Tag: YSV Datta

  • KPSC ಪರೀಕ್ಷೆಯನ್ನ ಒಂದು ತಿಂಗಳು ಮುಂದೂಡಿ – ವೈ.ಎಸ್.ವಿ ದತ್ತಾ ಆಗ್ರಹ

    KPSC ಪರೀಕ್ಷೆಯನ್ನ ಒಂದು ತಿಂಗಳು ಮುಂದೂಡಿ – ವೈ.ಎಸ್.ವಿ ದತ್ತಾ ಆಗ್ರಹ

    ಬೆಂಗಳೂರು: KPSC ನಡೆಸುತ್ತಿರೋ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಪರೀಕ್ಷೆಯನ್ನು ಒಂದು ತಿಂಗಳು ಮುಂದೂಡಿಕೆ ಮಾಡಬೇಕು. ಸಿಎಂ ಸಿದ್ದರಾಮಯ್ಯ (Siddaramaiah) ಪರೀಕ್ಷೆ ಮುಂದೂಡಲು ಆದೇಶ ಮಾಡಬೇಕು ಅಂತ ಜೆಡಿಎಸ್ ನಾಯಕ, ಮಾಜಿ ಶಾಸಕ ವೈ.ಎಸ್.ವಿ ದತ್ತಾ (YSV Datta) ಆಗ್ರಹಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, KPSC ಅಂದರೆ ಪರೀಕ್ಷೆಗಳ ನಿಧಾನವಾಗಿ ಮಾಡೋದಕ್ಕೆ ಹೆಸರುವಾಸಿ. ಆದರೆ ಈಗ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸಲು ಎಲ್ಲಿಲ್ಲದ ಅವಸರ ಮಾಡ್ತಿದೆ. ಆಗಸ್ಟ್ 25ಕ್ಕೆ ಬ್ಯಾಂಕಿಂಗ್ ಪರೀಕ್ಷೆ ಇದೆ. ಹೀಗಾಗಿ ಒಂದು ತಿಂಗಳು ಪರೀಕ್ಷೆ ಮುಂದೂಡಲು ಅಭ್ಯರ್ಥಿಗಳು ಮನವಿ ಮಾಡಿದ್ರು‌. ಸಿಎಂ ಮಧ್ಯೆ ಪ್ರವೇಶದಿಂದ ಆಗಸ್ಟ್‌ 25ಕ್ಕೆ ಪರೀಕ್ಷೆ ರದ್ದು ಮಾಡಿ ಆಗಸ್ಟ್ 27ಕ್ಕೆ ಪರೀಕ್ಷೆ ಮಾಡೋದಾಗಿ KPSC ಹೇಳ್ತಿದೆ. ಇದರಿಂದ 1 ಲಕ್ಷ ಅಭ್ಯರ್ಥಿಗಳಿಗೆ ಅನ್ಯಾಯ ಆಗ್ತಿದೆ. 1 ತಿಂಗಳು ಪರೀಕ್ಷೆ ಮುಂದೂಡಿ ಅಂತ ಮನವಿ ಮಾಡಿದರೂ ಕೇಳುತ್ತಿಲ್ಲ ಅಂತ ಆರೋಪ ಮಾಡಿದರು. ಇದನ್ನೂ ಓದಿ: ಮಗಧೀರ ವಿಲನ್ ಈಗ ಹೀರೋ- ದೇವ್ ಗಿಲ್ ನಟನೆಯ ‘ಅಹೋ ವಿಕ್ರಮಾರ್ಕ’ ಚಿತ್ರದ ಸಾಂಗ್ ರಿಲೀಸ್

    ಸಿಎಸ್ (ರಾಜ್ಯ ಮುಖ್ಯಕಾರ್ಯದರ್ಶಿ) ಅವರನ್ನು ಕೇಳಿದ್ರೆ ಈಗಾಗಲೇ ಪ್ರಶ್ನೆ ಪತ್ರಿಕೆ ಮುದ್ರಣ ಆಗಿದೆ. ಪರೀಕ್ಷೆ ಆಗಲೇಬೇಕು ಅಂತ ಹೇಳ್ತಿದ್ದಾರೆ. ಪರೀಕ್ಷೆಗೆ ಒಂದು ವಾರ ಮುಂಚೆ ಪ್ರಶ್ನೆ ಪತ್ರಿಕೆ ಮುದ್ರಣ ಆಗಬೇಕು. ಇಷ್ಟುಬೇಗ ಯಾಕೆ KPSC ಪ್ರಶ್ನೆ ಪತ್ರಿಕೆ ಮುದ್ರಣ ಮಾಡಿತು‌. ಇದು ಅನುಮಾನಕ್ಕೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ, ಎನ್‌ಡಿಎ ಸರ್ಕಾರ ಅಲ್ಪಸಂಖ್ಯಾತ ವಿರೋಧಿಗಳು – ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಗೆ ಸಿಎಂ ಆಕ್ಷೇಪ

    ಅನೇಕ ಜನ KPSC ಸದಸ್ಯರು ನಿವೃತ್ತಿ ಆಗ್ತಿದ್ದಾರೆ. ನಿವೃತ್ತಿ ಆಗೋದ್ರೊಳಗೆ ಪರೀಕ್ಷೆ ಮುಗಿಸುವ ಪ್ಲ್ಯಾನ್ ಮಾಡ್ತಿದ್ದಾರೆ ಅನ್ನೋ ಅನುಮಾನ ಇದೆ. ಇದೆಲ್ಲ ನೋಡಿದರೆ KPSC ಮೇಲೆ ದೊಡ್ಡ ಅನುಮಾನ ಬರ್ತಿದೆ ಅಂತ ತಿಳಿಸಿದರು. ಒಂದು ತಿಂಗಳು ಪರೀಕ್ಷೆ ಮುಂದೂಡಬೇಕು‌. ಸಿಎಂ ಸಿದ್ದರಾಮಯ್ಯ ಮಧ್ಯೆ ಪ್ರವೇಶ ಮಾಡಿ ಸಮಸ್ಯೆ ಪರಿಹಾರ ಮಾಡಬೇಕು ಅಂತ ಸಿಎಂಗೆ ಒತ್ತಾಯ ಮಾಡಿದರು. ಇದನ್ನೂ ಓದಿ: ಮಾಂಸಾಹಾರ ಸೇವನೆ ಬಳಿಕ ಕುಟುಂಬದ ನಾಲ್ವರು ಸಾವು ಪ್ರಕರಣ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ

  • ಹುಟ್ಟುಹಬ್ಬದ ದಿನದಿಂದ ವೈಎಸ್‌ವಿ ದತ್ತ ಸೋಲಿನ ಪ್ರಾಯಶ್ಚಿತ್ತ ಪಾದಯಾತ್ರೆ

    ಹುಟ್ಟುಹಬ್ಬದ ದಿನದಿಂದ ವೈಎಸ್‌ವಿ ದತ್ತ ಸೋಲಿನ ಪ್ರಾಯಶ್ಚಿತ್ತ ಪಾದಯಾತ್ರೆ

    ಚಿಕ್ಕಮಗಳೂರು: ಮೊನ್ನೆ ಮೊನ್ನೆ ಮುಗಿದ 2023ರ ವಿಧಾನಸಭಾ ಚುನಾವಣೆಯಲ್ಲಿ (Election) ಜಿಲ್ಲೆಯ ಕಡೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ (JDS) ಸ್ಪರ್ಧಿಸಿದ್ದ ಮಾಜಿ ಶಾಸಕ ವೈಎಸ್‌ವಿ ದತ್ತ (YSV Datta) ಈ ಬಾರಿಯೂ ಸೋತಿದ್ದಾರೆ. ಇದೀಗ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಲು ಸೋಲಿನ ಪ್ರಾಯಶ್ಚಿತ್ತ ಪಾದಯಾತ್ರೆಗೆ ದತ್ತ ಮುಂದಾಗಿದ್ದಾರೆ.

    ಚುನಾವಣೆಗೂ ಮುನ್ನ ಇದು ನನ್ನ ಕಡೆ ಎಲೆಕ್ಷನ್ ಎಂದಿದ್ದ ದತ್ತ ಇಂದಿಗೂ ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ. ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

    ಕಡೂರಿಗರು ನನ್ನ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ನಾನಾಗಲೀ ಅಥವಾ ನಮ್ಮ ಕುಟುಂಬವಾಗಲಿ ಈ ಕ್ಷೇತ್ರವನ್ನು ಮರೆಯಲು ಸಾಧ್ಯವಿಲ್ಲ. ಕಡೂರು ಕ್ಷೇತ್ರದ ಜನತೆ ನೀಡಿರುವ ಪ್ರೀತಿಗೆ ಪ್ರತಿಯಾಗಿ ನನ್ನ ಕೊನೆಯುಸಿರು ಇರುವವರೆಗೂ ಎಲ್ಲರಲ್ಲೂ ಒಂದಾಗಿ ನನ್ನ ನೆಲದಲ್ಲಿಯೇ ಮಣ್ಣಾಗುತ್ತೇನೆ. ನನ್ನ ಹಲವಾರು ತಪ್ಪುಗಳಿಗೆ ಜನರು ಸರಿಯಾದ ಶಿಕ್ಷೆ ನೀಡಿದ್ದಾರೆ. ತಪ್ಪು ಮಾಡಿದ ನಾನು ಅದಕ್ಕಾಗಿ ಪ್ರಾಯಾಶ್ಚಿತ್ತ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಸಿಎಂ ಭಾಗ್ಯ ಕೊಡಿ – ಹೈಕಮಾಂಡ್‌ ಮುಂದೆ ಸಿದ್ದು, ಡಿಕೆಶಿ ವಾದ ಏನು?

    ಜೂನ್ 24 ನನ್ನ ಜನ್ಮದಿನ. ಅಂದಿನಿಂದ ಕ್ಷೇತ್ರದ ಪ್ರತಿ ಹಳ್ಳಿಗೆ ಪಾದಯಾತ್ರೆಯ ಮೂಲಕ ತೆರಳಿ ನನ್ನ ತಪ್ಪುಗಳಿಗಾಗಿ ಕ್ಷಮೆ ಕೋರುತ್ತೇನೆ. ಪಾದಯಾತ್ರೆಯಲ್ಲಿ ಹಳ್ಳಿಗಳಲ್ಲೇ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಈ ಸಂಕಲ್ಪ ಯಾವುದೇ ಚುನಾವಣಾ ದೃಷ್ಟಿಯಿಂದ ಮಾಡಿಲ್ಲ. ಕೇವಲ ನನ್ನ ಆತ್ಮಾವಲೋಕನ ಮಾತ್ರ. ಎಲ್ಲ ವಿವರಗಳನ್ನು ತಮಗೆ ತಿಳಿಸುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

    ದತ್ತ ಈ ಮಾತುಗಳನ್ನು ಹೇಳುತ್ತಿದ್ದಂತೆ ಕಾರ್ಯಕರ್ತರು ತಪ್ಪು ಮಾಡಿದ್ದು ಯಾರೋ, ನೀವ್ಯಾಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದಿದ್ದಾರೆ. ತಮ್ಮ ನಿರ್ಧಾರವನ್ನು ಕೈಬಿಡಬೇಕು ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಆದರೆ ದತ್ತ ನನ್ನ ನಿರ್ಧಾರ ಅಚಲ ಎಂದಿದ್ದಾರೆ. ಇದನ್ನೂ ಓದಿ: ನಾನು ತಪ್ಪು ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ – ಮಳವಳ್ಳಿ ಬಿಜೆಪಿ ಪರಾರ್ಜಿತ ಅಭ್ಯರ್ಥಿ

  • ಕಡೂರು ಕ್ಷೇತ್ರದಿಂದ ವೈಎಸ್‌ವಿ ದತ್ತ ಸ್ಪರ್ಧೆ: ರೇವಣ್ಣ ಘೋಷಣೆ

    ಕಡೂರು ಕ್ಷೇತ್ರದಿಂದ ವೈಎಸ್‌ವಿ ದತ್ತ ಸ್ಪರ್ಧೆ: ರೇವಣ್ಣ ಘೋಷಣೆ

    – ವೈಎಸ್‌ವಿ ದತ್ತ ಘರ್‌ ವಾಪ್ಸಿ
    – ಜೆಡಿಎಸ್ ಅಧಿಕೃತ ಅಭ್ಯರ್ಥಿ ಧನಂಜಯ್‌ಗೆ ಕೊಕ್!

    ಚಿಕ್ಕಮಗಳೂರು: ಮಾಜಿ ಶಾಸಕ ವೈ.ಎಸ್.ವಿ ದತ್ತ (YSV Datta) ಅವರು ಮರಳಿ ಜೆಡಿಎಸ್‌ಗೆ (JDS) ಬಂದಿದ್ದಾರೆ. ಕಡೂರಿನಲ್ಲಿ (Kaduru) ಜೆಡಿಎಸ್ ಅಭ್ಯರ್ಥಿಯಾಗಿ ದತ್ತ ಸ್ಪರ್ಧೆ ಮಾಡಲಿದ್ದಾರೆ.

