Tag: Youths

  • ಎರಡು ತಲೆ ಹಾವೆಂದು ಜನರನ್ನು ಯಾಮಾರಿಸ್ತಿದ್ದ ಯುವಕರ ಬಂಧನ

    ಎರಡು ತಲೆ ಹಾವೆಂದು ಜನರನ್ನು ಯಾಮಾರಿಸ್ತಿದ್ದ ಯುವಕರ ಬಂಧನ

    ಮೈಸೂರು: ಒಂದು ತಲೆಯ ಹಾವನ್ನು ಎರಡು ತಲೆ ಹಾವು ಎಂದು ಜನರನ್ನು ನಂಬಿಸಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದ ನಾಲ್ವರು ಯುವಕರನ್ನು ಬಂಧಿಸಲಾಗಿದೆ.

    ಅರವಿಂದ್, ಕಾವೇರಪ್ಪ, ಸಿ.ಕೆ ಸೋಮಯ್ಯ ಹಾಗು ಅಭಿಷೇಕ್ ಬಂಧಿತ ಆರೋಪಿಗಳು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರಹೊಸನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಆರು ಜನರ ತಂಡ ಎರಡೂವರೆ ಅಡಿ ಉದ್ದದ ದಪ್ಪ ತಲೆಯ ಹಾವನ್ನು ಹಿಡಿದಿದ್ದಾರೆ.

    ಹಾವು ನೋಡುವುದಕ್ಕೆ ಎರಡು ತಲೆ ಇದ್ದಂತೆ ಕಾಣುತ್ತದೆ. ಹೀಗಾಗಿ ಜನರನ್ನು ಯಾಮಾರಿಸಿ ಮಾರಾಟ ಮಾಡಲು ಮುಂದಾಗಿದ್ದರು. ಹಾವನ್ನು ಮಾರಾಟ ಮಾಡಲು ರಸ್ತೆಯಲ್ಲಿ ನಿಂತಿದ್ದಾಗ ಹುಣಸೂರಿನ ಟೌನ್ ಠಾಣೆ ಪೊಲೀಸರು ಅನುಮಾನಗೊಂಡು ಯುವಕರನ್ನು ವಿಚಾರಿಸಿದ್ದಾರೆ. ಈ ವೇಳೆ ಪ್ರಕರಣ ಬಯಲಾಗಿದೆ.

    ತಕ್ಷಣ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿಸಿ ಮದ್ವೆಯಾದವನ ಮೇಲೆ ಯುವಕರಿಂದ ಮಾರಣಾಂತಿಕ ಹಲ್ಲೆ

    ಪ್ರೀತಿಸಿ ಮದ್ವೆಯಾದವನ ಮೇಲೆ ಯುವಕರಿಂದ ಮಾರಣಾಂತಿಕ ಹಲ್ಲೆ

    ಹುಬ್ಬಳ್ಳಿ: ಪ್ರೀತಿಸಿ ಮದುವೆಯಾದ ಪ್ರಿಯಕರನ ಮೇಲೆ ಯುವಕರು ಚಾಕು ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಾಗರಾಜ್ ಮಡಿವಾಳ ಹಲ್ಲೆಗೊಳಗಾದ ಪ್ರಿಯಕರ. ನಾಗರಾಜ್ ಹುಬ್ಬಳ್ಳಿಯ ಸೋನಿಯಾ ಗಾಂಧಿ ನಿವಾಸಿಯಾಗಿದ್ದು, ಸದರ ಸೋಪಾ ನಿವಾಸಿ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಈ ಮದುವೆಗೆ ಮೊದಲು ಎರಡು ಕುಟುಂಬವೂ ವಿರೋಧ ವ್ಯಕ್ತಪಡಿಸಿತ್ತು. ಆದರೆ ಮದುವೆಯಾದ ನಂತರ ಎರಡು ಕುಟುಂಬಗಳು ಪ್ರೇಮಿಗಳ ತಂಟೆಗೆ ಬಾರದೇ ಹೇಗಾದರೂ ಚೆನ್ನಾಗಿ ಇರಲಿ ಎಂದು ಕೈಬಿಟ್ಟರು.

    ಆದ್ರೆ ಇವರಿಬ್ಬರನ್ನು ಸಮಾಜ ದ್ವೇಷ ಮಾಡುತ್ತಿತ್ತು. ಭಾನುವಾರ ನಾಗರಾಜ್ ಮಡಿವಾಳರ ಸಲೀಂ ಹಾಗೂ ಬಾಬಾಜಾನ್ ಎನ್ನುವ ಯುವಕರು ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡ ನಾಗರಾಜ್ ಮಡಿವಾಳರ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

    ನಾಗರಾಜ್ ಮಡಿವಾಳರ ಈ ಹಿಂದೆ ಪ್ರಿಯತಮೆ ಇದ್ದ ಓಣಿಯಲ್ಲಿ ಮನೆಯೊಂದನ್ನು ಕಟ್ಟಿಸುತ್ತಿದ್ದಾನೆ. ಹೀಗಾಗಿ ಆ ಏರಿಯಾದ ಕೆಲವು ಪುಂಡರು ಹೇಗಾದರೂ ಮಾಡಿ ನಾಗರಾಜನಿಗೆ ಬುದ್ಧಿ ಕಲಿಸಬೇಕು ಎಂದು ಇಂತಹ ಕೃತ್ಯವನ್ನು ಮಾಡಿದ್ದಾರೆ. ನಾಗರಾಜ್ ನೀನು ಈ ಏರಿಯಾದಲ್ಲಿ ಮನೆ ಕಟ್ಟಿಸಬೇಡ ಎಂದು ಹಲವು ಬಾರಿ ಅವಾಜ್ ಹಾಕಿದ್ದಾರೆ. ಆದರೂ ಸಹ ನಾಗರಾಜ್ ಅದನ್ನು ಕಡೆಗಣಿಸಿದ್ದನು. ಭಾನುವಾರ ಮಾತನಾಡುತ್ತಾ ನಿಂತಾಗ ಸಲೀಂ ಹಾಗೂ ಬಾಬಾಜಾನ್ ಸೇರಿದಂತೆ ಹಲವರು ಜಗಳ ತೆಗೆದು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

    ಈ ಸಂಬಂಧ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗುವಿಗೆ ಹಾಲುಣಿಸುವ ವೇಳೆ ಅಸಭ್ಯ ವರ್ತನೆ- ಬಟ್ಟೆ ಬಿಚ್ಚಿ ಯುವಕರಿಗೆ ಥಳಿಸಿದ ಸಾರ್ವಜನಿಕರು

    ಮಗುವಿಗೆ ಹಾಲುಣಿಸುವ ವೇಳೆ ಅಸಭ್ಯ ವರ್ತನೆ- ಬಟ್ಟೆ ಬಿಚ್ಚಿ ಯುವಕರಿಗೆ ಥಳಿಸಿದ ಸಾರ್ವಜನಿಕರು

    ಬೆಂಗಳೂರು: ಮಗುವಿಗೆ ಹಾಲು ಉಣಿಸುತ್ತಿದ್ದ ಮಹಿಳೆ ಜೊತೆ ಯುವಕರು ಅಸಭ್ಯವಾಗಿ ವರ್ತಿಸಿದ್ದಕ್ಕೆ ಸಾರ್ವಜನಿಕರು ಬಟ್ಟೆ ಬಿಚ್ಚಿ ಯುವಕರಿಗೆ ಥಳಿಸಿದ ಘಟನೆ ನೆಲಮಂಗಲ ಪಟ್ಟಣದ ರಾಜೀವ್ ಗಾಂಧಿ ನಗರದ ಬಳಿ ನಡೆದಿದೆ.

