Tag: Youths

  • ಸ್ನೇಹಿತನನ್ನು ಕಳೆದುಕೊಂಡಿದ್ದಕ್ಕೆ ಮಹತ್ವದ ಕೆಲಸಕ್ಕೆ ಕೈ ಹಾಕಿದ ಯುವಕರ ತಂಡ!

    ಸ್ನೇಹಿತನನ್ನು ಕಳೆದುಕೊಂಡಿದ್ದಕ್ಕೆ ಮಹತ್ವದ ಕೆಲಸಕ್ಕೆ ಕೈ ಹಾಕಿದ ಯುವಕರ ತಂಡ!

    ಬೆಂಗಳೂರು: ರಸ್ತೆ ಗುಂಡಿಗಳಿಂದಾಗಿ ಸವಾರರು ಬಲಿಯಾಗುತ್ತಿರುವ ಹಿನ್ನೆಲೆಯಿಂದ ಬೇಸತ್ತ ಯುವಕರ ತಂಡವೊಂದು ಮಹಾನ್ ಕೆಲಸವನ್ನು ಮಾಡುವ ಮೂಲಕ ಬಿಬಿಎಂಪಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.

    ಮಾತೃಭೂಮಿ ಯುವಕರ ತಂಡ ಈ ಮಹಾನ್ ಕಾರ್ಯಕ್ಕೆ ಕೈ ಹಾಕಿದೆ. ರಸ್ತೆ ಗುಂಡಿಯನ್ನು ಮುಚ್ಚದ ಬಿಬಿಎಂಪಿಯಿಂದಾಗಿ ಬೇಸತ್ತ ಈ ತಂಡ, ತಾವೇ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ. ಅಲ್ಲದೇ ತಮ್ಮ ಸ್ವಂತ ಖರ್ಚಿನಲ್ಲೇ ಗುಂಡಿಗಳನ್ನು ಮುಚ್ಚುತ್ತಿರುವುದು ವಿಶೇಷವಾಗಿದೆ.

    ಬೆಂಗಳೂರಿನ ಯಾವ ಏರಿಯಾದಲ್ಲಿ ಗುಂಡಿ ಇದ್ದರೂ ಇವರಿಗೆ ಲೊಕೇಶನ್ ಕಳುಹಿಸಿದ್ರೆ ಸಾಕು. ತಾವೇ ಬಂದು ಗುಂಡಿಯನ್ನು ಮುಚ್ಚಿ ಹೋಗುತ್ತಾರೆ. ಮಾತೃಭೂಮಿ ತಂಡ ಮೂರು ದಿನಕೊಮ್ಮೆ ಗುಂಡಿ ಮುಚ್ಚುವ ಕೆಲಸವನ್ನು ಮಾಡುತ್ತಿದೆ. ಈ ಮೂಲಕ ಬಿಬಿಎಂಪಿ ಮಾಡುವ ಕೆಲಸವನ್ನು ಇವರೇ ಮಾಡಿ ಸವಾಲ್ ಹಾಕುತ್ತಿದ್ದಾರೆ.

    ರಸ್ತೆ ಗುಂಡಿ ಅಪಘಾತದಲ್ಲಿ ಮಾತೃಭೂಮಿ ತಂಡ ತಮ್ಮ ಸ್ನೇಹಿತನನ್ನು ಕಳೆದುಕೊಂಡಿತ್ತು. ಹಾಗಾಗಿ ಇಂತಹ ಸ್ಥಿತಿ ಯಾರಿಗೂ ಬರಬಾರದು ಎಂದು ತಾವೇ ಗುಂಡಿಗಳನ್ನು ಮುಚ್ಚಲು ಮುಂದಾಗಿರುವುದಾಗಿ ತಂಡದ ಯುವಕರು ಹೇಳುತ್ತಿದ್ದಾರೆ.

    https://www.youtube.com/watch?v=NzvZAOJuXfU

  • ಪಬ್‍ನಲ್ಲಿ ಯುವತಿ ಕೈಗೆ ಹೊಡೆದು, ಬಟ್ಟೆ ಹಿಡಿದು ಎಳೆದಾಡಿದ ಯುವಕರು!