    ವೈ.ಎಸ್.ವಿ ದತ್ತ ಮನೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna), ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಇಂದು ಭೇಟಿ ನೀಡಿದರು. ಕಡೂರು ತಾಲೂಕಿನ ಯಗಟಿಯಲ್ಲಿರುವ ದತ್ತ ಅವರ ನಿವಾಸಕ್ಕೆ ತೆರಳಿ ಚರ್ಚಿಸಿದರು. ಕಡೂರಿನಲ್ಲಿ ದತ್ತ ಸ್ಪರ್ಧಿಸಲಿದ್ದಾರೆ ಎಂದು ಈ ವೇಳೆ ರೇವಣ್ಣ ಘೋಷಿಸಿದ್ದಾರೆ. ಇದನ್ನೂ ಓದಿ: ಎಂ.ಪಿ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡ್ತಾರೆ: ಸಿ.ಟಿ ರವಿ

    ದತ್ತ ಅವರು ಇದೇ 18ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಆಗ ಎಷ್ಟೇ ಕಷ್ಟ ಆದರೂ ಸರಿ ನಾನು ಬಂದೇ ಬರುತ್ತೇನೆ ಎಂದು ಹೆಚ್‌.ಡಿ.ದೇವೇಗೌಡರು ತಿಳಿಸಿದ್ದಾರೆ ಎಂದು ರೇವಣ್ಣ ಹೇಳಿದ್ದಾರೆ.

    ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ದತ್ತ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಟಿಕೆಟ್ ನೀಡಲಿಲ್ಲ. ಹೀಗಾಗಿ ಬೇಸರಗೊಂಡು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಆದರೆ ಕಾಂಗ್ರೆಸ್‌ನಲ್ಲೂ ಅವರಿಗೆ ಟಿಕೆಟ್ ಸಿಗಲಿಲ್ಲ. ಈ ವೇಳೆ ಬೇಸರ ವ್ಯಕ್ತಪಡಿಸಿದ ದತ್ತ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಈಗ ಮತ್ತೆ ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಮರಳಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲೇ ಸೋಮಣ್ಣ ಕಟ್ಟಿ ಹಾಕಲು ʼಕೈʼ ರಣವ್ಯೂಹ! – ಬಿಜೆಪಿ ಬಂಡಾಯವನ್ನೇ ಬಂಡವಾಳ ಮಾಡಿಕೊಳ್ಳಲು‌ ಪ್ಲಾನ್

    ಬುಧವಾರ ದೇವೇಗೌಡರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇಂದು ದತ್ತ ಮನೆಗೆ ರೇವಣ್ಣ, ಪ್ರಜ್ವಲ್ ಭೇಟಿ ನೀಡಿದ್ದರು. ಈ ವೇಳೆ ದತ್ತ ಅವರ ಸ್ಪರ್ಧೆಯನ್ನು ಖಚಿತಪಡಿಸಿದರು.

    ಕಡೂರು ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ನಿಂದ ಧನಂಜಯ್ ಅವರನ್ನು ಅಧಿಕೃತಗೊಳಿಸಲಾಗಿತ್ತು. ಆದರೆ ಈಗ ಧನಂಜಯ್ ಅವರಿಗೆ ಕೊಕ್ ನೀಡಲಾಗಿದೆ. ದತ್ತ ಅವರಿಗೆ ಟಿಕೆಟ್ ಎಂದು ಘೋಷಿಸಿದ್ದಾರೆ.

  • ಮತ್ತೆ ಜೆಡಿಎಸ್‌ ಬಾಗಿಲು ತಟ್ಟಿದ ದತ್ತಾ

    ಮತ್ತೆ ಜೆಡಿಎಸ್‌ ಬಾಗಿಲು ತಟ್ಟಿದ ದತ್ತಾ

    ಬೆಂಗಳೂರು: ಕಾಂಗ್ರೆಸ್‌ನಿಂದ (Congress) ಟಿಕೆಟ್‌ ತಪ್ಪಿದ ಹಿನ್ನೆಲೆಯಲ್ಲಿ ವೈಎಸ್‌ವಿ ದತ್ತಾ (YSV Datta) ಮರಳಿ ಜೆಡಿಎಸ್‌ (JDS) ಮನೆಯ ಬಾಗಿಲನ್ನು ತಟ್ಟಿದ್ದಾರೆ.

    ಇಂದು ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು (HD Devegowda) ಭೇಟಿಯಾಗಿ ದತ್ತಾ ಮಾತುಕತೆ ನಡೆಸಿದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೆ ಪಕ್ಷವನ್ನು ಸೇರ್ಪಡೆಯಾಗುತ್ತೇನೆ ಎಂದ ದತ್ತಾ ತಿಳಿಸಿದ್ದಾರೆ ಎನ್ನಲಾಗಿದೆ.

    ದತ್ತಾ ಮನವಿಗೆ ದೇವೇಗೌಡರು, ಯಾವುದೇ ಭರವಸೆ ನೀಡದೇ ಕುಮಾರಸ್ವಾಮಿ (Kumaraswamy) ಜೊತೆ ಚರ್ಚಿಸುತ್ತೇನೆ. ಕುಮಾರಸ್ವಾಮಿ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ : ಎ.ಮಂಜು – ಭವಾನಿ ಜುಗಲ್ ಬಂದಿ

    ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ದತ್ತಾ ಕಡೂರು (Kaduru) ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ ಕಾಂಗ್ರೆಸ್‌ ಕಡೂರು ಕ್ಷೇತ್ರದ ಟಿಕೆಟ್‌ ಅನ್ನು ಆನಂದ್‌ ಅವರಿಗೆ ನೀಡಿದೆ. ಈ ನಿರ್ಧಾರದಿಂದ ಬೇಸತ್ತ ದತ್ತಾ ಅಭಿಮಾನಿಗಳ ಜೊತೆ ಸಭೆ ನಡೆಸಿ ಸ್ವಾಭಿಮಾನಿಯಾಗಿ ಚುನಾವಣೆ ಎದುರಿಸುತ್ತೇನೆ ಎಂದು ಹೇಳಿದ್ದರು.


    ದತ್ತಾ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಪಕ್ಷ ಬಿಟ್ಟು ಹೋದವರನ್ನು ಮತ್ತೆ ಸೇರಿಸುವ ಪ್ರಶ್ನೆಯೇ ಇಲ್ಲ. ಅವರು ಇಂಟರ್‌ನ್ಯಾಷನಲ್‌ ಪಕ್ಷವನ್ನು ಸೇರಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ ಎಂದು ಹೇಳಿ ವ್ಯಂಗ್ಯವಾಡಿದ್ದರು.

  • ‘ಕೈ’ ತಪ್ಪಿದ ಟಿಕೆಟ್‌: ಸ್ವತಂತ್ರ ಅಭ್ಯರ್ಥಿಯಾಗಿ ವೈಎಸ್‌ವಿ ದತ್ತ ಸ್ಪರ್ಧೆ

    ‘ಕೈ’ ತಪ್ಪಿದ ಟಿಕೆಟ್‌: ಸ್ವತಂತ್ರ ಅಭ್ಯರ್ಥಿಯಾಗಿ ವೈಎಸ್‌ವಿ ದತ್ತ ಸ್ಪರ್ಧೆ

    – ಚುನಾವಣೆ ಖರ್ಚಿಗಾಗಿ ಟವೆಲ್‌ ಹಿಡಿದು ಜನರಿಂದ ಭಿಕ್ಷೆ

    ಚಿಕ್ಕಮಗಳೂರು: ಕಡೂರು (Kadur) ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಕೈತಪ್ಪಿದ ಕಾರಣಕ್ಕೆ ಮಾಜಿ ಎಂಎಲ್‌ಸಿ ವೈಎಸ್‌ವಿ ದತ್ತ (YSV Datta) ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುಳಿವು ಕೊಟ್ಟಿದ್ದಾರೆ.

    ಭಾನುವಾರ ನಡೆದ ಸ್ವಾಭಿಮಾನದ ಸಭೆಯಲ್ಲಿ, ಕಡೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ವೈಎಸ್‌ವಿ ದತ್ತ ಅವರಿಗೆ ಬೆಂಬಲಿಗರು ಒತ್ತಾಯಿಸಿದರು. ಬೆಂಬಲಿಗರ ಒತ್ತಾಯಕ್ಕೆ ದತ್ತ ಒಪ್ಪಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧೆ ಖರ್ಚಿಗಾಗಿ ಟವೆಲ್‌ ಹಿಡಿದು ಸಭೆಯಲ್ಲಿ ಜನರಿಂದ ಭಿಕ್ಷೆ ಕೂಡ ಎತ್ತಿದ್ದಾರೆ. ಇದನ್ನೂ ಓದಿ: ನೇಕಾರರ ನಾಡಲ್ಲಿ ಯಾರಿಗೆ ಟಿಕೆಟ್- ಎರಡೂ ಪಕ್ಷದಲ್ಲೂ ಎದ್ದಿದೆ ಅಸಮಾಧಾನದ ಬಿರುಗಾಳಿ

    ಅಭಿಮಾನಿಗಳು 50 ಸಾವಿರ, ಲಕ್ಷ ಹಾಗೂ 2 ಲಕ್ಷ ಹೀಗೆ ಹಣ ಮತ್ತು ಚೆಕ್‌ ಕೂಡ ನೀಡಿದ್ದಾರೆ. ಮತ್ತಷ್ಟು ಹಣ ಕೊಡುವುದಾಗಿಯೂ ಭರವಸೆಯನ್ನು ನೀಡಿದ್ದಾರೆ. ಅಭಿಮಾನಿಗಳ ಭರಪೂರ ಬೆಂಬಲಕ್ಕಾಗಿ ಈ ಬಾರಿ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವನ್ನು ದತ್ತ ಅವರು ಕೊಟ್ಟಿದ್ದಾರೆ.

    ಜೆಡಿಎಸ್‌ ತೊರೆದು ಈಚೆಗೆ ಕಾಂಗ್ರೆಸ್‌ ಸೇರಿದ್ದ ವೈಎಸ್‌ವಿ ದತ್ತ ಅವರು ಕಡೂರು ಕ್ಷೇತ್ರ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಜೊತೆಗಿನ ಒಳಮುನಿಸಿನಿಂದ ಟಿಕೆಟ್‌ ಕೈತಪ್ಪಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ ಸೇರುವಾಗ ಬೇಷರತ್ತಾಗಿ ಪಕ್ಷ ಸೇರುತ್ತಿದ್ದೇನೆ ಎಂದು ದತ್ತ ಹೇಳಿದ್ದರು. ಆದರೆ ಟಿಕೆಟ್‌ ಗಿಟ್ಟಿಸಲು ಒಳಗೊಳಗೆ ಸಾಕಷ್ಟು ಪ್ರಯತ್ನ ನಡೆಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಹರಾಜಾಗಿದ್ದು, ಚುನಾವಣೆ ಮಾಡುವಷ್ಟೇ ಹಣ ನೀಡಿದ್ದಾರೆ – ಎಸ್.ಕೆ ಬಸವರಾಜನ್ ಕಿಡಿ

    ಕಾಂಗ್ರೆಸ್‌ ಹೈಕಮಾಂಡ್‌ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ದತ್ತ ಅವರಿಗೆ ಟಿಕೆಟ್‌ ಕೈತಪ್ಪಿದೆ. ದತ್ತ ಬದಲಿಗೆ ಕೆ.ಎಸ್‌.ಆನಂದ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

  • ಚುನಾವಣೆ ಖರ್ಚಿಗಾಗಿ ವೈಎಸ್‌ವಿ ದತ್ತಗೆ 101 ರೂ. ನೀಡಿದ ಅಭಿಮಾನಿ

    ಚುನಾವಣೆ ಖರ್ಚಿಗಾಗಿ ವೈಎಸ್‌ವಿ ದತ್ತಗೆ 101 ರೂ. ನೀಡಿದ ಅಭಿಮಾನಿ

    ಚಿಕ್ಕಮಗಳೂರು: ಜಿಲ್ಲೆಯ ಕಡೂರು (Kadur) ತಾಲೂಕಿನ ಮಾಜಿ ಶಾಸಕ ಹಾಗೂ ದತ್ತ ಮೇಷ್ಟ್ರು ಎಂದೇ ಖ್ಯಾತಿಯಾಗಿರುವ ವೈ.ಎಸ್.ವಿ. ದತ್ತ (YSV Datta) ಅವರಿಗೆ ಚುನಾವಣೆ ಖರ್ಚಿಗಾಗಿ ಅಭಿಮಾನಿಯೊಬ್ಬ 101 ರೂ. ಹಣ ನೀಡಿ ಶುಭ ಕೋರಿದ್ದಾರೆ.

