Tag: Youths

  • ಶಿವಮೊಗ್ಗದಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು – ಮೂವರು ಅರೆಸ್ಟ್

    ಶಿವಮೊಗ್ಗದಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು – ಮೂವರು ಅರೆಸ್ಟ್

    ಶಿವಮೊಗ್ಗ: ನಗರದಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು ರೂಪಿಸಿದ್ದ ಮೂವರು ಅನ್ಯಕೋಮಿನ ಯುವಕರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಸಲ್ಮಾನ್, ಅಬ್ಬಾಸ್, ಉಸ್ಮಾನ್ ಬಂಧಿತ ಆರೋಪಿಗಳು. ಯುವಕರು ಹಿಂದೂಪರ ಸಂಘಟಿತ ಕಾರ್ಯಕರ್ತ ಭರತ್ ಎಂಬಾತನ ಕೊಲೆಗೆ ಸಂಚು ರೂಪಿಸಿದ್ದರು. ಈ ಮೂವರ ಗುಂಪು ನಗರದ ನ್ಯೂ ಮಂಡ್ಲಿ ಬಡಾವಣೆ ಬಳಿ ಭರತ್ ಸಹೋದರನನ್ನು ಅಡ್ಡ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಭರತ್ ಎಲ್ಲಿದ್ದಾನೆ ಎಂಬುದರ ಬಗ್ಗೆ ಪ್ರಶ್ನಿಸಿದ್ದಾರೆ.

    ಈ ಕುರಿತು ಭರತ್ ಸಹೋದರ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಯ ಪ್ರವೃತ್ತರಾದ ಪೊಲೀಸರಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಯುವಕರ ತಂಡವು ಈ ಹಿಂದೆ ಸಹ ಹರ್ಷ್‍ನ ಹತ್ಯೆ ಪ್ರತೀಕಾರವಾಗಿ ಅನ್ಯಕೋಮಿನ ಯುವಕನ ಹತ್ಯೆಗೆ ಸಂಚು ರೂಪಿಸಿದ್ದರು. ಪೊಲೀಸರ ಕಾರ್ಯಾಚರಣೆಯಿಂದ ಎರಡು ಹತ್ಯೆಯ ಸಂಚು ವಿಫಲವಾಗಿವೆ.

  • ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

    ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

    ಶಿವಮೊಗ್ಗ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ. ತೀರ್ಥಹಳ್ಳಿಯ ರಾಮಮಂಟಪದ ಬಳಿ ಈ ಅವಘಡ ಸಂಭವಿಸಿದ್ದು, ಮೃತ ಯುವಕರನ್ನು ವರ್ಧನ್ (19) ಹಾಗೂ ಮಂಜು (20) ಎಂದು ಗುರುತಿಸಲಾಗಿದೆ.

    ಇಬ್ಬರು ಯುವಕರು ನದಿಯಲ್ಲಿ ಈಜಲು ತೆರಳಿರುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಆದರೆ ವರ್ಧನ್ ಪೋಷಕರು ಹುಡುಕಾಟ ನಡೆಸಿ, ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗ ಪೊಲೀಸರು ವರ್ಧನ್ ಮೊಬೈಲ್ ನೆಟ್‍ವರ್ಕ್ ಲೊಕೇಶನ್ ಆಧರಿಸಿ, ವರ್ಧನ್ ಇರುವ ಸ್ಥಳದ ಮಾಹಿತಿ ಕಂಡು ಹಿಡಿದಿದ್ದಾರೆ. ಇದನ್ನೂ ಓದಿ: ಕೋಡ್ದಬ್ಬು ದೇಗುಲದ ಆಯದಕಲ್ಲಿಗೆ, ಅಂಗಣದ ಸುತ್ತಲೂ ರಕ್ತ ಸುರಿಸಿ ಓಡಾಟ- ವ್ಯಕ್ತಿ ಅರೆಸ್ಟ್

    ನಂತರ ತುಂಗಾನದಿ ದಂಡೆಯಲ್ಲಿ ಮೊಬೈಲ್ ಹಾಗೂ ಬಟ್ಟೆ ಇರುವುದನ್ನು ಗಮನಿಸಿದ ಪೊಲೀಸರು, ಅಗ್ನಿ ಶಾಮಕದಳ ಸಿಬ್ಬಂದಿಯವರನ್ನು ಕರೆಸಿ ಇಬ್ಬರ ಶವವನ್ನು ಹೊರಗೆ ತೆಗೆದಿದ್ದಾರೆ. ಘಟನೆ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ‘ಕಾಪಾಡಿ ಕಾಪಾಡಿ’ ಎನ್ನುತ್ತ ಜನರ ಕಣ್ಣೆದುರೇ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟ ಯುವಕರು

    ‘ಕಾಪಾಡಿ ಕಾಪಾಡಿ’ ಎನ್ನುತ್ತ ಜನರ ಕಣ್ಣೆದುರೇ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟ ಯುವಕರು

    ಕೋಲಾರ: ಮಾನವೀಯತೆ ಮರೆತ ಜನರಿಂದ ಮೂರು ಜನ ಯುವಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಅಮಾನವೀಯ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಘಟನೆ ಇದೇ ತಿಂಗಳ 9 ರಂದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ.

    ಬಂಗಾರಪೇಟೆ ತಾಲೂಕಿನ ನೇರಳೆಕೆರೆ ಬಳಿಯ ಕೆರೆಯಲ್ಲಿ ತೆಪ್ಪ ಮುಗುಚಿ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿದ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಚಿಕ್ಕವಲಗಮಾದಿಯ ರಾಜೇಂದ್ರ (32), ಕೆರೆಕೋಡಿ ಗ್ರಾಮದ ನವೀನ್ (32), ನೇರಳೆಕೆರೆಯ ಮೋಹನ್ (28) ಮೃತರು. ಇದನ್ನೂ ಓದಿ: ಹಿಜಬ್ ತೀರ್ಪು: ಮಂಗಳವಾರ ಉಡುಪಿ, ಶಿವಮೊಗ್ಗ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಶಿವರಾಜ್ ಈಜಿಕೊಂಡು ದಡ ಸೇರಿದ ಹಿನ್ನೆಲೆ ಪಾರಾಗಿದ್ದಾನೆ. ಅಂದು ಕೆರೆಯಲ್ಲಿ ನಡೆದ ಸನ್ನಿವೇಶ ಮೊಬೈಲ್‍ನಲ್ಲಿ ಸೆರೆಯಾಗಿದೆ. ‘ಯಾರಾದ್ರು ಕಾಪಾಡಿ’ ಎಂದು ಮೂರು ಜನ ಯುವಕರು ಬೇಡಿಕೊಂಡಿದ್ದಾರೆ. ಆದ್ರೆ ಅಲ್ಲೆ ದಡದಲ್ಲಿ ನಿಂತಿದ್ದ ಸಾಕಷ್ಟು ಜನರು ದಡದಲ್ಲಿ ನಿಂತು ಈಜಿಕೊಂಡು ಬರುವಂತೆ ಸಲಹೆ ನೀಡಿದ್ದಾರೆ.

    File:Theppa.jpg - Wikimedia Commons

    ತೆಪ್ಪದಲ್ಲಿ ರೌಂಡ್ಸ್ ಮಾಡಲು ಹೋಗಿ ಮುಗುಚಿದ್ರು ಯಾರೂ ರಕ್ಷಣೆಗೆ ಬಾರದ ಹಿನ್ನೆಲೆ ನೋಡ ನೋಡುತ್ತಿದ್ದಂತೆ ಮೂವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕೆರೆ ಮಧ್ಯದಲ್ಲಿ ಸಿಲುಕಿ ಕಾಪಾಡಿ ಕಾಪಾಡಿ ಎಂದು ಚೀರಾಡಿದ್ರು ಮಾನವೀಯತೆ ಮರೆತ ಜನರು ನಿಂತು ನೋಡುತ್ತಲೆ ಇದ್ದರು. ಈ ಹಿನ್ನೆಲೆ 3 ಜನರ ಪ್ರಾಣ ಕಳೆದುಕೊಂಡಿರುವುದು ವಿಪರ್ಯಾಸ., ಇದನ್ನೂ ಓದಿ: 10ನೇ ತರಗತಿ ಬಾಲಕಿಯನ್ನ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ ಆರೋಪಿಗಳು

