Tag: Youtube Star

  • ಯೂಟ್ಯೂಬ್ ಸ್ಟಾರ್ ಮಾಡುವ ಆಮಿಷವೊಡ್ಡಿ ಹುಡುಗಿ ಮೇಲೆ ಅತ್ಯಾಚಾರ

    ಯೂಟ್ಯೂಬ್ ಸ್ಟಾರ್ ಮಾಡುವ ಆಮಿಷವೊಡ್ಡಿ ಹುಡುಗಿ ಮೇಲೆ ಅತ್ಯಾಚಾರ

    ಜೈಪುರ: ಟಾಪ್ ಯೂಟ್ಯೂಬ್ ಸ್ಟಾರ್ ಮಾಡುವ ನೆಪದಲ್ಲಿ ಹುಡುಗಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಪಾಲಿನಲ್ಲಿ ಬೆಳಕಿಗೆ ಬಂದಿದೆ.

    3-4 ವರ್ಷಗಳಿಂದ ಯೂಟ್ಯೂಬ್‍ನಲ್ಲಿ ಕಾಮಿಡಿ ವೀಡಿಯೋ ಮಾಡುತ್ತಿದ್ದ 16 ವರ್ಷದ ಹುಡುಗಿಗೆ ಒಂದು ತಿಂಗಳ ಹಿಂದೆ ಜೋಧ್‍ಪುರದ ಬಾಬ್ರಾ (ಪಾಲಿ) ಹಾಲ್‍ನ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ರಾಜ್ ಖಾನ್ ಪರಿಚಯವಾಗಿತ್ತು. ಹುಡುಗಿಗೆ ಟಾಪ್ ಯೂಟ್ಯೂಬ್ ಸ್ಟಾರ್ ಆದರೆ ಚೆನ್ನಾಗಿ ಹಣ ಸಂಪಾದಿಸಬಹುದು ಎಂದು ಆಸೆ ಹುಟ್ಟಿಸಿ ಜನವರಿ 8ರಂದು ವೀಡಿಯೋ ಮಾಡುವ ನೆಪದಲ್ಲಿ ಜೋಧ್‍ಪುರದ ಫ್ಲಾಟ್‍ವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗ ಬೇಕಾ? ಹಾಗಿದ್ರೆ ಒಮ್ಮೆ ಟ್ರೈ ಮಾಡಿ

    ಈ ಘಟನೆ ಕುರಿತಂತೆ ಮನೆಯವರಿಗೆ ತಿಳಿಸುವುದಾಗಿ ಹೇಳಿದ್ದಕ್ಕೆ ಹುಡುಗಿ ಮೇಲೆ ಆರೋಪಿ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದಾನೆ. ಹೀಗಾಗಿ ಕೆಲವು ದಿನಗಳಿಂದ ಹುಡುಗಿ ಮೌನವಾಗಿದ್ದಳು. ಇದೀಗ ಈ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸಿದ್ದು, ಬಾಲಕಿಯ ಪೋಷಕರು ಈ ಬಗ್ಗೆ ಪೊಲೀಸರುಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಜನವರಿ 28ರಂದು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ರುಂಡ, ಮುಂಡ ಕತ್ತರಿಸಿ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ – 7 ಮಂದಿ ಅರೆಸ್ಟ್

  • 55 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್

    55 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್

    ಸಿಯೋಲ್: ಎರಡು ಯೂಟ್ಯೂಬ್ ಜಾನೆಲ್ ನಡೆಸುತ್ತಿರುವ 6 ವರ್ಷದ ಪುಟ್ಟ ಬಾಲಕಿ ಯೂಟ್ಯೂಬ್ ಸ್ಟಾರ್ 55 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾಳೆ.

    ದಕ್ಷಿಣ ಕೊರಿಯಾದ ಬಾಲಕಿ ಬೋರಾಮ್, ಯೂಟ್ಯೂಬ್‍ನಲ್ಲಿ 30 ದಶಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾಳೆ. ಬಾಲಕಿ ಎರಡು ಚಾನೆಲ್‍ಗಳನ್ನು ನಡೆಸುತ್ತಿದ್ದು, ಬೋರಾಮ್ ಟ್ಯೂಬ್ ವ್ಲಾಗ್ 17.5 ಮಿಲಿಯನ್ ಚಂದಾದಾರರು ಮತ್ತು ಬೋರಮ್ ಟ್ಯೂಬ್ ಟಾಯ್ ರಿವ್ಯೂ 13.6 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾಳೆ.

    ಈ ಪುಟ್ಟ ಸೆಲೆಬ್ರಿಟಿ ಗಂಗ್ನಮ್‍ನ ಚಿಯೊಂಗ್ಡ್ಯಾಮ್-ಡಾಂಗ್‍ನಲ್ಲಿ 258.3 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಿರುವ 1975ರ ಕಟ್ಟಡವನ್ನು ಖರೀದಿಸಿದ್ದಾರೆ. ಇದು ಸಿಯೋಲ್‍ನ ಸಮೃದ್ಧ ಪ್ರದೇಶಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.

    ಬಾಲಕಿ ಬೋರಾಮ್ ಪೋಷಕರು ಆರು ವರ್ಷಗಳ ಹಿಂದೆ ಪುತ್ರಿಯ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. ಸದ್ಯ ಈ ಕಂಪನಿಯೇ 55 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಖರೀದಿಸಿದೆ.

    ಯೂಟ್ಯೂಬ್ ಸ್ಟಾರ್ ಬೋರಾಮ್ ಪ್ರತಿ ತಿಂಗಳಿಗೆ ಮಾಸಿಕ 16 ಕೋಟಿ ರೂ. ಆದಾಯವನ್ನು ಹೊಂದಿದ್ದಾಳೆ. ಈ ಪುಟ್ಟ ಬಾಲಕಿ ತಾನು ಆಟವಾಡುವ ಹಾಗೂ ಪೋಷಕರೊಂದಿಗೆ ಕಾಲ ಕಳೆಯುವ ಮುದ್ದಾದ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್‍ಗೆ ಅಪ್‍ಲೋಡ್ ಮಾಡುತ್ತಾಳೆ. ಈ ವಿಡಿಯೋಗಳು ಅನೇಕರ ಮನ ಗೆದ್ದಿವೆ.

    ಕೊರಿಯಾದ ಇತರ ಯೂಟ್ಯೂಬ್ ಚಾನೆಲ್‍ಗಳಿಗಿಂತ ಬೋರಾಮ್‍ನ ಚಾನಲ್‍ಗಳು ಮಾರ್ಕೆಟಿಂಗ್ ಲಾಭದಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ. ಬಾಲಕಿಯ ಹಲವಾರು ವಿಡಿಯೋಗಳು ಲಕ್ಷಾಂತರ ವೀವ್ಸ್ ಗಳಿಸಿವೆ. ಅಷ್ಟೇ ಅಲ್ಲದೆ ಬಾಲಕಿ ತನ್ನ ವಿಡಿಯೋಗಳ ಮೂಲಕ ಉತ್ಪನ್ನಗಳನ್ನು ಉತ್ತೇಜಿಸಲು ಬ್ರಾಂಡ್‍ಗಳೊಂದಿಗೆ ಪಾಲುದಾರಿಕೆ ಹೊಂದಿದ್ದಾಳೆ. ಹೀಗಾಗಿ ಆದಾಯವು ಮತ್ತಷ್ಟು ಹೆಚ್ಚಾಗಿದೆ.

    ಬೋರಾಮ್ ಮಿಲಿಯನೇರ್ ಆದ ಮೊದಲ ಮಗು ಅಲ್ಲ. ಫೋಬ್ರ್ಸ್ ಪಟ್ಟಿಯಲ್ಲಿ ಹೆಚ್ಚು ಆದಾಯ ಗಳಿಸುವ 10 ಯೂಟ್ಯೂಬ್ ತಾರೆಗಳಲ್ಲಿ ಟಾಯ್ಸ್ ರಿವ್ಯೂ ನಡೆಸುತ್ತಿರುವ ಏಳು ವರ್ಷದ ರಿಯಾನ್ ಅಗ್ರಸ್ಥಾನದಲ್ಲಿದ್ದಾನೆ.

  • 7 ವರ್ಷದ ಪೋರ ವರ್ಷಕ್ಕೆ 155 ಕೋಟಿ ರೂ. ಸಂಪಾದಿಸಿದ!

    7 ವರ್ಷದ ಪೋರ ವರ್ಷಕ್ಕೆ 155 ಕೋಟಿ ರೂ. ಸಂಪಾದಿಸಿದ!

    ವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್ ನಿವಾಸಿಯಾಗಿರುವ 7 ವರ್ಷದ ಪೋರ ವಾರ್ಷಿಕವಾಗಿ ಬರೋಬ್ಬರಿ 155 ಕೋಟಿ ರೂಪಾಯಿ ಗಳಿಸುವ ಮೂಲಕ ವಿಶ್ವದ ಯೂಟ್ಯೂಬ್ ಸ್ಟಾರ್ 2018ರ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾನೆ.

    7 ವರ್ಷದ ರೇಯಾನ್ ಅತಿ ಹೆಚ್ಚು ಆದಾಯ ಪಡೆಯುವ ಜಗತ್ತಿನ ಅತಿ ಚಿಕ್ಕ ಯೂಟ್ಯೂಬ್ ಸ್ಟಾರ್ ಎಂದು ಖ್ಯಾತಿಯನ್ನು ಪಡೆದಿದ್ದಾನೆ. 2018ರ ಸಾಲಿನಲ್ಲಿ ಬರೋಬ್ಬರಿ 155 ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ವಿಶ್ವದ ನಂಬರ್ ಒನ್ ಯೂಟ್ಯೂಬ್ ಸ್ಟಾರ್ ಆಗಿ ಹೊರಹೊಮ್ಮಿದ್ದಾನೆ.

    ರೇಯಾನ್ ಯಾರು?
    ರೇಯಾನ್ ತನ್ನ ‘ರೇಯಾನ್ ಟಾಯ್ಸ್ ರಿವೀವ್’ ಯೂಟ್ಯೂಬ್ ಚಾನಲ್ ಮೂಲಕ ವಿಶ್ವ ಪ್ರಸಿದ್ಧಿಯಾಗಿದ್ದಾನೆ. 2015ರಲ್ಲ ಈ ಚಾನೆಲ್ ಅನ್ನು ಆರಂಭಿಸಿದ್ದ. ವಿಶ್ವದಾದ್ಯಂತ ಈತ ಸುಮಾರು 1.73 ಕೋಟಿ ಫಾಲೋವರ್ಸ್ ರನ್ನು ಹೊಂದಿದ್ದಾನೆ. ಅಲ್ಲದೇ ಫೋರ್ಬ್ಸ್ ಬಿಡುಗಡೆ ಮಾಡಿರುವ 2018 ಯೂಟ್ಯೂಬ್ ಸ್ಟಾರ್ ಪಟ್ಟಿಯಲ್ಲಿ ವಿಶ್ವದ ಗಣ್ಯಾತಿಗಣ್ಯರನ್ನೆಲ್ಲಾ ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಅಲ್ಲದೇ ಕಳೆದ ವರ್ಷ 71 ಕೋಟಿ ರೂಪಾಯಿ ಆದಾಯ ಗಳಿಸುವ ಮುಖಾಂತರ ಫೋರ್ಬ್ಸ್ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದ.

    1.73 ಕೋಟಿ ಫಾಲೋವರ್ಸ್ ಹೊಂದಿರುವ ರೇಯಾನ್ ವಿಡಿಯೋವನ್ನು ಕೋಟ್ಯಂತರ ಮಂದಿ ವೀಕ್ಷಿಸುತ್ತಾರೆ. ಬಾಲಕ ಮನೆಯಲ್ಲಿಯೇ ಕುಳಿತು ವಿಡಿಯೋ ಮೂಲಕ ಆಟಿಕೆಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ವಿವರಿಸುತ್ತಾನೆ. ಇದನ್ನು ವಿಡಿಯೋ ಮಾಡುವ ಆತನ ತಂದೆ-ತಾಯಿಗಳು ಅದನ್ನು ಯೂಟ್ಯೂಬಿನಲ್ಲಿ ಅಪ್‍ಲೋಡ್ ಮಾಡುತ್ತಾರೆ.

    ರೇಯಾನ್‍ನ ವಿಡಿಯೋಗಳನ್ನು ನೋಡುವವರು ಬಹುತೇಕ 3 ರಿಂದ 7 ವರ್ಷದ ಮಕ್ಕಳಾಗಿದ್ದಾರೆ. ಅಲ್ಲದೇ ಅತಿಹೆಚ್ಚು ಅಮೆರಿಕದ ಅಭಿಮಾನಿಗಳನ್ನು ಹೊಂದಿದ್ದಾನೆ. ಇದಲ್ಲದೇ ಬಾಲಕ ತನ್ನ ‘ರೇಯಾನ್ಸ್ ವರ್ಲ್ಡ್ಸ್’ ಎಂಬ ಹೆಸರಿನ ಮೂಲಕ ಮಕ್ಕಳ ಆಟಿಕೆ ಹಾಗೂ ಬಟ್ಟೆಗಳ ವ್ಯಾಪಾರವನ್ನು ಮಾಡುತ್ತಿದ್ದಾನೆ. ಈತ ತನ್ನ ಉತ್ಪನ್ನಗಳನ್ನು ಇ-ಕಾಮರ್ಸ್ ದಿಗ್ಗಜ ವಾಲ್‍ಮಾರ್ಟ್ ನಲ್ಲಿ ಮಾರಾಟ ಮಾಡುತ್ತಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv