Tag: youtube channel

  • ಪಾಕ್‌ನ ನ್ಯೂಸ್ ಚಾನೆಲ್ ಸೇರಿ 16 ಯೂಟ್ಯೂಬ್, 29 ಎಕ್ಸ್ ಖಾತೆ ಬ್ಯಾನ್ ಮಾಡಿದ ಕೇಂದ್ರ

    ಪಾಕ್‌ನ ನ್ಯೂಸ್ ಚಾನೆಲ್ ಸೇರಿ 16 ಯೂಟ್ಯೂಬ್, 29 ಎಕ್ಸ್ ಖಾತೆ ಬ್ಯಾನ್ ಮಾಡಿದ ಕೇಂದ್ರ

    – ಬಿಬಿಸಿಗೂ ತಟ್ಟಿದ ಬಿಸಿ

    ನವದೆಹಲಿ: ಪಹಲ್ಗಾಮ್‌ನ ಉಗ್ರರ ದಾಳಿಯ (Pahalgam Terror Attack) ಬಳಿಕ ಭಾರತದ ವಿರುದ್ಧ ಪ್ರಚೋದನಕಾರಿ ಹಾಗೂ ನಕಲಿ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದ ಪಾಕಿಸ್ತಾನದ (Pakistan) ನ್ಯೂಸ್ ಚಾನೆಲ್ ಸೇರಿ 16 ಯೂಟ್ಯೂಬ್ (Youtube), 29 ಎಕ್ಸ್ ಖಾತೆಗಳನ್ನು ಕೇಂದ್ರ ಸರ್ಕಾರ ಭಾರತದಲ್ಲಿ ಬ್ಯಾನ್ ಮಾಡಿದೆ.

    ಡಾನ್, ಸಮಾ ಟಿವಿ, ಎಆರ್‌ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ಜಿಯೋ ನ್ಯೂಸ್ ಮತ್ತು ಸುನೋ ನ್ಯೂಸ್ ಸುದ್ದಿ ವಾಹಿನಿಗಳನ್ನ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಪತ್ರಕರ್ತರಾದ ಇರ್ಷಾದ್ ಭಟ್ಟಿ, ಅಸ್ಮಾ ಶಿರಾಜಿ, ಉಮರ್ ಚೀಮಾ ಮತ್ತು ಮುನೀಬ್ ಫಾರೂಕ್ ಅವರ ಯೂಟ್ಯೂಬ್ ಚಾನೆಲ್‌ಗಳನ್ನು ಸಹ ನಿಷೇಧಿಸಲಾಗಿದೆ. ದಿ ಪಾಕಿಸ್ತಾನ್ ರೆಫರೆನ್ಸ್, ಸಮಾ ಸ್ಪೋರ್ಟ್ಸ್, ಉಜೈರ್ ಕ್ರಿಕೆಟ್ ಮತ್ತು ರಾಜಿ ನಾಮಾ ಸೇರಿದಂತೆ ಇತರ ಖಾತೆಗಳನ್ನು ಕೇಂದ್ರ ಗೃಹಸಚಿವಾಲಯದ ಶಿಫಾರಸ್ಸಿನ ಮೇಲೆ ಬ್ಯಾನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೋದಿ-ರಾಜನಾಥ್ ಸಿಂಗ್ ಮಹತ್ವದ ಚರ್ಚೆ; ಉಗ್ರರ ವಿರುದ್ಧ ಮುಂದಿನ ಕ್ರಮಕ್ಕೆ ಮಾಸ್ಟರ್ ಪ್ಲ್ಯಾನ್

    ಈ ಚಾನೆಲ್‌ಗಳನ್ನು ನೋಡಲು ಯಾರಾದರೂ ಪ್ರಯತ್ನಿಸಿದರೆ, ಅವರಿಗೆ ಈ ಕೆಳಗಿನ ಸಂದೇಶವು ಕಾಣಿಸುತ್ತದೆ. `ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಸರ್ಕಾರದ ಆದೇಶದಿಂದಾಗಿ ಈ ವಿಷಯವು ಪ್ರಸ್ತುತ ಈ ದೇಶದಲ್ಲಿ ಲಭ್ಯವಿಲ್ಲ. ಸರ್ಕಾರದ ಈ ನಿರ್ಧಾರದ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಗೂಗಲ್‌ನ ಪಾರದರ್ಶಕತೆ ವರದಿಗೆ ಭೇಟಿ ನೀಡಿ’ ಎಂದು ತೋರಿಸುತ್ತದೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಹಿ; ಭಾರತ-ಫ್ರಾನ್ಸ್ ಮಧ್ಯೆ 63,000 ಕೋಟಿ ಮೆಗಾ ಡೀಲ್‌

    ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನವು ಪ್ರಮುಖ ಪಾತ್ರವಹಿಸಿದೆ ಎಂದು ಶಂಕಿಸಿ ಭಾರತ ಪಾಕ್ ವಿರುದ್ಧ ತೀವ್ರ ಕ್ರಮ ಕೈಗೊಂಡಿದೆ. ನವದೆಹಲಿ ಸಿಂಧೂ ಜಲ ಒಪ್ಪಂದ ಮತ್ತು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಪಾಕ್ ಕೂಡಾ ಶಿಮ್ಲಾ ಗಡಿ ಒಪ್ಪಂದ ಸೇರಿ ಎಲ್ಲಾ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ. ಇದನ್ನೂಓದಿ: ಉಗ್ರರ ದಾಳಿ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡಿದ ಅತುಲ್ ಕುಲಕರ್ಣಿ

    `ಕಾಶ್ಮೀರದಲ್ಲಿ ಪ್ರವಾಸಿಗರ ಮೇಲಿನ ದಾಳಿಯ ನಂತರ ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ವೀಸಾ ಸ್ಥಗಿತಗೊಳಿಸಿದೆ’ ಎಂಬ ಶೀರ್ಷಿಕೆಯ ಬಗ್ಗೆ ಸರ್ಕಾರ ಬಿಬಿಸಿಗೆ ಎಚ್ಚರಿಕೆ ನೀಡಿದೆ. ಅಲ್ಲದೇ ಕೆಲವು ಸುದ್ದಿಗಳಲ್ಲಿ `ಭಾರತ ಪ್ರವಾಸಿಗರನ್ನು ಕೊಂದಿದೆ’ ಎಂಬ ಶೀರ್ಷಿಕೆಯನ್ನು ಹಾಕಲಾಗಿದೆ. ಈ ಕುರಿತು ಬಿಬಿಸಿಗೆ ಪತ್ರ ಬರೆದ ಭಾರತ ವಾಸ್ತವ ವರದಿಗಳನ್ನಷ್ಟೇ ಪ್ರಸಾರ ಮಾಡುವಂತೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದೆ.