    ಕಳೆದ 50 ವರ್ಷಗಳಿಂದ ಜೆಡಿಎಸ್‌ನ ಕಟ್ಟಾಳಾಗಿದ್ದ ವೈ.ಎಸ್.ವಿ.ದತ್ತ, ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರನಂತೆಯೇ ಇದ್ದರು. ಆದರೆ, ಕಳೆದ 2 ತಿಂಗಳ ಹಿಂದೆ ಜೆಡಿಎಸ್ (JDS) ತೊರೆದು ಕಾಂಗ್ರೆಸ್ ಸೇರಿದ್ದರು. ಈಗ ಕಡೂರಿನ ಕಾಂಗ್ರೆಸ್ (Congress) ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದಾರೆ. ಹಾಗಾಗಿ, ಕಡೂರು ತಾಲೂಕಿನ ಗಿರಿಯಾಪುರ ಮೂಲದ ವ್ಯಕ್ತಿಯೊಬ್ಬರು 101 ರೂಪಾಯಿ ದಾನ ನೀಡಿ ಚುನಾವಣೆಗೆ ಶುಭ ಕೋರಿದ್ದಾರೆ.

    ಕ್ಷೇತ್ರ ಹಾಗೂ ಮತದಾರರ ಮೇಲೆ ನಿಮಗೆ ಇದ್ದ ಪ್ರೀತಿ, ಕಾಳಜಿ, ಅಭಿಮಾನ ಹಾಗೂ ನೀವು ಮಾಡಿದ ಅಭಿವೃದ್ಧಿ ನೆನಪಿನಲ್ಲಿ ಉಳಿಯುವಂತದ್ದು. ಆಳ್ವಾಸ್ ನುಡಿಸಿರಿಯಲ್ಲಿ ಅಖಂಡ ಕರ್ನಾಟಕದ ವಿಷಯವಾಗಿ ನೀವು ಬಿತ್ತರಿಸಿದ ನಾಡಿನ ಅಖಂಡತೆಯ ವಿಚಾರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ನಿಮಗಿರುವ ಮಳೆ ನೀರು ಶೇಖರಣೆ ಹಾಗೂ ಪ್ರಕೃತಿ ಉಳಿಸುವ ಪರಿಕಲ್ಪನೆ ಜನರನ್ನು ಆಕರ್ಷಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ನಿಮ್ಮ ವ್ಯಕ್ತಿತ್ವಕ್ಕೆ ಜನ ನಿಮ್ಮ ಜೊತೆಗಿದ್ದಾರೆ. ನಿಮಗೆ ಜನಸಾಮಾನ್ಯರ ಸಮಸ್ಯೆಯನ್ನು ಬಗೆಹರಿಸುವ ಹೊಸ ಜವಾಬ್ದಾರಿ ಇದೆ. ಅದನ್ನು ನಿರ್ವಹಿಸುತ್ತೀರಾ ಎಂದು ನಂಬಿದ್ದೇವೆ ಎಂದು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ: ಸೋಮಣ್ಣ

    ನಾನು ಆರ್ಥಿಕವಾಗಿ ಶಕ್ತಿವಂತನಲ್ಲ. ಹಾಗಾಗಿ, ನಿಮಗೆ ಚಿಕ್ಕ ಕಾಣಿಕೆ ನೀಡಿದ್ದೇನೆ. ನಮ್ಮ ಮನೆಯವರ ಎಲ್ಲಾ ಮತಗಳನ್ನು ನಿಮಗೆ ನೀಡುತ್ತೇವೆ.‌ ಸಮಾನ ಮನಸ್ಕರಾದ ಜೊತೆ ಮಾತನಾಡಿ ತಮ್ಮ ಕೈ ಬಲಗೊಳ್ಳಲು ಸಹಕರಿಸುತ್ತೇವೆ ಎಂದು ಪತ್ರ ಬರೆದು, 101 ರೂಪಾಯಿ ಹಣ ನೀಡಿ ವೈ.ಎಸ್.ವಿ. ದತ್ತ ಅವರಿಗೆ ಶುಭ ಕೋರಿದ್ದಾರೆ. ಇದನ್ನೂ ಓದಿ: ಪತ್ನಿ ತಡವಾಗಿ ಏಳುತ್ತಾಳೆ – ಪತಿಯಿಂದ ಪೊಲೀಸರಿಗೆ ದೂರು

  • ಮಾಜಿ ಶಾಸಕ ವೈಎಸ್‌ವಿ ದತ್ತಾ, ಶಾಸಕ ಹೆಚ್.ನಾಗೇಶ್ ಕಾಂಗ್ರೆಸ್ ಸೇರ್ಪಡೆ

    ಮಾಜಿ ಶಾಸಕ ವೈಎಸ್‌ವಿ ದತ್ತಾ, ಶಾಸಕ ಹೆಚ್.ನಾಗೇಶ್ ಕಾಂಗ್ರೆಸ್ ಸೇರ್ಪಡೆ

    ಬೆಂಗಳೂರು: ಜೆಡಿಎಸ್ (JDS) ಮಾಜಿ ಶಾಸಕ ವೈಎಸ್‌ವಿ ದತ್ತಾ (YSV Datta) ಹಾಗೂ ಪಕ್ಷೇತರ ಶಾಸಕ ಹೆಚ್. ನಾಗೇಶ್ (H Nagesh) ಶನಿವಾರ ಕಾಂಗ್ರೆಸ್ (Congress) ಪಕ್ಷ ಸೇರ್ಪಡೆಗೊಂಡಿದ್ದಾರೆ.

    ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತಾ, ನಾಗೇಶ್ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲು, ಪಕ್ಷದ ಬಾವುಟ ನೀಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಮೈಸೂರು ಮುಡಾ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಸಹ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

    ನೂಕು ನುಗ್ಗಲು: ಪ್ರಬಲ ನಾಯಕರು ಪಕ್ಷ ಸೇರ್ಪಡೆಯಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸತೊಡಗಿದರು. ಆದ್ದರಿಂದ ನೂಕು ನುಗ್ಗಲು ಶುರುವಾಗಿತ್ತು. ಈ ವೇಳೆ ಕಾರ್ಯಕರ್ತರನ್ನ ಗದರಿಸಿದ ಡಿಕೆಶಿ, ಎಲ್ಲರೂ ಶಾಂತಿಯಿಂದ ಇದ್ದರೇ ಸಭೆ ಮಾಡುತ್ತೇನೆ ಇಲ್ಲದಿದ್ದರೆ ಮಾಡಲ್ಲ ಎಂದು ಹೇಳಿದರು. ಬಳಿಕ ಕಾರ್ಯಕರ್ತರು ಶಾಂತಿಯಾದರು. ಇದನ್ನೂ ಓದಿ: ಸ್ಯಾಂಟ್ರೋ ರವಿಗೆ 14 ದಿನ ನ್ಯಾಯಾಂಗ ಬಂಧನ

    ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ವೈಎಸ್‌ವಿ ದತ್ತಾ, ಇದು ಮಾತನಾಡುವ ಸಮಯವಲ್ಲ, ಕೆಲಸ ಮಾಡುವ ಸಮಯ. ಕಳೆದ ಹಲವು ದಶಕಗಳಿಂದ ನಾನು ಒಂದೇ ಪಕ್ಷದಲ್ಲಿದ್ದೆ. ಆದ್ರೆ ಈಗ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಇದು ನಮ್ಮ ರಾಷ್ಟ್ರದ ತುರ್ತು ಅಗತ್ಯವಾಗಿದೆ ಎಂದರು. ಇದನ್ನೂ ಓದಿ: ಎಲ್ಲರ ಜಾತಕ ನನ್ನ ಬಳಿ ಇದೆ ಹುಷಾರ್ – ಪೊಲೀಸರಿಗೇ ಅವಾಜ್ ಬಿಟ್ಟ ಸ್ಯಾಂಟ್ರೋ ರವಿ..!

    ಸಂವಿಧಾನ ಹಾಗೂ ಸೌಹಾರ್ದತೆಯನ್ನ ಬುಡಮೇಲು ಮಾಡುವ ಪ್ರಯತ್ನಗಳು ನಡೆದಿವೆ. ಸರ್ವಾಧಿಕಾರಿ ಶಕ್ತಿಗಳಿಗೆ ಸೋಲಾಗಲಿ ಅನ್ನೋ ಕಾರಣಕ್ಕೆ ಯಾವುದೇ ಶರತ್ತುಗಳಿಲ್ಲದೆ ಪಕ್ಷ ಸೇರುತ್ತಿದ್ದೇನೆ. ನಾನು ಮೊದಲಿನಿಂದಲೂ ಎಡಪಂಥೀಯ. ಹೀಗಾಗಿ ನನಗೆ ಅತ್ಯಂತ ಹತ್ತಿರ ಎನಿಸಿದ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ. ಕ್ಷೇತ್ರದಲ್ಲೂ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿದ್ದೇನೆ. ನಾನು ಕಾರ್ಯಕರ್ತನಾಗಿ ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ನನ್ನನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

    ಮಾಜಿ ಸಚಿವ, ಹಾಲಿ ಶಾಸಕ ಹೆಚ್. ನಾಗೇಶ್ ಮಾತನಾಡಿ, ನನಗೆ ಕಾಂಗ್ರೆಸ್ ಸಿದ್ಧಾಂತಗಳು ಇಷ್ಟ ಆಗಿ ಸೇರುತ್ತಿದ್ದೇನೆ. ನನ್ನ ತಂದೆ-ತಾಯಿ ಕೂಡ `ಕೈ’ಗೆ ಮತ ಕೊಡುತ್ತಿದ್ದರು. ರಾಜ್ಯಾದ್ಯಂತ ಪ್ರವಾಸ ಮಾಡಿ ನಮ್ಮ ಜನಾಂಗಕ್ಕೆ ತಿಳಿಹೇಳುತ್ತೇನೆ. ಕಾಂಗ್ರೆಸ್ ದಾರಿಯೇ ನನ್ನ ದಾರಿ. ಇನ್ಮುಂದೆ ನಾನು ಎಲ್ಲೂ ಹೋಗಲ್ಲ. ಸ್ವಂತ ಬಲದ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೋಮುವಾದಿ ಪಕ್ಷ ಮಣಿಸಲು ಕಾಂಗ್ರೆಸ್‌ ಸೇರಲು ನಿರ್ಧಾರ – ವೈಎಸ್‌ವಿ ದತ್ತ

    ಕೋಮುವಾದಿ ಪಕ್ಷ ಮಣಿಸಲು ಕಾಂಗ್ರೆಸ್‌ ಸೇರಲು ನಿರ್ಧಾರ – ವೈಎಸ್‌ವಿ ದತ್ತ

    ಬೆಂಗಳೂರು: ನನ್ನ ನಂಬಿ ಬಂದವರು ಅತಂತ್ರ ಆಗಬಾರದು. ಅವರಿಗೆ ನೆಲೆಕೊಡಿಸಲು ಕಾಂಗ್ರೆಸ್ (Congress) ಸೇರ್ಪಡೆಯಾಗುತ್ತಿದ್ದೇನೆ ಎಂದು ಜೆಡಿಎಸ್‌ (JDS) ಮಾಜಿ ಶಾಸಕ ವೈಎಸ್‌ವಿ ದತ್ತ (YSV Datta) ಹೇಳಿದರು.

    ಕಾಂಗ್ರೆಸ್‌ ಸೇರ್ಪಡೆ ಕುರಿತು ಮಾತನಾಡಿರುವ ಅವರು, ನಾನ್ನ ಮತ್ತು ದೇವೇಗೌಡರ (H.D.Devegowda) ರಾಜಕೀಯ 50 ವರ್ಷ ಸುದೀರ್ಘವಾದುದ್ದು. ದೇವೇಗೌಡರ ಜೊತೆ ನಾನು 20 ವರ್ಷಗಳಿಂದ ಇದ್ದೇನೆ. ನನಗೂ ಅವರಿಗೆ ತಂದೆ ಮಗನ ಸಂಬಂಧ. ನಾನು ದೇವೇಗೌಡರು ಇರುವವರೆಗೂ ಅವರ ಜೊತೆ ಇರುತ್ತೇನೆ ಎಂದು ಹೇಳಿದ್ದೆ. ಆದರೆ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಒತ್ತಾಯಿಸಿದ್ದಾರೆ. ನಾನು ದೇವೇಗೌಡರಿಗೆ ಈ ವಿಚಾರ ಹೇಳಲು ಹೋಗಿ ವಾಪಸ್ ಬಂದಿದ್ದೇನೆ. ನಮ್ಮ ಕ್ಷೇತ್ರದ ಕೋಮುವಾದಿಗಳ ಜೊತೆ ಸೆಣಸಬೇಕು ಅಂದ್ರೆ ಕಾಂಗ್ರೆಸ್ ಸೇರಬೇಕು ಎಂಬುದು ನಮ್ಮ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರ ಒತ್ತಾಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆಯಲ್ಲಿ RBI ಮಾಜಿ ಗವರ್ನರ್‌ ಭಾಗಿ

