Tag: youtube

  • ಪಬ್ಲಿಕ್ ಟಿವಿಗೆ ಯೂಟ್ಯೂಬ್ ಗೋಲ್ಡನ್ ಅವಾರ್ಡ್!

    ಪಬ್ಲಿಕ್ ಟಿವಿಗೆ ಯೂಟ್ಯೂಬ್ ಗೋಲ್ಡನ್ ಅವಾರ್ಡ್!

    ಬೆಂಗಳೂರು: ಪಬ್ಲಿಕ್ ಟಿವಿಯ ಯೂಟ್ಯೂಬ್ ಚಾನೆಲ್ 10 ಲಕ್ಷ ಸಬ್‍ಸ್ಕ್ರೈಬರ್ಸ್ ಗಡಿ ದಾಟಿದ್ದಕ್ಕೆ ಯೂಟ್ಯೂಬ್ ಗೋಲ್ಡ್ ಕ್ರಿಯೇಟರ್ ಅವಾರ್ಡ್ ನೀಡಿದೆ.

    ಈ ಅವಾರ್ಡ್ ನಿಮ್ಮಿಂದಾಗಿ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಈ ಹಿಂದೆ 1 ಲಕ್ಷ ಚಂದಾದಾರು ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿದಾಗ ಸಿಲ್ವರ್ ಕ್ರಿಯೇಟರ್ ಅವಾರ್ಡ್ ಸಿಕ್ಕಿತ್ತು. ಸದಾ ನಮ್ಮನ್ನು ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ನಮ್ಮ ಕಡೆಯಿಂದ ಧನ್ಯವಾದಗಳು.

    ಸದ್ಯ ಪಬ್ಲಿಕ್ ಟಿವಿಯನ್ನು ಯೂಟ್ಯೂಬ್ ನಲ್ಲಿ 13.66 ಲಕ್ಷ ಮಂದಿ ಸಬ್‍ಸ್ಕ್ರೈಬ್ ಮಾಡಿದ್ದು, ಫೇಸ್‍ಬುಕ್ ನಲ್ಲಿ 21.78 ಲಕ್ಷ ಜನ ಲೈಕ್ ಮಾಡಿದ್ದರೆ, ಟ್ವಿಟ್ಟರ್ ನಲ್ಲಿ 99 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೇಗ ಸಾವು ಬರುತ್ತೆಂದು ನೇಣಿಗೆ ಶರಣಾಗ್ತೇನೆ: ಅಮೆರಿಕ ಪ್ರಜೆ ಆತ್ಮಹತ್ಯೆ

    ಬೇಗ ಸಾವು ಬರುತ್ತೆಂದು ನೇಣಿಗೆ ಶರಣಾಗ್ತೇನೆ: ಅಮೆರಿಕ ಪ್ರಜೆ ಆತ್ಮಹತ್ಯೆ

    ಬೆಂಗಳೂರು: ಅಮೆರಿಕದ ಪ್ರಜೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಸ್ಕಾಟ್ ಟೌಲ್ ಬೀ(45) ನೇಣಿಗೆ ಶರಣಾದ ವ್ಯಕ್ತಿ. ಸ್ಕಾಟ್ ಟೌಲ್ ಬೀ ಅಮೆರಿಕದ ಪ್ರಜೆ ಆಗಿದ್ದು, ಬೆಂಗಳೂರಿನ ಇಂದಿರಾನಗರದಲ್ಲಿ ನೆಲೆಸಿದ್ದನು. ಇದೇ ತಿಂಗಳ 10ರಂದು ಟೌಲ್ ಬೀ ಕಾಣೆಯಾಗಿದ್ದನು. ಈ ವೇಳೆ ಆತನ ಸ್ನೇಹಿತ ಗಣೇಶ್ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

    ಸ್ನೇಹಿತ ಗಣೇಶ್ ಯೂಟ್ಯೂಬ್ ವಿಡಿಯೋವನ್ನು ಆಧರಿಸಿ ಮೃತನ ಲೋಕೇಶನ್ ಪತ್ತೆ ಹಚ್ಚಿದ್ದಾರೆ. ಬೆಂಗಳೂರು ಹೊರವಲಯದ ಆವಲಹಳ್ಳಿ ಕೆರೆಯ ನಿರ್ಜನ ಪ್ರದೇಶದ ಮರದಲ್ಲಿ ಟೌಲ್ ಬೀ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿದೆ.

    “ಬೇಗ ಸಾವು ಬರುತ್ತೆ ಎಂದು ನೇಣಿಗೆ ಶರಣಾಗುತ್ತೇನೆ” ಎಂದು ಟೌಲ್ ಬೀ ಒಂದು ಕಲ್ಲಿನ ಮೇಲೆ ತನ್ನ ಹೆಲ್ಮೆಟ್ ಇಟ್ಟು ಅದರ ಮೇಲೆ ಕ್ಯಾಮೆರಾ ಇಟ್ಟು ಅದರಲ್ಲಿ ಹೇಳಿಕೊಂಡಿದ್ದಾನೆ. ಬಳಿಕ ಆ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಟೌಲ್ ಬೀ ಆತ್ಮಹತ್ಯೆ ಮಾಡಿಕೊಳ್ಳುವಾಗ ವಿಡಿಯೋ ಮಾಡಿ ಮೃತಪಟ್ಟಿದ್ದಾನೆ. ಆವಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ‘ಶಿವನಂದಿ’ ನಂ.1

    ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ‘ಶಿವನಂದಿ’ ನಂ.1

    ಬೆಂಗಳೂರು: ಸಂಕ್ರಾಂತಿ ಹಬ್ಬದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾದ ‘ಶಿವನಂದಿ’ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಯೂಟ್ಯೂಬ್ ನಲ್ಲಿ ‘ಶಿವನಂದಿ’ ಲಿರಿಕಲ್ ಸಾಂಗ್ ನಂಬರ್ 1 ಟ್ರೆಂಡಿಂಗ್‍ನಲ್ಲಿ ಇದೆ.

    ಮಂಗಳವಾರ ಬೆಳಗ್ಗೆ 11.05ಕ್ಕೆ ‘ಯಜಮಾನ’ ಸಿನಿಮಾದ ‘ಶಿವನಂದಿ’ ಯ ಲಿರಿಕಲ್ ಹಾಡು ಯೂಟ್ಯೂಬ್ ನಲ್ಲಿ ಬಿಡಿಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ತನ್ನದೇ ಆದ ಚಾಪು ಮೂಡಿಸಿದೆ. ಈಗಗಾಲೇ ಬಿಡುಗಡೆಯಾದ 21 ಗಂಟೆಯಲ್ಲಿಯೇ 21 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದ್ದು, 1.86 ಲಕ್ಷ ಲೈಕ್ಸ್ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಯೂಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್‍ನಲ್ಲಿ ಇದೆ.

    ‘ಶಿವನಂದಿ’ ಯ ಲಿರಿಕಲ್ ಹಾಡಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಸಂಕ್ರಾಂತಿ ಹಬ್ಬಕ್ಕೆ ಸಿಹಿಯ ಜೊತೆ ಉಡುಗೊರೆ ಸಿಕ್ಕಂತಾಗಿದೆ. ಹಾಡಿನಲ್ಲಿ ಚಿತ್ರದ ನಾಯಕನ ವರ್ಣನೆಯನ್ನು ಹೇಳಲಾಗಿದೆ. ಶಿವನಂದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದರ್ಶನ್ ಇಂಟ್ರುಡೆಕ್ಷನ್ ಹಾಡು ಇದಾಗಿದೆ. ಸಿನಿಮಾ ಟೈಟಲ್ ಗೆ ತಕ್ಕಂತೆ ಯಜಮಾನನ ಗುಣಗಳನ್ನು ಹಾಡಿನ ರೂಪದಲ್ಲಿ ತೋರಿಸಲಾಗಿದೆ.

    ಯಾಜಮಾನ ಚಿತ್ರದಲ್ಲಿ ನಾಯಕ ನಟನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದಾರೆ. ಹಾಗೆಯೇ ಅವರಿಗೆ ಜೋಡಿಯಾಗಿ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಅವರ ಮಿಡಿಯಾ ಹೌಸ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ನಿರ್ದೇಶಕ ಪೊನ್ನುಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ದರ್ಶನ್ ಅವರ 51 ನೇ ಚಿತ್ರ ಇದಾಗಿದ್ದು. ಚಿತ್ರವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಿಲೀಸಾಯ್ತು ಯಜಮಾನ ಚಿತ್ರದ ಮೊದಲ ಹಾಡು

    ರಿಲೀಸಾಯ್ತು ಯಜಮಾನ ಚಿತ್ರದ ಮೊದಲ ಹಾಡು

    -ಶಿವನಹತ್ತಿರ ಮೆರೆಯುವ ನಂದಿಯ ಬ್ಯೂಟಿಫುಲ್ ಟ್ರ್ಯಾಕ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕನ್ನಡ ಬಹುನಿರೀಕ್ಷಿತ ಯಜಮಾನ ಸಿನಿಮಾದ ಮೊದಲ ಹಾಡು ಇಂದು 11 ಗಂಟೆಗೆ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ.

    ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ. ಈಗ ತಾನೆ ಬಿಡುಗಡೆಯಾದ ಚಿತ್ರದ ಮೊದಲ ಹಾಡು `ಶಿವನಂದಿ’ ಸಾಂಗ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಿರುವ ಶಿವನಂದಿ ಹಾಡು ದಿ ಬಾಸ್ ಅಭಿಮಾನಿಗಳ ಪಾಲಿಗೆ ಸಿಹಿ ಸಂಭ್ರಮ ತಂದಿದೆ. ಈ ಹಾಡನ್ನು ನೋಡಿದವರು ಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ಒಳ್ಳೆ ಉಡುಗೊರೆ ನೀಡಿದ್ದಾರೆ ಅಂತ ಖುಷಿ ಪಡುತ್ತಿದ್ದಾರೆ.

