Tag: youtube

  • ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ

    ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ

    ಕಠ್ಮಂಡು: ನೇಪಾಳದಲ್ಲಿ (Nepal) ಫೇಸ್ಬುಕ್‌, ಎಕ್ಸ್‌, ಯೂಟ್ಯೂಬ್‌ ಸೇರಿದಂತೆ 26 ಸೋಷಿಯಲ್‌ ಮೀಡಿಯಾಗಳಿಗೆ ನಿಷೇಧ ವಿಧಿಸಲಾಗಿದೆ.

    ನೇಪಾಳದಲ್ಲಿ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸರ್ಕಾರ ನಿರ್ಧಾರ ಕೈಗೊಂಡಿದೆ.

    ಸ್ಥಳೀಯ ಮಟ್ಟದಲ್ಲಿ ನೋಂದಣಿಯಾಗಿರಲಿಲ್ಲ. ಜಾಹೀರಾತುಗಳ ಮೇಲೆ ಸರ್ಕಾರದ ನಿಯಂತ್ರಣ ಇರಲಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಸ್ಥಳೀಯ ನೋಂದಣಿವರೆಗೂ ಬಳಕೆಗೆ ತಡೆ ಹಾಕುವಂತೆ ಕೋರ್ಟ್‌ ಸೂಚಿಸಿತ್ತು.

    ಇದರ ಬೆನ್ನಲ್ಲೇ ಸರ್ಕಾರದಿಂದ ದೂರಸಂಪರ್ಕ ಪ್ರಾಧಿಕಾರಕ್ಕೆ ಪತ್ರ ರವಾನೆಯಾಗಿದೆ. ಈ ಪ್ಲಾಟ್‌ಫಾರ್ಮ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಸರ್ಕಾರ ನಿರ್ದೇಶಿಸಿದೆ.

  • ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ – ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ

    ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ – ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ

    – `ದೂತ’ ಯೂಟ್ಯೂಬ್ ಬ್ಯಾನ್‌ಗೆ ಆಗ್ರಹ

    ಮಂಗಳೂರು: ಶ್ರೀಕ್ಷೇತ್ರದ ಧರ್ಮಸ್ಥಳದಲ್ಲಿ (Dharmasthala) ಶಿವ ತಾಂಡವ ಶುರುವಾಗಿದೆ. ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದವರ ಕಂತೆ ಕಂತೆ ಸುಳ್ಳುಗಳು ಒಂದೊಂದೇ ಹೊರಬರುತ್ತಿದೆ. ಅಪಪ್ರಚಾರ ಮಾಡಿದವರು ಒಬ್ಬೊಬ್ಬರೇ ಕಂಬಿ ಹಿಂದೆ ಸೇರುತ್ತಿದ್ದಾರೆ. ಧರ್ಮಸ್ಥಳದ ಬಗ್ಗೆ ಎಪಿಸೋಡ್‌ಗಳ ಮೇಲೆ ಎಪಿಸೋಡ್ ಮಾಡಿಕೊಂಡು ನಾನೇ ಸತ್ಯವಂತ ಅಂತಿದ್ದ ಸಮೀರ್‌ಗೆ (Sameer MD) ಭಾನುವಾರ ಧರ್ಮಸ್ಥಳದ ಪೊಲೀಸರು ಡ್ರಿಲ್ ಮಾಡಿದ್ದು, ಇಂದು ವಿಚಾರಣೆಗೆ ಕರೆದಿದ್ದಾರೆ. ಇತ್ತ ಈ ದೂತನ ವಿರುದ್ಧ ಐಟಿಗೆ (IT) ದೂರು ನೀಡಲು ಹಿಂದೂ ಪರ ಹೋರಾಟಗಾರರು ಸಜ್ಜಾಗಿದ್ದಾರೆ.

    ಧರ್ಮಸ್ಥಳದ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದವರ ಕಂತೆ ಕಂತೆ ಸುಳ್ಳುಗಳು ಒಂದೊಂದೇ ಹೊರಬರುತ್ತಿದೆ. ಈ ಕಟ್ಟು ಕತೆಗಳಲ್ಲಿ ದೂತ ಸಮೀರ್‌ನ ಪಾತ್ರ ಬಹಳ ದೊಡ್ಡದು. ಸಮೀರ್ ಮಾಡಿದ ವಿಡಿಯೋ, ಅವನ ಐಎ ತಂತ್ರಜ್ಞಾನದ ಬಳಕೆಯಿಂದ ಜನ ಅರೇ ಹೀಗೆಲ್ಲಾ ಆಗಿದ್ಯಾ ಅನ್ನೋ ಮಟ್ಟಕ್ಕೆ ನಂಬಿಸೋ ಯತ್ನ ಆಗಿತ್ತು. ಇವನ ಮಾತುಗಾರಿಕೆ, ತಾನೇ ಕದ್ದು ನೋಡಿದ್ದೇನೆ ಅನ್ನೋ ರೀತಿಯ ವಿವರಣೆಗೆ ಜನ ಮಾರುಹೋಗಿದ್ರು. ಈಗ ಈತನ ಧಾರ್ಮಿಕ ಅಂಧತ್ವ ನಮ್ಮ ಧರ್ಮವನ್ನ ಹೊಡೆಯೋ ನೀಚತನ ಹೊರಬರುತ್ತಿದೆ. ಇದನ್ನೂ ಓದಿ: ಕಾಂತಾರ ಮಾತು ನಿಜ, . ಕೋರ್ಟ್ ಮೆಟ್ಟಿಲ ಮೇಲೆ ಅಣ್ಣಪ್ಪ ತೀರ್ಮಾನ: ಸೂಲಿಬೆಲೆ

