Tag: Youths

  • ಕಾಮದಾಹ ತೀರಿಸಿಕೊಳ್ಳಲು ಮನೆಗೆ ಬರುವಂತೆ ಯುವತಿಗೆ ಸನ್ನೆಯಲ್ಲೇ ಬಲವಂತ ಮಾಡಿದ ನಾಲ್ವರು ಕಾಮುಕರು!

    ಕಾಮದಾಹ ತೀರಿಸಿಕೊಳ್ಳಲು ಮನೆಗೆ ಬರುವಂತೆ ಯುವತಿಗೆ ಸನ್ನೆಯಲ್ಲೇ ಬಲವಂತ ಮಾಡಿದ ನಾಲ್ವರು ಕಾಮುಕರು!

    ಶಿವಮೊಗ್ಗ: ಯುವಕರು ಮನೆಗೆ ಹೋಗುತ್ತಿದ್ದ ಯುವತಿಯನ್ನು ಕಿಚಾಯಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸನಿಹದ ತೀರ್ಥಮತ್ತೂರು ಗ್ರಾಮದ ರಾಮಚಂದ್ರಾಪುರ ಸರ್ಕಲ್ ಬಳಿ ನಡೆದಿದೆ.

    ನಾಲ್ವರು ಯುವಕರು ಮನೆಗೆ ಹೋಗುತ್ತಿದ್ದ ಯುವತಿಯನ್ನು ಕಿಚಾಯಿಸಿದಲ್ಲದೇ ಕಾಮದಾಹ ತೀರಿಸಿಕೊಳ್ಳಲು ಮನೆಗೆ ಬರುವಂತೆ ಸನ್ನೆಯಲ್ಲೇ ಬಲವಂತ ಮಾಡಿದ್ದಾರೆ. ಇದ್ದರಿಂದ ಕೋಪಗೊಂಡ ಸಾರ್ವಜನಿಕರಿಂದ ಯುವಕರಿಗೆ ಥಳಿಸಿದ್ದಾರೆ.

    ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸಾರ್ವಜನಿಕರು ವಾಹನಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ತೀರ್ಥಹಳ್ಳಿ ಇನ್ಸ್ ಪೆಕ್ಟರ್ ಸುರೇಶ್ ನೇತೃತ್ವದ ತಂಡ ಪರಿಸ್ಥಿತಿ ತಹಬದಿಗೆ ತಂದಿತ್ತು.

    ಪೊಲಿಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿದ್ದಾರೆ.

  • ಮಾನಸಿಕ ಅಸ್ವಸ್ಥನಿಗೆ ಹೊಸ ರೂಪ ನೀಡಿದ ಹಾವೇರಿ ಯುವಕರು

    ಮಾನಸಿಕ ಅಸ್ವಸ್ಥನಿಗೆ ಹೊಸ ರೂಪ ನೀಡಿದ ಹಾವೇರಿ ಯುವಕರು

    ಹಾವೇರಿ: ಅಪರಿಚಿತ ಮಾನಸಿಕ ಅಸ್ವಸ್ಥನೊಬ್ಬನಿಗೆ ಯುವಕರು ಕಟಿಂಗ್, ಶೇವಿಂಗ್ ಮಾಡಿ ಸ್ನಾನ ಮಾಡಿಸುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ ಬಳಿ ಕೆಲವು ತಿಂಗಳುಗಳಿಂದ ಮಾನಸಿಕ ಅಸ್ವಸ್ಥ ಓಡಾಡಿಕೊಂಡಿದ್ದನು. ದಾಡಿ ಬಿಟ್ಟು, ಉದ್ದವಾದ ತಲೆಗೂದಲು ಬಿಟ್ಟು ವಿಕಾರಗೊಂಡಿದ್ದ. ಅಲ್ಲದೇ ತಿಂಗಳುಗಟ್ಟಲೇ ಸ್ನಾನ ಮಾಡದೇ ಹಾಗೇ ಓಡಾಡಿಕೊಂಡಿದ್ದನು.

