Tag: YS Sharmila

  • ಆಂಧ್ರದಲ್ಲಿ ಕಾಂಗ್ರೆಸ್‌ ಮುಖ್ಯಸ್ಥೆಯಾಗಿ ವೈಎಸ್ ಶರ್ಮಿಳಾ ಆಯ್ಕೆ?

    ಆಂಧ್ರದಲ್ಲಿ ಕಾಂಗ್ರೆಸ್‌ ಮುಖ್ಯಸ್ಥೆಯಾಗಿ ವೈಎಸ್ ಶರ್ಮಿಳಾ ಆಯ್ಕೆ?

    ಹೈದರಾಬಾದ್:‌ ಇತ್ತೀಚೆಗಷ್ಟೇ ಕಾಂಗ್ರೆಸ್ (Congress) ಸೇರ್ಪಡೆಯಾಗಿರುವ ವೈಎಸ್ ಶರ್ಮಿಳಾ (YS Sharmila) ಅವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂಬುದಾಗಿ ವರದಿಯಾಗಿದೆ.

    ಮೂಲಗಳ ಪ್ರಕಾರ, ಆಂಧ್ರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಗಿಡುಗು ರುದ್ರರಾಜು  (Gidugu Rudra Raju) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರ ಸ್ಥಾನಕ್ಕೆ ವೈಎಸ್ ಶರ್ಮಿಳಾ ಅವರನ್ನು ನೇಮಕ ಮಾಡಿ ಶೀಘ್ರದಲ್ಲೇ ಕಾಂಗ್ರೆಸ್ ಅಧಿಕೃತ ಘೋಷಣೆ ಮಾಡಲಿದೆ ಎನ್ನಲಾಗಿದೆ.

    ಈ ತಿಂಗಳ ಆರಂಭದಲ್ಲಿ ಆಂಧ್ರಪ್ರದೇಶದ (Andhpradesh) ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರು ತಮ್ಮ ವೈಎಸ್ಆರ್ ತೆಲಂಗಾಣ ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿದರು. ಇದನ್ನೂ ಓದಿ: ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗಲಾಗ್ತಿಲ್ಲ, ಇದು ನನ್ನ ದುರದೃಷ್ಟ: ಜಗ್ಗಿ ವಾಸುದೇವ್

    ಕಾಂಗ್ರೆಸ್ ಅನ್ನು ಶ್ಲಾಘಿಸಿದ ಶರ್ಮಿಳಾ, ಇದು ದೇಶದ ಅತಿದೊಡ್ಡ ಜಾತ್ಯತೀತ ಪಕ್ಷವಾಗಿದೆ ಯಾಕೆಂದರೆ ಅದು ಎಲ್ಲಾ ಸಮುದಾಯಗಳಿಗೆ ಅಚಲವಾಗಿ ಸೇವೆ ಸಲ್ಲಿಸುತ್ತದೆ. ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುತ್ತದೆ ಎಂದು ಹೇಳಿದರು.

    ಕಾಂಗ್ರೆಸ್ ಸೇರುವ ಮೊದಲು ವೈಎಸ್ ಶರ್ಮಿಳಾ ಅವರು ಪಕ್ಷಕ್ಕೆ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದ್ದರು. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರಿಗೆ ಲಾಭವಾಗಬಹುದಾದ ಮತಗಳ ವಿಭಜನೆಯನ್ನು ತಡೆಯಲು ತೆಲಂಗಾಣ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ ಎಂದಿದ್ದರು.

