Tag: YST Tax

  • ರಾಜ್ಯದಲ್ಲಿ ಯಾವುದೇ ವರ್ಗಾವಣೆ ದಂಧೆ, ಭ್ರಷ್ಟಾಚಾರ ಇಲ್ಲ, ಸ್ವಚ್ಚ ಆಡಳಿತ ಇದೆ: ರಾಮಲಿಂಗಾ ರೆಡ್ಡಿ

    ರಾಜ್ಯದಲ್ಲಿ ಯಾವುದೇ ವರ್ಗಾವಣೆ ದಂಧೆ, ಭ್ರಷ್ಟಾಚಾರ ಇಲ್ಲ, ಸ್ವಚ್ಚ ಆಡಳಿತ ಇದೆ: ರಾಮಲಿಂಗಾ ರೆಡ್ಡಿ

    ರಾಮನಗರ: ಕುಮಾರಸ್ವಾಮಿ (H.D.Kumaraswamy) ವಿರೋಧ ಪಕ್ಷದಲ್ಲಿದ್ದಾರೆ. ಅದಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ನಮ್ಮಲ್ಲಿ ಯಾವ ದಂಧೆಯೂ ಇಲ್ಲ, ಯಾವ ಭ್ರಷ್ಟಾಚಾರವೂ ಇಲ್ಲ. ನಮ್ಮಲ್ಲಿ ಸ್ವಚ್ಚ ಆಡಳಿತ ಇದೆ. ಅವರ ಹೇಳಿಕೆಗೆ ಮನ್ನಣೆ ನೀಡುವ ಅಗತ್ಯವಿಲ್ಲ ಎಂದು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ತಿರುಗೇಟು ನೀಡಿದ್ದಾರೆ.

    ರಾಜ್ಯದಲ್ಲಿ ವೈಎಸ್‌ಟಿ ಟ್ಯಾಕ್ಸ್ ಕುರಿತು (YST Tax) ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಆರೋಪ ವಿಚಾರ ಕುರಿತು ರಾಮನಗರದಲ್ಲಿ (Ramanagara) ರಾಮಲಿಂಗಾ ರೆಡ್ಡಿ ಮಾತನಾಡಿದರು. ಪೊಲೀಸ್ ಹಾಗೂ ಸಾರಿಗೆ ಇಲಾಖೆಯಲ್ಲಿ ಸಂಬಳ ವಿಳಂಬ ವಿಚಾರ ಕುರಿತು ವಿಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಕಾರ್ಯವೈಖರಿ ಇದೆ. ನಮ್ಮ ಕೆಎಸ್‌ಆರ್‌ಟಿಸಿಯಲ್ಲಿ (KSRTC) ತಿಂಗಳ ಮೊದಲ ದಿನವೇ ಸಂಬಳ ನೀಡಲಾಗುತ್ತದೆ. ಬಿಎಂಟಿಸಿಯಲ್ಲಿ (BMTC) 7ನೇ ದಿನ, ಕಲ್ಯಾಣ ಕರ್ನಾಟಕ ಸಾರಿಗೆಗೆ ಒಂದು ದಿನ ನಿಗಧಿ ಮಾಡಲಾಗಿದೆ. ಎಲ್ಲಾ ಇಲಾಖೆಗಳಲ್ಲೂ ಈ ರೀತಿಯ ಸಂಬಳ ನೀಡುತ್ತಾರೆ ಎಂದರು. ಇದನ್ನೂ ಓದಿ: Gruhajyothi Scheme: 5 ಗ್ಯಾರಂಟಿ ತಂದು ನುಡಿದಂತೆ ನಡೆದಿದ್ದೇವೆ – ಸಿದ್ದರಾಮಯ್ಯ

