Tag: Youths

  • ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ – ಉಗ್ರ ನಾಯಕರ ಪೋಸ್ಟರ್ ಹಿಡಿದ ಕಿಡಿಗೇಡಿಗಳು

    ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ – ಉಗ್ರ ನಾಯಕರ ಪೋಸ್ಟರ್ ಹಿಡಿದ ಕಿಡಿಗೇಡಿಗಳು

    ಶ್ರೀನಗರ: ರಂಜಾನ್ ಹಬ್ಬದಂದೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ನಡೆದಿದ್ದು, ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಬೆಳ್ಳಂಬೆಳಗ್ಗೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

    ಭದ್ರತಾ ಪಡೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಕೆಲ ಭಧ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಲ್ಲದೆ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳು ಜೈಷ್-ಇ- ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಉಗ್ರ ಮಸೂದ್ ಅಜಾದ್ ಹಾಗೂ ಅಲ್-ಖೈದಾ ಉಗ್ರ ಸಂಘಟನೆಯ ಕಾಶ್ಮೀರ ವಿಭಾಗದ ಮುಖ್ಯಸ್ಥ ಉಗ್ರ ಝಾಕಿರ್ ಮೂಸನ ಪೋಸ್ಟರ್ ಮತ್ತು `ಮೂಸ ಆರ್ಮಿ’ ಎಂದು ಬರೆದ ಪೋಸ್ಟರ್ ಹಿಡಿದು ದುಷ್ಟತನ ಮೆರೆದಿದ್ದಾರೆ. ಹೀಗಾಗಿ ಭದ್ರತಾ ಪಡೆ ಹಾಗೂ ದುಷ್ಕರ್ಮಿಗಳ ನಡುವೆ ಘರ್ಷಣೆ ನಡೆದಿದೆ. ಇದನ್ನೂ ಓದಿ:ರಂಜಾನ್ ಹಬ್ಬದಂದು ಉಗ್ರರಿಂದ ಗುಂಡಿಕ್ಕಿ ಮಹಿಳೆಯ ಹತ್ಯೆ

    ನಡೆದಿದ್ದು ಏನು?
    ಪವಿತ್ರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಜಾಮೀಯ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಸೀದಿಯಿಂದ ಹೊರಬಂದ ಕೆಲ ಯುವಕರ ಗುಂಪು ಏಕಾಏಕಿ ಭದ್ರತಾ ಪಡೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಲು ಆರಂಭಿಸಿದ್ದಾರೆ. ಈ ವೇಳೆ ಟಿಯರ್ ಗ್ಯಾಸ್ ಅನ್ನು ಬಳಿಸಿ ಸಿಬ್ಬಂದಿ ಯುವಕರನ್ನು ಓಡಿಸಿದ್ದಾರೆ.

    ಹಾಗೆಯೇ ಉತ್ತರ ಕಾಶ್ಮೀರದಲ್ಲೂ ಕೂಡ ಇದೇ ರೀತಿ ಹಿಂಸಾಚಾರ ನಡೆದಿದೆ. ಬರಮುಲ್ಲಾ ಜಿಲ್ಲೆಯಲ್ಲಿ ಈದ್ ಪ್ರಾರ್ಥನೆ ಸಲ್ಲಿಸುವ ವೇಳೆ ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಯುವಕರ ಗುಂಪಿನ ನಡುವೆ ಗಲಾಟೆ ನಡೆದಿದೆ.

  • ವಿಕೆಂಡ್ ಮಸ್ತಿಯಲ್ಲಿ ವೀಲಿಂಗ್, ಸ್ಟಂಟ್ ಮಾಡ್ತಿದ್ದ 30 ಬೈಕ್‍ಗಳು ಜಪ್ತಿ

    ವಿಕೆಂಡ್ ಮಸ್ತಿಯಲ್ಲಿ ವೀಲಿಂಗ್, ಸ್ಟಂಟ್ ಮಾಡ್ತಿದ್ದ 30 ಬೈಕ್‍ಗಳು ಜಪ್ತಿ

    ಬೆಂಗಳೂರು: ಹೆಬ್ಬಾಳ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ವಿಕೆಂಡ್ ಮಸ್ತಿಯಲ್ಲಿ ವೀಲಿಂಗ್, ಸ್ಟಂಟ್ ಮಾಡುತ್ತಿದ್ದ ಮೂವತ್ತು ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ವಿಕೆಂಡ್ ಮಸ್ತಿ ಎಂದು ಯುವಕರು ಹೆಬ್ಬಾಳ, ಏರ್ ಪೊರ್ಟ್ ರೋಡ್ ನಾಗವಾರ ರಿಂಗ್ ರಸ್ತೆಯಲ್ಲಿ ವೀಲಿಂಗ್ ಹಾಗೂ ಸ್ಟಂಟ್ ಮಾಡುತ್ತಿದ್ದರು. ಹೀಗಾಗಿ ಹೆಬ್ಬಾಳ ಸಂಚಾರಿ ಪೊಲೀಸರು 30 ಬೈಕ್‍ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ಯುವಕರು ವೀಲಿಂಗ್ ಹಾಗೂ ಸ್ಟಂಟ್ ಮಾಡುತ್ತಿರುವುದನ್ನು ತಡೆಯಲು ಹೆಬ್ಬಾಳ ಸಂಚಾರಿ ಪೊಲೀಸರು ವಿಕೆಂಡ್‍ನಲ್ಲಿ ವಿಶೇಷ ಕಾರ್ಯಚಾರಣೆ ನಡೆಸಿದ್ದರು. ಬೈಕ್ ಸ್ಟಂಟ್ ಹಾಗೂ ವಿಲೀಂಗ್ ಮಾಡಲು ಕಾಲೇಜಿನ ಯುವಕರು ಬೈಕ್‍ಗಳನ್ನು ಮಾಡಿಫೈ ಮಾಡಿಸಿ ಸ್ಟಂಟ್ ಮಾಡುತ್ತಿದ್ದರು.

    ಪೊಲೀಸರು ಕಾರ್ಯಚರಣೆ ನಡೆಸಿದ್ದಾಗ ಬೈಕ್ ಸವಾರರು ಯಾವುದೇ ದಾಖಲಾತಿಗಳನ್ನು ಹೊಂದಿರಲಿಲ್ಲ. ಸದ್ಯ ಪೊಲೀಸರು ಬೈಕ್ ಜಪ್ತಿ ಪಡೆದುಕೊಂಡು ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬಾದಾಮಿ ಕೂಲ್ ಡ್ರಿಂಕ್ಸ್ ಕುಡಿದ ನಾಲ್ವರು ಅಸ್ವಸ್ಥ

    ಬಾದಾಮಿ ಕೂಲ್ ಡ್ರಿಂಕ್ಸ್ ಕುಡಿದ ನಾಲ್ವರು ಅಸ್ವಸ್ಥ

    ತುಮಕೂರು: ಅವಧಿ ಮೀರಿದ ಬಾದಾಮಿ ಕೂಲ್ ಡ್ರಿಂಕ್ಸ್ ಕುಡಿದು ನಾಲ್ವರು ಅಸ್ವಸ್ಥರಾಗಿರುವ ಘಟನೆ ತುಮಕೂರಿನ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ನಡೆದಿದೆ.

    ಯೋಗೇಶ್, ಆನಂದ್, ಕಿಶೋರ್ ಅಸ್ವಸ್ಥಗೊಂಡ ಯುವಕರು. ಯೋಗೇಶ್, ಆನಂದ್ ಹಾಗೂ ಕಿಶೋರ್ ಚೇಳೂರಿನ ವೆಂಕಟೇಶ್ವರ ಬೇಕರಿಯಲ್ಲಿ ಬಾದಾಮಿ ಕೂಲ್ ಡ್ರಿಂಕ್ಸ್ ಖರೀದಿಸಿದ್ದಾರೆ. ಆದರೆ ಈ ಕೂಲ್ ಡ್ರಿಂಕ್ಸ್‍ನ ಅವಧಿ ಮೀರಿದ್ದು ಅವರು ಗಮನಿಸಲಿಲ್ಲ.

    ಬಾದಾಮಿ ಡ್ರಿಂಕ್ಸ್ ಗಮನಿಸದೇ ಕುಡಿದ ಪರಿಣಾಮ ಅಸ್ವಸ್ಥಗೊಂಡಿದ್ದಾರೆ. ಬಾದಾಮಿ ಮಿಲ್ಕ್ ಕುಡಿಯುತ್ತಿದ್ದಂತೆ ಯುವಕರಿಗೆ ತಲೆ ಸುತ್ತು ಬಂದಿದೆ. ಅಲ್ಲದೆ ವಾಂತಿ ಕೂಡ ಮಾಡಿಕೊಂಡಿದ್ದಾರೆ. ಸದ್ಯ ಅಸ್ವಸ್ಥರು ಚೇಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಹಾವಿನ ಜೊತೆ ಟಿಕ್‍ಟಾಕ್ – ಇಬ್ಬರು ಯುವಕರು ಅರೆಸ್ಟ್

    ಹಾವಿನ ಜೊತೆ ಟಿಕ್‍ಟಾಕ್ – ಇಬ್ಬರು ಯುವಕರು ಅರೆಸ್ಟ್

    ಮುಂಬೈ: ಹಾವಿನ ಜೊತೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ಯುವಕರು ಕೈಯಲ್ಲಿ ಹಾವನ್ನು ಹಿಡಿದುಕೊಂಡು ಟಿಕ್‍ಟಾಕ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಯುವಕರು ಹಾವಿಗೆ ಮುತ್ತು ಕೊಟ್ಟಿದ್ದಾರೆ. ಅಲ್ಲದೆ ಕೈಯಲ್ಲಿ ಹಿಡಿದುಕೊಂಡು ಓಡಾಡಿದ್ದರು.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನ ಅರಣ್ಯ ವಿಭಾಗಕ್ಕೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಅರಣ್ಯ ವಿಭಾಗದ ಅಧಿಕಾರಿಗಳು ಇಬ್ಬರು ಯುವಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ವಿಡಿಯೋದಲ್ಲಿದ್ದ ಹಾವು ತುಂಬಾ ವಿಷಪೂರಿತ ಹಾವಾಗಿದ್ದು, ಕಚ್ಚಿದರೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. ಟಿಕ್‍ಟಾಕ್‍ನಲ್ಲಿ ಇಂತಹ ವಿಡಿಯೋ ಮಾಡುವವರ ಹೆಸರನ್ನು ನನಗೆ ಹೇಳಿ ಎಂದು ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಧಿಕಾರಿಗಳು ಇಬ್ಬರು ಯುವಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಈ ವಿಡಿಯೋ ಮಾಡುವುದಕ್ಕೆ ನಿಮಗೆ ಹಾವು ಸಿಕ್ಕಿದ್ದು ಎಲ್ಲಿ? ವಿಡಿಯೋ ಮಾಡಿದ ನಂತರ ಆ ಹಾವನ್ನು ಏನೂ ಮಾಡಿದ್ದೀರಿ ಪ್ರಶ್ನಿಸಿದ್ದಾರೆ.

    ಅಧಿಕಾರಿಗಳ ಪ್ರಶ್ನೆಗೆ ಯುವಕರು, ಭರತ್ ಕೇಣೆ ನಮಗೆ ಹಾವನ್ನು ಹಿಡಿಯಲು ಹೇಳಿಕೊಟ್ಟಿದ್ದನು ಎಂದು ಉತ್ತರಿಸಿದ್ದಾರೆ. ಕೆಲ ದಿನಗಳ ಹಿಂದೆ ಹಾವು ಕಡಿದು ಭರತ್ ಕೇಣೆ ಮೃತಪಟ್ಟಿದ್ದಾನೆ.