  • ಆಂಧ್ರ ಸಿಎಂ ಸಹೋದರಿ ವೈ.ಎಸ್.ಶರ್ಮಿಳಾ ರೆಡ್ಡಿ ಕಾಂಗ್ರೆಸ್‌ ಸೇರ್ಪಡೆ

    ಆಂಧ್ರ ಸಿಎಂ ಸಹೋದರಿ ವೈ.ಎಸ್.ಶರ್ಮಿಳಾ ರೆಡ್ಡಿ ಕಾಂಗ್ರೆಸ್‌ ಸೇರ್ಪಡೆ

    – ರಾಹುಲ್‌ ಗಾಂಧಿಯನ್ನು ಪ್ರಧಾನಿಯಾಗಿ ನೋಡುವುದು ನನ್ನ ತಂದೆ ಕನಸಾಗಿತ್ತು: ಶರ್ಮಿಳಾ

    ನವದೆಹಲಿ: ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ‌.ಎಸ್.ರಾಜಶೇಖರ್ ರೆಡ್ಡಿ ಪುತ್ರಿ, ಹಾಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಸಹೋದರಿ, ವೈಎಸ್‌ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ.ಎಸ್.ಶರ್ಮಿಳಾ (Y.S.Sharmila) ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

    ದೆಹಲಿಯ ಕಾಂಗ್ರೆಸ್‌ (Congress) ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ‌ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge), ಸಂಸದ ರಾಹುಲ್ ಗಾಂಧಿ (Rahul Gandhi) ಸಮ್ಮುಖದಲ್ಲಿ ಸೇರ್ಪಡೆಯಾದರು. ಸಹೋದರ ವೈಎಸ್ ಜಗನ್‌ಮೋಹನ್ ರೆಡ್ಡಿ ಜೊತೆಗೆ ಭಿನ್ನಾಭಿಪ್ರಾಯಗಳ ಬಳಿಕ ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಕಟ್ಟಿದ್ದರು. ಇತ್ತಿಚೇಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದರು. ಈಗ ಅವರು ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಿ ತಮ್ಮ‌ ಪಕ್ಷವನ್ನು ವಿಲೀನಗೊಳಿಸಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ನಾನು ಪ್ರಚಾರ ಮಾಡೋದನ್ನು ತಡೆಯಲು ಸಮನ್ಸ್‌: ಕೇಜ್ರಿವಾಲ್‌ ಕಿಡಿ

    ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ದೇಶದ ಅತಿದೊಡ್ಡ ಜಾತ್ಯತೀತ ಪಕ್ಷವಾಗಿದೆ. ಅದು ಎಲ್ಲಾ ಸಮುದಾಯಗಳಿಗೆ ಅಚಲವಾಗಿ ಸೇವೆ ಸಲ್ಲಿಸುತ್ತದೆ. ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುತ್ತಿದೆ. ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ನೋಡುವುದು ತನ್ನ ತಂದೆಯ ಕನಸಾಗಿತ್ತು. ಅದಕ್ಕೆ ಕೊಡುಗೆ ನೀಡಲು ಸಂತೋಷಪಡುತ್ತೇನೆ ಎಂದು ಅವರು ಹೇಳಿದ್ದಾರೆ.

    ಪಕ್ಷ ಯಾವುದೇ ಜವಾಬ್ದಾರಿ ನೀಡಿದರು ಅದನ್ನು ನಾನು ನಿಭಾಯಿಸುತ್ತೇನೆ. ಶೀಘ್ರದಲ್ಲಿ ಲೋಕಸಭೆ ಚುನಾವಣೆಗೆ ಬ್ಲೂ ಪ್ರಿಂಟ್ ತಯಾರಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಸಿಎಂ ಜೊತೆ ಅದಾನಿ ಸಮೂಹ ಮಾತುಕತೆ – ರಾಹುಲ್‌ಗೆ ಪಕ್ಷದಲ್ಲೇ ಹಿನ್ನಡೆ ಎಂದ ನೆಟ್ಟಿಗರು

    ವೈಎಸ್ ಶರ್ಮಿಳಾ ಅವರ ಪತಿ ಅನಿಲ್ ಕುಮಾರ್ ಮಾತನಾಡಿ, ನಾವು ಕಾಂಗ್ರೆಸ್ ಕುಟುಂಬದ ಭಾಗವಾಗಲು ಬಯಸುತ್ತೇವೆ. ಅವರು ಪಕ್ಷದ ನಿರ್ಧಾರಗಳಿಗೆ ಬದ್ಧರಾಗುತ್ತಾರೆ. ನಾವು ಕಾಂಗ್ರೆಸ್ ಸೇರುವುದು ಆಂಧ್ರಪ್ರದೇಶದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