  • ಕುಡಿದ ಅಮಲಿನಲ್ಲಿ ಮರಕ್ಕೆ ಕಾರು ಡಿಕ್ಕಿ – ಇಬ್ಬರು ಬಲಿ

    ಕುಡಿದ ಅಮಲಿನಲ್ಲಿ ಮರಕ್ಕೆ ಕಾರು ಡಿಕ್ಕಿ – ಇಬ್ಬರು ಬಲಿ

    ಬೀದರ್: ಕುಡಿದ ಅಮಲಿನಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ನಗರದ ಹೊರ ವಲಯದ ದೇವ ಉದ್ಯಾನವನದ ಬಳಿ ನಡೆದಿದೆ.

    ಕುಡಿದ ಅಮಲಿನಲ್ಲಿ ಚಾಲಕನೊಬ್ಬನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತೊಬ್ಬರು ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್

    ನಗರದ ಬುತ್ತಿ ಬಸವಣ್ಣ ಕಾಲೋನಿಯ ನಿವಾಸಿಗಳಾದ ವಿದ್ಯಾಧರ್ (28) ಹಾಗೂ ಶಾಮ್ ರಾವ್ (30) ಸಾವನ್ನಪ್ಪಿದ ದುರ್ವೈವಿಗಳು. ಇಬ್ಬರು ಯುವಕರು ಪಾರ್ಟಿ ಮಾಡಿ ತೆಲಂಗಾಣದಿಂದ ಬೀದರ್‌ಗೆ ಬರುತ್ತಿದ್ದರು. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಂಕ್ರಾಂತಿ ಪುಣ್ಯಸ್ನಾನ ಮಾಡಲು ಹೋಗಿ ಇಬ್ಬರು ಯುವಕರು ನೀರುಪಾಲು

    ಸಂಕ್ರಾಂತಿ ಪುಣ್ಯಸ್ನಾನ ಮಾಡಲು ಹೋಗಿ ಇಬ್ಬರು ಯುವಕರು ನೀರುಪಾಲು

    ರಾಯಚೂರು: ಸಂಕ್ರಾಂತಿ ಪುಣ್ಯಸ್ನಾನ ಮಾಡಲು ಹೋಗಿ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

    ಗಣೇಶ್(30), ಉದಯ ಕುಮಾರ್(31) ನೀರುಪಾಲಾದ ಯುವಕರು. ರಾಯಚೂರು ಜಿಲ್ಲೆಯ ದೇವಸುಗೂರು ಬಳಿ ಇರುವ ಕೃಷ್ಣಾ ನದಿಗೆ ಪುಣ್ಯಸ್ನಾನ ಮಾಡಲು ನಿನ್ನೆ ಏಳು ಜನ ಸ್ನೇಹಿತರೊಂದಿಗೆ ಗಣೇಶ್ ಮತ್ತು ಉದಯ ಕುಮಾರ್ ತೆರಳಿದ್ದರು. ಆದರೆ ನೀರಿನ ರಭಸಕ್ಕೆ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಯ 16 ಮಕ್ಕಳಿಗೆ ವಕ್ಕರಿಸಿದ ಕೊರೊನಾ

    ಈ ಪರಿಣಾಮ ಇವರ ಜೊತೆಗಿದ್ದ ಸ್ನೇಹಿತರು ಆಗ್ನಿ ಶಾಮಕದಳಕ್ಕೆ ವಿಷಯ ತಿಳಿಸಿದ್ದು, ತಕ್ಷಣ ಸಿಬ್ಬಂದಿ ಬಂದು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಪ್ರಸ್ತುತ ಗಣೇಶ್ ಮೃತ ದೇಹ ಪತ್ತೆಯಾಗಿದ್ದು, ಉದಯ್‍ಗಾಗಿ ಶೋಧ ಕಾರ್ಯ ಮುಂದುವರೆದಿದೆ.