    ಈತನ ಸ್ಥಿತಿಯನ್ನ ನೋಡಿದ ಪಟ್ಟಣದ ಯುವಕರ ದಂಡು ಮಾನಸಿಕ ಅಸ್ವಸ್ಥನನ್ನ ಹಿಡಿದು ತಾವೇ ಕಟಿಂಗ್, ಶೇವಿಂಗ್ ಮಾಡಿದ್ದಾರೆ. ನಂತರ ಸೋಪು ಹಚ್ಚಿ ಸ್ನಾನ ಮಾಡಿಸಿ ಮಾನವೀಯತೆ ಮೆರೆದಿರುವುದರ ಜೊತೆಗೆ ಮಾನಸಿಕ ಅಸ್ವಸ್ಥನಿಗೆ ಹೊಸ ರೂಪು ನೀಡಿದ್ದಾರೆ.

    ಸ್ನಾನ ಮಾಡಿಸಿದ ನಂತರ ಬೇರೆ ಬಟ್ಟೆ ತೊಡಿಸಿ ನಂತರ ಊಟ ನೀಡಿದ್ದಾರೆ. ಯುವಕರ ಕೈಯಿಂದ ಬಿಡುಗಡೆಯಾದ ಮಾನಸಿಕ ಅಸ್ವಸ್ಥ ಶುಚಿಯಾಗಿ ಪಟ್ಟಣದಲ್ಲಿ ಎಂದಿನಂತೆ ಓಡಾಡಿಕೊಂಡಿದ್ದಾನೆ.

  • ಈಜಲು ತೆರಳಿದ್ದ ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    ಈಜಲು ತೆರಳಿದ್ದ ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    ಹಾವೇರಿ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ನಾಗನೂರು ಕೆರೆಯಲ್ಲಿ ನಡೆದಿದೆ.

    ಮೃತ ಬಾಲಕರನ್ನು ಸಾಹಿಲ್ ಹಾವೇರಿ(14) ಮತ್ತು ಖಾಜಾ ಮಂತ್ರೋಡಿ(14) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಪಟ್ಟಣದ ಮೌಲಾಲಿ ಬಡಾವಣೆಯ ನಿವಾಸಿಗಳು ಎನ್ನಲಾಗಿದೆ. ಮಧ್ಯಾಹ್ನ ಸೈಕಲ್ ಮೇಲೆ ಕೆರೆಗೆ ಈಜಲು ತೆರಳಿದ್ದರು, ಈ ವೇಳೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಅಗ್ನಿಶಾಮಕ ದಳ ಸಿಬ್ಬಂದಿ ಕೆರೆಯಲ್ಲಿ ಶೋಧಕಾರ್ಯ ನಡೆಸಿ ಮೃತ ದೇಹಗಳನ್ನ ಹೊರತೆಗಿದ್ದಾರೆ. ತಾಲೂಕು ಆಸ್ಪತ್ರೆಗೆ ಶಾಸಕ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

    ಸ್ಥಳಕ್ಕೆ ಶಿಗ್ಗಾಂವಿ ಠಾಣೆ ಪಿಎಸ್‍ಐ ಅನ್ನಪೂರ್ಣ ಹುಲಗೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಬ್ಯಾಗ್‍ ನಲ್ಲಿ ಕಂತೆ ಕಂತೆ ಹಣ, ಅನುಮಾನಾಸ್ಪದವಾಗಿ ಓಡಾಡ್ತಿದ್ದ 3 ಯುವಕರು ಮಂಡ್ಯ ಪೊಲೀಸರ ವಶಕ್ಕೆ

    ಬ್ಯಾಗ್‍ ನಲ್ಲಿ ಕಂತೆ ಕಂತೆ ಹಣ, ಅನುಮಾನಾಸ್ಪದವಾಗಿ ಓಡಾಡ್ತಿದ್ದ 3 ಯುವಕರು ಮಂಡ್ಯ ಪೊಲೀಸರ ವಶಕ್ಕೆ

    – ಬೆಂಗ್ಳೂರು ಎಟಿಎಂ ಪ್ರಕರಣಕ್ಕೆ ನಂಟು?

    ಮಂಡ್ಯ: ದಾಖಲೆಯಿಲ್ಲದ ಲಕ್ಷಾಂತರ ರೂಪಾಯಿ ಹಣ ಇಟ್ಟುಕೊಂಡಿದ್ದ ಮೂವರು ಯುವಕರನ್ನು ಮಂಡ್ಯ ಜಿಲ್ಲೆ ಮಳವಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೂವರು ಯುವಕರು ಬ್ಯಾಗ್ ನಲ್ಲಿ ಲಕ್ಷಾಂತರ ರೂಪಾಯಿ ಹಣ ಇಟ್ಟುಕೊಂಡು ಮಳವಳ್ಳಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಮದ್ಯಪಾನ ಮಾಡಿ ಪರಸ್ಪರ ಜಗಳವಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಯುವಕರನ್ನು ವಿಚಾರಿಸಲು ಮುಂದಾದರು.

    ಈ ವೇಳೆ ಮೂವರು ಯುವಕರು ಅಲ್ಲಿಯೇ ಇದ್ದ ಬಟ್ಟೆ ಅಂಗಡಿಯೊಳಗೆ ಹೋಗಿ ಅವಿತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಸ್ಥಳೀಯರು ಸೇರಿ ಯುವಕರನ್ನು ಹಿಡಿದು ಬ್ಯಾಗ್ ಪರಿಶೀಲನೆ ನಡೆಸಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ.

    ಹಣದ ಬಗ್ಗೆ ಯಾರೂ ಸಮರ್ಪಕ ಉತ್ತರ ನೀಡಿಲ್ಲ. ಈ ಹಣಕ್ಕೆ ಬೆಂಗಳೂರಿನ ಜಾಲಹಳ್ಳಿ ಎಟಿಎಂ ದರೋಡೆ ಪ್ರಕರಣದ ನಂಟು ಇರಬಹುದು ಎಂದು ಶಂಕಿಸಲಾಗಿದೆ.

    ಬೆಂಗ್ಳೂರಲ್ಲಿ ಎಟಿಎಂ ಹಣ ದರೋಡೆ: ಎಟಿಎಂ ಗೆ ಹಣ ತುಂಬುವ ವೇಳೆ 18 ಲಕ್ಷ ರೂ. ಕಸಿದು ಪರಾರಿಯಾದ ಘಟನೆ ನಗರದ ಜಾಲಹಳ್ಳಿ ಕ್ರಾಸ್ ಬಳಿ ಸೋಮವಾರದಂದು ನಡೆದಿತ್ತು. ಬೆಳಗ್ಗೆ 6 ಗಂಟೆ ಸುಮಾರಿಗೆ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ವೇಳೆ 220 ಪಲ್ಸರ್ ಬೈಕ್‍ನಲ್ಲಿ ಹೆಲ್ಮಟ್ ಧರಿಸಿ ಬಂದಿದ್ದ ದುಷ್ರ್ಕಮಿಗಳು ಸೆಕ್ಯೂರ್ ವೆಲ್ ಏಜೆನ್ಸಿಯ ಮೂವರು ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದರು. ಪ್ರತಿರೋಧ ಒಡಿದ್ದಕ್ಕೆ ಕಸ್ಟೋಡಿಯನ್ ಮೋಹನ್ ಅವರಿಗೆ ಚಾಕುವಿನಿಂದ ಇರಿದ ದುಷ್ರ್ಕಮಿಗಳು 18 ಲಕ್ಷ ರೂ. ಕಸಿದು ಪರಾರಿಯಾಗಿದ್ದರು.

    ಮೋಹನ್, ಸಾಗರ್ ಹಾಗೂ ಪ್ರಸನ್ನ ಸೆಕ್ಯೂರ್ ವೆಲ್ ಏಜ್ಸೇನಿಯ ಸಿಬ್ಬಂದಿಗಳು. ಎಟಿಎಂಗೆ ಹಣ ತುಂಬಲು ಒಟ್ಟು 1 ಕೋಟಿ, 25 ಲಕ್ಷ ರೂ. ಹಣ ತಂದಿದ್ದರು. ದುಷ್ಕರ್ಮಿಗಳು ಅದರಲ್ಲಿ 18 ಲಕ್ಷ, 50 ಸಾವಿರ ರೂ. ಹಣದ ಬ್ಯಾಗ್ ಕಸಿದು ಪರಾರಿಯಾಗಿದ್ದರು. ಈ ಘಟನೆ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.