Tag: Youths

  • ಮೈಸೂರಿನಲ್ಲಿ ಎರಡು ಕಡೆ ಮಾದರಿಯುತವಾಗಿ ಗೌರಿ, ಗಣೇಶ ಹಬ್ಬ ಆಚರಣೆ

    ಮೈಸೂರಿನಲ್ಲಿ ಎರಡು ಕಡೆ ಮಾದರಿಯುತವಾಗಿ ಗೌರಿ, ಗಣೇಶ ಹಬ್ಬ ಆಚರಣೆ

    ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಇಂದು ಎರಡು ಕಡೆಗಳಲ್ಲಿ ಮಾದರಿಯುತವಾಗಿ ಗೌರಿ – ಗಣೇಶ ಹಬ್ಬ ಆಚರಿಸಲಾಯಿತು. ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿ ಗೌರಿ ಹಬ್ಬ ಆಚರಿಸಿದರೆ, ಮತ್ತೊಂದು ಕಡೆ ಮುಸ್ಲಿಂ ಮತ್ತು ಹಿಂದೂ ಯುವಕರು ಜೊತೆಯಾಗಿ ಹಬ್ಬ ಆಚರಿಸಿದರು.

    ಇಂದು ಎಲ್ಲೆಡೆ ಗೌರಿ ಹಬ್ಬದ ಸಂಭ್ರಮ. ಮನೆಗಳಲ್ಲಿ ವಿಜೃಂಭಣೆಯಿಂದ ಹೆಣ್ಣು ಮಕ್ಕಳ ಹಬ್ಬ ಆಚರಿಸಿ ಸಂಭ್ರಮ ಪಡುತ್ತಿದ್ದಾರೆ. ಈ ನಡುವೆ ಮೈಸೂರಿನಲ್ಲಿ ಎಲ್ಲರಿಗೂ ಮಾದರಿ ಆಗುವ ರೀತಿಯಲ್ಲಿ ಹಬ್ಬ ಆಚರಿಸಲಾಗಿದೆ. ಪ್ರತಿ ನಿತ್ಯ ಮೈಸೂರಿನ ರಸ್ತೆಗಳ ಸ್ವಚ್ಛ ಮಾಡುವ ಮಹಿಳೆಯರಿಗೆ ಬಾಗಿನ ಅರ್ಪಿಸಿ ಹಬ್ಬ ಮಾಡಲಾಯಿತು. ಮತ್ತೊಂದು ಕಡೆ ಮುಸ್ಲಿಂ ಯುವಕರು ಹಿಂದೂ ಯುವಕರ ಜೊತೆಯಾಗಿ ಹಬ್ಬ ಆಚರಿಸಿ ಭಾವೈಕ್ಯಕ್ಕೆ ಸಂದೇಶ ಸಾರಿದರು.

    ಮೈಸೂರಿನ ಚಾಮುಂಡಿಪುರಂನ ಪಾರ್ಕ್ ನಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್ ಪೌರ ಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿದರು. ಸೀರೆ, ಹಣ್ಣು, ಎಲೆ, ಕಾಯಿ ಇಟ್ಟು ಪೌರಕಾರ್ಮಿಕರ ಮಹಿಳೆಯರಿಗೆ ಹಬ್ಬದ ಸಂಭ್ರಮ ಹಂಚಲಾಯಿತು.

    ಮೈಸೂರಿನ ಪ್ರಜ್ವಾವಂತ ಯುವಕರ ಒಕ್ಕೂಟದಿಂದ ಭಾವೈಕ್ಯತಾ ಹಬ್ಬ ಆಚರಿಸಲಾಯಿತು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಹಿಂದೂ- ಮುಸ್ಲಿಂ ಯುವಕರು ಜೊತೆಯಾಗಿ ಗೌರಿ- ಗಣೇಶನಿಗೆ ಪೂಜೆ ಸಲ್ಲಿಸಿ ಭಾವೈಕ್ಯತೆ ಸಂದೇಶ ಸಾರಿದರು.

    ಒಟ್ಟಾರೆ ಮೈಸೂರಿನಲ್ಲಿ ನಡೆದ ಈ ಎರಡು ಕಾರ್ಯಕ್ರಮಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರಿದವು. ಇಂತಹ ಆಚರಣೆಗಳು ಸಮಾಜದಲ್ಲಿ ಇನ್ನಷ್ಟು ಹೆಚ್ಚಾಗಬೇಕಿದೆ. ಆಗ ಮಾತ್ರ ಪೌರಕಾರ್ಮಿಕರನ್ನು ಕೀಳಾಗಿ ನೋಡುವ ಮನೋಭವ ನಿವಾರಣೆ ಆಗುತ್ತೆ. ಜೊತೆಗೆ ಧರ್ಮ ಧರ್ಮಗಳ ನಡುವಿನ ಸಂಘರ್ಷ ಕಡಮೆ ಆಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವಕರ ಜಾಲಿ ರೈಡ್ ಬೈಕ್ ಕ್ರೇಜ್‍ನಿಂದ ಪಾದಚಾರಿ ಜೀವಕ್ಕೆ ಕುತ್ತು

    ಯುವಕರ ಜಾಲಿ ರೈಡ್ ಬೈಕ್ ಕ್ರೇಜ್‍ನಿಂದ ಪಾದಚಾರಿ ಜೀವಕ್ಕೆ ಕುತ್ತು

    ಬೆಂಗಳೂರು: ವೀಕೆಂಡ್ ನಲ್ಲಿ ಮೋಜು ಮಸ್ತಿ ಮಾಡಲು ಬೆಂಗಳೂರು ನಗರದಿಂದ ಬರುವ ಯುವಕರ ಜಾಲಿ ರೈಡ್ ಬೈಕ್ ಕ್ರೇಜ್ ನಿಂದ ಪಾದಚಾರಿ ಜೀವಕ್ಕೆ ಕುತ್ತು ತಂದ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿ ನೆಲಮಂಗಲ-ಮಂಗಳೂರು 48ರ ಕುಡ್ಲೂರು ಬಳಿ ಈ ಘಟನೆ ನಡೆದಿದೆ. ಪಾದಚಾರಿ ಸಿದ್ದಪ್ಪಗೆ ಕೆ.ಟಿ.ಎಂ ಐಶರಾಮಿ ಹಾಗೂ ಹೈ ಸ್ಪೀಡ್ ಬೈಕ್ ಡಿಕ್ಕಿ ಹೊಡೆದಿದೆ.

    ಸದ್ಯ ಸಿದ್ದಪ್ಪ ಚಿಂತಾಜನಕ ಸ್ಥಿತಿಯಲ್ಲಿದ್ದು, ಸ್ಥಳಿಯ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಬೆಂಗಳೂರು ನಗರದಿಂದ ಸುಮಾರು 30 ಯುವಕರ ತಂಡ ಐಶಾರಾಮಿ ಬೈಕ್ ಗಳಲ್ಲಿ ಕುಣಿಗಲ್ ಮಾರ್ಗವಾಗಿ ಮೋಜು ಮಸ್ತಿನಲ್ಲಿ ಸುತ್ತಾಡುತ್ತಾರೆ ಈ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

    ಸದ್ಯ ಈ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಳಿಂಗ ಸರ್ಪ ಸೆರೆ ಹಿಡಿದು ಫೋಟೋಗೆ ಪೋಸ್- ಸರ್ಪದ ಜೊತೆ ಮಕ್ಕಳಾಟಕ್ಕೆ ಟೀಕೆ

    ಕಾಳಿಂಗ ಸರ್ಪ ಸೆರೆ ಹಿಡಿದು ಫೋಟೋಗೆ ಪೋಸ್- ಸರ್ಪದ ಜೊತೆ ಮಕ್ಕಳಾಟಕ್ಕೆ ಟೀಕೆ

    ಉಡುಪಿ: ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ನಾಲ್ಕೈದು ಜನ ಕೈಯಲ್ಲಿ ಹಿಡಿದು ಬಾಯಿಯನ್ನು ಮುಚ್ಚಿ ಪೋಸು ಕೊಟ್ಟು ಎಲ್ಲರ ಟೀಕೆಗೆ ಒಳಗಾಗಿದ್ದಾರೆ.

    ಕುಂದಾಪುರ ತಾಲೂಕಿನ ಇಡೂರು ಕುಜ್ಞಾಡಿ ಗ್ರಾಮದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಸ್ಥಳೀಯ ಗೋಪಾಲ ಅವರ ಮನೆಯಲ್ಲಿ ತಡರಾತ್ರಿ ಬಂದಿದ್ದ ಕಾಳಿಂಗ ಸರ್ಪ ಮನೆ ಮಂದಿಯಲ್ಲಿ ಭಯ ಹುಟ್ಟಿಸಿತ್ತು. ಸ್ಥಳೀಯರಿಗೆ ವಿಷಯ ತಿಳಿದು ಹಾವು ಹಿಡಿಯುವುದರಲ್ಲಿ ನಿಸ್ಸೀಮರಾಗಿದ್ದ ಶಂಕರ ಪೂಜಾರಿಯನ್ನು ಕರೆಸಿದ್ದಾರೆ.

    ಕೆಲ ಯುವಕರ ಜೊತೆ ಬಂದ ಶಂಕರ ಪೂಜಾರಿ ಹಾವು ಹಿಡಿಯಲು ಇಳಿದಿದ್ದಾರೆ. ಬಿಲದೊಳಗೆ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ಧೈರ್ಯದಿಂದ ಹಿಡಿದಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ತಾವು ಹಿಡಿದ ಈ ಭಾರೀ ಗಾತ್ರದ ವಿಷಕಾರಿ ಸರ್ಪವನ್ನು ಹಸ್ತಾಂತರಿಸಿದ್ದಾರೆ. ಈ ಮೂಲಕ ಗ್ರಾಮಸ್ಥರ ಆತಂಕ ದೂರ ಮಾಡಿದ್ದಾರೆ. ಮನೆಯವರ ಪ್ರಶಂಸೆಗೂ ಪಾತ್ರವಾಗಿದ್ದಾರೆ.

    ಆದರೆ ಹೆಬ್ಬಾವನ್ನು ಹಿಡಿಯುವಂತೆ ವಿಷಕಾರಿ ಕಾಳಿಂಗ ಸರ್ಪವನ್ನು ಹಿಡಿದು ಶಂಕರ ಪೂಜಾರಿ ಮತ್ತು ಗೆಳೆಯರು ಸಾವಿನ ಜೊತೆ ಸರಸವಾಡಿದ್ದಾರೆ ಎಂದು ಗ್ರಾಮದ ಹಿರಿಯರು ಆತಂಕಗೊಂಡಿದ್ದಾರೆ. ಕಾಳಿಂಗ ಕೆರಳಿದರೆ ದೊಡ್ಡ ಅನಾಹುತವಾಗುತ್ತಿತ್ತು. ಸರ್ಪದ ಜೊತೆ ಸರಸ ಮಾಡಬಾರದು ಎಂದು ಗ್ರಾಮಸ್ಥರು, ಅರಣ್ಯಾಧಿಕಾರಿಗಳು ಬುದ್ಧಿಮಾತು ಹೇಳಿದ್ದಾರೆ.

    ವಲಯ ಅರಣ್ಯಾಧಿಕಾರಿಗಳು ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯಕ್ಕೆ ಕಾಳಿಂಗ ಸರ್ಪವನ್ನು ಬಿಟ್ಟಿದ್ದಾರೆ. ಮುಂದೆ ಈ ರೀತಿ ಪ್ರಯೋಗ ಮಾಡದಿರಿ ಎಂದು ಕಿವಿಮಾತು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭೋರ್ಗರೆಯುತ್ತಿರುವ ನದಿಯಲ್ಲಿ ಹುಚ್ಚು ಸಾಹಸಗೈದು ಯುವಕರಿಂದ ಧ್ವಜಾರೋಹಣ!

    ಭೋರ್ಗರೆಯುತ್ತಿರುವ ನದಿಯಲ್ಲಿ ಹುಚ್ಚು ಸಾಹಸಗೈದು ಯುವಕರಿಂದ ಧ್ವಜಾರೋಹಣ!

    ಕೊಪ್ಪಳ: ಭೋರ್ಗರೆದು ಹರಿಯುತ್ತಿರುವ ನದಿಯಲ್ಲಿ ಹುಲಗಿ ಗ್ರಾಮದ ಯುವಕರು ಹುಚ್ಚು ಸಾಹಸ ಮಾಡಿ ಧ್ವಜವನ್ನು ಹಾರಿಸಿದ್ದಾರೆ.

    ಯುವಕರು ಅಪಾಯಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರ ನದಿಯಲ್ಲಿ ಈಜಿ, ನದಿಯ ಮಧ್ಯದಲ್ಲಿ ಕಲ್ಲುಗಳನ್ನು ಜೋಡಿಸಿ ಧ್ವಜವನ್ನು ನೆಟ್ಟಿದ್ದಾರೆ.

    ಈ ದೃಶ್ಯವನ್ನು ನೋಡುತ್ತಿದ್ದ ಗ್ರಾಮಸ್ಥರು ಸಾಹಸ ಮಾಡಲು ಹೋಗಬೇಡಿ ಎಂದು ಎಚ್ಚರಿಕೆ ನೀಡಿದ್ದರೂ ಯುವಕರು ನದಿಯ ಮಧ್ಯದಲ್ಲೇ ಧ್ವಜವನ್ನು ಹಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ರೀತಿ ಸಾಹಸ ಮಾಡಿ ದೇಶ ಪ್ರೇಮ ತೋರಿಸುವ ಅಗತ್ಯವಿಲ್ಲ. ಹೆಚ್ಚು ಕಡಿಮೆಯಾಗಿ ಪ್ರಾಣಕ್ಕೆ ಅಪಾಯ ಸಂಭವಿಸಿದರೆ ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ನೀವು ರಾಷ್ಟ್ರ ಧ್ವಜವನ್ನು ಹಾರಿಸದೇ ಇದ್ದರೂ ಬೇಸರವಿಲ್ಲ. ಆದರೆ ದಯವಿಟ್ಟು ಈ ರೀತಿಯ ಹುಚ್ಚು ಸಾಹಸವನ್ನು ಯಾರು ಮಾಡಲು ಹೋಗಬೇಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಾಭದ್ರ ನದಿಯು ಅಪಾಯದಮಟ್ಟವನ್ನು ಮೀರಿ ಹರಿಯುತ್ತಿದೆ. ಈಗಾಗಲೇ ತುಂಗಭದ್ರಾ ಜಲಾಶಯವು ಸಹ ತುಂಬಿದ್ದು, ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ಜಲಾಶಯ- ಅಪಾಯವನ್ನು ಲೆಕ್ಕಿಸದೆ ಯುವಕರ ಸೆಲ್ಫಿ ಕ್ರೇಜ್!

    ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ಜಲಾಶಯ- ಅಪಾಯವನ್ನು ಲೆಕ್ಕಿಸದೆ ಯುವಕರ ಸೆಲ್ಫಿ ಕ್ರೇಜ್!

    ಕೊಪ್ಪಳ: ಬಳ್ಳಾರಿ, ರಾಯಚೂರು ಜಿಲ್ಲೆಯ ಜೀವನಾಡಿಯಾದ ತುಂಗಭದ್ರಾ ಜಲಾಶಯ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಲಾಶಯದಿಂದ ಒಂದು ಲಕ್ಷ 59 ಸಾವಿರ ಕ್ಯೂಸೆಕ್ ನೀರು ಜಲಾಶಯದಿಂದ ಹರಿಯುತ್ತಿದೆ. ಆದರೆ ಯುವಕರು ಮಾತ್ರ ಅಪಾಯವನ್ನ ಲೆಕ್ಕಿಸದೆ ಸೆಲ್ಫಿ ಕಿಕ್ಕಿಸುವಲ್ಲಿ ತಲ್ಲೀನರಾಗಿದ್ದಾರೆ.

    ತುಂಗಭದ್ರಾ ಜಲಾಶಯದ ಸುಮಾರು ಐವತ್ತು ವರ್ಷದ ಹಳೆಯ ಬ್ರಿಡ್ಜ್ ಮೇಲೆ ಹರಿಯುವ ನೀರಿನಲಿ ಅಪಾಯವನ್ನು ಲೆಕ್ಕಿಸಿದೆ ಜನತೆ ಮೋಜು ಮಸ್ತಿ ಮಾಡುತ್ತಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ.

    ಹೀಗಿರುವಾಗ ಜನ ಹಳೆಯ ಬ್ರಿಡ್ಜ್ ಮೇಲೆ ನಿಂತು ಜನ ಫೋಟೋಗೆ ಪೋಸ್ ಕೊಡುತ್ತಾರೆ. ಭದ್ರತೆ ಇಲ್ಲದ ಕಾರಣ ಜಲಾಶಯ ನೋಡಲು ಬಂದ ಜನ ಅಪಾಯವನ್ನ ಲೆಕ್ಕಿಸದೆ ಎಂಜಾಯ್ ಮಾಡುತ್ತಿದಾರೆ. ಬ್ಯಾರಿಕೇಡ್ ಹಾಕಿದ್ದರೂ ಯಾವದೇ ಪೊಲೀಸರಿಲ್ಲದ ಕಾರಣ ಜನ ಮೋಜು ಮಸ್ತಿಯಲ್ಲಿ ತೊಡಗಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಪಾಯ ಸಂಭವಿಸೋ ಮುನ್ನ ಜಿಲ್ಲಾಡಳಿತ ಸೂಕ್ತ ಭದ್ರತೆ ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀರು ಹಿಡಿಯುವ ವಿಷಯಕ್ಕೆ ಮಹಿಳೆಯೊಂದಿಗೆ ಯುವಕರಿಂದ ಅಸಭ್ಯ ವರ್ತನೆ!

    ನೀರು ಹಿಡಿಯುವ ವಿಷಯಕ್ಕೆ ಮಹಿಳೆಯೊಂದಿಗೆ ಯುವಕರಿಂದ ಅಸಭ್ಯ ವರ್ತನೆ!

    ದಾವಣಗೆರೆ: ನೀರು ಹಿಡಿಯುವ ವಿಷಯಕ್ಕೆ ವಿವಾಹಿತ ಮಹಿಳೆಯೊಂದಿಗೆ ಗ್ರಾಮದ ಯುವಕರ ಗುಂಪೊಂದು ಅಸಭ್ಯವಾಗಿ ವರ್ತಿಸಿದ್ದಲ್ಲದೆ ಹಲ್ಲೆ ನಡೆಸಿದ ಘಟನೆ ದಾವಣಗೆರೆಯ ಚನ್ನಗಿರಿ ತಾಲೂಕಿನ ಹೀರೇ ಗಂಗೂರು ಗ್ರಾಮದಲ್ಲಿ ನಡೆದಿದೆ.

    ಹೀರೇ ಗಂಗೂರು ಗ್ರಾಮದಲ್ಲಿ ರಾತ್ರಿ ವೇಳೆ ಕುಡಿಯುವ ನೀರು ಬಿಡಲಾಗುತ್ತದೆ. ಜುಲೈ 3ರಂದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಅದೇ ಗ್ರಾಮದ ಶ್ವೇತಾ ಎನ್ನುವ ವಿವಾಹಿತ ಮಹಿಳೆ ನೀರು ಹಿಡಿಯಲು ಹೋಗಿದ್ದರು. ಈ ಸಂದರ್ಭದಲ್ಲಿ ಅದೇ ಗ್ರಾಮದ ಸೂರಪ್ಪ, ಶಿವು, ಮುದ್ದಪ್ಪ ಎನ್ನುವರು ಮದ್ಯ ಸೇವನೆ ಮಾಡಿ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಹಲ್ಲೆಯನ್ನು ಸಹ ಮಾಡಿದ್ದಾರೆ.

    ಈ ವಿಚಾರವಾಗಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಮಹಿಳೆಯ ಮನೆಗೆ ನುಗ್ಗಿ ಅವರ ಆತ್ತೆ ಗಂಡನ ಮೇಲೆಯೂ ಸಹ ಹಲ್ಲೆ ನಡೆಸಿದ್ದಾರೆ. ಇಷ್ಟಾದರೂ ಹಲ್ಲೆ ನಡೆಸಿದವರ ಮೇಲೆ ದೂರು ನೀಡಿದ್ರು ಸಹ ಪಿಎಸ್‍ಐ ವೀರಭಸಪ್ಪ ಕುಸುಲಾಫುರ್ ಮಾತ್ರ ಆರೋಪಿಗಳನ್ನು ಬಂಧಿಸದೇ, ದೂರು ನೀಡಿದ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಮಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಮಹಿಳೆ ಕುಟುಂಬಸ್ಥರು ಎಸ್‍ಪಿ ಕಚೇರಿಯ ಮೆಟ್ಟಿಲೇರಿದ್ದಾರೆ. ಅಲ್ಲದೆ ನಮಗೆ ಗ್ರಾಮದಲ್ಲಿ ರಕ್ಷಣೆ ಇಲ್ಲದಂತಾಗಿದೆ. ನಮ್ಮ ಮೇಲೆ ಹಲ್ಲೆ ನಡೆಸಿದವರು ಬಲಾಡ್ಯರಾಗಿದ್ದು, ರಾಜಕೀಯ ಮುಖಂಡರು ಇವರನ್ನು ರಕ್ಷಣೆ ಮಾಡುತ್ತಿದ್ದಾರೆ. ನಮಗೆ ಗ್ರಾಮದಲ್ಲಿ ಜೀವನ ನಡೆಸುವುದಕ್ಕೂ ಭಯವಾಗುತ್ತದೆ. ಪೊಲೀಸ್ ಅಧಿಕಾರಿಗಳು ತಮಗೆ ರಕ್ಷಣೆ ನೀಡುವಂತೆ ಮಹಿಳೆ ಹಾಗೂ ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ.

  • 100 ಅಡಿ ಸೇತುವೆಯಿಂದ ಜಿಗಿದು ಅರ್ಧ ಕಿ.ಮೀ ಈಜಿ ಯುವಕರಿಂದ ಕಾವೇರಿಗೆ ಬಾಗಿನ ಸಮರ್ಪಣೆ!

    100 ಅಡಿ ಸೇತುವೆಯಿಂದ ಜಿಗಿದು ಅರ್ಧ ಕಿ.ಮೀ ಈಜಿ ಯುವಕರಿಂದ ಕಾವೇರಿಗೆ ಬಾಗಿನ ಸಮರ್ಪಣೆ!

    ಮೈಸೂರು: ಜಲಾಶಯಗಳು ಭರ್ತಿಯಾದರೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸುವುದು ನೋಡಿದ್ದೇವೆ. ಆದರೆ ಮೈಸೂರು ಜಿಲ್ಲೆಯ ಒಂದು ಗ್ರಾಮದಲ್ಲಿ ಯುವಕರು ತುಂಬಿ ಹರಿಯುತ್ತಿರುವ ನದಿಗೆ ಜಿಗಿದು ಬಾಗಿನ ಸಮರ್ಪಣೆ ಮಾಡುವ ವಿಶಿಷ್ಟ ಆಚರಣೆ ರೂಢಿಸಿಕೊಂಡು ಬಂದಿದ್ದಾರೆ.

    ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಬನ್ನೂರಿನ ರಾಮಸಮುದ್ರ ಗ್ರಾಮದ ಯುವಕರು 100 ಅಡಿ ಎತ್ತರದ ಕಾವೇರಿ ಸೇತುವೆ ಮೇಲಿಂದ ಜಂಪ್ ಮಾಡಿ ಗಂಗಮ್ಮ ತಾಯಿ ಪೂಜೆ ನೆರವೇರಿಸಿದ್ದಾರೆ.

    ಪ್ರತಿಬಾರಿ ಕಾವೇರಿ ತುಂಬಿದಾಗ ರಂಗಸಮುದ್ರ ಗ್ರಾಮಸ್ಥರು ಸೇತುವೆಯಿಂದ ಜಿಗಿದು ಗಂಗಮ್ಮ ತಾಯಿಗೆ ಪೂಜೆ ಮಾಡಿ ಕಾವೇರಿಗೆ ಬಾಗಿನ ಅರ್ಪಿಸುತ್ತಾರೆ. ರಂಗಸಮುದ್ರ ಗ್ರಾಮದ ಯುವಕರಾದ ಹರ್ಷ ಗೌಡ, ಶಿವು ಗೌಡ ರಘು, ಯೋಗೆಶ್ ಮಲ್ಲೇಶ್ ಸೇರಿದಂತೆ ಹಲವಾರು ನೂರು ಅಡಿ ಸೇತುವೆಯಿಂದ ಕೆಳಗೆ ಜಿಗಿದು ಅರ್ಧ ಕಿಲೋಮೀಟರ್ ಈಜಿ ದಡ ಸೇರಿದರು.

    https://www.youtube.com/watch?v=-lceY-hLC_E

  • ಯುವತಿಯರನ್ನು ಚುಡಾಯಿಸಲು ಹೋಗಿ ಸಿಕ್ಕಿ ಬಿದ್ರು ಆರು ಯುವಕರು

    ಯುವತಿಯರನ್ನು ಚುಡಾಯಿಸಲು ಹೋಗಿ ಸಿಕ್ಕಿ ಬಿದ್ರು ಆರು ಯುವಕರು

    ಹುಬ್ಬಳ್ಳಿ: ಯುವತಿಯರನ್ನು ಚುಡಾಯಿಸುತ್ತಿದ್ದ ಆರು ಜನ ಯುವಕರನ್ನು ನಗರದ ಬೆಂಡಿಗೇರಿ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿಯ ಮೊಹಮ್ಮದ್ ಗೌಸ್ ಧಾರವಾಡ, ಸೊಹೇಲ್ ಅಹ್ಮದ್, ಅಖ್ತರ್ ರಜಾ ಶಿವಳ್ಳಿ, ದಾವಲಸಾಬ್, ರಿಜ್ವಾನ್, ಅಲ್ತಾಫ್ ಮಿಶ್ರಿಕೋಟಿ ಬಂಧಿತ ಯುವಕರು.

    ಬಂಧಿತ ಯುವಕರು ನಗರದಾದ್ಯಂತ ಸುತ್ತುತ್ತ ಕಾಲೇಜು, ಶಾಪಿಂಗ್ ಮಾಲ್ ಗಳಲ್ಲಿ ಯುವತಿಯರನ್ನು ಚುಡಾಯಿಸುತ್ತಿದ್ದರು. ಅಷ್ಟೇ ಅಲ್ಲದೆ ರಸ್ತೆ ವ್ಹೀಲಿಂಗ್ ಮಾಡುತ್ತ, ಚೀರಾಡುತ್ತಲೇ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಹೀಗಾಗಿ ಅವರನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಆದರೆ ಆರೋಪಿಗಳು ಪೊಲೀಸರನ್ನು ನೋಡುತ್ತಿದ್ದಂತೆ ಪರಾರಿಯಾಗುತ್ತಿದ್ದರು.

    ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್, ಡಿಸಿಪಿ ರೇಣುಕಾ ಸುಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು. ಬುಧವಾರ ಮಫ್ತಿ ವೇಷದಲ್ಲಿ ಮಹಿಳಾ ಪೊಲೀಸರು ನೆಹರೂ ಕಾಲೇಜು ಬಳಿ ಹೋಗಿದ್ದರು. ಈ ವೇಳೆ ಕಾಲೇಜಿನ ಹೊರಗೆ ನಿಂತಿದ್ದ 6 ಜನ ಆರೋಪಿಗಳು ಯುವತಿಯರನ್ನು ಚುಡಾಯಿಸುತ್ತಿದ್ದರು. ತಕ್ಷಣವೇ ಅವರನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ.

  • ಭಾರೀ ಮಳೆಯಿಂದ 15 ದಿನಗಳಿಂದ ಮರದಲ್ಲಿಯೇ ವಾಸ್ತವ್ಯ ಹೂಡಿದ ಕೋತಿಗಳು

    ಭಾರೀ ಮಳೆಯಿಂದ 15 ದಿನಗಳಿಂದ ಮರದಲ್ಲಿಯೇ ವಾಸ್ತವ್ಯ ಹೂಡಿದ ಕೋತಿಗಳು

    -ಆಹಾರ ನೀಡಿ ರಕ್ಷಣೆ ಮಾಡುತ್ತಿರುವ ಯುವಕರು

    ಕೊಪ್ಪಳ: ಮೂರು ಕೋತಿಗಳು ಕಳೆದ ಹದಿನೈದು ದಿನಗಳಿಂದ ಕೆಳಗಿಳಿಯಲಾಗದೆ ಒಂದೇ ಮರದಲ್ಲಿ ವಾಸ್ತವ್ಯ ಮಾಡುತ್ತಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆಯ ನೂತನ ತಾಲೂಕಿನ ಕುಕನೂರಿನ ಮುತ್ತಾಳ ಗ್ರಾಮದಲ್ಲಿ ಹದಿನೈದು ದಿನಗಳಿಂದ ಒಂದೇ ಮರದಲ್ಲಿ ಕೋತಿಗಳು ವಾಸ ಮಾಡುತ್ತಿವೆ. ಗ್ರಾಮದ ಸಮೀಪದ ಡ್ಯಾಂ ನಿಂದ ಹಿನ್ನೀರು ಬಂದ ಪರಿಣಾಮ ಕೋತಿಗಳು ಕೆಳಗಿಳಿಯಲಾಗದೆ ಮರದಲ್ಲಿ ವಾಸ ಮಾಡುತ್ತಿವೆ.

    ಕೋತಿಗಳು ಜಮೀನಿನಲ್ಲಿ ಬೆಳೆದ ಅಲಸಂದಿ ಬೆಳೆಯನ್ನು ತಿನ್ನಲು ಬಂದಿದೆ. ಆ ಸಂದರ್ಭದಲ್ಲಿ ಜೋರು ಮಳೆ ಆರಂಭವಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಕೋತಿಗಳು ಮರ ಏರಿವೆ. ಆದರೆ ಸುಮಾರು ನಾಲ್ಕು ತಾಸು ಮಳೆಯಾದ ಪರಿಣಾಮ ಜಮೀನಿನ ಸುತ್ತಲೂ ನೀರು ಆವರಿಸಿದೆ. ಹೀಗಾಗಿ ಕೋತಿಗಳು ಕೆಳಗಿಳಿಯಲು ಆಗುತ್ತಿಲ್ಲ.

    ಒಂದು ವಾರದ ಹಿಂದೆ ಮುತ್ತಾಳ ಗ್ರಾಮದ ಯುವಕರು ಮರದಲ್ಲಿ ಕೋತಿಗಳು ಇರೋದನ್ನು ಕಂಡಿದ್ದಾರೆ. ಹದಿನೈದು ದಿನಗಳಿಂದ ಕೋತಿಗಳಿಗೆ ಆಹಾರವೇ ಇರಲಿಲ್ಲ. ಯುವಕರು ಕೋತಿಗಳನ್ನು ಕಂಡು ಕೋತಿಗಳಿಗೆ ಆಹಾರ ಒದಗಿಸುತ್ತಿದ್ದಾರೆ.

    ನೀರಿನಲ್ಲಿ ತೆಪ್ಪದ ಮೂಲಕ ಮುತ್ತಾಳ ಗ್ರಾಮದ ಯುವಕರು ಸುಮಾರು ಒಂದು ಕಿಲೋ ಮೀಟರ್ ದೂರದಷ್ಟು ಹೋಗಿ ಬಾಳೆಹಣ್ಣುಗಳನ್ನು ಕೊಟ್ಟು ಬರುತ್ತಿದ್ದಾರೆ. ಹದಿನೈದು ದಿನಗಳಿಂದ ಮರದಲ್ಲಿ ಬೀಡು ಬಿಟ್ಟ ಕೋತಿಗಳನ್ನು ಗ್ರಾಮದ ಯುವಕರು ಆಹಾರ ನೀಡಿ ರಕ್ಷಣೆ ಮಾಡುತ್ತಿದ್ದಾರೆ. ನೀರಿನಲ್ಲಿ ಹರಸಾಹಸ ಮಾಡಿ ಕೋತಿಗಳಿಗೆ ಬಾಳೆ ಹಣ್ಣು ಇಟ್ಟು ಬರ್ತಿದ್ದಾರೆ.

    ಜನರನ್ನು ಕಂಡು ಬಾಳೆಹಣ್ಣು ಸ್ವೀಕರಿಸಲು ಕೋತಿಗಳು ಹಿಂದೇಟು ಹಾಕುತ್ತಿವೆ. ಹೀಗಾಗಿ ಯುವಕರು ಮರದಲ್ಲಿ ಹಣ್ಣುಗಳನ್ನು ಇಟ್ಟು ಬರುತ್ತಿದ್ದಾರೆ.

  • ಕುಡಿದ ನಶೆಯಲ್ಲಿ ಪೊಲೀಸ್ ಮಹಾನಿರ್ದೇಶಕರ ಮನೆಗೆ ಕಾರು ನುಗ್ಗಿಸಿದ ಯುವಕರು!

    ಕುಡಿದ ನಶೆಯಲ್ಲಿ ಪೊಲೀಸ್ ಮಹಾನಿರ್ದೇಶಕರ ಮನೆಗೆ ಕಾರು ನುಗ್ಗಿಸಿದ ಯುವಕರು!

    ಮೈಸೂರು: ಕುಡಿದ ಅಮಲಿನಲ್ಲಿ ಮೂವರು ಯುವಕರು ಕಾರು ಚಾಲನೆ ಮಾಡಿ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ವಿಫುಲ್ ಕುಮಾರ್ ಮನೆಗೆ ಕಾರು ನುಗ್ಗಿಸಿದ ಘಟನೆ ಮಂಗಳವಾರ ರಾತ್ರಿ ನಗರದಲ್ಲಿ ನಡೆದಿದೆ.

    ಕಾರು ನುಗ್ಗಿದ ಪರಿಣಾಮ ವಿಪುಲ್ ಕುಮಾರ್ ಅವರ ಸರ್ಕಾರಿ ಬಂಗಲೆಯ ಕಾಂಪೌಂಡ್ ನೆಲಸಮವಾಗಿದ್ದು, ಕಾರು ಭಾಗಶಃ ಜಖಂ ಆಗಿದೆ. ಮೈಸೂರಿನ ಗಾಂಧಿನಗರದ ನಿವಾಸಿಗಳಾದ ಮೂವರು ಯುವಕರು ರಾತ್ರಿ ಕಂಠ ಪೂರ್ತಿ ಕುಡಿದು ಗಾಂಧಿ ನಗರದಲ್ಲಿನ ತಮ್ಮ ನಿವಾಸಕ್ಕೆ ಹೋಗುತ್ತಿರುವಾಗ ವೇಗವಾಗಿ ಕಾರು ಚಾಲನೆ ಮಾಡಿ ಕಂಪೌಂಡ್ ಗೋಡೆಗೆ ಗುದ್ದಿದ್ದಾರೆ.

    ಕಾರಿನಲ್ಲಿದ್ದ ಯುವಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಮೂವರನ್ನು ನಜರ್ ಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ವೇಳೆ ಐಜಿಪಿ ವಿಪುಲ್ ಕುಮಾರ್ ಮನೆಯಲ್ಲಿಯೇ ಇದ್ದರು. ಭಾರೀ ಸದ್ದು ಕೇಳಿ ತಕ್ಷಣ ಮನೆಯಿಂದ ಹೊರಬಂದ ಅವರು ಘಟನೆ ಗಮನಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದರು.

    ಸದ್ಯ ನಜರ್‍ಬಾದ್ ಪೊಲೀಸರು ಮದ್ಯ ಮತ್ತು ಯುವಕರನ್ನು ವಶಕ್ಕೆ ಪಡೆದು ಕಾರು ಜಪ್ತಿ ಮಾಡಿದ್ದಾರೆ.