Tag: Youths

  • ಮ’ದ್ಯ’ಧ್ಯರಾತ್ರಿಯ ನಶೆಯಲ್ಲಿಯೇ ನಂದಿಬೆಟ್ಟಕ್ಕೆ ಯುವಕರ ಎಂಟ್ರಿ-ಸಿಬ್ಬಂದಿ ಜೊತೆ ಕಿರಿಕ್

    ಮ’ದ್ಯ’ಧ್ಯರಾತ್ರಿಯ ನಶೆಯಲ್ಲಿಯೇ ನಂದಿಬೆಟ್ಟಕ್ಕೆ ಯುವಕರ ಎಂಟ್ರಿ-ಸಿಬ್ಬಂದಿ ಜೊತೆ ಕಿರಿಕ್

    ಚಿಕ್ಕಬಳ್ಳಾಪುರ: ರಾತ್ರಿ ಕುಡಿದ ಮದ್ಯದ ಅಮಲು ಇಳಿಯದೆ ಕುಡುಕ ಯುವಕರು ನಂದಿಗಿರಿಧಾಮಕ್ಕೆ ಭೇಟಿ ನೀಡಿದ್ದಾರೆ.

    ಕುಡುಕ ಯುವಕರು ರಾತ್ರಿ ಕುಡಿದ ಅಮಲಿನಲ್ಲಿ ಮದ್ಯದ ಬಾಟಲಿ ಸಮೇತ ನಂದಿಗಿರಿಧಾಮಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಯುವಕರನ್ನು ನಂದಿಗಿರಿಧಾಮದ ಮುಖ್ಯದ್ವಾರದಲ್ಲೇ ವಶಕ್ಕೆ ಪಡೆದುಕೊಳ್ಳಲಾಯಿತು. ಕೆಲ ಯುವಕರು ಟಿಕೆಟ್ ಖರೀದಿ ಮಾಡದೆ ಒಳನುಗ್ಗಲು ಯತ್ನಿಸಿದ್ದಾರೆ. ನಶೆಯಲ್ಲಿದ್ದ ಯುವಕನಿಗೆ ಪ್ರವೇಶ ನಿರಾಕರಿಸಿದ್ದಕ್ಕೆ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾನೆ.

    ಹೊಸ ವರ್ಷದ ಹಿನ್ನೆಲೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ನಂದಿಗಿರಿಧಾಮದ ಸೌಂದರ್ಯ ಕಣ್ತುಂಬಿಕೊಳ್ಳೋಕೆ ಅಂತ ಪ್ರವಾಸಿಗರು ನಾ ಮುಂದು ತಾ ಮುಂದು ಮುಗಿಬಿದ್ದಿದ್ದಾರೆ. ಬೆಳಗ್ಗೆ 8 ಗಂಟೆಯವರೆಗೂ ಪ್ರವಾಸಿಗರ ಪ್ರವೇಶಕ್ಕೆ ಪೊಲೀಸ್ ಇಲಾಖೆ ನಿಷೇಧ ಹೇರಿತ್ತಾದರೂ ಪ್ರವಾಸಿಗರ ಒತ್ತಡದ ಹಿನ್ನೆಲೆಯಲ್ಲಿ 6 ಗಂಟೆ 30 ನಿಮಿಷಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.

    ಮಧ್ಯ ರಾತ್ರಿಯಿಂದಲೇ ನಂದಿಗಿರಿಧಾಮ ಪ್ರವೇಶಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಕಾದು ಕುಳಿತ್ತಿದ್ದು, ಬೆಳ್ಳಂ ಬೆಳಗ್ಗೆ ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಕೊಡಲೇ ಬೈಕ್ ಸವಾರರು ಕಾರು ಸವಾರರು ನಾ ಮುಂದು ತಾ ಮುಂದು ಅಂತ ನಂದಿಬೆಟ್ಟ ಏರಿದ್ದಾರೆ. ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲು ಸಾಲಾಗಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.