    ಸಮೀರ್ ವಿರುದ್ಧ ಈಗಾಗಲೇ ಜುಲೈನಲ್ಲೇ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದ ಹಿಂದೂ ಪರ ಹೋರಾಟಗಾರ ತೇಜಸ್‌ಗೌಡ, ಇಂದು ಹಿಂದೂ ಮುಖಂಡರೊಂದಿಗೆ ಆದಾಯ ಇಲಾಖೆಗೆ ದೂರು ನೀಡಲು ಮುಂದಾಗುತ್ತಿದ್ದಾರೆ. ಹೌದು, ಸಮೀರ್ ಸೇರಿದಂತೆ ಧರ್ಮಸ್ಥಳದ ಹಿಂದೆ ಪಿತೂರಿ ಮಾಡಿದವರಿಗೆ ಬೇರೆ ಬೇರೆ ಕಡೆಯಿಂದ ಹಣ ಬಂದಿದೆ. ಇವನ ವೀಡಿಯೋಗೆ ಯಾರು ಫಂಡ್ ಮಾಡುತ್ತಾರೆ, ಇದರ ಹಿಂದೆ ದೊಡ್ಡ ದೊಡ್ಡವರು ಎಡಪಂಥೀಯರು, ನಿಷೇಧಿತ ಸಂಘಟನೆಗಳು ಇದೆ. ಸಮೀರ್‌ನ ಆರ್ಥಿಕ ವಹಿವಾಟನ್ನು ತನಿಖೆ ಮಾಡಬೇಕು ಅಂತಾ ಐಟಿಗೆ ದೂರು ನೀಡೋದಾಗಿ ತೇಜಸ್ ಗೌಡ ಹೇಳಿದ್ದಾರೆ. ಇದನ್ನೂ ಓದಿ: ಬಿಹಾರದ ‘ವೋಟ್ ಅಧಿಕಾರ ಯಾತ್ರೆ’ ದೇಶದ ಪಾಲಿನ ಗೇಮ್ ಚೇಂಜರ್: ಡಿ.ಕೆ.ಶಿವಕುಮಾರ್

    ಸಮೀರ್ ವಿರುದ್ಧ ರಾಷ್ಟ್ರೀಯ ತನಿಖಾ ತಂಡಗಳಿಂದ ತನಿಖೆಯಾಗಬೇಕು. ಆಗ ಇದರ ಮೂಲ ಯಾರು? ಇದಕ್ಕೆ ಕಾರಣಕರ್ತರು ಯಾರೆಲ್ಲ ಇದ್ದಾರೆ ಅನ್ನೋದು ಬಹಿರಂಗವಾಗಲಿದೆ. ಹಾಗೆಯೇ ಸರ್ಕಾರ ಕೂಡ ಈ ಸುಳ್ಳುಸುದ್ದಿ ಹರಿಡಿಸಿದವರ ಯೂಟ್ಯೂಬ್ ಚಾನಲ್ ಬ್ಯಾನ್ ಮಾಡಬೇಕು ಅಂತಾ ತೇಜಸ್ ಗೌಡ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ಆಟೋ EMI ಕಟ್ಟಲು ಸ್ನೇಹಿತೆಯನ್ನು ಕೊಂದು ಮಾಂಗಲ್ಯ ಸರ ಕದ್ದ ಖತರ್‌ನಾಕ್ ಚಾಲಕ

  • Video | ಅನನ್ಯಾ ಭಟ್‌ ಹೆಸ್ರನ್ನೇ ಬಂಡವಾಳ ಮಾಡ್ಕೊಂಡು ಕಥೆ ಕಟ್ಟಿದ್ನಾ ಸಮೀರ್‌?

    Video | ಅನನ್ಯಾ ಭಟ್‌ ಹೆಸ್ರನ್ನೇ ಬಂಡವಾಳ ಮಾಡ್ಕೊಂಡು ಕಥೆ ಕಟ್ಟಿದ್ನಾ ಸಮೀರ್‌?

    ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ (Dharmasthala Village) ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಅಂತ ದೂರು ಕೊಟ್ಟು ಗೊಂದಲ ಸೃಷ್ಟಿಸಿರುವ ತಾಯಿ ಸುಜಾತ ಭಟ್‌ಗೆ ಎಸ್‌ಐಟಿ ನೋಟಿಸ್‌ ಕೊಟ್ಟಿದ್ದು, ವಿಚಾರಣೆ ಹಾಜರಾಗುವಂತೆ ಸೂಚಿಸಿದೆ. ಈ ನಡುವೆಯೇ ಯೂಟ್ಯೂಬರ್‌ ಎಂ.ಡಿ ಸಮೀರ್‌ (Sameer MD) ವೀವ್ಸ್‌, ಲೈಕ್ಸ್‌ಗಾಗಿಯೇ ಕಟ್ಟು ಕಥೆಗಳನ್ನ ಕಟ್ಟಿದ್ರಾ ಅನ್ನೋ ಪ್ರಶ್ನೆ ಕೂಡ ಮುನ್ನೆಲೆಗೆ ಬಂದಿದೆ. ಇದಕ್ಕೆ ಅಮೀರ್‌ ವಿಡಿಯೋಗಳೇ ಸಾಕ್ಷಿಯಾಗಿದೆ. ಈ ಕುರಿತ ಕಂಪ್ಲೀಟ್‌ ಡಿಟೇಲ್ಸ್‌ ವಿಡಿಯೋನಲ್ಲಿದೆ…