  • ಕಾಂಗ್ರೆಸ್‌ ಯೂಟ್ಯೂಬ್‌ ಚಾನೆಲ್‌ ಡಿಲೀಟ್‌ – ಪಕ್ಷ ಹೇಳಿದ್ದೇನು?

    ಕಾಂಗ್ರೆಸ್‌ ಯೂಟ್ಯೂಬ್‌ ಚಾನೆಲ್‌ ಡಿಲೀಟ್‌ – ಪಕ್ಷ ಹೇಳಿದ್ದೇನು?

    ನವದೆಹಲಿ: ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ ಡಿಲೀಟ್‌ ಆಗಿರುವ ಬಗ್ಗೆ ವರದಿಯಾಗಿದೆ. ಆದರೆ ಡಿಲೀಟ್‌ ಆಗಿರುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

    ನಮ್ಮ ಯೂಟ್ಯೂಬ್‌ ಚಾನೆಲ್ ಡಿಲೀಟ್‌ ಆಗಿದೆ. ದೋಷ ಬಗೆಹರಿಸಲು ಕ್ರಮವಹಿಸಲಾಗಿದೆ. ಗೂಗಲ್‌ ಹಾಗೂ ಯೂಟ್ಯೂಬ್‌ ತಂಡದೊಂದಿಗೆ ಕಾಂಗ್ರೆಸ್‌ ಸಂಪರ್ಕದಲ್ಲಿದೆ ಎಂದು ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ ಟೀಮ್‌ ಟ್ವೀಟ್‌ ಮಾಡಿ ತಿಳಿಸಿದೆ. ಇದನ್ನೂ ಓದಿ: 10 ಸಾವಿರ ಟವರ್‌ ಮಾರಾಟಕ್ಕೆ ಮುಂದಾದ ಬಿಎಸ್‌ಎನ್‌ಎಲ್‌

    ಯಾವ ಕಾರಣಕ್ಕೆ ಚಾನೆಲ್‌ ಡಿಲೀಟ್‌ ಆಗಿದೆ ಎಂಬುದು ಸ್ಪಷ್ಟವಾಗಿಲ್ಲ. ತಾಂತ್ರಿಕ ದೋಷ ಅಥವಾ ಇನ್ಯಾವುದೇ ಕಾರಣಕ್ಕೆ ಡಿಲೀಟ್‌ ಆಗಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಸುಳ್ಳು ಮತ್ತು ದೇಶದ್ರೋಹ ಸುದ್ದಿಗಳ ಪ್ರಕಟ – 8 ಯೂಟ್ಯೂಬ್ ಚಾನಲ್‍ಗಳು ನಿಷೇಧ

    ಸುಳ್ಳು ಮತ್ತು ದೇಶದ್ರೋಹ ಸುದ್ದಿಗಳ ಪ್ರಕಟ – 8 ಯೂಟ್ಯೂಬ್ ಚಾನಲ್‍ಗಳು ನಿಷೇಧ

    ನವದೆಹಲಿ: ಸುಳ್ಳು ಮತ್ತು ದೇಶದ್ರೋಹದ ಸುದ್ದಿಗಳ ಪ್ರಕಟ ಹಿನ್ನೆಲೆ ಪಾಕಿಸ್ತಾನ ಸೇರಿದಂತೆ ಭಾರತದ ಒಟ್ಟು ಎಂಟು ಯೂಟ್ಯೂಬ್ ಚಾನಲ್‍ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

    ಐಟಿ ನಿಯಮಗಳು, 2021ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಯೂಟ್ಯೂಬ್ ಮೂಲಕ ಸುದ್ದಿ ಪ್ರಕಟಿಸುತ್ತಿದ್ದ ಚಾನಲ್‍ಗಳನ್ನು ನಿಷೇಧಿಸಿದೆ. ಇದನ್ನೂ ಓದಿ: ಮಗನ ತಿಥಿಯ ದಿನವೇ ತಾಯಿ ಸಾವು – ಸುದ್ದಿ ಕೇಳಿ ಮತ್ತಿಬ್ಬರು ಮಕ್ಕಳು ಆಸ್ಪತ್ರೆಗೆ

    ಲೋಕತಂತ್ರ ಟಿವಿ, U&V ಟಿವಿ, ಎಎಮ್ ರಜ್ವಿ, ಗೌರವಶಾಲಿ ಪವನ್ ಮಿಥಿಲಾಂಚಲ್, Top5TH, ಸರ್ಕಾರಿ ನವೀಕರಣ, ಸಬ್ ಕುಚ್ ದೇಖೋ ಹಾಗೂ ಪಾಕಿಸ್ತಾನ ಮೂಲದ ನ್ಯೂಸ್ ಕಿ ದುನ್ಯಾ ನಿಷೇಧಿತ ಯೂಟ್ಯೂಬ್ ಸುದ್ದಿ ಚಾನಲ್‍ಗಳಾಗಿವೆ.  ಇದನ್ನೂ ಓದಿ: ಕೆರೆಗೆ ಹಾರಿ ಯುವಕ, ಮಹಿಳೆ ಆತ್ಮಹತ್ಯೆ- ಸೂಸೈಡ್‍ಗೂ ಮುನ್ನ ಗೆಳೆಯನಿಗೆ ಕರೆ ಮಾಡಿದ್ದ ಚರಣ್

    114 ಕೋಟಿ ವೀವ್ಸ್ ಮತ್ತು 85 ಲಕ್ಷದ 73 ಸಾವಿರ ಸಬ್‍ಸ್ಕ್ರೈಬ್ ಹೊಂದಿದ್ದ ಈ ಎಂಟು ಚಾನಲ್‍ಗಳು ದೇಶದಲ್ಲಿನ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ತಪ್ಪು ಮಾಹಿತಿ ರವಾನೆ ಮಾಡುತ್ತಿದ್ದವು. ನಕಲಿ ಮತ್ತು ಸಂವೇದನಾಶೀಲ ಥಂಬ್‍ನೇಲ್‍ಗಳು, ಸುದ್ದಿ ನಿರೂಪಕರ ಚಿತ್ರಗಳು ಮತ್ತು ಕೆಲವು ಟಿವಿ ನ್ಯೂಸ್ ಚಾನೆಲ್‍ಗಳ ಲೋಗೊಗಳನ್ನು ಬಳಸಿಕೊಂಡು ವೀಕ್ಷಕರನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿದ್ದವು ಎಂದು ಆರೋಪಿಸಲಾಗಿದೆ.

    ಈ ನಿಷೇಧಿತ ಎಲ್ಲಾ ಯೂಟ್ಯೂಬ್ ಚಾನೆಲ್‍ಗಳು ತಮ್ಮ ವೀಡಿಯೊಗಳಲ್ಲಿ ಕೋಮು ಸೌಹಾರ್ದತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭಾರತದ ವಿದೇಶಿ ಸಂಬಂಧಗಳಿಗೆ ಹಾನಿಯುಂಟುಮಾಡುವ ಸುಳ್ಳು ವಿಷಯವನ್ನು ಹೊಂದಿರುವ ಜಾಹೀರಾತುಗಳನ್ನು ಪ್ರದರ್ಶಿಸುತ್ತಿವೆ ಎಂದು ಸಚಿವಾಲಯ ಹೇಳಿದೆ. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ – `ಗೋ ಬ್ಯಾಕ್ ಸಿದ್ದುಖಾನ್’ ಎಂದು ಆಕ್ರೋಶ

    ಭಾರತದ ಸಾರ್ವಭೌಮತೆ, ಸಮಗ್ರತೆ, ರಾಜ್ಯದ ಭದ್ರತೆ, ವಿದೇಶಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳು ಮತ್ತು ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದ್ದು, ಅದರಂತೆ, ವಿಷಯವು ಮಾಹಿತಿ ತಂತ್ರಜ್ಞಾನ ಕಾಯಿದೆ, 2000ರ ಸೆಕ್ಷನ್ 69ಂ ವ್ಯಾಪ್ತಿಯೊಳಗೆ ಒಳಗೊಂಡಿದೆ. ಈ ಹಿನ್ನೆಲೆ ಈ ಚಾನಲ್‍ಗಳನ್ನು ನಿಷೇಧಿಸಲಾಗಿದೆ.

    ಡಿಸೆಂಬರ್ 2021 ರಿಂದ, ಸಚಿವಾಲಯವು 102 ಯೂಟ್ಯೂಬ್ ಆಧಾರಿತ ಸುದ್ದಿ ಚಾನಲ್‍ಗಳು ಮತ್ತು ಹಲವಾರು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ನಿರ್ದೇಶನ ನೀಡಿದೆ. ಭಾರತದ ಸಾರ್ವಭೌಮತೆ, ಸಮಗ್ರತೆ, ಏಕತೆಗೆ ಧಕ್ಕೆ ಉಂಟು ಮಾಡುವ ಸುಳ್ಳು ಸುದ್ದಿ ಬಿತ್ತರಿಸುವ ಯೂಟ್ಯೂಬ್ ಚಾನಲ್‍ಗಳನ್ನು ಹಂತ ಹಂತವಾಗಿ ನಿಷೇಧಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಗ ಅರ್ಜುನ್‍ಗೆ ಐಪಿಎಲ್‍ನಲ್ಲಿ ಸಿಗದ ಅವಕಾಶ – ಕೊನೆಗೂ ಮೌನ ಮುರಿದ ತೆಂಡೂಲ್ಕರ್

    ಮಗ ಅರ್ಜುನ್‍ಗೆ ಐಪಿಎಲ್‍ನಲ್ಲಿ ಸಿಗದ ಅವಕಾಶ – ಕೊನೆಗೂ ಮೌನ ಮುರಿದ ತೆಂಡೂಲ್ಕರ್

    ಮುಂಬೈ: ಐಪಿಎಲ್ 2022ರ ಟೂರ್ನಿಯಲ್ಲಿ ಮುಂಬೈ ತಂಡದ ಪರ ಲೀಗ್ ಪಂದ್ಯಗಳಲ್ಲಿ ಆಡಲು ಅರ್ಜುನ್‍ಗೆ ಒಂದೇ ಒಂದು ಅವಕಾಶ ಸಿಗದ ಕಾರಣ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೌನ ಮುರಿದಿದ್ದಾರೆ.

    ಈ ಕುರಿತು ಮಂಗಳವಾರ ಯೂಟ್ಯೂಬ್ ಚಾನೆಲ್‍ವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಂಬೈ ಫ್ರಾಂಚೈಸಿಯ ಮಾರ್ಗದರ್ಶಕರಾದ ಸಚಿನ್, ಮಗ ಅರ್ಜುನ್‍ಗೆ ನೀಡಿದ್ದ ಕೆಲ ಸಲಹೆಗಳನ್ನು ಬಹಿರಂಗಪಡಿಸಿದ್ದಾರೆ. ಅರ್ಜುನ್‍ಗೆ ಕೇವಲ ತನ್ನ ಆಟದ ಮೇಲೆ ಗಮನಹರಿಸು ಅಂತ ಹೇಳಿದ್ದೆ. ತಂಡದ ಆಯ್ಕೆಯ ಭಾಗದ ಬಗ್ಗೆ ಯೋಚಿಸುವುದಿಲ್ಲ. ನಾನು ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗುವುದಿಲ್ಲ. ನಾನು ಆ ಭಾಗವನ್ನು ನಿರ್ವಹಣೆಗೆ ಮಾತ್ರ ಬಿಡುತ್ತೇನೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಇಂದು ಎಲಿಮಿನೇಟರ್ ಪಂದ್ಯ – ಡುಪ್ಲೆಸಿ ಬಳಗಕ್ಕೆ ನಿರ್ಣಾಯಕ

    ಎಡಗೈ ಮಧ್ಯಮ ವೇಗಿ ಅರ್ಜುನ್‍ರನ್ನು ಈ ವರ್ಷದ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ 30 ಲಕ್ಷ ನೀಡಿ ಖರೀದಿಸಲಾಗಿತ್ತು. ಆದರೆ ಲೀಗ್ ಹಂತದ ಒಂದೇ ಒಂದು ಪಂದ್ಯದಲ್ಲೂ ಅವರಿಗೆ ಆಡಲೂ ಅವಕಾಶ ಸಿಕ್ಕಿರಲಿಲ್ಲ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

    ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ 14 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದು, 10 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಕ್ರಮವಾಗಿ ಕೊನೆ ಸ್ಥಾನದಲ್ಲಿದೆ. ಟೂರ್ನಿಯ ಆರಂಭದಿಂದಲೂ ಸ್ಥಿರ ಪದರ್ಶನ ನೀಡಲು ಎಡವಿದ್ದ ಮುಂಬೈ, ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿದೆ.

  • ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್

    ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್

    ನವದೆಹಲಿ: ಭಾರತ ದೇಶದ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದ 16 ಯೂಟ್ಯೂಬ್ ಚ್ಯಾನೆಲ್‌ಗಳನ್ನು ಸೋಮವಾರ ಬ್ಯಾನ್ ಮಾಡಿದೆ. ಭಾರತ ಬ್ಯಾನ್ ಮಾಡಿರುವ 16 ಯೂಟ್ಯೂಬ್ ಚ್ಯಾನೆಲ್‌ಗಳ ಪೈಕಿ 10 ಭಾರತದ ಹಾಗೂ 6 ಪಾಕಿಸ್ತಾನದ ಚ್ಯಾನೆಲ್‌ಗಳು ಸೇರಿವೆ.

    ಈ ತಿಂಗಳ ಪ್ರಾರಂಭದಲ್ಲಿ ಮಾಹಿತಿ ಹಾಗೂ ಪ್ರಸಾರ ಇಲಾಖೆ 22 ಯೂಟ್ಯೂಬ್ ಚ್ಯಾನೆಲ್‌ಗಳನ್ನು ಬ್ಯಾನ್ ಮಾಡಿತ್ತು. ಅವುಗಳಲ್ಲಿ 18 ಭಾರತೀಯ ಹಾಗೂ 4 ಪಾಕಿಸ್ತಾನದ ಚಾನೆಲ್‌ಗಳು ಸೇರಿದ್ದವು. ಇವುಗಳು ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ಗುಜರಾತ್‌ನಿಂದ ಕರ್ನಾಟಕಕ್ಕೆ 3 ಶತಕೋಟಿ ಡಾಲರ್‌ ಹೂಡಿಕೆಯ ಚಿಪ್‌ ಘಟಕ ಶಿಫ್ಟ್‌?

    ಯೂಟ್ಯೂಬ್ ಚ್ಯಾನೆಲ್‌ಗಳ ನಿಷೇಧದ ಬಗ್ಗೆ ಪತ್ರಿಕಾ ಮಾಹಿತಿ ಬ್ಯೂರೋ(ಪಿಬಿಐ), ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಿ ಸಂಬಂಧಗಳು, ದೇಶದ ಕೋಮು ಸೌಹಾರ್ದತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಕುರಿತು ಸುಳ್ಳು ಸುದ್ದಿಗಳನ್ನು ಹರಡಲು ಈ ಚ್ಯಾನೆಲ್‌ಗಳನ್ನು ಬಳಸಲಾಗಿತ್ತು ಎಂದಿದೆ. ಇದನ್ನೂ ಓದಿ: ಒಟ್ಟು 64 ಕೇಸ್ – ಸಕ್ರಿಯ ಪ್ರಕರಣಗಳ ಸಂಖ್ಯೆ 1,671ಕ್ಕೆ ಏರಿಕೆ

    ಬ್ಯಾನ್ ಆಗಿರುವ ಭಾರತೀಯ ಮೂಲದ ಯೂಟ್ಯೂಬ್ ಚ್ಯಾನೆಲ್‌ಗಳು ಭಯೋತ್ಪಾದನೆ, ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಕೆಲಸಕ್ಕೆ ಕೈ ಹಾಕಿದೆ. ಪರಿಶೀಲಿಸಲಾದ ಕೆಲವು ಸುದ್ದಿಗಳು ಸಮಾಜದ ವಿವಿಧ ವರ್ಗಗಳನ್ನು ಭಯಭೀತಗೊಳಿಸುವ ಸಾಮರ್ಥ್ಯ ಹೊಂದಿವೆ ಎಂದು ಕೇಂದ್ರ ತಿಳಿಸಿದೆ.

    ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್‌ಗಳು ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ, ಭಾರತದ ವಿದೇಶಿ ಸಂಬಂಧಗಳ ಬಗ್ಗೆ ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡುತ್ತಿರುವುದು ಕಂಡುಬಂದಿದೆ. ಈ ಚಾನೆಲ್‌ಗಳು ಹರಡುತ್ತಿದ್ದ ವಿಷಯಗಳು ಸಂಪೂರ್ಣವಾಗಿ ಸುಳ್ಳು ಹಾಗೂ ಸೂಕ್ಷ್ಮವಾಗಿದೆ. ರಾಷ್ಟ್ರದ ಭದ್ರತೆ, ಸಾರ್ವಭೌಮತ್ವ, ಸಮಗ್ರತೆ ಹಾಗೂ ವಿದೇಶಗಳೊಂದಿಗಿನ ಭಾರತದ ಸ್ನೇಹ ಸಂಬಂಧಗಳನ್ನು ಘಾಸಿಗೊಳಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದೆ.

  • 22 ಯೂಟ್ಯೂಬ್ ಚಾನೆಲ್ ಬ್ಯಾನ್ ಮಾಡಿದ ಭಾರತ

    ನವದೆಹಲಿ: ಭಾರತ ಸರ್ಕಾರ ಐಟಿ ನಿಯಮ 2021ರ ಅಡಿಯಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದ್ದ 22 ಯೂಟ್ಯೂಬ್ ಚ್ಯಾನೆಲ್‌ಗಳನ್ನು ಬ್ಯಾನ್ ಮಾಡಿದೆ.

    ಇದೇ ಮೊದಲ ಬಾರಿಗೆ ಐಟಿ ನಿಯಮ, 2021 ರ ಅಡಿಯಲ್ಲಿ 18 ಭಾರತೀಯ ಯೂಟ್ಯೂಬ್ ನ್ಯೂಸ್ ಚ್ಯಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ. ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಇತ್ತೀಚಿನ ಕ್ರಮದಲ್ಲಿ ಪಾಕಿಸ್ತಾನ ಮೂಲದ 4 ಯೂಟ್ಯೂಬ್ ನ್ಯೂಸ್ ಚಾನೆಲ್‌ಗಳನ್ನು ಕೂಡಾ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಅಡುಗೆ ಎಣ್ಣೆಯಿಂದ ತಯಾರಿಸಿದ ಇಂಧನದಲ್ಲಿ 3 ಗಂಟೆ ಹಾರಾಡಿತು ವಿಮಾನ

    ಭಾರತೀಯ ಸಶಸ್ತ್ರ ಪಡೆ, ಜಮ್ಮು ಮತ್ತು ಕಾಶ್ಮೀರದಂತಹ ವಿವಿಧ ವಿಷಯಗಳ ಕುರಿತು ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡಲು ಹಲವಾರು ಯೂಟ್ಯೂಬ್ ಚ್ಯಾನೆಲ್‌ಗಳನ್ನು ಬಳಸಲಾಗಿದೆ. ಇದೀಗ ಹೊಸದಾಗಿ ನಿರ್ಬಂಧಿಸಲಾಗಿರುವ ಯೂಟ್ಯೂಬ್ ಚಾನೆಲ್‌ಗಳಲ್ಲಿ ಬಹುತೇಕ ಭಾರತ ವಿರೋಧಿ ಸುದ್ದಿಗಳನ್ನೇ ಪೋಸ್ಟ್ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಎಡಿಟ್ ಬಟನ್ ಬೇಕಾ? – ಸಮೀಕ್ಷೆ ಆರಂಭಿಸಿದ ಮಸ್ಕ್

    ಈ ಯೂಟ್ಯೂಬ್ ಚ್ಯಾನೆಲ್‌ಗಳು ಉಕ್ರೇನ್‌ನಲ್ಲಿ ನಡೆಯುತ್ತಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಮಾಣದ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದೆ. ಇದು ಭಾರತದೊಂದಿಗಿನ ವಿದೇಶೀ ಸಂಬಂಧಗಳನ್ನು ಅಪಾಯಕ್ಕೆ ತಳ್ಳುವ ಗುರಿ ಹೊಂದಿದೆ ಎಂದು ಸರ್ಕಾರ ಆಘಾತ ವ್ಯಕ್ತಪಡಿಸಿದೆ.

  • ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಚಾರ- 19 ಯೂಟ್ಯೂಬ್ ಚಾನೆಲ್ ಬಂದ್

    ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಚಾರ- 19 ಯೂಟ್ಯೂಬ್ ಚಾನೆಲ್ ಬಂದ್

    ನವದೆಹಲಿ: ಸಾಮಾಜಿ ಮಾಧ್ಯಮದ ಅತ್ಯಂತ ದೊಡ್ಡ ವೇದಿಕೆ ಯೂಟ್ಯೂಬ್ ಗಣರಾಜ್ಯೋತ್ಸವಕ್ಕೂ ಮೊದಲೇ ಭಾರತದ ಬಗ್ಗೆ ವಿರೋಧವನ್ನು ಪ್ರಚಾರ ಮಾಡುವ 19 ಚಾನಲ್‌ಗಳನ್ನು ಬ್ಯಾನ್ ಮಾಡಿದೆ.

    ಜನವರಿ 20ರಂದು 19 ಚ್ಯಾನೆಲ್‌ಗಳ ಖಾತೆಯನ್ನು ಯೂಟ್ಯೂಬ್ ಡಿಲೀಟ್ ಮಾಡಿದೆ. 2021ರ ಡಿಸೆಂಬರ್ 21ರಂದು ಭಾರತ ಸರ್ಕಾರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಸಹಾಯದಿಂದ 20 ಯೂಟ್ಯೂಬ್ ಚ್ಯಾನೆಲ್‌ಗಳು ಹಾಗೂ 2 ವೆಬ್‌ಸೈಟ್‌ಗಳನ್ನು ನಿಷೇಧಿಸಿತ್ತು. ಇದನ್ನೂ ಓದಿ: ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಸಾರ – 35 ಪಾಕ್‌ ಯೂಟ್ಯೂಬ್‌ ಚಾನೆಲ್‌ ಬ್ಲಾಕ್‌

    ಇದೀಗ ಯೂಟ್ಯೂಬ್ ಜಾಗತಿಕವಾಗಿ 19 ಚ್ಯಾನೆಲ್‌ಗಳನ್ನು ನಿಷೇಧಿಸಿದೆ. ಇದರೊಂದಿಗೆ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುವ ವೆಬ್‌ಸೈಟ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ

    ಯೂಟ್ಯೂಬ್‌ನ ಈ ಕ್ರಮದಿಂದ ಜಾಗತಿಕವಾಗಿ ಹಲವು ಯೂಟ್ಯೂಬ್ ಚಾನಲ್ ಹೊಂದಿದವರು ಭಾರತ ವಿರೋಧಿ ಪ್ರಚಾರದ ವೀಡಿಯೋಗಳನ್ನು ಅಳಿಸಿ ಹಾಕಲು ಪ್ರಾರಂಭಿಸಿದ್ದಾರೆ. ಯೂಟ್ಯೂಬ್ ಮುಂದಿನ ದಿನಗಳಲ್ಲಿ ಇಂತಹ ಹಲವು ಚಾನಲ್‌ಗಳನ್ನು ನಿಷೇಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

  • ಬದುಕಿದ್ದಾಗಲೇ ಸತ್ತಿದ್ದಾರೆ ಅಂದ ಯೂಟ್ಯೂಬ್ ಚಾನೆಲ್ – ನಟ ಸಿದ್ಧಾರ್ಥ್ ಗರಂ

    ಬದುಕಿದ್ದಾಗಲೇ ಸತ್ತಿದ್ದಾರೆ ಅಂದ ಯೂಟ್ಯೂಬ್ ಚಾನೆಲ್ – ನಟ ಸಿದ್ಧಾರ್ಥ್ ಗರಂ

    ಚೆನ್ನೈ: ಕಾಲಿವುಡ್‍ನ ಖ್ಯಾತ ನಟ ಸಿದ್ಧಾರ್ಥ್ ನಿಧನರಾಗಿದ್ದಾರೆ ಎಂದು ಇತ್ತೀಚೆಗಷ್ಟೆ ಯೂಟ್ಯೂಬ್ ಚಾನೆಲ್‍ವೊಂದು ವರದಿಮಾಡಿತ್ತು. ಈ ಕುರಿತಂತೆ ಇದೀಗ ಸಿದ್ಧಾರ್ಥ್‍ರವರು ಪ್ರತಿಕ್ರಿಯೆ ನೀಡಿದ್ದಾರೆ.

    ಚಿಕ್ಕವಯಸ್ಸಿನಲ್ಲಿಯೇ ಮೃತಪಟ್ಟ ದಕ್ಷಿಣ ಭಾರತದ ಖ್ಯಾತ ನಟ, ನಟಿಯರ ಸಾಲಿನಲ್ಲಿ ಸಿದ್ದಾರ್ಥ್ ಫೋಟೋವನ್ನು ಕೂಡ ಸೇರಿಸಿ ಯೂಟ್ಯೂಬ್ ಸುದ್ದಿಯೊಂದನ್ನು ಪ್ರಕಟಿಸಿತ್ತು. ಅಲ್ಲದೇ ಸಿದ್ದಾರ್ಥ್ ನಿಧನರಾಗಿದ್ದಾರೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಗಾಬರಿಯಾಗಿದ್ದರು.

    ಈ ವಿಚಾರ ತಿಳಿದು ಸಿದ್ಧಾರ್ಥ್‍ರವರು ಯೂಟ್ಯೂಬ್‍ಗೆ ರಿಪೋರ್ಟ್ ಮಾಡಿರುವ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾನು ಈ ವೀಡಿಯೋ ಬಗ್ಗೆ ಯೂಟ್ಯೂಬ್‍ಗೆ ರಿಪೋರ್ಟ್ ಮಾಡಿದ್ದೆ. ಆದರೆ ಯೂಟ್ಯೂಬ್ ತಂಡ ಕ್ಷಮಿಸಿ ಈ ವೀಡಿಯೋದಲ್ಲಿ ನಮಗೆ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇದನ್ನು ಕಂಡು ನಾನು ಎಲಾ ಇವರಾ.. ಎಂದು ಕೊಂಡಿದ್ದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ತೆಲುಗಿನ ಬೊಮ್ಮರಿಲ್ಲು, ನೂವು ವಸ್ತಾನಂಟೆ ನೇನೊದ್ದಾಂಟಾನಾ, ಆಟ ಹಾಗೂ ತಮಿಳಿನ ಜಿಗರ್ ತಾಂಡ, ಬಾಯ್ಸ್, ಓ ಮೈ ಫ್ರೆಂಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ನಟ ಅಮೀರ್ ಖಾನ್ ಜೊತೆ ‘ರಂಗ್ ದೇ ಬಸಂತಿ’ ಸಿನಿಮಾದಲ್ಲಿ ಕೂಡ ಸ್ಕ್ರೀನ್ ಶೇರ್ ಮಾಡಿದ್ದರು. ಈ ಸಿನಿಮಾ ಬಾಲಿವುಡ್‍ನಲ್ಲಿ ಸಖತ್ ಸದ್ದು ಮಾಡಿತ್ತು. ಇದನ್ನೂ ಓದಿ: ಪ್ರಿಯಾಂಕಾಗೆ ಅಶ್ಲೀಲ ಸನ್ನೆ – ಚಕ್ರವರ್ತಿ ವಿರುದ್ಧ ವೀಕ್ಷಕರು ಗರಂ

  • ಹೊಸ ಯೂಟ್ಯೂಬ್ ಚಾನೆಲ್ ತೆರೆದ ವಾರ್ನರ್ ಕಾಲೆಳೆದ ಯುವರಾಜ್

    ಹೊಸ ಯೂಟ್ಯೂಬ್ ಚಾನೆಲ್ ತೆರೆದ ವಾರ್ನರ್ ಕಾಲೆಳೆದ ಯುವರಾಜ್

    ನವದೆಹಲಿ: ಹೊಸ ಯೂಟ್ಯೂಬ್ ಚಾನೆಲ್ ತೆರೆದ ಆಸೀಸ್ ಆಟಗಾರ ಡೇವಿಡ್ ವಾರ್ನರ್ ಅವರನ್ನು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಕಾಲೆಳೆದಿದ್ದಾರೆ.

    ಡೇವಿಡ್ ವಾರ್ನರ್ ಅವರು ಸದ್ಯ ಯುಇಎಯಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿದ್ದಾರೆ. ತನ್ನ ನಾಯಕತ್ವದ ಸನ್‍ರೈಸಸ್ ಹೈದರಾಬಾದ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ನಿನ್ನೆ ನಡೆದ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಹೈದರಾಬಾದ್ ತಂಡ 69 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು.

    ಈ ನಡುವೆ ಇಂದು ಟ್ವೀಟ್ ಮಾಡಿರುವ ಡೇವಿಡ್ ವಾರ್ನರ್ ಅವರು, ಎಲ್ಲರಿಗೂ ನಮಸ್ಕಾರ, ನಾನು ಈಗ ತಾನೇ ನನ್ನ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಓಪನ್ ಮಾಡಿದ್ದೇನೆ. ಜೊತೆಗೆ ಹೊಸ ವಿಡಿಯೋವನ್ನು ಅದರಲ್ಲಿ ಹಾಕಿದ್ದೇನೆ. ನನ್ನ ಟ್ವಿಟ್ಟರಿನಲ್ಲಿ ಆ ಯೂಟ್ಯೂಬ್ ಚಾನೆಲಿನ ಲಿಂಕ್ ಇದ್ದು, ಎಲ್ಲರೂ ಹೋಗಿ ವಿಡಿಯೋ ನೋಡಿ. ಜೊತೆಗೆ ಫಾಲೋ ಮಾಡುವುದನ್ನು ಮರೆಯಬೇಡಿ ಎಂದು ಬರೆದುಕೊಂಡಿದ್ದರು.

    ಡೇವಿಡ್ ವಾರ್ನರ್ ಅವರ ಈ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಯುವರಾಜ್ ಸಿಂಗ್ ಅವರು, ಹೌದಾ. ಆದರೆ ಈ ಯೂಟ್ಯೂಬ್ ಚಾನೆಲ್ ಅಲ್ಲಿ ನಿಮ್ಮ ಡ್ಯಾನ್ಸ್ ವಿಡಿಯೋ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ. ಡೇವಿಡ್ ವಾರ್ನರ್ ಅವರು ತಮ್ಮ ಮಕ್ಕಳು ಮತ್ತು ಪತ್ನಿಯ ಜೊತೆ ಹಲವಾರು ಡ್ಯಾನ್ಸ್ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    ಕೊರೊನಾ ಲಾಕ್‍ಡೌನ್ ವೇಳೆ ಟಿಕ್‍ಟಾಕ್‍ನಲ್ಲಿ ಬಹಳ ಜನಪ್ರಿಯವಾಗಿದ್ದ ಡೇವಿಡ್ ವಾರ್ನರ್ ಕೆಲ ಹಿಂದಿ, ತಮಿಳು ಮತ್ತು ತೆಲುಗು ಚಿತ್ರದ ಟಿಕ್‍ಟಾಕ್ ವಿಡಿಯೋ ಮಾಡಿ ಭಾರತದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ತಮ್ಮ ಮಕ್ಕಳು ಮತ್ತು ಪತ್ನಿಯ ಜೊತೆ ಹಿಂದಿ ಹಾಡುಗಳಿಗೆ ಫನ್ನಿ ಡ್ಯಾನ್ಸ್ ಮಾಡಿ ತಮ್ಮ ಟಿಕ್‍ಟಾಕಿನಲ್ಲಿ ಹಾಕಿಕೊಂಡಿದ್ದರು. ತಮ್ಮ ಮಗಳ ಮನವಿಯ ಮೇರೆಗೆ ಟಿಕ್‍ಟಾಕ್‍ಗೆ ಬಂದಿದ್ದ ವಾರ್ನರ್ ಕೆಲ ದಿನಗಳ ನಂತರ ಟಿಕ್‍ಟಾಕ್‍ನಲ್ಲಿ ಸ್ಟಾರ್ ಆಗಿದ್ದರು.

  • ಶುರುವಾಗಲಿದೆ ಬಿಗ್‍ ಬಾಸ್ ಶಾಲಿನಿಯವರ ‘ಶಾಲಿವುಡ್’!

    ಶುರುವಾಗಲಿದೆ ಬಿಗ್‍ ಬಾಸ್ ಶಾಲಿನಿಯವರ ‘ಶಾಲಿವುಡ್’!

    ಕ್ರಿಯೇಟಿವ್ ಕಾರ್ಯಕ್ರಮಗಳ ರುಚಿಹತ್ತಿಸಲಿದೆ ಯೂಟ್ಯೂಬ್ ಚಾನೆಲ್!

    ಪಾಪ ಪಾಂಡು ಧಾರಾವಾಹಿಯ ಪಾಚು ಶ್ರೀಮತಿಯಾಗಿ, ಬಿಗ್ ಬಾಸ್ ಶೋನ ಸ್ಪರ್ಧಿಯಾಗಿ ಮತ್ತು ಇತ್ತೀಚಿನ ದಿನಗಳಲ್ಲಿ ಥರಥರದ ಪಾತ್ರಗಳ ಮೂಲಕ ಹಿರಿತೆರೆಯಲ್ಲಿಯೂ ಸಕ್ರೀಯರಾಗಿರುವವರು ಶಾಲಿನಿ. ತಮ್ಮದೇ ಶೈಲಿಯ ನಿರೂಪಣೆಯ ಮೂಲಕ ಕಿರುತೆರೆ ಕಾರ್ಯಕ್ರಮಗಳ ಮೂಲಕವೂ ಛಾಪು ಮೂಡಿಸಿರುವ ಶಾಲಿನಿ ಇದೀಗ ಕಿರುತೆರೆ ಮತ್ತು ಹಿರಿತೆರೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಈ ಒತ್ತಡದ ನಡುವೆಯೂ ವರ್ಷಾಂತರದ ಕನಸೊಂದನ್ನು ಅವರು ನನಸಾಗಿಸಿಕೊಳ್ಳುವ ಖುಷಿಯಲ್ಲಿದ್ದಾರೆ. ಅಂದಹಾಗೆ ಶಾಲಿನಿ ‘ಶಾಲಿವುಡ್’ ಎಂಬ ಯೂಟ್ಯೂಬ್ ಚಾನೆಲ್ ಶುರುಮಾಡಲು ಅಂತಿಮ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.

    ಈ ಹೊಸ ಯೂಟ್ಯೂಬ್ ಚಾನೆಲ್‍ಗೆ ಶಾಲಿನಿ ಅವರು ನಾಮಕರಣ ಮಾಡಿರುವ ರೀತಿಯೇ ಎಲ್ಲರಿಗೂ ಹಿಡಿಸುವಂತಿದೆ. ಶಾಲಿವುಡ್ ಎಂಬ ಹೆಸರೇ ಗೆಲುವು ಮತ್ತು ಕ್ರಿಯೇಟಿವಿಟಿಯ ಸೂಚನೆಗಳನ್ನು ಹೊಮ್ಮಿಸುತ್ತಿದೆ. ಹಾಗಾದರೆ ಈ ಯೂ ಟ್ಯೂಬ್ ಚಾನೆಲ್‍ನ ರೂಪುರೇಷೆಗಳೇನು? ಅದರಲ್ಲಿ ಯಾವ್ಯಾವ ಕಾರ್ಯಕ್ರಮಗಳು ಮೂಡಿ ಬರಲಿವೆ? ಅದಕ್ಕಾಗಿ ಹೇಗೆಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ ಅನ್ನೋದರ ಬಗ್ಗೆ ಶಾಲಿನಿ ಇಂಚಿಂಚು ವಿವರಗಳನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ. ಈ ಮೂಲಕ ಬಹು ಕಾಲದಿಂದ ಉಸಿರಾಗಿಸಿಕೊಂಡಿದ್ದ ಕನಸಿನ ಪದರುಗಳನ್ನು ತೆರೆದಿಟ್ಟಿದ್ದಾರೆ.

    ಶಾಲಿವುಡ್ ಅನ್ನು ಯಾರಿಗೇ ಆದರೂ ಫೆಶ್ ಅನ್ನಿಸುವಂಥಾ ವೆರೈಟಿ ವೆರೈಟಿ ಕಾರ್ಯಕ್ರಮಗಳಿಂದ ಸಿಂಗಾರ ಮಾಡಲು, ಈ ಮೂಲಕ ಪ್ರೇಕ್ಷಕರಿಗೆ ಹೊಸತನದ ಕಾರ್ಯಕ್ರಮಗಳನ್ನು ಉಣಬಡಿಸಲು ಶಾಲಿನಿ ಸನ್ನದ್ಧರಾಗಿದ್ದಾರೆ. ಶಾಲಿನಿ ಯಾವುದೇ ಕಾರ್ಯಕ್ರಮ ನಡೆಸಿಕೊಟ್ಟರೂ ಅಲ್ಲೊಂದು ಲವ ಲವಿಕೆ ಇರುತ್ತದೆ. ಯುವ ಸಮುದಾಯದಿಂದ ಮೊದಲ್ಗೊಂಡು ಎಲ್ಲ ವಯೋಮಾನದವರನ್ನೂ ಮಾತಿನ ಶೈಲಿಯಿಂದಲೇ ಮರುಳಾಗಿಸೋ ಕಲೆಯೂ ಅವರಿಗೆ ಸಿದ್ಧಿಸಿದೆ. ಪ್ರೇಕ್ಷಕರಲ್ಲಿ ತಮ್ಮ ಮೇಲಿರುವ ನಂಬಿಕೆಯನ್ನು ಮತ್ತಷ್ಟು ಹೊಳಪುಗಟ್ಟಿಸುವಂತೆ ಶಾಲಿನಿ ಶಾಲಿವುಡ್‍ನ ಕಾರ್ಯಕ್ರಮಗಳಿಗೆ ರೂಪುರೇಷೆ ಹಾಕಿಕೊಂಡಿದ್ದಾರೆ.

    ಮೊದಲಿಗೆ ಶಾಲಿನಿ ತಮ್ಮ ಚಾನೆಲ್‍ನಲ್ಲಿ ಪುಟ್‍ಪುಟ್ಟ ಮುದ್ದು ಮಕ್ಕಳ ಕಲರವದ ಮೂಲಕವೇ ಕಳೆತುಂಬುವ ನಿರ್ಧಾರ ಮಾಡಿದ್ದಾರೆ. ಕಿರಿಕ್ ಪಾರ್ಟಿ ಹೆಸರಿನ ಈ ಶೋನಲ್ಲಿ ಪುಟ್ಟ ಮಕ್ಕಳ ತೊದಲು ಮಾತುಗಳಲ್ಲಿಯೇ ಪ್ರತಿ ಪ್ರೇಕ್ಷಕರ ಮನಗೆಲ್ಲುವ ಇರಾದೆಯೊಂದಿಗೆ ಚೆಂದದ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಈ ಕಾರ್ಯಕ್ರಮವನ್ನೂ ಕೂಡಾ ಚಿತ್ರೀಕರಿಸಿಕೊಳ್ಳಲಾಗಿದೆ. ಯಾವ ಕಿಸುರೂ ಇಲ್ಲದ ತಾಜಾತಾಜ ಮನಸ್ಸುಗಳ ಮನೋಲೋಕಕ್ಕೆ ಲಗ್ಗೆಯಿಡುವ ಈ ಕಾರ್ಯಕ್ರಮದ ಪ್ರೋಮೋ ಕೂಡಾಈಗಾಗಲೇ ಬಿಡುಗಡೆಗೊಂಡಿದೆ. ಇನ್ನುಳಿದಂತೆ ಸೌಂದರ್ಯ ಸಂಬಂಧಿ ಕಾರ್ಯಕ್ರಮಗಳಿಂದ ಹಿಡಿದು ಎಲ್ಲ ಥರದ ಪ್ರೋಗ್ರಾಮುಗಳಿಗೂ ಶಾಲಿನಿ ತಯಾರಾಗಿದ್ದಾರೆ.

    ಇಲ್ಲಿ ಎಲ್ಲ ಇದೆ ಎಂದ ಮೇಲೆ ಸಿನಿಮಾದ ಹಾಜರಿ ಇಲ್ಲದಿರಲು ಸಾಧ್ಯವೇ? ಹೇಳಿಕೇಳಿ ಸಿನಿಮಾ ಎಂಬುದು ಶಾಲಿನಿಯವರ ಪ್ರಧಾನ ಆಸಕ್ತಿ. ಈ ಬಗೆಗಿನ ಅಪರೂಪದ ಕಾರ್ಯಕ್ರಮಗಳನ್ನು ರೂಪಿಸಲು ಅವರು ತಯಾರಾಗುತ್ತಿದ್ದಾರೆ. ಈ ತಲೆಮಾರಿನ ನಟ ನಟಿಯರು ನಿರ್ದೇಶಕರುಗಳನ್ನು ಮಾತ್ರವಲ್ಲದೇ ಹಳಬರನ್ನೂ ಮುಖಾಮುಖಿಯಾಗೋ ಇರಾದೆ ಶಾಲಿನಿಯವರದ್ದಾಗಿದೆ. ತುಂಬಾನೇ ಹೊಸತೆನ್ನಿಸುವಂಥಾ, ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳೇ ಥ್ರಿಲ್ಲ ಆಗುವಂತೆ ಶಾಲಿವುಡ್‍ನ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಿರಬೇಕೆಂಬುದು ಶಾಲಿನಿ ಅವರ ಬಯಕೆ. ಶಾಲಿವುಡ್ ಎಂಬ ಹೆಸರಿನಷ್ಟೇ ಆಕರ್ಷಕವಾದ ಕಾರ್ಯಕ್ರಮಗಳನ್ನು ಅವರೀಗಾಗಲೇ ಪಟ್ಟಿ ಮಾಡಿಕೊಂಡಿದ್ದಾರೆ.

    ಅಷ್ಟಕ್ಕೂ ಬಿಗ್‍ಬಾಸ್ ಶೋ ಮುಗಿಸಿಕೊಂಡ ಕ್ಷಣದಲ್ಲಿಯೇ ಶಾಲಿನಿ ಈ ಯೂಟ್ಯೂಬ್ ಚಾನೆಲ್ ಶುರು ಮಾಡುವ ನಿರ್ಧಾರಕ್ಕೆ ಬಂದಿದ್ದರಂತೆ. ಈಗ್ಗೆ ಒಂದೂವರೆ ವರ್ಷದ ಹಿಂದೆಯೇ ಅದಕ್ಕೆ ಶಾಲಿವುಡ್ ಎಂಬ ಟೈಟಲ್ ಅನ್ನೂ ನಿಕ್ಕಿ ಮಾಡಿಕೊಳ್ಳಾಗಿತ್ತು. ಕೇಸರಿ ವರ್ಣದ ಹನುಮಾನ್ ಚಿತ್ರದ ಮೂಲಕ ಭಾರೀ ಪ್ರಸಿದ್ಧಿ ಪಡೆದುಕೊಂಡಿರುವ ಕರಣ್ ಆಚಾರ್ಯ ಶಾಲಿವುಡ್ ಲೋಗೋವನ್ನೂ ರೂಪಿಸಿ ಕೊಟ್ಟಿದ್ದರಂತೆ. ಆದರೆ ಬೇರೆ ಬೇರೆ ಕಾರ್ಯಕ್ರಮ, ನಟನೆಯಲ್ಲಿ ಬ್ಯುಸಿಯಾದ ಪರಿಣಾಮವಾಗಿ ಶಾಲಿವುಡ್ ಕನಸು ಮುಂದೂಡಲ್ಪಡುತ್ತಿರೋದರ ಬಗ್ಗೆ ಶಾಲಿನಿಯವರಿಗೇ ಬೇಸರವಿತ್ತು.

    ಈ ವರ್ಷದ ಆರಂಭವನ್ನವರು ಶಾಲಿವುಡ್ ಎಂಬ ಕನಸಿನೊಂದಿಗೇ ಎದುರುಗೊಂಡಿದ್ದಾರೆ. ಆನವರಿ ಇಪ್ಪತ್ತರಂದು ಅವರ ಪತಿಯ ಹುಟ್ಟುಹಬ್ಬದಂದೇ ಶಾಲಿವುಡ್ ಯೂಟ್ಯೂಬ್ ಚಾನೆಲ್ ಅನ್ನು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಆ ನಂತರ ಮತ್ಯಾವುದರತ್ತಲೂ ಗಮನ ಹರಿಸದೇ ಈ ಚಾನೆಲ್ ಅನ್ನು ರೂಪಿಸುವತ್ತಲೇ ತಮ್ಮ ಸಮಯವನ್ನೆಲ್ಲ ಶಾಲಿನಿ ಮುಡಿಪಾಗಿಟ್ಟಿದ್ದಾರೆ. ಇದೀಗ ಈ ಚಾನೆಲ್‍ನ ಎಲ್ಲ ಕೆಲಸ ಕಾರ್ಯಗಳೂ ಅಂತಿಮ ಘಟ್ಟ ತಲುಪಿಕೊಳ್ಳುತ್ತಿವೆ. ಇದೇ ತಿಂಗಳ ಹದಿನಾಲಕ್ಕನೇ ತಾರೀಕು ಪ್ರೇಮಿಗಳ ದಿನದಂದು ಅಥವಾ ಅದರ ಆಸು ಪಾಸಲ್ಲಿಯೇ ಶಾಲಿವುಡ್‍ಗೆ ಚಾಲನೆ ನೀಡಲು ಶಾಲಿನಿ ನಿರ್ಧರಿಸಿದ್ದಾರೆ. ಇದು ಕನ್ನಡ ಪ್ರೇಕ್ಷಕರಿಗೆ ಖಂಡಿತಾ ಶುಭ ಸುದ್ದಿ.