Tag: yugadi

  • ಯುಗಾದಿ ಹಿಂದೂಗಳ ಹೊಸ ವರ್ಷ, ಹಸಿರಿಗೆ ಹೊಸ ಉಸಿರಿನ ಹಬ್ಬ

    ಯುಗಾದಿ ಹಿಂದೂಗಳ ಹೊಸ ವರ್ಷ, ಹಸಿರಿಗೆ ಹೊಸ ಉಸಿರಿನ ಹಬ್ಬ

    ಯುಗಾದಿ.. ಇದು ಹಿಂದೂಗಳ ಹೊಸ ವರ್ಷ, ಚಂದ್ರಮಾನ ಪಂಚಾಂಗದ ಪ್ರಕಾರ ಹೊಸ ವರ್ಷ ಪ್ರಾರಂಭವಾಗಿದ್ದು ಈ ದಿನ. ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನವನ್ನು ಹಿಂದೂಗಳ ಪ್ರಕಾರ ಹೊಸ ವರ್ಷದ ಮೊದಲ ದಿನವೆಂದು ಆಚರಿಸಲಾಗುತ್ತದೆ.

    ಹಿಂದೂ ಪಂಚಾಂಗದಲ್ಲಿ ಚೈತ್ರ ಮಾಸದಿಂದಲೇ ವರ್ಷದ ಆರಂಭವಾಗುತ್ತದೆ. ಈ ಹಬ್ಬ ಚಂದ್ರಮಾನ ಪಂಚಾಂಗವನ್ನು ಅನುಸರಿಸುತ್ತದೆ. ಇನ್ನು ಬ್ರಹ್ಮ ಯುಗಾದಿಯ ದಿನ ಇಡೀ ಬ್ರಹ್ಮಾಂಡವನ್ನೇ ಸೃಷ್ಟಿಸಿದನು ಎನ್ನಲಾಗುತ್ತದೆ. ಹೀಗಾಗಿ ಯುಗಾದಿ ಹಬ್ಬವನ್ನು ಹೊಸ ವರ್ಷದ ಅಥವಾ ಹೊಸ ಪ್ರಾರಂಭದ ಸಂಕೇತವಾಗಿ ಆಚರಿಸಲಾಗುತ್ತದೆ.

    ಗ್ರಹಗತಿಗಳ ಪ್ರಕಾರ, ಯುಗಾದಿಯ ದಿನ ಸೂರ್ಯನು ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಈ ಮೂಲಕ ಸೂರ್ಯ ಮತ್ತು ಚಂದ್ರರ ಹೊಸ ಚಕ್ರ ಪ್ರಾರಂಭಗೊಳ್ಳುತ್ತದೆ.

    ನೈಸರ್ಗಿಕವಾಗಿ ಯುಗಾದಿ ಹಬ್ಬವು ಹೊಸತನ ತಂದು ಕೊಡುತ್ತದೆ. ಚೈತ್ರ ಮಾಸದಲ್ಲಿ ವಸಂತ ಋತು ಪ್ರಾರಂಭವಾಗಿ, ನಿಸರ್ಗದಲ್ಲಿಯೂ ಹೊಸತನ ಹುಟ್ಟಿಕೊಳ್ಳುತ್ತದೆ. ಹೊಸ ಎಲೆಗಳು, ಚಿಗುರು ಹಾಗೂ ಇಡೀ ಪ್ರಕೃತಿ ಹಸಿರಿನಿಂದ ಕಂಗೊಳಿಸುತ್ತದೆ. ಹಸಿರಿಗೂ ಉಸಿರು ನೀಡುವ ಈ ಹಬ್ಬ ಯುಗಾದಿಯಾಗಿದೆ.

    ಯುಗಾದಿಯಂದು ಪಂಚಾಂಗ ಶ್ರವಣ, ಜ್ಯೋತಿಷಿಗಳು ಹೊಸ ವರ್ಷದ ಭವಿಷ್ಯವನ್ನು ಯುಗಾದಿ ಎಂದು ಪ್ರಾರಂಭಿಸುತ್ತಾರೆ. ಯುಗಾದಿಯನ್ನು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಸಂತ ಕಾಲದ ಜೊತೆ ಜೊತೆಗೆ ಹೊಸ ಬೆಳೆಗಳಿಗೆ ನಾಂದಿ ಹಾಡುತ್ತದೆ.

    ಐತಿಹಾಸಿಕವಾಗಿ ಹೇಳುವುದಾದರೆ, ಶಾಲಿವಾಹನ ಇದೇ ದಿನದಂದು ವಿಜಯ ಸಾಧಿಸಿ ತನ್ನ ಆಡಳಿತವನ್ನು ಪ್ರಾರಂಭಿಸುತ್ತಾನೆ. ಹೀಗಾಗಿ ಯುಗಾದಿಯೆಂದು ಶಾಲಿವಾಹನ ಶಕೆ ಪ್ರಾರಂಭವಾಯಿತು. ಹೀಗೆ ಯುಗಾದಿ ಹಲವು ಹೊಸತನಗಳಿಗೆ ಹೊಸ ಹುರುಪನ್ನು ಹಾಗೂ ನವಚೇತನವನ್ನು ನೀಡುವ ಮೂಲಕ ಹೊಸ ವರ್ಷಕ್ಕೆ ಬುನಾದಿಯಾಗುತ್ತದೆ.

    ಎಲ್ಲರೂ ಸಂಭ್ರಮದಿಂದ ಆಚರಿಸುವ ಈ ಯುಗಾದಿ ಎಲ್ಲರಲ್ಲೂ ಹೊಸ ಆರಂಭಕ್ಕೆ ದಾರಿ ಮಾಡಿಕೊಡಲಿ, ಹಿಂದೂಗಳ ಹೊಸ ವರ್ಷ ಎಲ್ಲರ ಮನೆ-ಮನಗಳಲ್ಲಿ ಹೊಸತನ್ನು ತರಲಿ.

    ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!

  • ಇಂದು ವರ್ಷದ ಮೊದಲ ಸೂರ್ಯಗ್ರಹಣ – ಮ.2:21 ರಿಂದ ಸಂ.6:14 ಸಂಭವಿಸಲಿರುವ ಗ್ರಹಣ

    ಇಂದು ವರ್ಷದ ಮೊದಲ ಸೂರ್ಯಗ್ರಹಣ – ಮ.2:21 ರಿಂದ ಸಂ.6:14 ಸಂಭವಿಸಲಿರುವ ಗ್ರಹಣ

    ಬೆಂಗಳೂರು: ಇಂದು ವರ್ಷದ ಮೊದಲ ಸೂರ್ಯಗ್ರಹಣ (Solar Eclipse) ಮಧ್ಯಾಹ್ನ 2:21 ರಿಂದ ಸಂಜೆ 6:14 ಗಂಟೆಯವರೆಗೆ ಸಂಭವಿಸಲಿದೆ.

    ಯುಗಾದಿ ಹಬ್ಬದ ಹಿಂದಿನ ದಿನ ಯುಗಾದಿ (Yugadi) ಅಮವಾಸ್ಯೆ. ಇದು ಹಿಂದೂಗಳಿಗೆ ವರ್ಷದ ಕೊನೆಯ ದಿನವಾಗಿದೆ. ಈ ದಿನ ಸೂರ್ಯ ಗ್ರಹಣ ಸಂಭವಿಸುತ್ತಿರುವುದು ಧಾರ್ಮಿಕವಾಗಿ ಮಹತ್ವ ಪಡೆದುಕೊಳ್ಳಲಿದೆ.ಇದನ್ನೂ ಓದಿ: ನಾಳೆ ವರ್ಷದ ಮೊದಲ ಸೂರ್ಯಗ್ರಹಣ – 30 ರಿಂದ 50 ವರ್ಷಗಳ ಬಳಿಕ ಸಂಭವಿಸಲಿದೆ ಷಡ್ ಗ್ರಹಯೋಗ

    ಈ ಗ್ರಹಣ ಅಮೆರಿಕದಲ್ಲಿ ಗೋಚರಿಸಲಿದ್ದು, ಇಂದು ಮಧ್ಯಾಹ್ನ 2:21 ರಿಂದ ಸಂಜೆ 6:14 ವರಗೆ ಸಂಭವಿಸಲಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ. ಹೀಗಾಗಿ ಎಂದಿನಂತೆ ದೇವಾಲಯಗಳು ತೆರೆದಿರುತ್ತವೆ. ಯುಗಾದಿ ಅಮವಾಸ್ಯೆಯ ಪೂಜೆ ಹಿನ್ನೆಲೆ ಇಂದು ಗವಿಗಂಗಾಧರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಇನ್ನೂ ಈ ಗ್ರಹಣದೊಂದಿಗೆ 30 ರಿಂದ 50 ವರ್ಷಗಳ ಬಳಿಕ ಸಂಭವಿಸುವ ಅಪರೂಪದ ಷಡ್ ಗ್ರಹಯೋಗ ಕೂಡ ಜೊತೆಯಾಗಲಿದೆ.

    ಏನಿದು ಷಡ್ ಗ್ರಹಯೋಗ?
    ಈ ಗ್ರಹಯೋಗದಲ್ಲಿ ಆರು ರಾಶಿಗಳು ಒಟ್ಟಿಗೆ ಒಂದೇ ಗ್ರಹದಲ್ಲಿ ಸಮ್ಮಿಲನವಾಗುತ್ತವೆ. ಸಾಮಾನ್ಯವಾಗಿ ಈ ರೀತಿಯ ಷಡ್ ಗ್ರಹಯೋಗದಿಂದ ಕೆಡುಕು ಉಂಟಾಗುವುದು ಹೆಚ್ಚು. ಧಾರ್ಮಿಕವಾಗಿ ಈ ಪ್ರಕ್ರಿಯೆ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, 12 ರಾಶಿಗೂ ಇದರ ಮೇಲೆ ಪ್ರಭಾವ ಬೀರಲಿದೆ.

    ಪರಿಹಾರ ಏನು?
    ಹೋಮ ಹವನ, ವಿಷ್ಣು ಸಹಸ್ರನಾಮ, ರುದ್ರಪಾರಾಯಣ, ರುದ್ರಾಭಿಷೇಕ, ಮೃತ್ಯುಂಜಯ ಜಪ, ಆಂಜನೇಯ ದೇವರ ಆರಾಧನೆ, ನವಧಾನ್ಯಗಳ ದಾನ ಮಾಡಬೇಕು

    ಯಾವ ರಾಶಿಗೆ ಆಪತ್ತು?
    – ಕುಂಭರಾಶಿಯಿಂದ ಮೀನ ರಾಶಿಗೆ ಶನಿ ಪ್ರವೇಶ
    – ಷಡ್ ಗ್ರಹಯೋಗದಿಂದ 12 ರಾಶಿಯ ಮೇಲೂ ಪರಿಣಾಮ
    – ಅದರಲ್ಲಿ ಮೀನ, ಮೇಷ, ಸಿಂಹ, ಧನು ರಾಶಿಯ ಅಧಿಕ ಪರಿಣಾಮ
    – ಈ ರಾಶಿಯವರು ತೀರಾ ಎಚ್ಚರಿಕೆಯಿಂದ ಇರಬೇಕು

    ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಮತ್ತೆ ಭೂಕಂಪ – ಆಸ್ಪತ್ರೆ ಕಟ್ಟಡಗಳೇ ನಾಮಾವಶೇಷ, ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

  • ಯುಗಾದಿ ಹಬ್ಬದಂದು ಮತ್ತೆ ಮುನ್ನೆಲೆಗೆ ಬಂತು ಹಲಾಲ್ ಬಾಯ್ಕಾಟ್ ಅಭಿಯಾನ

    ಯುಗಾದಿ ಹಬ್ಬದಂದು ಮತ್ತೆ ಮುನ್ನೆಲೆಗೆ ಬಂತು ಹಲಾಲ್ ಬಾಯ್ಕಾಟ್ ಅಭಿಯಾನ

    ಬೆಂಗಳೂರು: ಹಲಾಲ್ ಬಾಯ್ಕಾಟ್ (Halal Boycott) ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದ್ದು, ಹಲಾಲ್ ಮುಕ್ತ ಯುಗಾದಿ (Yugadi) ಹಬ್ಬದ ಆಚರಣೆಗಾಗಿ ರಾಜಧಾನಿಯಲ್ಲಿ ಮಂಗಳವಾರದಿಂದ ಹಲಾಲ್ ಬಾಯ್ಕಾಟ್ ಅಭಿಯಾನ ಶುರುವಾಗಲಿದೆ.

    ಹಿಂದೂಪರ ಸಂಘಟನೆಯ ಕಾರ್ಯಕರ್ತರು ಈ ಅಭಿಯಾನವನ್ನು ಪ್ರಾರಂಭಿಸಿದ್ದು, ಮಧ್ಯಾಹ್ನ ೧ ಗಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಲಾಲ್ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಎರಡು ಗಂಟೆಗೆ ಸರಿಯಾಗಿ ಬೆಂಗಳೂರು (Bengaluru) ನಗರದ ಜಿಲ್ಲಾಧಿಕಾರಿಗಳ ಮೂಲಕ ಹಲಾಲ್ ಸರ್ಟಿಫಿಕೇಟ್ ಬ್ಯಾನ್ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ 6 ವರ್ಷವಿದ್ದು ಮಗು ಮಾಡಿಕೊಂಡಿದ್ದ ಮಹಿಳೆ – ವಿಷಯ ತಿಳಿಯುತ್ತಲೇ ಪತಿಯಿಂದ ಪತ್ನಿ ಕೊಲೆ

    ಸಂಜೆ ನಾಲ್ಕು ಗಂಟೆಗೆ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರೋಡಿನಲ್ಲಿ ಅಭಿಯಾನವನ್ನು ನಡೆಸಲಿದ್ದು, ನಗರದಾದ್ಯಂತ ಭಿತ್ತಿಪತ್ರ ಹಂಚುವ ಮೂಲಕ ಹಲಾಲ್ ಮುಕ್ತ ಯುಗಾದಿ ಹಬ್ಬ ಆಚರಣೆ ಮಾಡುವಂತೆ ಜನರಲ್ಲಿ ಮನವಿ ಮಾಡಲಿದ್ದಾರೆ. ಸಂಜೆ ೫ ಗಂಟೆಗೆ ವಿಜಯನಗರದ (Vijayanagara) ಸಂಕಷ್ಟಹರ ಗಣಪತಿ ದೇವಸ್ಥಾನ ಸೇರಿದಂತೆ ಹಲವೆಡೆ ಅಭಿಯಾನ ನಡೆಸಲಿದ್ದಾರೆ. ಈ ಮೂಲಕ ಗುರುವಾರದ ಹೊಸತೊಡಕಿಗೆ ಹಿಂದೂ ಸಂಪ್ರದಾಯದಂತೆ ಜಟ್ಕಾಕಟ್ (Jhatka Cut) ಮಾಂಸ ಖರೀದಿ ಮಾಡುವಂತೆ ಮನವಿ ಮಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಯುಗಾದಿ ಹಬ್ಬಕ್ಕೆ ಹರಿದ ಸೀರೆ ಹಂಚಿದ್ರಾ ಕಾಂಗ್ರೆಸ್ ಶಾಸಕ?

    ಹಿಂದೂ ಜನಜಾಗೃತಿ ವೇದಿಕೆಯ ಮೋಹನ್ ಗೌಡ, ಹಿಂದೂಪರ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಹಾಗೂ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಶ್ರೀರಾಮಸೇನೆ, ಹಿಂದೂ ದಲಿತ ಸೇನೆ, ಹಿಂದೂ ಜನಜಾಗೃತಿ, ರಾಷ್ಟ್ರ ರಕ್ಷಣಾ ಪಡೆ ಸೇರಿದಂತೆ ಬಜರಂಗದಳದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಡಿನೋಟಿಫಿಕೇಶನ್‌ ಕೇಸ್‌ – ಅಧಿಕ ರಕ್ತದೊತ್ತಡ ಕಾರಣ ನೀಡಿ ಕೋರ್ಟ್‌ ವಿಚಾರಣೆಗೆ ಎಚ್‌ಡಿಕೆ ಗೈರು

  • ಇಂದು ಯುಗಾದಿ ಹಬ್ಬದ ಹೊಸತೊಡಕು – ಮಟನ್ ಸ್ಟಾಲ್‍ಗಳಿಗೆ ಬೆಳ್ಳಂಬೆಳಗ್ಗೆ ಜನರ ಲಗ್ಗೆ

    ಇಂದು ಯುಗಾದಿ ಹಬ್ಬದ ಹೊಸತೊಡಕು – ಮಟನ್ ಸ್ಟಾಲ್‍ಗಳಿಗೆ ಬೆಳ್ಳಂಬೆಳಗ್ಗೆ ಜನರ ಲಗ್ಗೆ

    – ಮಟನ್ ಅಂಗಡಿ ಮುಂದೆ ಸರತಿ ಸಾಲು

    ಬೆಂಗಳೂರು: ಇಂದು ಯುಗಾದಿ ಹೊಸತೊಡಕು. ಹೀಗಾಗಿ ಬೆಳಗ್ಗೆಯಿಂದಲೇ ಎಲ್ಲಾ ಕಡೆ ಮಟನ್ ಸ್ಟಾಲ್‍ಗಳತ್ತ ಜನ ಮುಖ ಮಾಡಿದ್ದಾರೆ. ಬೆಂಗಳೂರಿನ ಪಾಪಣ್ಣ ಮಟನ್ ಸ್ಟಾಲ್ ಮುಂದೆ ಅಂತೂ ಸಾವಿರಾರು ಜನ ಸೇರಿದ್ದಾರೆ. ಮಟನ್‍ಗಾಗಿ ಕಿಲೋಮೀಟರ್ ಗಟ್ಟಲೇ ಕ್ಯೂ ಕಂಡುಬರುತ್ತಿದೆ.

    ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅನಾವಶ್ಯಕವಾಗಿ ಮನೆಯಿಂದ ಹೊರ ಬರದಂತೆ ಸರ್ಕಾರ ಸೂಚಿಸಿದೆ. ಸರ್ಕಾರದ ಕೊರೊನಾ ನಿಯಮಗಳು ಕಾಗದಗಳಿಗೆ ಮಾತ್ರ ಸೀಮಿತವಾದಂತೆ ಕಾಣಿಸುತ್ತಿದೆ. ಬೆಳಗಿನ ಜಾವ 5 ಗಂಟೆಗೆ ನೈಟ್ ಕಫ್ರ್ಯೂ ಮುಗಿಯುತ್ತಿದ್ದಂತೆ ಜನ ರಸ್ತೆಗೆ ಇಳಿಯುತ್ತಿದ್ದಾರೆ. ಕಳೆದರಡು ದಿನಗಳಿಂದ ಯುಗಾದಿ ಹಿನ್ನೆಲೆ ಮಾರುಕಟ್ಟೆಗಳು ಗಿಜಿಗುಡುತ್ತಿವೆ. ಇಂದು ಹೊಸ ತೊಡಕು ಹಿನ್ನೆಲೆ ಮಟನ್ ಸ್ಟಾಲ್ ಗಳ ಮುಂದೆ ಕ್ಯೂ ಕಾಣಿಸುತ್ತಿವೆ.

    ಹಾಸನದಲ್ಲಿ ಜನ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಮಟನ್ ಖರೀದಿಯಲ್ಲಿ ತೊಡಗಿದ್ದಾರೆ. ಹಾಸನದಲ್ಲಿ ಪ್ರತಿದಿನ ಸುಮಾರು 100 ರಿಂದ 150 ಜನರಿಗೆ ಕೊರೊನಾ ಪಾಸಿಟಿವ್ ಬರುತ್ತಿದೆ. ಆದರೂ ಕೂಡ ಮಟನ್ ಮಾರುಕಟ್ಟೆಗೆ ಬರುವ ಜನ ಯಾವುದೇ ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ.

  • ಕಾರಾಗೃಹದಲ್ಲಿ ಖೈದಿಗಳೊಂದಿಗೆ ಯುಗಾದಿ ಆಚರಣೆ

    ಕಾರಾಗೃಹದಲ್ಲಿ ಖೈದಿಗಳೊಂದಿಗೆ ಯುಗಾದಿ ಆಚರಣೆ

    ಶಿವಮೊಗ್ಗ: ಇಂದು ನಾಡಿನಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ನಗರದಲ್ಲಿ ಸಹ ನರೇಂದ್ರ ಮೋದಿ ವಿಚಾರ ಮಂಚ್ ಕಾರ್ಯಕರ್ತರು ಕಾರಾಗೃಹಕ್ಕೆ ತೆರಳಿ ಬಂಧಿಗಳ ಜೊತೆ ಯುಗಾದಿ ಹಬ್ಬ ಆಚರಿಸಿದರು.

    ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿರುವ ಬಂಧಿಗಳಿಗೆ ಬೇವು, ಬೆಲ್ಲ ನೀಡಿ ಶುಭಾಶಯ ಕೋರಿದರು. ಕಾರಾಗೃಹದಲ್ಲಿ ಶಿಕ್ಷೆಗೆ ಒಳಗಾಗಿದ್ದೇವೆ, ನಮಗೆ ಹಬ್ಬದ ಸಂಭ್ರಮ ಇಲ್ಲ ಎಂಬ ಮನೋಭಾವ ಹೋಗಲಾಡಿಸುವ ಸಲುವಾಗಿ ಕಾರಾಗೃಹದ ಸಜಾ ಬಂಧಿಗಳ ಜೊತೆ ಯುಗಾದಿ ಆಚರಿಸಿದರು.

    ಬಂಧಿಗಳು ಸಹ ಯುಗಾದಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಿ, ಕಳೆದ ಹಲವು ವರ್ಷಗಳಿಂದ ಕಾರಾಗೃಹದಲ್ಲೇ ಹಬ್ಬ ಆಚರಿಸುತ್ತಿದ್ದೇವೆ. ನಮ್ಮವರ ಜೊತೆ ಹಬ್ಬ ಆಚರಿಸುತ್ತಿಲ್ಲ ಎಂಬ ನೋವು ಇಲ್ಲ. ಇಲ್ಲಿರುವವರೆಲ್ಲಾ ನಮ್ಮ ಸಹೋದರರೆ ಇವರ ಜೊತೆಯಲ್ಲಿಯೇ ಖುಷಿಯಾಗಿ ಹಬ್ಬ ಆಚರಿಸುತ್ತೇವೆ ಎಂದಿದ್ದಾರೆ.

  • ಯುಗಾದಿ ವರ್ಷ ಭವಿಷ್ಯ

    ಯುಗಾದಿ ವರ್ಷ ಭವಿಷ್ಯ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರಮಾಸ,
    ಕೃಷ್ಣ ಪಕ್ಷ, ಪಾಡ್ಯ ತಿಥಿ,
    ರೇವತಿ ನಕ್ಷತ್ರ, ಬುಧವಾರ,

    ಮೇಷ: ವರ್ಷಾದಿಯಲ್ಲಿ ಗುರು ಅಶುಭದಾಯಕ, ವರ್ಷ ಪೂರ್ತಿ ಶನಿ ಅಶುಭದಾಯಕ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ವೃಥಾ ತಿರುಗಾಟ, ಹಣಕಾಸು ತೊಂದರೆ, ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಭಯ, ಪಾಪ ಕಾರ್ಯದಲ್ಲಿ ಆಸಕ್ತಿ, ಯತ್ನ ಕಾರ್ಯದಲ್ಲಿ ಅಡಚಣೆ, ಕೃಷಿಯಲ್ಲಿ ಅಲ್ಪ ಪ್ರಗತಿ, ವರ್ಷಾಂತ್ಯದಲ್ಲಿ ಗುರು ಶುಭದಾಯಕ, ತೊಂದರೆಗಳು ಕಡಿಮೆಯಾಗುವುದು.
    ಅದೃಷ್ಟ ಸಂಖ್ಯೆ: 1,2,3,9
    ಶುಭ ಬಣ್ಣಗಳು: ಕೆಂಪು ಹಳದಿ ಕೇಸರಿ.

    ವೃಷಭ: ಈ ವರ್ಷ ಶುಭ-ಅಶುಭ ಫಲ, ಮಿಶ್ರ ಫಲ ಯೋಗ, ಗುರು ಶುಭದಾಯಕ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಮಂಗಳ ಕಾರ್ಯ ಜರುಗುವುದು, ಯತ್ನ ಕಾರ್ಯದಲ್ಲಿ ಅಲ್ಪ ಪ್ರಗತಿ, ಸಂತಾನ ವೃದ್ಧಿ, ಕೆಲಸದಲ್ಲಿ ಅಭಿವೃದ್ಧಿ, ಶನಿ ಅಶುಭದಾಯಕ, ಮಾನಸಿಕ ಚಿಂತೆ, ವೃಥಾ ಖರ್ಚು, ಕುಟುಂಬದಲ್ಲಿ ಅನಾರೋಗ್ಯ.
    ಅದೃಷ್ಟ ಸಂಖ್ಯೆ: 5,6,8
    ಶುಭ ಬಣ್ಣ : ಬಿಳಿ, ಹಸಿರು, ಕಪ್ಪು

    ಮಿಥುನ: ಗುರು, ಶನಿ ಅಶುಭದಾಯಕ, ಕುಟುಂಬದಲ್ಲಿ ಅನಾರೋಗ್ಯ, ಬಂಧು ಮಿತ್ರರಲ್ಲಿ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ವಿಘ್ನ, ವೃಥಾ ಖರ್ಚು, ಚೋರಾಗ್ನಿ ಭೀತಿ, ಮನೋವ್ಯಥೆ, ವ್ಯವಹಾರದಲ್ಲಿ ವಿಳಂಬ, ವರ್ಷಾಂತ್ಯದಲ್ಲಿ ಗುರು ಶುಭದಾಯಕ, ಅಲ್ಪ ಮಟ್ಟಿನ ನೆಮ್ಮದಿ ಲಭಿಸುವುದು.
    ಅದೃಷ್ಟ ಸಂಖ್ಯೆ: 3,5,6,8
    ಶುಭ ಬಣ್ಣ : ಕೆಂಪು, ಹಸಿರು, ಶ್ಯಾಮ

    ಕಟಕ: ವರ್ಷಾದಿಯಲ್ಲಿ ಗುರು ಶುಭದಾಯಕ, ಶುಭ ಕಾರ್ಯ ಯತ್ನ ಸಫಲ, ಬಂಧು ಮಿತ್ರರಿಂದ ಸಹಾಯ, ಹಣಕಾಸು ಪರಿಸ್ಥಿತಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವರ್ಷ ಪೂರ್ತಿ ಶನಿ ಅಶುಭದಾಯಕ, ಆರೋಗ್ಯದಲ್ಲಿ ವ್ಯತ್ಯಾಸ, ಪರಸ್ಥಳ ವಾಸ, ಧನವ್ಯಯ, ಚೋರಾಗ್ನಿ ಭೀತಿ, ಸರ್ಕಾರಿ ಕೆಲಸದಲ್ಲಿ ಅಡಚಣೆಯಾಗುವುದು.
    ಅದೃಷ್ಟ ಸಂಖ್ಯೆ: 2,3,9
    ಶುಭ ಬಣ್ಣ : ಬಿಳಿ, ಕೆಂಪು, ಹಳದಿ

    ಸಿಂಹ: ವರ್ಷಾದಿಯಲ್ಲಿ ಗುರು ಅಶುಭದಾಯಕ, ಕುಟುಂಬದಲ್ಲಿ ತೊಂದರೆ, ದಾಯಾದಿಗಳ ಕಲಹ, ಪ್ರಯಾಣದಲ್ಲಿ ಅಡಚಣೆ, ಸೇವಕರಿಂದ ಕಿರಿಕಿರಿ. ಈ ವರ್ಷ ಶನಿ ಶುಭದಾಯಕ, ವರ್ಷಾಂತ್ಯದಲ್ಲಿ ಗುರು ಬಲ, ವಸ್ತ್ರಾಭರಣ ಯೋಗ, ಧರ್ಮ ಕಾರ್ಯದಲ್ಲಿ ಆಸಕ್ತಿ, ಸಜ್ಜನರ ಸಹವಾಸ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಶುಭ ಕಾರ್ಯ ಯತ್ನ ಸಫಲ, ಗೌರವ ಸನ್ಮಾನ ಪ್ರಾಪ್ತಿ.
    ಅದೃಷ್ಟ ಸಂಖ್ಯೆ: 1,3,5,9
    ಶುಭ ಬಣ್ಣ : ಕೆಂಪು, ಹಳದಿ, ಬಿಳಿ, ಹಸಿರು

    ಕನ್ಯಾ: ಗುರು ಶುಭಕಾರಕ, ಶನಿ ಅಶುಭಕಾರಕ, ಮಿಶ್ರ ಫಲ ಯೋಗ, ಆರೋಗ್ಯ ಸುಧಾರಣೆ, ಯತ್ನ ಕಾರ್ಯದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸತ್ಕಾರ್ಯದಲ್ಲಿ ಆಸಕ್ತಿ, ಸಜ್ಜನರ ಸಹವಾಸ ಮಾಡುವಿರಿ, ಗೌರವ ಸನ್ಮಾನ, ಶುಭ ಫಲ ಯೋಗ, ದಾಯಾದಿಗಳ ಕಲಹ, ಮನಃಸ್ತಾಪ, ಸ್ಥಳ ಬದಲಾವಣೆ, ಪಾಪ ಕಾರ್ಯದಲ್ಲಿ ಆಸಕ್ತಿ, ವೃಥಾ ತಿರುಗಾಟ, ಅಶುಭ ಫಲ.
    ಅದೃಷ್ಟ ಸಂಖ್ಯೆ: 3,5,6,8
    ಶುಭ ಬಣ್ಣ : ಮಾಣಿಕ್ಯ, ಪಚ್ಚೆ, ವಜ್ರ

    ತುಲಾ: ಈ ವರ್ಷ ಗುರು ಶನಿ ಅಶುಭಕಾರಕ, ಶುಭ ಫಲಗಳು ಕಡಿಮೆ, ಸ್ಥಳ ಬದಲಾವಣೆ, ಬಂಧು ಮಿತ್ರರಿಂದ ತೊಂದರೆ, ಉದ್ಯೋಗದಲ್ಲಿ ಕಿರುಕುಳ, ಹಣಕಾಸು ಮುಗ್ಗಟ್ಟು, ಸರ್ಕಾರಿ ಕೆಲಸದಲ್ಲಿ ಅಡಚಣೆ, ಆರೋಗ್ಯದಲ್ಲಿ ವ್ಯತ್ಯಾಸ, ವೃಥಾ ಖರ್ಚು, ಅಶುಭ ಫಲ.
    ಅದೃಷ್ಟ ಸಂಖ್ಯೆ: 5,6,8
    ಶುಭ ಬಣ್ಣ : ಬಿಳಿ, ಹಸಿರು, ಕಪ್ಪು

    ವೃಶ್ಚಿಕ: ಗುರು ಅಶುಭಕಾರಕ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಬಂಧು ಮಿತ್ರರಲ್ಲಿ ವಿರೋಧ, ಪರಸ್ಥಳ ವಾಸ, ವೃಥಾ ತಿರುಗಾಟ, ಹಣಕಾಸು ತೊಂದರೆ, ಶನಿ ಶುಭಫಲ ಕರುಣಿಸುವನು, ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಪ್ರಗತಿ, ಸತ್ಕಾರ್ಯದಲ್ಲಿ ಆಸಕ್ತಿ, ಶುಭ ಕಾರ್ಯ ಯತ್ನದಲ್ಲಿ ಅನುಕೂಲ, ಶುಭ ಫಲ ಯೋಗ ಲಭಿಸುವುದು.
    ಅದೃಷ್ಟ ಸಂಖ್ಯೆ: 1,2,3,9
    ಬಣ್ಣ : ಕೆಂಪು, ಹಳದಿ, ಕೇಸರಿ

    ಧನಸ್ಸು: ಗುರು ಶುಭಕಾರಕನಾಗಿರುವನು, ಮಾನಸಿಕ ನೆಮ್ಮದಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಗೌರವ ಸನ್ಮಾನ ಪ್ರಾಪ್ತಿ, ತೀರ್ಥಯಾತ್ರೆ ಯೋಗ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ವ್ಯವಹಾರದಲ್ಲಿ ಪ್ರಗತಿ, ಬಂಧು ಮಿತ್ರರಿಂದ ಸಹಾಯ, ವರ್ಷ ಪೂರ್ತಿ ಶನಿ ಅಶುಭದಾಯಕ, ಮಾನಸಿಕ ಚಿಂತೆ, ವ್ಯಾಪಾರ ನಷ್ಟ, ಆರೋಗ್ಯ ವ್ಯತ್ಯಾಸ, ವೃಥಾ ತಿರುಗಾಟ,
    ಸೇವಕರಿಂದ ತೊಂದರೆ, ಅಶುಭ ಫಲ.
    ಅದೃಷ್ಟ ಸಂಖ್ಯೆ: 1,3,8,9
    ಶುಭ ಬಣ್ಣ : ಹಳದಿ, ಕೆಂಪು, ಕೇಸರಿ, ತಾಮ್ರ