  • ಬಳ್ಳಾರಿಯ ಸಮೀರ್ ನಿವಾಸಕ್ಕೆ ಪೊಲೀಸ್ ನೋಟಿಸ್‌ – ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ

    ಬಳ್ಳಾರಿಯ ಸಮೀರ್ ನಿವಾಸಕ್ಕೆ ಪೊಲೀಸ್ ನೋಟಿಸ್‌ – ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ

    ಬಳ್ಳಾರಿ/ಮಂಗಳೂರು: ಧರ್ಮಸ್ಥಳ ಠಾಣೆಯಲ್ಲಿ (Dharmasthala Police Station) ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಯೂಟ್ಯೂಬರ್‌ ಸಮೀರ್‌ (Sameer MD) ಅವರ ಬಳ್ಳಾರಿ ನಿವಾಸಕ್ಕೆ ಧರ್ಮಸ್ಥಳದ ಪೊಲೀಸರು ನೋಟಿಸ್‌ ನೀಡಿದ್ದಾರೆ.

    ಮನೆಗೆ ಬೀಗ ಜಡಿದಿದ್ದ ಹಿನ್ನೆಲೆ ಬಂಡಿಹಟ್ಟಿ ಏರಿಯಾದಲ್ಲಿರುವ ಅವರ ಮನೆ ಗೋಡೆಗೆ ನೋಟಿಸ್‌ ಅಂಟಿಸಿದ್ದು, ನಾಳೆ (ಆ.24) ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ನಿನ್ನೆ ಸಂಜೆಯೇ ಧರ್ಮಸ್ಥಳ ಠಾಣೆ ಪೊಲೀಸರು ಮನೆಗೆ ನೋಟಿಸ್‌ ಅಂಟಿಸಿ ಹೋಗಿದ್ದಾರೆ. ಇದು ಈ ಪ್ರಕರಣದಲ್ಲಿ ಸಮೀರ್‌ಗೆ ಮೂರನೇ ನೋಟಿಸ್‌ ಆಗಿದೆ. ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್‌

    ಬೆಳ್ತಂಗಡಿ ಠಾಣೆಗೆ ಹಾಜರಾಗುವಂತೆ ಸೂಚನೆ
    ಇನ್ನೂ ಧರ್ಮಸ್ಥಳಕ್ಕೆ ಹೋಗಲು ತನಗೆ ಜೀವ ಭಯವಿದೆ ಎಂದಿದ್ದ ಸಮೀರ್‌ ಸುರಕ್ಷತೆ ದೃಷ್ಟಿಯಿಂದ ಧರ್ಮಸ್ಥಳ ಠಾಣೆಗೆ ನಾನು ಬರಲಾರೆ ಎಂದಿದ್ದ. ಈ ಹಿನ್ನೆಲೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಹಾಜರಾಗಿ ವಿಚಾರಣೆ ಎದುರಿಸುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನನಗೆ ಅನನ್ಯಾ ಭಟ್‌ ಅನ್ನೋ ಮಗಳೇ ಇರಲಿಲ್ಲ – ಉಲ್ಟಾ ಹೊಡೆದ ಸುಜಾತ ಭಟ್‌

    ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇತ್ತೀಚೆಗಷ್ಟೇ ಬನ್ನೇರುಘಟ್ಟದಲ್ಲಿರುವ ಮನೆಯಲ್ಲೇ ಸಮೀರ್‌ನನ್ನ ವಶಕ್ಕೆ ಪಡೆಯಲು ತೆರಳಿದ್ದರು. ಬಳಿಕ ನಿರೀಕ್ಷಣಾ ಜಾಮೀನು ಪಡೆದಿದ್ದರು. ಇದನ್ನೂ ಓದಿ: Dharmasthala Case | ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್‌ಗೆ SIT ನೋಟಿಸ್

  • ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್‌

    ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್‌

    ಬೆಂಗಳೂರು: ಭದ್ರತೆ ದೃಷ್ಟಿಯಿಂದ ಧರ್ಮಸ್ಥಳಕ್ಕೆ (Dharmasthala) ಹೋಗಲು ಭಯ ಇದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಧರ್ಮಸ್ಥಳ ಠಾಣೆಗೆ ನಾನು ಬರಲಾರೆ ಎಂದು ಯೂಟ್ಯೂಬರ್‌ ಸಮೀರ್‌ (Youtuber Sameer) ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

    ಈ ಹಿಂದೆ ಪೊಲೀಸರು ಕೊಟ್ಟಿದ್ದ ನೊಟೀಸ್‌ಗೆ ಉತ್ತರಿಸಿದ್ದ ಸಮೀರ್, ಭದ್ರತೆ ದೃಷ್ಟಿಯಿಂದ ವಿಚಾರಣೆಗೆ ಹಾಜರಾಗಲು ಇದೇ 13 ರಂದು ಪತ್ರದ ಮೂಲಕ ಪೊಲೀಸರ ಬಳಿ ಕಾಲಾವಕಾಶ ಕೇಳಿದ್ದರು.  ಇದನ್ನೂ ಓದಿ: ಎಎಸ್ಪಿ ಕಾರಿಗೆ ಡಿಕ್ಕಿ ತಿಮರೋಡಿಯ ಮೂವರು ಬೆಂಬಲಿಗರು ಅರೆಸ್ಟ್

     

    ಸಮೀರ್ ಮನವಿಯಲ್ಲಿ ಏನಿತ್ತು?
    ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆಯಾಗಿದೆ. ನನಗೆ ಈಗಾಗಲೇ ಬೆದರಿಕೆ ಇರುವ ಕಾರಣ ಧರ್ಮಸ್ಥಳಕ್ಕೆ ವಿಚಾರಣೆಗೆ ಬರಬೇಕಾದರೆ ಹೆಚ್ಚಿನ ಭದ್ರತೆ ನೀಡಿ. ಇಲ್ಲವೇ ಪರ್ಯಾಯ ಜಾಗದ ವ್ಯವಸ್ಥೆ ಮಾಡಿ.