    ಹಾಡಿನಲ್ಲಿ ಚಿತ್ರದ ನಾಯಕನ ವರ್ಣನೆಯನ್ನು ಹೇಳಲಾಗಿದೆ. ಶಿವನಂದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದರ್ಶನ್ ಇಂಟ್ರುಡೆಕ್ಷನ್ ಹಾಡು ಇದಾಗಿದೆ. ಸಿನಿಮಾ ಟೈಟಲ್ ಗೆ ತಕ್ಕಂತೆ ಯಜಮಾನನ ಗುಣಗಳನ್ನು ಹಾಡಿನ ರೂಪದಲ್ಲಿ ತೋರಿಸಲಾಗಿದೆ. ಲಿರಿಕಲ್ ವಿಡಿಯೋ ಬಿಡುಗಡೆಯಾದ ಕೇವಲ ಅರ್ಧ ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.

    ಅಷ್ಟೇ ಅಲ್ಲದೆ ದಚ್ಚು ಅಭಿಮಾನಿಗಳು ತಮ್ಮ ನೆಚ್ಚಿನ ನಟ `ಯಜಮಾನ’ನಾಗಿ ಹೇಗೆ ಮಿಂಚಲಿದ್ದಾರೆ ಅಂತ ನೋಡಲು ಚಿತ್ರ ಬಿಡುಗಡೆಯಾಗೊದನ್ನೇ ಕಾಯುತ್ತಿದ್ದಾರೆ. ಸದ್ಯ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿರುವ ಶಿವನಂದಿ ಹಾಡಿಗೆ ದಚ್ಚು ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಯಾಜಮಾನ ಚಿತ್ರದಲ್ಲಿ ನಾಯಕ ನಟನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದಾರೆ. ಹಾಗೆಯೇ ಅವರಿಗೆ ಜೋಡಿಯಾಗಿ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಅವರ ಮಿಡಿಯಾ ಹೌಸ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ನಿರ್ದೇಶಕ ಪೊನ್ನುಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ದರ್ಶನ್ ಅವರ 51 ನೇ ಚಿತ್ರ ಇದಾಗಿದ್ದು. ಚಿತ್ರವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಸಾಪ ಅಧ್ಯಕ್ಷರಿಗೆ ಯೂಟ್ಯೂಬ್ ಅಂದ್ರೆ ಏನಂತ ಗೊತ್ತಿಲ್ಲ- ಮುರಳೀಧರ ಉಪಾಧ್ಯಾಯ ಅಸಮಾಧಾನ

    ಕಸಾಪ ಅಧ್ಯಕ್ಷರಿಗೆ ಯೂಟ್ಯೂಬ್ ಅಂದ್ರೆ ಏನಂತ ಗೊತ್ತಿಲ್ಲ- ಮುರಳೀಧರ ಉಪಾಧ್ಯಾಯ ಅಸಮಾಧಾನ

    ಉಡುಪಿ: ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಅಧ್ಯಕ್ಷ ಮನು ಬಳಿಗಾರ್ ಗೆ ಯುಟ್ಯೂಬ್ ಅಂದ್ರೆ ಏನು ಅಂತ ಗೊತ್ತಿಲ್ಲ. ಸಮ್ಮೇಳನ ಲೈವ್ ಮಾಡ್ರಿ ಅಂದ್ರೆ ನಾನು ಸಾಹಿತ್ಯದ ವಿದ್ಯಾರ್ಥಿ ಟೆಕ್ನಿಕಲ್ ಅಲ್ಲ ಅಂತ ಹೇಳಿದ್ದಾರೆ ಎಂದು ಹಿರಿಯ ಸಾಹಿತಿ ಮುರಳೀಧರ ಉಪಾಧ್ಯಾಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕನ್ನಡ ಸಾಹಿತ್ಯ ಸಮ್ಮೇಳನ ಯುಟ್ಯೂಬ್ ಅಥವಾ ವೆಬ್ ಸೈಟ್‍ನಲ್ಲಿ ಈವರೆಗೆ ಪ್ರತೀ ವರ್ಷ ಮೂರೂ ದಿನ ಪ್ರಸಾರವಾಗುತ್ತಿತ್ತು. ಆದ್ರೆ ಈ ಬಾರಿ ಹಾಗೆ ಆಗಲ್ವಂತೆ. ಜನವರಿ ನಾಲ್ಕರಂದು ಧಾರವಾಡದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯೂಟ್ಯೂಬ್ ಅಥವಾ ಅಂತರ್ಜಾಲದಲ್ಲಿ ನೇರಪ್ರಸಾರ ಮಾಡಬೇಕು ಎಂದು ಹಿರಿಯ ಸಾಹಿತಿ ಮುರಳೀಧರ ಉಪಾಧ್ಯಾಯ ಫೋನ್ ಮೂಲಕ ಒತ್ತಾಯ ಮಾಡಿದ್ದಾರೆ.

