Tag: youtuber

  • ಬೆಡ್‌ರೂಮ್‌ನಲ್ಲಿ ಮಲಗಿದ ಸ್ಥಿತಿಯಲ್ಲಿ ಯೂಟ್ಯೂಬರ್‌ ಮೃತದೇಹ ಪತ್ತೆ

    ಬೆಡ್‌ರೂಮ್‌ನಲ್ಲಿ ಮಲಗಿದ ಸ್ಥಿತಿಯಲ್ಲಿ ಯೂಟ್ಯೂಬರ್‌ ಮೃತದೇಹ ಪತ್ತೆ

    ರಾಯ್ಪುರ: ಛತ್ತೀಸ್‌ಗಢದ (Chhattisgarh) ಜಂಜ್‌ಗಿರ್ ಚಂಪಾದಲ್ಲಿ ಮನೆಯೊಂದರ ಬೆಡ್‌ರೂಮ್‌ನಲ್ಲಿ ಯೂಟ್ಯೂಬರ್‌ ಮೃತದೇಹ ಪತ್ತೆಯಾಗಿದೆ. ಮೃತರನ್ನು ಇಶಿಕಾ ಶರ್ಮಾ ಎಂದು ಗುರುತಿಸಲಾಗಿದೆ. ಆಕೆಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

    ಶರ್ಮಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೈಹಿಕ ಹಲ್ಲೆ ಮತ್ತು ಉಸಿರುಗಟ್ಟುವಿಕೆಯಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ವರದಿಗಳು ಬಹಿರಂಗಪಡಿಸಿವೆ. ಇಶಿಕಾ ಮತ್ತು ಆಕೆಯ ಸಹೋದರ ಹಿಂದಿನ ರಾತ್ರಿ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಮುಸ್ಲಿಮರಿಗೆ ಶೇ.30 ಮೀಸಲಾತಿ ಕೊಡಿ: ಜೆಡಿಯು ನಾಯಕ ಒತ್ತಾಯ

    ಪ್ರಮುಖ ಆರೋಪಿಯಾದ ಸಹೋದರನೊಂದಿಗೆ ಹೆಚ್ಚಿನ ಜನರು ಇದ್ದರು ಎಂದು ಶಂಕಿಸಲಾಗಿದೆ. ಆಕೆಯ ಸಾವಿಗೆ ನಿಖರ ಕಾರಣವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಹೋಟೆಲ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

    ಘಟನೆ ನಡೆದ ದಿನ ಇಶಿಕಾ ಪೋಷಕರು ಊರಿನಿಂದ ಹೊರಗಿದ್ದ ಕೊರ್ಬಾದಲ್ಲಿ ಇದ್ದರು. ಇಶಿಕಾ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಕೊನೆಯ ಸಂಭಾಷಣೆ ನಡೆಸಿದ್ದಳು. ಸೋಮವಾರ ಬೆಳಗ್ಗೆ ಆಕೆಯ ತಂದೆ ಪತ್ರಕರ್ತ ಗೋಪಾಲ್ ಶರ್ಮಾ ಇಶಿಕಾಗೆ ಕರೆ ಮಾಡಿದಾಗ ಫೋನ್ ತೆಗೆಯಲಿಲ್ಲ. ನಂತರ ಮಗನಿಗೆ ಕರೆ ಮಾಡಿದ್ದಾರೆ. ಆತನೂ ಉತ್ತರಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗೆಳತಿ ಹತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ – ಕೆಲವೇ ಗಂಟೆಯಲ್ಲೇ ಬೇರೊಬ್ಬಳನ್ನು ಮದುವೆಯಾದ

    ಘಟನೆಯಾದ ಮಾರನೇ ದಿನ ಬೆಳಗ್ಗೆ ವಾಚ್‌ಮನ್ ಮನೆಗೆ ಬಂದಾಗ ಮನೆಯ ಮುಂಭಾಗದ ಗೇಟ್ ತೆರೆದಿರುವುದು ಕಂಡು ಬಂದಿದೆ. ಗೋಪಾಲ್ ಶರ್ಮಾ ಅವರ ಮಗ ತನ್ನ ಕೋಣೆಯೊಳಗೆ ಮಲಗಿದ್ದ. ಇಶಿಕಾ ಅವರ ಮೃತದೇಹ ಆಕೆಯ ಮಲಗುವ ಕೋಣೆಯಲ್ಲಿ ಬಿದ್ದಿತ್ತು. ವಾಚ್‌ಮನ್‌ ಇದನ್ನು ಗಮನಿಸಿ, ಇಶಿಕಾಳ ಸಹೋದರನನ್ನು ಎಬ್ಬಿಸಿದ್ದಾನೆ. ನಂತರ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

    ಇಶಿಕಾ ಶರ್ಮಾ ಮತ್ತು ಆಕೆಯ ಸಹೋದರನೊಂದಿಗೆ ಮತ್ತೊಬ್ಬ ಯುವಕ ವಾಸಿಸುತ್ತಿದ್ದ. ಆದರೆ ಘಟನೆ ನಂತರ ಆತ ಪರಾರಿಯಾಗಿದ್ದಾನೆ. ಇಶಿಕಾ ಮತ್ತು ಅವಳ ಸಹೋದರನ ಮೊಬೈಲ್ ಮತ್ತು ಸ್ಕೂಟರ್ ಕಾಣೆಯಾಗಿದೆ. ಪರಾರಿಯಾಗಿರುವ ಯುವಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯೂಟ್ಯೂಬರ್ 22 ವರ್ಷದ ಲೀನಾ ನಾಗವಂಶಿ ಆತ್ಮಹತ್ಯೆ?

    ಯೂಟ್ಯೂಬರ್ 22 ವರ್ಷದ ಲೀನಾ ನಾಗವಂಶಿ ಆತ್ಮಹತ್ಯೆ?

    ರಾಯ್‍ಪುರ: ಯೂಟ್ಯೂಬರ್ (Youtuber) 22 ವರ್ಷದ ಲೀನಾ ನಾಗವಂಶಿ (Leena Nagwanshi) ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಛತ್ತೀಸ್‍ಗಢದ ರಾಯ್ಗಢದಲ್ಲಿರುವ ತಮ್ಮ ನಿವಾಸದಲ್ಲಿ ಲೀನಾ ಶವ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಲೀನಾ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದು, ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ಸಿಗಲಿದೆ.

    ದ್ವಿತೀಯ ವರ್ಷದ ಬಿ.ಕಾಂ ಪದವೀಧರೆಯಾಗಿರುವ ಲೀನಾ ರಾಯ್‍ಗಢದ ವಿಹಾರ್ ಕಾಲೋನಿಯಲ್ಲಿ ವಾಸವಾಗಿದ್ದರು. ಲೀನಾ ಅವರು ಯೂಟ್ಯೂಬ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಗಳಿಸಿದ್ದಾರೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು- ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

    ಇನ್‍ಸ್ಟಾದಲ್ಲಿ ಸುಮಾರು 10 ಸಾವಿರ ಫಾಲೋವರ್ ಗಳನ್ನು ಇವರು ಹೊಂದಿದ್ದಾರೆ. ಈಕೆ ಶಾರ್ಟ್ ವೀಡಿಯೋ ಹಾಗೂ ರೀಲ್ಸ್ ಗಳನ್ನು ಮಾಡುವ ಮೂಲಕ ಫೇಮ್ಸ ಆಗಿದ್ದರು. ಈ ಮೂಲಕ ಜನರಿಗೂ ಚಿರಪರಿಚಿತರಾಗಿದ್ದರು.

    ಸದ್ಯ ಲೀನಾ ಸಾವಿಗೆ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಏಕಕಾಲಕ್ಕೆ ಯುಟ್ಯೂಬರ್ ಅರ್ಮಾನ್ ಮಲಿಕ್ ಪತ್ನಿಯರು ಪ್ರೆಗ್ನೆಂಟ್

    ಏಕಕಾಲಕ್ಕೆ ಯುಟ್ಯೂಬರ್ ಅರ್ಮಾನ್ ಮಲಿಕ್ ಪತ್ನಿಯರು ಪ್ರೆಗ್ನೆಂಟ್

    ಗೆ ಬಗೆಯ ವೀಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿರುವ ಖ್ಯಾತ ಯುಟ್ಯೂಬರ್ ಅರ್ಮಾನ್ ಮಲ್ಲಿಕ್ (Armaan Malik) ಇದೀಗ ತಮ್ಮ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅರ್ಮಾನ್ ಮಲಿಕ್ ಅವರ ಇಬ್ಬರೂ ಪತ್ನಿಯರು ಏಕಕಾಲಕ್ಕೆ ಗರ್ಭ ಧರಿಸಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅರ್ಮಾನ್ ಟ್ರೋಲ್ ಆಗಿತ್ತಿದ್ದಾರೆ.

     

    View this post on Instagram

     

    A post shared by Armaan Malik (@armaan__malik9)

    ಯುಟ್ಯೂಬ್‌ನಲ್ಲಿ (Youtuber) ಸೆನ್ಸೆಷನ್ ಕ್ರಿಯೆಟ್ ಮಾಡಿರುವ ಅರ್ಮಾನ್ ಮಲಿಕ್ ತಮ್ಮ ಖಾಸಗಿ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚೆಗೆ ಅರ್ಮಾನ್ ಇಬ್ಬರೂ ಪತ್ನಿಯರೊಂದಿಗೆ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು. ಈ ಮೂಲಕ ತಮ್ಮ ಇಬ್ಬರೂ ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಗರ್ಭಿಣಿಯಾಗಿರುವ ವಿಚಾರವನ್ನ ಹಂಚಿಕೊಂಡಿದ್ದರು. ಬೇಬಿ ಬಂಪ್ ಫೋಟೋವನ್ನ ಹಂಚಿಕೊಂಡಿದ್ದರು. ಇದೀಗ ಈ ಪೋಸ್ಟ್ ನೋಡಿ ನೆಟ್ಟಿಗರು, ನಿಮಗೆ ನಾಚಿಕೆಯಾಗಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅರ್ಮಾನ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ವೇದಿಕೆಯಲ್ಲಿ ಸಾನ್ಯಗೆ ಖಡಕ್ ಉತ್ತರ ಕೊಟ್ಟ ಕಿಚ್ಚ

     

    View this post on Instagram

     

    A post shared by Armaan Malik (@armaan__malik9)

    ಮೂವರು ಅದು ಹೇಗೆ ಒಟ್ಟಿಗೆ ವಾಸಿಸುತ್ತಿದ್ದೀರಾ. ನಿಮಗೆ ನಾಚಿಗೆಯಾಗುವುದಿಲ್ವಾ ಎಂದರೆ, ಇನ್ನೂ ಕೆಲವರು ಅರ್ಮಾನ್‌ಗೆ ಇದು ಟ್ಯಾಲೆಂಟ್ ಗುರು ಎನ್ನುತ್ತಿದ್ದಾರೆ. ಇಬ್ಬರೂ ಏಕಕಾಲಕ್ಕೆ ಪ್ರೆಗ್ನೆಂಟ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಅರ್ಮಾನ್ ಅವರಿಗೆ ಈಗಾಗಲೇ ಚಿರಾಯು ಎಂಬ ಮಗನಿದ್ದಾನೆ. ಇದನ್ನೆಲ್ಲ ಅರಿತಿರೋ ಟ್ರೋಲಿಗರ ಕೆಂಗಣ್ಣಿಗೆ ಅರ್ಮಾನ್ ಗುರಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲೈವ್ ಸ್ಟ್ರೀಮ್ ನಡೆಸುತ್ತಿರುವಾಗಲೇ ಕೊರಿಯಾದ ಯುವತಿಗೆ ಮುಂಬೈನಲ್ಲಿ ಕಿರುಕುಳ – ಇಬ್ಬರು ಅರೆಸ್ಟ್

    ಲೈವ್ ಸ್ಟ್ರೀಮ್ ನಡೆಸುತ್ತಿರುವಾಗಲೇ ಕೊರಿಯಾದ ಯುವತಿಗೆ ಮುಂಬೈನಲ್ಲಿ ಕಿರುಕುಳ – ಇಬ್ಬರು ಅರೆಸ್ಟ್

    ಮುಂಬೈ: ಕೊರಿಯಾದ ಯುವತಿಯೊಬ್ಬಳು (Korean Woman) ಮುಂಬೈನಲ್ಲಿ (Mumbai) ಯೂಟ್ಯೂಬ್ ಲೈವ್ ಸ್ಟ್ರೀಮ್ (Live Stream) ನಡೆಸುತ್ತಿದ್ದ ವೇಳೆ ಇಬ್ಬರು ಪುಂಡರು ಆಕೆಗೆ ಕಿರುಕುಳ (Harassment) ನೀಡಿರುವ ಘಟನೆ ನಡೆದಿದೆ. ಯುವತಿಗೆ ಕಿರುಕುಳ ನೀಡಿದ ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಯುವತಿ ಲೈವ್ ಸ್ಟ್ರೀಮ್ ನಡೆಸುತ್ತಿದ್ದ ವೇಳೆ ಒಬ್ಬ ಆರೋಪಿ ಯುವತಿಯನ್ನು ಕೈ ಹಿಡಿದು ಎಳೆದೊಯ್ಯುವುದು ವೀಡಿಯೋದಲ್ಲಿ ಕಂಡುಬಂದಿದೆ. ಅಪರಿಚಿತ ವ್ಯಕ್ತಿಯೊಡನೆ ಆತ್ಮೀಯತೆಯಿಂದ ಮಾತನಾಡಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ.

     

    ಆರೋಪಿ ಯುವತಿಗೆ ಆತನ ಗೆಳೆಯನೊಬ್ಬನ ಬೈಕಿನಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿ, ಆತ ನಿನಗೆ ಡ್ರಾಪ್ ನೀಡುತ್ತಾನೆ ಎಂದು ಹೇಳಿದ್ದಾನೆ. ಇದನ್ನು ಯುವತಿ ನಿರಾಕರಿಸಿದ್ದಾಳೆ. ಬಳಿಕ ಆತ ಯುವತಿಗೆ ಮುತ್ತಿಕ್ಕಲೂ ಪ್ರಯತ್ನಿಸಿದ್ದಾನೆ. ಇದರಿಂದ ಕಳವಳಗೊಂಡ ಯುವತಿ ಮನೆಗೆ ಹೋಗುವುದಾಗಿ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

    ಆದರೂ ಬೆಂಬಿಡದ ಇಬ್ಬರು ಯುವಕರು ಆಕೆಯನ್ನು ಬೈಕಿನಲ್ಲಿ ಹಿಂಬಾಲಿಸಿದ್ದಾರೆ. ನನ್ನ ಮನೆ ಇಲ್ಲೇ ಹತ್ತರವಿದೆ ಎಂದು ಹೇಳಿ ಯುವತಿ ಅವರಿಬ್ಬರನ್ನು ಅಲ್ಲಿಂದ ಹೋಗುವಂತೆ ಮಾಡಿದ್ದಾಳೆ. ಇದನ್ನೂ ಓದಿ: ಬೆಂಗ್ಳೂರಿನ ಇತಿಹಾಸದಲ್ಲೇ ಫಸ್ಟ್ ಟೈಮ್ ಎಸ್‍ಪಿ ರೋಡ್ ಬಂದ್ – ಡಿ.13ಕ್ಕೆ ವಿಧಾನಸೌಧಕ್ಕೆ ವರ್ತಕರ ಮೆರವಣಿಗೆ

     

    ತನಗಾದ ಕಿರುಕುಳದ ಬಗ್ಗೆ ಯುವತಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾಳೆ. ಕಳೆದ ರಾತ್ರಿ ನನಗೆ ಒಬ್ಬ ಕಿರುಕುಳ ನೀಡಿದ್ದಾನೆ. ಆತ ತನ್ನ ಇನ್ನೊಬ್ಬ ಗೆಳೆಯನೊಂದಿಗೆ ಇದ್ದಿದ್ದರಿಂದ ನಾನು ಅಲ್ಲಿಂದ ತಪ್ಪಿಸಿಕೊಳ್ಳಲು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ. ನಾನು ಅಪರಿಚಿತರೊಂದಿಗೆ ಆತ್ಮೀಯತೆಯಿಂದ ಮಾತನಾಡಿದ್ದರಿಂದಲೇ ಹೀಗೆಲ್ಲಾ ಆಗಿದೆ ಎಂದು ಕೆಲವರು ತಿಳಿಸಿದ್ದಾರೆ. ಈ ಘಟನೆಯ ಬಳಿಕ ನಾನು ಮುಂದೆಯೂ ಸ್ಟ್ರೀಮಿಂಗ್ ಮಾಡಬೇಕೇ ಎಂಬ ಬಗ್ಗೆ ಯೋಚನೆ ಮಾಡುವಂತಾಗಿದೆ ಎಂದು ಯುವತಿ ಕಳವಳ ವ್ಯಕ್ತಪಡಿಸಿದ್ದಾಳೆ.

    ಮುಂಬೈ ಪೊಲೀಸರು ಈ ವೀಡಿಯೋವನ್ನಾಧರಿಸಿ ಸ್ವಯಂಪ್ರೇರಿತವಾಗಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್‌ ಸೇವನೆ ಆರೋಪ – NCB ಅಧಿಕಾರಿಗಳಿಂದ 3 ಯುವತಿಯರು ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಯೂಟ್ಯೂಬರ್ ಭೀಕರ ಅಪಘಾತದಲ್ಲಿ ಸಾವು

    ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಯೂಟ್ಯೂಬರ್ ಭೀಕರ ಅಪಘಾತದಲ್ಲಿ ಸಾವು

    ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Accident) ಜನಪ್ರಿಯ ಗೇಮಿಂಗ್ ಯೂಟ್ಯೂಬರ್ (Youtuber) ಅಭಿಯುದಯ್ ಮಿಶ್ರಾ ಮೃತಪಟ್ಟಿದ್ದಾರೆ.

    ಭೋಪಾಲ್‌ನಿಂದ 122 ಕಿ.ಮೀ ದೂರದಲ್ಲಿರುವ ಸೊಹಾಗ್‌ಪುರ ಬಳಿ ಇರುವ ರಾಜ್ಯ ಹೆದ್ದಾರಿಯಲ್ಲಿ ಟ್ರಕ್‌ಗೆ ಮಿಶ್ರಾ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಮಿಶ್ರಾ ಸಾವನ್ನಪ್ಪಿದ್ದಾರೆ.

     

    View this post on Instagram

     

    A post shared by SkyLord (@iamskylord69)

    ಅಭಿಯುದಯ್ ಮಿಶ್ರಾ ಅವರು ಪಬ್ಜಿಯಂತೆಯೇ ಮೊಬೈಲ್‌ನಲ್ಲಿರುವ ಫ್ರೀ ಪೈರ್‌ನಂತಹ ಗೇಮ್‌ನ ವೀಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಇದರಿಂದಲೇ ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಅಧಿಕ ಅಭಿಮಾನಿಗಳನ್ನು ಹೊಂದಿದ್ದರು. ಅಭಿಯುದಯ್ ಮಿಶ್ರಾ ಅವರನ್ನು ಸ್ಕೈಲಾರ್ಡ್ (Sky Lord) ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದನ್ನೂ ಓದಿ: ಪೆರಿಷಬಲ್ ಸರಕು ಸಾಗಣೆ – ಮತ್ತೆ ಮೊದಲ ಸ್ಥಾನ ಪಡೆದುಕೊಂಡ ಬೆಂಗಳೂರು ವಿಮಾನ ನಿಲ್ದಾಣ

    crime

    ಇನ್‌ಸ್ಟಾಗ್ರಾಂನಲ್ಲಿ ಇವರಿಗೆ ಒಟ್ಟಾರೆ 4.24 ಲಕ್ಷ ಫಾಲೋವರ್ಸ್‌ ಇದ್ದಾರೆ. ಯೂಟ್ಯೂಬ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು. ಎರಡು ವಾರಗಳ ಹಿಂದೆ ಕೊನೆಯ ವೀಡಿಯೋವನ್ನು ಪೋಸ್ಟ್ ಮಾಡಿದ್ದರು. ಘಟನೆಗೆ ಸಂಬಂಧಿಸಿ ಮಿಶ್ರಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪವನ್ನು ಸೂಚಿಸಿದ್ದಾರೆ. ಇದನ್ನೂ ಓದಿ: ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಭೇಟಿ – ಪೊಲೀಸರಿಗೆ ವಾರ್ನಿಂಗ್ ನೀಡಿದ ಡಿಕೆಶಿ

    Live Tv
    [brid partner=56869869 player=32851 video=960834 autoplay=true]

  • ದೇವಸ್ಥಾನದ ಪ್ರತಿಮೆ ನವೀಕರಿಸುವ ನೆಪದಲ್ಲಿ ದೇಣಿಗೆ ಸಂಗ್ರಹ- ಯುಟ್ಯೂಬರ್ ಅರೆಸ್ಟ್

    ದೇವಸ್ಥಾನದ ಪ್ರತಿಮೆ ನವೀಕರಿಸುವ ನೆಪದಲ್ಲಿ ದೇಣಿಗೆ ಸಂಗ್ರಹ- ಯುಟ್ಯೂಬರ್ ಅರೆಸ್ಟ್

    ಚೆನ್ನೈ: ದೇವಸ್ಥಾನದ ಉಪದೇವಾಲಯಗಳ ಪ್ರತಿಮೆಗಳನ್ನು ನವೀಕರಿಸುವ (ಜೀರ್ಣೋದ್ಧಾರ) ಮಾಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ದೇಣಿಗೆ ಸಂಗ್ರಹಿಸಿ ದುರುಪಯೋಗ ಪಡಿಸಿಕೊಂಡಿರುವ ಯುಟ್ಯೂಬರ್‌ನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

    ಪೆರಂಬಲೂರಿನ ಅರುಲ್ಮಿಗು ಮಧುರ ಕಾಳಿಯಮ್ಮನ್ ತಿರುಕೋಯಿಲ್‌ನ ಕಾರ್ಯನಿರ್ವಾಹಕ ಅಧಿಕಾರಿ ಟಿ.ಅರವಿಂದನ್ ಅವರ ದೂರಿನ ಆಧಾರದ ಮೇಲೆ ಕೇಂದ್ರ ಅಪರಾಧ ವಿಭಾಗದ (CCB) ಅವಡಿ ಪೊಲೀಸರು `ಇಳಯ ಭಾರತಂ’ ಯುಟ್ಯೂಬ್ ಚಾನೆಲ್‌ನ ಕಾರ್ತಿಕ್ ಗೋಪಿನಾಥ್ ಅವರನ್ನು ಬೆಳಗ್ಗೆ ಬಂಧಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿರುವ ಶೋರೂಂನಲ್ಲಿ ನವವಿವಾಹಿತೆ ಶವ ಪತ್ತೆ

    KILLING CRIME

    ಕಾರ್ತಿಕ್ ಗೋಪಿನಾಥ್ ಇಳಯ ಭಾರತಂ ಹೆಸರಿನಲ್ಲಿ ಯುಟ್ಯೂಬ್ ಚಾನಲ್ ತೆರೆದು ಸಾರ್ವಜನಿಕರಿಗೆ ಹಣ ನೀಡುವಂತೆ ಕೇಳಿಕೊಂಡಿದ್ದಾನೆ. ಮಧುರ ಕಾಳಿಯಮ್ಮನ್ ದೇವಸ್ಥಾನದ ಉಪದೇವಾಲಯಗಳ ಪ್ರತಿಮೆಗಳನ್ನು ನವೀಕರಿಸುವ ನೆಪದಲ್ಲಿ ನಿಧಿ ಸಂಗ್ರಹಕ್ಕಾಗಿ ವೆಬ್‌ಸೈಟ್ ಸಹ ತೆರೆದಿದ್ದನು. ಈ ಸಂಬಂಧ ಹಿಂದೂ ಧಾರ್ಮಿಕ ಮತ್ತು ಧರ್ಮದತ್ತಿ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ನಿಧಿ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ವಂತ ಮಾವನಿಂದಲೇ ಸೊಸೆಯ ಮೇಲೆ ರೇಪ್‌ – ಸುಳ್ಳು ಆರೋಪವೆಂದು ಜಾಮೀನು ಕೊಟ್ಟ ಕೋರ್ಟ್‌

    CRIME 2

    ಆದಾಗ್ಯೂ ಕಾರ್ತಿಕ್ ದೇವಸ್ಥಾನದ ಹೆಸರಿನಲ್ಲಿ ಸಂಗ್ರಹಿಸಿದ್ದ ಹಣವನ್ನು ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾನೆ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಬಂಧಿಸಿದ ತಮಿಳುನಾಡು ಪೊಲೀಸರು ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ) ಮತ್ತು ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

  • ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಸೋಷಿಯಲ್ ಮೀಡಿಯಾದ ಸ್ಟಾರ್ ಮತ್ತು ನಟಿ ಡಾಲಿ ಡಿಕ್ರೂಜ್ ಅಲಿಯಾಸ್ ಗಾಯತ್ರಿ ಮಾರ್ಚ್ 18ರಂದು ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಸ್ನೇಹಿತರ ಜೊತೆ ಹೋಳಿ ಪಾರ್ಟಿಗೆ ಎಂದು ಪಬ್ ವೊಂದಕ್ಕೆ ತೆರಳಿದ್ದ ಅವರು, ಅಲ್ಲಿಂದ ವಾಪಸ್ ಮನೆಗೆ ಬರುವಾಗ ಕಾರು ಅಪಘಾತವಾಗಿತ್ತು. ಚಾಲಕ ನಿಯಂತ್ರಣ ತಪ್ಪಿ ಫುಟ್ ಪಾತ್ ಮೇಲೆ ಹಾರಿದ್ದ ಕಾರು, ಈ ನಟಿಯ ಪ್ರಾಣ ತಗೆದಿತ್ತು. ಈ ಪ್ರಕರಣವನ್ನು ಬೆನ್ನುಹತ್ತಿದ್ದ ಪೊಲೀಸರಿಗೆ ಒಂದಷ್ಟು ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

    ಹೋಳಿ ಹಬ್ಬದ ದಿನ ಹೈದರಾಬಾದ್ ನಲ್ಲಿ ಮದ್ಯ ನಿಷೇಧವಾಗಿತ್ತು. ಹಾಗಾಗಿಯೇ ಇವರು ಮದ್ಯ ಕುಡಿಯಲೆಂದು ಉಪಾಯ ಮಾಡಿದ್ದು ಎಳನೀರನ್ನು. ಅದಕ್ಕೆ ಮಿಕ್ಸ್ ಮಾಡಿ ಗೊತ್ತಿಲ್ಲದಂತೆ ಗಾಯತ್ರಿ ಮತ್ತು ಅವರ ಜೊತೆ ಹೋಗಿದ್ದ ರೋಹಿತ್ ಗೆ ಕೊಟ್ಟಿದ್ದಾರೆ. ತಾವು ಎಷ್ಟು ಕುಡಿದಿದ್ದೇವೆ ಎಂದು ಅರಿಯದೇ ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ.

    ತಾನು ಮನೆಯಲ್ಲೇ ಹೋಳಿ ಹಬ್ಬ ಆಚರಿಸುವುದಾಗಿ ಗಾಯತ್ರಿ ಹೇಳಿದ್ದರೂ, ಒತ್ತಾಯ ಮಾಡಿ ರೋಹಿತ್ ಮತ್ತು ಸ್ನೇಹಿತರು ಆಕೆಯನ್ನು ಪ್ರಿಸ್ಮಾ ಎಂಬ ಪಬ್ ಗೆ ಕರೆದುಕೊಂಡು ಹೋಗಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಮನೆಯಲ್ಲೇ ಹಬ್ಬ ಆಚರಿಸಿದ್ದರೆ ಮಗಳ ಪ್ರಾಣ ಉಳಿಯತ್ತಿತ್ತು ಎಂದಿದ್ದಾರೆ ಕುಟುಂಬದ ಸದಸ್ಯರು. ಇದನ್ನೂ ಓದಿ : ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು

    ಗಾಯತ್ರಿ ಮತ್ತು ಸ್ನೇಹಿತರಿದ್ದ ಆ ಕಾರು ತುಂಬಾ ವೇಗವಾಗಿ ಚಲಿಸಿದೆ. ಫುಟ್ ಪಾತ್ ಗೆ ಢಿಕ್ಕಿ ಹೊಡೆದು, ಅಲ್ಲಿಂದ ಒಂದಷ್ಟು ಅಡಿ ಉರುಳುತ್ತಾ ಸಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೂ ತಾಗಿದೆ. ಆಕೆಯು ಕೂಡ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರಂತೆ.

  • ಪತ್ನಿಯನ್ನು ಕೊಂದ ಆರೋಪದ ಮೇಲೆ ಯೂಟ್ಯೂಬರ್ ಬಂಧನ

    ಪತ್ನಿಯನ್ನು ಕೊಂದ ಆರೋಪದ ಮೇಲೆ ಯೂಟ್ಯೂಬರ್ ಬಂಧನ

    ಮುಂಬೈ: ಪತ್ನಿಯನ್ನು ಕೊಲೆಗೈದ ಆರೋಪದ ಮೇಲೆ ಯೂಟ್ಯೂಬ್ ಆರ್ಟಿಸ್ಟ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಜಿತೇಂದ್ರ ಯಾನೇ ಜೀತು ಜಾನ್ ಎಂದು ಗುರುತಿಸಲಾಗಿದೆ. ಪತ್ನಿ ಕೋಮಲ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಂಡಪ್ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದಾರೆ.

    ಪೊಲೀಸರು ಮೊದಲಿಗೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಆದರೆ ಅಗರ್ವಾಲ್ ಅವರ ತಾಯಿ ಮತ್ತು ಸಹೋದರಿಯ ದೂರಿನ ನಂತರ ಜಿತೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 304 (ಅಪರಾಧ), 323 (ಸ್ವಯಂಪ್ರೇರಣೆಯಿಂದ ನೋವನ್ನುಂಟು ಮಾಡಿದ ಶಿಕ್ಷೆ), 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕೋಮಲ್ ಅವರ ಕುಟುಂಬವು, ಜೀತು ತನ್ನ ಹೆಂಡತಿಯನ್ನು ಕೊಂದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದೆ. ಕ್ಷುಲ್ಲಕ ವಿಚಾರಗಳಿಗೆ ಸಂಬಂಧಿಸಿದಂತೆ ತನ್ನ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು. ಕೋಮಲ್ ಅವರನ್ನು ಜೀತು ಅನೇಕ ಬಾರಿ ದೈಹಿಕವಾಗಿ ನಿಂದಿಸುತ್ತಿದ್ದು, ಅವನು ಅವಳನ್ನು ಕೊಂದಿರಬಹುದು ಎಂದು ಕೋಮಲ್ ತಾಯಿ ಮತ್ತು ಸಹೋದರಿ ಪ್ರಿಯಾ ಹೇಳಿದ್ದಾರೆ.

    ಸದ್ಯ ಕೋಮಲ್ ಶವವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಳಿಕವಷ್ಟೇ ಸಾವೋ ಅಥವಾ ಆತ್ಮಹತ್ಯೆಯೋ ಎಂಬುದು ಬೆಳಕಿಗೆ ಬರಲಿದೆ.

  • ವಿಡಿಯೋ: ಕಾಲಿನ ಮೇಲೆ ಹರಿದು ಬಂದ ವಿಷಕಾರಿ ಹಾವಿನಿಂದ ಈತ ಪಾರಾಗೋದನ್ನ ನೋಡಿದ್ರೆ ಆಶ್ಚರ್ಯಪಡ್ತೀರ!

    ವಿಡಿಯೋ: ಕಾಲಿನ ಮೇಲೆ ಹರಿದು ಬಂದ ವಿಷಕಾರಿ ಹಾವಿನಿಂದ ಈತ ಪಾರಾಗೋದನ್ನ ನೋಡಿದ್ರೆ ಆಶ್ಚರ್ಯಪಡ್ತೀರ!

    ವಾಷಿಂಗ್ಟನ್: ಮನೆಯಲ್ಲೋ, ಹಿತ್ತಲಲ್ಲೋ ಹಾವು ಕಾಣಿಸಿಕೊಂಡ್ರೆ ಅದರ ಹತ್ರ ಹೋಗೋಕೂ ಭಯ ಪಡ್ತೀವಿ. ಅಂಥದ್ರಲ್ಲಿ ಮೈ ಮೇಲೆಯೇ ಹಾವು ಹರಿದು ಬಂದ್ರೆ ಏನಾಗ್ಬೇಡ. ಯೂಟ್ಯೂಬರ್ ನಿಕ್ ಬಿಶಾಪ್ ಎಂಬವರು ಕಾಡು ಪ್ರಾಣಿಗಳ ಮತ್ತು ಹಾವುಗಳ ಬಗ್ಗೆ ಡಾಕ್ಯುಮೆಂಟರಿ ಮಾಡಲು ಅಮೆರಿಕದಾದ್ಯಂತ ಸಂಚಾರ ಮಾಡ್ತಿರ್ತಾರೆ. ಹೀಗೆ ಒಮ್ಮೆ ಚಿತ್ರೀಕರಣ ಮಾಡಲೆಂದು ಹೋದಾಗ ಸುಸ್ತಾಯ್ತು ಅಂತ ಕುಳಿತಿದ್ದ ನಿಕ್ ಬಳಿ ವಿಷಕಾರಿ rattlesnake ಜಾತಿಯ ಹಾವು ಬಂದಿದೆ.

    ಹಾವು ಸಮೀಪ ಬರುತ್ತಿದ್ದಂತೆ ನಿಕ್ ನನಗೆ ಚಲಿಸಲು ಭಯವಾಗ್ತಿದೆ, ನಾನು ಮರಗಟ್ಟಿಹೋಗಿದ್ದೇನೆ ಅಂತ ಹೇಳೋದನ್ನ ವಿಡಿಯೋದಲ್ಲಿ ಕೇಳಬಹುದು. ಹಾವನ್ನ ಓಡಿಸಲು ನಿಕ್ ಅದರ ಬಾಲ ಮುಟ್ಟಿದಾಗ ಅದು ಒಮ್ಮೆಲೆ ಆತನ ಕಾಲಿನ ಮೇಲೇರಿ ಬರುತ್ತದೆ. ಆದ್ರೂ ನಿಕ್ ಮತ್ತೊಮ್ಮೆ ಒಂದು ಕಡ್ಡಿಯಿಂದ ಅದರ ಬಾಲವನ್ನ ಮುಟ್ಟಿದ್ದು, ಅದು ಮೆಲ್ಲನೆ ನಿಕ್ ಪಕ್ಕದಲ್ಲೇ ಹರಿದು ಹಿಂದಕ್ಕೆ ಹೋಗುತ್ತದೆ.

    ವಿಡಿಯೋದ ವಿವರಣೆಯ ಪ್ರಕಾರ ಇದು ಈಸ್ಟರ್ನ್ ಡೈಮಂಡ್‍ಬ್ಯಾಕ್ rattlesnake ಆಗಿದ್ದು, ಇದು ಅತ್ಯಂತ ವಿಷಕಾರಿ ಹಾವಾಗಿದೆ. ಈ ಹಾವನ್ನ ಕೆಣಕಿದರಷ್ಟೆ ದಾಳಿ ಮಾಡುತ್ತದೆ. ಅಲ್ಲದೆ ಈ ಹಾವು ಕಚ್ಚಿದ್ರೆ ಮನುಷ್ಯರು ಸಾವನ್ನಪ್ಪುತ್ತಾರೆ ಎಂದು ವರದಿಯಾಗಿದೆ.

    ನಿಕ್ ತನ್ನ ಯೂಟ್ಯೂಬ್ ಖಾತೆ ನಿಕ್ ದಿ ವ್ರಾಂಗ್ಲರ್‍ನಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದು, ಇದು ಅತ್ಯಂತ ಅಪಾಯಕರವಾದ ವಿಷಕಾರಿ ಹಾವನ್ನ ಎದುರುಗೊಂಡಿದ್ದು. ಇದನ್ನ ಪ್ರಯತ್ನಿಸಬೇಡಿ ಅಂತ ವಿವರಣೆಯಲ್ಲಿ ಹೇಳಿದ್ದಾರೆ.

    ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಾಗಿನಿಂದ ಈವರೆಗೆ 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, 90 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

    ವಿಡಿಯೋ ನೋಡಿದವರಲ್ಲಿ ಕೆಲವರು ಇದು ನಿಜಕ್ಕೂ ಭಯಾನಕವಾಗಿದೆ ಎಂದು ಕಮೆಂಟ್ ಮಾಡಿದ್ದರೆ ಇನ್ನೂ ಕೆಲವರು, ನಿನಗೆ ಬುದ್ಧಿ ಇಲ್ವಾ ಎಂದಿದ್ದಾರೆ. ಆದ್ರೆ ಹಾವು ಬಂದ್ರೂ ಕ್ಯಾಮೆರಾಮೆನ್ ಸಹಾಯಕ್ಕೆ ಧಾವಿಸದೇ ಇದ್ದಿದ್ದರಿಂದ ಕೆಲವರು ಈ ವಿಡಿಯೋ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.

    https://www.facebook.com/Nickthewranglerfanpage/videos/1774746626188252/