Tag: YSRCP Member

  • YSRPC ಸದಸ್ಯನಿಂದ NTR ಪ್ರತಿಮೆ ಧ್ವಂಸಗೊಳಿಸಲು ಯತ್ನ – ವೀಡಿಯೋ ವೈರಲ್

    YSRPC ಸದಸ್ಯನಿಂದ NTR ಪ್ರತಿಮೆ ಧ್ವಂಸಗೊಳಿಸಲು ಯತ್ನ – ವೀಡಿಯೋ ವೈರಲ್

    ಹೈದರಾಬಾದ್: ಆಂಧ್ರಪ್ರದೇಶದ ಗುಂಟೂರಿನಲ್ಲಿ ಹಾಡಹಗಲಲ್ಲೇ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸ್ಥಾಪಕ ಎನ್‍ಟಿ ರಾಮರಾವ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲು ವ್ಯಕ್ತಿಯೊಬ್ಬ ಪ್ರಯತ್ನಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಪ್ರತಿಮೆ ಕೆಡವಲು ಪ್ರಯತ್ನಿಸಿದ ವ್ಯಕ್ತಿಯನ್ನು ಶೆಟ್ಟಿಪಲ್ಲಿ ಕೋಟೇಶ್ವರ್ ರಾವ್ ಎಂದು ಗುರುತಿಸಲಾಗಿದ್ದು, ಈತ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಸದಸ್ಯರಾಗಿದ್ದಾನೆ. ಕೋಟೇಶ್ವರ್ ರಾವ್ ಗುಂಟೂರಿನ ದುರ್ಗಿ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಎನ್‍ಟಿ ರಾಮರಾವ್ ಪ್ರತಿಮೆಯನ್ನು ಸುತ್ತಿಗೆಯಿಂದ ಒಡೆದು ಧ್ವಂಸಗೊಳಿಸಲು ಯತ್ನಿಸಿದ್ದಾನೆ. ಇದನ್ನೂ ಓದಿ: ರಾಜಕೀಯ ಬಿಕ್ಕಟ್ಟು – ಸುಡಾನ್‌ ಪ್ರಧಾನಿ ರಾಜೀನಾಮೆ ಘೋಷಣೆ

    ಎನ್‍ಟಿಆರ್ ಎಂದು ಜನಪ್ರಿಯವಾಗಿರುವ ನಂದಮೂರಿ ತಾರಕ ರಾಮರಾವ್ ಅವರು 1983 ರಿಂದ 1995 ರ ನಡುವೆ ಮೂರುಬಾರಿ ಮುಖ್ಯಮಂತ್ರಿಯಾಗಿ ಏಳು ವರ್ಷಗಳ ಕಾಲ ಆಂಧ್ರಪ್ರದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಈ ಘಟನೆ ವಿರೋಧ ಪಕ್ಷದಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

    ಟಿಡಿಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ (ಎಂಎಲ್‍ಸಿ) ನಾರಾ ಲೋಕೇಶ್ ತಮ್ಮ ಅಜ್ಜನ ಪ್ರತಿಮೆಯನ್ನು ಧ್ವಂಸಗೊಳಿಸಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಚರ್ಲ ಕ್ಷೇತ್ರದ ದುರ್ಗಿಯಲ್ಲಿ ವೈಸಿಪಿ ಮುಖಂಡ ಶೆಟ್ಟಿಪಲ್ಲಿ ಕೋಟೇಶ್ವರರಾವ್, ದಿವಂಗತ ನಂದಮೂರಿ ತಾರಕ ರಾಮರಾವ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುದನ್ನು ತೀವ್ರವಾಗಿ ಖಂಡಿಸುತ್ತೇನೆ. ಅವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ರೈತರು ನನಗಾಗಿ ಸತ್ತರೇ ಅಂತ ಮೋದಿ ಹೇಳಿದ್ರು – ಮೇಘಾಲಯ ರಾಜ್ಯಪಾಲ ವಾಗ್ದಾಳಿ