    ಪ್ರಜ್ವಲ್ ಎಂಪಿಗೆ ಸ್ವರ್ಧೆ ಮಾಡಿದಾಗಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಇದ್ರೂ ಕೂಡ ಬಿಜೆಪಿಗೆ ಹೆಚ್ಚು ವೋಟ್ ಬಂದಿದೆ. ಜನರು ಕೋಮುವಾದಿ ಶಕ್ತಿ ಮಣಿಸಲು ಕಾಂಗ್ರೆಸ್ ಸೇರ್ಪಡೆಯಾಗಬೇಕು ಎಂದು ಹೇಳಿದ್ದಾರೆ. ಕ್ಷೇತ್ರದ ಒಳಗಡೆ ಕೊನೆ ಹೋರಾಟ ಆಗಿದೆ. ನಾನು ಕ್ಷೇತ್ರ ಪೂರ್ತಿ ಸಂಚಾರ ಮಾಡುತ್ತಿದ್ದೇನೆ. ಅಲ್ಲಿನ ಜನರು ಕಾಂಗ್ರೆಸ್ ಸೇರ್ಪಡೆಯಾಗಿ ಎಂದು ಹೇಳುತ್ತಿದ್ದಾರೆ. ಪಕ್ಷತೀತವಾಗಿ ನನಗೆ ಕಾರ್ಯಕರ್ತರು ಇದ್ದಾರೆ. ಜನರು ಮತ್ತು ಕಾರ್ಯಕರ್ತರ ಒತ್ತಾಯ ಮೇಲೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ತಂದೆ ಸಮಾನರಾದ ದೇವೇಗೌಡರಿಗೆ ಈ ವಿಚಾರ ಹೇಳದೆ ಒದ್ದಾಡುತ್ತಿದ್ದೇನೆ. ನಾನು ಯಾವುದೇ ಷರತ್ತು ಹಾಕದೆ ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದೇನೆ. ನಾನು ಹತ್ತಾರು ಭಾರೀ ಈ ವಿಚಾರ ಹೇಳಲು ದೇವೇಗೌಡರನ್ನು ಭೇಟಿಯಾಗಿದ್ದೆ, ಆದ್ರೆ ಅದು ಸಾಧ್ಯವಾಗಿಲ್ಲ. ನನ್ನ ಎಂಎಲ್‌ಸಿ ಮಾಡಿದ್ದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು. ಅವರ ಋಣ ನನ್ನ ಮೇಲೆ ಇದೆ. ಅದಕ್ಕಾಗಿ ನಾನು ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಜೆಡಿಎಸ್‌ನಿಂದ ಶಾಸಕ ಆಗುವವರೆಗೂ ಪಕ್ಷ ಕಟ್ಟಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಮಹಾ-ಕರ್ನಾಟಕ ಗಡಿ ವಿವಾದ; ಇಂದು ಮುಖಾಮುಖಿಯಾಗ್ತಾರೆ ಎರಡೂ ರಾಜ್ಯಗಳ ಸಿಎಂ

    ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಖರ್ಗೆಯವರನ್ನು ಭೇಟಿಯಾಗಿಲ್ಲ. ಸಿದ್ದರಾಮಯ್ಯ ಅವರನ್ನು ಹಲವು ಭಾರಿ ಭೇಟಿಯಾಗಿದ್ದೇನೆ. ಬೇರೆ ಬೇರೆ ಸಂದರ್ಭದಲ್ಲಿ ಸಿದ್ದರಾಮಯ್ಯರೊಂದಿಗೆ ಒಂದೇ ವೇದಿಕೆ ಹಂಚಿಕೊಂಡಿದ್ದೇನೆ. ಅಲ್ಲಿ ನನ್ನ ಕ್ಷೇತ್ರದ ಬಗ್ಗೆ ಮಾತನಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರನ್ನು ಕೂಡ ಭೇಟಿಯಾಗಿದ್ದೇನೆ. ಅವರಿಗೂ ಕ್ಷೇತ್ರದ ಬಗ್ಗೆ ತಿಳಿಸಿದ್ದೇನೆ. ಸೇರ್ಪಡೆ ಬಗ್ಗೆ ದಿನಾಂಕ ನಿಗದಿಯಾಗಿಲ್ಲ. ಸೇರ್ಪಡೆ ವಿಚಾರ ಚಾಲು ಆಗಿದೆ ಅಷ್ಟೇ ಎಂದು ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

  • ಪಿಎಸ್‍ಐ ಅಕ್ರಮ – ಪ್ರಾಮಾಣಿಕರಿಗೆ ಕೆಲಸ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ: ವೈ.ಎಸ್.ವಿ ದತ್ತ

    ಪಿಎಸ್‍ಐ ಅಕ್ರಮ – ಪ್ರಾಮಾಣಿಕರಿಗೆ ಕೆಲಸ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ: ವೈ.ಎಸ್.ವಿ ದತ್ತ

    ಚಿಕ್ಕಮಗಳೂರು: ಪಿಎಸ್‌ಐ ಪರೀಕ್ಷೆ ಪ್ರಾಮಾಣಿಕವಾಗಿ ಬರೆದವರು ಮತ್ತು ಪರೀಕ್ಷೆಯ ಅಕ್ರಮದಲ್ಲಿ ಪಾಲ್ಗೊಂಡವರ ಪಟ್ಟಿಯನ್ನು ಪ್ರತ್ಯೇಕಿಸಿ ಪ್ರಾಮಾಣಿಕರಿಗೆ ಕೆಲಸ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಜಿಲ್ಲೆಯ ಕಡೂರಿನ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಆಗ್ರಹಿಸಿದ್ದಾರೆ.