    ಇಬ್ಬರು ರಾಯಚೂರು ನಗರದ ಎಲ್ ಬಿ ಎಸ್ ನಗರ ನಿವಾಸಿಗಳಾಗಿದ್ದು, ಏಳು ಜನ ಸ್ನೇಹಿತರು ನಿನ್ನೆ ಪುಣ್ಯಸ್ನಾನಕ್ಕೆ ಕೃಷ್ಣಾ ನದಿಗೆ ತೆರಳಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ‘ಊ ಅಂತಾವಾ’ ವಿವಾದದ ಕುರಿತು ಮೌನ ಮುರಿದ ದೇವಿ ಶ್ರೀ ಪ್ರಸಾದ್

  • ನೈಟ್ ಕರ್ಫ್ಯೂ ಹೊತ್ತಲ್ಲಿ ಯುವಜನತೆಯ ಮೋಜು ಮಸ್ತಿ – ಪೊಲೀಸರ ಮುಂದೆಯೇ ಬಿಂದಾಸ್ ಸುತ್ತಾಟ

    ನೈಟ್ ಕರ್ಫ್ಯೂ ಹೊತ್ತಲ್ಲಿ ಯುವಜನತೆಯ ಮೋಜು ಮಸ್ತಿ – ಪೊಲೀಸರ ಮುಂದೆಯೇ ಬಿಂದಾಸ್ ಸುತ್ತಾಟ

    ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಕೊರೊನಾ ಮೂರನೇ ಅಲೆ ಭೀತಿ ಶುರುವಾಗಿದೆ. ಕೊರೊನಾ ಸಾಂಕ್ರಮಿಕ ರೋಗ ತಡೆಗಟ್ಟಲು ಸರ್ಕಾರ ಹಲವರು ನಿಯಮಗಳನ್ನು ವಿಧಿಸಿದೆ. ಹೀಗಿದ್ದರೂ ಬೆಂಗಳೂರಿನಲ್ಲಿ ಯುವಕ ಯುವತಿಯರು ನೈಟ್ ಕರ್ಫ್ಯೂ ವೇಳೆ ಮೋಜು-ಮಸ್ತಿ ಮಾಡುತ್ತಿದ್ದಾರೆ.

    bangaluru car

    ನಗರದ ಸದಾಶಿವನಗರದಲ್ಲಿ ಯುವಕ, ಯುವತಿಯರು ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಭರ್ಜರಿ ಮ್ಯೂಸಿಕ್ ಹಾಕಿಕೊಂಡು ಸುತ್ತಾಡಿದ್ದಾರೆ. ಅಲ್ಲದೇ ಕಾರಿನ ರೂಫ್ ಡೋರ್ ಓಪನ್ ಮಾಡಿಕೊಂಡು ಮೂವಿಂಗ್ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಾ, ಜೋರಾಗಿ ಕೂಗಾಡುತ್ತಾ ಪೊಲೀಸರ ಮುಂದೆಯೇ ಸಾಗಿದ್ದಾರೆ. ಇದನ್ನೂ ಓದಿ: ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್

    ಒಟ್ಟಾರೆ ಕೊರೊನಾ ನಿಯಮವನ್ನು ಉಲ್ಲಂಘಿಸಿ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತೆ ಕಾರಿನಲ್ಲಿ ಯುವಕ, ಯುವತಿಯರು ವೀಕೆಂಡ್‍ನಲ್ಲಿ ಲೇಟ್ ನೈಟ್ ಜಾಲಿ ರೈಡ್ ಹೋಗಿದ್ದಾರೆ. ಇದೀಗ ಈ ವೀಡಿಯೋ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗುತ್ತಿದೆ. ಇದನ್ನೂ ಓದಿ: ವಿಜಯಪುರದ ಕುವರಿಗೆ ರಾಷ್ಟ್ರೀಯ ಪ್ರಶಸ್ತಿ

  • ಭಿಕ್ಷಾಟನೆ ಮುಕ್ತಭಾರತ ಚಳುವಳಿ- ಬೆಂಗಳೂರು ಯುವಕರಿಂದ ಜಾಗೃತಿ ಕಾರ್ಯ

    ಭಿಕ್ಷಾಟನೆ ಮುಕ್ತಭಾರತ ಚಳುವಳಿ- ಬೆಂಗಳೂರು ಯುವಕರಿಂದ ಜಾಗೃತಿ ಕಾರ್ಯ

    ಬೆಂಗಳೂರು: ದೇಶದಲ್ಲಿ ಹಣೆಬರಹದಿಂದ ಭಿಕ್ಷಾಟನೆ ಮಾಡುವ ಗುಂಪು ಒಂದಾದರೆ, ಅಂಗವೈಕಲ್ಯದಿಂದ ಭಿಕ್ಷಾಟನೆ ಮಾಡುವವರು ಮತ್ತೊಂದು ಗುಂಪಿನವರಾಗಿದ್ದಾರೆ.

    ಇಂತಹ ಅಸಹಾಯಕ ಜನರಿಗೆ ನಾವು ಭಿಕ್ಷೆಯನ್ನು ನೀಡುವುದನ್ನು ನಿಲ್ಲಿಸಿ, ನಮ್ಮ ಸರ್ಕಾರದಿಂದ ರೂಪಿಸಿರುವಂತಹ ಕಾನೂನಾದ “ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ 1975ರ ಪ್ರಕಾರ ಅವರಿಗೆ, ಜೀವನ ನಡೆಸಲು ಹಾಗೂ ಸ್ವಂತ ಕಾಲಿನ ಮೇಲೆ ನಿಲ್ಲಲು, ಸರ್ಕಾರದಿಂದ ಕೌಶಲ್ಯ ಅಭಿವೃದ್ಧಿ ಹಾಗೂ ಸಣ್ಣ ಪುಟ್ಟ ಕೆಲಸಗಳ ತರಬೇತಿಯನ್ನು ನೀಡಲಾಗುತ್ತಿದೆ.ಆದ್ದರಿಂದ ಸಾರ್ವಜನಿಕರಾದ ನಾವು, ಇಂತಹವರಿಗೆ ಭಿಕ್ಷೆಯಾಗಿ ಹಣವನ್ನು ನೀಡುವ ಬದಲು, ಅವರಿಗೆ ಕಾಯ್ದೆಯ ಬಗ್ಗೆ ತಿಳಿಸಿ, ಅವರನ್ನೂ ಸಹ ನಮ್ಮಂತೆಯೆ ಸ್ವತಂತ್ರವಾಗಿ ಜೀವನ ನಡೆಸಲು ಸಹಾಯ ಮಾಡೋಣ ಎಂದು ಬೆಂಗಳೂರಿನ ಯುವಕರು ಜಾಗೃತಿ ಮೂಡಿಸಿದ್ದಾರೆ. ಇದನ್ನೂ ಓದಿ:ಮಹಿಳೆಯರನ್ನು ಚುಡಾಯಿಸುತ್ತಿದ್ದ ವ್ಯಕ್ತಿಯ ತಲೆ ಬೋಳಿಸಿದ ಗ್ರಾಮಸ್ಥರು

    1975ನೆಯ ಕಾಯ್ದೆಯ ಅಡಿಯಲ್ಲಿ, ಭಿಕ್ಷಾಟನೆ ನಿರ್ಮೂಲ ಮಾಡುವ ಮೂಲಕ, ನಿಜವಾದ ಸ್ವಾತಂತ್ರ್ಯಕ್ಕೆ ಮುನ್ನುಡಿಯನ್ನು ಬರೆಯಲು, ನಾವು ಭಿಕ್ಷಾಟನೆ ಮುಕ್ತಭಾರತ ಅಭಿಯಾನವನ್ನು ಶುರುಮಾಡಿದ್ದೇವೆ. ಇದಕ್ಕೆ ಯಶಸ್ಸನ್ನು ತಂದು ಕೊಟ್ಟು ನಮ್ಮ ದೇಶದಲ್ಲಿ ಭಿಕ್ಷಾಟನೆ ಇಲ್ಲದಂತೆ ಮಾಡೋಣ. ಬನ್ನಿ ನಮ್ಮೋಟ್ಟಿಗೆ ಕೈ ಜೋಡಿಸಿ ಎಂದು ಯುವಕರು ಜಾಗೃತಿ ಕರೆ ನೀಡಿದ್ದಾರೆ. ಇದನ್ನೂ ಓದಿ:ಪಂಚರ್ ಆಗಿ ಹಿಮ್ಮುಖವಾಗಿ ಚಲಿಸಿ ಟ್ರ್ಯಾಕ್ಟರ್ ಪಲ್ಟಿ

  • ದೇವಸ್ಥಾನದಿಂದ ಮನೆಗೆ ಹೋಗ್ತಿದ್ದ ಮಹಿಳೆ – ಹೊತ್ತೊಯ್ದು ಗ್ಯಾಂಗ್ ರೇಪ್

    ದೇವಸ್ಥಾನದಿಂದ ಮನೆಗೆ ಹೋಗ್ತಿದ್ದ ಮಹಿಳೆ – ಹೊತ್ತೊಯ್ದು ಗ್ಯಾಂಗ್ ರೇಪ್

    ಯಾದಗಿರಿ: ದೇವಸ್ಥಾನಕ್ಕೆ ತೆರಳಿ ಮರಳಿ ಮನೆಗೆ ಹೋಗುತ್ತಿದ್ದ ವೇಳೆ ಬೈಕ್ ಅಡ್ಡಗಟ್ಟಿ ಓರ್ವ ಮಹಿಳೆಯ ಸಂಬಂಧಿಕನಿಗೆ ಹಿಗ್ಗಾಮುಗ್ಗಾ ಥಳಿಸಿ, ಬಳಿಕ ಮಹಿಳೆಯನ್ನು ಹೊತ್ತೊಯ್ದು ಗ್ಯಾಂಗ್ ರೇಪ್ ಮಾಡಿರುವ ಘಟನೆ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಆಗಸ್ಟ್ 8ರ ಮಧ್ಯರಾತ್ರಿಯಿಂದ ಆಗಸ್ಟ್ 9ರ ಬೆಳಗಿನ ಜಾವದ ಅವಧಿಯಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೆ ಒಳಗಾದದ ಮಹಿಳೆ ಮತ್ತು ಆಕೆಯ ಸಂಬಂಧಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

    ಅತ್ಯಾಚಾರಕ್ಕೊಳಗಾದ ಮಹಿಳೆ ಮತ್ತು ಆಕೆಯ ಸಂಬಂಧಿ ದೇವಸ್ಥಾನಕ್ಕೆ ತೆರಳಿ ತಡರಾತ್ರಿ ಮನೆಗೆ ವಾಪಸಾಗುತ್ತಿದ್ದರು. ಇದನ್ನು ಗಮನಿಸಿದ ಮದ್ಯದ ಅಮಲಿನಲ್ಲಿದ್ದ ಇಬ್ಬರು ಕಾಮುಕ ಯುವಕರು, ಈ ಇಬ್ಬರನ್ನು ಆಟೋದಲ್ಲಿ ಫಾಲೋ ಮಾಡಿ ಯಾದಗಿರಿ ಶಹಾಪುರ ಮಾರ್ಗ ಮಧ್ಯದಲ್ಲಿ ಬೈಕ್‍ಗೆ ಅಡ್ಡ ಹಾಕಿದ್ದಾರೆ. ನಂತರ ಮಹಿಳೆಯ ಸಂಬಂಧಿಗೆ ಥಳಿಸಿ ಮಹಿಳೆಯನ್ನು ಹೊತ್ತೊಯ್ದು ಅತ್ಯಾಚಾರವೆಸಗಿದ್ದಾರೆ.

    ಸದ್ಯ ಇಬ್ಬರು ಕಾಮುಕರನ್ನು ಶಹಾಪೂರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಕೃತ್ಯಕ್ಕೆ ಬಳಸಿದ ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

  • ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ಮಹಿಳೆಯನ್ನ ರಕ್ಷಿಸಿದ ಯುವಕರು

    ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ಮಹಿಳೆಯನ್ನ ರಕ್ಷಿಸಿದ ಯುವಕರು

    ಚಿಕ್ಕಮಗಳೂರು: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನ ಸ್ಥಳೀಯ ಯುವಕರು ರಕ್ಷಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದಲ್ಲಿ ನಡೆದಿದೆ.

    ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಶೈಲಾ ಎಂಬವರು ಹೇಮಾವತಿ ನದಿ ತಟದಲ್ಲಿ ಕೂತಿದ್ದವರು ಆಯ ತಪ್ಪಿ ಬಿದ್ದು ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದರು. ಇದರ ಗಮನಿಸಿದ ಸ್ಥಳೀಯ ಯುವಕರು ನೀರಿಗೆ ಹಾರಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನ ರಕ್ಷಿಸಿದ್ದಾರೆ. ಮಹಿಳೆ ಶೈಲಾ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದುದ್ದನ್ನ ಫಲ್ಗುಣಿ ಗ್ರಾಮದ ಲೋಹಿತ್ ಕಂಡು ನೋಡಿ ಅಲ್ಲೇ ಇದ್ದ ಹುಡುಗರನ್ನ ಕರೆದು ಎಲ್ಲರೂ ನೀರಿಗೆ ಇಳಿದು ಮಹಿಳೆಯನ್ನ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಆ ಬಳಿಕ ನೀರಿನಲ್ಲಿ ಕೊಚ್ಚಿ ಹೋಗುವ ವೇಳೆ ನೀರು ಕುಡಿದು ಅಸ್ವಸ್ಥರಾಗಿದ್ದ ಮಹಿಳೆಗೆ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.

    ಮಲೆನಾಡಿನ ಘಟ್ಟ ಪ್ರದೇಶದಲ್ಲಿ ಸಾಧಾರಣ ಮಳೆ ಇದೆ. ನದಿಗಳು-ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗುವಾಗ ಸೂಕ್ತ ಸಂದರ್ಭದಲ್ಲಿ ನೀರಿಗೆ ಧುಮುಕಿ ಮಹಿಳೆಯ ಜೀವ ಉಳಿಸಿದ ಶೌರ್ಯ ವಿಪತ್ತು ನಿರ್ವಹಣ ತಂಡದ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎನ್.ಆರ್.ಪುರ-ಬೃಹತ್ ಮರ ಕಡಿದು, ಹಗ್ಗ ಕಟ್ಟಿಕೊಂಡು ಮರದ ಮೇಲೆಯೇ 9 ಜನರ ರಕ್ಷಿಸಿದ ಪಿಎಸ್‍ಐ

  • ಬರ್ತ್ ಡೇ ಪಾರ್ಟಿಗೆ ತೆರಳಿದ್ದ ಯುವಕರು ನೀರುಪಾಲು

    ಬರ್ತ್ ಡೇ ಪಾರ್ಟಿಗೆ ತೆರಳಿದ್ದ ಯುವಕರು ನೀರುಪಾಲು

    ಮೈಸೂರು: ಗೆಳೆಯನ ಬರ್ತ್ ಡೇ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ತಡಿಮಾಲಂಗಿ ಗ್ರಾಮದ ಬಳಿ ನಡೆದಿದೆ.

    ಅಭಿಷೇಕ್ (21) ಮತ್ತು ಅಂಕೇಶ್ (21) ನೀರು ಪಾಲಾದ ಯುವಕರು. ಇಬ್ಬರು ಯಳಂದೂರು ತಾಲೂಕಿನ ಕಿನಕಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಚಾಮರಾಜನಗರದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದನ್ನೂ ಓದಿ: ಕೊರೊನಾ ತಡೆಗಾಗಿ ಅಕ್ಕಿ ತೊಳೆದ ನೀರು ಕುಡಿಯುತ್ತಿರುವ ಮಹಿಳೆಯರು

    ತಡಿಮಾಲಂಗಿ ಗ್ರಾಮಕ್ಕೆ ಸ್ನೇಹಿತನ ಹುಟ್ಟುಹಬ್ಬಕ್ಕೆ ಇಬ್ಬರು ಆಗಮಿಸಿದ್ದರು. ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರು ಪಾಲಾಗಿದ್ದಾರೆ. ಇಬ್ಬರಿಗಾಗಿ ಹುಡುಕಾಟ ನಡೆದಿದೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್