    ಅಲ್ಲದೇ ಹೊಸ ವರ್ಷದ ಪಾರ್ಟಿ ಅಮಲಿನಲ್ಲಿ ಕಾರ್ ಹಾಗೂ ಬೈಕ್ ಅಪಘಾತ ಸಂಭವಿಸಿದ್ದು, ರಸ್ತೆ ಮಧ್ಯದಲ್ಲಿಯೇ ವಾಹನಗಳನ್ನು ಬಿಟ್ಟು ಹೋದ ಘಟನೆ ನಂದಿಗಿರಿಧಾಮದ ಕಾರಹಳ್ಳಿ ಕ್ರಾಸ್ ಬಳಿ ನಡೆದಿದೆ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಕೋಡಾ ರ್ಯಾಪಿಟ್ ಕಾರ್ ಹಾಗೂ ಪಲ್ಸರ್ ಬೈಕ್ ನಡುವೆ ಅಪಘಾತ ಸಂಭವಿಸಿತು. ಅಪಘಾತದ ಬಳಿಕ ವಾಹನಗಳನ್ನು ರಸ್ತೆ ಮಧ್ಯದಲ್ಲಿ ಬಿಟ್ಟು ಚಾಲಕ ಹಾಗೂ ಸವಾರ ಪರಾರಿಯಾಗಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ, ಎಡಭಾಗದ ಡೋರ್ ಗೆ ಹೊಡೆತ ಬಿದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೋಟದ ಮನೆಯಲ್ಲಿ ಗಾಂಜಾ ಗಮ್ಮತ್ತು? ನಶೆಯಲ್ಲಿ ಯುವಕ-ಯುವತಿಯರ ತೇಲಾಟ!

    ತೋಟದ ಮನೆಯಲ್ಲಿ ಗಾಂಜಾ ಗಮ್ಮತ್ತು? ನಶೆಯಲ್ಲಿ ಯುವಕ-ಯುವತಿಯರ ತೇಲಾಟ!

    ಚಿಕ್ಕಬಳ್ಳಾಪುರ: ಜಿಲ್ಲೆಯ ಹನುಮಂತಪುರ ಗ್ರಾಮದ ತೋಟದ ಮನೆಯೊಂದರಲ್ಲಿ ಮದ್ಯದ ಪಾರ್ಟಿ ಜೋರಾಗಿ ನಡೆದಿದ್ದು, ಭಾಗಿಯಾಗಿದ್ದವರು ಗಾಂಜಾ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಬೆಂಗಳೂರಿನಿಂದ ಬಂದಿರುವ ಯುವಕ-ಯುವತಿಯರು ಮದ್ಯದ ಪಾರ್ಟಿ ಆಯೋಜನೆ ಮಾಡಿದ್ದು, ತೋಟದ ಮನೆಯ ಬಳಿ ಸುತ್ತಲೂ ರಾಶಿ ರಾಶಿ ಮದ್ಯದ ಬಾಟಲಿಗಳು ಬಿದ್ದಿವೆ. ಮದ್ಯದ ಪಾರ್ಟಿಯಲ್ಲಿ ಯುವಕ-ಯುವತಿಯರು ತೇಲಾಡುತ್ತಾ ನೃತ್ಯ ಮಾಡಿರುವ ವಿಡಿಯೋ ಈಗ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಯುವಕ-ಯುವತಿಯರು ನಶೆಯಲ್ಲಿ ತೇಲಾಡ್ತಾ ನೃತ್ಯ ಮಾಡಿದ್ದು, ಮದ್ಯದ ಜೊತೆ ಗಾಂಜಾ ಕೂಡ ಸೇವಿಸಿರಬಹುದು ಅನ್ನೋ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾಹಿತಿ ತಿಳಿದ ವೃತ್ತ ನಿರೀಕ್ಷಕ ಸುದರ್ಶನ್ ತೋಟದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ವೇಳೆ ತೋಟದ ಮಾಲೀಕ ಕೃಷ್ಣಪ್ಪ ನವರನ್ನು ವಿಚಾರಣೆ ನಡೆಸಿದ್ದು, ನಮ್ಮ ಅಣ್ಣನ ಮಕ್ಕಳಾದ ಇಬ್ಬರ ಯುವಕರ ಜೊತೆ ಅವರ ಸ್ನೇಹಿತರು ಗಿಡಮೂಲಿಕೆಗಳ ಬಗ್ಗೆ ರಿಸರ್ಚ್ ಮಾಡಲೆಂದು ತೋಟಕ್ಕೆ ಬಂದಿದ್ದರು. ಒಂದು ದಿನ ಮದ್ಯದ ಪಾರ್ಟಿ ಆಯೋಜನೆ ಮಾಡಿದ್ದರು. ಆದರೆ ಗಾಂಜಾ ಸೇವನೆ ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದರು. ಆದರೆ ಕೆಲ ಸ್ಥಳೀಯರ ಮಾಹಿತಿ ಪ್ರಕಾರ ವಿಕೇಂಡ್‍ಗಳಲ್ಲಿ ತೋಟದ ಮನೆಯಲ್ಲಿ ಮದ್ಯದ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿದೆ ಅಂತ ಹೇಳುತ್ತಿದ್ದಾರೆ. ಬೆಂಗಳೂರಿನಿಂದ ಬರುವ ಯುವಕ-ಯುವತಿಯರು ಕುಡಿದು ತೂರಾಡಿತ್ತುತ್ತಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.

