Tag: YTPS

  • ವಿದ್ಯುತ್ ಕ್ಷಾಮದಲ್ಲಿ ಕರುನಾಡು- ಆರ್‍ಟಿಪಿಎಸ್, ವೈಟಿಪಿಎಸ್‍ನಲ್ಲಿ ಇಲ್ಲ ಕಲ್ಲಿದ್ದಲು

    ವಿದ್ಯುತ್ ಕ್ಷಾಮದಲ್ಲಿ ಕರುನಾಡು- ಆರ್‍ಟಿಪಿಎಸ್, ವೈಟಿಪಿಎಸ್‍ನಲ್ಲಿ ಇಲ್ಲ ಕಲ್ಲಿದ್ದಲು

    – ಚಳಿಗಾಲದಲ್ಲೇ ಪವರ್ ಕಟ್

    ರಾಯಚೂರು: ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಎದುರಾಗಿದ್ದು, ಬೆಂಗಳೂರಿನಲ್ಲೇ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಹಳ್ಳಿಗಳ ಪಾಡಂತು ಕೇಳುವಂತಿಲ್ಲ. ಇದಕ್ಕೆಲ್ಲಾ ಕಾರಣ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ.

    ರಾಯಚೂರು ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ ಆರ್‍ಟಿಪಿಎಸ್ ಹಾಗೂ ವೈಟಿಪಿಎಸ್‍ ನಲ್ಲಿ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಉಳಿದ ವಿದ್ಯುತ್ ಸ್ಥಾವರಗಳಲ್ಲೂ ಉತ್ಪಾದನೆ ಇಳಿಮುಖವಾಗಿದ್ದು, 7,758 ಮೆಗಾ ವ್ಯಾಟ್ ವಿದ್ಯುತ್ ಗೆ ಬೇಡಿಕೆ ಇದೆ. ಆದರೆ ಉತ್ಪಾದನೆಯಾಗುತ್ತಿರೋದು ಮಾತ್ರ 4,408 ಮೆಗಾ ವ್ಯಾಟ್ ವಿದ್ಯುತ್ ಮಾತ್ರ. 1,720 ಮೆಗಾ ವ್ಯಾಟ್ ಉತ್ಪಾದನಾ ಸಾಮಥ್ರ್ಯದ ಆರ್‍ಟಿಪಿಎಸ್ ನಲ್ಲಿ ಕೇವಲ 1,307 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

    ರಾಯಚೂರು ನಗರಕ್ಕೆ 120 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯಿದ್ದು, ಕೇವಲ 60 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಹೀಗಾಗಿ ಸಣ್ಣ ಕೈಗಾರಿಕೆಗಳು, ಕಚೇರಿಗಳು ಹಾಗೂ ಸಾರ್ವಜನಿಕರು ಲೋಡ್ ಶೆಡ್ಡಿಂಗ್ ನಿಂದ ಬೇಸತ್ತು ಹೋಗಿದ್ದಾರೆ. ಮಿಲ್ ಗಳಿಗೆ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಿರುವ ರೈತರು ಮಿಲ್ ಗಳು ಬಂದಾಗಿರುವುದರಿಂದ ಹಣ ಸಿಗದೇ ಪರದಾಡುತ್ತಿದ್ದಾರೆ. ಆದರೆ ಜೆಸ್ಕಾಂ ಅಧಿಕಾರಿಗಳು ಮಾತ್ರ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಹೇಳುತ್ತಿದ್ದಾರೆ.

    ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಎದುರಾಗಿದೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡುವುದರಿಂದ ಕೇಂದ್ರ ಸರ್ಕಾರದ ಸಚಿವರ ಜೊತೆ ಸಮನ್ವಯತೆ ಸಾಧಿಸಿ ಕಲ್ಲಿದ್ದಲು ಸರಬರಾಜಿಗೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದರೆ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕವೇ ಕತ್ತಲ ಭಾಗ್ಯಕ್ಕೆ ಒಳಗಾಗೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

  • ಪರಿಹಾರ ನೀಡಿ ಕೈ ತೊಳೆದುಕೊಂಡ ಸರ್ಕಾರ- ಶಾಖೋತ್ಪನ್ನ ಘಟಕಕ್ಕೆ ಭೂಮಿ ಕೊಟ್ಟ ರೈತರಿಂದ ಧರಣಿ

    ಪರಿಹಾರ ನೀಡಿ ಕೈ ತೊಳೆದುಕೊಂಡ ಸರ್ಕಾರ- ಶಾಖೋತ್ಪನ್ನ ಘಟಕಕ್ಕೆ ಭೂಮಿ ಕೊಟ್ಟ ರೈತರಿಂದ ಧರಣಿ

    ರಾಯಚೂರು: ಜಿಲ್ಲೆಯ ಯರಮರಸ್ ನಲ್ಲಿರುವ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ವೈಟಿಪಿಎಸ್(ಕೆಪಿಸಿಎಲ್) ಸ್ಥಾಪನೆಗಾಗಿ ಭೂಮಿ ಕಳೆದುಕೊಂಡ ರೈತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

    ಶಾಖೋತ್ಪನ್ನ ಘಟಕ ಸ್ಥಾಪನೆಯ ವೇಳೆಯಲ್ಲಿ ಸರ್ಕಾರವು, ಭೂಮಿ ಕಳೆದುಕೊಂಡಿದ್ದ ರೈತರಿಗೆ ಪರಿಹಾರವನ್ನು ನೀಡಿ, ಉದ್ಯೋಗ ನೇಮಕಾತಿ ಮಾಡಿಕೊಳ್ಳವ ಭರವಸೆಗಳನ್ನು ನೀಡಿತ್ತು. ಆದರೆ ಸರ್ಕಾರ ಇದೂವರೆಗೂ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಭೂಮಿ ಕಳೆದುಕೊಂಡ ರೈತರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಒಂದು ವೇಳೆ ಸರ್ಕಾರ ಇದಕ್ಕೆ ಸ್ಪಂಧಿಸದಿದ್ದರೆ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲೆಯ ಚಿಕ್ಕಸುಗೂರು, ವಡ್ಲೂರು,ಕುಕನೂರು, ಯರಮರಸ್ ಗ್ರಾಮದ ರೈತರು ಕೆಪಿಸಿಎಲ್ ಗಾಗಿ ಸಾವಿರಾರು ಎಕರೆ ಜಮೀನು ಸರ್ಕಾರಕ್ಕೆ ನೀಡಿದ್ದರು. ಕೆಪಿಸಿಎಲ್ ಸ್ಥಾಪನೆ ವೇಳೆ ನೀಡಲಾಗಿರುವ ಭರವಸೆಗಳನ್ನು ಈಡೇರಿಸುವಂತೆ ನಿರಂತರವಾಗಿ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕರರು ಆರೋಪಿಸಿದ್ದು, ಹೀಗಾಗಿ ವೈಟಿಪಿಎಸ್ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

    ಕೆಪಿಸಿಎಲ್‍ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಕೆಲಸಕ್ಕೆ ತೆರಳದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಹಿನ್ನೆಲೆ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಇದನ್ನೂ ಓದಿ: ರಾಜ್ಯಕ್ಕೆ ಇಂದಿನಿಂದ ಹೊಸಬೆಳಕು: ರಾಯಚೂರಿನ ವೈಟಿಪಿಎಸ್ ಕಾರ್ಯಾರಂಭ 

     

     

  • ದೀಪದ ಕೆಳಗೆ ಕತ್ತಲು: ಪರಿಹಾರವಿಲ್ಲದೆ ಆತ್ಮಹತ್ಯೆ ಬೆದರಿಕೆಯೊಡ್ಡಿದ ವೈಟಿಪಿಎಸ್ ಭೂಸಂತ್ರಸ್ತರು

    ದೀಪದ ಕೆಳಗೆ ಕತ್ತಲು: ಪರಿಹಾರವಿಲ್ಲದೆ ಆತ್ಮಹತ್ಯೆ ಬೆದರಿಕೆಯೊಡ್ಡಿದ ವೈಟಿಪಿಎಸ್ ಭೂಸಂತ್ರಸ್ತರು

    ರಾಯಚೂರು : ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕೆ ಆಗ್ರಹಿಸಿ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ವೈಟಿಪಿಎಸ್‍ನ ಒಂದನೇ ಘಟಕದ ವಾಣಿಜ್ಯಿಕ ಕಾರ್ಯಾರಂಭ ಹಿನ್ನೆಲೆ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ನಾಯಕ್ ವಿದ್ಯುತ್ ಕೇಂದ್ರಕ್ಕೆ ಆಗಮಿಸಿದ್ದರು ಈ ವೇಳೆ ಭೂಸಂತ್ರಸ್ತರಾದ ರಾಘವೇಂದ್ರ, ತಿಮ್ಮಪ್ಪ, ರಾಘವೇಂದ್ರ ಸಾಗರ್ ಹೈವೋಲ್ಟೇಜ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದರು.

    ನಂತರ ಸೆಕ್ಯೂರಿಟಿ ಗಾರ್ಡ್‍ಗಳು ರೈತರನ್ನು ಮನವೊಲಿಸಿ ಕೆಳಗಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕುಮಾರ್ ನಾಯಕ್ ಈಗಾಗಗಲೇ 259 ಕುಟುಂಬಗಳಿಗೆ ಪರಿಹಾರ ನೀಡಿದ್ದೇವೆ. 78 ಜನರಿಗೆ ಉದ್ಯೋಗದ ತರಬೇತಿಯನ್ನೂ ಕೊಡುತ್ತಿದ್ದೇವೆ. ಉಳಿದ ರೈತರ ಮನವಿಯನ್ನ ಪರಿಗಣಿಸುತ್ತೇವೆ ಎಂದು ತಿಳಿಸಿದ್ದಾರೆ.

     

  • ರಾಜ್ಯಕ್ಕೆ ಇಂದಿನಿಂದ ಹೊಸಬೆಳಕು: ರಾಯಚೂರಿನ ವೈಟಿಪಿಎಸ್ ಕಾರ್ಯಾರಂಭ

    ರಾಜ್ಯಕ್ಕೆ ಇಂದಿನಿಂದ ಹೊಸಬೆಳಕು: ರಾಯಚೂರಿನ ವೈಟಿಪಿಎಸ್ ಕಾರ್ಯಾರಂಭ

    – 800 ಮೆಗಾ ವ್ಯಾಟ್ ಸಾರ್ಮಥ್ಯದ ವಿದ್ಯುತ್ ಘಟಕ ಆರಂಭ
    – ಆಧುನಿಕ ತಂತ್ರಜ್ಞಾನದ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಸ್ಟೇಷನ್

    ರಾಯಚೂರು: ರಾಜ್ಯದ ಬೇಸಿಗೆ ವಿದ್ಯುತ್ ಸಮಸ್ಯೆ ನೀಗಿಸಲು ಹೊಸದೊಂದು ಬೆಳಕು ಇಂದಿನಿಂದ ರಾಜ್ಯ ವಿದ್ಯುತ್ ಜಾಲಕ್ಕೆ ಸೇರಿಕೊಳ್ಳಲಿದೆ. ರಾಯಚೂರಿನ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಅಧಿಕೃತವಾಗಿ ಇಂದಿನಿಂದ ಕಾರ್ಯಾರಂಭಿಸಿದೆ.

    ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ್ ನಾಯಕ್ ವಾಣಿಜ್ಯಿಕ ವಿದ್ಯುತ್ ಉತ್ಪಾದನೆ ಆರಂಭವನ್ನ ಇಂದು ಘೋಷಿಸಿದರು. 800 ಮೆಗಾ ವ್ಯಾಟ್ ಸಾರ್ಮಥ್ಯದ ಮೊದಲ ಘಟಕ ಕಾರ್ಯಾರಂಭ ಆರಂಭಿಸಿದ್ದು, ರಾಜ್ಯದ ವಿದ್ಯುತ್ ಜಾಲಕ್ಕೆ ಹೊಸ ಬೆಳಕು ಸೆರ್ಪಡೆಯಾಗಿದೆ. ಎರಡು ಘಟಕಗಳಿಂದ 1600 ಮೆಗಾ ವ್ಯಾಟ್ ಸಾರ್ಮಥ್ಯದ ವೈಟಿಪಿಎಸ್ ನಿಂದ ಒಂದುವರೆ ವರ್ಷಕಾಲ ತಡವಾಗಿ ಮೊದಲ ಘಟಕ ಆರಂಭಗೊಂಡಿದೆ. ಆಧುನಿಕ ತಂತ್ರಜ್ಞಾನದಲ್ಲಿ ರೂಪುಗೊಂಡ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಸ್ಟೇಷನ್ ಕಡಿಮೆ ಕಲ್ಲಿದ್ದಲು ಹಾಗೂ ನೀರನ್ನ ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಿದೆ.

    9 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿದ್ಯುತ್ ಕೇಂದ್ರಕ್ಕೆ ಕಲ್ಲಿದ್ದಲು ಸಂಗ್ರಹಣಾ ಸ್ಥಳದ ಅಭಾವ, ರೈಲು ಮಾರ್ಗದ ತೊಂದರೆ, ಬಾಯ್ಲರ್ ಟ್ಯೂಬ್ ಸೋರಿಕೆಯಂತ ತಾಂತ್ರಿಕ ಸಮಸ್ಯೆಗಳು ಘಟಕದ ಆರಂಭಕ್ಕೆ ಹಿನ್ನೆಡೆಯುಂಟು ಮಾಡಿದ್ದವು. ಕೆಪಿಸಿಎಲ್‍ನ ಕಲ್ಲಿದ್ದಲು ಬಾಕಿ 1500 ಕೋಟಿ ಪಾವತಿಯಾಗಿರುವುದರಿಂದ ಯಾವುದೇ ತೊಂದರೆಗಳಿಲ್ಲದೆ ಘಟಕ ನಡೆಯಲಿದ್ದು, ಕೃಷ್ಣ ನದಿಯಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ತಜ್ಞರ ತಂಡ ಪ್ರಾಯೋಗಿಕ ಪರೀಕ್ಷೆಗಳನ್ನ ಮುಗಿಸಿದ್ದು, ಪ್ರಯೋಗಾರ್ಥ ವಿದ್ಯುತ್ ಉತ್ಪಾದನೆ ಯಶಸ್ವಿಯಾಗಿದೆ.

    ವೈಟಿಪಿಎಸ್ ವಿದ್ಯುತ್ ಕೇಂದ್ರದ ಕಾಮಗಾರಿಯನ್ನ ಬಿಎಚ್‍ಇಎಲ್ ಕಂಪನಿ ನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಎರಡನೇ ಘಟಕದ ಕಾಮಗಾರಿಯೂ ಚುರುಕುಗೊಳ್ಳಲಿದೆ. ಈ ಮೂಲಕ ರಾಯಚೂರು ಜಿಲ್ಲೆ ಇಡೀ ರಾಜ್ಯಕ್ಕೆ ಆರ್‍ಟಿಪಿಎಸ್ ನಿಂದ 1720 ಮೆಗಾ ವ್ಯಾಟ್ ಹಾಗೂ ವೈಟಿಪಿಎಸ್ ನಿಂದ 800 ಮೆಗಾ ವ್ಯಾಟ್ ಸೇರಿ ಒಟ್ಟು 2520 ಮೆಗಾ ವ್ಯಾಟ್ ವಿದ್ಯುತ್‍ನ್ನ ಉತ್ಪಾದಿಸಿ ಬೆಳಕು ನೀಡುತ್ತಿದೆ.