    ಮಗುವಿಗೆ ಹಾಲುಣಿಸುವ ವೇಳೆ ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನುವ ವಿಚಾರ ತಿಳಿದ ಸಾರ್ವಜನಿಕರು ಇಬ್ಬರು ಯುವಕರನ್ನು ಹಿಡಿದು ಅವರ ಬಟ್ಟೆ ಬಿಚ್ಚಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಥಳಿಸಿದ ವಿಷಯ ತಿಳಿದ ನೆಲಮಂಗಲ ಪಟ್ಟಣದ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸ್‍ನಲ್ಲಿದ್ದ ಯುವತಿಯನ್ನು ಕಿಚಾಯಿಸಿದ ಪುಂಡರು- ಓರ್ವ ಅರೆಸ್ಟ್

    ಬಸ್‍ನಲ್ಲಿದ್ದ ಯುವತಿಯನ್ನು ಕಿಚಾಯಿಸಿದ ಪುಂಡರು- ಓರ್ವ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. ಇಬ್ಬರು ಯುವಕರು ಬಸ್ ಹತ್ತಿದ್ದ ಯುವತಿಯನ್ನು ಫಾಲೋ ಮಾಡಿ ಚುಡಾಯಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

    ಇಬ್ಬರು ಯುವಕರು ಯುವತಿಯೊಬ್ಬಳನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ಬಳಿಕ ಆ ಯುವತಿ ಬಿಎಂಟಿಸಿ ಬಸ್ ಹತ್ತಿದ್ದರೂ ಆ ಇಬ್ಬರು ಯುವಕರು ಆಕೆಯನ್ನು ಬಿಡಲಿಲ್ಲ. ಬೆಂಗಳೂರಿನ ಇಂದಿರಾನಗರದದಿಂದ ಬೈಯ್ಯಪ್ಪನಲ್ಲಿವೆರಗೂ ಬಸ್ ಫಾಲೋ ಮಾಡಿ ಯುವತಿಯನ್ನು ಚೇಡಿಸಿದ್ದಾರೆ.

    ಯುವಕರು ತಮ್ಮ ಡಿಯೋ ಬೈಕಿನಲ್ಲಿ ಹೆಲ್ಮೆಟ್ ಧರಿಸದೇ ಬಿಎಂಟಿಸಿ ಬಸ್ ಅನ್ನು ಫಾಲೋ ಮಾಡಿದ್ದಾರೆ. ಬಸ್ ಚಲಿಸುತ್ತಿರುವಾಗಲೇ ಬಸ್‍ನ ಕಿಟಕಿ ಬಳಿ ಹೋಗಿ ಯುವಕರು ಯುವತಿಯನ್ನು ಚುಡಾಯಿಸಿದ್ದಾರೆ. ಇಬ್ಬರು ಪುಂಡರ ಕೃತ್ಯವನ್ನು ನೋಡಿದ ಪ್ರಯಾಣಿಕರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಇಬ್ಬರು ಪುಂಡ ಯುವಕರಲ್ಲಿ ಅರುಣ್ ಎಂಬಾತನನ್ನು ಬಂಧಿಸಿದ್ದಾರೆ.

    https://www.youtube.com/watch?v=fNpvVR8DCUw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹುಡುಗಿಗೆ ಮೆಸೇಜ್ ಮಾಡಿದಕ್ಕೆ ವಿದ್ಯಾರ್ಥಿಯಿಂದ ಚಾಕು ಇರಿತ

    ಹುಡುಗಿಗೆ ಮೆಸೇಜ್ ಮಾಡಿದಕ್ಕೆ ವಿದ್ಯಾರ್ಥಿಯಿಂದ ಚಾಕು ಇರಿತ

    ಬೆಂಗಳೂರು: ಯುವತಿಯ ವಿಚಾರಕ್ಕೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಕೊಲೆ ಮಾಡಿದ ಘಟನೆ ಇಂದು ಬೆಳಗ್ಗೆ ಸುಮಾರು 9.00ಗಂಟೆಗೆ ಬೆಂಗಳೂರಿನ ಎಂಟನೇ ಮೈಲಿಯ ಸೌಂದರ್ಯ ಪಿಯು ಕಾಲೇಜಿನಲ್ಲಿ ನಡೆದಿದೆ.

    ರಕ್ಷಿತ್ (18) ತನ್ನ ಸಹಪಾಠಿ ದಯಾಸಾಗರ್ (18)ನನ್ನು ಚಾಕುಯಿಂದ ಇರಿದು ಕೊಲೆ ಮಾಡಿದ್ದಾನೆ. ದಯಾಸಾಗರ್ ಹಾಗೂ ರಕ್ಷಿತ್ ಇಬ್ಬರು ಪಿಯುಸಿ ವಿದ್ಯಾರ್ಥಿಗಳಾಗಿದ್ದು, ಸೌಂದರ್ಯ ಕಾಲೇಜಿನಲ್ಲಿ ಓದುತ್ತಿದ್ದರು. ದಯಾಸಾಗರ್ ವಿದ್ಯಾರ್ಥಿನಿಯೊಬ್ಬಳಿಗೆ ಮೆಸೇಜ್ ಮಾಡುತ್ತಿದ್ದನು. ಈ ಬಗ್ಗೆ ರಕ್ಷಿತ್ ಹಲವು ಬಾರಿ ಗುಂಪು ಕಟ್ಟಿಕೊಂಡು ದಯಾಸಾಗರ್ ಗೆ ವಾರ್ನ್ ಕೂಡ ಮಾಡಿದ್ದನು.

    ಹುಡುಗಿ ವಿಚಾರಕ್ಕೆ ಇಬ್ಬರು ಕಾಲೇಜಿನಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ರಕ್ಷಿತ್ ಬ್ಯಾಗಿನಲ್ಲಿದ್ದ ಚಾಕು ತೆಗೆದು ದಯಾಸಾಗರ್ ಇರಿದಿದ್ದಾನೆ. ದಯಾಸಾಗರ್ ನನ್ನು ಸಹಪಾಠಿಗಳು ಹಾಗೂ ಅಧ್ಯಾಪಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತೀವ್ರ ರಕ್ತಸ್ರಾವ ಉಂಟಾಗಿ ದಯಾಸಾಗರ್ ಮೃತಪಟ್ಟಿದ್ದಾನೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಕ್ಷಿತ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೈವೇ ರಸ್ತೆಯಲ್ಲಿ KSRTC ಬಸ್‍ಗಳ ರೇಸ್- ಪೈಪೋಟಿಯಲ್ಲಿ ಹೋಗ್ತಿದ್ದ ಚಾಲಕರಿಗೆ ಯುವಕರಿಂದ ಕ್ಲಾಸ್

    ಹೈವೇ ರಸ್ತೆಯಲ್ಲಿ KSRTC ಬಸ್‍ಗಳ ರೇಸ್- ಪೈಪೋಟಿಯಲ್ಲಿ ಹೋಗ್ತಿದ್ದ ಚಾಲಕರಿಗೆ ಯುವಕರಿಂದ ಕ್ಲಾಸ್

    ದಾವಣಗೆರೆ: ಹೈವೇ ರಸ್ತೆಯಲ್ಲಿ ಕೆಎಸ್ಆರ್‌ಟಿಸಿ ಬಸ್ಸುಗಳೆರಡು ಪೈಪೋಟಿಯಲ್ಲಿ ರೇಸ್ ಮಾಡಿದ ಘಟನೆ ಜಿಲ್ಲೆಯ ಪಿಬಿ ರಸ್ತೆಯಲ್ಲಿ ನಡೆದಿದೆ.

    ದಾವಣಗೆರೆಯಿಂದ ಹರಿಹರಕ್ಕೆ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್‍ಗಳು ರೇಸ್‍ಗೆ ಇಳಿದಿದ್ದು, ಈ ಬಸ್ ಗಳ ಜೊತೆ ಹೋಗುತ್ತಿದ್ದ ಬೈಕ್ ಚಾಲಕರು ಹಾಗೂ ಮತ್ತಿತರ ವಾಹನ ಸವಾರರು ದಂಗಾಗಿ ಹೋಗಿದ್ದಾರೆ. ಈ ಎರಡು ಕೆಎಸ್ಆರ್‌ಟಿಸಿ ಬಸ್‍ಗಳು ದಾವಣಗೆರೆ ಡಿಪೋಗೆ ಸೇರಿದ್ದಾಗಿವೆ.

    ಚಾಲಕರಿಬ್ಬರು ಕೆಎಸ್ಆರ್‌ಟಿಸಿ ಬಸ್ ರೇಸ್ ಮಾಡುತ್ತಿರುವುದನ್ನು ನೋಡಿದ ಯುವಕರು ಚಾಲಕರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಗರ ಸಾರಿಗೆ ಬಸ್ ಚಾಲಕರು ಹಿಂದೆ ಮುಂದೆ ನೋಡದೆ ರೇಸ್ ನಲ್ಲಿ ತೊಡಗುತ್ತಿದ್ದು, ಈ ಯಮರೂಪಿ ಬಸ್‍ಗಳಿಗೆ ಅಮಾಯಕ ಜೀವಗಳು ಬಲಿಯಾಗುತ್ತಿವೆ.

    ಚಾಲಕರಿಗೆ ಕ್ಲಾಸ್ ತೆಗೆದುಕೊಂಡ ಗಿರೀಶ್ ಹಾಗೂ ಪ್ರಸನ್ನ ಎಂಬಿಬ್ಬರು ಯುವಕರು ರ‍್ಯಾಶ್ ಆಗಿ ಡ್ರೈವಿಂಗ್ ಮಾಡುವವರ ವಿರುದ್ಧ ಕೆಎಸ್ಆರ್‌ಟಿಸಿ ಡಿಸಿಯವರಿಗೆ ದೂರು ನೀಡಲು ಮುಂದಾಗಿದ್ದಾರೆ.

    https://www.youtube.com/watch?v=CbPyd2pBUOU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಡ್ಗಿ ಎಂದು ಸೆಕ್ಸ್‌ಗೆ ಕರೆದ – ನಿಜ ಗೊತ್ತಾದಾಗ ಪ್ರೈವೇಟ್ ಪಾರ್ಟ್ ಕತ್ತರಿಸಿದ

    ಹುಡ್ಗಿ ಎಂದು ಸೆಕ್ಸ್‌ಗೆ ಕರೆದ – ನಿಜ ಗೊತ್ತಾದಾಗ ಪ್ರೈವೇಟ್ ಪಾರ್ಟ್ ಕತ್ತರಿಸಿದ

    ರಾಯ್‍ಪುರ್: ಹುಡುಗಿ ಎಂದು ಸೆಕ್ಸ್‌ಗೆ ಕರೆದ ಇಬ್ಬರು ಯುವಕರು ಆಕೆ ತೃತೀಯ ಲಿಂಗಿ ಎಂದು ತಿಳಿಯುತ್ತಿದ್ದಂತೆ ಖಾಸಗಿ ಅಂಗವನ್ನು ಕತ್ತರಿಸಿ ಕೊಲೆ ಮಾಡಿದ ಘಟನೆ ಚಂಡಿಗಢದ ಬಲಾಂಪುರ್ ನ ಟಾಟಾಪಾನಿಯಲ್ಲಿ ನಡೆದಿದೆ.

    ಜೈಪ್ರಕಾಶ್ ಅಲಿಯಾಸ್ ಅಲ್ಕಾ(21) ಮೃತಪಟ್ಟ ತೃತೀಯ ಲಿಂಗಿ. ಸೌರಬ್ ಗುಪ್ತಾ ಹಾಗೂ ಆತನ ಸ್ನೇಹಿತ ಶಶಾಂಕ್ ಗುಪ್ತಾ ಕೊಲೆ ಮಾಡಿದ ಆರೋಪಿಗಳು. ಜೈಪ್ರಶಾಶ್ ವೇಶ್ಯೆ ಆಗಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ. ಜೈಪ್ರಕಾಶ್ ಹೆಣ್ಣಿನ ವೇಶದಲ್ಲಿದ್ದ ಕಾರಣ ಯುವಕರು ಆಕೆಯನ್ನು ಯುವತಿ ಎಂದು ತಿಳಿದು ಸೆಕ್ಸ್‌ಗೆ ಆಹ್ವಾನಿಸಿದ್ದಾರೆ.

    ಈ ಘಟನೆ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವೊಂದು ರಚಿಸಲಾಗಿತ್ತು. ಅಲ್ಲದೇ ಆರೋಪಿಗಳನ್ನು ಕಂಡು ಹಿಡಿಯಲು ಪೊಲೀಸರು ಜೈಪ್ರಕಾಶ್‍ನ ಮೊಬೈಲ್ ಪರಿಶೀಲಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಸೋಮವಾರ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಜೈಪ್ರಕಾಶ್ ಆರೋಪಿಗಳನ್ನು ಯುವತಿ ಎಂದು ಹೇಳಿ ಮೋಸ ಮಾಡಿದಲ್ಲದೇ ದೈಹಿಕ ಸಂಬಂಧ ಬೆಳೆಸಲು ಹಣವನ್ನು ನೀಡಲು ಬೇಡಿಕೆಯಿಟ್ಟಿದ್ದನು. ಇದರಿಂದ ಕೋಪಗೊಂಡು ನಾವು ಜೈಪ್ರಕಾಶ್‍ನನ್ನು ಕೊಲೆ ಮಾಡಿದ್ದೇವೆ ಎಂದು ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದಾರೆ.

    ಜೈಪ್ರಕಾಶ್ ಯುವತಿ ಎಂದು ಹೇಳಿ ತಮಗೆ ಮೋಸ ಮಾಡಿದ್ದಾಳೆ. ಹೀಗಾಗಿ ಕುಡಿದ ಮತ್ತಿನಲ್ಲಿ ನಾವು ತೃತೀಯ ಲಿಂಗಿಯನ್ನು ಕೊಲೆ ಮಾಡಿದ್ದೇವೆ. ಮೊದಲು ಜೈಪ್ರಕಾಶ್ ಮೇಲೆ ಹಲ್ಲೆ ನಡೆಸಿ ಬಳಿಕ ಆತನನ್ನು ಕಾಡಿಗೆ ಎಳೆದುಕೊಂಡು ಹೋಗಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದೇವೆ. ಅಲ್ಲದೇ ಜೈಪ್ರಕಾಶ್‍ನ ಖಾಸಗಿ ಅಂಗವನ್ನು ಕೂಡ ಕತ್ತರಿಸಿದ್ದೇವೆ ಎಂದು ಪೊಲೀಸ್ ವಿಚಾರಣೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಇಬ್ಬರು ಆರೋಪಿಗಳಲ್ಲಿ ಒಬ್ಬ ಈಗಾಗಲೇ ಗ್ಯಾಂಗ್‍ರೇಪ್ ಎಸಗಿದ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದನು ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಧ್ಯರಾತ್ರಿ ಒಂದೇ ರಸ್ತೆಯಲ್ಲಿ 2 ಬಾರಿ ಮಹಿಳೆ ಮೇಲೆ ಗ್ಯಾಂಗ್ ರೇಪ್

    ಮಧ್ಯರಾತ್ರಿ ಒಂದೇ ರಸ್ತೆಯಲ್ಲಿ 2 ಬಾರಿ ಮಹಿಳೆ ಮೇಲೆ ಗ್ಯಾಂಗ್ ರೇಪ್

    ಮುಂಬೈ: ಮಹಿಳೆಯೊಬ್ಬಳು ಒಂದೇ ರಸ್ತೆಯಲ್ಲಿ ಎರಡು ಬಾರಿ ಗ್ಯಾಂಗ್ ರೇಪ್‍ಗೆ ಒಳಗಾದ ಘಟನೆ ಜನವರಿ 16ರ ಮಧ್ಯರಾತ್ರಿ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ಸಂತ್ರಸ್ತ ಮಹಿಳೆ ವಿಧವೆ ಆಗಿದ್ದು, ಜನವರಿ 15ರಂದು ಕಾರ್ಯಕ್ರಮವೊಂದನ್ನು ಮುಗಿಸಿ ರಾತ್ರಿ 11.30ಕ್ಕೆ ಮನೆಗೆ ಹಿಂತಿರುಗುತ್ತಿದ್ದಳು. ಈ ವೇಳೆ 17, 19 ಹಾಗೂ 21 ವರ್ಷದ ಕಾಮುಕರು ಮಹಿಳೆಯನ್ನು ಯಾರೂ ಇಲ್ಲದ ಸ್ಥಳಕ್ಕೆ ಕರೆದುಕೊಂಡು ಹೋಗಿ ಒಬ್ಬರ ನಂತರ ಒಬ್ಬರು ಅತ್ಯಾಚಾರ ಮಾಡಿದ್ದಾರೆ. ಬಳಿಕ ಮೂವರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

    ಮೂವರು ಪರಾರಿ ಆಗುತ್ತಿದ್ದಂತೆ ಸಂತ್ರಸ್ತೆ ಅಲ್ಲಿಂದ ತನ್ನ ಮನೆಗೆ ಹಿಂತಿರುಗುತ್ತಿದ್ದಳು. ಈ ವೇಳೆ ಮೊದಲ ಬಾರಿ ಅತ್ಯಾಚಾರಗೊಳಗಾದ ಸ್ಥಳದಿಂದ ಒಂದು ಕಿ.ಮೀ ಹತ್ತಿರದಲ್ಲೇ ಇಬ್ಬರು ಕಾಮುಕರು ಆಕೆಯನ್ನು ತಡೆದಿದ್ದಾರೆ. 18 ಹಾಗೂ 21 ವರ್ಷದ ಯುವಕರು ಆಕೆಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಈ ವೇಳೆ ಮಹಿಳೆಯ ತಲೆಗೆ ಗಾಯವಾಗಿದೆ.

    ಮಹಿಳೆ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಮನೆಗೆ ತಲುಪಿ ನಿದ್ದೆಗೆ ಜಾರಿದ್ದಳು. ಮರುದಿನ ಎದ್ದ ಮೇಲೆ ಸಂತ್ರಸ್ತೆ ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾಳೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಶುಕ್ರವಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಬಳಿ ತಾವು ಮಹಿಳೆ ಮೇಲೆ ಅತ್ಯಾಚಾರ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

    ಪೊಲೀಸರು ಮೊದಲು ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದರು. ಸೋಮವಾರ ಆರೋಪಿಗಳು ತಾವು ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಅಪ್ರಾಪ್ತ ಬಾಲಕ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮ್ಮ ಶಾಸಕರನ್ನು ಹುಡುಕಿಕೊಡಿ – ಎಸ್ ಪಿ   ಕಚೇರಿಗೆ ಬಂದ ಹಾಸನ ಯುವಕರು

    ನಮ್ಮ ಶಾಸಕರನ್ನು ಹುಡುಕಿಕೊಡಿ – ಎಸ್ ಪಿ ಕಚೇರಿಗೆ ಬಂದ ಹಾಸನ ಯುವಕರು

    ಹಾಸನ: ಹಾಸನ ಕ್ಷೇತ್ರದ ಬಿಜೆಪಿ ಶಾಸಕರಾದ ಪ್ರೀತಂ ಜೆ ಗೌಡ ಅವರು ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಿ ಅಂತ ಯುವಕರ ತಂಡವೊಂದು ಮನವಿ ಮಾಡಿದೆ.

    ಆಪರೇಷನ್ ಕಮಲಕ್ಕಾಗಿ ರೆಸಾರ್ಟ್ ರಾಜಕೀಯ ಮಾಡಿಕೊಂಡು ಶಾಸಕರು ಕಾಣ್ಮರೆಯಾಗಿದ್ದಾರೆ. ಗುರುಗ್ರಾಮದಲ್ಲಿ ಬಿಜೆಪಿ ಶಾಸಕರನ್ನು ಪಕ್ಷದ ಮುಖಂಡರು ರೆಸಾರ್ಟ್‍ನಲ್ಲಿ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅವರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ನಮಗೆ ಸ್ಪಂದಿಸಬೇಕಾದ ಶಾಸಕರು ಕಾಣೆಯಾದರೆ ನಾವೇನು ಮಾಡಬೇಕು ಅಂತ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿ, ಜನರಿಗಾಗಿ ಕೆಲಸ ಮಾಡಲಿ ಅಂತ ಶಾಸಕರನ್ನು ಆರಿಸಿದ್ದೇವೆ. ಆದ್ರೆ ನಮ್ಮ ಕುಂದು ಕೊರತೆ ಹೇಳಿಕೊಳ್ಳಲು ಶಾಸಕರು ಸಿಗುತ್ತಿಲ್ಲ. ಹತ್ತು ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಕಾಣೆಯಾಗಿದ್ದಾರೆ. ಅವರು ದೂರದ ಊರಲ್ಲಿ ರೆಸಾರ್ಟಿನಲ್ಲಿ ಕುಳಿತುಕೊಂಡರೆ ಜನರಿಗಾಗಿ ಕೆಲಸ ಮಾಡುವವರು ಯಾರು? ಹೀಗಾಗಿ ಅವರನ್ನು ಹುಡುಕಿಕೊಡಿ ಅಂತ ದೂರು ನೀಡಲು ಈಗ ಎಸ್ ಪಿ ಕಚೇರಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷಕ್ಕೆ ಯುವಕರಿಂದ ಕ್ಯಾಂಡಲ್ ಮಾರ್ಚ್

    ಹೊಸ ವರ್ಷಕ್ಕೆ ಯುವಕರಿಂದ ಕ್ಯಾಂಡಲ್ ಮಾರ್ಚ್

    ಬೆಳಗಾವಿ (ಚಿಕ್ಕೋಡಿ): ಅಥಣಿ ಪಟ್ಟಣದ ಜನತೆ ಕ್ಯಾಂಡಲ್ ಮಾರ್ಚ್ ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

    ಹೊಸ ವರ್ಷ ಬಂದ್ರೆ ಸಾಕು ಪಾರ್ಟಿ ಮಾಡ್ಕೊಂಡು, ಮೋಜು ಮಸ್ತಿ ಅಂತ ಆಚರಿಸುವ ಯುವಕರೇ ಹೆಚ್ಚು. ಆದ್ರೆ ಅಥಣಿ ಪಟ್ಟಣದಲ್ಲಿ ಮಾತ್ರ ಯುವಕರು ಶಾಂತಿಯುತವಾಗಿ ಮೇಣದ ಬತ್ತಿ ಬೆಳಗಿಸಿ, ಮೆರವಣಿಗೆ ಹೋಗುವ ಮೂಲಕ ವಿಶಿಷ್ಠವಾಗಿ ಹೊಸ ವರ್ಷವನ್ನು ಆಚರಿಸಿದ್ದಾರೆ. ಹಾಗೆಯೇ ಈ ಅರ್ಥಪೂರ್ಣ ಆಚರಣೆಗೆ ಸ್ಥಳೀಯರು ಕೂಡ ಸಾಥ್ ನೀಡಿದ್ದು, ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ 20ಕ್ಕೂ ಹೆಚ್ಚು ಮಂದಿ ಕ್ಯಾಂಡಲ್ ಮಾರ್ಚ್ ನಡೆಸುವ ಮೂಲಕ ಮೋಜು ಮಸ್ತಿಯಿಂದ ಹೊರಗುಳಿದು ಶಾಂತಿಯುತವಾಗಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

    2018ರ ಸಾಲಿನಲ್ಲಿ ಕರ್ನಾಟಕದಲ್ಲಾದ ದುರಂತಗಳಿಂದ ಸಾವನ್ನಪ್ಪಿದ ಜನರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೇಣದ ಬತ್ತಿ ಹೊತ್ತಿಸಿ ಪ್ರಾರ್ಥಿಸಿದರು. ಕೊಡಗಿನಲ್ಲಾದ ಪ್ರವಾಹದಲ್ಲಿ ಮಡಿದವರಿಗೆ ಮತ್ತು ಸುಳ್ವಾಡಿ ದುರಂತ ಹಾಗೂ ಮಂಡ್ಯ ಬಸ್ ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸುವ ಮೂಲಕ ಹೊಸ ವರ್ಷದ ಆಚರಣೆಯನ್ನು ಅರ್ಥಪೂರ್ಣವಾಗಿ ಯುವಕರು ಆಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv