ್ ಮಾಡಿದ್ದಾರೆ.

    ಸಮಸ್ತ ನಾಡಿದ್ಯಂತ ಎಲ್ಲರೂ ಇಂದು ಯುಗಾದಿ ಹಬ್ಬವನ್ನು ಕುಟುಂಬಸ್ಥರೊಂದಿಗೆ ಸಡಗರ-ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಕುಟುಂಬದವರ ಜೊತೆ ಹಬ್ಬ ಆಚರಿಸಲು ಮಂಡ್ಯದಲ್ಲಿ ಇಂದಿನ ಪ್ರಚಾರವನ್ನು ರದ್ದು ಮಾಡಿ ಬೆಂಗಳೂರಿಗೆ ಬಂದಿದ್ದಾರೆ.

    ಹಬ್ಬ ಆಚರಿಸಲು ನಿಖಿಲ್ ಪ್ರಚಾರ ರದ್ದು ಮಾಡಿದ್ದರೆ, ಇತ್ತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಹಬ್ಬದ ದಿನವೂ ಮಂಡ್ಯದ ಅನೇಕ ಭಾಗಗಳಲ್ಲಿ ಪ್ರಚಾರ ಮುಂದುವರಿಸಿದ್ದಾರೆ. ನಿಖಿಲ್ ನಾಮಪತ್ರ ಸಲ್ಲಿಸಿದ ದಿನದಿಂದಲೂ ಮಂಡ್ಯದಲ್ಲಿ ಬಿಡುವಿಲ್ಲದೇ ಪ್ರಚಾರ ಮಾಡುತ್ತಿದ್ದಾರೆ.

    ಅಷ್ಟೇ ಅಲ್ಲದೆ ಪ್ರಚಾರಕ್ಕೆ ಬರುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದ್ದಾರೆ. ಸಾರ್ ನೀವು ಪ್ರಚಾರಕ್ಕೆ ಬನ್ನಿ. ನಿಮ್ಮ ಆಶೀರ್ವಾದ ನನಗೆ ಬೇಕು. ಹಿಂದಿನದ್ದು ಬಿಟ್ಟು ಬಿಡಿ, ನಾನು ಭವಿಷ್ಯದ ಬಗ್ಗೆ ಯೋಜನೆ ಮಾಡುವವನು. ಹೀಗಾಗಿ ಮುನಿಸು ಮರೆತು ಪ್ರಚಾರಕ್ಕೆ ಬನ್ನಿ ಎಂದು ನಿಖಿಲ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.