    ನನ್ನ ಯೂಟ್ಯೂಬ್ ಕಂಟೆಂಟ್ ಮೇಲೆ ದೂರು ಕೊಟ್ಟಿದ್ದಾರೆ. ಹಾಗಾಗಿ ನಾನು ನೇರವಾಗಿ ಠಾಣೆಗೆ ಬರಲು ಸಾಧ್ಯವಿಲ್ಲ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗಿಯಾಗಲು ಅವಕಾಶ ಕೊಡಿ ಎಂದು ಕೇಳಿದ್ದರು. ಆದರೆ ಸಮೀರ್‌ ಪತ್ರಕ್ಕೆ ಕೇರ್ ಮಾಡದ ಧರ್ಮಸ್ಥಳ ಪೊಲೀಸರು ಇಂದು ಬಂಧನ ಮಾಡಲು ಬೆಂಗಳೂರಿಗೆ ತೆರಳಿದ್ದರು. ಇದನ್ನೂ ಓದಿ:  ಮಹೇಶ್‌ ಶೆಟ್ಟಿ ತಿಮರೋಡಿ ಜೈಲಿಗೆ 14 ದಿನ ನ್ಯಾಯಾಂಗ ಬಂಧನ

     

    ಜಾಮೀನು ಮಂಜೂರು:
    ಧರ್ಮಸ್ಥಳ ದೇಗುಲ ವಿರುದ್ಧ ಅಪಪ್ರಚಾರ ಆರೋಪದಲ್ಲಿ `ದೂತ’ ಯೂಟ್ಯೂಬ್‌ ವಾಹಿನಿಯ ಸಮೀರ್‌ಗೆ ನಿರೀಕ್ಷಣಾ ಜಾಮೀನು (Bail) ಮಂಜೂರಾಗಿದೆ. ಧರ್ಮಸ್ಥಳದಲ್ಲಿ ಅಪಪ್ರಚಾರದ ಆರೋಪ ಎದುರಿಸುತ್ತಿರೋ ಸಮೀರ್, ತಮ್ಮ ವಿಡಿಯೋದಲ್ಲಿ ದಂಗೆ ಏಳುವಂತೆ ಜನರಿಗೆ ಪ್ರಚೋದಿಸಿದ್ದರು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದೊಂಬಿ, ಪ್ರಚೋದನೆ ಸೇರಿದಂತೆ ಹಲವರು ಕೇಸ್‌ಗಳು ದಾಖಲಾಗಿತ್ತು.

    ಸಿಡಿಆರ್ ಹಾಗೂ ಮೊಬೈಲ್ ನೆಟ್ವರ್ಕ್ ಆಧರಿಸಿ ಸಮೀರ್ ಬಂಧನಕ್ಕಾಗಿ ಬನ್ನೇರುಘಟ್ಟ ಸಮೀಪದ ಹುಲ್ಲಳ್ಳಿಯ ನಿವಾಸಕ್ಕೆ ಧರ್ಮಸ್ಥಳ ಪೊಲೀಸರು ಬಂದಿದ್ದರು. ಆದರೆ ನಿವಾಸದಲ್ಲಿ ಸಮೀರ್‌ ಇಲ್ಲದ ಕಾರಣ 48 ಗಂಟೆಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟು ವಾಪಸ್ಸಾಗಿದ್ದಾರೆ.

    ಬಂಧನ ಭೀತಿಯಲ್ಲಿದ್ದ ಸಮೀರ್ ವಕೀಲರ ಮೂಲಕ ಮಂಗಳೂರು (Mangaluru) ಜಿಲ್ಲಾ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್  ಜಾಮೀನು ಮಂಜೂರು ಮಾಡಿದೆ.

    ಧರ್ಮಸ್ಥಳದ ಬಗ್ಗೆ ಮೊದಲ ವಿಡಿಯೋ ಮಾಡಿದ್ದಾಗ ಕೌಲಬಜಾರ್ ಠಾಣೆಯಲ್ಲಿ ಮೊದಲ ಕೇಸ್ ಆಗಿತ್ತು. ಬಳ್ಳಾರಿಯಲ್ಲಿ ಪೊಲೀಸರು ಹುಡುಕಾಡಿದ್ದಾಗ ಬಳ್ಳಾರಿಯಲ್ಲಿ ವಾಸ ಬಗ್ಗೆ ಮಾಹಿತಿ ದೊರೆತಿರಲಿಲ್ಲ.

  • `ಕಾಮದ ಬಣ್ಣ ಕೆಂಪು’ ಎಂದ ಯೋಗರಾಜ್ ಭಟ್

    `ಕಾಮದ ಬಣ್ಣ ಕೆಂಪು’ ಎಂದ ಯೋಗರಾಜ್ ಭಟ್

    ಪಂಚರಂಗಿ ಯೂಟ್ಯೂಬ್ ಚಾನಲಿನ ಮತ್ತೆ ಮೊದಲಿಂದ ಗೀತ ಗುಚ್ಛದ 3ನೇ ಹಾಡು ‘ಉನ್ಮಾದ ಉಕ್ಕಿದಾಗ…’ (ಕಾಮದ ಬಣ್ಣ ಕೆಂಪು) ಈ ಗೀತೆಯನ್ನು ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ಬಿಡುಗಡೆ ಮಾಡಿ ಗಝಲ್ ಶೈಲಿಯ ಈ ಹಾಡನ್ನು ಮೆಚ್ಚಿಕೊಂಡರು.

    ಯೋಗರಾಜ್ ಭಟ್ (Yogaraj Bhat) ಅವರ ಸಾಹಿತ್ಯವಿರುವ ಈ ಹಾಡಿಗೆ ಚೇತನ್ – ಡ್ಯಾವಿ ಜೋಡಿ ಸಂಗೀತ ನೀಡಿದ್ದಾರೆ. ಈ ಗೀತೆ ಹೆಣ್ಣು ಹಾಗೂ ಗಂಡು ದನಿಯ ಎರಡೂ ಆವೃತ್ತಿಯಲ್ಲಿ ಮೂಡಿಬಂದಿರುವುದು ವಿಶೇಷ ಗಂಡು ಆವೃತ್ತಿಗೆ ಖ್ಯಾತ ಗಾಯಕ ಹೇಮಂತ್ ಕುಮಾರ್ ದನಿಯಾದರೆ ಹೆಣ್ಣು ದನಿ ಬಾಗಲಕೋಟೆ ಮೂಲದ ನೂತನ ಪ್ರತಿಭೆ ಅದಿತಿ ಖಂಡೇಗಲ ಅವರದ್ದಾಗಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿಯ ಸೀರಿಯಲ್ ಫಸ್ಟ್ ಲುಕ್ ಔಟ್

    “ಮತ್ತೆ ಮೊದಲಿಂದ” ಆಲ್ಬಂ ನಲ್ಲಿ ಇದು ಮೂರನೇ ಗೀತೆಯಾಗಿದ್ದು ಇದಕ್ಕೂ ಮೊದಲು ನಿನ್ನ ಕಣ್ಣು ನೀಲಿ… (ಮೋಹದ ಬಣ್ಣ ನೀಲಿ) ಹಾಗು ಪ್ರಿಯ ಸಖಿ… (ಪ್ರೇಮದ ಬಣ್ಣ ಬಿಳುಪು) ಎಂಬ ಎರಡು ಗೀತೆಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದ್ದ ಯೋಗರಾಜ್ ಭಟ್ ರವರು ವಿ. ಹರಿಕೃಷ್ಣ ರವರ ಸಂಗೀತ ಇರುವ ಮತ್ತೆ ಮೊದಲಿಂದ ಆಲ್ಬಂ ನ ನಾಲ್ಕನೇ ಗೀತೆ ‘ನೀ ಹೋದ ಮೇಲೆ… (ನೆನಪಿನ ಬಣ್ಣ ಹಸಿರು) ಗೀತೆಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದರು. ಇದನ್ನೂ ಓದಿ: Exclusive: ಕಿಚ್ಚನ 47ನೇ ಚಿತ್ರಕ್ಕೆ ನಾಯಕಿಬ್ಯೂಟಿ

    ರೇಣುಕಾ ಯೋಗರಾಜ್ ಭಟ್, ಶ್ರೀನಿಧಿ ದರ್ಬೆ, ಶಿಲ್ಪ ಪ್ರಸನ್ನ ಅವರು ನಿರ್ಮಾಣ ಮಾಡಿದ್ದಾರೆ.

  • ಪೋಷಕರ ಲೈಂಗಿಕ ಕ್ರಿಯೆ ವೀಕ್ಷಿಸುತ್ತೀರಾ? – ಯೂಟ್ಯೂಬರ್‌ ರಣವೀರ್ ಅಲ್ಲಾಬಾದಿಯಾ ಕೀಳು ಹೇಳಿಕೆ, ನೆಟ್ಟಿಗರಿಂದ ಭಾರೀ ಆಕ್ರೋಶ

    ಪೋಷಕರ ಲೈಂಗಿಕ ಕ್ರಿಯೆ ವೀಕ್ಷಿಸುತ್ತೀರಾ? – ಯೂಟ್ಯೂಬರ್‌ ರಣವೀರ್ ಅಲ್ಲಾಬಾದಿಯಾ ಕೀಳು ಹೇಳಿಕೆ, ನೆಟ್ಟಿಗರಿಂದ ಭಾರೀ ಆಕ್ರೋಶ

    ಮುಂಬೈ: ‘ಬೀರ್ ಬೈಸೆಪ್ಸ್’ ಎಂದೇ ಖ್ಯಾತಿ ಪಡೆದಿರುವ ಯೂಟ್ಯೂಬರ್‌ ರಣವೀರ್ ಅಲ್ಲಾಬಾದಿಯಾ (YouTuber Ranveer Allahbadia) ಮಾಡಿದ ಕೀಳು ಅಭಿರುಚಿಯ ಹಾಸ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲೇಟೆಂಟ್ (India’s Got Latent) ಕಾರ್ಯಕ್ರಮದಲ್ಲಿ ರಣವೀರ್  ತೀರ್ಪುಗಾರರಾಗಿ ಭಾಗವಹಿಸಿದ್ದರು. ಈ ವೇಳೆ ಸ್ಪರ್ಧಿಯೊಬ್ಬರಿಗೆ, ನಿಮ್ಮ ಪೋಷಕರು ಜೀವನದುದ್ದಕ್ಕೂ ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವುದನ್ನು ನೀವು ನೋಡುತ್ತೀರಾ ಅಥವಾ ಒಮ್ಮೆ ಅವರೊಂದಿಗೆ ಸೇರಿ ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀರಾ ಎಂದು ಪ್ರಶ್ನಿಸಿ ವಿವಾದ ಸೃಷ್ಟಿಸಿದ್ದಾರೆ.