     

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುರಳೀಧರ ಉಪಾಧ್ಯಾಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಜೊತೆ ಯೂಟ್ಯೂಬ್‍ನಲ್ಲಿ ನೇರ ಪ್ರಸಾರ ಮಾಡುವಂತೆ ವಿನಂತಿಸಿದೆ. ಅದಕ್ಕೆ ಅವರು, ಯೂಟ್ಯೂಬ್ ಅಂದ್ರೆ ಏನ್ರೀ? ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನೊಬ್ಬ ಸಾಹಿತ್ಯದ ವಿದ್ಯಾರ್ಥಿ ಅಂತ ಹೇಳಿದ್ದಾರೆ ಎಂದು ಉಪಾಧ್ಯಾಯ ಅವರು ದೂರಿದ್ದಾರೆ.

    ಯೂಟ್ಯೂಬ್‍ ಅಂದ್ರೆ ಏನು ಎಂದು ಗೊತ್ತಿಲ್ಲದಿರುವುದು ಕಸಾಪ ಅಧ್ಯಕ್ಷರ ವೈಯಕ್ತಿಕ ಸಮಸ್ಯೆ. ನನ್ನಂತಹ ಹಿರಿಯ ನಾಗರೀಕರು, ಸಾಹಿತ್ಯ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ವಿದೇಶಗಳಲ್ಲಿ ಇದ್ದಾರೆ. ನಾವಲ್ಲಿಗೆ ಬರಲು ಸಾಧ್ಯವಿಲ್ಲ. ಕಾರ್ಯಕ್ರಮ ನೋಡೋದಾದ್ರೂ ಹೇಗೆ ಅಂತ ಉಪಾಧ್ಯಾಯ ಅವರು ಪ್ರಶ್ನೆ ಮಾಡಿದ್ದಾರೆ.

    ಯೂಟ್ಯೂಬ್‍ನಲ್ಲಿ ನೇರಪ್ರಸಾರ ಮಾಡಿದರೆ ರಾಜ್ಯ, ದೇಶ- ವಿದೇಶದ ಕನ್ನಡ ಜನರಿಗೆ ಬಹಳ ಅನುಕೂಲವಾಗುತ್ತದೆ. ಸರಕಾರ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ರೂ. ಖರ್ಚು ಮಾಡುತ್ತದೆ. ಯೂಟ್ಯೂಬ್‍ನಲ್ಲಿ ನೇರಪ್ರಸಾರ ಮಾಡಲು ಯಾವುದೇ ಖರ್ಚು ಇಲ್ಲ. ಇದು ಕನ್ನಡ ಸಾಹಿತ್ಯ ಪರಿಷತ್‍ನ ಸಾಮಾಜಿಕ ಜವಾಬ್ದಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾಹಿತ್ಯ ಸಮ್ಮೇಳನಕ್ಕೆ ಬರಲಾಗದವರು ತಾವು ಇದ್ದಲ್ಲಿಂದಲೇ ಕನ್ನಡದ ಕಂಪು ಸವಿಯುವಂತಾಗಲು ಅಂತರ್ಜಾಲದಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಬೇಕು ಎಂದು ಸಾಹಿತಿ ಮುರಳೀಧರ ಉಪಾಧ್ಯಾಯ ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳ್ಳಿ ಅಡುಗೆ ಮೂಲಕ ವಿಶ್ವ ವಿಖ್ಯಾತಿಗಳಿಸಿದ್ದ ಶೆಫ್ ಮಸ್ತಾನಮ್ಮ ಇನ್ನಿಲ್ಲ

    ಹಳ್ಳಿ ಅಡುಗೆ ಮೂಲಕ ವಿಶ್ವ ವಿಖ್ಯಾತಿಗಳಿಸಿದ್ದ ಶೆಫ್ ಮಸ್ತಾನಮ್ಮ ಇನ್ನಿಲ್ಲ

    ಹೈದರಾಬಾದ್: ತಮ್ಮ ಹಳ್ಳಿ ಅಡುಗೆ ಮೂಲಕವೇ ವಿಶ್ವವ್ಯಾಪಿ ಫೇಮಸ್ ಆಗಿದ್ದ ಮಸ್ತ್ ಮಸ್ತಾನಮ್ಮ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ.

    ಬರೋಬ್ಬರಿ 107 ವರ್ಷದ ಶೆಫ್ ಆಗಿ ಯೂಟ್ಯೂಬ್ ಸ್ಟಾರ್ ಆಗಿದ್ದ ಮಸ್ತಾನಮ್ಮ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಿಧನರಾಗಿದ್ದಾರೆ.

    ಮಸ್ತಾನಮ್ಮ ಅವರ ಅಂತಿಮಮಾತ್ರೆಯನ್ನು ಯಾವುದೇ ಸೆಲೆಬ್ರಿಟಿಗೂ ಕಡಿಮೆ ಇಲ್ಲದಂತೆ ನಡೆಸಲಾಯಿತು. ದಾರಿಯುದ್ದಕ್ಕೂ ರಾಶಿ ರಾಶಿ ಹೂಗಳನ್ನು ಚೆಲ್ಲಿ ಮಸ್ತಾನಮ್ಮನಿಗೆ ಅಂತಿಮ ವಿದಾಯ ಹೇಳಿದರು. ಮಸ್ತಾನಮ್ಮ ಅಡುಗೆ ನೋಡಲು ಯೂಟ್ಯೂಬ್‍ನಲ್ಲಿ ಜನ ಕಾಯುತ್ತಿದ್ದರು. ಇವರು ಸಾಂಪ್ರದಾಯಿಕ ಶೈಲಿಯಲ್ಲಿ ತರಹೇವಾರಿ ಅಡುಗೆ ಮಾಡಿ ಖ್ಯಾತಿ ಪಡೆದಿದ್ದು, ಅವರ ವಿಡಿಯೋಗಳು ಯೂಟ್ಯೂಬ್ ನಲ್ಲಿ ಲಕ್ಷ ಲಕ್ಷ ವ್ಯೂ ಕಂಡಿದೆ.

    ಅಂದಹಾಗೇ ಮಸ್ತಾನಮ್ಮ ಅವರಿಗೆ 11ನೇ ವರ್ಷದಲ್ಲಿ ಮದುವೆಯಾಗಿತ್ತು. ಆದರೆ ತಮ್ಮ 22ನೇ ವಯಸ್ಸಿಗೆ ಪತಿಯನ್ನು ಕಳೆದುಕೊಂಡಿದ್ದರು. ಆ ಬಳಿಕ ದಿನಗೂಲಿ ಕಾರ್ಮಿಕರಾಗಿ ದುಡಿದು ತಮ್ಮ ಮಕ್ಕಳನ್ನು ಸಲುಹಿದ್ದರು. ಇವರ ಖ್ಯಾತಿ ಯೂಟ್ಯೂಬ್ ಮೂಲಕ ವಿಶ್ವ ಖ್ಯಾತಿ ಪಡೆಯಿತು.  ಕೇವಲ 2 ವರ್ಷದಲ್ಲಿ ದೇಶದ ಅತಿ ಹಿರಿಯ ಯೂಟ್ಯೂಬ್ ಸ್ಟಾರ್ ಎನಿಸಿಕೊಂಡ ಅವರ ಹೆಸರಿನ `ಮಾಸ್ತಾನಮ್ಮ ಚಾನೆಲ್ 12 ಲಕ್ಷ ಜನ ಚಂದಾದಾರರಿದ್ದಾರೆ. ಅಲ್ಲದೇ ಖ್ಯಾತ ಬಿಬಿಸಿ ವಾಹಿನಿ ಕೂಡ ವಿಶೇಷ ಕಾರ್ಯಕ್ರಮ ಮಾಡಿ ಪ್ರಸಾರ ಮಾಡಿತ್ತು.

    https://www.youtube.com/watch?v=3wAYJEBNrE8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೂಟ್ಯೂಬ್ ಟ್ರೆಂಡಿಂಗ್ 2ರಲ್ಲಿ ಯಶ್ ಸಿನಿಮಾ

    ಯೂಟ್ಯೂಬ್ ಟ್ರೆಂಡಿಂಗ್ 2ರಲ್ಲಿ ಯಶ್ ಸಿನಿಮಾ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಸಿನಿಮಾ ಈಗ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದ್ದು, ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

    ಮಾಸ್ಟರ್ ಪೀಸ್ ಸಿನಿಮಾ 2015 ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಆದರೆ ಈ ಸಿನಿಮಾವನ್ನು ಅಧಿಕೃತವಾಗಿ ಯೂಟ್ಯೂಬ್  ಗೆ ಸೆಪ್ಟಂಬರ್ 12 ರಂದು ಅಪ್ಲೋಡ್ ಮಾಡಲಾಗಿದೆ. ಇಂದಿಗೆ ಸಿನಿಮಾ ಅಪ್ಲೋಡ್ ಆಗಿ ಮೂರು ದಿನಗಳಾಗಿದೆ. ಆದರೆ ಇಂದಿಗೂ ಮಾಸ್ಟರ್ ಪೀಸ್ ಸಿನಿಮಾ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದೆ.

    ಈಗಾಗಲೇ ಸಿನಿಮಾ 5 ಲಕ್ಷಕ್ಕಿಂತ ಅಧಿಕವಾಗಿ ವ್ಯೂವ್ ಕಂಡಿದ್ದು, 5.7 ಪ್ರೇಕ್ಷಕರು ಮಾಸ್ಟರ್ ಪೀಸ್ ಸಿನಿಮಾವನ್ನು ಲೈಕ್ಸ್ ಮಾಡಿದ್ದಾರೆ. ಮಾಸ್ಟರ್ ಪೀಸ್ ಸಿನಿಮಾ ಬಿಡುಗಡೆಯಾಗಿ ಮೂರು ವರ್ಷಗಳಾದರೂ ಇಂದಿಗೂ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ 2 ನಲ್ಲಿ ಇರುವುದರಿಂದ ಯಶ್ ಹವಾ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತಿಳಿಯಬಹುದು.

    ಮಾಸ್ಟರ್ ಪೀಸ್ ಸಿನಿಮಾ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಗೊಂಡಿದ್ದು, ನಿರ್ದೇಶಕ ಮಂಜು ಮಾಂಡವ್ಯ ಅವರ ನಿರ್ದೇಶದಲ್ಲಿ ಮೂಡಿಬಂದಿತ್ತು. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಸಾನ್ವಿ ಶ್ರೀವಾಸ್ತವ್ ಅವರು ಯಶ್ ಗೆ ನಾಯಕಿಯಾಗಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಯಶ್ ಭಗತ್ ಸಿಂಗ್ ಲುಕ್ ನಲ್ಲಿ ಮಿಂಚಿದ್ದರು. ರವಿಶಂಕರ್, ಚಿಕ್ಕಣ್ಣ, ಹಿರಿಯ ನಟಿ ಸುಹಾಸಿನಿ ಸೇರಿದಂತೆ ತಾರಾಬಳಗವೆ ಈ ಸಿನಿಮಾದಲ್ಲಿತ್ತು.

    ಸದ್ಯಕ್ಕೆ ಯಶ್ ಅವರು ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ಶೂಟಿಂಗ್ ಮುಗಿಸಿದ್ದು, ‘ಮೈ ನೇಮ್ ಇಸ್ ಕಿರಾತಕ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ ಇದೇ ತಿಂಗಳ ಮೂರನೇ ತಾರೀಕಿನಂದು ಯೂಟ್ಯೂಬಿನಲ್ಲಿ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕ್ಷಣದಿಂದಲೇ ಯಾವ ಥರದಲ್ಲಿ ಕ್ರೇಜ್ ಸೃಷ್ಟಿಯಾಗಿತ್ತೆಂದರೆ ಎರಡು ದಿನ ಕಳೆಯೋದರೊಳಗೆ ಏಳು ಮಿಲಿಯನ್‍ಗೂ ಅಧಿಕ ಜನ ಅದನ್ನು ವೀಕ್ಷಿಸಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ, ದರ್ಶನ್ ಅವರ ಅಭಿನಯದ ಬಗ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಿಂದಿಯಲ್ಲೂ ಶುರುವಾಯ್ತು ಚಕ್ರವರ್ತಿ ದರ್ಶನ್ ಹವಾ!

    ಹಿಂದಿಯಲ್ಲೂ ಶುರುವಾಯ್ತು ಚಕ್ರವರ್ತಿ ದರ್ಶನ್ ಹವಾ!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಕ್ಸಾಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರ ಚಿತ್ರಗಳೆಂದೂ ಇಂಥಾ ಬಿರುದಿಗೆ ಮೋಸ ಮಾಡಿಲ್ಲ. ಇದೀಗ ದರ್ಶನ್ ಅವರ ಹವಾ ಹಿಂದಿಗೂ ಹರಡಿಕೊಂಡಿದೆ. ಕಳೆದ ವರ್ಷ ದರ್ಶನ್ ಅವರು ನಟಿಸಿದ್ದ ಚಕ್ರವರ್ತಿ ಚಿತ್ರ ಹಿಂದಿಗೆ ಡಬ್ ಆಗಿ ಅಲ್ಲಿನ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ.

    ಚಕ್ರವರ್ತಿ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ ಇದೇ ತಿಂಗಳ ಮೂರನೇ ತಾರೀಕಿನಂದು ಯೂಟ್ಯೂಬಿನಲ್ಲಿ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕ್ಷಣದಿಂದಲೇ ಯಾವ ಥರದಲ್ಲಿ ಕ್ರೇಜ್ ಸೃಷ್ಟಿಯಾಗಿತ್ತೆಂದರೆ ಎರಡು ದಿನ ಕಳೆಯೋದರೊಳಗೆ ಏಳು ಮಿಲಿಯನ್‍ಗೂ ಅಧಿಕ ಜನ ಅದನ್ನು ವೀಕ್ಷಿಸಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ, ದರ್ಶನ್ ಅವರ ಅಭಿನಯದ ಬಗ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ.

    ಈ ಕ್ಷಣಕ್ಕೂ ಚಕ್ರವರ್ತಿ ಹಿಂದಿ ವರ್ಷನ್ನಿನ ಅಬ್ಬರ ಏರುಗತಿ ಕಾಣುತ್ತಲೇ ಇದೆ. ಈ ಮೂಲಕವೇ ದರ್ಶನ್ ಅವರಿಗೆ ಬಾಲಿವುಡ್ ಮಟ್ಟದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಚಕ್ರವರ್ತಿ ಚಿತ್ರ ಬಿಡುಗಡೆಗೂ ಮುನ್ನವೇ ಬಾಲಿವುಡ್ ಚಿತ್ರಗಳನ್ನೇ ಮೀರಿಸುವಂಥಾ ಕ್ರೇಜ್ ಹುಟ್ಟು ಹಾಕಿತ್ತು. ಬಹು ನಿರೀಕ್ಷಿತ ಭಾರತೀಯ ಚಿತ್ರಗಳ ಸಾಲಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. ಆ ಚಿತ್ರವೀಗ ಹಿಂದಿಗೆ ಡಬ್ ಆಗಿ ಅಲ್ಲಿಯೂ ಜನಮನ ಸೆಳೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯೂಟ್ಯೂಬ್ ನೋಡಿ ಪತ್ನಿಗೆ ಹೆರಿಗೆ ಸಾಹಸ – ಕಣ್ಣುಬಿಟ್ಟ ಕಂದಮ್ಮ, ಕಣ್ಣುಮುಚ್ಚಿದ ತಾಯಿ!

    ಯೂಟ್ಯೂಬ್ ನೋಡಿ ಪತ್ನಿಗೆ ಹೆರಿಗೆ ಸಾಹಸ – ಕಣ್ಣುಬಿಟ್ಟ ಕಂದಮ್ಮ, ಕಣ್ಣುಮುಚ್ಚಿದ ತಾಯಿ!

    ಚೆನ್ನೈ: ವ್ಯಕ್ತಿಯೊಬ್ಬ ಯೂಟ್ಯೂಬ್ ನಲ್ಲಿ ಸಲಹೆ ತೆಗೆದುಕೊಂಡು ಹೆರಿಗೆ ಮಾಡಿಸಲು ಹೋಗಿ ಪತ್ನಿಯೇ ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನ ತಿರುಪ್ಪೂರು ಪಟ್ಟಣದಲ್ಲಿ ನಡೆದಿದೆ.

    ಕೃತಿಗಾ(28) ಮೃತ ಮಹಿಳೆ. ಈಕೆಯ ಪತಿ ಕಾರ್ತಿಕೇಯನ್ ಈ ರೀತಿಯ ದುಸ್ಸಾಹ ಮಾಡಿದ್ದಾನೆ. ಇವರಿಬ್ಬರು ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇವರು ನಾರ್ಮಲ್ ಹೆರಿಗೆಯ ಮೇಲೆ ನಂಬಿಕೆ ಇಟ್ಟಿದ್ದು, ಸ್ನೇಹಿತರ ಸಲಹೆಯ ಮೇರೆಗೆ ಮನೆಯಲ್ಲಿ ಮಗುವನ್ನು ಹೊಂದಲು ನಿರ್ಧರಿಸಿದ್ದರು.

    ಕೃತಿಕಾಗೆ ಭಾನುವಾರ ಮಧ್ಯಾಹ್ನದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಕಾರ್ತಿಕೇಯನ್ ತನ್ನ ಕುಟುಂಬ ಸ್ನೇಹಿತರಾದ ಪ್ರವೀಣ್ ಕುಮಾರ್ ಮತ್ತು ಲಾವಣ್ಯ ದಂಪತಿ ಜೊತೆ ಸೇರಿ ಮನೆಯಲ್ಲೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಆಗ ಮೂವರು ಯೂಟ್ಯೂಬ್ ನಿಂದ ಹೆರಿಗೆ ಮಾಡಿಸಲು ಸಲಹೆಯನ್ನು ತೆಗೆದುಕೊಂಡಿದ್ದಾರೆ. ಅದೇ ರೀತಿ ಕೃತಿಗಾಗೆ ಹೆರಿಗೆ ಮಾಡಿಸಿದ್ದಾರೆ. ಕೊನೆಗೆ ಕೃತಿಗಾ ಸುಮಾರು 1:30ಕ್ಕೆ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.

    ಹೆರಿಗೆಯಾಗಿ ಒಂದು ಗಂಟೆಯ ನಂತರ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕೃತಿಗಾ ಅಷ್ಟರಲ್ಲಿಯೇ ಮೃತಪಟ್ಟಿದ್ದರು. ಹೆರಿಗೆ ಸಮಯದಲ್ಲಿ ಕೃತಿಗಾಗೆ ತುಂಬಾ ರಕ್ತಸ್ರಾವವಾಗಿದ್ದು, ಜೊತೆಗೆ ಆಘಾತಕ್ಕೆ ಒಳಗಾದ ಕಾರಣ ಆಕೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸದ್ಯಕ್ಕೆ ಮಗು ಆರೋಗ್ಯವಾಗಿದೆ ಎಂದು ತಿರುಪ್ಪುರದ ಮುಖ್ಯ ಆರೋಗ್ಯ ಅಧಿಕಾರಿ ಕೆ. ಬೂಪತಿ ಹೇಳಿದ್ದಾರೆ.

    ಈ ದಂಪತಿಗೆ ಈಗಾಗಲೇ ಒಂದು ಮಗುವಿದ್ದು, ಇದು ಎರಡನೇ ಮಗುವಾಗಿದೆ. ಇತ್ತೀಚೆಗಷ್ಟೆ ಇವರ ಅಜ್ಜ ಮೃತಪಟ್ಟಿದ್ದರು. ಮತ್ತೆ ಅವರೇ ಹುಟ್ಟಿ ಬರುತ್ತಾರೆ ಎಂದು ನಂಬಿಕೊಂಡಿದ್ದರು. ಅಷ್ಟೇ ಅಲ್ಲದೇ ಇವರು ನಾರ್ಮಲ್ ಹೆರಿಗೆಯನ್ನು ಅತಿ ಹೆಚ್ಚು ಪ್ರೋತ್ಸಾಹಿಸಿದ್ದರು. ಅದೇ ರೀತಿ ಕೃತಿಗಾ ಯಾವುದೇ ವೈದ್ಯರು ಅಥವಾ ಆಸ್ಪತ್ರೆಗೆ ಪರೀಕ್ಷೆಗಾಗಿ ಹೋಗಿರಲಿಲ್ಲ ಎಂದು ತನಿಖಾಧಿಕಾರಿ ಜೈಯಚಂದ್ರನ್ ತಿಳಿಸಿದ್ದಾರೆ.