    ಪಬ್‍ನಲ್ಲಿ ಯುವತಿ ಕೈಗೆ ಹೊಡೆದು, ಬಟ್ಟೆ ಹಿಡಿದು ಎಳೆದಾಡಿದ ಯುವಕರು!

    ಮೈಸೂರು: ಯುವತಿ ಜೊತೆ ಇಬ್ಬರು ಯುವಕರ ಅಸಭ್ಯವಾಗಿ ವರ್ತಿಸಿದ ಘಟನೆ ಮೈಸೂರಿನ ಪಂಚವಟಿ ವೃತ್ತದ ಬಳಿಯ ಲಾಸ್ಟ್ ಅಂಡ್ ಫೌಂಡ್ ಪಬ್ ನಲ್ಲಿ ನಡೆದಿದೆ.

    ರುಕ್ಮಿಣಿ (ಹೆಸರು ಬದಲಾಯಿಸಲಾಗಿದೆ) ಕಿರುಕುಳಕ್ಕೆ ಒಳಗಾದ ಯುವತಿ. ಉಮೇಶ್‍ಕುಮಾರ್ ಹಾಗೂ ವಿವೇಕ್ ಎಂಬವರೇ ಕಿರುಕುಳ ನೀಡಿದ ಪುಂಡ ಯುವಕರು. ಯುವತಿ ಪಬ್‍ಗೆ ಹೋಗಿದ್ದಾಗ ಉಮೇಶ್‍ಕುಮಾರ್, ವಿವೇಕ್ ಮೊದಲಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ನಂತರ ಯುವತಿ ಕೈಗೆ ಹೊಡೆದು ಬಟ್ಟೆ ಹಿಡಿದು ಎಳೆದಾಡಿದ್ದಾರೆ.

    ಸದ್ಯ ಯುವತಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ.

  • ಎದೆ, ಹೊಟ್ಟೆ, ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ರೌಡಿಶೀಟರ್ ನ ಬರ್ಬರ ಹತ್ಯೆ!

    ಎದೆ, ಹೊಟ್ಟೆ, ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ರೌಡಿಶೀಟರ್ ನ ಬರ್ಬರ ಹತ್ಯೆ!

    ಶಿವಮೊಗ್ಗ: 8-10 ಜನರಿದ್ದ ಯುವಕರ ಗುಂಪು ರೌಡಿಶೀಟರ್ ಒಬ್ಬನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಹೊರವಲಯದಲ್ಲಿರುವ ಸೂಳೆಬೈಲಿನಲ್ಲಿ ನಡೆದಿದೆ.

    ಅಬೀದ್ ಕೊಲೆಯಾದ ರೌಡಿ ಶೀಟರ್. ಇದೇ ಪ್ರದೇಶದ ಅಲಿಂ, ಕಲೀಂ, ಮುನ್ನಾ ಇನ್ನಿತರರು ಈ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಹಲವು ಅಪರಾಧಗಳಲ್ಲಿ ಆರೋಪಿಯಾಗಿದ್ದ ಅಬೀದ್ ಇದೇ ಏರಿಯಾದ ಹುಡುಗರ ಜೊತೆಗೂ ವೈರತ್ವ ಕಟ್ಟಿಕೊಂಡಿದ್ದನಂತೆ.

    ಇದೇ ಕಾರಣ ಭಾನುವಾರ ಮಧ್ಯಾಹ್ನದಿಂದ ಈತನನ್ನು ನಾಲ್ಕು ಬೈಕಿನಲ್ಲಿ ಫಾಲೋ ಮಾಡಿದ ತಂಡ ಕೊನೆಗೆ ಸೂಳೆಬೈಲಿನ ಆಟದ ಮೈದಾನದ ಬಳಿ ಅಡ್ಡಗಟ್ಟಿ ಕೊಚ್ಚಿ ಹಾಕಿದೆ. ಎದೆ, ಹೊಟ್ಟೆ, ಕುತ್ತಿಗೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಬೀದ್ ಮೃತಪಟ್ಟಿದ್ದಾನೆ.