    ಘಟನಾ ಸ್ಥಳದಲ್ಲಿ ರಾಶಿ ರಾಶಿ ಮದ್ಯದ ಬಾಟಲಿಗಳು ಪತ್ತೆಯಾಗಿರುವುದು ಪಾರ್ಟಿ ಆಯೋಜನೆ ಮಾಡಿರುವುದು ಧೃಡವಾಗುತ್ತಿದೆ. ಆದರೆ ಗಾಂಜಾ ಸೇವೆನೆ ಬಗ್ಗೆ ಧೃಡಪಟ್ಟಿಲ್ಲ. ಅಂತಹ ಯಾವುದೇ ಕುರುಹುಗಳು ಸ್ಥಳದಲ್ಲಿ ಪತ್ತೆಯಾಗಿಲ್ಲ. ಮುಂದೆ ಈ ರೀತಿಯ ಮದ್ಯದ ಪಾರ್ಟಿಗಳನ್ನು ಆಯೋಜನೆ ಮಾಡದಂತೆ ಸಿಪಿಐ ಸುದರ್ಶನ್ ತೋಟದ ಮಾಲೀಕ ಕೃಷ್ಣಪ್ಪಗೆ ತಾಕೀತು ಮಾಡಿದ್ದಾರೆ.

    ಬೆಟ್ಟ ಗುಡ್ಡಗಳ ಪಕ್ಕದಲ್ಲೇ ಇರುವ ತೋಟದಲ್ಲಿ ಮದ್ಯದ ಪಾರ್ಟಿಗಳು ಜೋರಾಗಿ ನಡೆದಿದ್ದು, ಈ ಭಾಗದಲ್ಲಿ ಚಿರತೆ ಸಹ ಇದೆಯಂತೆ. ಹೀಗಾಗಿ ಇಂತಹ ಸ್ಥಳಗಳಲ್ಲಿ ಮದ್ಯದ ಪಾರ್ಟಿ ಮಾಡಿ ಅನಾಹುತ ಸಂಭವಿಸಿದರೆ ಯಾರು ಹೊಣೆ ಅನ್ನೋ ಪ್ರಶ್ನೆ ಸಹ ಕಾಡುತ್ತೆ. ಹೀಗಾಗಿ ಪೊಲೀಸರು ಗಾಂಜಾ ಗಮ್ಮತ್ತು ನಡೆದಿದಿಯಾ ಅನ್ನೋ ಸತ್ಯ ಬಯಲಿಗೆ ತರುವುದರ ಜೊತೆಗೆ ಮುಂದೆ ಆಗಬಹುದಾದ ಅನಾಹುತಗಳಿಗೆ ಬ್ರೇಕ್ ಹಾಕಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೈಕ್ ಗಳ ಮುಖಾಮುಖಿ ಡಿಕ್ಕಿ-ನದಿ ಪಾಲಾದ ಯುವಕರು