    ಸದ್ಯಕ್ಕೆ ಪತಿ ಕಾರ್ತಿಕೇಯನ್ ನನ್ನು ಪೊಲೀಸರು ಕಸ್ಟ್ ಡಿಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಹೆರಿಗೆಗೆ ಸಹಾಯ ಮಾಡಿದ ಪ್ರವೀಣ್ ದಂಪತಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

  • ಗೌರಿ ಲಂಕೇಶ್ ಹತ್ಯೆ ಕೇಸ್ – ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ ವಾಗ್ಮೋರೆ!

    ಗೌರಿ ಲಂಕೇಶ್ ಹತ್ಯೆ ಕೇಸ್ – ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ ವಾಗ್ಮೋರೆ!

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪರಶುರಾಮ್ ವಾಗ್ಮೋರೆ ಎಸ್ ಐಟಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

    ಧರ್ಮ ಎನ್ನುವ ವಿಚಾರ ಒಂದೇ ನನ್ನ ತಲೆಯಲ್ಲಿತ್ತು. ಗೌರಿ ಲಂಕೇಶ್ ಅವರನ್ನು ಕೊಂದರೆ ಧರ್ಮ ಉಳಿಯತ್ತೆ ಅಂತಾ ಹಿರಿಯರು ಹೇಳಿದ್ದರು ಅದಕ್ಕೆ ಕೊಂದು ಮುಗಿಸಿದೆ. ಗೌರಿ ಲಂಕೇಶ್ ಬಗ್ಗೆ ನನ್ನ ಹಿರಿಯರು ಹೇಳುವಾಗ ಆಕೆ ಒಬ್ಬ ಧರ್ಮ ವಿರೋಧಿ ಎಂದು ನನ್ನ ರಕ್ತ ಕುದಿಯುತ್ತಿತ್ತು. ಅದಕ್ಕೆ ಆಕೆಯನ್ನು ಕೊಂದು ಹಾಕಿದೆ ಎಂದಿದ್ದಾನೆ.  ಇದನ್ನೂ ಓದಿ: ಗೌರಿ ಕೇಸ್ ಸಂಬಂಧ ಎಸ್‍ಐಟಿಯಿಂದ ವಿಚಾರಣೆ ತೀವ್ರ- ರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠಗೆ ಬುಲಾವ್

    ಗೌರಿ ಮುಖವನ್ನು ನಾನು ನೋಡಿರಲೇ ಇಲ್ಲ. ಕೊಲೆ ಮಾಡುವುದಕ್ಕೆ ಇನ್ನೂ ನಾಲ್ಕು ದಿನ ಇರುವಾಗಲೇ ಯ್ಯೂಟ್ಯೂಬ್ ನಲ್ಲಿ ಆಕೆಯನ್ನು ನೋಡಿ ಆಕೆಯ ಬಗ್ಗೆ ತಿಳಿದುಕೊಂಡಿದ್ದೆ. ಆಗಲೇ ನನಗೆ ಆಕೆ ಎಷ್ಟು ಹಿಂದೂ ವಿರೋಧಿ ಎಂದು ತಿಳಿಯಿತು. ಅದಕ್ಕೆ ಅವರು ಹಿಂದೂ ವಿರೋಧಿ ಎಂದು ನಿರ್ಧರಿಸಿ ಅವರನ್ನು ಕೊಂದೆ. ಗೌರಿಯನ್ನು ಕೊಂದ ನಂತರ ನನ್ನಿಂದ ಧರ್ಮ ಉಳಿಯಿತು, ಧರ್ಮಕ್ಕೆ ನಾನು ಅಳಿಲು ಸೇವೆ ಮಾಡಿದೆ ಎಂಬ ಹೆಮ್ಮೆಯಿಂದಲೇ ಮನೆಗೆ ಹೋದೆ ಎಂದು ವಾಗ್ಮೋರೆ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ಗೌರಿ ಕೇಸ್: ಪರಶುರಾಮ್ ವಾಗ್ಮೋರೆ ಕುರಿತಂತೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ಆದರೆ ನನಗೆ ಈಗ ಪಶ್ಚಾತಾಪ ಆಗುತ್ತಿದೆ. ನನ್ನ ತಂದೆ-ತಾಯಿ ಏನು ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ ಎಂದು ತನ್ನ ಮನದಾಳದಿಂದ ಎಸ್ ಐಟಿ ಮುಂದೆ ವಾಗ್ಮೋರೆ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ನನ್ನ ಹಿರಿಯರು ತನಗೆ ಗೌರಿಯನ್ನು ಕೊಲ್ಲುವಂತೆ ಹೇಳಿದ್ದಕ್ಕೆ ನಾನು ಈ ಕೊಲೆ ಮಾಡಲು ಮುಂದಾದೆ ಅಂತಾ ಕಣ್ಣೀರಿಟ್ಟಿದ್ದಾನೆ.

    https://www.youtube.com/watch?v=zyufMVL8Q2Q