  • ಉಪವಾಸ ಸತ್ಯಾಗ್ರಹ ಮಾಡ್ತಿದ್ದ ಆಂಧ್ರ ಸಿಎಂ ಸಹೋದರಿ ಆಸ್ಪತ್ರೆಗೆ ದಾಖಲು

    ಉಪವಾಸ ಸತ್ಯಾಗ್ರಹ ಮಾಡ್ತಿದ್ದ ಆಂಧ್ರ ಸಿಎಂ ಸಹೋದರಿ ಆಸ್ಪತ್ರೆಗೆ ದಾಖಲು

    ಹೈದರಾಬಾದ್: ಕಳೆದೆರಡು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಅವರ ಸಹೋದರಿ ಶರ್ಮಿಳಾ (YS Sharmila) ಅವರನ್ನ ಪೊಲೀಸರು (Police) ಜುಬಿಲಿ ಹಿಲ್ಸ್‌ನಲ್ಲಿರುವ ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಿಸಿದ್ದಾರೆ.

    ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ `ಪ್ರಜಾ ಸಂಸ್ಥಾನಂ’ ಪಾದಯಾತ್ರೆಗೆ ಅನುಮತಿ ನೀಡದ ತೆಲಂಗಾಣ ರಾಷ್ಟ್ರ ಸಮಿತಿ (TRS) ಸರ್ಕಾರ ವಿರುದ್ಧ ಶುಕ್ರವಾರ ಬೆಳಿಗ್ಗೆಯಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಇದೀಗ ಆಸ್ಪತ್ರೆಗೆ ದಾಖಲಿಸಿದ್ದು, ಶರ್ಮಿಳಾ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಇಶಾನ್ ಕಿಶನ್ ಒಂದೇ ದ್ವಿಶತಕಕ್ಕೆ ಹಲವು ದಾಖಲೆಗಳು ಉಡೀಸ್ – ಕೊಹ್ಲಿಗೆ ಥ್ಯಾಂಕ್ಸ್

    ಈ ಹಿಂದೆ ಶರ್ಮಿಳಾ ಅವರಿಗೆ ರಕ್ತದೊತ್ತಡ ಹಾಗೂ ಗ್ಲೂಕೋಸ್ ಮಟ್ಟವು ಕಡಿಮೆಯಾಗಿದೆ ಎಂದು ವೈದ್ಯರು ಹೇಳಿದ್ದರು. ಅಲ್ಲದೇ ನಿರ್ಜಲೀಕರಣ ಸಮಸ್ಯೆ ಇರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು. ಇದು ಕಿಡ್ನಿ (ಮೂತ್ರಪಿಂಡ)ಗೆ ಸಾಕಷ್ಟು ಅಪಾಯ ಇರುವ ಲಕ್ಷಣವನ್ನು ಸೂಚಿಸಿತ್ತು ಎನ್ನಲಾಗಿತ್ತು. ಇದೀಗ ವೈದ್ಯರು ಆರೋಗ್ಯ ಸ್ಥಿರವಾಗಿದೆ ಎಂದು ಅಭಯ ನೀಡಿದ್ದಾರೆ.