    ಮಕರ: ವರ್ಷ ಪೂರ್ತಿ ಗುರು-ಶನಿ ಅಶುಭಕಾರಕ, ಶುಭ ಫಲಗಳು ಲಭಿಸುವುದಿಲ್ಲ, ವೃಥಾ ತಿರುಗಾಟ, ಧನ ವ್ಯಯ, ಮನಃಸ್ತಾಪ, ಬಂಧು ಮಿತ್ರರಲ್ಲಿ ವಿರೋಧ, ಸರ್ಕಾರದಿಂದ ತೊಂದರೆ, ಆರೋಗ್ಯ ವ್ಯತ್ಯಾಸ, ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ ಲಾಭ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ.
    ಅದೃಷ್ಟ ಸಂಖ್ಯೆ: 4,5,6,8
    ಶುಭ ಬಣ್ಣ : ನೀಲ, ಹಸಿರು, ಹಳದಿ

    ಕುಂಭ: ಈ ವರ್ಷ ಗುರು-ಶನಿ ಅಶುಭಕಾರಕ, ಸ್ಥಳ ಬದಲಾವಣೆ, ಮಾನಹಾನಿ, ಬಂಧುಗಳಲ್ಲಿ ಕಲಹ, ಯತ್ನ ಕಾರ್ಯದಲ್ಲಿ ವಿಘ್ನ, ಮನಸ್ಸಿನಲ್ಲಿ ಸದಾ ಚಿಂತೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅಧಿಕವಾದ ತಿರುಗಾಟ, ಧನವ್ಯಯ, ಅಲ್ಪ ಪ್ರಗತಿ, ವ್ಯಾಪಾರ ವ್ಯವಹಾರದಲ್ಲಿ ಶುಭ, ಕೋರ್ಟ್ ಕೇಸ್‍ಗಳಿಂದ ತೊಂದರೆ.
    ಅದೃಷ್ಟ ಸಂಖ್ಯೆ: 5,6,8
    ಶುಭ ಬಣ್ಣ : ನೀಲಿ, ಹಸಿರು, ಅರಿಶಿಣ

    ಮೀನ: ಗುರು, ಶನಿ ಶುಭದಾಯಕ, ಒಳ್ಳೆಯ ಫಲಗಳು ಲಭಿಸುವುದು, ಆರೋಗ್ಯದಲ್ಲಿ ಸುಧಾರಣೆ, ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ, ಕುಟುಂಬದಲ್ಲಿ ಸೌಖ್ಯ, ಯತ್ನ ಕಾರ್ಯದಲ್ಲಿ ಪ್ರಗತಿ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ವಿವಾಹ ಭಾಗ್ಯ, ಶುಭ ಕಾರ್ಯ ಯಶಸ್ಸು, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಧರ್ಮ ಕಾರ್ಯದಲ್ಲಿ ಆಸಕ್ತಿ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ, ಬಂಧು ಮಿತ್ರರಿಂದ ಸಹಾಯ, ಶುಭ ಫಲಗಳು ಲಭಿಸುವುದು.
    ಅದೃಷ್ಟ ಸಂಖ್ಯೆ: 1,3,8,9
    ಶುಭ ಬಣ್ಣ : ಹಳದಿ, ಕೆಂಪು, ಕೇಸರಿ, ತಾಮ್ರ

  • ಮಂಜಿನ ನಗರಿಯಲ್ಲಿ ಯುಗಾದಿ ಸಂಭ್ರಮ- ಜನಮನ ಸೆಳೆದ ದೈವ ಕೋಲಾರಾಧನೆ

    ಮಂಜಿನ ನಗರಿಯಲ್ಲಿ ಯುಗಾದಿ ಸಂಭ್ರಮ- ಜನಮನ ಸೆಳೆದ ದೈವ ಕೋಲಾರಾಧನೆ

    ಮಡಿಕೇರಿ: ಮಂಜಿನ ನಗರಿಯಲ್ಲಿ ವಿಶೇಷವಾಗಿ ಯುಗಾದಿ ಹಬ್ಬವನ್ನು ಆಚರಿಸಲಾಗಿದ್ದು, ಬೇವು- ಬೆಲ್ಲದ ಸಂಗಮದ ಈ ಹೊಸ ವರ್ಷವನ್ನು ವಿಶೇಷ ದೈವ ಕೋಲಾರಾಧನೆ ಮೂಲಕ ಬರಮಾಡಿಕೊಳ್ಳಲಾಯಿತು.

    ಪ್ರಕೃತಿ ಮಡಿಲು ಕೊಡಗಿನಲ್ಲಿ ನಡೆದ ದೇವರ ಉತ್ಸವ ಯುಗಾದಿಯ ಬೆರಗನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ಹೌದು, ರಾತ್ರಿಯಿಡೀ ನಡೆಯೋ ಹತ್ತಾರು ದೈವ ಕೋಲಗಳ ಹಾಡು ಕುಣಿತ, ಸುಮಧುರ ಚಂಡೆನಾದ, ಧಗಧಗಿಸೋ ಬೆಂಕಿಯಲ್ಲಿ ಮಿಂದೇಳೋ ಕೋಲಗಳ ಕಸರತ್ತು ಮಂಜಿನ ನಗರಿಯ ಯುಗಾದಿ ಹಬ್ಬಕ್ಕೆ ಹೊಸ ಚೆಲುವನ್ನು ತಂದುಕೊಟ್ಟಿತ್ತು. ನಾನಾ ಬಗೆಯ ದೈವ ಕೋಲದ ವೈಭವೋಪೇತ ದೃಶ್ಯವಾಳಿಗಳು ದೇವಲೋಕವೇ ಧರೆಗಿಳಿಸಿದಂತೆ ಕಾಣಿಸುತ್ತಿತ್ತು.

    ತನ್ನ ಜಾನಪದ ಕಲೆಗಳ ಮೂಲಕ ಜಗತ್ತನ್ನು ಸೆಳೆಯೋ ಕೊಡಗಿನಲ್ಲೀಗ ಕೋಲಾರಾದನೆಯ ಸಮಯ. ಕೇರಳ ಮೂಲದ ದೇವರುಗಳು ಕೊಡಗಿನಲ್ಲಿಯೂ ನೆಲೆಸಿದ್ದು ಬೇಸಿಗೆಯಲ್ಲಿ ಎಲ್ಲೆಡೆ ದೇವರ ತೆರೆ ಗರಿಬಿಚ್ಚುತ್ತವೆ. ಮಡಿಕೇರಿಯ ಮುತ್ತಪ್ಪ ದೇವರ ಜಾತ್ರೆ ಇಡೀ ಜಿಲ್ಲೆಯಲ್ಲಿ ವಿಶಿಷ್ಟವಾದದ್ದು, ಮೂರು ದಿನಗಳ ಈ ಜಾತ್ರಾ ಮಹೋತ್ಸವ ನಡೆಯುತ್ತದೆ. ಜಾತ್ರೆಯ ಎರಡನೇ ದಿನದಂದು 14 ದೇವರ ಕೋಲಗಳು ನಡೆಯುತ್ತವೆ. ಮುತ್ತಪ್ಪನ್, ತಿರುವಪ್ಪನ್, ವಿಷ್ಣುಮೂರ್ತಿ, ಶ್ರೀ ಶಿವಭೂತಂ, ಕುಟ್ಟಿಚಾತನ್, ಪೊವ್ವಾದಿ, ಮಹಾಗುಳಿಗ, ಶ್ರೀಯಕ್ಷಿ ದೈವಕೋಲಗಳು ರಾತ್ರಿಯಿಡಿ ಬಗೆ ಬಗೆಯ ವೇಷಧರಿಸಿ, ಕೇರಳದ ವಿಶಿಷ್ಟ ಚೆಂಡೆವಾದ್ಯಕ್ಕೆ ಕುಣಿಯುತ್ತಾ ಭಕ್ತರನ್ನು ಭಾವಪರವಶಗೊಳಿಸಿದ್ದಾರೆ.

    ಅಷ್ಟೇ ಅಲ್ಲದೆ ಮುಂಜಾನೆ ವೇಳೆಗೆ ಭಕ್ತರು ಹರಕೆಯಾಗಿ ಸಲ್ಲಿಸಿರೋ ಸೌದೆಯಿಂದ ನಿರ್ಮಾಣವಾಗಿರೋ ಬೃಹತ್ ಬೆಂಕಿ ಕೊಂಡದ ಮೇಲೆ ಬೀಳೋ ವಿಷ್ಣುಮೂರ್ತಿ ಕೋಲ ಭಕ್ತರನ್ನು ಮೈನವಿರೇಳಿಸುವಂತೆ ಮಾಡಿದೆ. ದೈವದ ಪವಾಡಕ್ಕೆ ಮನಸೋಲೋ ಭಕ್ತರು ಬೇಡಿದ ವರವ ಕೊಡೋ ದೇವರಿಗೆ ವಂದಿಸುತ್ತಾರೆ. ಹಲವು ದಶಕಗಳಿಂದ ಈ ವಿಶಿಷ್ಟ ದೈವಕೋಲಾರಾಧನೆಗೆ ನಡೆಯುತ್ತಿದ್ದು, ಇದನ್ನು ನೋಡಲು ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ.

    ತೆಂಗಿನ ಗರಿಗಳಿಂದ ಸಿದ್ಧಗೊಂಡ ವಿಶಿಷ್ಟ ಸಿರಿಯನ್ನು ಧರಿಸಿರೋ ವಿಷ್ಣುಮೂರ್ತಿ ಕೋಲ ಚೆಂಡೆನಾದಕ್ಕೆ ನರ್ತಿಸುತ್ತಾ ಬೆಂಕಿಮೇಲೆ ಬೀಳುತ್ತಾ, ಜೊತೆಗಿರೋ ಸಹಚರರು ಎಳೆದಂತೆಲ್ಲಾ ಅಗ್ನಿಪ್ರವೇಶ ಮಾಡಿ ದೈವ ಭಕ್ತರ ಮುಂದೆ ತನ್ನ ಪವಾಡವನ್ನು ಪ್ರದರ್ಶನ ಮಾಡುತ್ತೆ. ತಲೆಗೆ ತಲೆಪ್ಪಾಡಿ, ಕೈಗೆ ಗಗ್ಗರ, ಸೊಂಟಕ್ಕೆ ವಿಶಿಷ್ಟ ಡಾಬು, ಮುಖಕ್ಕೆ ಅಲಂಕಾರ ಮಾಡಿಕೊಂಡು ಬಗೆ ಬಗೆಯ ದೈವ ಕೋಲಗಳು ಸಭಿಕರ ಮುಂದೆ ನರ್ತಿಸಿದವು. ಒಂದೊಂದು ಕೋಲವೂ ಒಂದೊಂದು ರೀತಿಯಲ್ಲಿ ನರ್ತಿಸುತ್ತಾ ಭಕ್ತರನ್ನು ರಂಜಿಸೋದು ಇಲ್ಲಿನ ವಿಶೇಷವಾಗಿದೆ. ಬೆಳಗಿನ ಜಾವ 3ಗಂಟೆ ಸುಮಾರಿಗೆ ಎಂಟ್ರಿಕೊಡೋ ಗುಳಿಗನ್ ದೈವ ಕೋಲ 10 ಅಡಿ ಎತ್ತರದ ತೆಲೆಪ್ಪಾಡಿಯೊಂದಿಗೆ ನೃತ್ಯ ಮಾಡೋದು ಎಲ್ಲರ ಗಮನ ಸೆಳೆದಿದೆ. ಈ ಕೋಲಗಳ ಮೂಲ ದೇವರು ಮುತ್ತಪ್ಪನ್ ಮತ್ತು ತಿರುವಪ್ಪನ್ ಹಾಗು ಕುಟ್ಟಿಚಾತನ್. ಕೆಂಪುಬಣ್ಣದ ವಿಶಿಷ್ಟ ವೇಷದಲ್ಲಿ ಬರುವ ಈ ಕೋಲಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಆಗಿತ್ತು. ಅಲ್ಲದೆ ದೇವಾಲಯದ ಆವರಣದಲ್ಲಿ ಕುಣಿದು ಕುಪ್ಪಳಿಸೋ ಮುತ್ತಪ್ಪನ್, ನೆರದಿರೋ ಭಕ್ತರ ಪ್ರಶ್ನೆಗಳಿಗೆ ಉತ್ತರಿಸುವ ಪರಿ ಭಕ್ತರ ಮನ ಗೆದ್ದಿದೆ.

    ಈ ದೈವ ಕೋಲಾರಾಧನೆಗೆ ಕೇರಳದ 38 ಜನರ ತಂಡ ಒಟ್ಟು 14 ದೈವಕೋಲಗಳಿಗೆ ಜೀವ ತುಂಬಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಶಿವನ ಸಂಕೇತವಾದ ಮುತ್ತಪ್ಪ ಹಾಗು ವಿಷ್ಣುವಿನ ಸಂಕೇತವಾದ ತಿರುವಪ್ಪನ್ ಇಲ್ಲಿ ನೆಲೆಸಿರೋದ್ರಿಂದ ಭಕ್ತರ ಎಲ್ಲಾ ಬೇಡಿಕೆಗಳು ಈಡೇರುತ್ತವೆ ಎಂಬುವುದು ಭಕ್ತರ ನಂಬಿಕೆ.

    ಮಂಜಿನ ನಗರಿ ಮಡಿಕೇರಿಯಲ್ಲಿ ನಡೆದ ಈ ವಿಶೇಷ ಉತ್ಸವಕ್ಕೆ ರಾತ್ರಿಯಿಡೀ ನೆತ್ತಿ ಮೇಲೆ ಸುರಿಯೋ ಮಂಜನ್ನ ಲೆಕ್ಕಿಸದೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ವಿಶೇಷ ಅಲಂಕಾರಗೊಂಡಿದ್ದ ದೇವಾಲಯದ ಆವರಣದಲ್ಲಿ ದೈವಗಳು ಕುಣಿದು ನಲಿಯುತ್ತಿರುವುದನ್ನ ಕಣ್ತುಂಬಿಕೊಳ್ಳಲು ಭಕ್ತರಿಗೆ ದೇವ ಲೋಕವೇ ಧರೆಗಿಳಿದ ಅನುಭವವಾಗಿದೆ ಎಂದರೆ ಸುಳ್ಳಾಗಲ್ಲ. ಬಗೆ ಬಗೆಯ ವೈವಿಧ್ಯಮಯ ನೃತ್ಯಗಳನ್ನು ಮಾಡುತ್ತಾ ಭಕ್ತರಿಗೆ ದರ್ಶನ ನೀಡೋ ದೈವವನ್ನು ಕಣ್ಣು ಮಿಟುಕಿಸದೆ ನೋಡೋ ಭಕ್ತಗಣ ರಾತ್ರಿಯಿಡೀ ದೇವರನ್ನು ನೆನೆಯುತ್ತಾ ಭಕ್ತಿಯ ಅಲೆಯಲ್ಲಿ ಮಿಂದೆದಿದ್ದಾರೆ.

  • ಬೇವು-ಬೆಲ್ಲ ತಿಂದು ಯುಗಾದಿಯ ವಿಶೇಷತೆ ತಿಳಿಯಿರಿ

    ಬೇವು-ಬೆಲ್ಲ ತಿಂದು ಯುಗಾದಿಯ ವಿಶೇಷತೆ ತಿಳಿಯಿರಿ

    ಯುಗಾದಿ ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ಹಿಂದಿನ ವರ್ಷದ ಸಾಧನೆಯನ್ನು ಪರಿಶೀಲಿಸಿ, ಈ ವರ್ಷಕ್ಕೆ ಬೇಕಾದ ಸಂವಿಧಾನನ್ನು ವಿಧಾಯ ಪೂರ್ವಕವಾಗಿ ಹಾಕಿಕೊಳ್ಳುವ ದಿನ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ, ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.

    ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ‘ಯುಗಾದಿ’ ಎಂಬ ಪದ ವ್ಯುತ್ಪತ್ತಿಯಾಗಿದೆ. ಈ ಯುಗಾದಿ ಕೃತಯುಗದ ಚೈತ್ರ, ಶುದ್ಧ, ಪಾಡ್ಯ, ತಿಥಿ ದಿನದಂದು ಪ್ರಾರಂಭವಾಯಿತು ಎಂಬ ಪ್ರತೀತಿ ಇದೆ. ಜೊತೆಗೆ ಬ್ರಹ್ಮ ದೇವನು ಆ ದಿನದಿಂದಲೇ ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ನಂಬಿಕೆಯೂ ಇದೆ. ಋತುಗಳು, ಗ್ರಹಗಳು, ನಕ್ಷತ್ರಗಳು ಈ ದಿನ ಸೃಷ್ಟಿ ಆಯಿತು ಎನ್ನುವ ನಂಬಿಕೆಯೂ ಇದೆ.

    ಯುಗಾದಿ ಹಬ್ಬವನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಜನ ಚಾಂದ್ರಮಾನ ಮತ್ತು ಸೌರಮಾನ ಯುಗಾದಿ ಆಚರಿಸುತ್ತಾರೆ. ಹುಣ್ಣಿಮೆ ದಿನ ಚಂದ್ರನು ಯಾವ ನಕ್ಷತ್ರದಲ್ಲಿ ಇರುವನೋ ಆ ನಕ್ಷತ್ರದ ಹೆಸರಿನಿಂದ ಆ ಮಾಸ ಆರಂಭವಾಗುತ್ತದೆ.

    ಚಾಂದ್ರಮಾನ ಯುಗಾದಿ:
    ಚಿತ್ತ ನಕ್ಷತ್ರ ಇದ್ದರೆ ಚೈತ್ರ ಮಾಸ, ವಿಶಾಖ ನಕ್ಷತ್ರ ಇದ್ದರೆ ವೈಶಾಖ ಮಾಸ, ಜೇಷ್ಠ ನಕ್ಷತ್ರ-ಜೇಷ್ಠ ಮಾಸ, ಉತ್ತರಾಷಡ ನಕ್ಷತ್ರ-ಆಷಾಢ ಮಾಸ, ಶ್ರವಣ ನಕ್ಷತ್ರ- ಶ್ರಾವಣ ಮಾಸ, ಪೂರ್ವಭದ್ರ ನಕ್ಷತ್ರ-ಭಾದಪ್ರದ ಮಾಸ, ಅಶ್ವಿನಿ ನಕ್ಷತ್ರ-ಅಶ್ವಯುಜ ಮಾಸ, ಕೃತಿಕಾ ಮಾಸ-ಕಾರ್ತಿಕ ಮಾಸ, ಮೃಗಶಿರಾ ನಕ್ಷತ್ರ-ಮಾರ್ಗಶಿರ ಮಾಸ, ಪುಷ್ಯ ನಕ್ಷತ್ರ-ಪುಷ್ಯ ಮಾಸ, ಮಖಾ ನಕ್ಷತ್ರ-ಮಾಘ ಮಾಸ ಮತ್ತು ಉತ್ತರ ನಕ್ಷತ್ರ-ಪಾಲ್ಗುಣ ಮಾಸ ಹೀಗೆ 12 ಮಾಸಗಳು ಆಯಾ ನಕ್ಷತ್ರಗಳ ಹೆಸರಿನಿಂದ ಕರೆಯುತ್ತಾರೆ. ಈ ರೀತಿ ಚಂದ್ರನಿಂದಲೇ ಎಲ್ಲಾ ಲೆಕ್ಕಚಾರ ಮಾಡುವುದರಿಂದ ಇದಕ್ಕೆ ಚಂದ್ರಮಾನ ಯುಗಾದಿ ಎಂದು ಕರೆಯಲಾಗುತ್ತದೆ. ಚಾಂದ್ರಮಾನ ಯುಗಾದಿಯನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ.

    ಸೌರಮಾನ ಯುಗಾದಿ:
    ರವಿ ಗ್ರಹವು ಒಂದು ಕ್ರಾಂತಿಯಿಂದ ಮತ್ತೊಂದು ರಾಶಿಯ ಕ್ರಾಂತಿವರೆಗೆ ಭ್ರಮಣ ಮಾಡಲು ಸುತ್ತುವ ಕಾಲಕ್ಕೆ ಮಾಸ ಎಂದು ಹೇಳಲಾಗುತ್ತದೆ. ಅಂದರೆ ರವಿಯು ಅಮಾವಾಸ್ಯೆ ದಿವಸ ಮೇಷ ರಾಶಿಯಲ್ಲಿದ್ದರೆ ಆ ಮಾಸವನ್ನು ಚೈತ್ರ ಮಾಸ ಎನ್ನುವರು. ವೃಷಭ ರಾಶಿಗೆ ರವಿ ಬಂದರೆ ಅದನ್ನು ವೈಶಾಖ ಮಾಸ ಎಂದು ಕರೆಯಲಾಗುತ್ತದೆ. ಮಿಥುನ-ಜೇಷ್ಠ ಮಾಸ, ಕಟಕಕ್ಕೆ-ಆಷಾಢ ಮಾಸ, ಸಿಂಹ-ಶ್ರಾವಣ ಮಾಸ, ಕನ್ಯಾ-ಭಾದ್ರಪದ, ತುಲಾ-ಅಶ್ವಿಜ ಮಾಸ, ವೃಶ್ಚಿಕ-ಕಾರ್ತಿಕ ಮಾಸ, ಧನಸ್ಸು-ಮಾರ್ಗಶಿರಾ, ಮಕರ-ಪುಷ್ಯ ಮಾಸ, ಕುಂಭ-ಮಾಘ ಮಾಸ ಮತ್ತು ಮೀನ-ಪಾಲ್ಗುಣ ಮಾಸ ಎಂದು ಕರೆಯಲಾಗುತ್ತದೆ. ಈ ರೀತಿ ರವಿ ಗ್ರಹದಿಂದ ಎಲ್ಲ ಲೆಕ್ಕಾಚಾರ ಮಾಡುವುದರಿಂದ ಸೌರಮಾನ ಯುಗಾದಿ ಎಂದು ಕರೆಯಲಾಗುತ್ತದೆ.

    ಇವರೆಡು 15 ದಿನಗಳ ಅಂತರದಲ್ಲಿ ಬರುತ್ತವೆ. ಈ ಸೌರಮಾನ ಯುಗಾದಿಯನ್ನು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಆಚರಿಸುತ್ತಾರೆ. ವೇದ ಕಾಲದಲ್ಲಿ ಸೌರಮಾನ ಅನುಸಾರವಾಗಿ ಮಾಸಗಳು ಪ್ರಚಾರದಲ್ಲಿದ್ದವು.

    ಇತಿಹಾಸ:
    ಯುಗಾದಿಯ ಚಂದ್ರಮಾನ ಪದ್ಧತಿಯ ಹೊಸ ವರ್ಷದ ಪ್ರಾರಂಭದ ದಿನ. ವರ್ಷದ ಫಸಲು ಕೈಗೆ ಬಂದು, ಆಗ ತಾನೇ ಸುಗ್ಗಿ ಮುಗಿದು ಹಿಗ್ಗಿನ ಬುಗ್ಗೆಯಾಗಿರುವ ಜನರಿಗೆ ‘ಉಂಡಿದ್ದೆ ಉಗಾದಿ ಮಿಂದಿದ್ದೆ ದೀಪಾವಳಿ’. ಈ ಹಬ್ಬದ ಹಿರಿಮೆ-ಗರಿಮೆ ಮಹಿಮೆಗಳನ್ನು ಅಥರ್ವ ವೇದ, ಶತಪಥಬ್ರಾಹಣ, ಧರ್ಮಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಹಾಗೂ ಹಲವಾರು ಪುರಾಣಗಳಲ್ಲಿ ಹೇಳಲಾಗಿದೆ.

    ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ. ಈ ದಿನ ಶ್ರೀರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು, ರಾಮರಾಜ್ಯವಾಳಲು ಆರಂಭಿಸಿದ. ಅಯೋಧ್ಯೆಯ ಪ್ರಜೆಗಳು ಸಂತೋಷದಿಂದ ಮನೆಯ ಮುಂದೆ ವಿಜಯ ಪತಾಕೆಯನ್ನು ಹಾರಿಸಿದರು. ಇಂದಿಗೂ ಈ ಹಬ್ಬದ ದಿನ ಮನೆಯ ಮುಂದೆ ಬಾವುಟ ಹಾರಿಸಿ ನಲಿಯುವ ಪದ್ಧತಿ ಇದೆ. ಅದಕ್ಕಾಗಿಯೇ ಇದಕ್ಕೆ ಗುಡಿಪಾಡ್ಯ (ಗುಡಿ=ಬಾವುಟ) ಎನ್ನುತ್ತಾರೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಯುಗಾದಿಯನ್ನು ಗುಡಿಪಾಡ್ಯ ಹೆಸರಿನಲ್ಲಿ ಆಚರಿಸಲಾಗುತ್ತದೆ

    ರೋಮನ್ನರಿಗೆ ಜನವರಿಯ ಮೊದಲ ದಿನವಿದ್ದಂತೆ, ಹಿಂದೂಗಳಿಗೆ ‘ಯುಗಾದಿ’ ಆದಿಯ ದಿನವಾಗಿದೆ. ಯುಗಾದಿಯ ಶಕ್ತಿ ಉಪವಾಸನೆಯ ಆರಂಭದ ದಿನವಾಗಿದ್ದು, ಈ ದಿನದಿಂದ ವಸಂತ ನವರಾತ್ರಿ ಆರಂಭವಾಗುತ್ತದೆ. ವರ್ಷಾಧಿಯ ವಸಂತ ಮತ್ತು ವರ್ಷಮಧ್ಯದ ಶರದೃತುಗಳ ಆರಂಭ ಕಾಲ ದೇವತಾನುಗ್ರಹ ಪ್ರಾಪ್ತಿಗೆ ಶ್ರೇಷ್ಠವೆಂದು ನಂಬಿಕೆ ಇದೆ. ಅಂದರೆ ಯುಗಾದಿಯ ದಿನ ಬೆಳಗ್ಗೆ ಎದ್ದು ಶ್ರೀರಾಮನನ್ನು ಸ್ಮರಿಸಿ, ಮಂಗಳ ಸ್ನಾನ ಮಾಡಿ, ನವವಸ್ತ್ರ ಧರಿಸಿ, ಹಿರಿಯರ ಆಶೀರ್ವಾದ ಪಡೆದು ಬೇವು-ಬೆಲ್ಲ ತಿನ್ನಲಾಗುತ್ತದೆ.

    ಯುಗಾದಿಯ ವಿಶೇಷತೆ:
    ಈ ಹಬ್ಬದಂದು ಬೆಲ್ಲ ಮತ್ತು ಕಹಿಯಾದ ಬೇವು ಮಿಶ್ರಣವನ್ನು ಸೇವಿಸುವ ಆಚರಣೆ ಹಲವು ಕಡೆಗಳಲ್ಲಿ ಇದೆ. ಬೆಲ್ಲವನ್ನು ಎಲ್ಲರೂ ಸುಖಕರ, ಕಹಿ ಬೇವನ್ನು ದುಃಖಕರ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಜೀವನವು ಕ್ಷಣಕಾಲ ಉರಿದು ನಾಶವಾಗುವ ಮೇಣದ ಬತ್ತಿಯಲ್ಲ. ಸಂಪೂರ್ಣ ಸುಖ ಮತ್ತು ದು:ಖದ ನೆಲೆಯೂ ಅಲ್ಲ. ಪ್ರಕೃತಿಯ ಕತ್ತಲು-ಬೆಳಕಿನ ಚೆಲ್ಲಾಟದಂತೆಯೇ ಸುಖ-ದುಃಖ, ಶೀತ-ಉಷ್ಣ, ಲಾಭ-ನಷ್ಟಗಳಿಂದಲೂ ಬದುಕು ಕೂಡಿದೆ. ಇವುಗಳ ಸಂಕೇತವೇ ಬೇವು ಬೆಲ್ಲ.

    ಬೇವು-ಬೆಲ್ಲದ ವಿಶೇಷತೆ ಏನು?
    * ಬೇವು-ಬೆಲ್ಲ ವೈದ್ಯಕೀಯ ಗುಣಗಳನ್ನು ಹೊಂದಿದೆ.
    * ಬೇವಿನ ಎಲೆಗಳನ್ನು ಸೇವಿಸುವದರಿಂದ ಸರ್ವ ಅನಿಷ್ಟಗಳೂ ನಾಶವಾಗುತ್ತದೆ.
    * ಮಾನವ ವಜ್ರದ್ರೇಹಿಯಾಗುತ್ತಾನೆ.
    * ಸಂಪತ್ತು ಉಂಟಾಗುತ್ತದೆ.
    * ಆಯಸ್ಸು ವೃದ್ಧಿಯಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.

    ಪಂಚಾಂಗ ಶ್ರವಣ:
    ಸಾಯಾಂಕಾಲ ಪಂಚಾಂಗ ಶ್ರವಣ ಮಾಡುವುದು ಈ ಹಬ್ಬದ ಮತ್ತೊಂದು ವಿಶೇಷ ಆಚರಣೆಯಾಗಿದೆ. ಪಂಚಾಂಗದ ಪ್ರಕಾರ ಫಲಾಫಲಗಳನ್ನು, ಉಪಯುಕ್ತ ದಿನಗಳನ್ನೂ ತಿಳಿದುಕೊಂಡು ವ್ಯಾಪಾರ, ವಹಿವಾಟು, ವ್ಯವಸಾಯ ನಿಯೋಜಿಸಿಕೊಳ್ಳಬಹುದು. ಯುಗಾದಿಯಂದು ಪಾಡ್ಯ ಬರುವಾಗ ಹೊಸ ಸಂವತ್ಸರದ ತಿಥಿ, ವಾರ, ನಕ್ಷತ್ರಾದಿಗಳು ಉದಯಿಸುತ್ತವೆ. ಆದ್ದರಿಂದ ಪಾಡ್ಯಮಿಯಂದು ಹಬ್ಬದ ಆಚರಣೆ ಮಾಡುತ್ತಾರೆ.

    ಯುಗಾದಿಯ ದಿನದಂದು ರೈತರು ಹೊಸದಾಗಿ ಸಿದ್ಧಪಡಿಸಿರುವ ಮರದ ನೇಗಿಲುಗಳನ್ನು ಪೂಜಿಸಿ, ಬಿತ್ತನೆ ಮಾಡುವ ಎಲ್ಲಾ ಧಾನ್ಯಗಳ ಮಾದರಿಯ ಬೆಳೆಯನ್ನು ಬಿತ್ತಿ ಪೂಜಿಸುತ್ತಾರೆ. ಈ ಮಾದರಿಯ ಬೆಳೆ ಹುಲುಸಾಗಿ ಬಂದರೆ ಆ ವರ್ಷದ ಬೆಳೆಯೂ ಸಮೃದ್ಧ ಎಂದರ್ಥ. ಸೌರಮಾನ ಯುಗಾದಿಯನ್ನು ಸೌರಮಾನದ ರೀತಿಯಲ್ಲಿ ಆಚರಿಸುವವರು. ಸೂರ್ಯ ಮೇಷ ಸಂಕ್ರಾಂತಿ ವೃತ್ತವನ್ನ ಪ್ರವೇಶಿಸುವ ದಿನ. ಈ ಹಬ್ಬದ ಆಚರಣೆ ಸಹ ಚಂದ್ರಮಾನ ಯುಗಾದಿಯಂತೆಯೇ ನಡೆಯುತ್ತದೆ. ಯುಗಾದಿಯ ದಿನ ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಳ್ಳುವುದು ವಾಡಿಕೆ.

  • ಶಿವಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿಸಿಕೊಂಡ ಸ್ವಾಮೀಜಿ- ಫೋಟೋ ವೈರಲ್

    ಶಿವಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿಸಿಕೊಂಡ ಸ್ವಾಮೀಜಿ- ಫೋಟೋ ವೈರಲ್

    ನೆಲಮಂಗಲ: ವರ್ಷದಲ್ಲಿ ಯುಗಾದಿ ಹಬ್ಬದಂದು ಮಾತ್ರ ಮಾತನಾಡುವ ಮೌನ ಸ್ವಾಮೀಜಿ ಶಿವಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿಸಿಕೊಂಡಿರುವ ದೃಶ್ಯಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಹಿಮೆ ರಂಗನ ಬೆಟ್ಟದ ಬಳಿಯ ಜಡೆ ಶಾಂತಲಿಂಗೇಶ್ವರರ ಶಾಖಾ ಮಠದಲ್ಲಿ ಕಳೆದ ಭಾನುವಾರ ನಡೆದಿದೆ. ಅಂದು ಜಡೆ ಶಾಂತಲಿಂಗೇಶ್ವರರ ಶಾಖಾ ಮಠ ಉದ್ಘಾಟನೆ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು.

    ಸದ್ಭಾವನ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸ್ವಾಮೀಜಿ ಈ ವೇಳೆ ಲಿಂಗದ ಮೇಲೆ ಸ್ವಾಮೀಜಿ ಕಾಲಿಟ್ಟು ಪೂಜೆ ಮಾಡಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಶಿವಲಿಂಗವನ್ನು ಆರಾಧನೆ ಮಾಡುವ ಶ್ರೀಗಳ ಈ ರೀತಿಯ ಪೂಜೆ ಭಕ್ತರಲ್ಲಿ ಸಹ ಆಶ್ಚರ್ಯವನ್ನು ಮೂಡಿಸಿದೆ.