    ಯೂಟ್ಯೂಬ್‌ನಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಅವರಿಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ರಾಷ್ಟ್ರೀಯ ಯುವ ಕಂಟೆಂಟ್ ಕ್ರಿಯೇಟರ್ ಪ್ರಶಸ್ತಿಗಳನ್ನು ಪಡೆದಿದ್ದರು.

    ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಮುಂಬೈನಲ್ಲಿ ಮಾಧ್ಯಮವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ನಾನು ರಣವೀರ್ ಅವರ ಹೇಳಿಕೆಯ ಬಗ್ಗೆ ತಿಳಿದುಕೊಂಡಿದ್ದೇನೆ. ವಿಡಿಯೋವನ್ನು ನಾನು ನೋಡಿಲ್ಲ. ಪ್ರತಿಯೊಬ್ಬರಿಗೆ ವಾಕ್‌ ಸ್ವಾತಂತ್ರ್ಯವಿದೆ. ನಮ್ಮ ಸಮಾಜದಲ್ಲಿ, ನಾವು ಕೆಲವು ನಿಯಮಗಳನ್ನು ಮಾಡಿದ್ದೇವೆ. ಯಾರಾದರೂ ಅವುಗಳನ್ನು ಉಲ್ಲಂಘಿಸಿದರೆ ಅದು ಸಂಪೂರ್ಣವಾಗಿ ತಪ್ಪು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

     

    ಕಾರ್ಯಕ್ರಮದಲ್ಲಿ ನಿಂದನಾತ್ಮಕ ಭಾಷೆಯನ್ನು ಬಳಸಿದ ಆರೋಪದ ಮೇಲೆ ಮುಂಬೈ ಆಯುಕ್ತರು ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

     

    ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಣವೀರ್ ಅಲ್ಲಾಬಾದಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್‌ ಮಾಡಿ ಕ್ಷಮೆ ಕೇಳಿದ್ದಾರೆ. ಆ ರೀತಿ ನಾನು ಹೇಳಬಾರದಿತ್ತು. ನನ್ನ ಹೇಳಿಕೆ ತಪ್ಪಾಗಿದೆ. ಆ ಭಾಗವನ್ನು ಡಿಲೀಟ್‌ ಮಾಡುವಂತೆ ಕೇಳಿಕೊಂಡಿದ್ದೇನೆ. ನಿಮ್ಮ ಭಾವನೆಗಳಿಗೆ ನೋವಾಗಿದೆ. ಇನ್ನು ಮುಂದೆ ಈ ರೀತಿಯ ತಪ್ಪು ನಡೆಯದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

     

  • ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿದ್ದ ಕೇರಳ ದಂಪತಿ ಮನೆಯಲ್ಲಿ ಶವವಾಗಿ ಪತ್ತೆ; ಕಾರಣ ನಿಗೂಢ

    ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿದ್ದ ಕೇರಳ ದಂಪತಿ ಮನೆಯಲ್ಲಿ ಶವವಾಗಿ ಪತ್ತೆ; ಕಾರಣ ನಿಗೂಢ

    ತಿರುವನಂತಪುರಂ: ಯೂಟ್ಯೂಬ್ (YouTube) ಚಾನಲ್‌ನಲ್ಲಿ ಸಕ್ರಿಯವಾಗಿದ್ದ ದಂಪತಿ ಭಾನುವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕೇರಳದ (Kerrala) ಪರಸ್ಸಾಲ (Parassala) ಪಟ್ಟಣದಲ್ಲಿ ನಡೆದಿದೆ.

    ಸೆಲ್ವರಾಜ್ (45), ಪ್ರಿಯಾ (40) ಶವವಾಗಿ ಪತ್ತೆಯಾದ ದಂಪತಿ. ಎರಡು ದಿನಗಳಿಂದ ಮನೆಯಿಂದ ಆಚೆ ಬಾರದ ಕಾರಣ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸೆಲ್ವರಾಜ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಿಯಾ ಮೃತದೇಹ ಹಾಸಿಗೆ ಮೇಲೆ ಪತ್ತೆಯಾಗಿದೆ ಎಂದು ಪರಸ್ಸಾಲ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ಗೆ ನಮ್ಮ ಶಕ್ತಿ ಏನೆಂದು ತೋರಿಸಬೇಕು: ಮತ್ತೆ ಯುದ್ಧದ ಎಚ್ಚರಿಕೆ ನೀಡಿದ ಇರಾನ್‌ ಸುಪ್ರೀಂ ಲೀಡರ್‌

    ಪ್ರಾಥಮಿಕ ತನಿಖೆಯ ಪ್ರಕಾರ, ಎರಡು ದಿನಗಳ ಹಿಂದೆ ಘಟನೆ ಸಂಭವಿಸಿರಬಹುದು ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿ ಆಧಾರದ ಮೇಲೆ ಹಳ್ಳಿಕಾರ್ ಸಮುದಾಯಕ್ಕೆ ನ್ಯಾಯ ಒದಗಿಸುತ್ತೇವೆ: ಸಿದ್ದರಾಮಯ್ಯ

    ಸೆಲ್ವರಾಜ್ ಹಾಗೂ ಪ್ರಿಯಾ ದಂಪತಿ ‘ಸೆಲ್ಲು ಫ್ಯಾಮಿಲಿ’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದರು. ಅವರ ಚಾನಲ್ ಸುಮಾರು 18,000 ಫಾಲೋವರ್ಸ್ ಅನ್ನು ಹೊಂದಿದ್ದು, 1,400ಕ್ಕೂ ಹೆಚ್ಚು ವೀಡಿಯೋಗಳನ್ನು ತಮ್ಮ ಚಾನಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೊನೆಯದಾಗಿ ಅ.25ರಂದು (ಶುಕ್ರವಾರ) ತಮ್ಮ ಫ್ಯಾಮಿಲಿ ಫೋಟೋಗಳನ್ನ ಎಡಿಟಿಂಗ್ ಮಾಡಿ 55 ಸೆಕೆಂಡುಗಳ ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಇದನ್ನೂ ಓದಿ: ರವೀಂದ್ರ ಸಂಗೀತದ ಬದಲಿಗೆ ಬಂಗಾಳದಲ್ಲಿ ಬಾಂಬ್ ಸದ್ದು ಕೇಳುತ್ತಿದೆ: ದೀದಿ ವಿರುದ್ಧ ಅಮಿತ್ ಶಾ ಕಿಡಿ

  • ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ – ಯೂಟ್ಯೂಬ್ ನೋಡಿ ಶೂಟಿಂಗ್ ಕಲಿತಿದ್ದ ಹಂತಕರು

    ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ – ಯೂಟ್ಯೂಬ್ ನೋಡಿ ಶೂಟಿಂಗ್ ಕಲಿತಿದ್ದ ಹಂತಕರು

    ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ, ಹಿರಿಯ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಅವರ ಹತ್ಯೆ ಪ್ರಕರಣ ತನಿಖೆ ಚುರುಕುಗೊಂಡಿದೆ. ಮುಂಬೈ ಕ್ರೈಂ ಬ್ರ‍್ಯಾಂಚ್ (Mumbai Crime Branch) ಪೊಲೀಸರ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿದ್ದು, ಬಂಧಿತ ಆರೋಪಿಗಳು ಯೂಟ್ಯೂಬ್ ನೋಡಿ ಹತ್ಯೆಗಾಗಿ ಶೂಟಿಂಗ್ ತರಬೇತಿ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾತನಾಡಿ, ಆರೋಪಿಗಳು ಮೂರು ತಿಂಗಳ ಹಿಂದೆಯೇ ಪುಣೆಯಲ್ಲಿ ಬಾಬಾ ಸಿದ್ದಿಕಿ ಹತ್ಯೆಗೆ ಯೋಜನೆ ರೂಪಿಸಿದ್ದರು. ಆದರೆ ಅದು ಯಶಸ್ವಿಯಾಗಿರಲಿಲ್ಲ. ಬಳಿಕ ಮುಂಬೈನಲ್ಲಿ ಹತ್ಯೆಗೆ ಪ್ಲ್ಯಾನ್‌ ಮಾಡಿ, ಕಳೆದ ಶನಿವಾರ ತಡರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆರೋಪಿಗಳಾದ ಗುರ್ಮೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಆರು ಸುತ್ತು ಗುಂಡು ಹಾರಿಸಿದ್ದರು ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಮಳೆ ಬಂದಾಗ ನೀರನ್ನು ವಾಪಸ್ ಆಕಾಶಕ್ಕೆ ಕಳಿಸೋಕಾಗಲ್ಲ – ಬಿಜೆಪಿ ಟೀಕೆಗೆ ಪರಮೇಶ್ವರ್ ತಿರುಗೇಟು

    ಹಂತಕರು ಯೂಟ್ಯೂಬ್‌ನಿಂದ ಶೂಟ್ ಮಾಡುವುದು ಹೇಗೆಂದು ಕಲಿತಿದ್ದರು. ಅಷ್ಟೇ ಅಲ್ಲದೇ ಈ ಕುರಿತು ಸ್ನ್ಯಾಪ್‌ಚಾಟ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಮಾತ್ರ ಪರಸ್ಪರ ಸಂವಹನ ನಡೆಸುತ್ತಿದ್ದರು. ಸದ್ಯ ಪೊಲೀಸರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಅಧಿಕಾರಿಗಳಿಂದ ಪೋಸ್ಟ್ ಕುರಿತು ಹೆಚ್ಚಿನ ಮಾಹಿತಿ ಕೇಳಿದ್ದಾರೆ.

    ಹಲವು ಸಾಕ್ಷಿಗಳನ್ನು ಒಳಗೊಂಡಿರುವ ಈ ಪ್ರಕರಣದಲ್ಲಿ ಮುಂಬೈ ಕ್ರೈಂ ಬ್ರ‍್ಯಾಂಚ್ ಇದುವರೆಗೆ 15ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಎನ್‌ಸಿಪಿ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಹರೀಶ್ ಕುಮಾರ್ ನಿಶಾದ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದು ನಾಲ್ಕನೇ ಬಂಧನವಾಗಿದೆ. ಆರೋಪಿಗಳಿಗೆ ಹರೀಶ್ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೂ ಮುನ್ನ ಪುಣೆಯಿಂದ ಸಂಚುಕೋರ ಪ್ರವೀಣ್ ಲೋಂಕರ್‌ನನ್ನು ಬಂಧಿಸಲಾಗಿತ್ತು.ಇದನ್ನೂ ಓದಿ:ಬಿಜೆಪಿ ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ

  • ಯಾರದ್ದು ಚಿಕ್ಕದು, ಯಾರದ್ದು ದೊಡ್ಡದು ಅಂತ ಗೊತ್ತಾಗೋಕೆ ಯೂಟ್ಯೂಬ್ ನೋಡಿ ಎಂದ ಉಪ್ಪಿ

    ಯಾರದ್ದು ಚಿಕ್ಕದು, ಯಾರದ್ದು ದೊಡ್ಡದು ಅಂತ ಗೊತ್ತಾಗೋಕೆ ಯೂಟ್ಯೂಬ್ ನೋಡಿ ಎಂದ ಉಪ್ಪಿ

    ಪೇಂದ್ರ (Upendra) ನಟನೆಯ ಯುಐ (UI) ಸಿನಿಮಾದ ಚೀಪ್ ಚೀಪ್ ಸಾಂಗ್ ಫೆಬ್ರವರಿ 26ರಂದು ರಿಲೀಸ್ ಆಗಬೇಕಿತ್ತು. ಪ್ರೇಮಿಗಳ ದಿನದಂದು ಈ ಹಾಡಿನ ಸಣ್ಣ ತುಣುಕೊಂದನ್ನು ಹಾಕಿ ಸಾಕಷ್ಟು ಕುತೂಹಲ ಮೂಡಿಸಿದ್ದರು ಉಪೇಂದ್ರ. ಪೂರ್ಣ ಪ್ರಮಾಣದ ಹಾಡನ್ನು ಫೆಬ್ರವರಿ 26ರಂದು ರಿಲೀಸ್ ಮಾಡುವುದಾಗಿ ತಿಳಿಸಿದ್ದರು. ಆದರೆ, ರಿಲೀಸ್ ಮಾಡದೇ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದರು. ಆದರೆ, ಈ ಹಾಡಿನ ರಿಲೀಸ್ ಬಗ್ಗೆ ಅಪ್ ಡೇಟ್ ಕೊಟ್ಟಿದ್ದಾರೆ ಉಪ್ಪಿ.

    ಅವತ್ತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಉಪ್ಪಿ, ‘ಚೀಪ್ ಚೀಪ್ ಏನದು? ದೊಡ್ದದು.. ಚಿಕ್ಕದು.. ಯಾರದ್ದು? ಇದು ಬಹಳ ಸೂಕ್ಷ್ಮವಾದ ವಿಷಯ. ಯಾರದ್ದು ಚಿಕ್ಕದು, ಯಾರದ್ದು ದೊಡ್ಡದು? ಎಂಬ ವಿಷಯ ಬಹಿರಂಗವಾದರೆ ಅದಾಗಿ ಹೋಗುತ್ತದೆ. ಅದಾಗಿ ಹೋಗುತ್ತದೆ ಎಂದು ಏನು? ಏನು ಅದು? ಅದು ಏನಾಗುತ್ತದೆ? ಏನಾಗುತ್ತದೆ ಎಂದು ಮಾರ್ಚ್ 4ನೇ ತಾರೀಕು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾದಾಗ ಗೊತ್ತಾಗುತ್ತದೆ’ ಎಂದು ಬರೆದುಕೊಂಡಿದ್ದರು.

    ಈ ಬಾರಿ ಅವರು ವಿಶೇಷವಾದ ಸ್ಥಳದಲ್ಲಿ ಈ ಹಾಡನ್ನು ರಿಲೀಸ್ ಮಾಡೋಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ಮಾರ್ಚ್ 4 ರಂದು ಮುಂಬೈನ ಯುಟ್ಯೂಬ್ (Youtube) ಕಚೇರಿಯಲ್ಲಿ ಚೀಪ್ ಚೀಪ್ ಹಾಡು ರಿಲೀಸ್ ಮಾಡುವುದಾಗಿ ಉಪ್ಪಿ ಪೋಸ್ಟ್ ಮಾಡಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಈ ಚೀಪ್ ಹಾಡನ್ನು ಅಭಿಮಾನಿಗಳು ಕೇಳಬಹುದಾಗಿದೆ.

    ಈ ಹಿಂದೆ ಕ್ಷಮಿಸಿ.. ಹಾಡಿನ ಅರ್ಥವನ್ನು ನೀವು ಹೇಗೆ ಬೇಕಾದರೂ ಕಲ್ಪಿಸಿಕೊಳ್ಳಿ ಎನ್ನುತ್ತಾ “ಚೀಪ್.. ಚೀಪ್.. ಎಲ್ಲಾ ಚೀಪ್ ಚೀಪ್.. (Cheap Song Promo Kannada) ನಂದು ತುಂಬಾ ದೊಡ್ಡದು. ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬಾ ಚಿಕ್ಕದು, ಇವನಿಗಿಂತ ಅವಂದು ದೊಡ್ದು..” ಥೋ.. ಇದು ಡಬಲ್ ಮೀನಿಂಗ್ ಹಾಡಾ ಅಥವಾ ಗೂಢಾರ್ಥ ಏನಾದರೂ ಇದೆಯಾ ಗೊತ್ತಿಲ್ಲ. ಒಟ್ನಲ್ಲಿ ನಟ, ನಿರ್ದೇಶಕ ಉಪೇಂದ್ರ ಪ್ರೇಮಿಗಳ ದಿನದಂದು ತಮ್ಮ ಯುಐ ಸಿನಿಮಾದ ಹಾಡಿನ ತುಣುಕೊಂದನ್ನು ಬಿಡುಗಡೆ ಮಾಡಿ ಮತ್ತೆ ಮೆದುಳಿಗೆ ಹುಳು ಬಿಟ್ಟಿದ್ದರು. ಹಾಡಿನ ಈ ಸಣ್ಣ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿತ್ತು.