    ಬೈಕ್ ಗಳ ಮುಖಾಮುಖಿ ಡಿಕ್ಕಿ-ನದಿ ಪಾಲಾದ ಯುವಕರು

    ಮಂಗಳೂರು: ಅತಿ ವೇಗವಾಗಿ ಬಂದ ಎರಡು ಬೈಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದು, ಇಬ್ಬರು ಯುವಕರು ಮೃತಪಟ್ಟ ಘಟನೆ ಕುಳೂರು ಸೇತುವೆ ಸಮೀಪದ ಕೆಳಗಡೆಯ ರಸ್ತೆಯಲ್ಲಿ ನಡೆದಿದೆ.

    ಮಂಗಳೂರಿನ ಆಕಾಶ್ ಭವನದ ನಿತಿನ್(21) ಹಾಗೂ ಕುಳೂರಿನ ವಿಜೇಶ್(22) ಮೃತ ಯುವಕರು. ಒಂದು ಬೈಕ್ ನದಿಗೆ, ಮತ್ತೊಂದು ರಸ್ತೆಯ ಮೇಲೆ ಬಿದ್ದಿದೆ. ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಬ್ಬರ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

    ಅಪಘಾತ ನಡೆದು ಇಬ್ಬರು ಬೈಕ್ ಸವಾರ ಯುವಕರು ಮತ್ತು ಒಂದು ಬೈಕ್ ನೀರಿಗೆ ಎಸೆಯಲ್ಪಟ್ಟಿದ್ದು, ಈ ವೇಳೆ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಕಾವೂರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜೊತೆಯಲ್ಲಿದ್ದ ಯುವತಿಯನ್ನು ಗುರಾಯಿಸಿದ್ದಕ್ಕೆ ಮಚ್ಚು, ವಿಕೆಟ್‍ನಿಂದ ಹಲ್ಲೆ

    ಜೊತೆಯಲ್ಲಿದ್ದ ಯುವತಿಯನ್ನು ಗುರಾಯಿಸಿದ್ದಕ್ಕೆ ಮಚ್ಚು, ವಿಕೆಟ್‍ನಿಂದ ಹಲ್ಲೆ

    ಮೈಸೂರು: ಯುವತಿಯನ್ನು ಗುರಾಯಿಸಿದ್ದಕ್ಕೆ ಮಚ್ಚು ಹಾಗೂ ವಿಕೆಟ್‍ನಿಂದ ಯುವಕರ ಗುಂಪೊಂದು ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಜಿಲ್ಲೆಯ ಉದಯಗಿರಿ ಆರ್.ಕೆ. ಪ್ಯಾಲೇಸ್ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ನಡು ರಸ್ತೆಯಲ್ಲೇ ಲಾಂಗ್ ಹಿಡಿದು ಗುಂಪು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿ ಜೊತೆ ಹೋಗುವ ವೇಳೆ ಗುರಾಯಿಸಿದ್ದ ಎನ್ನುವ ಒಂದೇ ಕಾರಣಕ್ಕೆ ನಡು ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾರೆ.

    ಯುವಕರ ಗುಂಪು ಯುವಕನ ಮೇಲೆ ಹಲ್ಲೆ ಮಾಡಿದ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆಗೆ ಒಳಗಾದ ಅಪರಿಚಿತ ಯುವಕನಿಗೆ ಗಂಭೀರ ಗಾಯವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕಲ್ಲು ಚಪ್ಪಡಿ ಹಾಕಿ, ದೊಣ್ಣೆಯಿಂದ ಬಾರಿಸ್ತಾರೆ- ಒಬ್ಬನ ಮೇಲೆ 6 ಪುಂಡರಿಂದ ಮೃಗೀಯ ವರ್ತನೆ

    ಕಲ್ಲು ಚಪ್ಪಡಿ ಹಾಕಿ, ದೊಣ್ಣೆಯಿಂದ ಬಾರಿಸ್ತಾರೆ- ಒಬ್ಬನ ಮೇಲೆ 6 ಪುಂಡರಿಂದ ಮೃಗೀಯ ವರ್ತನೆ

    ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಯುವನೋರ್ವನನ್ನು ಬಡಿಗೆಗಳಿಂದ ಮನಬಂದಂತೆ ಥಳಿಸಿರುವ ಘಟನೆ ಜಿಲ್ಲೆಯ ಜೇವರ್ಗಿ ಹೊರವಲಯದಲ್ಲಿ ಇತ್ತೀಚೆಗೆ ನಡೆದಿದ್ದು, ಹಲ್ಲೆ ಮಾಡುವ ಭಯಾನಕ ಎಕ್ಸ್ ಕ್ಲೂಸಿವ್ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭಿಸಿದೆ.

    ಗುರುಪಾದ ಹಲ್ಲೆಗೊಳಗಾದ ಯುವಕ. ಗುರುಪಾದ ಜೇವರ್ಗಿಯ ರೇವನೂರ ಗ್ರಾಮದ ನಿವಾಸಿಯಾಗಿದ್ದು, ಅದೇ ಗ್ರಾಮದ ಮಹಾತೇಂಶ್ ಹಾಗೂ ಆತನ ಗ್ಯಾಂಗ್ ಹಲ್ಲೆ ಮಾಡಿದ್ದಾರೆ. ಮಹಾತೇಂಶ್ ಹಗೂ ಆತನ ಗ್ಯಾಂಗ್ ಗುರುಪಾದ್ ಮೇಲೆ ಕಲ್ಲು ಚಪ್ಪಡಿ ಹಾಕಿ ದೊಣ್ಣೆಯಿಂದ ಕಂಡಕಂಡಲ್ಲಿ ಬಾರಿಸಿದ್ದಾರೆ. ಒಬ್ಬನ ಮೇಲೆ ಮೃಗಗಳ ರೀತಿಯಲ್ಲಿ ಆರು ಜನ ಪುಂಡರು ಮುಗಿಬಿದ್ದಿದ್ದಾರೆ.

    ಹಲ್ಲೆ ಮಾಡುವ ವಿಡಿಯೋವನ್ನು ಕಲಬುರಗಿಯ ರೌಡಿಗಳ ಗುಂಪಿನಲ್ಲಿ ಕಿಡಿಗೇಡಿಗಳು ಹರಿಬಿಟ್ಟು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಸದ್ಯ ಯುವಕನ ಹಲ್ಲೆ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

    ಯುವಕರು ಗುರುಪಾದ ಮೇಲೆ ಹಲ್ಲೆ ಮಾಡುವ ದೃಶ್ಯ ಕಂಡು ಕಲಬುರಗಿಯ ಹಿರಿಯ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಆದ್ರೆ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಾವು-ಬದುಕಿನ ಹೋರಾಟ ನಡೆಸ್ತಿದ್ದ ಹಸುವಿಗೆ ಯುವಕರಿಂದ ಸಹಾಯ

    ಸಾವು-ಬದುಕಿನ ಹೋರಾಟ ನಡೆಸ್ತಿದ್ದ ಹಸುವಿಗೆ ಯುವಕರಿಂದ ಸಹಾಯ

    ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಹಸುವೊಂದಕ್ಕೆ ಯುವಕರು ತಾತ್ಕಾಲಿಕ ಶೆಡ್ ನಿರ್ಮಿಸಿ ಚಿಕಿತ್ಸೆ ನೀಡಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ರೇಣುಕಾ ನಗರದಲ್ಲಿ ಅಪಘಾತಕ್ಕೀಡಾದ ಹಸುವೊಂದು ಮೇಲೇಳಲಾಗದೆ ನರಳುತ್ತಿತ್ತು. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂರು ದಿನಗಳಿಂದ ಹಸುವಿನ ಸ್ಥಿತಿ ಹೀಗೆ ಇದ್ದರೂ ಯಾರೋಬ್ಬರು ಕೂಡ ಹಸುವಿನ ನೆರವಿಗೆ ಮುಂದಾಗಿರಲಿಲ್ಲ.

    ಹಸುವಿನ ಮಾಲೀಕರು ಕೂಡ ಬಂದಿರಲಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ನಾಗರಾಜ್ ಭಟ್, ಅನ್ವರ್, ಜಾರ್ಜ್ ಹಾಗೂ ಸ್ಥಳೀಯ ಯುವಕರು ತಾತ್ಕಾಲಿಕ ಶೆಡ್ ನಿರ್ಮಿಸಿ ಹಸುವಿನ ಚಿಕಿತ್ಸೆ ನೀಡಿ, ಪಶು ವೈದ್ಯರಿಗೆ ವಿಷಯ ಮುಟ್ಟಿಸಿದ್ದಾರೆ.

    ಸದ್ಯ ಸ್ಥಳಕ್ಕೆ ಬಂದ ಪಶು ವೈದ್ಯರು ಹಸುವಿಗೆ ಚುಚ್ಚು ಮದ್ದು ನೀಡಿ, ಹಸುವನ್ನು ರಕ್ಷಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕ್ಷುಲ್ಲಕ ವಿಷಯಕ್ಕೆ ಜಗಳ- ಚಪ್ಪಲಿ ಧರಿಸಿ ದೇವಾಲಯ ಪ್ರವೇಶಿಸಿದ ಯುವಕರು

    ಕ್ಷುಲ್ಲಕ ವಿಷಯಕ್ಕೆ ಜಗಳ- ಚಪ್ಪಲಿ ಧರಿಸಿ ದೇವಾಲಯ ಪ್ರವೇಶಿಸಿದ ಯುವಕರು

    ಗದಗ: ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಅನ್ಯಕೋಮಿನ ಯುವಕರು ಹಾಗೂ ದೇವಸ್ಥಾನದ ಪೂಜಾರಿ ನಡುವೆ ಕ್ಷುಲ್ಲಕ ವಿಷಯಕ್ಕೆ ಮಾತಿನ ಜಗಳವಾಗಿದೆ.

    ಈ ವೇಳೆ ಅನ್ಯಕೋಮಿನ ಐದಾರು ಜನ ಯುವಕರು ಚಪ್ಪಲಿ ಧರಿಸಿಕೊಂಡು ಮಲ್ಲಿಕಾರ್ಜುನ ದೇವಸ್ಥಾನದೊಳಗೆ ನುಗ್ಗಿ ಪೂಜಾರಿ ಕರಿಬಸಪ್ಪನನ್ನು ಚಪ್ಪಲಿಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

    ಪೂಜಾರಿಗೆ ಚಪ್ಪಲಿಯಿಂದ ಹೊಡೆದಿರುವುದರಿಂದ ಅಪಚಾರವಾಗಿದೆ. ಶಾಸ್ತ್ರೋಕ್ತವಾಗಿ ಸರಿಪಡಿಸುವುಂತೆ ಸ್ಥಳೀಯ ಹಿರಿಯರು ಹಲ್ಲೆ ಮಾಡಿದ ಯುವಕರಿಗೆ ಎರಡು ದಿನ ಗಡುವು ನೀಡಿದರೂ ಸರಿಪಡಿಸಿಲ್ಲ. ಆದ್ದರಿಂದ ಹಲ್ಲೆ ಮಾಡಿರುವ ಯುವಕರನ್ನು ಬಂಧಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಊರಿನ ನೂರಾರು ಜನರು ರಾತ್ರೋರಾತ್ರಿ ಗದಗನ ಗ್ರಾಮೀಣ ಠಾಣೆಯ ಪೋಲಿಸರ ಮೊರೆ ಹೋಗಿದ್ದಾರೆ.

    ಈ ಹಿನ್ನೆಲೆಯಲ್ಲಿ ಊರಿನಲ್ಲಿ ಜರುಗಬೇಕಿದ್ದ ಮಲ್ಲಿಕಾರ್ಜುನ ದೇವರ ಜಾತ್ರೆ ನಿಂತು ಹೋಗಿದೆ. ಜಾತ್ರೆಯಲ್ಲಿ ಕರಿಬಸಪ್ಪನಿಗೆ ದೇವರು ಮೈಯಲ್ಲಿ ಬಂದು ಮಳೆ, ಬೆಳೆಗಳ ವಾಡಿಕೆ ಬಗ್ಗೆ ಈ ವರ್ಷ ಹೇಳದಿರುವುದು ಸಾಕಷ್ಟು ಆತಂಕ ಮೂಡಿದೆ. ಈ ಘಟನೆ ನಡೆಸಿರೋದು ನಮ್ಮ ಊರಿಗೆ ಅಪಚಾರವಾಗಿದೆ. ಊರಿಗೆ ಅನಾಹುತ ಕಾದಂತಿದೆ ಎಂದು ಸ್ಥಳೀಯ ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ನ್ಯಾಯ ಸಿಗದೆ ಹೋದರೆ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಿಳೆ ಬಹಿರ್ದೆಸೆಗೆ ಹೋದಾಗ ಇಬ್ಬರು ಯುವಕರಿಂದ ಅತ್ಯಾಚಾರ

    ಮಹಿಳೆ ಬಹಿರ್ದೆಸೆಗೆ ಹೋದಾಗ ಇಬ್ಬರು ಯುವಕರಿಂದ ಅತ್ಯಾಚಾರ

    ಗದಗ: ಮಹಿಳೆ ಮೇಲೆ ಯುವಕರು ಅತ್ಯಾಚಾರವೆಸಗಿದ ಘಟನೆ ಸೋಮವಾರ ಸಂಜೆ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಮಂಜುನಾಥ್(21) ಹಾಗೂ ರಂಗೇಶ್(21) ಅತ್ಯಾಚಾರವೆಸಗಿದ ಆರೋಪಿಗಳು. 45 ವರ್ಷದ ಮಹಿಳೆ ಮೇಲೆ 21 ವರ್ಷದ ಇಬ್ಬರು ಯುವಕರಿಂದ ಅತ್ಯಾಚಾರ ನಡೆಸಿದ್ದಾರೆ. ಮಹಿಳೆ ಜಮೀನಿನಲ್ಲಿ ಬಹಿರ್ದೆಸೆಗೆಂದು ಹೋದ ವೇಳೆ ಈ ಘಟನೆ ನಡೆದಿದೆ.

    ಮಂಜುನಾಥ್ ಹಾಗೂ ರಂಗೇಶ್ ಮಹಿಳೆಯನ್ನು ಜಮೀನಿನಲ್ಲಿ ಹೊತ್ತೊಯ್ದು ಅತ್ಯಾಚಾರ ಮಾಡಿರುವ ಆರೋಪ ಕೇಳಿಬರುತ್ತಿದೆ. ಅಲ್ಲದೇ ಅತ್ಯಾಚಾರವೆಸಗಿ ಕಾಮುಕ ಮಂಜುನಾಥ್ ಹಾಗೂ ರಂಗೇಶ್ ಪರಾರಿಯಾಗಿದ್ದಾರೆ. ಸಂತ್ರಸ್ತ ಮಹಿಳೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಕಾಮುಕರಿಗಾಗಿ ಗದಗ ಜಿಲ್ಲೆ ಶಿರಹಟ್ಟಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಜಾನ್ ವೇಳೆ ಗಣೇಶ ಮೆರವಣಿಗೆ ನಿಲ್ಲಿಸಿದ ಯುವಕರಿಗೆ ಪ್ರಶಂಸೆ: ವಿಡಿಯೋ ನೋಡಿ

    ಆಜಾನ್ ವೇಳೆ ಗಣೇಶ ಮೆರವಣಿಗೆ ನಿಲ್ಲಿಸಿದ ಯುವಕರಿಗೆ ಪ್ರಶಂಸೆ: ವಿಡಿಯೋ ನೋಡಿ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಆಜಾನ್ ಕೇಳಿದ್ದರಿಂದ ಯುವಕರು ಮೆರವಣಿಗೆಯನ್ನು ನಿಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಂಶಸೆಗೆ ಕಾರಣವಾಗಿದೆ.