    ಶರ್ಮಿಳಾ ಅವರು ನ್ಯಾಯಾಲಯದ ಅನುಮತಿಯಿದ್ದರೂ ಪೊಲೀಸರು ತನಗೆ ಪಾದಯಾತ್ರೆ ಮುಂದುವರಿಸಲು ಅವಕಾಶ ನೀಡುತ್ತಿಲ್ಲ. ತೆಲಂಗಾಣದಲ್ಲಿ ಪ್ರಜಾಪ್ರಭುತ್ವ ರಕ್ಷಿಸಬೇಕೆಂದು ಪಾದಯಾತ್ರೆ ಮುಂದುವರಿಸಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಶುಕ್ರವಾರ ಸತ್ಯಾಗ್ರಹಕ್ಕೆ ಕುಳಿತಿದ್ದರು. ಇದನ್ನೂ ಓದಿ: ಮೈಲಿಗೆ ಆಗುತ್ತೆ ಅಂತಾ ದತ್ತಪೀಠದಲ್ಲಿ ಮೌಲ್ವಿಗಳ ಪೂಜೆಗೆ ನಕಾರ – ಅರ್ಚಕರ ವಿರುದ್ಧ ಆರೋಪ

    ಇದೇ ಸಂದರ್ಭದಲ್ಲಿ ತೆಲಂಗಾಣ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಸಿಎಂ ಕೆ. ಚಂದ್ರಶೇಖರ್ ರಾವ್ (KCR) ನನ್ನ ಪಾದಯಾತ್ರೆ ತಡೆಯಲು ಪ್ರಯತ್ನಿಸುತ್ತಿದ್ದಾರೆ. ನನ್ನ ಬಸ್ಸೊಂದನ್ನ ಸುಟ್ಟುಹಾಕಿದರು. ನನ್ನ ಬೆಂಬಲಿತರನ್ನ ಥಳಿಸಿ ಹಿಂಸಾಚಾರ ಮಾಡಿದರು. ನಂತರ ನನ್ನನ್ನು ಬಂಧಿಸಿ ಕರೆದೊಯ್ದಿದ್ದರು. ಮರುದಿನ ನ್ಯಾಯಾಲಯ ನನ್ನ ಪಾದಯಾತ್ರೆ ಮುಂದುವರಿಸಲು ಅನುಮತಿ ನೀಡಿತ್ತು. ಆದಾಗ್ಯೂ ಪಾದಯಾತ್ರೆ ಮುಂದುವರಿಸಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

    ನವೆಂಬರ್ 29 ರಂದು, ವೈ.ಎಸ್ ಶರ್ಮಿಳಾ ಅವರು ಎಸ್‌ಯುವಿ ಕಾರಿನೊಳಗೆ ಕುಳಿತಿದ್ದಾಗ ಪಂಜಗುಟ್ಟ ಪೊಲೀಸರು ಕಾರಿನ ಸಮೇತ ಅವರನ್ನು ಎಳೆದೊಯ್ದು ವಶಕ್ಕೆ ಪಡೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಾರು ಸಮೇತ ಆಂಧ್ರ ಸಿಎಂ ಸಹೋದರಿ ಶರ್ಮಿಳಾರನ್ನು ಎಳೆದೊಯ್ದ ಪೊಲೀಸರು

    ಕಾರು ಸಮೇತ ಆಂಧ್ರ ಸಿಎಂ ಸಹೋದರಿ ಶರ್ಮಿಳಾರನ್ನು ಎಳೆದೊಯ್ದ ಪೊಲೀಸರು

    ಹೈದರಾಬಾದ್: ತೆಲಂಗಾಣದಲ್ಲಿ (Telangana) ಇಂದು ರಾಜಕೀಯ ಹೈಡ್ರಾಮಾ ನಡೆದಿದೆ. ತೆಲಂಗಾಣ ರಾಜಕಾರಣಿ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ (Y.S.Jagan Mohan Reddy) ಅವರ ಸಹೋದರಿ ವೈ.ಎಸ್.ಶರ್ಮಿಳಾ (Y.S.Sharmila) ಅವರ ಕಾರನ್ನು ನಗರ ಪೊಲೀಸರು ತಂದ ಕ್ರೇನ್ ಎಳೆದೊಯ್ದ ಘಟನೆ ಹೈದರಾಬಾದ್‌ನ (Hyderabad) ಆರ್ಟಿರಿಯಲ್ ರಸ್ತೆ ಬಳಿ ನಡೆಯಿತು.

    ಶರ್ಮಿಳಾ ಅವರು ಕಾರಿನೊಳಗೆ ಕುಳಿತಿದ್ದರು. ಅದನ್ನೂ ಲೆಕ್ಕಿಸದೇ ಪೊಲೀಸರು ಕ್ರೇನ್‌ ಮೂಲಕ ಕಾರನ್ನು ಎಳೆದೊಯ್ದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿಡಾಡಿದೆ. ಇದನ್ನೂ ಓದಿ: ಚುನಾವಣಾ ರ‍್ಯಾಲಿ ವೇಳೆ ನುಗ್ಗಿದ ಗೂಳಿ, ಸಭಿಕರು ಚೆಲ್ಲಾಪಿಲ್ಲಿ- ಬಿಜೆಪಿ ಪಿತೂರಿ ಎಂದ ರಾಜಸ್ಥಾನ ಸಿಎಂ

    ವೈಎಸ್‌ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ ಶರ್ಮಿಳಾ ಅವರ ಬೆಂಬಲಿಗರು ಮತ್ತು ವಾರಂಗಲ್‌ನಲ್ಲಿ ಆಡಳಿತಾರೂಢ ಟಿಆರ್‌ಎಸ್‌ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಟಿಆರ್‌ಎಸ್‌ ಬೆಂಬಲಿಗರು ತಮ್ಮ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಶರ್ಮಿಳಾ ಅವರು ಆರೋಪಿಸಿದ್ದರು. ಇದರ ಮಧ್ಯೆಯೇ ಶರ್ಮಿಳಾರನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ.

    ನಿನ್ನೆಯ ಘರ್ಷಣೆಯಲ್ಲಿ ಹಾನಿಗೊಳಗಾದ ಕಾರಿನ ಚಾಲಕನ ಸೀಟಿನಲ್ಲಿ ಇಂದು ಬೆಳಿಗ್ಗೆ ಅವರು ಕುಳಿತು ಶರ್ಮಿಳಾ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಹೋಗಲು ಪ್ರಯತ್ನಿಸಿದರು. ಇದನ್ನೂ ಓದಿ: ಸ್ಯಾಟಲೈಟ್ ಫೋನ್ ಸಾಗಿಸ್ತಿದ್ದ ರಷ್ಯಾದ ಮಾಜಿ ಸಚಿವ ಭಾರತದ ವಿಮಾನ ನಿಲ್ದಾಣದಲ್ಲಿ ಬಂಧನ

    ನಿನ್ನೆ ವಾರಂಗಲ್ ಜಿಲ್ಲೆಯಲ್ಲಿ ಪಾದಯಾತ್ರೆ ವೇಳೆ ಟಿಆರ್‌ಎಸ್ ಗೂಂಡಾಗಳು ತಮ್ಮ ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಶರ್ಮಿಳಾ ಅವರು ಮುಖ್ಯಮಂತ್ರಿಯವರ ನಿವಾಸಕ್ಕೆ ತೆರಳಿದ್ದಾರೆ ಎನ್ನಲಾಗಿತ್ತು. ಈ ವೇಳೆ ಹೈದರಾಬಾದ್ ಪೊಲೀಸರು ಅವರನ್ನು ತಡೆದು, ಎಸ್‌ಆರ್ ನಗರ ಪೊಲೀಸ್ ಠಾಣೆಗೆ ಅವರ ವಾಹನವನ್ನು ಎಳೆದೊಯ್ದರು.