    KARNATAKA PSI EXAM

    ಚಿಕ್ಕಮಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರ ತಲೆಗೆಲ್ಲಾ ಒಂದೇ ಮಂತ್ರ ಎಂಬಂತೆ ನಡೆದುಕೊಳ್ಳಬಾರದು. ಸರ್ಕಾರ ಆಯ್ಕೆ ಪಟ್ಟಿಯನ್ನೇ ರದ್ದುಪಡಿಸುವುದಕ್ಕಿಂತ ಬೇರೆ ಮಾರ್ಗ ಯೋಚಿಸಲಿ, ಸರ್ಕಾರಕ್ಕೆ ಅದ್ಯಾವುದು ದೊಡ್ಡ ಕೆಲಸವಲ್ಲ. ಪ್ರಮಾಣಿಕವಾಗಿ ಓದಿ, ಪರೀಕ್ಷೆ ಬರೆದವರಿಗೆ ಮೋಸ ಆಗಬಾರದು. ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಪ್ರಾಮಾಣಿಕರು ಹಾಗೂ ಅಕ್ರಮವೆಸಗಿದವರನ್ನು ಪ್ರತ್ಯೇಕ ಮಾಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ‘ಆರ್‌ಎಸ್‌ಎಸ್’ ದೇಶದ ಶ್ರೀಮಂತ ಎನ್‍ಜಿಓ, ಅದಕ್ಕೆ ಹಣ ಎಲ್ಲಿಂದ ಬರುತ್ತೆ?: ಬಿ.ಕೆ ಹರಿಪ್ರಸಾದ್

    ವೈಎಸ್‍ವಿ ದತ್ತಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿಗೆ ಪ್ರತಿಕ್ರಿಯಿಸಿ, ಎಲ್ಲದಕ್ಕೂ ಕಾಲ ಬರಬೇಕು. ನಾನು ಜೆಡಿಎಸ್‍ನಲ್ಲೇ ಇರುತ್ತೇನೆ ಎಂದು ಹೇಳಲು, ಜೆಡಿಎಸ್ ಬಿಡುತ್ತೇನೆ ಎಂದು ಹೇಳಲು ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಆ ಕಾಲ ಬಂದಾಗ ನಿಮಗೆ ಖಂಡಿತ ನನ್ನ ನಿರ್ಧಾರ ಹೇಳುತ್ತೇನೆ ಎಂದರು. ಇದನ್ನೂ ಓದಿ: ಉಕ್ರೇನ್ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್- ಡಾಕ್ಟರ್ ಆಗುವ ಕನಸಿಗೆ ನೀರೆರದ ಸಿದ್ದಗಂಗಾ

  • ಮಣೇವು ಕುಣಿತಕ್ಕೆ ಹಳ್ಳಿಗರ ಜೊತೆ ಹೆಜ್ಜೆ ಹಾಕಿದ ವೈ.ಎಸ್.ವಿ.ದತ್ತ

    ಮಣೇವು ಕುಣಿತಕ್ಕೆ ಹಳ್ಳಿಗರ ಜೊತೆ ಹೆಜ್ಜೆ ಹಾಕಿದ ವೈ.ಎಸ್.ವಿ.ದತ್ತ

    ಚಿಕ್ಕಮಗಳೂರು: ದೇವರಮೂರ್ತಿ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಹಳ್ಳಿಗರ ಜೊತೆ ಮಣೇವು ಕುಣಿತಕ್ಕೆ ಹೆಜ್ಜೆಹಾಕಿ ಸಂಭ್ರಮಿಸಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಬಿದಿರೆ ಗ್ರಾಮದ ಕರಾಳಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ದತ್ತ ಕುಣಿದು ಕುಪ್ಪಳಿಸಿದ್ದಾರೆ. ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಅವರು ಈ ಹಿಂದೆ ಕೂಡ ಹಲವು ಬಾರಿ ಮಕ್ಕಳಿಗೆ ಪಾಠ ಮಾಡಿ, ಗಾಂಧಿ ಜಯಂತಿಯಂದು ದಲಿತರ ಮನೆ ಶೌಚಾಲಯಗಳನ್ನು ಶುಚಿ ಮಾಡಿ ಗಮನ ಸೆಳೆದಿದ್ದರು. ನಾನು ಮಕ್ಕಳಿಗೆ ಪಾಠ ಮಾಡುವುದಕ್ಕೂ ಸೈ, ರಸ್ತೆ ಮಧ್ಯೆ ಕುಣಿಯುವುದಕ್ಕೂ ಸೈ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಐಪಿಎಲ್ ಆರಂಭ – ಅತಿ ಹೆಚ್ಚು ರನ್ ಸಿಡಿಸಿದದ ಟಾಪ್ ತಂಡಗಳು

    ಆಧುನಿಕ ಭಾರತದಲ್ಲಿ ಬಹುತೇಕ ರೂಢಿ ಸಂಪ್ರದಾಯಗಳು ಕ್ರಮೇಣ ಕಣ್ಮರೆಯಾಗುತ್ತಿದೆ. ಅದರಲ್ಲಿ ಮಣೇವು ಕುಣಿತ ಕೂಡ ಒಂದು. ಗ್ರಾಮೀಣ ಭಾಗದ ಅಲ್ಲಲ್ಲೇ ಜೀವಂತವಾಗಿದೆ. ದೇವರ ಉತ್ಸವಮೂರ್ತಿ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಶಾಸಕ ದತ್ತ ದೇವರಿಗೆ ಕಾಣಿಕೆ ನೀಡಿ ಹೆಗಲಮೇಲಿದ್ದ ಟವೆಲ್‍ನ ಕೈನಲ್ಲಿಟ್ಟುಕೊಂಡು ಸ್ಥಳೀಯರ ಜೊತೆ ರಸ್ತೆ ಮಧ್ಯೆಯೇ ಹೆಜ್ಜೆ ಹಾಕಿದ್ದಾರೆ. ತಮಟೆ ಸದ್ದನ್ನು ಆಲಿಸಿ ತಮಟೆಯ ಸದ್ದಿಗೆ ಕರೆಕ್ಟ್ ಆಗಿ ಸ್ಟೆಪ್ ಹಾಕಿ ನೆರೆದಿದ್ದವರನ್ನು ರಂಜಿಸಿದ್ದಾರೆ. ಮಣೇವು ಕುಣಿತ ಮುಗಿದ ಬಳಿಕ ಮತ್ತೆ ದೇವರಿಗೆ ನಮಸ್ಕರಿಸಿದ್ದಾರೆ. ಬಿದರೆ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ ದತ್ತ ಮಣೇವು ಕುಣಿತಕ್ಕೆ ಸ್ಥಳೀಯರ ಜೊತೆ ಹೆಜ್ಜೆ ಹಾಕುತ್ತಾರೆ. ಇದನ್ನೂ ಓದಿ:  ಬೀದರ್‌ನ ಬ್ರಿಮ್ಸ್‌ನಲ್ಲಿ ಮಾರಾಮಾರಿ ಪ್ರಕರಣ – ಮೂವರು ಬಂಧನ