    ಆದರೆ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬೊಮ್ಮಾಯಿ (Basavaraj Bommai) ನಮ್ಮ ಸಾರಿಗೆ ಇಲಾಖೆ ಕುರಿತು ಟ್ವೀಟ್ (Tweet) ಮಾಡಿದ್ದರು. ಅರ್ಧ ಸಂಬಳ ಎಂದು ಆರೋಪ ಮಾಡಿದ್ದರು. ಆದರೆ ಪೂರ್ಣ ಮಾಹಿತಿ ಇಲ್ಲದೇ ಈ ರೀತಿಯ ಹೇಳಿಕೆ ನೀಡಬಾರದು. ಅವರು ಹಿಂದೆ ಸಿಎಂ ಆಗಿದ್ದವರು. ಅವರ ಅವಧಿಯಲ್ಲಿ ಯಾವ ರೀತಿಯ ಸಮಸ್ಯೆ ಆಗಿತ್ತು ಎಂದು ಎಲ್ಲರಿಗೂ ಗೊತ್ತು. ಈಗ ನಮಗೆ ನೀತಿ ಹೇಳೋಕೆ ಬರುತ್ತಾರೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಡಿಜಿ-ಐಜಿಪಿಯಾಗಿ ಅಲೋಕ್‌ ಮೋಹನ್‌ ನೇಮಕ

    ಶಾಸಕರು ಹಾಗೂ ಸಚಿವರ ನಡುವೆ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಸಣ್ಣಪುಟ್ಟ ಅಸಮಾಧಾನ ಇರುತ್ತದೆ. ಇಲ್ಲ ಅಂತ ಏನಿಲ್ಲ. ಆದರೆ ಎಲ್ಲವನ್ನೂ ಕೂತು ಬಗೆಹರಿಸಿಕೊಳ್ಳುತ್ತೇವೆ. ಮೊನ್ನೆ ದೆಹಲಿಯಲ್ಲಿ (Delhi) ವರಿಷ್ಠರ ಜೊತೆ ಸಭೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ವಿಚಾರವಾಗಿ ಹೈಕಮಾಂಡ್ ನಾಯಕರು ಹಲವು ಸಲಹೆ ನೀಡಿದ್ದಾರೆ. ಗ್ಯಾರಂಟಿ ಜಾರಿ ಯೋಜನೆಗಳ ಸಮರ್ಪಕ ಜಾರಿಗೆ ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಇಬ್ಬರೇ ಸತ್ಯಹರಿಶ್ಚಂದ್ರರು.. ಒಬ್ರು ಹೆಚ್‍ಡಿಕೆ ಇನ್ನೊಬ್ರು ಬೊಮ್ಮಾಯಿ: ಹೆಚ್.ವಿಶ್ವನಾಥ್ ವ್ಯಂಗ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯತೀಂದ್ರ ನಮ್ಮ ಮನೆಯಲ್ಲಿದ್ದಾರೆ ಅಂತ ಆರೋಪ ಮಾಡೋದು ಸರಿಯಲ್ಲ – HDK ವಿರುದ್ಧ ಸಿಎಂ ವಾಗ್ದಾಳಿ

    ಯತೀಂದ್ರ ನಮ್ಮ ಮನೆಯಲ್ಲಿದ್ದಾರೆ ಅಂತ ಆರೋಪ ಮಾಡೋದು ಸರಿಯಲ್ಲ – HDK ವಿರುದ್ಧ ಸಿಎಂ ವಾಗ್ದಾಳಿ

    ಬೆಂಗಳೂರು: ಯತೀಂದ್ರ (Yathindra) ಅವರು ನಮ್ಮ ಮನೆಯಲ್ಲಿ ಇದ್ದಾರೆ ಅಂತ ಆರೋಪ ಮಾಡೋದು‌ ಸರಿಯಲ್ಲ ಎಂದು ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್‌ ಸರ್ಕಾರದಲ್ಲಿ YST ಟ್ಯಾಕ್ಸ್ ಜಾರಿಗೆ ಬಂದಿದೆ ಎಂಬ ಕುಮಾರಸ್ವಾಮಿ (HD Kumaraswamy) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯತೀಂದ್ರ ಎಂಎಲ್ಎ ಆಗಿರಲಿಲ್ವಾ? ಯತೀಂದ್ರ ನಮ್ಮ ಮನೆಯಲ್ಲಿ ಇದ್ದಾರೆ ಅನ್ನೋ ಕಾರಣಕ್ಕೆ ಅವರ ಮೇಲೆ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಕುಮಾರಸ್ವಾಮಿ ಮನೆಯಲ್ಲೂ ಅವರ ಮಗ ಇದ್ದರು ಅಲ್ಲವೇ? ಅದನ್ನ ಏನು‌ ಅಂತ ಕರೆಯೋದು? ಅವರ ಹೆಂಡತಿ MLA ಆಗಿದ್ರು. ಅವರ ಅಣ್ಣ ಮಂತ್ರಿ ಆಗಿದ್ರು, ಅವರ ತಂದೆ ಪ್ರಧಾನಿ ಆಗಿದ್ರು. ಅವರ ಅಣ್ಣನ ಮಕ್ಕಳು ಎಂಎಲ್ಎ ಆಗಿದ್ರು. ಅವರಿಗೆ ಏನಂತ ಕರಿಯಬೇಕು? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.

    ಹೆಚ್‌ಡಿಕೆ ಹೇಳಿದ್ದೇನು?
    ಇತ್ತೀಚೆಗೆ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದಲ್ಲಿ ವೈಎಸ್‍ಟಿ ಟ್ಯಾಕ್ಸ್ (YST Tax) ಶುರುವಾಗಿದೆ. ದೇಶದಲ್ಲಿ ಜಿಎಸ್‍ಟಿ ಟ್ಯಾಕ್ಸ್ ಇರುವ ಹಾಗೆ ಈ ಸರ್ಕಾರದಲ್ಲಿ ವೈಎಸ್‍ಟಿ ಟ್ಯಾಕ್ಸ್ ನಡೆಯುತ್ತಿದೆ ಎಂದು ಬಾಂಬ್‌ ಸಿಡಿಸಿದ್ದರು.

    ಪರಿಷತ್‌ ಬಿಜೆಪಿ ಸದಸ್ಯ ರವಿಕುಮಾರ್‌ ಸಹ ವೈಎಸ್‌ಟಿ ಟ್ಯಾಕ್ಸ್‌ ಬಗ್ಗೆ ಟೀಕಿಸಿದ್ದರು. ಸಿಎಂ ಸಿದ್ದರಾಮಯ್ಯನವರು ಅಧಿಕೃತವಾಗಿ ಮತ್ತು ಅನಧಿಕೃತವಾಗಿ ವಸೂಲಿ ಮಾಡುವ ತೆರಿಗೆ ಕುರಿತು ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯನವರು ದೇವೇಗೌಡರ, ಕುಮಾರಸ್ವಾಮಿಯವರ ಜೊತೆಗೆ ಇದ್ದವರು. JDSನಲ್ಲಿ ಹಿಂದೆ ಇದ್ದವರು. ಹಾಗಾಗಿ ಸಿದ್ದರಾಮಯ್ಯ ಏನೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. ವೈಎಸ್‍ಟಿ ವಿಷಯ ತಿಳಿಸಿದ ಕುಮಾರಸ್ವಾಮಿಯವರಿಗೆ ಅಭಿನಂದನೆಗಳು ಟಾಂಗ್‌ ನೀಡಿದ್ದರು.

    ಜೊತೆಗೆ ಸಿದ್ದರಾಮಯ್ಯ ಅವರು ಹಾಕಿದ ತೆರಿಗೆಯನ್ನ ಯತೀಂದ್ರ ಅವರು ವಸೂಲಿ ಮಾಡ್ತಿದ್ದಾರೆ. ಮೈಸೂರು, ಹುಬ್ಬಳ್ಳಿ ಮತ್ತಿತರ ಕಡೆ ಹಾಗೂ ರಾಜ್ಯದ ವಿವಿಧೆಡೆ ಇದರ ಕುರಿತು ಮಾತನಾಡುತ್ತಿದ್ದಾರೆ. ವೈಎಸ್‍ಟಿ, ವಿಎಸ್‍ಟಿ ಬಗ್ಗೆ ಜನರು ಜಾಗೃತರಾಗಬೇಕೆಂದು ಅವರು ಮನವಿ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್ ಸರ್ಕಾರದಲ್ಲಿ YST Tax ಜಾರಿಗೆ ಬಂದಿದೆ: ಹೆಚ್‍ಡಿಕೆ ಹೊಸ ಬಾಂಬ್

    ಕಾಂಗ್ರೆಸ್ ಸರ್ಕಾರದಲ್ಲಿ YST Tax ಜಾರಿಗೆ ಬಂದಿದೆ: ಹೆಚ್‍ಡಿಕೆ ಹೊಸ ಬಾಂಬ್

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದಲ್ಲಿ ವೈಎಸ್‍ಟಿ ಟ್ಯಾಕ್ಸ್ (YST Tax) ಶುರುವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಬಾಂಬ್ ಸಿಡಿಸಿದ್ದಾರೆ. ಕಳೆದ ವಾರ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಬಾಂಬ್ ಸಿಡಿಸಿದ್ದ ಅವರು, ಸರ್ಕಾರದ ವಿರುದ್ಧ ವರ್ಗಾವಣೆ ಆರೋಪವನ್ನು ಮುಂದುವರೆಸಿದ್ದಾರೆ.

    ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ಟ್ಯಾಕ್ಸ್ ಜಾರಿಯಾಗಿದೆ. ದೇಶದಲ್ಲಿ ಜಿಎಸ್‍ಟಿ ಟ್ಯಾಕ್ಸ್ ಇರುವ ಹಾಗೆ ಈ ಸರ್ಕಾರದಲ್ಲಿ ವೈಎಸ್‍ಟಿ ಟ್ಯಾಕ್ಸ್ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಅವಕಾಶ ಕೊಟ್ಟರೆ ನಾನೂ ಮಾಡ್ತೀನಿ: ವಿಪಕ್ಷ ನಾಯಕ ಸ್ಥಾನ ಆಕಾಂಕ್ಷೆ ಹೊರಹಾಕಿದ ಅಶ್ವಥ್ ನಾರಾಯಣ್

    ನಾನು ಸಿಎಂ ಆಗಿದ್ದಾಗ 5 ರೂ. ಕೂಡ ತೆಗೆದುಕೊಳ್ಳದೆ ವರ್ಗಾವಣೆ ಮಾಡಿದ್ದೇನೆ. ನನಗೆ ನೈತಿಕತೆ ಇದೆ. ನಾನು ಭಯ ಬೀಳುವ ಅಗತ್ಯ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧವೂ ಕಿಡಿಕಾರಿದ್ದಾರೆ.

    ಕಳೆದ ವಾರ ಅತೀಂದ್ರಿಯ ಶಕ್ತಿ ವರ್ಗಾವಣೆ ದಂಧೆ ನಡೆಸುತ್ತಿದೆ ಎಂದು ಆರೋಪ ಮಾಡಿದ್ದರು. ಈಗ ವೈಎಸ್‍ಟಿ ಟ್ಯಾಕ್ಸ್ ಎಂದು ಆರೋಪ ಮಾಡುತ್ತಿದ್ದಾರೆ. ಈ ನೂತನ ಟ್ಯಾಕ್ಸ್ ಯಾವುದು ಎನ್ನುವ ಕುತೂಹಲ ಜನರಲ್ಲಿ ಮೂಡಿದೆ. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದಲ್ಲಿ ನನಗೆ ವರ್ಗಾವಣೆ ಮಾಡೋ ಅಧಿಕಾರವೇ ಇರಲಿಲ್ಲ – ಹೆಚ್‌ಡಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]