Tag: youtube

  • ಬಿಡುಗಡೆಯಾದ 1 ವರ್ಷದ ನಂತರ ಹೊಸ ದಾಖಲೆ ನಿರ್ಮಿಸಿದ ‘ಕಿರಿಕ್ ಪಾರ್ಟಿ’

    ಬಿಡುಗಡೆಯಾದ 1 ವರ್ಷದ ನಂತರ ಹೊಸ ದಾಖಲೆ ನಿರ್ಮಿಸಿದ ‘ಕಿರಿಕ್ ಪಾರ್ಟಿ’

    ಬೆಂಗಳೂರು: ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ `ಕಿರಿಕ್ ಪಾರ್ಟಿ’ ಸಿನಿಮಾವು ಸೆಂಚುರಿಯನ್ನು ಬಾರಿಸಿದೆ. ಅಷ್ಟರ ಮಟ್ಟಿಗೆ ಪ್ರೇಕ್ಷಕರ ಮನವನ್ನು ಈ ಸಿನಿಮಾವು ಗೆದ್ದಿದೆ. ಈಗ ಇದರಲ್ಲಿನ ಹಾಡು ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿದೆ.

    ಕಿರಿಕ್ ಪಾರ್ಟಿಯ `ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ’…… ಈ ಹಾಡು ಇಂದಿಗೂ ಎಲ್ಲಾರು ಗುನುಗುತ್ತಿರುತ್ತಾರೆ. ಅದರಲ್ಲೂ ಯುವಕರು ತಮ್ಮ ಪ್ರೇಯಸಿ ಬಗ್ಗೆ ಯೋಚನೆ ಮಾಡಿಕೊಂಡು ಈ ಹಾಡನ್ನು ಆಡುತ್ತಿರುತ್ತಾರೆ. ಈ ಹಾಡಿಗೆ ವರ್ಷಗಳು ಕಳೆದರೂ ಇಂದಿಗೂ ಈ ಹಾಡಿನ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಮತ್ತಷ್ಟು ಸುಮಧುರವಾದ ಹಾಡುಗಳು ಬಂದರೂ, ಈ ಹಾಡಿಗೆ ಸರಿಸಾಟಿ ಇಲ್ಲ ಅನ್ನುವ ರೀತಿಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.

    ಒಂದು ವರ್ಷದಲ್ಲೇ ಸುಮಾರು 4 ಕೋಟಿಗೂ ಅಧಿಕ ಬಾರಿ ಈ ಹಾಡು ವೀಕ್ಷಣೆಯಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ 4 ಕೋಟಿ ವ್ಯೂ ಕಂಡ ಮೊದಲ ಹಾಡು ಎನ್ನುವ ಹೆಗ್ಗಳಿಕಿಗೆ ಪಾತ್ರವಾಗಿದೆ.

    ಈ ಹಾಡಿಗೆ ಧನಂಜಯ ರಂಜನ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನವೆಂಬರ್ 25, 2016 ರಂದು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು.

    ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ ಸೇರಿದಂತೆ ಹಲವಾರು ನಟರು ಅಭಿನಯಿಸಿದ್ದರು. ಡಿಸೆಂಬರ್ 30 ರಂದು ಈ ಸಿನಿಮಾ ತೆರೆ ಕಂಡಿತ್ತು.

     

     

     

     

  • ಯೂಟ್ಯೂಬ್‍ನಿಂದ ಡಿಂಚಕ್ ಪೂಜಾ ಹಾಡುಗಳು ಡಿಲೀಟ್- ಕಟ್ಟಪ್ಪನನ್ನು ಹೊಗಳ್ತಿದ್ದಾರೆ ಜನ!

    ಯೂಟ್ಯೂಬ್‍ನಿಂದ ಡಿಂಚಕ್ ಪೂಜಾ ಹಾಡುಗಳು ಡಿಲೀಟ್- ಕಟ್ಟಪ್ಪನನ್ನು ಹೊಗಳ್ತಿದ್ದಾರೆ ಜನ!

    ನವದೆಹಲಿ: ಡಿಂಚಕ್ ಪೂಜಾ ಅಭಿಮಾನಿಗಳಿಗೆ ಇದು ಬೇಸರ ತರುವ ಸುದ್ದಿ. ಹಾಗೆ ಇನ್ನೂ ಕೆಲವರಿಗೆ ಇದರಿಂದ ನಿರಾಳವಾಗಬಹುದು. ತನ್ನ ಹಾಡುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರೋ ಡಿಂಚಕ್ ಪೂಜಾ ವಿಡಿಯೋಗಳನ್ನ ಯೂಟ್ಯೂಬ್‍ನಿಂದ ತೆಗೆದುಹಾಕಲಾಗಿದೆ. ಆಕೆಯ ಇತ್ತೀಚಿನ ದಿಲೋ ಕಾ ಶೂಟರ್ ಹಾಡನ್ನು ಬಿಟ್ಟು ಉಳಿದ ಎಲ್ಲಾ ಹಾಡುಗಳನ್ನ ಯೂಟ್ಯೂಬ್‍ನಿಂದ ಡಿಲೀಟ್ ಮಾಡಲಾಗಿದೆ.

    ಯೂಟ್ಯೂಬ್‍ನಲ್ಲಿ ಕಟ್ಟಪ್ಪ ಸಿಂಗ್ ಎಂಬ ಬಳಕೆದಾರರೊಬ್ಬರು ಕಾಪಿರೈಟ್ ಉಲ್ಲಂಘನೆಗೆ ಸಂಬಂಧಿಸಿದಂತೆ ಡಿಂಚಕ್ ಪೂಜಾ ಬಗ್ಗೆ ರಿಪೋರ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಕಟ್ಟಪ್ಪ ಯಾರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದ್ರೆ ಕಟ್ಟಪ್ಪನನ್ನ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಡಿ ಹೊಗಳುತ್ತಿದ್ದಾರೆ. ಈ ಬಗ್ಗೆ ಮೀಮ್‍ಗಳು ಹಾಗೂ ಟ್ರೋಲ್‍ಗಳು ಹರಿದಾಡ್ತಿವೆ.

    ಡಿಂಚಕ್ ಪೂಜಾ ವಿಡಿಯೋಗಳನ್ನ ಯೂಟ್ಯೂಬ್‍ನಿಂದ ತೆಗೆದುಹಾಕಿರುವುದು ಪೊಲೀಸರ ಕ್ರಮವೂ ಇರಬಹುದು ಎಂದು ಹೇಳಲಾಗ್ತಿದೆ. ಡಿಂಚಕ್ ಪೂಜಾ ತನ್ನ “ದಿಲೋ ಕಾ ಶೂಟರ್ ಹೈ ಮೆರಾ ಸ್ಕೂಟರ್…” ಹಾಡಿನಲ್ಲಿ ಹೆಲ್ಮೆಟ್ ಧರಿಸಿಲ್ಲ ಅಂತ ಇತ್ತೀಚೆಗಷ್ಟೆ ವ್ಯಕ್ತಿಯೊಬ್ಬರು ಟ್ವಿಟ್ಟರ್‍ನಲ್ಲಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಆದ್ರೆ ಈ ಹಾಡು ಇನ್ನೂ ಯೂಟ್ಯೂಬ್‍ನಲ್ಲಿ ಇರೋ ಕಾರಣ ಈ ವಾದವನ್ನು ಕೆಲವರು ತಳ್ಳಿಹಾಕಿದ್ದಾರೆ. ಇದು ಪಬ್ಲಿಸಿಟಿ ಸ್ಟಂಟ್ ಕೂಡ ಇರಬಹುದು ಅನ್ನೋ ಮಾತುಗಳು ಕೂಡ ಕೇಳಿಬರ್ತಿವೆ.

    ಸ್ವ್ಯಾಗ್ ವಾಲಿ ಟೋಪಿ, ಸೆಲ್ಫಿ ಮೇನೆ ಲೇಲಿ ಆಜ್, ದಿಲೋ ಕಾ ಶೂಟರ್ ಹೈ ಮೆರಾ ಸ್ಕೂಟರ್…. ಹೀಗೆ ಯುವಕರಿಗೆ ಇಷ್ಟವಾಗುವಂತೆ ಡಿಂಚಕ್ ಪೂಜಾ ಹಾಡುಗಳಿದ್ದರೂ, ಹಾಡಿನ ರಾಗ ಹಾಗೂ ಆಕೆಯ ಗಾಯನ ಮಾತ್ರ ಹೇಳಿಕೊಳ್ಳುವಂತದ್ದೇನಲ್ಲ. ಆದರೂ ಆಕೆಯ ವಿಡಿಯೋಗಳು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಪಡೆದಿವೆ. ದಿಲೋ ಕಾ ಶೂಟರ್ ಹಾಡಿಗೆ 6 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಸಿಕ್ಕಿದೆ. ಈಕೆಯ ಯೂಟ್ಯೂಬ್ ಅಕೌಂಟ್‍ಗೆ 1.80 ಲಕ್ಷ ಹೆಚ್ಚಿನ ಸಬ್ಸ್ ಕ್ರೈಬರ್ಸ್ ಇದ್ದಾರೆ.

    ಪೂಜಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೀಮ್‍ಗಳು ಹಾಗೂ ಟ್ರೋಲ್‍ಗಳು ಹರಿದಾಡ್ತಿರುತ್ತವೆ. ಈ ಬಗ್ಗೆ ಆಕೆಗೂ ಅರಿವಿದ್ದು, ತನ್ನನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ದ್ವೇಷಿಸುವುದು ಹಾಗೆ ಕೆಲವು ಅಪ್ಪಟ ಅಭಿಮಾನಿಗಳನ್ನ ಭೇಟಿಯಾದ ಬಗ್ಗೆಯೂ ಸ್ವತಃ ಪೂಜಾ ಲೇಖನವೊಂದರಲ್ಲಿ ಹೇಳಿಕೊಂಡಿದ್ದಾಳೆ.

    ಇತ್ತೀಚೆಗೆ ಖ್ಯಾತ ಗಾಯಕ ಸೋನು ನಿಗಮ್ ಕೂಡ ಆಕೆಯ ದಿಲೋ ಕಾ ಶೂಟರ್ ಹಾಡನ್ನ ಹಾಡಿ ವಿಡಿಯೋ ಹಂಚಿಕೊಂಡಿದ್ದರು.

    https://twitter.com/i_m_piyush_10/status/884851810040729600

    https://www.youtube.com/watch?v=YZSXaFkhiC4

     

  • ಇಂದು ತಾಯಂದಿರ ದಿನ: ಅನಾರೋಗ್ಯಕ್ಕೆ ತುತ್ತಾಗಿರೋ ಅಮ್ಮನಿಗಾಗಿ ಹಾಡು ಅರ್ಪಿಸಿದ ಶಿವಮೊಗ್ಗದ ಯುವಕ

    ಇಂದು ತಾಯಂದಿರ ದಿನ: ಅನಾರೋಗ್ಯಕ್ಕೆ ತುತ್ತಾಗಿರೋ ಅಮ್ಮನಿಗಾಗಿ ಹಾಡು ಅರ್ಪಿಸಿದ ಶಿವಮೊಗ್ಗದ ಯುವಕ

    ಶಿವಮೊಗ್ಗ: ಹೆತ್ತ ತಾಯಿ ಕಣ್ಣೆದುರಿನ ದೇವರು ಎಂಬ ಮಾತಿದೆ. ಈ ದೇವರಿಗಾಗಿ ಏನೆಲ್ಲಾ ಕಾಣಿಕೆ ನೀಡುವವರು ನಮ್ಮ ನಡುವೆ ಇದ್ದಾರೆ. ಶಿವಮೊಗ್ಗದ ಒಬ್ಬ ಯುವಕ ಅನಾರೋಗ್ಯಕ್ಕೆ ಒಳಗಾದ ತನ್ನ ತಾಯಿಗಾಗಿ ಒಂದು ಹಾಡನ್ನು ಮಾಡಿ ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದಾರೆ.

    ನಾ ಕಂಡ ಬೆಳಕು ನೀನಮ್ಮ… ಮಡಿಲ ಮಗುವು ನಾನಮ್ಮ…. ಎಂದು ಹಾಡುತ್ತಿರುವ ಯುವಕನ ಹೆಸರು ರಾಹುಲ್ ಡಿ. ರಾಜ್. ಶಿವಮೊಗ್ಗದ ಈ ಯುವಕ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ನಾ ಕಂಡ ಬೆಳಕು ಎಂಬ ಹಾಡನ್ನು ತನ್ನ ಅಮ್ಮ ಸೇರಿ ಎಲ್ಲಾ ಅಮ್ಮಂದಿರಿಗೂ ಅರ್ಪಿಸಿದ್ದಾರೆ.

    ರಾಹುಲ್ ಅಮ್ಮ ಹೇಮಾವತಿ ಹತ್ತು ವರ್ಷದ ಹಿಂದೆ ಅನಾರೋಗ್ಯಕ್ಕೆ ಗುರಿಯಾಗಿದ್ದರು. ಇನ್ನು ಒಂದೆರಡು ವರ್ಷ ಮಾತ್ರ ಅವರು ಬದುಕುವುದು ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದರು. ಅಂದಿನಿಂದ ಅಮ್ಮನ ಬಗ್ಗೆ ವಿಶೇಷ ಕಾಳಜಿ ಮಾಡತೊಡಗಿದ್ದು, ಅಮ್ಮ ಚೆನ್ನಾಗಿದ್ದಾರೆ. ಮನೆಯಲ್ಲಿ ಅಮ್ಮನಿಗೆ ಎಲ್ಲಾ ಕೆಲಸ ಮಾಡಿಕೊಡುವ ರಾಹುಲ್ ಈಗ ಅಮ್ಮನಿಗಾಗಿ ಹಾಡು ರಚಿಸಿ, ಹಾಡಿ, ವಿಡಿಯೋ ಮಾಡಿ ಯೂಟೂಬ್‍ನಲ್ಲಿ ಹಾಕಿದ್ದಾರೆ.

    ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಹೋಮಿಯೋಪತಿ ಓದುತ್ತಿರುವ ರಾಹುಲ್ ಬಾಲ್ಯದಿಂದಲೇ ಸಂಗೀತ ಕಲಿತವರಲ್ಲ. ಆದರೆ, ಅಮ್ಮನಿಗೆ ವಿಶೇಷ ಕಾಣಿಕೆ ನೀಡಬೇಕು ಎಂಬ ಹಂಬಲದಲ್ಲಿ ಈ ಹಾಡು ರಚಿಸಿದ್ದಾರೆ.

    https://www.youtube.com/watch?v=mcSxDWUDeBs

  • ಯುಟ್ಯೂಬ್ ನಲ್ಲಿ ಬರೋಬ್ಬರಿ 23 ಕೋಟಿಗೂ ಅಧಿಕ ವೀಕ್ಷಣೆಯಾಗಿದೆ ಈ ಬಾಲಿವುಡ್ ಹಾಡು

    ಯುಟ್ಯೂಬ್ ನಲ್ಲಿ ಬರೋಬ್ಬರಿ 23 ಕೋಟಿಗೂ ಅಧಿಕ ವೀಕ್ಷಣೆಯಾಗಿದೆ ಈ ಬಾಲಿವುಡ್ ಹಾಡು

    ಮುಂಬೈ: ಆದಿತ್ಯ ಚೋಪ್ರಾ ನಿರ್ದೇಶನ `ಬೇಫಿಕ್ರೆ’ ಸಿನಿಮಾದ `ನಶೆ ಸೇ ಚಡ್ ಗಯಿ’ 23 ಕೋಟಿಗೂ ಅಧಿಕ ಹೆಚ್ಚು ವೀಕ್ಷಣೆಯಾಗುವ ಮೂಲಕ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿದೆ

    2016ರ ಅಕ್ಟೋಬರ್ 18ಕ್ಕೆ ಯೂ ಟ್ಯೂಬ್‍ನಲ್ಲಿ ಈ ಹಾಡು ಅಪ್ಲೋಡ್ ಆಗಿದ್ದು, 5,64,828 ಮಂದಿ ಲೈಕ್ ಮಾಡಿದ್ದು, 29,253 ಮಂದಿ ಕಮೆಂಟ್ ಮಾಡಿದ್ದಾರೆ.

    ಈ ಹಾಡಿಗೆ ವಿಶಾಲ್ ಮತ್ತು ಶೇಖರ್ ಸಂಗೀತ ಸಂಯೋಜನೆ ಮಾಡಿದ್ದು, ಅರ್ಜಿತ್ ಸಿಂಗ್ ಅವರ ಸುಮಧರ ಧ್ವನಿಯಲ್ಲಿ ಹಾಡು ಮೂಡಿ ಬಂದಿದೆ. ಸಿನಿಮಾದಲ್ಲಿ ರಣ್ ವೀರ್ ಸಿಂಗ್ ಮತ್ತು ವಾಣಿ ಕಪೂರ್ ಜೊತೆಯಾಗಿ ನಟಿಸಿದ್ದು, ಇಬ್ಬರ ಕೆಮಿಸ್ಟ್ರಿ ಡ್ಯಾನ್ಸ್ ಕ್ಲಿಕ್ ಆಗಿತ್ತು.

    ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿ ಆರು ತಿಂಗಳ ಅವಧಿಯಲ್ಲಿ ಈ ಹಾಡು ಬರೋಬ್ಬರಿ 23,51,58,795 ವ್ಯೂವ್ ಗಳನ್ನು ಪಡೆದಿದೆ. ಬೇಫಿಕ್ರೆ ಸಿನಿಮಾ ಕಳೆದ ವರ್ಷ 9 ಡಿಸೆಂಬರ್ 2016ರಂದು ಪ್ರಪಂಚದಾದ್ಯಂತ ತೆರೆಕಂಡಿತ್ತು. ಚಿತ್ರವು ಇಂದಿನ ಯುವ ಪ್ರೇಮಿಗಳ ಕಥಾ ಹಂದರವನ್ನು ಹೊಂದಿದ್ದು, ತೆರೆಯ ಮೇಲೆ ಸುಂದರವಾಗಿ ಮೂಡಿ ಬಂದಿತ್ತು. ಇದೇ ಚಿತ್ರದ ಟೈಟಲ್ ಸಾಂಗ್ ಬನ್ನಿ ದಯಾಳ್ ಕಂಠದಿಂದ ಬಂದ `ಉಡೇ ದಿಲ್ ಬೇಫಿಕ್ರೆ’ ಹಾಡು ಇದೂವರೆಗೂ 1 ಕೋಟಿಗೂ ಅಧಿಕ ವ್ಯೂವ್ ಗಳನ್ನು ಪಡೆದಿದೆ.

     

     

  • ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಯೂಟ್ಯೂಬ್ ಸ್ಟಾರ್ ಆದ 106ರ ಅಜ್ಜಿ

    ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಯೂಟ್ಯೂಬ್ ಸ್ಟಾರ್ ಆದ 106ರ ಅಜ್ಜಿ

    – ಇವರು ಈಗ ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್

    ಹೈದರಾಬಾದ್: ಯೂಟ್ಯೂಬ್‍ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್‍ಗಳಿವೆ. ಚೆಫ್‍ಗಳಿಂದ ಹಿಡಿದು ಗೃಹಿಣಿಯರೂ ಕೂಡ ಯೂಟ್ಯೂಬ್‍ನಲ್ಲಿ ಅಡುಗೆ ವಿಡಿಯೋಗಳನ್ನ ಹಾಕ್ತಿರ್ತಾರೆ. ಇವರೆಲ್ಲರ ಮಧ್ಯೆ ತನ್ನ ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ 106 ವರ್ಷದ ವದ್ಧೆಯೊಬ್ಬರು ಈಗ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.

    ಆಂಧ್ರಪ್ರದೇಶದ ಮಸ್ತಾನಮ್ಮ ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್ ಎನಿಸಿಕೊಂಡಿದ್ದಾರೆ. ಮಸ್ತಾನಮ್ಮ ಅವರು ಕಂಟ್ರಿ ಫುಡ್ಸ್ ಎಂಬ ಸ್ವಂತ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಮಸ್ತಾನಮ್ಮ ಅವರ ಚಾನಲ್‍ಗೆ ಸದ್ಯಕ್ಕೆ 2 ಲಕ್ಷದ 61 ಸಾವಿರಕ್ಕೂ ಹೆಚ್ಚು ಸಬ್ಸ್‍ಸ್ಕ್ರೈಬರ್‍ಗಳಿದ್ದಾರೆ.

    ಹಳ್ಳಿ ವಾತಾವರಣದಲ್ಲಿ, ಸೌದೆ ಒಲೆಯಲ್ಲಿ ಮಸ್ತಾನಮ್ಮ ಅಡುಗೆ ಮಾಡ್ತಾರೆ. ಚಿಕನ್ ಬಿರಿಯಾನಿ, ಮೀನು ಸಾರು, ಮೊಟ್ಟೆಯ ರೆಸಿಪಿಗಳು, ಬದನೆಕಾಯಿ ಮಸಾಲಾ, ಬೆಂಡೇಕಾಯಿ ಫ್ರೈ, ಫ್ರೆಂಚ್ ಫ್ರೈಸ್ ಹೀಗೆ ವಿವಿಧ ಬಗೆಯ ವೆಜ್ ಹಾಗೂ ನಾನ್ ವೆಜ್ ಅಡುಗೆಗಳನ್ನ ಮಾಡೋದು ಹೇಗೆ ಅನ್ನೋದನ್ನ ಮಸ್ತಾನಮ್ಮ ವಿಡಿಯೋಗಳಲ್ಲಿ ತೋರಿಸಿಕೊಡ್ತಾರೆ. ಅಜ್ಜಿಯ ಅಡುಗೆಗಳನ್ನ ತುಂಬಾ ಇಷ್ಟ ಪಡೋ ಮಸ್ತಾನಮ್ಮ ಅವರ ಮರಿಮೊಮ್ಮಗ ಕೆ. ಲಕ್ಷ್ಮಣ್ ಈ ಯೂಟ್ಯೂಬ್ ಚಾನಲ್‍ನ ನಿರ್ವಹಣೆ ಮಾಡ್ತಾರೆ.

    ಒಂದು ರಾತ್ರಿ ತುಂಬಾ ಹಸಿವಾಗಿ ನಾನು ಮತ್ತು ನನ್ನ ಸ್ನೇಹಿತರು ಸೇರಿ ಅಡುಗೆ ಮಾಡಿದೆವು. ಜನರು ಅಡುಗೆ ಮಾಡೋದನ್ನ ಕಲಿಯಲು ಸಹಾಯವಾಗವಂತೆ ಯೂಟ್ಯೂಬ್ ಚಾನಲ್ ಶುರು ಮಾಡಬೇಕು ಅಂದುಕೊಂಡೆವು. ಆಶ್ಚರ್ಯಕರ ರೀತಿಯಲ್ಲಿ ನಮ್ಮ ಮೊದಲ ವಿಡಿಯೋ ವೈರಲ್ ಆಯ್ತು. ಆಗಲೇ ಈ ಚಾನಲ್ ಶುರು ಮಾಡಿದ್ದು. ತಾಜಾ ಸಾಮಗ್ರಿಗಳನ್ನ ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ಹೇಗೆ ಅಡುಗೆ ಮಾಡಬಹುದು ಅನ್ನೋದನ್ನ ಜನರು ಅರ್ಥ ಮಾಡಿಕೊಂಡು ಕಲಿತುಕೊಳ್ಳಲು ನಮ್ಮ ಅಜ್ಜಿಯ ಸಹಾಯ ಪಡೆದು ಚಾನಲ್ ಆರಂಭಿಸಿದೆವು. ಮೊದಲಿಗೆ ನಾವು ವಿಡಿಯೋ ಮಾಡುವಾಗ ಅಜ್ಜಿಗೆ ಏನಾಗುತ್ತಿದೆ ಎಂದು ಗೊತ್ತಾಗುತ್ತಿರಲಿಲ್ಲ. ಆದ್ರೆ ಅವರಿಗೆ ಇದರ ಬಗ್ಗೆ ಅರ್ಥವಾದ ನಂತರ ತುಂಬಾ ಖುಷಿಪಟ್ರು ಅಂತಾರೆ ಲಕ್ಷ್ಮಣ್.

                           

    ಗ್ರಾಮದಲ್ಲಿ ಮಸ್ತಾನಮ್ಮ ಅವರ ಅಡುಗೆ ಅಂದ್ರೆ ಎಲ್ಲರಿಗೂ ಪ್ರಿಯ. ವಿಡಿಯೋಗಳಲ್ಲಿ ಮಸ್ತಾನಮ್ಮ ಅವರು ಅಡುಗೆ ಮಾಡಿ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಬಡಿಸೋದನ್ನ ನೋಡಬಹುದು.

    https://www.youtube.com/watch?v=Y7zFZclLd14

  • ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಸ್ಕೆಚ್ ರೂಪಿಸಿದ್ದ ಗ್ರಾಜುಯೇಟ್ಸ್

    ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಸ್ಕೆಚ್ ರೂಪಿಸಿದ್ದ ಗ್ರಾಜುಯೇಟ್ಸ್

    – ಬಾಡಿಗೆ ಮನೆ ಕೇಳೋ ನೆಪದಲ್ಲಿ ದರೋಡೆಗೆ ಪ್ಲಾನ್, ಕೊಲೆಗೆ ಯತ್ನ

    ಬೆಂಗಳೂರು: ದಿನ ನಿತ್ಯದ ಕರ್ಚಿಗೆ ಹಣವಿಲ್ಲವೆಂದು ಇಬ್ಬರು ಗ್ರಾಜುಯೇಟ್ ವಿದ್ಯಾರ್ಥಿಗಳು ಯೂಟ್ಯೂಬ್ ನೋಡಿ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ಹೊಸೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಮನೆ ಬಾಡಿಗೆ ಕೇಳುವ ನೆಪದಲ್ಲಿ ಎಂಜಿನಿಯರ್ ಸುವೇತ ಮತ್ತು ಯತೀಶ್ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರು 2012 ರಲ್ಲಿ ಬೆಂಗಳೂರಲ್ಲಿ ಒಟ್ಟಿಗೆ ಓದಿದ್ದ ಸ್ನೇಹಿತರಾಗಿದ್ದು, ಮಾರ್ಚ್ 7 ರಂದು ಹೊಸೂರಿನ ಮುನೇಶ್ವರ ನಗರದಲ್ಲಿ ಟು-ಲೆಟ್ ಬೋರ್ಡ್ ನೋಡಿ ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ್ದರು. ಮನೆ ನೋಡಿ 2 ಸಾವಿರ ಅಡ್ವಾನ್ಸ್ ನೀಡಿ ಅನಂತರ ನೀರು ಕೇಳುವ ನೆಪದಲ್ಲಿ ಅಡುಗೆ ಮನೆಗೆ ಹೋಗಿ ಕಳ್ಳತನಕ್ಕೆ ಯತ್ನಿಸಿ, ಕೊಲೆಗೆ ಸಂಚು ರೂಪಿಸಿದ್ದರು.

    ಹೊಸೂರಿನ ಲಕ್ಷಿ ಮತ್ತು ಸುರೇಶ್ ದಂಪತಿ ಮನೆಯಲ್ಲಿ ಈ ಘಟನೆ ನಡೆದಿದ್ದು ಲಕ್ಷೀಯನ್ನ ಬಟ್ಟೆಯಿಂದ ಬಾಯಿ ಮುಚ್ಚಿ ಕಳ್ಳತನಕ್ಕೆ ಯತ್ನಿಸಿದ್ದರು. ನಂತರ ಸಿಕ್ಕಿಬಿದ್ದಾಗ ತನಿಖೆ ವೇಳೆ ಸತ್ಯ ಬಾಯಿ ಬಿಟ್ಟಿದ್ದಾರೆ.

    ಹೇಗಿರುತ್ತೆ ಇವರ ಪ್ಲಾನ್?: ನೋಡೋಕೆ ವಿದ್ಯಾವಂತರಂತೆ, ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಳ್ಳೋ ಚಂದದ ಹುಡುಗ -ಹುಡುಗಿ ತಾವು ಹೊಸದಾಗಿ ಮದುವೆಯಾದ ದಂಪತಿ ಅಂತಾ ಹೇಳಿಕೊಂಡು ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆ ಹೊಕ್ಕುತ್ತಾರೆ. ಫಾರ್ ರೆಂಟ್ ಅನ್ನುವ ಕೊಂಚ ಹೈ-ಫೈ ಆಗಿ ಕಾಣೋ ಮನೆಗೆ ಎಂಟ್ರಿ ಕೊಡ್ತಾರೆ. ಪಕ್ಕದ ಮನೆಯಲ್ಲಿ ಯಾರಿದ್ದಾರೆ ಅಂತಾ ಸೂಕ್ಷ್ಮವಾಗಿ ಅವಲೋಕನ ಮಾಡ್ತಾರೆ. ಬಾಡಿಗೆ, ಮನೆ ಬಗ್ಗೆ ವಿಚಾರಿಸಿಕೊಳ್ತಾರೆ. ಒಂಟಿ ಹೆಂಗಸು ಇದ್ದರು ಅಂದ್ರೆ ಮುಗೀತು. ಆಗ ಹುಡುಗಿ ಕೈಯಲ್ಲಿರುವ ಬ್ಯಾಗ್ ಓಪನ್ ಆಗುತ್ತೆ. ಅದರೊಳಗೆ ಸುತ್ತಿಗೆ, ಚಾಕು, ವೈಯರ್ ಇರುತ್ತೆ. ಕೂಡಲೇ ಆ ಸುತ್ತಿಗೆ ಎತ್ತಿ ಮನೆ ಮಾಲೀಕರ ತಲೆಗೆ ಹೊಡೆದೇ ಬಿಡ್ತಾರೆ, ಚಾಕುವಿನಿಂದ ಚುಚ್ತಾರೆ ಅಥವಾ ವೈರ್ ಕತ್ತಿಗೆ ಹಾಕಿ ಹಿಡಿದು ಎಳೆಯುತ್ತಾರೆ. ನಂತರ ಮನೆಯೊಳಗೆ ನಗದು, ಆಭರಣ ದೋಚಿ ಪರಾರಿಯಾಗ್ತಾರೆ.

    ಸಿಕ್ಕಿಬಿದ್ರು ಖದೀಮರು: ಆದ್ರೇ ಮೊನ್ನೆ ಈ ಜೋಡಿಯ ಅದೃಷ್ಟ ಕೆಟ್ಟಿತ್ತು ಅನಿಸುತ್ತೆ. ಈ ಇಬ್ಬರೂ ಹೊಸೂರು ರಸ್ತೆಯ ಮನೆಯೊಳಗೆ ಬಾಡಿಗೆ ಕೇಳಿಕೊಂಡು ಹೋಗಿದ್ರು. ಒಂಟಿ ಮಹಿಳೆ ಇರೋದನ್ನು ನೋಡಿ ಇನ್ನೇನು ಆಕೆಯ ಕೈಯನ್ನು ಹಿಡಿದು ಸುತ್ತಿಗೆ ಹಿಡಿದು ತಲೆಗೆ ಹೊಡೆಯಬೇಕೆನ್ನುವಷ್ಟರಲ್ಲಿ ಆಕೆ ಕಿರುಚಿಕೊಂಡಿದ್ರು. ಆಗ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದು, ಈ ಜೋಡಿ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಆದ್ರೆ ಅಷ್ಟರಲ್ಲಿ ರಸ್ತೆಯ ಜನ ಓಡಿ ಬಂದು ಇವರಿಬ್ಬರನ್ನು ಹಿಡಿದುಕೊಂಡಿದ್ದಾರೆ. ಬ್ಯಾಗ್ ಓಪನ್ ಮಾಡಿದಾಗ ಚಾಕು, ವೈರ್, ಸುತ್ತಿಗೆ ಇರೋದು ಗೊತ್ತಾಗಿದೆ. ಕೂಡಲೇ ಜನರು ಹೊಸೂರು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ಇಬ್ಬರನ್ನೂ ಸ್ಟೇಷನ್ ಗೆ ಎಳೆದೊಯ್ದಿದ್ದಾರೆ.