    ಕಳೆದ 223 ದಿನಗಳಿಂದ ನಾನು ಮತ್ತು ನನ್ನ ಪಕ್ಷದ ನಾಯಕರು, ಪ್ರತಿನಿಧಿಗಳು ತೆಲಂಗಾಣದ ವಿವಿಧ ವರ್ಗಗಳ ಜನರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಲು ಶಾಂತಿಯುತವಾಗಿ ಪಾದಯಾತ್ರೆ ನಡೆಸುತ್ತಿದ್ದೇವೆ. ನಮ್ಮ ಜನಪ್ರಿಯತೆಯನ್ನು ಮುಖ್ಯಮಂತ್ರಿ ಕೆಸಿಆರ್ ಮತ್ತು ಅವರ ಬೆಂಬಲಿಗರಿಗೆ ಸಹಿಸಲಾಗಿಲ್ಲ ಎಂದು ಶರ್ಮಿಳಾ ಆರೋಪಿಸಿದ್ದಾರೆ.

    ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಸಾಗುವುದರಿಂದ ಅನುಮತಿ ನಿರಾಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಂಧ್ರ ಸಿಎಂ ಜಗನ್ ಸಹೋದರಿ ಅರೆಸ್ಟ್

    ಆಂಧ್ರ ಸಿಎಂ ಜಗನ್ ಸಹೋದರಿ ಅರೆಸ್ಟ್

    ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಅವರ ಸಹೋದರಿ ವೈ.ಎಸ್. ಶರ್ಮಿಳಾ (YS Sharmila) ಅವರನ್ನು ವಾರಂಗಲ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ತೆಲಂಗಾಣದಲ್ಲಿ ಶರ್ಮಿಳಾ ಅವರು ವೈಎಸ್‍ಆರ್ ತೆಲಂಗಾಣ ಪಕ್ಷವನ್ನು (YSRTP) ಸಂಘಟಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪಾದಾಯಾತ್ರೆಯನ್ನು ಹಮ್ಮಿಕೊಂಡಿದ್ದರು. ಅಷ್ಟೇ ಅಲ್ಲದೇ  ಈವರೆಗೆ ಸುಮಾರು 3,500 ಕಿ.ಮೀವರೆಗೆ ಪಾದಯಾತ್ರೆ ನಡೆಸಿದ್ದರು.

    ನಿನ್ನೆ ನರಸಂಪೇಟೆಯಲ್ಲಿದ್ದ ಅವರು ಸ್ಥಳೀಯ ಟಿಆರ್‌ಎಸ್ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರನ್ನು ಟೀಕಿಸಿದರು. ಇದರಿಂದಾಗಿ ಕೋಪಗೊಂಡ ಟಿಆರ್‌ಎಸ್ (Telangana Rashtra Samithi) ಕಾರ್ಯಕರ್ತರು ಶರ್ಮಿಳಾ ಅವರ ವಾಹನದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೆಳತಿಗೆ ಹತ್ತಿರವಾಗಿದ್ದ ಹುಡುಗನ ವಿರುದ್ಧ ಸೇಡು – ಮೋದಿಗೆ ಬೆದರಿಕೆ ಹಾಕಿದ್ದ ಟೆಕ್ಕಿ ಅರೆಸ್ಟ್

    ಇದರಿಂದಾಗಿ ವೈ.ಎಸ್. ಶರ್ಮಿಳಾ ಬೆಂಬಲಿಗರಿಗೂ ಸಿಟ್ಟಿಗೆದ್ದಿದ್ದಾರೆ. ಈ ವೇಳೆ ಶರ್ಮಿಳಾ ಬೆಂಬಲಿಗರಿಗೂ ಹಾಗೂ ಟಿಆರ್‌ಎಸ್ (TRS) ಕಾರ್ಯಕರ್ತರಿಗೂ ಮಾರಾಮಾರಿ ನಡೆದಿದೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಶರ್ಮಿಳಾ ಅವರನ್ನು ಬಂಧಿಸಿದ್ದಾರೆ. ಈ ವೇಳೆ ಶರ್ಮಿಳಾ ಅವರು ನನನ್ನು ಯಾಕೆ ಬಂಧಿಸುತ್ತಿದ್ದೀರಿ? ಇಲ್ಲಿ ನಾನು ಸಂತ್ರಸ್ತೆ, ನಾನು ಆರೋಪಿಯಲ್ಲ ಎಂದು ಕೂಗಾಡಿದ್ದಾರೆ. ಈಗಿರುವ ಆರ್‌ಎಸ್‌ಎಸ್ ಕಳ್ಳರ ಆರ್‌ಎಸ್‌ಎಸ್ : ಪರಿಷತ್ ಸದಸ್ಯ ರಾಜೇಂದ್ರ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಜಗನ್ ಸಹೋದರಿ ಭಾಷಣದ ವೇಳೆ ಜೇನು ದಾಳಿ – ಟವೆಲ್ ಬೀಸಿದ ಕಾರ್ಯಕರ್ತರು

    ಜಗನ್ ಸಹೋದರಿ ಭಾಷಣದ ವೇಳೆ ಜೇನು ದಾಳಿ – ಟವೆಲ್ ಬೀಸಿದ ಕಾರ್ಯಕರ್ತರು

    ಹೈದರಾಬಾದ್: ಆಂಧ್ರಪ್ರದೇಶ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಸಹೋದರಿ ಹಾಗೂ ಯುವಜನ ಶ್ರಮಿಕ ರೈತತೆಲಂಗಾಣ ಪಕ್ಷ ಮುಖ್ಯಸ್ಥೆ ವೈ.ಎಸ್. ಶರ್ಮಿಳಾ ಅವರು ತೆಲಂಗಾಣ ರಾಜ್ಯಾದ್ಯಂತ ಪ್ರಜಾ ಪ್ರಸ್ಥಾನಂ ಪಾದಯಾತ್ರೆ ಮಾಡುವ ವೇಳೆ ಜೇನು ನೋಣಗಳು ದಾಳಿ ನಡೆಸಿದ ವೀಡಿಯೋ ವೈರಲ್ ಆಗುತ್ತಿದೆ.

    ಶರ್ಮಿಳಾ ದುರ್ಷಗಾನಿಪಲ್ಲಿ ಗ್ರಾಮದ ಮರದ ಕೆಳಗೆ ನಿಂತು ಜನರೊಂದಿಗೆ ಸಂವಾದ ನಡೆಸುತ್ತಿದ್ದರು. ಈ ವೇಳೆ ಅದೇ ಮರಕ್ಕೆ ಗೂಡುಕಟ್ಟಿದ ಜೇನು ದಾಳಿ ನಡೆಸಿದೆ. ಒಮ್ಮೆಲೆ ಜೇನಿನ ಶಬ್ದ ಕೇಳಿ ಅಲ್ಲಿ ನೆರೆದಿದ್ದವರೆಲ್ಲರೂ ಆತಂಕಕ್ಕೊಳಗಾಗಿದ್ದಾರೆ.

    ಆದರೆ ಶರ್ಮಿಳಾ ಅವರ ಭದ್ರತಾ ಸಿಬ್ಬಂದಿ ಎಚ್ಚರದಿಂದ ಅವರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಶರ್ಮಿಳಾರನ್ನು ರಕ್ಷಿಸಲು ಅಲ್ಲಿದ್ದವರೆಲ್ಲ ಟವೆ ಲ್‍ಗಳನ್ನು ಬೀಸಿ, ಜೇನುನೊಣಗಳನ್ನು ದೂರ ಓಡಿಸಲು ಪ್ರಯತ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ಕೆಲ ಕಾರ್ಯಕರ್ತರಿಗೆ ಜೇನು ಕಚ್ಚಿದೆ. ಇದನ್ನೂ ಓದಿ: 2025ರ ವೇಳೆಗೆ ಭಾರತದಲ್ಲಿ ತಲೆ ಎತ್ತಲಿವೆ 220 ವಿಮಾನ ನಿಲ್ದಾಣ: ಸಿಂಧಿಯಾ

    ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ವನ್ನು ಖಂಡಿಸಿ ಮತ್ತು ಸಿಎಂ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರ ಬಂಗಾರು ತೆಲಂಗಾಣ ತರುವುದಾಗಿ ಭರವಸೆ ನೀಡಿ ನ್ಯಾಯ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಶರ್ಮಿಳಾ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಗಣಿಗಾರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ರಚನೆ – ಸುಪ್ರೀಂಕೋರ್ಟ್

