Tag: youtuber

  • 3 ದಿನಗಳಲ್ಲಿ 11 ಪಾಕ್ ಸ್ಪೈಗಳ ಬಂಧನ – ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್‌ಗಳಾಗಿದ್ದವರು ಬೇಹುಗಾರರಾಗಿ ಕೆಲಸ

    3 ದಿನಗಳಲ್ಲಿ 11 ಪಾಕ್ ಸ್ಪೈಗಳ ಬಂಧನ – ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್‌ಗಳಾಗಿದ್ದವರು ಬೇಹುಗಾರರಾಗಿ ಕೆಲಸ

    – ಪಹಲ್ಗಾಮ್‌ ದಾಳಿಯಲ್ಲಿ ಭದ್ರತಾ ಪಡೆಗಳದ್ದೇ ವೈಫಲ್ಯ ಅಂದಿದ್ದ ಜ್ಯೋತಿ ಮಲ್ಹೋತ್ರಾಳ ವಿಡಿಯೋ ಲಭ್ಯ

    ನವದೆಹಲಿ: ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನದ ಕಿವಿಯಲ್ಲಿ ದೇಶದ ಗುಟ್ಟು ಪಿಸುಗುಡುತ್ತಿರುವ ಬೇಹುಗಾರರ (Pakistani Spy) ಬಂಧನ ಸಂಖ್ಯೆ 11ಕ್ಕೆ ಏರಿದೆ.

    ಎನ್‌ಐಎ, ಹರಿಯಾಣ, ಪಂಜಾಬ್ ಪೊಲೀಸರು (Punjab Police) ಒಟ್ಟು 8 ಜನರನ್ನು ಬಂಧಿಸಿದ್ರು.. ಈ ಬೆನ್ನಲ್ಲೇ ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ಮತ್ತೋರ್ವ ವ್ಯಕ್ತಿಯನ್ನ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಶೆಹಜಾದ್ ಎಂಬಾತನನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.

    ಈತ ಭಾರತದಲ್ಲಿರುವ ಪಾಕ್ ಏಜೆಂಟ್‌ಗಳಿಗೆ ಹಣ ರವಾನಿಸುತ್ತಿದ್ದ.. ಭಾರತದ ಸಿಮ್ ಕೊಡಿಸಲು ಸಹಕಾರ ನೀಡ್ತಿದ್ದ ಎನ್ನಲಾಗಿದೆ. ಇತ್ತ ಪಾಕಿಸ್ತಾನ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದ ತಾರೀಫ್ ಎಂಬಾತನನ್ನು ಹರಿಯಾಣದ ನುಹ್‌ನಲ್ಲಿ ಬಂಧಿಸಲಾಗಿದೆ. ಈತ ವಾಟ್ಸಪ್‌ ಮೂಲಕ ಭಾರತೀಯ ಮಿಲಿಟರಿ ಚಟುವಟಿಕೆಯ ಗೌಪ್ಯ ಮಾಹಿತಿಯನ್ನು ಪಾಕ್ ಹೈಕಮಿಷನ್ ಏಜೆಂಟ್‌ಗಳಿಗೆ ರವಾನಿಸುತ್ತಿದ್ದಿದ್ದು ಬಯಲಾಗಿದೆ.

    ಇನ್ನೂ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಇನ್‌ಸ್ಟಾಗ್ರಾಮ್‌ ಖಾತೆಯನ್ನ ನಿರ್ಬಂಧಿಸಲಾಗಿದೆ. ಈ ಬೆನ್ನಲ್ಲೇ ಆಕೆಯ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪಹಲ್ಗಾಮ್ ದಾಳಿಯಲ್ಲಿ ನಮ್ಮ ಭದ್ರತಾ ವೈಫಲ್ಯ ಇದೆ… ನಮ್ಮ ಸರ್ಕಾರದ್ದೇ ತಪ್ಪು ಎಂದಿದ್ದ ಜ್ಯೋತಿ ವಿಡಿಯೋ ಸಹ ಸಿಕ್ಕಿದೆ. ಪಹಲ್ಗಾಮ್ ಉಗ್ರದಾಳಿಯಲ್ಲಿ ಪಾಕ್‌ನ ಇಬ್ಬರು ಸೇನಾ ಕಮಾಂಡರ್‌ಗಳು ಶಾಮೀಲಾಗಿದ್ದರು ಅಂತ ತಿಳಿದು ಬಂದಿದೆ.

    ಈ ಮಧ್ಯೆ, ಹೈದ್ರಾಬಾದ್‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದ ಇಬ್ಬರು ಭಯೋತ್ಪಾದಕರನ್ನು ತೆಲಂಗಾಣ, ಆಂಧ್ರಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ, ವಿಜಯನಗರದ ಸಿರಾಜ್ ಮತ್ತು ಹೈದರಾಬಾದ್‌ನ ಸಮೀರ್ ಎಂಬವರನ್ನ ಬಂಧಿಸಿದ್ದಾರೆ.

  • ಪಾಕ್‌ ಹೈಕಮಿಷನ್‌ ಅಧಿಕಾರಿ ಜೊತೆ ಜ್ಯೋತಿ ಫೋಟೊ ರಿವೀಲ್ – ಪಾಕಿಸ್ತಾನಕ್ಕೆ ಬರ್ತೀನಿ ಎನ್ನುತ್ತಿದ್ದ ಯೂಟ್ಯೂಬರ್‌

    ಪಾಕ್‌ ಹೈಕಮಿಷನ್‌ ಅಧಿಕಾರಿ ಜೊತೆ ಜ್ಯೋತಿ ಫೋಟೊ ರಿವೀಲ್ – ಪಾಕಿಸ್ತಾನಕ್ಕೆ ಬರ್ತೀನಿ ಎನ್ನುತ್ತಿದ್ದ ಯೂಟ್ಯೂಬರ್‌

    – ಭಾರತೀಯ ಸೇನೆಯ ಮಾಹಿತಿ ಸೋರಿಕೆ ಮಾಡಿ ದೇಶದಿಂದ ಹೊರಹಾಕಲ್ಪಟ್ಟ ಅಧಿಕಾರಿ ಜೊತೆ ನಂಟು

    ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ (Jyoti Malhotra), ಕಳೆದ ವರ್ಷ ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ (Pakistan High Commission) ಇಫ್ತಾರ್ ಔತಣಕೂಟದಲ್ಲಿ ಭಾಗವಹಿಸಿದ್ದ ವಿಚಾರ ಬೆಳಕಿಗೆ ಬಂದಿದೆ.

    ಇಫ್ತಾರ್‌ ಕೂಟದಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾಡಿದ್ದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡುವ ಆಸಕ್ತಿಯನ್ನು ಪದೇ ಪದೇ ವ್ಯಕ್ತಪಡಿಸಿದ್ದಾರೆ. ತಾನು ಭೇಟಿಯಾದ ಬಹುತೇಕ ಎಲ್ಲರನ್ನೂ ಪಾಕ್‌ ವೀಸಾ ಪಡೆಯಲು ಸಹಾಯ ಮಾಡುವಂತೆ ಕೇಳಿದ್ದರೆಂಬ ವಿಚಾರವೂ ತಿಳಿದುಬಂದಿದೆ. ಇದನ್ನೂ ಓದಿ: ಪಹಲ್ಗಾಮ್‌ಗೂ ಭೇಟಿ ನೀಡಿದ್ದಳು ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ!

    ‘ಟ್ರಾವೆಲ್ ವಿತ್ ಜೋ’ ಎಂಬ ಪ್ರಯಾಣ ಯೂಟ್ಯೂಬ್ ಖಾತೆಯನ್ನು ಹೊಂದಿರುವ 33 ವರ್ಷದ ಜ್ಯೋತಿ, ಪಾಕಿಸ್ತಾನದ ಹೈಕಮಿಷನ್ ಅಧಿಕಾರಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್‌ನನ್ನು ಭೇಟಿಯಾಗಿರುವ ವೀಡಿಯೊ ಕೂಡ ಇದೆ.

    ಬೇಹುಗಾರಿಕೆ ಮತ್ತು ಭಾರತೀಯ ಸೇನೆಯ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಡ್ಯಾನಿಶ್‌ನನ್ನು 24 ಗಂಟೆಗಳ ಒಳಗೆ ಭಾರತವನ್ನು ತೊರೆಯುವಂತೆ ಸೂಚಿಸಲಾಗಿತ್ತು. ಮಲ್ಹೋತ್ರಾ, ರಹೀಮ್ ಪತ್ನಿಯನ್ನು ಸಹ ಭೇಟಿಯಾಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಪರ ಬೇಹುಗಾರಿಕೆ – ಭಾರತದ ಯೂಟ್ಯೂಬರ್ ಬಂಧನ

    ಕಳೆದ ವರ್ಷ ಮಾರ್ಚ್ 30 ರಂದು ಪೋಸ್ಟ್ ಮಾಡಲಾದ ಈ ವೀಡಿಯೊ, ಮಲ್ಹೋತ್ರಾ ತನ್ನನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳುವ ಮೂಲಕ ಪ್ರಾರಂಭವಾಗುತ್ತದೆ. ನಂತರ ಹೈಕಮಿಷನ್‌ಗೆ ಪ್ರವೇಶಿಸಿ, ಅಲಂಕಾರವನ್ನು “ಅದ್ಭುತ” ಎಂದು ಬಣ್ಣಿಸುತ್ತಾರೆ.

  • ಪಾಕಿಸ್ತಾನ ಪರ ಬೇಹುಗಾರಿಕೆ – ಭಾರತದ ಯೂಟ್ಯೂಬರ್ ಬಂಧನ

    ಪಾಕಿಸ್ತಾನ ಪರ ಬೇಹುಗಾರಿಕೆ – ಭಾರತದ ಯೂಟ್ಯೂಬರ್ ಬಂಧನ

    ಚಂಡೀಗಢ: ಪಾಕಿಸ್ತಾನದ (Pakistan) ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಹರಿಯಾಣ (Haryana) ಮೂಲದ ಯೂಟ್ಯೂಬರ್ (Youtuber) ಸೇರಿ ಇಬ್ಬರನ್ನು ಎನ್‌ಐಎ (NIA) ಅಧಿಕಾರಿಗಳು ಬಂಧಿಸಿದ್ದಾರೆ.

    ಜ್ಯೋತಿ ಮಲ್ಹೋತ್ರಾ ಹಾಗೂ ಗುಜಾಲಾ ಬಂಧಿತ ಆರೋಪಿಗಳು. 2023ರಲ್ಲಿ ಪಾಕ್‌ಗೆ ಹೋಗಿದ್ದ ಜ್ಯೋತಿ ಪಾಕ್ ಹೈಕಮಿಷನ್ ಉದ್ಯೋಗಿ ಡ್ಯಾನಿಶ್ ಜೊತೆ ನಿಕಟ ಸಂಬಂಧ ಬೆಳೆಸಿದ್ದಳು.  ಅಲ್ಲದೇ ಪಾಕ್ ಗುಪ್ತಚರ ಏಜೆಂಟ್‌ಗಳೊಂದಿಗೆ ಸಹ ಸಂಪರ್ಕ ಹೊಂದಿದ್ದಳು.  ಮೇ 1 3ರಂದು ಡ್ಯಾನಿಶ್‌ನನ್ನು ಸರ್ಕಾರ  ಮನೆಗೆ ಕಳುಹಿಸಿತ್ತು. ‘ಟ್ರಾವೆಲ್ ವಿತ್ ಜೋ’ ಯೂಟ್ಯೂಬ್ ನಡೆಸುತ್ತಿದ್ದ ಜ್ಯೋತಿ ತನ್ನ ಯೂಟ್ಯೂಬ್‌ ಚಾನಲ್‌ನಲ್ಲಿ ಪಾಕಿಸ್ತಾನ ಪರ ಇರುವ ವಿಷಯಗಳನ್ನು ಅಪ್ಲೋಡ್‌ ಮಾಡುತ್ತಿದ್ದಳು. ಅಲ್ಲದೇ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಶಕೀರ್ ಅಲಿಯಾಸ್ ರಾಣಾ ಶಹಬಾಜ್ ಸೇರಿದಂತೆ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರದ ಬಗ್ಗೆ ಪಾಕ್‌ಗೆ ಮಾಹಿತಿ ನೀಡುತ್ತಿದ್ದ ಹರಿಯಾಣದ ಯುವಕ ಅರೆಸ್ಟ್

    ಜ್ಯೋತಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 152 ಮತ್ತು 1923ರ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3, 4 ಮತ್ತು 5ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಹಿಸಾರ್‌ನ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಸಾಕ್ಷಿ ಕೇಳೋರನ್ನ ಪಾಕಿಸ್ತಾನಕ್ಕೆ ಕಳಿಸಿ: ಕಾಂಗ್ರೆಸ್ ನಾಯಕರ ವಿರುದ್ಧ ಶೋಭಾ ಕಿಡಿ

  • ಯುವಕನೊಂದಿಗೆ ಆಂಟಿ ಲವ್ವಿಡವ್ವಿ – ರೀಲ್ಸ್‌ ಪ್ರಿಯನಿಗಾಗಿ ಗಂಡನಿಗೇ ಚಟ್ಟ ಕಟ್ಟಿದ ಪತ್ನಿ

    ಯುವಕನೊಂದಿಗೆ ಆಂಟಿ ಲವ್ವಿಡವ್ವಿ – ರೀಲ್ಸ್‌ ಪ್ರಿಯನಿಗಾಗಿ ಗಂಡನಿಗೇ ಚಟ್ಟ ಕಟ್ಟಿದ ಪತ್ನಿ

    – ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ

    ನವದೆಹಲಿ: ಕೆಲ ದಿನಗಳ ಹಿಂದೆಯಷ್ಟೇ ಮೀರತ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗಾಗಿ ಪತಿಯನ್ನ ಕೊಂದು, ತುಂಡು ತುಂಡಾಗಿ ಕತ್ತರಿಸಿ ಸಿಮೆಂಟ್‌ ತುಂಬಿದ ಡ್ರಮ್‌ನಲ್ಲಿ ಮುಚ್ಚಿಟ್ಟಿದ್ದ ಘಟನೆ ಬೆಳಕಿಗೆ ಬಂದಿತ್ತು. ಅದೇ ರೀತಿ ಮತ್ತೊಂದು ಪ್ರಕರಣ ಈಗ ಹರಿಯಾಣದ ಹಿಸಾರ್‌ (Haryana’s Hisar) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ರೀಲ್ಸ್‌ ಪ್ರಿಯನಿಗಾಗಿ (Reels Lover) ಮಹಿಳೆಯೊಬ್ಬಳು ದುಪ್ಪಟ್ಟಾದಿಂದ ತನ್ನ ಪತಿಯ ಕತ್ತುಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಇಬ್ಬರ ಕಳ್ಳಸಂಬಂಧ ಪತ್ತೆಹಚ್ಚಿದ ಬಳಿಕ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಮುಗಿಸಿದ್ದಾಳೆ ಪತ್ನಿ. ರವೀನಾ (32) ಮತ್ತು ಸುರೇಶ್ ಕೊಲೆ ಆರೋಪಿಗಳಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!

    ಆಂಟಿಗೆ ಲವ್‌ ಹುಟ್ಟಿದ್ದು ಹೇಗೆ?
    32 ವರ್ಷದ ರವೀನಾ ಮತ್ತು ರೀಲ್ಸ್‌ ಸ್ಟಾರ್‌ ಸುರೇಶ್‌ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪರಿಚಯವಾಗಿದ್ದರು. ಹರಿಯಾಣದ ಪ್ರೇಮ್‌ನಗರಲ್ಲಿ ಇಬ್ಬರು ಒಟ್ಟಿಗೇ ವಿಡಿಯೋ ಮಾಡಲು ಪ್ರಾರಂಭಿಸಿದ್ದರು. ಇದಕ್ಕೆ ರವೀನಾಳ ಪತಿ ಪ್ರವೀಣ್‌ ಮತ್ತು ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ರು. ಆದಾಗ್ಯೂ ಸುಮಾರು ಒಂದೂವರೆ ವರ್ಷಗಳ ಕಾಲ ಇಬ್ಬರು ಕಂಟೆಂಟ್‌ ಕ್ರಿಯೇಟ್‌ ಮಾಡುತ್ತಿದ್ದರು. ಇದರಿಂದ ಫಾಲೋವರ್ಸ್‌ಗಳ ಸಂಖ್ಯೆ 34,000ಕ್ಕೆ ತಲುಪಿತ್ತು. ಇದನ್ನೂ ಓದಿ: ತಾಲಿಬಾನ್‌ ಜೊತೆ ಪಾಕಿಸ್ತಾನ ಡಬಲ್‌ ಗೇಮ್‌ ಆಡುತ್ತಿದೆ: ಜೈಶಂಕರ್‌

    ಬಳಿಕ ಇತರ ಕಲಾವಿದರನ್ನೂ ಸೇರಿಸಿಕೊಂಡು ರೀಲ್ಸ್‌ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ರೀಲ್ಸ್‌ ಮಾಡುತ್ತಲೇ ರವೀನಾ ಮತ್ತು ಸುರೇಶ್‌ ಚಕ್ಕಂದ ಆಡಲು ಶುರು ಮಾಡಿದ್ದರು. ಕಳೆದ ಮಾರ್ಚ್‌ 25ರಂದು ರವೀನಾಳ ಪತಿ ಪ್ರವೀಣ್‌ (35), ಇವರಿಬ್ಬರೂ ಅಕ್ರಮ ಸಂಬಂಧ ಇರುವುದನ್ನು ಪತ್ತೆಹಚ್ಚಿದ್ದ. ಹೀಗಾಗಿ ರವೀನಾ ತನ್ನ ಪ್ರಿಯಕರ ಸುರೇಶ್‌ ಜೊತೆ ಸೇರಿ ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಇದನ್ನೂ ಓದಿ: ಟ್ರಂಪ್‌ ಬೆದರಿಕೆ ನಡುವೆ ಭಾರತದ ಪ್ರಜೆಗಳಿಗೆ 85,000 ವೀಸಾ ನೀಡಿದ ಚೀನಾ

    ಪ್ರವೀಣ್‌ ಎಲ್ಲಿದ್ದಾನೆ ಅಂತ ಮನೆಯವರು ಕೇಳಿದಾಗ ತನಗೇನು ಗೊತ್ತೇ ಇಲ್ಲವೆಂಬಂತೆ ರವೀನಾ ನಟಿಸಿದ್ದಾಳೆ. ಅದೇ ದಿನ ರಾತ್ರಿ 2:30ರ ಸುಮಾರಿಗೆ ಪ್ರಿಯಕರನ ಬೈಕ್‌ನಲ್ಲಿ (Lover Bike) ಪ್ರವೀಣ್‌ ಶವ ಸಾಗಿಸಿದ್ದಾಳೆ. ಹಿಸಾರ್‌ನರುವ ತನ್ನ ಮನೆಯಿಂದ 6 ಕಿಮೀ ದೂರದಲ್ಲಿರುವ ದಿನೊಡ್‌ ರಸ್ತೆ ಬಳಿಯ ಚರಂಡಿಗೆ ಶವ ಎಸೆದುಬಂದಿದ್ದಾಳೆ. ಕಳೆದ ಮಾರ್ಚ್‌ 28ರಂದು ಪೊಲೀಸರಿಗೆ ಪ್ರವೀಣ್‌ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ಬೆಂಗ್ಳೂರಿಗೆ ಸೆಡ್ಡು ಹೊಡೆಯಲು ಆಂಧ್ರ ಸರ್ಕಾರದಿಂದ ಭಾರೀ ಆಫರ್ – ಟಿಸಿಎಸ್‌ಗೆ 99 ಪೈಸೆಗೆ 21 ಎಕ್ರೆ ಭೂಮಿ

    ಬಳಿಕ ಆಕೆಯ ಮನೆಯ ರಸ್ತೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ರವೀನಾ ಹೆಲ್ಮೆಟ್‌ ಧರಿಸಿ ಬೈಕ್‌ನಲ್ಲಿ ಬಂದ ವ್ಯಕ್ತಿಯೊಂದಿಗೆ ತನ್ನ ಮುಖಮುಚ್ಚಿಕೊಂಡು ಶವ ಸಾಗಿದ್ದಾಳೆ. 2 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗುವಾಗ ಬೈಕ್‌ನಲ್ಲಿ ಇಬ್ಬರೇ ಬಂದಿದ್ದಾರೆ. ಈ ವೇಳೆ ಮಧ್ಯದಲ್ಲಿದ್ದ ಮೃತದೇಹ ನಾಪತ್ತೆಯಾಗಿತ್ತು. ಬಳಿಕ ಮಾಹಿತಿ ಖಚಿತಪಡಿಸಿಕೊಂಡ ಪೊಲೀಸರು ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ. ರವೀನಾ ಮತ್ತು ಪ್ರವೀಣ್‌ಗೆ 6 ವರ್ಷದ ಮಗ ಇದ್ದು, ತನ್ನ ಅಜ್ಜನೊಂದಿಗೆ ವಾಸಿಸುತ್ತಿದ್ದಾನೆ.

  • 300 ಕಿಮೀ ವೇಗದಲ್ಲಿ ಚಾಲನೆ; ಲ್ಯಾಂಬೊರ್ಗಿನಿ ಕಾರು ಹತ್ತಿಸಿ ಫುಟ್‌ಪಾತ್‌ನಲ್ಲಿದ್ದ ಕಾರ್ಮಿಕರಿಗೆ ಗಾಯ!

    300 ಕಿಮೀ ವೇಗದಲ್ಲಿ ಚಾಲನೆ; ಲ್ಯಾಂಬೊರ್ಗಿನಿ ಕಾರು ಹತ್ತಿಸಿ ಫುಟ್‌ಪಾತ್‌ನಲ್ಲಿದ್ದ ಕಾರ್ಮಿಕರಿಗೆ ಗಾಯ!

    – ಕಾರು‌ ಹತ್ತಿಸಿ ಯಾರಾದ್ರೂ ಸತ್ತಿದ್ದಾರಾ ಅಂತ ಕೇಳಿದ ಚಾಲಕ

    ಲಕ್ನೋ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಗಂಟೆಗೆ 300 ಕಿಮೀ ವೇಗದಲ್ಲಿ ಬಂದ ಲ್ಯಾಂಬೋರ್ಗಿನಿ ಕಾರು (Lamborghini Car) ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗಕ್ಕೆ ನುಗ್ಗಿದೆ. ಈ ವೇಳೆ ಫುಟ್‌ಪಾತ್‌ನಲ್ಲಿದ್ದ ಛತ್ತೀಸ್‌ಗಢದ ಇಬ್ಬರು ಕಾರ್ಮಿಕರಿಗೆ (Labourers) ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. ಈ ವೇಳೆ ಕಾರು ಚಾಲಕ ತೋರಿದ ವರ್ತನೆ, ನೀಡಿದ ಹೇಳಿಕೆ ಭಾರೀ ಚರ್ಚೆ ಹುಟ್ಟುಹಾಕಿದೆ.

    ನೋಯ್ಡಾದ ಸೆಕ್ಟರ್ 94ರಲ್ಲಿ (Noida’s sector 94) ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಈ ಘಟನೆ ನಡೆದಿದೆ. ಆದ್ರೆ ವೇಗವಾಗಿ ಕಾರು ಚಲಾಯಿಸಿಕೊಂಡ ಬಂದ ವ್ಯಕ್ತಿ ಅಪಘಾತ ಮಾಡಿ, ಏನೂ ನಡೆದಿಲ್ಲ ಅನ್ನುವಂತೆ ಕೂಲಾಗಿ ಇಳಿದು ಯಾರಾದ್ರು ಸತ್ತಿದ್ದಾರಾ? ಅಂತ ಕೇಳಿದ್ದಾನೆ. ಈ ಅಮಾನವೀಯ ಪ್ರತಿಕ್ರಿಯೆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಸದ್ಯ ಕಾರು ಚಾಲಕನಾದ ಅಜ್ಮೀರ್ ನಿವಾಸಿ ದೀಪಕ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮೀರತ್‌ ಮಾದರಿ ಪೀಸ್‌ ಪೀಸ್‌ ಮಾಡಿ ಡ್ರಮ್‌ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ! 

    ದೀಪಕ್ ಅಜ್ಮೀರ್‌ ಮೂಲತಃ ಕಾರು ಮಾರಾಟಗಾರ. ಈತ ಕಾರಿನ ಟೆಸ್ಟ್ ಡ್ರೈವ್‌ಗಾಗಿ ನೊಯ್ಡಾಗೆ ಬಂದಿದ್ದ. ಕಾರಿನ ಮಾಲೀಕ ಮೃದುಲ್, ಸೆಕ್ಟರ್ 94 ರ ಸೂಪರ್ನೋವಾದ ನಿವಾಸಿ. ಅವರು ಯೂಟ್ಯೂಬರ್ (YouTuber) ಆಗಿದ್ದು, 18.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬೇಸಿಗೆ ಅವಧಿಯಲ್ಲಿ ಮುಂಬೈ-ಬೆಂಗಳೂರು ನಡುವೆ ವಿಶೇಷ ರೈಲುಗಳ ಸಂಚಾರ

    ಪೊಲೀಸರ ಪ್ರಕಾರ, ದೀಪಕ್ ಒಬ್ಬನೇ ಕಾರು ಚಲಾಯಿಸುತ್ತಿದ್ದಾಗ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪ್ರಾಥಮಿಕ ತನಿಖೆಯಿಂದ ಪ್ರಕಾರ ದೀಪಕ್ ಭಾನುವಾರ ಬೆಳಗ್ಗೆ ಕಾರು ಟೆಸ್ಟ್ ಡ್ರೈವ್ ,ಮಾಡಲು ನೊಯ್ಡಾಗೆ ಬಂದಿದ್ದ. ಆತ ಕಾರನ್ನು ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡು ಹೋಗಿ, ಸ್ವಲ್ಪ ಶಾಪಿಂಗ್ ಕೂಡಾ ಮಾಡಿ, ವಾಪಸ್ ಕಾರನ್ನು ಮಾಲೀಕರಿಗೆ ಹಿಂದಿರುಗಿಸುವಾಗ ಕಾರಿನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಇದನ್ನ ಅಲ್ಲಿನ ಜನ ಪ್ರಶ್ನೆ ಮಾಡಿದಾಗ ಯಾರಾದ್ರೂ ಸತ್ತಿದ್ದಾರಾ? ಅಂತ ವಿಚಿತ್ರವಾಗಿ ಪ್ರಶ್ನೆ ಮಾಡಿದ್ದಾನೆ. ಜೊತೆಗೆ ಇದು ನನ್ನ ತಪ್ಪಲ್ಲ, ಕಾರಿನ ತಪ್ಪು ಅಂತ ಉದ್ಧಟತನ ಮೆರೆದಿದ್ದಾನೆ. ಚಾಲಕನ ಹೇಳಿಕೆ ವಿಡಿಯೋ ಜಾಲತಾಣದಲ್ಲಿ ಸಖತ್‌ ಸದ್ದು ಮಾಡ್ತಿದ್ದು, ಸಾರ್ವಜನಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ.

    ಸದ್ಯ ಘಟನೆಯಲ್ಲಿ ಛತ್ತಿಸ್‌ಗಢ ಮೂಲದ ಇಬ್ಬರು ಕಾರ್ಮಿಕರರು ಪ್ರಾಣಾಪಾಯದಿಂದ ಪಾರಾಗಿದ್ದು, ಕೈ, ಕಾಲುಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅಪಘಾತದ ಸಂದರ್ಭದಲ್ಲಿ ಕಾರು ಸುಮಾರು 300 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ಸಂತ್ರಸ್ತರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ನೋಟು – ಸಿಜೆಐ ಅನುಮತಿ ನೀಡದ ಹೊರತು ಎಫ್‌ಐಆರ್‌ ದಾಖಲಾಗಲ್ಲ: ಅಮಿತ್‌ ಶಾ

  • ಮೊನಾಲಿಸಾ ಸಿನಿಮಾ ವಿವಾದ – ಐವರ ವಿರುದ್ಧ ಬಿತ್ತು ಕೇಸ್‌

    ಮೊನಾಲಿಸಾ ಸಿನಿಮಾ ವಿವಾದ – ಐವರ ವಿರುದ್ಧ ಬಿತ್ತು ಕೇಸ್‌

    ಮುಂಬೈ: ಮಹಾ ಕುಂಭಮೇಳದ ವೈರಲ್ ಬೆಡಗಿ ಮೊನಾಲಿಸಾ ಭೋಂಸ್ಲೆ (Monalisa Bhosle) ಅವರ ಬಗ್ಗೆ ಮಾನಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಿ ʻದಿ ಡೈರಿ ಆಫ್ ಮಣಿಪುರʼ ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ ನೀಡಿದ ದೂರು ಆಧರಿಸಿ ಯೂಟ್ಯೂಬ್ ಚಾನಲ್ ಮಾಲೀಕ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸನೋಜ್ ಮಿಶ್ರಾ (Sanoj Mishra) ನೀಡಿದ ದೂರು ಆಧರಿಸಿ ಮುಂಬೈನ ಉಪನಗರದಲ್ಲಿರುವ ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

    ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಾಟ ಮಾಡುತ್ತಿದ್ದ ವೇಳೆ ಮೊನಾಲಿಸಾ ಭೋಂಸ್ಲೆ ಅವರು ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದ್ದಾರೆ. ಅವರ ಫೋಟೊ ಮತ್ತು ವಿಡಿಯೋಗಳು ಈಗಲೂ ವ್ಯಾಪಕವಾಗಿ ಹರಿದಾಡುತ್ತಿವೆ. ಸೋಶಿಯಲ್‌ ಮೀಡಿಯಾದಲ್ಲಿ ಮೊನಾಲಿಸಾ ಟ್ರೆಂಡ್‌ ಅದ ಬೆನ್ನಲ್ಲೇ ʻದಿ ಡೈರಿ ಆಫ್ ಮಣಿಪುರʼ (The Diary of Manipur) ಸಿನಿಮಾ ನಿರ್ಮಿಸುವುದಾಗಿ ಮಿಶ್ರಾ ಘೋಷಿಸಿದ್ದರು.

    ʻಮಿಶ್ರಾ ನಿರ್ದೇಶಿಸಿದ ಯಾವುದೇ ಸಿನಿಮಾಗಳು ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ. ಹಾಗಾಗಿ ಮಿಶ್ರಾ ಅವರು 16 ವರ್ಷದ ಮೊನಾಲಿಸಾ ಅವರ ವೃತ್ತಿಜೀವನವನ್ನು ಹಾಳು ಮಾಡಲು ಮುಂದಾಗಿದ್ದಾರೆʼ ಎಂದು ದೂರಿನಲ್ಲಿ ಹೆಸರಿಸಲಾದ ಐವರು ಆರೋಪಿಸಿದ್ದರು. ಹೀಗಾಗಿ ಯೂಟ್ಯೂಬ್ ಚಾನಲ್ ಮಾಲೀಕ ಸೇರಿದಂತೆ ಐವರು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ನನಗೆ ಘನತೆಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಮಿಶ್ರಾ ಪ್ರತಿದೂರು ದಾಖಲಿಸಿದ್ದಾರೆ ಎಂಬುದಾಗಿ ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಿಶ್ರಾ ನೀಡಿದ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • 50ಕ್ಕೂ ಹೆಚ್ಚು ಬೇಕರಿ ಮಾಲೀಕರಿಗೆ ಬೆದರಿಕೆ – ಬೆಂಗಳೂರು ಯೂಟ್ಯೂಬರ್‌ ಅರೆಸ್ಟ್‌

    50ಕ್ಕೂ ಹೆಚ್ಚು ಬೇಕರಿ ಮಾಲೀಕರಿಗೆ ಬೆದರಿಕೆ – ಬೆಂಗಳೂರು ಯೂಟ್ಯೂಬರ್‌ ಅರೆಸ್ಟ್‌

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಯೂಟ್ಯೂಬರ್‌ ಹಾವಳಿ ಹೆಚ್ಚಾಗಿದೆ. ಸುಮಾರು 50ಕ್ಕೂ ಹೆಚ್ಚು ಬೇಕರಿ ಮಾಲೀಕರಿಗೆ ಬೆದರಿಕೆ ಹಾಕಿದ್ದ ಯೂಟ್ಯೂಬರ್‌ ಒಬ್ಬನನ್ನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

    ಬೊಮ್ಮನಹಳ್ಳಿ ಶಫಿ ಬಂಧಿತ ಆರೋಪಿ. ಯುಟ್ಯೂಬರ್‌ ಆಗಿದ್ದ ಶಫಿ ನಗರದಲ್ಲಿರುವ ಹಲವು ಬೇಕರಿ ಮಾಲೀಕರಿಗೆ ಸ್ವಚ್ಛತೆಯಿಲ್ಲ, ಮೆಂಟೈನೆನ್ಸ್‌ ಇಲ್ಲ ಎಂದು ಬೆದರಿಕೆ ಹಾಕುತ್ತಿದ್ದ. ಬೇಕರಿ ಒಳಗೆ ನುಗ್ಗಿ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಲೈಸೆನ್ಸ್‌ ರದ್ದು ಮಾಡಿಸ್ತೇನೆ ಅಂತ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಭಾರತೀಯನಾಗಿರುವುದೇ ಅದೃಷ್ಟ, ಭಾರತ ರತ್ನ ಅಭಿಯಾನವನ್ನು ನಿಲ್ಲಿಸಿ ಎಂದಿದ್ದ ರತನ್‌ ಟಾಟಾ

    ಇದೇ ರೀತಿ ಹುಳಿಮಾವು ಬಳಿಯ ಅಕ್ಷಯ್ ನಗರದ ಡಿಎಲ್‌ಎಫ್ ಬಳಿಯ ಬೇಕರಿಗಳಲ್ಲಿ ಬೆದರಿಕೆ ಹಾಕಿದ್ದಾನೆ. ಪತ್ರಕರ್ತ ಅಂತ ಹೇಳಿಕೊಂಡು ಬೇಕರಿ ಮಾಲೀಕರಿಂದ 10,000 ರೂ. ಯುಪಿಎ ಮಾಡಿಸಿಕೊಂಡಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅವಮಾನಿಸಿದ್ದ ಕಂಪನಿಯನ್ನೇ ಖರೀದಿಸಿ ಮೆರೆದಿದ್ದ ಯಶಸ್ವಿ ಉದ್ಯಮಿ ರತನ್‌ ಟಾಟಾ!

    ʻಪ್ರಜಾಪರʼ ಯೂಟ್ಯೂಬ್ ಚಾನಲ್‌ ಅಂತ ಹೇಳಿಕೊಂಡು ಧಮ್ಕಿ ಹಾಕಿದ್ದಾನೆ. ಇದೇ ವೇಳೆ ಹಣಕ್ಕೆ ಡಿಮ್ಯಾಂಡ್‌ ಮಾಡುವಾಗ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಬೇಕರಿ ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಹುಳಿಮಾವು ಪೋಲಿಸರು ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್‌ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?

  • ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ – ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಶಾಕ್‌

    ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ – ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಶಾಕ್‌

    ಬೆಂಗಳೂರು: ಮೆಟ್ರೋಗಳಲ್ಲಿ (Namma Metro) ಕೆಲವರು ಹುಚ್ಚಾಟವಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತದೆ. ಬೆಂಗಳೂರಿನ (Bengaluru) ಮೆಟ್ರೋದಲ್ಲಿ ಅಂತಹದ್ದೇ ಒಂದು ಪ್ರಕರಣ ಜರುಗಿದೆ. ಯೂಟ್ಯೂಬರ್‌ ಒಬ್ಬನ ಹುಚ್ಚಾಟಕ್ಕೆ ಪ್ರಯಾಣಿಕರು ಗಾಬರಿಗೊಂಡ ಘಟನೆ ನಗರದಲ್ಲಿ ನಡೆದಿದೆ.

    ವಿಜಯನಗರದಿಂದ ಮೆಜೆಸ್ಟಿಕ್‌ಗೆ ಬರುವ ಪರ್ಪಲ್ ಲೈನ್‌ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ ಮಾಡಿದ್ದಾನೆ. ಎಸ್ಕಲೇಟರ್ ಮೇಲೆ ಯೂಟ್ಯೂಬರ್ ಪ್ರ್ಯಾಂಕ್‌ ವೀಡಿಯೋ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ್ದ. ಇದನ್ನೂ ಓದಿ: ಮೆಟ್ರೋದಲ್ಲಿ ಗೋಬಿ ತಿಂದವನಿಗೆ ಬಿತ್ತು 500 ರೂ. ದಂಡ!

    ಅಲ್ಲದೇ ಚಲಿಸುತ್ತಿದ್ದ ಮೆಟ್ರೋದಲ್ಲಿ ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿದ್ದ. ಮತ್ತೊಂದು ವೀಡಿಯೋದಲ್ಲಿ ಎಸ್ಕಲೇಟರ್‌ನಲ್ಲಿ ಬರುವಾಗ ವಯಸ್ಸಾದ ವೃದ್ಧೆಯ ಮುಂದೆ ಪ್ರ್ಯಾಂಕ್‌ ಮಾಡಿದ್ದ. ಈ ವೇಳೆ ಸಹಪ್ರಯಾಣಿಕರು ಗಾಬರಿಗೊಂಡಿದ್ದರು.

    ಪ್ರಕರಣವನ್ನು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರ್ಯಾಂಕ್‌ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತನ ಹೆಸರು ಪ್ರ್ಯಾಂಕ್‌ ಪ್ರಜ್ಜು ಎಂದು ತಿಳಿದುಬಂದಿದೆ. ತನ್ನದೇ ಇನ್ಸ್ಟಾಂಗ್ರಾಮ್‌ನಲ್ಲಿ ವೀಡಿಯೋ ಅಪ್ಲೋಡ್ ಮಾಡಿದ್ದ. ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಹಂಪಿಯಲ್ಲಿ ರೀಲ್ಸ್‌ ಹುಚ್ಚಾಟ – ಸ್ಮಾರಕಗಳಿಗೆ ರಕ್ಷಣೆ ಕೊಡಿ ಎಂದ ಗ್ರಾಮಸ್ಥರು

    ಮೆಟ್ರೋಗಳಲ್ಲಿ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು ಸಾಮಾನ್ಯ ಎನ್ನುವಂತಾಗಿದೆ. ಮುಂಬೈ, ನವದೆಹಲಿ ಮೆಟ್ರೋಗಳಲ್ಲೂ ಇಂತಹ ಅನೇಕ ಪ್ರಕರಣಗಳು ವರದಿಯಾಗಿವೆ. ಇದು ಈಗ ಬೆಂಗಳೂರಿಗೂ ಕಾಲಿಟ್ಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಮ್ಗೆ ಚಂದ್ರನ ಬಳಿಗೆ ಹೋಗುವ ಅಗತ್ಯವಿಲ್ಲ, ಚಂದ್ರನ ಮೇಲೆಯೇ ಬದುಕುತ್ತಿದ್ದೇವೆ: ಪಾಕ್‌ ಪ್ರಜೆ ವ್ಯಂಗ್ಯ

    ನಮ್ಗೆ ಚಂದ್ರನ ಬಳಿಗೆ ಹೋಗುವ ಅಗತ್ಯವಿಲ್ಲ, ಚಂದ್ರನ ಮೇಲೆಯೇ ಬದುಕುತ್ತಿದ್ದೇವೆ: ಪಾಕ್‌ ಪ್ರಜೆ ವ್ಯಂಗ್ಯ

    ಇಸ್ಲಾಮಾಬಾದ್‌: ನಾವು ಚಂದ್ರನ (Moon) ಮೇಲೆ ಹೋಗುವ ಅಗತ್ಯವೇ ಇಲ್ಲ. ಈಗಾಗಲೇ ನಾವು ಚಂದ್ರನ ಮೇಲೆ ಬದುಕುತ್ತಿದ್ದೇವೆ. ಚಂದ್ರನ ಮೇಲ್ಮೈ ವಾತಾವರಣವನ್ನ ಇಲ್ಲಿನ ಜನ ಅನುಭವಿಸುತ್ತಿದ್ದಾರೆ ಎಂದು ಪಾಕ್‌ ತಮ್ಮದೇ ದೇಶದ ಸರ್ಕಾರವನ್ನ ಅಣಕಿಸಿದ್ದಾರೆ.

    ಇಸ್ರೋ ವಿಜ್ಞಾನಿಗಳ (Isro Scientist) ಪರಿಶ್ರಮ, ಭಾರತೀಯರ ಪ್ರಾರ್ಥನೆ ಫಲವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಚಂದ್ರಯಾನ-3 (Chandrayaan-3) ವಿಕ್ರಮ್‌ ಲ್ಯಾಂಡರ್‌ (Vikram Lander) ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟು ಸಕ್ಸಸ್‌ ಕಂಡಿದೆ. ಈ ಐತಿಹಾಸಿಕ ಕ್ಷಣವನ್ನ ಇಡೀ ವಿಶ್ವವೇ ಕಣ್ತುಂಬಿಕೊಂಡಿದೆ. ಇದನ್ನೂ ಓದಿ: ಮುಂದಿನ ಪ್ರಾಜೆಕ್ಟ್‌ ಗಗನಯಾನಕ್ಕೂ ನಮ್ಮ ಕಂಪನಿಯಲ್ಲಿ ಬಿಡಿಭಾಗ ತಯಾರಿ: ಚಂದ್ರಯಾನ-3 ರಾಕೆಟ್‌ಗೆ ಬಿಡಿಭಾಗ ಪೂರೈಸಿದ್ದ ಬೆಳಗಾವಿ ದೀಪಕ್‌ ಮಾತು

    ದೇಶ ವಿದೇಶಗಳಲ್ಲೂ ಚಂದ್ರಯಾನ-3ರ ಬಗ್ಗೆ ಪ್ರಸಂಶೆಗಳು ವ್ಯಕ್ತವಾಗುತ್ತಿವೆ. ಪಾಕಿಸ್ತಾನದ (Pakistan) ಮಾಜಿ ಸಚಿವ ಫವಾದ್‌ ಚೌಧರಿ ಚಂದ್ರಯಾನ-3 ಯೋಜನೆ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದೆ. ಚಂದ್ರಯಾನ ಸಾಫ್ಟ್‌ ಲ್ಯಾಂಡಿಂಗ್‌ ಅನ್ನು ರಾಷ್ಟ್ರೀಯ ದೂರ ದರ್ಶನದಲ್ಲಿ ನೇರ ಪ್ರಸಾರ ಮಾಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದ್ದರು. ಚೌಧರಿ ಕೋರಿಕೆ ಪಾಕಿಸ್ತಾನದಲ್ಲಿ ಪರ-ವಿರೋಧ ಚರ್ಚೆಯನ್ನೂ ಹುಟ್ಟುಹಾಕಿತ್ತು.

    ಈ ನಡುವೆ ಪಾಕಿಸ್ತಾನದ ಯೂಟ್ಯೂಬರ್‌ ಒಬ್ಬರು ಚಂದ್ರಯಾನ-3ರ ಸಂಬಂಧಪಟ್ಟಂತೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುತ್ತಿದ್ದ ವೇಳೆ ಪಾಕ್‌ ಪ್ರಜೆ ತಮ್ಮ ದೇಶದ ಸರ್ಕಾರವನ್ನೇ ವ್ಯಂಗ್ಯ ಮಾಡಿದ್ದಾನೆ. ಇದನ್ನೂ ಓದಿ: ಚಂದ್ರನ ಮೇಲೆ ರೋವರ್ ಚಲಿಸೋದನ್ನು ನೋಡಿದ ನಂತ್ರವೇ ಮನೆಗೆ ತೆರಳಿದೆ: ಕೆ. ಶಿವನ್

    ನಾವು ಈಗಾಗಲೇ ಚಂದ್ರನ ಮೇಲೆ ಬದುಕುತ್ತಿದ್ದೇವೆ, ಚಂದ್ರನ ಅಂಗಳ ಮತ್ತು ಪಾಕಿಸ್ತಾನದ ಎರಡರಲ್ಲೂ ಒಂದೇ ವಾತಾವರಣ ಇದೆ. ಅಲ್ಲಿ ನೀರಿಲ್ಲ, ಇಲ್ಲಿಯೂ ಇಲ್ಲ. ಅಲ್ಲಿ ವಿದ್ಯುತ್‌ ಸೌಲಭ್ಯ ಇಲ್ಲ, ಇಲ್ಲಿಯೂ ಇಲ್ಲ. ಪಾಕಿಸ್ತಾನದ ಪ್ರಜೆಗಳಿಗೆ ಚಂದ್ರನ ಬಳಿಗೆ ಹೋಗುವ ಅಗತ್ಯವೇ ಇಲ್ಲ. ಚಂದ್ರನಲ್ಲಿರುವ ವಾತಾವರಣವನ್ನ ಇಲ್ಲಿನ ಪ್ರಜೆಗಳು ತಮ್ಮ ಸುತ್ತಮುತ್ತಲಿನಲ್ಲೇ ಅನುಭವಿಸುತ್ತಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ. ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ರೇಜ್‌ಗಾಗಿ 300km ವೇಗದಲ್ಲಿ ಸೂಪರ್‌ ಬೈಕ್‌ ರೈಡಿಂಗ್‌ – ಯೂಟ್ಯೂಬರ್‌ ಸಾವು

    ಕ್ರೇಜ್‌ಗಾಗಿ 300km ವೇಗದಲ್ಲಿ ಸೂಪರ್‌ ಬೈಕ್‌ ರೈಡಿಂಗ್‌ – ಯೂಟ್ಯೂಬರ್‌ ಸಾವು

    ಲಕ್ನೋ: ತನ್ನ ಯೂಟ್ಯೂಬ್‌ ಚಾನೆಲ್‌ಗೆ ವೀಡಿಯೋ ಮಾಡುವ ಸಲುವಾಗಿ 300 ಕಿಮೀ ವೇಗದಲ್ಲಿ ಬೈಕ್‌ (SuperBike) ಚಲಿಸುತ್ತಿದ್ದಾಗ ಭೀಕರ ಅಪಘಾತಕ್ಕೀಡಾಗಿ ಯೂಟ್ಯೂಬರ್‌ (YouTuber) ಸಾನ್ನಪ್ಪಿರುವ ಘಟನೆ ಉತ್ತರಪ್ರದೇಶದ (UttarPradesh) ಯಮುನಾ ಎಕ್ಸ್‌ಪ್ರೆಸ್‌ವೇ ನಲ್ಲಿ ನಡೆದಿದೆ.

    ಯೂಟ್ಯೂಬರ್‌ ಅಗಸ್ತೆ ಚೌಹಾಣ್‌ ಕವಾಸಕಿ ನಿಂಜಾ ZX10R – 1,000CC ಸೂಪರ್ ಬೈಕ್ ನಲ್ಲಿ ಆಗ್ರಾದಿಂದ ದೆಹಲಿಗೆ ಬರುತ್ತಿದ್ದ ವೇಳೆ ತನ್ನ ಚಾನೆಲ್‌ಗಾಗಿ ವೀಡಿಯೋ ಮಾಡುತ್ತಿದ್ದನು. ಅದಕ್ಕಾಗಿ 300 ಕಿಮೀ ವೇಗದಲ್ಲಿ ಬೈಕ್‌ ಚಾಲನೆ ಮಾಡುತ್ತಿದ್ದಾಗ ಭೀಕರ ಅಪಘಾತಕ್ಕೀಡಾಗಿದ್ದಾನೆ. ಸ್ನೇಹಿತರು ಸಾವಿನ ಸುದ್ದಿ ಕೇಳಿ ಆತಂಕಗೊಂಡಿದ್ದಾರೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ ಪ್ರಕರಣ – ಉಗ್ರರನ್ನು ಸುತ್ತುವರಿದ ಸೇನೆ, ಇಬ್ಬರು ಯೋಧರು ಸಾವು

    ಮೂಲಗಳ ಪ್ರಕಾರ, ಯೂಟ್ಯೂಬರ್‌ ಬೈಕ್‌ ನಿಯಂತ್ರಣ ತಪ್ಪಿ ಯಮುನಾ ಎಕ್ಸ್‌ಪ್ರೆಸ್‌ವೇ ಡಿವೈಡರ್‌ಗೆ ಡಿಕ್ಕಿ ಹೊಡೆದ್ದಾನೆ. ಬೈಕ್‌ ಡಿಕ್ಕಿ ಹೊಡೆದ ರಭಸಕ್ಕೆ ಹೆಲ್ಮೆಟ್‌ ತುಂಡುತುಂಡಾಗಿದೆ, ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಅಲಿಘರ್‌ನ ತಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯ 47 ಮೈಲ್ ಪಾಯಿಂಟ್‌ನಲ್ಲಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಒಂದು ಸೆಕೆಂಡ್‌ನಲ್ಲಿ ನಿನ್ನನ್ನು ಭಯೋತ್ಪಾದಕ ಅಂತ ಘೋಷಿಸುತ್ತೇನೆ – ಶಿಕ್ಷಕನಿಗೆ ಬಿಹಾರ ಪೊಲೀಸ್ ಬೆದರಿಕೆ

    ಅಗಸ್ತೆ ಉತ್ತರಾಖಂಡದ ಡೆಹ್ರಾಡೂನ್ ನಿವಾಸಿಯಾಗಿದ್ದು, ʻಪ್ರೊ ರೈಡರ್ 1000ʼ ಎಂಬ ಶೀರ್ಷಿಕೆಯ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಸುಮಾರು 12 ಲಕ್ಷ ಚಂದಾದಾರರನ್ನ ಹೊಂದಿದ್ದ. ತಾನು ದೆಹಲಿಗೆ ಹೋಗುತ್ತಿರುವುದಾಗಿ ತನ್ನ ಚಾನೆಲ್‌ಗೆ ಕೊನೆಯ ವೀಡಿಯೋ ಅಪ್ಲೋಡ್‌ ಮಾಡಿದ್ದ. ದೆಹಲಿಗೆ ಮತ್ತೆ ಮರಳುವಾಗ ನಾನು 300 ಕಿಮೀ ವೇಗದಲ್ಲಿ ಬೈಕ್‌ ಓಡಿಸುವುದನ್ನ ತೋರಿಸುತ್ತೇನೆ ಎಂದು ಹೇಳಿದ್ದ. ಅದಕ್ಕಾಗಿ ವೀಡಿಯೋ ಮಾಡಲು ಹೋಗಿ ಬೈಕ್‌ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಯೂಟ್ಯೂಬರ್‌ ಸಾವಿನ ಸುದ್ದಿ ಕೇಳಿದ ನೆಟ್ಟಿಗರು ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್‌ ವೇಗಳಲ್ಲಿ ಬೈಕ್‌ ಓಡಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ಬೈಕ್‌ ಸ್ಟಂಟ್‌ ಮಾಡುವುದು, ಅತೀ ವೇಗವಾಗಿ ಚಲಿಸುವುದು ಹಾಗೂ ಬೈಕ್‌ ಚಾಲನೆ ಮಾಡುವಾಗ ಮೊಬೈಲ್‌ ಬಳಕೆ ಮಾಡುವುದನ್ನು ಮಾಡಬಾರದು ಎಂದು ಸಲಹೆ ನೀಡಿದ್ದಾರೆ.