    ಸದ್ಯ ಈ ಸಂಬಂಧ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಲ್ಲೆ ಮಾಡಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ದೇವಸ್ಥಾನದಲ್ಲೇ ಯುವ ಜೋಡಿಗೆ ಥಳಿಸಿ ಯುವಕರಿಂದ ಅಸಭ್ಯವಾಗಿ ವರ್ತನೆ!

    ದೇವಸ್ಥಾನದಲ್ಲೇ ಯುವ ಜೋಡಿಗೆ ಥಳಿಸಿ ಯುವಕರಿಂದ ಅಸಭ್ಯವಾಗಿ ವರ್ತನೆ!

    ಭುವನೇಶ್ವರ್: ಯುವ ಜೋಡಿಯನ್ನು ಐದಾರು ಯುವಕರು ಥಳಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ಒಡಿಶಾದ ನಯಾಗರ್ ದ ರಘುನಾಥ್ ದೇವಸ್ಥಾನದಲ್ಲಿ ನಡೆದಿದೆ.

    ದೇವಸ್ಥಾನದ ಆವರಣದಲ್ಲಿ ಐದಾರು ಯುವಕರು ಯುವ ಜೋಡಿಯನ್ನು ಥಳಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಯುವ ಜೋಡಿಯನ್ನು ಥಳಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜೋಡಿಯನ್ನು ಥಳಿಸುತ್ತಿರುವ ವಿಡಿಯೋ 1.49 ನಿಮಿಷಗಳಿದ್ದು, ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು ಎಂಬ ಕಾರಣಕ್ಕೆ ಯುವಕರು ಅವರ ಮೇಲೆ ದೇವಸ್ಥಾನದ ಆವರಣದಲ್ಲೇ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.

    ಆ ಯುವಕರು ಇಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ಅಲ್ಲದೇ ನಿಮ್ಮ ಪೋಷಕರ ಮೊಬೈಲ್ ನಂಬರ್ ಕೊಡಿ ಅವರಿಗೆ ನಿಮ್ಮ ಈ ಪ್ರೀತಿಯ ವಿಷಯವನ್ನು ಹೇಳುತ್ತೇವೆ ಎಂದು ಹೇಳಿ ಥಳಿಸಿದ್ದಾರೆ.

    ಐದಾರು ಯುವಕರಲ್ಲಿ ಒಬ್ಬ ಯುವಕ ಉದ್ದೇಶಪೂರ್ವಕವಾಗಿ ಯುವತಿಯನ್ನು ಹಿಡಿದು ಆಕೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಪ್ರೇಮಿಗಳು ನಾವು ಈ ತಪ್ಪನ್ನು ಮತ್ತೇ ಮಾಡುವುದಿಲ್ಲ. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಪ್ರೇಮಿಗಳು ಮನವಿ ಮಾಡಿಕೊಂಡರೂ ಅವರ ಮಾತನ್ನು ಕೇಳದೆ ಅವರ ಮೇಲೆ ನಿರಂತರವಾಗಿ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಾರೆ. ಪ್ರೇಮಿಗಳ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ಸದ್ಯ ಪೊಲೀಸರು ಇದುವರೆಗೂ ಆ ಯುವಕರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ.

  • ರಸ್ತೆ ಡಿವೈಡರ್ ಗೆ ಕಾರು ಡಿಕ್ಕಿ- ಇಬ್ಬರು ಯುವಕರು ಬಲಿ

    ರಸ್ತೆ ಡಿವೈಡರ್ ಗೆ ಕಾರು ಡಿಕ್ಕಿ- ಇಬ್ಬರು ಯುವಕರು ಬಲಿ

    ಮಂಡ್ಯ: ರಸ್ತೆ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲಿನ ಸಮೀಪ ಲೋಕಪಾವನಿ ಸೇತುವೆ ಬಳಿ ನಡೆದಿದೆ.

    ಅರುಣ್ ಕುಮಾರ್(20) ಹಾಗೂ ಆದರ್ಶ್(21) ಮೃತ ದುರ್ದೈವಿಗಳು. ಇಂದು ಮುಂಜಾನೆ 3.45ರಲ್ಲಿ ಘಟನೆ ನಡೆದಿದೆ. ಶ್ರೀರಂಗಪಟ್ಟಣ ಕಡೆಯಿಂದ ಮಂಡ್ಯಕ್ಕೆ ಕಾರಿನಲ್ಲಿ ಬರುವಾಗ ಅಪಘಾತ ನಡೆದಿದೆ.

    ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಈ ಬಗ್ಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ವೀಲ್ಹಿಂಗ್ ಕ್ರೇಜ್!

    ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ವೀಲ್ಹಿಂಗ್ ಕ್ರೇಜ್!

    ಬೆಂಗಳೂರು: ಪೋಲಿ ಪುಂಡ ಯುವಕರ ವೀಲ್ಹಿಂಗ್ ಕ್ರೇಜ್‍ಗೆ ಪ್ರತಿನಿತ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಯುವಕರ ಗುಂಪು ಮೋಜು ಮಸ್ತಿಗಾಗಿ ಡೇಂಜರಸ್ ವೀಲ್ಹಿಂಗ್ ಮಾಡುತ್ತಿದ್ದಾರೆ.

    ಯುವಕರ ಮೋಜು ಮಸ್ತಿಗೆ ಹೆದ್ದಾರಿಯಲ್ಲಿ ಸಂಚರಿಸುವ ಇತರೆ ಸವಾರರು ಭಯದಿಂದಲೇ ಹೈರಾಣಾಗಿದ್ದಾರೆ. ಇನ್ನೂ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪ್ರತಿದಿನ ಈ ಬೈಕ್ ವೀಲ್ಹಿಂಗ್ ಪುಂಡರ ಹಾವಳಿ ಹೆಚ್ಚುತ್ತಿದೆ.

    ಯುವಕರ ಪುಂಡಾಟಿಕೆಯ ನಡುವೆ ದ್ವಿಚಕ್ರ ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದು ಹೆದ್ದಾರಿಯಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಇನ್ನು ಪೊಲೀಸ್ ಇಲಾಖೆಯವರು ಹೆದ್ದಾರಿಯಲ್ಲಿ ಸಿಸಿಟಿವಿಯನ್ನು ಅಳವಡಿಸಿ ಬೈಕ್ ವೀಲ್ಹಿಂಗ್ ಮಾಡುವ ಪುಂಡರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ಬೈಕ್ ವೀಲ್ಹಿಂಗ್ ಹಾವಳಿಗೆ ಕಡಿವಾಣ ಹಾಕಬೇಕಿದೆ ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

    ಯುವಕರು ಈ ಬೈಕ್ ವೀಲ್ಹಿಂಗ್ ಮೋಜಿನಿಂದ ಸಲ್ಪ ಯಾಮಾರಿದ್ದರೂ ಅವರ ಜೀವಕ್ಕೂ ಕುತ್ತು ಬರುವ ಅಪಾಯ ಕೂಡ ಎದುರಾಗಲಿದೆ.

  • ವಾಹನ ಓವರ್ ಟೇಕ್ ಮಾಡಿ ಮಹಿಳೆಗೆ ಮಧ್ಯದ ಬೆರಳು ತೋರಿಸಿ ಯುವಕರಿಂದ ಅಸಭ್ಯ ವರ್ತನೆ!

    ವಾಹನ ಓವರ್ ಟೇಕ್ ಮಾಡಿ ಮಹಿಳೆಗೆ ಮಧ್ಯದ ಬೆರಳು ತೋರಿಸಿ ಯುವಕರಿಂದ ಅಸಭ್ಯ ವರ್ತನೆ!

    ಬೆಂಗಳೂರು: ಯುವಕರು ಕುಡಿದು ಮಹಿಳೆ ಜೊತೆ ಅಸಭ್ಯವಾಗಿ ವರ್ತಸಿದ ಘಟನೆ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನಡೆದಿದೆ.

    ಕಾಮುಕ ಯುವಕರು ಅತಿ ವೇಗದಲ್ಲಿ ಕಾರು ಚಾಲನೆ ಮಾಡಿ ಮಹಿಳೆಯೊಬ್ಬರ ಮುಂದೆ ಅಸಭ್ಯ ವರ್ತನೆ ತೋರಿಸಿದ್ದಾರೆ. ಅಲ್ಲದೇ ವಾಹನ ಓವರ್ ಟೇಕ್ ಮಾಡಿ ಮಧ್ಯ ಬೆರಳು ತೋರಿಸಿದ್ದಾರೆ.

    ಯುವಕರು ಅಸಭ್ಯವಾಗಿ ವರ್ತನೆ ಮಾಡಿದ ದೃಶ್ಯವನ್ನು ಮಹಿಳೆ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಯುವಕರಿದ್ದ ವಾಹನ ಮಹಾರಾಷ್ಟ್ರ ನೋಂದಣಿಯದ್ದಾಗಿದ್ದು, ಯುವಕರು ಕುಡಿದು ವಾಹನ ಚಾಲನೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

    ಸದ್ಯ ಈ ಬಗ್ಗೆ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಹಿಂದೆ ಬಾಣಸವಾಡಿಯ ಲಿಂಗಾರಾಜಪುರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿ ಕಾಲಿನಿಂದ ಒದ್ದು ಪುಂಡರು ಹಲ್ಲೆ ಮಾಡಿದ್ದರು. ಇಬ್ಬರು ಯುವತಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ ಬಂದ ಕಾಮುಕರು ಅಸಭ್ಯವಾಗಿ ವರ್ತಿಸಿದ್ದರು. ಅಲ್ಲದೇ ಯುವತಿಯರಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದರು. ಬೈಕ್ ನಲ್ಲಿ ಬಂದ ಕಿಡಿಗೇಡಿಗಳು ಯುವತಿಗೆ ಒದ್ದ ತಕ್ಷಣ ಅಲ್ಲಿಂದ ಕಾಲ್ಕಿತ್ತಿದ್ದರು.

  • ಯುವತಿಯರನ್ನು ರೇಗಿಸಿ ಅಶ್ಲೀಲ ಕಾಮೆಂಟ್ ಮಾಡಿದ ಯುವಕರಿಗೆ ಬಿತ್ತು ಗೂಸಾ

    ಯುವತಿಯರನ್ನು ರೇಗಿಸಿ ಅಶ್ಲೀಲ ಕಾಮೆಂಟ್ ಮಾಡಿದ ಯುವಕರಿಗೆ ಬಿತ್ತು ಗೂಸಾ

    ಭುವನೇಶ್ವರ್: ಕಾಲೇಜು ಯುವತಿಯರನ್ನು ರೇಗಿಸಿ ಅಶ್ಲೀಲವಾಗಿ ಕಾಮೆಂಟ್ ಮಾಡಿದ ಮೂವರು ಯುವಕರನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಒಡಿಶಾದ ಆಂಗಲ್‍ನಲ್ಲಿ ನಡೆದಿದೆ.

    ಕಾಲೇಜು ಯುವತಿಯರು ಛೆಂಡಿಪಾಡಾ ಎಟಿಎಂನಲ್ಲಿ ಹಣ ತೆಗೆಯುತ್ತಿದ್ದರು. ಈ ವೇಳೆ ಮೂವರು ಯುವಕರು ಬೈಕಿನಲ್ಲಿ ಬಂದು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಹೀಗೆ ಕಾಮೆಂಟ್ ಮಾಡುವುದನ್ನು ಮುಂದುವರಿಸಿದಾಗ ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್ ಪ್ರಶ್ನಿಸಿದ್ದಾರೆ.

    ಯುವತಿಯರಿಗೆ ಕಾಮೆಂಟ್ ಮಾಡುತ್ತಿರುವುದು ಹಾಗೂ ಸೆಕ್ಯೂರಿಟಿ ಗಾರ್ಡ್ ಅವರನ್ನು ತಡೆಯುತ್ತಿರುವ ಎಲ್ಲಾ ಘಟನೆಗಳನ್ನು ಗಮನಿಸುತ್ತಿದ್ದ ಸ್ಥಳೀಯರು, ಕೂಡಲೇ ಯುವಕರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.

    ಕೂಡಲೇ ಘಟನೆಯ ಮಾಹಿತಿ ಅರಿತ ಛೆಂಡಿಪಾಡಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಸ್ಥಳೀಯರಿಂದ ಯುವಕರನ್ನು ರಕ್ಷಿಸಿದ್ದಾರೆ. ನಂತರ ಆ ಮೂವರನ್ನು ವಶಕ್ಕೆ ಪಡೆದು ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ.

  • ಸ್ಕರ್ಟ್ ಎಳೆದು, ಇದರ ಕೆಳಗೆ ಏನಿದೆ ತೋರಿಸು: ಮಾಡೆಲ್‍ಗೆ ಕಾಮುಕರ ಕಿರುಕುಳ

    ಸ್ಕರ್ಟ್ ಎಳೆದು, ಇದರ ಕೆಳಗೆ ಏನಿದೆ ತೋರಿಸು: ಮಾಡೆಲ್‍ಗೆ ಕಾಮುಕರ ಕಿರುಕುಳ

    ಇಂದೋರ್: ಯುವಕರಿಬ್ಬರು ಬೈಕಿನಲ್ಲಿ ಬಂದು ಮಾಡೆಲ್‍ನ ಸ್ಕರ್ಟ್ ಎಳೆದು ಇದರ ಕೆಳಗೆ ಏನಿದೆ ತೋರಿಸು ಎಂದು ಅಸಭ್ಯವಾಗಿ ವರ್ತಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

    ತನ್ನ ಜೊತೆ ಆದ ಈ ಘಟನೆ ಬಗ್ಗೆ ರೂಪದರ್ಶಿ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಯುವಕರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ನಂತರ ಒಬ್ಬರು ಹಿರಿಯ ವ್ಯಕ್ತಿ ನನ್ನ ಹತ್ತಿರ ಬಂದು ನೀನು ಸ್ಕರ್ಟ್ ಹಾಕಿದೀಯಾ. ಹಾಗಾಗಿ ಅವರು ನಿನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ರೂಪದರ್ಶಿ ಟ್ವೀಟ್ ಮಾಡಿದ್ದಾರೆ.

    ರೂಪದರ್ಶಿ ತನ್ನ ಕಾಲಿಗೆ ಗಾಯವಾಗಿರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿದ್ದಾರೆ. ನಂತರ, “ನಾನು ಸ್ಕೂಟಿಯಲ್ಲಿ ಹೊರಗಡೆ ಹೋಗುತ್ತಿದ್ದೆ. ಆಗ ಯುವಕರಿಬ್ಬರು ಬೈಕನ್ನು ನಡುರಸ್ತೆಯಲ್ಲಿ ನಿಲ್ಲಿಸಿ ನನ್ನ ಸ್ಕರ್ಟ್ ಎಳೆಯುತ್ತಿದ್ದರು. ಅಷ್ಟೇ ಅಲ್ಲದೇ ಸ್ಕರ್ಟ್ ಕೆಳಗೆ ಏನಿದೆ ತೋರಿಸು ಎಂದು ಹೇಳುತ್ತಿದ್ದರು. ನಾನು ಅವರಿಂದ ತಪ್ಪಿಸಿಕೊಳ್ಳುವಾಗ ಸ್ಕೂಟಿ ಹಿಡಿದುಕೊಂಡು ಕೆಳಗೆ ಬಿದ್ದೆ” ಎಂದು ರೂಪದರ್ಶಿ ಟ್ವೀಟ್ ಮಾಡಿದ್ದಾರೆ.

    ಈ ಘಟನೆ ಇಂದೋರ್ ನ ಜನಸಂದಣಿ ರಸ್ತೆಯಲ್ಲಿ ನಡೆದಿದ್ದು, ಈ ವೇಳೆ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಜನಸಂದಣಿಯಿರುವ ರಸ್ತೆಯಲ್ಲಿ ಕಾಮುಕರು ನನ್ನ ಸ್ಕರ್ಟ್ ಎಳೆದಾಡಿದ್ದಾರೆ. ಇನ್ನೂ ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ಇವರು ನನ್ನ ಜೊತೆ ಹೇಗೆ ವರ್ತಿಸಬಹುದು ಎಂದು ರೂಪದರ್ಶಿ ಮತ್ತೊಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

    ನನಗೆ ಸಾಕಷ್ಟು ಗಾಯವಾಗಿರುವುದರಿಂದ ನನ್ನ ಸ್ನೇಹಿತರು ಹತ್ತಿರದ ರೆಸ್ಟೋರೆಂಟ್‍ಗೆ ಕರೆದುಕೊಂಡು ಹೋದರು. ಆಗ ಅಲ್ಲಿ ನಾವೆಲ್ಲ ಕುಳಿತ್ತಿದ್ದಾಗ ಒಬ್ಬರು ಹಿರಿಯ ವ್ಯಕ್ತಿ ನನ್ನ ಹತ್ತಿರ ಬಂದು ನೀನು ಸ್ಕರ್ಟ್ ಹಾಕಿದ್ದಕ್ಕೆ ನಿನ್ನ ಜೊತೆ ಈ ರೀತಿ ಆಯ್ತು ಎಂದು ಹೇಳಿದ್ದರು ಎಂದು ರೂಪದರ್ಶಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

  • ಊಟ ಮಾಡಿದ ಬಿಲ್ ಕೇಳಿದ ರೆಸ್ಟೋರೆಂಟ್ ಮಾಲೀಕನನ್ನ ಥಳಿಸಿದ ಯುವಕರು

    ಊಟ ಮಾಡಿದ ಬಿಲ್ ಕೇಳಿದ ರೆಸ್ಟೋರೆಂಟ್ ಮಾಲೀಕನನ್ನ ಥಳಿಸಿದ ಯುವಕರು

    ನವದೆಹಲಿ: ಊಟ ಮಾಡಿದ್ದ ಬಿಲ್ ಕೇಳಿದ್ದ ರೆಸ್ಟೋರೆಂಟ್ ಮಾಲೀಕನ್ನು ಐವರು ಯುವಕರು ಥಳಿಸಿರುವ ಘಟನೆ ಪಾಂಡವ್ ನಗರದದಲ್ಲಿ ನಡೆದಿದೆ.

    ನಗರದ ಬಾಲ್‍ಗೋಪಾಲ್ ರೆಸ್ಟೋರೆಂಟ್ ಗೆ ಬಂದ ಯುವಕರು ಬಿಲ್ ಕೇಳಿದ್ದ ಮಾಲೀಕ ಹಾಗು ಸಿಬ್ಬಂದಿಯ ಮೇಲೆ ಖುರ್ಚಿಗಳಿಂದ ಹಲ್ಲೆ ನಡೆಸಿದ್ದಾರೆ. ಶನಿವಾರ ಘಟನೆ ನಡೆದಿದ್ದು, ಹಲ್ಲೆಯ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಯುವಕರು ರೆಸ್ಟೋರೆಂಟ್ ನಲ್ಲಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಕ್ರೌರ್ಯ ಮೆರೆದಿದ್ದಾರೆ.

    https://youtu.be/5gOlwPJjl9Q