  • ಹೊಸ ಪಕ್ಷ ಆರಂಭಿಸುವ ದಿನಾಂಕ ಪ್ರಕಟಿಸಿದ ಜಗನ್ ಸಹೋದರಿ

    ಹೊಸ ಪಕ್ಷ ಆರಂಭಿಸುವ ದಿನಾಂಕ ಪ್ರಕಟಿಸಿದ ಜಗನ್ ಸಹೋದರಿ

    ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ.ಎಸ್ ಶರ್ಮಿಳಾ ಅವರು ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಆರಂಭವನ್ನು ಘೋಷಣೆ ಮಾಡುವ ದಿನಾಂಕವನ್ನು ಹೇಳಿದ್ದಾರೆ.

    ಜುಲೈ 8 ರಂದು ಹೊಸ ಪಕ್ಷವನ್ನು ತೆಲಂಗಾಣದಲ್ಲಿ ಉದ್ಘಾಟಿಸಲಿದ್ದೇನೆ. ಜುಲೈ 8 ರಂದು ತಂದೆ ದಿ.ವೈ ಎಸ್ ರಾಜಶೇಖರ ರೆಡ್ಡಿಯವರ ಜನ್ಮದಿನದ ವಾರ್ಷಿಕೋತ್ಸವಿದೆ. ಇದೇ ದಿನದಂದು ನಮ್ಮ ಹೊಸ ಪಕ್ಷವನ್ನು ಉದ್ಘಾಟಿಸಲಿದ್ದೇನೆ ಎಂದು ಶರ್ಮಿಳಾ ಖಮ್ಮಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.

    ಭರವಸೆ ನೀಡಿರುವ ಪ್ರಕಾರ, ಸರ್ಕಾರಿ ಉದ್ಯೋಗ ನೀಡುವುದಕ್ಕೆ ಅಧಿಸೂಚನೆ ಹೊರಡಿಸದಿದ್ದಲ್ಲಿ ಏಪ್ರಿಲ್ 15ರಿಂದ ಮೂರು ದಿನಗಳ ಕಾಲ ಹೈದರಾಬಾದ್‍ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ. ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಆರೋಪಗಳನ್ನು ಪ್ರಶ್ನೆ ಮಾಡುವುದಕ್ಕಾಗಿ ನಮ್ಮ ಪಕ್ಷ ಅಗತ್ಯ ಇದೆ. ತೆಲಂಗಾಣ ರಾಜ್ಯ ಸ್ಥಾಪನೆಯಾಗಿ 7 ವರ್ಷ ಆಗಿರಬಹುದು. ಜನರ ಆಶೋತ್ತರಗಳನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ.

    ತೆಲಂಗಾಣ ರಾಜ್ಯ ಸ್ಥಾಪನೆಗಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ತೆಲಂಗಾಣ ಅಸ್ತಿತ್ವಕ್ಕೆ ಬಂದ ನಂತರವೂ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳನ್ನು ಎಮ್‍ಎಲ್‍ಎಗಳು ಅಥವಾ ಎಂಪಿಗಳು ಭೇಟಿಯಾಗುವ ಅವಕಾಶವೇ ಇಲ್ಲ. ಕಾಂಗ್ರೆಸ್ ಪಾರ್ಟಿ ಕೆಸಿಆರ್ ಜೊತೆಗೆ ಫೈಟ್ ಮಾಡಲು ತಯಾರಿಲ್ಲ. ಬಿಜೆಪಿ ನೀಡಿದ ಭರವಸೆಗಳು ಏನಾದವು? ಅವರು ರೈಲು, ಫ್ಯಾಕ್ಟರಿಯ ಭರವಸೆ ನೀಡಿದ್ದರು. ಅದಿನ್ನೂ ಜಾರಿಗೆ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.