    ಹೌದು, ಸಂಗಾಪೂರದ ವಿನಾಯಕ ಗೆಳೆಯರ ಬಳಗದ ಯುವಕರು ಅದ್ಧೂರಿಯಾಗಿ ಬುಧವಾರ ಗಣೇಶ ವಿಸರ್ಜನೆ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಮೆರವಣಿಗೆ ಸಾಗುತ್ತಿರುವಾಗ ಹತ್ತಿರದ ಮಸೀದಿಯಿಂದ ಆಜಾನ್ ಕೇಳಿಬಂದಿದೆ. ಆಜಾನ್ ಕೇಳಿದ ಕೂಡಲೇ ಯುವಕರು ಮೆರವಣಿಗೆಯನ್ನು ಸ್ವಲ್ಪ ಸಮಯದ ಕಾಲ ನಿಲ್ಲಿಸಿ ಬಳಿಕ ಮುಂದುವರಿಸಿದ್ದರು.

    ಯುವಕರು ಆಜಾನ್ ವೇಳೆ ಮೆರವಣಿಗೆಯನ್ನು ನಿಲ್ಲಿಸಿ ಗೌರವ ಸೂಚಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ವಿನಾಯಕ ಗೆಳೆಯರ ಬಳಗದ ಯುವಕರ ತಂಡಕ್ಕೆ ಜಾಲತಾಣಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಗಣೇಶ ಹಬ್ಬವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ ಎಂಬುದನ್ನು ಯುವಕರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹೀಗೆ ಹಲವರು ತಮ್ಮ-ತಮ್ಮ ಅಭಿಪ್ರಾಯಗಳನ್ನು ಫೇಸ್ಬುಕ್‍ಗಳಲ್ಲಿ ಹಂಚಿಕೊಂಡಿದ್ದಾರೆ.

    https://www.youtube.com/watch?v=KSo13tmCOgU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪುಗಳ ನಡುವೆ ಮಾತಿನ ಚಕಮಕಿ- ಪೊಲೀಸರಿಂದ ಲಾಠಿ ಚಾರ್ಜ್

    ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪುಗಳ ನಡುವೆ ಮಾತಿನ ಚಕಮಕಿ- ಪೊಲೀಸರಿಂದ ಲಾಠಿ ಚಾರ್ಜ್

    ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೆಲ ಸಮಯ ಬಿಗುವಿನ ವಾತಾವರಣ ಉಂಟಾಗಿ ಪೆÇಲೀಸರು ಲಘು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಣ ಮಾಡಿದ ಘಟನೆ ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಬಳಿ ತಡರಾತ್ರಿ ನಡೆದಿದೆ.

    ಗಣೇಶ ಪ್ರತಿಷ್ಠಾನೆ ಸಲುವಾಗಿ ಡಿಜೆ ಹಚ್ಚಿ ಭಾರೀ ಮೆರವಣಿಗೆ ಮಾಡಲಾಗುತಿತ್ತು. ಒಬ್ಬ ಯುವಕ ಇನ್ನೊಬ್ಬ ಯುವಕನಿಗೆ ಕಾಲು ತಾಗಿದೆ. ಇದೇ ನೆಪದಿಂದ ಕಾಲು ತಾಗಿದ ಯುವಕ ಸ್ನೇಹಿತರು ಕಾಲು ತಾಗಿಸಿದ ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.

    ಆಗ ಇಬ್ಬರೂ ಯುವಕರ ಕಡೆಯವರು ಪರಸ್ಪರ ಮಾತಿನ ಚಕಮಕಿ ನಡೆದು ಗಲಾಟೆ ಉಂಟಾಗಿ ಕೆಲ ಸಮಯ ವಾತಾವರಣ ತ್ವೇಷಮಯದಿಂದ ಕೂಡಿತ್ತು. ತಕ್ಷಣ ಪೊಲೀಸರು ಮಧ್ಯೆ ಪ್ರವೇಶ ಮಾಡಿ ಲಘು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಹಬದಿಗೆ ತಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv