Tag: youtube

  • ಯೂಟ್ಯೂಬ್ ವೀಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಹುಡುಗಿ – ಪ್ರಿಯಕರ ಅರೆಸ್ಟ್

    ಯೂಟ್ಯೂಬ್ ವೀಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಹುಡುಗಿ – ಪ್ರಿಯಕರ ಅರೆಸ್ಟ್

    ತಿರುವನಂತಪುರ: 17 ವರ್ಷದ ಹುಡುಗಿಯೊಬ್ಬಳು ತನ್ನ ಪ್ರಿಯಕರನಿಂದ ಗರ್ಭಿಣಿಯಾಗಿ ಯೂಟ್ಯೂಬ್ ವೀಡಿಯೋಗಳ ಸಹಾಯದಿಂದ ಮನೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

    ಅಕ್ಟೋಬರ್ 20ರಂದು ಹುಡುಗಿ ಮಗುವಿಗೆ ಜನ್ಮ ನೀಡಿದ್ದು, ಯೂಟ್ಯೂಬ್ ವೀಡಿಯೋಗಳನ್ನು ಮಾರ್ಗದರ್ಶಿಯಾಗಿ ಬಳಸಿಕೊಂಡು ಹೊಕ್ಕಳಬಳ್ಳಿಯನ್ನು ಕತ್ತರಿಸಿಕೊಂಡಿದ್ದಾಳೆ. ಸಂಪೂರ್ಣ ಹೆರಿಗೆ ಪ್ರಕ್ರಿಯೆಯನ್ನು ಹುಡುಗಿ ಯಾವುದೇ ಹೊರಗಿನವರ ಸಹಾಯ ಪಡೆಯದೇ ತಾನೇ ಮಾಡಿಕೊಂಡಿದ್ದಾಳೆ ಎಂಬ ವಿಚಾರ ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ. ಇದನ್ನೂ ಓದಿ: ಪ್ರೀತಿಯಿಂದ ಸಾಕಿದ್ದ ಜಾನುವಾರುಗಳು ಸಾವು – ಕಣ್ಣೀರಿಟ್ಟ ಮಾಲೀಕ

    ಸದ್ಯ ಮಂಜೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ದಾಖಲಿಸಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಆಕೆಯನ್ನು ಗರ್ಭಿಣಿ ಮಾಡಿದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 376(ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 282 ಕೇಸ್ – 15 ಮಂದಿಯಲ್ಲಿ ಕಾಣಿಸಿಕೊಂಡ AY 12 ಪ್ರಭೇದ

    ಅಕ್ಟೋಬರ್ 22 ರಂದು ಮಗು ಅಳುವ ಶಬ್ಧ ಕೇಳಿ ಪೋಷಕರಿಗೆ ಘಟನೆ ಕುರಿತಂತೆ ತಿಳಿದುಬಂದಿದೆ. ಮಗುವಿಗೆ ಜನ್ಮ ನೀಡಿದ ಹುಡುಗಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿರುವುದರ ಬಗ್ಗೆ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.

    ಹುಡುಗಿ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಈಕೆಯ ತಾಯಿಗೆ ದೃಷ್ಟಿದೋಷವಿದ್ದು, ಆಕೆಯ ತಂದೆಯಿಂದ ಕೂಡ ಗರ್ಭಾವಸ್ಥೆಯನ್ನು ಮರೆಮಾಡುವಲ್ಲಿ ಯಶಸ್ವಿಯಾಗಿದ್ದಳು. ಅಲ್ಲದೇ ಹುಡುಗಿ ಗರ್ಭಾವಸ್ಥೆಯಲ್ಲಿ ಎರಡು ಆಸ್ಪತ್ರೆಗಳಿಂದ ವೈದ್ಯಕೀಯ ನೆರವು ಪಡೆದಿದ್ದಳು. ಹೀಗಾಗಿ ಈ ಆಸ್ಪತ್ರೆಗಳಿಂದ ಯಾವುದಾದರೂ ಲೋಪಗಳಿದ್ದರೆ ಅದನ್ನು ಸಿಡಬ್ಲೂಸಿ ವಿಚಾರಿಸುತ್ತದೆ ಎಂದು ಮಕ್ಕಳ ಕಲ್ಯಾಣ ಸಮಿತಿ ತಿಳಿಸಿದೆ. ಇದನ್ನೂ ಓದಿ: ವಿದೇಶದಿಂದ ಬೆಂಗಳೂರಿಗೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

    ಹುಡುಗಿ ಮತ್ತು ಯುವಕ ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬಸ್ಥರು ಕಾನೂನುಬದ್ಧವಾಗಿ ಬಾಲಕಿಗೆ 18 ವರ್ಷ ತುಂಬಿದ ಬಳಿಕ ಇಬ್ಬರಿಗೂ ಮದುವೆ ಮಾಡಲು ಚಿಂತನೆ ನಡೆಸಿದ್ದರು. ಇದೀಗ ಹುಡುಗಿ ಹಾಗೂ ಮಗುವಿಗೆ ಯುವಕನ ಕುಟುಂಬಸ್ಥರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ ಹುಡುಗಿಗೆ ಇನ್ನೂ 17 ವರ್ಷವಾಗಿರುವುದರಿಂದ ಪೊಲೀಸರು ಇದನ್ನೂ ಅತ್ಯಾಚಾರ ಪ್ರಕರಣ ಎಂದು ಪರಿಗಣಿಸಿದ್ದಾರೆ.

  • ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್

    ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್

    ಬೆಂಗಳೂರು: ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್‍ನ್ನು ಪೊಲಿಸರು ಹೆಡೆಮುರಿ ಕಟ್ಟಿದ್ದಾರೆ.

    ಹಲಸೂರು ಗೇಟ್ ಪೊಲೀಸರು ರಾಜು, ಅಪ್ಪು ಹಾಗೂ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಳುವಾಗಿದ್ದ 8 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೈಕ್ ಹ್ಯಾಂಡ್ ಲಾಕ್ ಮುರಿದು ಖದೀಮರು ಕ್ಷಣ ಮಾತ್ರದಲ್ಲಿ ಕಳ್ಳತನ ಮಾಡುತ್ತಿದ್ದರು. ಬ್ಯಾಟರಾಯನಪುರ, ಹಲಸೂರುಗೇಟ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾರೆ.

    ಮನೆ ಮುಂಭಾಗದ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದರು. ಬೈಕ್ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ ಯಾಗಿತ್ತು. ಬಂಧನ ಬಳಿಕ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಅಚ್ಚರಿಯ ಮಾಹಿತಿಯೊಂದು ಹೊರ ಬಿದ್ದಿದೆ. ಇದನ್ನೂ ಓದಿ: ನಟ ವಿವೇಕ್‍ಗೆ ಉರುಳಾಗುತ್ತಾ ಸೌಜನ್ಯ ಜೊತೆಗಿನ ಲವ್?

    ಆರೋಪಿಗಳು ಬೈಕ್ ಕಳ್ಳತನ ಮಾಡುವ ಬಗ್ಗೆ ಯೂಟ್ಯೂಬ್ ನಲ್ಲಿ ಸರ್ಚ್ ಮಾಡುತ್ತಿದ್ದರು. ಸುಲಭವಾಗಿ ಹೇಗೆ ಬೈಕ್ ಕಳ್ಳತನ ಮಾಡಲು ಸಾಧ್ಯ ಎಂದು ವೀಕ್ಷಿಸುತ್ತಿದ್ದರು. ಅದರಂತೆ ಕ್ಷಣಮಾತ್ರದಲ್ಲಿ ಬೈಕ್ ಕದಿಯುತ್ತಿದ್ದರು. ಇದೀಗ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯುಟ್ಯೂಬ್ ನೋಡಿ ಗರ್ಭಪಾತಕ್ಕೆ ಮುಂದಾದ ಯುವತಿ

    ಯುಟ್ಯೂಬ್ ನೋಡಿ ಗರ್ಭಪಾತಕ್ಕೆ ಮುಂದಾದ ಯುವತಿ

    ಮುಂಬೈ: ಹೊಸ ಮೊಬೈಲ್, ಕಾರ್, ಬೈಕ್ ಸೇರಿದಂತೆ ಎಲ್ಲ ತರಹದ ಮಾಹಿತಿ ಪಡೆಯಲು ಯುಟ್ಯೂಬ್ ಸಹಾಯ ಪಡೆದುಕೊಳ್ಳುತ್ತೇವೆ. ಆದರೆ ಇಲ್ಲೋಬ್ಬ ಯುವತಿ ಯುಟ್ಯೂಬ್ ನೋಡಿ ಗರ್ಭಪಾತ ಮಾಡಿಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದ ಘಟನೆ ನಾಗ್ಪುರದ ಯಶೋಧರ ನಗರದಲ್ಲಿ ನಡೆದಿದೆ.

    25 ವರ್ಷದ ಯುವತಿಯೊಬ್ಬಳು ಯುಟ್ಯೂಬ್ ನೋಡಿ ಆಬಾರ್ಷನ್ ಮಾಡಿಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಳು. ಸರಿಯಾದ ಸಮಯಕ್ಕೆ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಬದುಕುಳಿದಿದ್ದಾಳೆ. ಯುಟ್ಯೂಬ್ ನೋಡಿ ಭ್ರೂಣವನ್ನು ಹೊರತೆಗೆಯಲು ಯುವತಿಗೆ ಆಕೆಯ ಗೆಳೆಯ ಸಲಹೆ ನೀಡಿದ್ದನು. ಇನಿಯನ ಮಾತು ನಂಬಿ ಅಬಾರ್ಷನ್‍ಗೆ ಮುಂದಾಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಳು. ಇದನ್ನೂ ಓದಿ:  ರಾಜ್ಯದಲ್ಲಿ ಸದ್ದಿಲ್ಲದೆ ನಡೀತಿದ್ಯಾ ಮತಾಂತರ?- ಬೆಂಗ್ಳೂರು ಸೇರಿ 5 ಕಡೆ ಮತಾಂತರ ಯತ್ನ

    ಮಹಾರಾಷ್ಟ್ರದ ನಾಗ್ಪುರ ಮೂಲದ ಯುವತಿ, 30 ವರ್ಷದ ಶೋಯೆಬ್ ಖಾನ್ ಎಂಬಾತನನ್ನು ಪ್ರೀತಿಸುತಿದ್ದಳು. ಶೋಯೆಬ್ ಖಾನ್ ಮದುವೆಯಾಗೋದಾಗಿ ನಂಬಿಸಿ 2016ರಿಂದಲೂ ಯುವತಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದ. ಗರ್ಭಿಣಿ ಎಂಬ ವಿಷಯ ತಿಳಿದು ಕೂಡಲೇ ಶೋಯೆಬ್‍ಗೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಯುವತಿ ಗರ್ಭಿಣಿ ಎಂಬ ವಿಷಯ ತಿಳಿಯುತ್ತಲೇ ಯುಟ್ಯೂಬ್ ನಲ್ಲಿರುವ ಕೆಲ ವೀಡಿಯೋಗಳ ಮೂಲಕ ಗರ್ಭಪಾತ ಹೇಗೆ ಮಾಡಿಕೊಳ್ಳಬೇಕೆಂದು ತೋರಿಸಿದ್ದಾನೆ. ನಂತರ ಔಷಧಿಯನ್ನು ಸಹ ತಂದು ಕೊಟ್ಟಿದ್ದಾನೆ. ಯುವತಿಗೆ ಗರ್ಭಪಾತ ಮಾಡಿಕೊಳ್ಳುವಂತೆ ಒತ್ತಡ ಹಾಕಿದ್ದಾನೆ. ಇದನ್ನೂ ಓದಿ:  ನನ್ನ ಕಣ್ಣಲ್ಲಿ ಜಾದೂ ಇದೆ: ರಶ್ಮಿಕಾ ಮಂದಣ್ಣ

    ಯುವತಿ ಗರ್ಭಪಾತ ಮಾಡಿಕೊಳ್ಳಲು ಮುಂದಾದಾಗ ಆಕೆಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದರಿಂದ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಯುವತಿ ಹೇಳಿಕೆಯನ್ನಾಧರಿಸಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಗುರುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

  • ಲಹರಿ ಮ್ಯೂಸಿಕ್‍ಗೆ ಯೂಟ್ಯೂಬ್ ಡೈಮಂಡ್ ಅವಾರ್ಡ್

    ಲಹರಿ ಮ್ಯೂಸಿಕ್‍ಗೆ ಯೂಟ್ಯೂಬ್ ಡೈಮಂಡ್ ಅವಾರ್ಡ್

    ಬೆಂಗಳೂರು: ಲಹರಿ ಮ್ಯೂಸಿಕ್‍ಗೆ ಯೂಟ್ಯೂಬ್ ನೀಡುವ ಪ್ರತಿಷ್ಠಿತ ಡೈಮಂಡ್ ಅವಾರ್ಡ್ ಸಿಕ್ಕಿದೆ.

    ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಲಹರಿ ಯುಟ್ಯೂಬ್ ಚಾನೆಲ್ ಶುರುವಾಗಿ ಇಲ್ಲಿಗೆ 10 ವರ್ಷ. ಈ ಸಂಭ್ರಮದ ಹೊತ್ತಲ್ಲೇ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲಿಗೆ  ಈಗ 1.18 ಕೋಟಿ ಮಂದಿ  ಸಬ್‍ಸ್ಕ್ರೈಬರ್ಸ್ ಆಗಿದ್ದಾರೆ.

    1 ಕೋಟಿ ಸಬ್‍ಸ್ಕ್ರೈಬರ್ಸ್ ಆದ ಹಿನ್ನೆಲೆಯಲ್ಲಿ ನ್ಯೂಯಾರ್ಕ್‍ನಲ್ಲಿರುವ ಯೂಟ್ಯೂಬ್ ಸಂಸ್ಥೆಯಿಂದ ಲಹರಿ ಮ್ಯೂಸಿಕ್‍ಗೆ ಪ್ರತಿಷ್ಠಿತ ಡೈಮಂಡ್ ಅವಾರ್ಡ್ ಪ್ರಶಸ್ತಿ ಸಿಕ್ಕಿದೆ.  ಇದನ್ನೂ ಓದಿ: ಲಹರಿ ಮ್ಯೂಸಿಕ್ ಪಾಲಾಯ್ತು ಕೆಜಿಎಫ್ 2 ಆಡಿಯೋ ರೈಟ್ಸ್

    ಕನ್ನಡಕ್ಕೆ ಮಾತ್ರ ಸೀಮಿತವಾಗದೆ ತೆಲುಗು, ತಮಿಳು ಹಾಗೂ ಮಲೆಯಾಳಂಗೂ ಲಹರಿ ಯೂಟ್ಯೂಬ್ ಚಾನೆಲ್ ವಿಸ್ತರಣೆ ಗೊಂಡಿದೆ. ಇದು ನಮಗೆ ಸಿಕ್ಕ ಗೌರವವಲ್ಲ, ಸಮಸ್ತ ಕನ್ನಡಿಗರ ಸಹಕಾರದ ಫಲ. ಹಾಗಾಗಿ ಇದು ಸಮಸ್ತ ಕನ್ನಡಿಗರಿಗೆ ಸಲ್ಲಬೇಕಾದ ಗೌರವ. ಅವರಿಗೆ ಇದು ಅರ್ಪಣೆ ಅಂತಾ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು ಪಬ್ಲಿಕ್ ಟಿವಿಗೆ  ತಿಳಿಸಿದ್ದಾರೆ.

  • ಯೂಟ್ಯೂಬ್ ನೋಡಿ, ಪುಸ್ತಕ ಓದಿ ಕೃಷಿಯಲ್ಲಿ ಯಶಸ್ಸು ಕಂಡ ಮಹಿಳೆ

    ಯೂಟ್ಯೂಬ್ ನೋಡಿ, ಪುಸ್ತಕ ಓದಿ ಕೃಷಿಯಲ್ಲಿ ಯಶಸ್ಸು ಕಂಡ ಮಹಿಳೆ

    ಚಾಮರಾಜನಗರ: ಆಸ್ತಿಯಿದೆ ಆದ್ರೆ ಸಾಲ ತೀರುತ್ತಿಲ್ಲ, ಉದ್ಯೋಗವಿದೆ ಆದರೆ ಅಲ್ಪ ಸಂಬಳದಿಂದ ಜೀವನ ನಿರ್ವಹಣೆ ಕಷ್ಟವಾಗ್ತಿದೆ. ಈ ವೇಳೆ ಆ ಕುಟುಂಬದ ಪರ ನಿಂತಿದ್ದು ಒಬ್ಬ ಮಹಿಳೆ. ಯೂಟ್ಯೂಬ್ ನೋಡಿ, ಪುಸ್ತಕ ಓದಿ ಕೃಷಿ ಮಾಡಿ ಆದಾಯ ಗಳಿಸ್ತಿದ್ದಾರೆ. ಆ ಮಹಿಳೆಯ ದಿಟ್ಟ ಹೆಜ್ಜೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಪುಸ್ತಕ ಓದಿ, ಯೂಟ್ಯೂಬ್ ನೋಡಿ ಕೃಷಿಯಲ್ಲಿ ಯಶಕಂಡ ಮಹಿಳೆಯ ಯಶೋಗಾಥೆ ಇಲ್ಲಿದೆ.

    ಹೌದು. ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರ ಗ್ರಾಮದ ಆ ಕುಟುಂಬಕ್ಕೆ 5 ಎಕರೆ ಜಮೀನಿತ್ತು. ಆದರು ಕೂಡ ಸಾಲದ ಸುಳಿಯಲ್ಲಿ ಸಿಲುಕಿದ್ದ ಹಿನ್ನೆಲೆ ಕೃಷಿ ಮಾಡಲೂ ಹಿಂದೇಟು ಹಾಕಿದ್ದರು.ಪ್ರಭಾಮಣಿ ಎಂಬ ಮಹಿಳೆ ಖಾಸಗಿ ಸಂಸ್ಥೆಯಲ್ಲಿ 6 ಸಾವಿರ ರೂಪಾಯಿಗೆ ಕೆಲಸ ಮಾಡ್ತಿದ್ದರು.ಆದರೂ ಕೂಡ ಸಂಸಾರದ ನಿರ್ವಹಣೆ ಕಷ್ಟವಾಗಿತ್ತು. ಈ ವೇಳೆ ಪ್ರಭಾಮಣಿ ಸಹೋದರ ಅಕ್ಕನ ಬಳಿ ಬಂದು ನಿಮಗೆ 5 ಎಕರೆ ಜಮೀನಿದೆ ಯಾಕೆ ಆಧುನಿಕ ಕೃಷಿ ಮಾಡಬಾರದು ಅಂತ ಕೃಷಿ ಸಂಬಂಧಿತ ಪುಸ್ತಕ ನೀಡಿದ್ರು. ನಂತರ ಆ ಪುಸ್ತಕ ಪ್ರಭಾಮಣಿ ಕುಟುಂಬವನ್ನು ಸಾಲದ ಸುಳಿಯಿಂದ ಹೊರ ತಂದಿದೆ.

    ವಿವಿಧ ಕೃಷಿ ಸಂಬಂಧಿತ ಪುಸ್ತಕ ಓದಿ, ಯೂಟ್ಯೂಬ್ ನೋಡಿ ಬಹು ಬೆಳೆ ಪದ್ಧತಿ ಅನುಸರಿಸಿ ಕೃಷಿ ಮಾಡಲಾರಂಭಿಸಿದ ಪ್ರಭಾಮಣಿ ಮತ್ತೆ ಹಿಂದಿರುಗಿ ನೋಡಿಲ್ಲ. ಪುಸ್ತಕ ಓದಿದ್ರೆ ಎಲ್ಲಾ ಪುಸ್ತಕದ ಬದನೆಕಾಯಿ ಅಂತಾರೆ. ಆದರೆ ಈ ಪುಸ್ತಕ ಪ್ರಭಾಮಣಿ ಲೈಫ್ ಅನ್ನೇ ಬದಲಾಯಿಸಿದೆ. ಇದೀಗ ಪ್ರಭಾಮಣಿ ಕೃಷಿ ಮಾಡಿ ದಿನಕ್ಕೆ ಒಂದೂವರೆ ಸಾವಿರ ಸಂಪಾದಿಸ್ತಿದ್ದಾರೆ. ಕುಟುಂಬವನ್ನು ಸಾಲದ ಸುಳಿಯಿಂದ ಹೊರತಂದು ಲಕ್ಷಾಂತರ ರೂ. ಹಣ ಗಳಿಸ್ತಿದ್ದಾರೆ.

    ಪ್ರಭಾಮಣಿ ಕುಟುಂಬ ಜಮೀನಿನಲ್ಲಿ ಕ್ಯಾರೇಟ್, ಬೀನ್ಸ್, ಈರುಳ್ಳಿ, ಬದನೆ, ಆಗಸೆ, ಕೊತ್ತಂಬರಿ, ಪುದೀನಾ, ಪಾಲಾರ್, ಕಬ್ಬು, ಬಾಳೆ, ಅರಿಶಿನ ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದಾರೆ. ಅಲ್ಲದೇ ಹೈನುಗಾರಿಕೆ ಕೂಡ ಮಾಡ್ತಿದ್ದು, ಪ್ರತಿನಿತ್ಯ 1500 ರೂ. ಆದಾಯ ಗಳಿಸ್ತಿದ್ದಾರೆ. ಪ್ರಭಾಮಣಿಗೆ ಕುಟುಂಬದ ಎಂಟು ಮಂದಿಯೂ ಕೂಡ ಸಾಥ್ ಕೊಡ್ತಿದ್ದು, ಎಲ್ಲರೂ ಒಟ್ಟಿಗೆ ಜಮೀನಿನಲ್ಲಿ ದುಡಿಯುತ್ತಿದ್ದಾರೆ. ಆದ್ರಿಂದ ಹೊರಗಿನ ಕೂಲಿ ಆಳುಗಳಿಗೆ ಪರಿ ತಪಿಸುವ ಅವಶ್ಯಕತೆ ಬಂದಿಲ್ಲ ಎಮದು ಅವರು ಹೇಳುತ್ತಾರೆ.

    ಒಟ್ಟಿನಲ್ಲಿ ಪುಸ್ತಕ ಓದಿದ್ರೆ ಪುಸ್ತಕದ ಬದನೆಕಾಯಿ ಕೆಲಸಕ್ಕೆ ಬರೊಲ್ಲ ಅನ್ನೋರಿಗೆ ಪ್ರಭಾಮಣಿ ಮಾದರಿಯಾಗಿದ್ದಾರೆ. ಅಲ್ಲದೆ ಯೂಟ್ಯೂಬ್ ನೋಡಿ, ಪುಸ್ತಕ ಓದಿ ಕೃಷಿ ಮಾಡೋ ಮೂಲಕ ಯಶಸ್ಸು ಗಳಿಸಿದ್ದಾರೆ.

  • ಜಾರಕಿಹೊಳಿ ಕೇಸ್‌ – ರಷ್ಯಾದಿಂದ ರಾಸಲೀಲೆ ವಿಡಿಯೋ ಅಪ್ಲೋಡ್‌?

    ಜಾರಕಿಹೊಳಿ ಕೇಸ್‌ – ರಷ್ಯಾದಿಂದ ರಾಸಲೀಲೆ ವಿಡಿಯೋ ಅಪ್ಲೋಡ್‌?

    ಬೆಂಗಳೂರು: ರಮೇಶ್‌ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ರಷ್ಯಾದಿಂದ ಅಪ್ಲೋಡ್‌ ಆಗಿದೆ ಎನ್ನಲಾಗುತ್ತಿದೆ.

    ಹೌದು. ಮಂಗಳವಾರ ಮಧ್ಯಾಹ್ನ 2:20ರ ವೇಳೆಗೆ ರಷ್ಯಾದಿಂದ ವಿಡಿಯೋ ಅಪ್ಲೋಡ್‌ ಮಾಡಿರುವ ವಿಚಾರ ಬೆಂಗಳೂರು ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಯೂಟ್ಯೂಬ್‌ಗೆ ಪತ್ರ ಬರೆದು ಮತ್ತಷ್ಟು ವಿವರ ಸಂಗ್ರಹಿಸಲು ಮುಂದಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ.

    ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸರು ಇಲ್ಲಿಯವರೆಗೆ ಎಫ್‍ಐಆರ್ ದಾಖಲಿಸಿಕೊಂಡಿಲ್ಲ. ಸಂತ್ರಸ್ತೆಯನ್ನು ಸಂಪರ್ಕಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.

    ದೂರುದಾರ ದಿನೇಶ್ ಕಲ್ಲಹಳ್ಳಿ, ಪೊಲೀಸರಿಗೂ ಸಂತ್ರಸ್ತೆಯ ವಿಳಾಸ ಮತ್ತು ಇತರೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ದಿನೇಶ್ ಕಲ್ಲಹಳ್ಳಿಗೆ ನೊಟೀಸ್ ಜಾರಿ ಮಾಡಿದ್ದು, ನಾಳೆ ಬೆಳಗ್ಗೆ 11ಕ್ಕೆ ವಿಚಾರಣೆಗೆ ಬರಲು ಸೂಚಿಸಿದ್ದಾರೆ.

    ದಿನೇಶ್ ಕಲ್ಲಹಳ್ಳಿಗೆ ಈ ವಿಡಿಯೋವನ್ನು ಕೊಟ್ಟಿದ್ದು ಯಾರು? ಯಾವಾಗ ಕೊಟ್ಟಿದ್ದಾರೆ. ದಿನೇಶ್ ಹೇಳುತ್ತಿರುವುದು ನಿಜವೇ ಎಂಬುದನ್ನು ಪೊಲೀಸರು ಕೆದಕುತ್ತಿದ್ದಾರೆ. ದಿನೇಶ್ ಕಾಲ್ ಡಿಟೇಲ್ಸ್ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

    ಪೊಲೀಸರು ಇದುವರೆಗೂ ಎಫ್‍ಐಆರ್ ದಾಖಲಿಸದ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಪಕ್ಷದ ವಕ್ತಾರ ಸಂಕೇತ್ ಏಣಗಿ ಮಾತನಾಡಿ, ಕ್ರಿಮಿನಲ್ ಕಾನೂನಿನ ಪ್ರಕಾರ, ಯಾರು ಬೇಕಾದರೂ ದೂರು ನೀಡಬಹುದು. ಸುಪ್ರೀಂಕೋರ್ಟ್ ಕೂಡಾ ಇದನ್ನು ಹೇಳಿದೆ. ಕೂಡಲೇ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

    ರಾಸಲೀಲೆ ಸಿಡಿ ಬಗ್ಗೆ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ಮಾಡಿಸಬೇಕು ಅಂತಾ ಆಗ್ರಹಿಸಿದ್ದಾರೆ. ಒಂದು ವೇಳೆ ರಮೇಶ್ ಜಾರಕಿಹೊಳಿ ಏನಾದರೂ ದೂರು ನೀಡಿದಲ್ಲಿ, ಇಡೀ ಪ್ರಕರಣಕ್ಕೆ ಬ್ಲಾಕ್‍ಮೇಲ್ ಟ್ವಿಸ್ಟ್ ಸಿಗಲಿದೆ ಎನ್ನಲಾಗುತ್ತಿದೆ.

  • ಒಂದೇ ಬಾರಿಗೆ 1.5 ಲೀಟರ್ ಓಡ್ಕಾ ಕುಡಿದು ಲೈವ್‍ನಲ್ಲೇ 60ರ ವೃದ್ಧ ಸಾವು

    ಒಂದೇ ಬಾರಿಗೆ 1.5 ಲೀಟರ್ ಓಡ್ಕಾ ಕುಡಿದು ಲೈವ್‍ನಲ್ಲೇ 60ರ ವೃದ್ಧ ಸಾವು

    – ಹಣ ನೀಡುವ ಭರವಸೆ ನೀಡಿದ್ದ ಯೂಟ್ಯೂಬರ್

    ಮಾಸ್ಕೋ: ರಷ್ಯಾ ಮೂಲದ 60 ವರ್ಷದ ವೃದ್ಧ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್‍ನಲ್ಲಿ ಲೀಟರ್‍ಗಟ್ಟಲೇ ಮದ್ಯ ಸೇವಿಸುವ ಚಾಲೆಂಜ್ ಸ್ವೀಕರಿಸಿದ್ದು, 1.5 ಲೀಟರ್ ಓಡ್ಕಾ ಕುಡಿಯುತ್ತಿದ್ದಂತೆ ಲೈವ್ ಸ್ಟ್ರೀಮಿಂಗ್ ವೇಳೆಯೇ ಕುಸಿದು, ಸಾವನ್ನಪ್ಪಿದ್ದಾನೆ.

    ರಷ್ಯಾದ ಸ್ಮೋಲೆಂಕ್ಸ್ ನಲ್ಲಿ ಘಟನೆ ನಡೆದಿದ್ದು, ವೃದ್ಧನಿಗೆ ಯೂಟ್ಯೂಬರ್ ಹಣದ ಆಫರ್ ನೀಡಿದ್ದಕ್ಕೆ ಲೈವ್ ಸ್ಟ್ರೀಮಿಂಗ್ ವೇಳೆಯೇ 1.5 ಲೀಟರ್ ಓಡ್ಕಾ ಕುಡಿದಿದ್ದಾನೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ಟ್ರೆಂಡ್ ಸೃಷ್ಟಿಯಾಗಿದ್ದು, ಹೆಚ್ಚು ವ್ಯೂವ್ಸ್ ಪಡೆಯಲು ತರಹೇವಾರಿ ಸಾಹಸ ಮಾಡುತ್ತಿದ್ದಾರೆ. ಇದಕ್ಕೆ ಥ್ರ್ಯಾಶ್ ಸ್ಟ್ರೀಮ್ಸ್ ಅಥವಾ ಟ್ರ್ಯಾಶ್ ಸ್ಟ್ರೀಮ್ಸ್ ಎಂದು ಕರೆಯುತ್ತಾರೆ. ಅಂದರೆ ವಿವಿಧ ರೀತಿಯ ಸ್ಟಂಟ್ಸ್, ಭಯಾನಕ ಸವಾಲುಗಳ ಮೂಲಕ ನೋಡುಗರನ್ನು ಸೆಳೆಯುತ್ತಾರೆ. ಹೆಚ್ಚು ವ್ಯೂವ್ಸ್ ಪಡೆಯಲು ಬೇರೊಬ್ಬರಿಗೆ ಹಣ ನೀಡಿ ಇಂತಹ ಸ್ಟಂಟ್ ಮಾಡಿಸುತ್ತಾರೆ. ಅದೇ ರೀತಿ ಮಾಡಲು ಹೋಗಿ ಇದೀಗ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.

    ರಷ್ಯಾ ಮೂಲದ 60 ವರ್ಷದ ವೃದ್ಧನನ್ನು ಯೂರಿ ದುಶೆಚ್ಕಿನ್ ಎಂದು ಗುರುತಿಸಲಾಗಿದ್ದು, ವೃದ್ಧನಿಗೆ ಹಣ ನೀಡುವುದಾಗಿ ಯೂಟ್ಯೂಬರ್ ಆಫರ್ ಮಾಡಿದ್ದ. ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ವೇಳೆ ಮದ್ಯ ಅಥವಾ ಹಾಟ್ ಸಾಸ್ ಸೇವಿಸಿದರೆ ಹಣ ನೀಡುವುದಾಗಿ ಆಫರ್ ಮಾಡಿದ್ದ.

    ವೃದ್ಧ ಬರೋಬ್ಬರಿ 1.5 ಲೀಟರ್ ಓಡ್ಕಾ ಸೇವಿಸುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಯೂಟ್ಯೂಬ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದಾಗಲೇ ಈ ಘಟನೆ ಸಂಭವಿಸಿದ್ದು, ವೀವರ್ಸ್ ಈ ಘಟನೆ ನೋಡಿ ಆಘಾತಕ್ಕೊಳಗಾಗಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ರಷ್ಯನ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಟ್ರ್ಯಾಶ್ ಸ್ಟ್ರೀಮ್ಸ್ ಗಳನ್ನು ಬ್ಯಾನ್ ಮಾಡಬೇಕೆಂದು ರಷ್ಯಾದ ಸೆನೆಟರ್ ಅಲೆಕ್ಸಿ ಪುಷ್ಕೋವ್ ಒತ್ತಾಯಿಸಿದ್ದಾರೆ.

  • 10 ಕೋಟಿ ನೀಡುವಂತೆ ತಂದೆಗೆ ಬ್ಲಾಕ್‍ಮೇಲ್ ಮಾಡಿದ 11 ವರ್ಷದ ಬಾಲಕ

    10 ಕೋಟಿ ನೀಡುವಂತೆ ತಂದೆಗೆ ಬ್ಲಾಕ್‍ಮೇಲ್ ಮಾಡಿದ 11 ವರ್ಷದ ಬಾಲಕ

    ಲಕ್ನೋ: ಯೂಟ್ಯೂಬ್ ವಿಡೀಯೋ ನೋಡಿ ಹ್ಯಾಕಿಂಗ್ ಮಾಡುವುದನ್ನು ಕಲಿತ 11 ವರ್ಷದ ಬಾಲಕ ತನ್ನ ತಂದೆಗೆ 10 ಕೋಟಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿರುವ ಘಟನೆ ಗಾಜಿಯಾಬಾದ್‍ನಲ್ಲಿ ನಡೆದಿದೆ. ಹಣ ನೀಡದೇ ಇದ್ದಲ್ಲಿ ನಿಮ್ಮ ಅಶ್ಲೀಲ ಚಿತ್ರಗಳನ್ನು ಮತ್ತು ಕುಟುಂಬದ ವೈಯಕ್ತಿಕ ವಿವರಗಳನ್ನು ಆನ್‍ಲೈನ್‍ನಲ್ಲಿ ಶೇರ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ.

    ಈ ವಿಚಾರವಾಗಿ ಬಾಲಕ ತಂದೆ, ಸೈಬರ್ ಕ್ರಿಮಿನಲ್ಸ್ ತಮ್ಮ ಇ-ಮೇಲ್ ಐಡಿಯನ್ನು ಜನವರಿ 1 ರಂದು ಹ್ಯಾಕ್ ಮಾಡಿದ್ದು, ಜೊತೆಗೆ ಮೇಲ್ ಐಡಿಯ ಪಾಸ್ ವಾರ್ಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಬದಲಿಸಿದ್ದಾರೆ. ಅಲ್ಲದೆ ತನಗೆ ಮೇಲ್ ಕಳುಹಿಸಿ 10 ಕೋಟಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಕುಟುಂಬಸ್ಥರಿಗೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ ಪೊಲೀಸರಿಗೆ ಆಶ್ಚರ್ಯಕಾರಿ ಸಂಗತಿಯೊಂದು ದೊರೆತಿದೆ. ದೂರುದಾರರ ಐಪಿ(ಇಂಟರ್‍ನೆಟ್ ಪ್ರೋಟೋಕಾಲ್) ವಿಳಾಸವನ್ನು ಪರಿಶೀಲಿಸಿದಾಗ ವ್ಯಕ್ತಿಯ ಕುಟುಂಬಸ್ಥರೇ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಹಾಗಾಗಿ ಕುಟುಂಬದ ಎಲ್ಲಾ ಸದಸ್ಯರನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ವ್ಯಕ್ತಿಯ 11 ವರ್ಷದ ಮಗ ಆರೋಪಿ ಎಂದು ತಿಳಿದುಬಂದಿದೆ.

    5 ನೇ ತರಗತಿ ಓದುತ್ತಿದ್ದ ಈ ವಿದ್ಯಾರ್ಥಿ ಆನ್‍ಲೈನ್ ಮೂಖಾಂತರ ಸೈಬರ್ ಕ್ರೈಂ ಹೇಗೆ ಮಾಡುವುದು ಎಂಬುದನ್ನು ಯೂಟ್ಯೂಬ್‍ನಲ್ಲಿ ಕಲಿತುಕೊಂಡಿದ್ದಾನೆ. ಅಲ್ಲದೆ ಯೂಟ್ಯೂಬ್‍ನಲ್ಲಿ ಹಣ ಸುಲಿಗೆ ಮಾಡಲು ಹೇಗೆ ಇ-ಮೇಲ್ ಮಾಡಬೇಕು ಎಂಬ ಹಲವು ವೀಡಿಯೋಗಳನ್ನು ನೋಡಿದ್ದಾನೆ.

    ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ ಕ್ರಿಮಿನಲ್ ಬೆದರಿಕೆ, ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸು ಉದ್ದೇಶಪೂರ್ವಕ ಅವಮಾನ ಮತ್ತು ಗಾಜಿಯಾಬಾದ್‍ನ ಐಟಿ ಕಾಯ್ದೆ ಸೆಕ್ಷನ್ 66ಡಿ ಅಡಿ ಪ್ರಕರಣ ದಾಖಲಿಸಲಾಗಿದೆ.

  • ಮಹಿಳೆಯ ‘ಸೆಕ್ಸ್ ಟಾಕ್’ ವೀಡಿಯೋ ಅಪ್ಲೋಡ್- ಮೂವರು ಅರೆಸ್ಟ್

    ಮಹಿಳೆಯ ‘ಸೆಕ್ಸ್ ಟಾಕ್’ ವೀಡಿಯೋ ಅಪ್ಲೋಡ್- ಮೂವರು ಅರೆಸ್ಟ್

    ಚೆನ್ನೈ: ಮಹಿಳೆ ಸೆಕ್ಸ್ ಬಗ್ಗೆ (ಇಂಟರ್ ಕೋರ್ಸ್) ಮಾತನಾಡಿದ್ದ ವೀಡಿಯೋ ಅಪ್ಲೋಡ್ ಮಾಡಿದ್ದ ಯುಟ್ಯೂಬ್ ಚಾನೆಲ್ ನ ಮೂವರನ್ನ ಗ್ರೇಟರ್ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

    ವೀಡಿಯೋದಲ್ಲಿ ಮಹಿಳೆ ಸೆಕ್ಸ್ ಗೆ ಸಂಬಂಧಿಸಿದ ಮಾತುಗಳನ್ನಾಡೋದನ್ನ ಕೇಳಬಹುದು. ಇತ್ತ ಮಹಿಳೆಯ ಸಂದರ್ಶನ ಮಾಡುತ್ತಿದ್ದ ವಿಜೆ (ವೀಡಿಯೋ ಜಾಕಿ) ಮಾತುಗಳನ್ನ ಕೇಳಿ ಜೋರು ಜೋರಾಗಿ ನಗಾಡಿದ್ದಾರೆ. ವೀಡಿಯೋದಲ್ಲಿ ಮಹಿಳೆ ದಾಖಲಿಸಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಶೋ ಸಂಪೂರ್ಣ ಸ್ಕ್ರಿಪ್ಟೆಡ್ ಆಗಿತ್ತು. ವೀಡಿಯೋ ಅಪ್ಲೋಡ್ ಮಾಡುವ ಮೊದಲೇ ಯುಟ್ಯೂಬ್ ಚಾನೆಲ್ ಬರುವ ಕಮೆಂಟ್ ಗಳನ್ನ ಹೈಡ್ ಮಾಡಲಾಗುವುದು ಅಂತ ಹೇಳಿತ್ತು. ಆದ್ರೆ ಆ ವಿಡಿಯೋ ಹಲವು ಯೂಟ್ಯೂಬ್ ಚಾನೆಲ್ ಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ನೆಟ್ಟಿಗರು ಅವಾಚ್ಯ ಪದಗಳನ್ನ ಬಳಸಿ ಕಮೆಂಟ್ ಮಾಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಸಾರ್ವಜನಿಕವಾಗಿ ಅಶ್ಲೀಲ ವೀಡಿಯೋ ಹರಿಬಿಟ್ಟ ಆರೋಪದಡಿ ಯುಟ್ಯೂಬ್ ಸಂಚಾಲಕ ದಿನೇಶ್, ವಿಜೆ ಹುಸೈನ್ ಬಾದ್ ಶಾ ಮತ್ತು ವೀಡಿಯೋ ಎಡಿಟರ್ ಅಜಯ್ ಬಾಬುನನ್ನ ಬಂಧಿಸಲಾಗಿದೆ.

  • ಚಳಿಯಲ್ಲಿ ಗರ್ಭಿಣಿ ಗೆಳತಿಯನ್ನ ನಿಲ್ಲಿಸಿ ಕೊಂದ ಯುಟ್ಯೂಬರ್

    ಚಳಿಯಲ್ಲಿ ಗರ್ಭಿಣಿ ಗೆಳತಿಯನ್ನ ನಿಲ್ಲಿಸಿ ಕೊಂದ ಯುಟ್ಯೂಬರ್

    – ಬಿಕಿನಿ ತೊಟ್ಟು ಚಳಿಯಲ್ಲಿ ನಿಂತಿದ್ದ ಗರ್ಭಿಣಿ ಗೆಳತಿ

    ಮಾಸ್ಕೋ: ಯೂಟ್ಯೂಬ್ ಲೈವ್ ಸ್ಟ್ರೀಮ್ ಗೋಸ್ಕರ್ ಗರ್ಭಿಣಿ ಗೆಳತಿಯನ್ನ ಚಳಿಯಲ್ಲಿ ನಿಲ್ಲಿಸಿ ಕೊಲೆಗೈದಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ಆರೋಪಿ ಪ್ರಿಯತಮನನ್ನ ಪೊಲೀಸರು ಬಂಧಿಸಿದ್ದು, ಎರಡು ವರ್ಷಕ್ಕೂ ಅಧಿಕ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

    28 ವರ್ಷದ ವೆಲಿಂಟನಾ ಗ್ರಿಗೊರ್ಯೆವಾ ಉಫ್ ವಲ್ಯಾ ಮೃತ ಗರ್ಭಿಣಿ. 30 ವರ್ಷದ ಯುಟ್ಯೂಬರ್ ಸ್ಟಾಸ್ ರಿಫ್ಲೈ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಮೈನಸ್ ಡಿಗ್ರಿ ಚಳಿಯಲ್ಲಿ ಗೆಳತಿಯನ್ನ ಲೈವ್ ಸ್ಟ್ರೀಮ್ ಗಾಗಿ ಬಿಕಿನಿಯಲ್ಲಿ ಮನೆಯಿಂದ ಹೊರಗೆ ನಿಲ್ಲಿಸಿದ್ದಾನೆ. ತೀವ್ರ ಚಳಿಯಿಂದಾಗಿ ವೆಲಿಂಟಿನಾ ಪ್ರಾಣ ಬಿಟ್ಟಿದ್ದಾಳೆ.

    15 ನಿಮಿಷದ ಬಳಿಕ ಬಾಗಿಲು ತೆಗೆದಾಗ ವೆಲಿಂಟಿನಾ ಶವ ಕಂಡ ಸ್ಟಾಸ್ ಭಯಗೊಂಡು ಆಕೆಯನ್ನ ಒಳ ಕರೆ ತಂದು, ವೈದ್ಯರಿಗೂ ಕರೆ ಮಾಡಿ ಸಹಾಯ ಕೇಳಿದ್ದಾನೆ. ಈ ಎಲ್ಲ ದೃಶ್ಯಗಳು ಯುಟ್ಯೂಬ್ ನಲ್ಲಿ ನೇರ ಪ್ರಸಾರವಾಗಿದೆ. ವೆಲಿಂಟಿನಾ ಶವ ನೋಡುತ್ತಿದ್ದಂತೆ ವೆಲ್ಯಾ ನೀನು ಜೀವಂತವಾಗಿದ್ದಿ ಅಲ್ವಾ? ನಿನ್ನ ನಾಡಿ, ಹೃದಯ ಬಡಿತ ನನಗೆ ಕೇಳಿಸುತ್ತಿಲ್ಲ? ಎದ್ದೇಳು? ಅಯ್ಯೋ ಏನಾಯ್ತು? ನನ್ನ ಗೆಳತಿಗೆ ಏನಾಯ್ತು ಎಂದು ಸ್ಟಾಸ್ ಕಣ್ಣೀರು ಹಾಕಿದ್ದಾನೆ.

    ಸ್ಥಳಕ್ಕಾಗಮಿಸಿ ಆರೋಗ್ಯಾಧಿಕಾರಿಗಳು ವೆಲಿಂಟಿನಾ ಹೈಫೋಥರ್ಮಿಯಾ (ಅತಿಯಾದ ಚಳಿಯಿಂದ) ಸಾವನ್ನಪ್ಪಿರೋದನ್ನ ಖಚಿತ ಪಡಿಸಿದ್ದಾರೆ. ಇನ್ನು ನೇರ ಪ್ರಸಾರ ವೀಕ್ಷಿಸುತ್ತಿದ್ದ ನೆಟ್ಟಿಗರು, ಅತಿ ಭಯಾನಕ ಕೊಲೆ. ಲೈಕ್ಸ್ ಮತ್ತು ವ್ಯೂವ್ ಗಳಿಗಾಗಿ ಇಷ್ಟು ಕ್ರೂರವಾಗಿ ನಡೆದುಕೊಳ್ಳುವುದು ತಪ್ಪ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಸ್ಟಾಸ್ ರಿಫ್ಲೈ ಖಾತೆಯನ್ನ ಯುಟ್ಯೂಬ್ ನಿಂದ ಡಿಲೀಟ್ ಮಾಡಲಾಗಿದೆ.