  • ಗಾಂಜಾ ಮತ್ತಿನಲ್ಲಿ ಇಬ್ಬರಿಗೆ ಚಾಕು ಇರಿದ ಯುವಕ!

    ಗಾಂಜಾ ಮತ್ತಿನಲ್ಲಿ ಇಬ್ಬರಿಗೆ ಚಾಕು ಇರಿದ ಯುವಕ!

    ಕೋಲಾರ: ಗಾಂಜಾ ಮತ್ತಿನಲ್ಲಿದ್ದ ಯುವಕನೊಬ್ಬ ಇಬ್ಬರಿಗೆ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಕೋಲಾರ ತಾಲೂಕಿನ ಗದ್ದೆಕಣ್ಣೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಗದ್ದೆಕಣ್ಣೂರು ಗ್ರಾಮದ ನಿವಾಸಿ ಕಿರಣ್ ಬಾಬು, ಅದೇ ಗ್ರಾಮದ ನಾಗೇಶ್ ಹಾಗೂ ನವೀನ್ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಂಜಾ ಮತ್ತಿನಲ್ಲಿ ಯುವಕ ಈ ಕೃತ್ಯವೆಸೆಗಿದ್ದಾನೆ. ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಜಗಳವಾಗಿದೆ. ಈ ವೇಳೆ ಮೊದಲೇ ಗಾಂಜಾದ ಮತ್ತಿನಲ್ಲಿ ಮುಳುಗಿದ್ದ ಕಿರಣ್ ಕೋಪಗೊಂಡಿದ್ದಾನೆ. ಬಳಿಕ ಏಕಾಏಕಿ ಚಾಕುವಿನಿಂದ ನಾಗೇಶ್ ಹಾಗೂ ನವೀನ್ ಮೇಲೆ ಹಲ್ಲೆ ಮಾಡಿದ್ದಾನೆ.

    ಸದ್ಯ ಹಲ್ಲೆಗೆ ಒಳಗಾದ ಯುವಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಆರೋಪಿ ಕಿರಣ್ ಬಾಬುನನ್ನು ಪೊಲೀಸರ ವಶಕ್ಕೆ ಪಡೆದಿದ್ದು, ಕೋಲಾರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

  • ಅಪಘಾತಕ್ಕೆ ಸಿಲುಕಿ ಒದ್ದಾಡಿದ ನವಿಲು- ಯುವಕರಿಂದ ರಕ್ಷಣೆ

    ಅಪಘಾತಕ್ಕೆ ಸಿಲುಕಿ ಒದ್ದಾಡಿದ ನವಿಲು- ಯುವಕರಿಂದ ರಕ್ಷಣೆ

    ದಾವಣಗೆರೆ: ವಾಹನ ಡಿಕ್ಕಿಯಾಗಿ ನವಿಲು ಗಂಭೀರ ಗಾಯಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಚೋಡು ಗ್ರಾಮದ ರಸ್ತೆಯಲ್ಲಿ ನಡೆದಿದೆ.

    ಗ್ರಾಮದ ಹೊರ ವಲಯದಲ್ಲಿ ನವಿಲು ರಸ್ತೆ ದಾಟುವಾಗ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಕಾಲಿಗೆ ಗಂಭೀರ ಗಾಯಗಳಾಗಿ ರಸ್ತೆಯಲ್ಲಿ ಒದ್ದಾಡುತ್ತಿತ್ತು. ಅದೇ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಯುವಕರ ತಂಡ, ನವಿಲು ನರಳಾಡುತ್ತಿರುವುದನ್ನು ಗಮನಿಸಿದ್ದಾರೆ.

    ಕೂಡಲೇ ಯುವಕರೆಲ್ಲರು ಕಾರಿನಿಂದ ಇಳಿದು ನವಿಲಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸರ ಸಹಾಯದಿಂದ ಗಾಯಗೊಂಡ ನವಿಲನ್ನು ಯುವಕರು ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

    ಯುವಕರ ಕಾರ್ಯಕ್ಕೆ ಬಿಳಚೋಡ್ ಪೊಲೀಸ್ ಠಾಣೆಯ ಪಿಎಸ್‍ಐ ಉಮೇಶ್ ಬಾಬು ಅಭಿನಂಧನೆ ಸಲ್ಲಿಸಿದರು.

  • ಶಂಕರ್ ನಾಗ್‍ರಂತೆ ಆ್ಯಕ್ಟಿಂಗ್ ಮಾಡಿ ಪೊಲೀಸ್ ಸಿಬ್ಬಂದಿಯಿಂದ ಯುವಕರಿಗೆ ಪ್ರಶಂಸೆ

    ಶಂಕರ್ ನಾಗ್‍ರಂತೆ ಆ್ಯಕ್ಟಿಂಗ್ ಮಾಡಿ ಪೊಲೀಸ್ ಸಿಬ್ಬಂದಿಯಿಂದ ಯುವಕರಿಗೆ ಪ್ರಶಂಸೆ

    ದಾವಣಗೆರೆ: ನಟ ಶಂಕರ್ ನಾಗ್ ರೀತಿ ನಟಿಸಿ ದಾವಣಗೆರೆ ಪೊಲೀಸ್ ಸಿಬ್ಬಂದಿ ಯುವಕರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ದಾವಣಗೆರೆಯ ವಿದ್ಯಾನಗರದ ರಾಘವೇಂದ್ರ, ರಾಜೇಶ್ ಹಾಗೂ ಪರಶುರಾಮ್ ಎಂಬವರಿಗೆ ಬ್ಯಾಗೊಂದು ಸಿಕ್ಕಿದೆ. ಯುವಕರು ಆ ಬ್ಯಾಗ್ ತೆರೆದು ನೋಡದೆ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದರು. ಹಾಗಾಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಕುಮಾರ್ ನಾಯ್ಕ್ ಮೂರು ಜನ ಯುವಕರಿಗೆ ವಿಭಿನ್ನ ರೀತಿಯಲ್ಲಿ ಪ್ರಶಂಸಿದ್ದಾರೆ.

    ಆಂಧ್ರ ಪ್ರದೇಶದ ಅನಂತಪುರಂನ ಶ್ರೀನಾಥ್, ಅಂಜನಾ ದಂಪತಿ ಆಟೋದಲ್ಲಿ ಬರುವಾಗ ತಮ್ಮ ಬ್ಯಾಗನ್ನು ಕಳೆದುಕೊಂಡಿದ್ದಾರೆ. ಬ್ಯಾಗಿನಲ್ಲಿ 1,30,000 ಮೌಲ್ಯದ 30 ಗ್ರಾಂ ಬಂಗಾರದ ಸರ ಹಾಗೂ 2,000 ನಗದು ಇತ್ತು. ಬಳಿಕ ದಂಪತಿ ಬ್ಯಾಗ್ ಕಳೆದಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಯುವಕರು ಪೊಲೀಸರಿಗೆ ಬ್ಯಾಗ್ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದನ್ನು ಕಂಡ ದಂಪತಿ ಭಾವುಕರಾದರು. ಅಲ್ಲದೆ ಯುವಕರ ಕಾರ್ಯಕ್ಕೆ ವಿದ್ಯಾನಗರ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸದ್ಯ ಹೆಡ್ ಕಾನ್ಸ್ ಸ್ಟೇಬಲ್ ಕುಮಾರ್ ನಾಯ್ಕ್ ನಟನೆಗೆ ಅಲ್ಲಿದ್ದ ಜನರು ಫುಲ್ ಫಿದಾ ಆಗಿದ್ದಾರೆ.

  • ಸಲಿಂಗ ಕಾಮ ಆರೋಪ- ದೈವ ಪಾತ್ರಿ ಕೂದಲು ಕತ್ತರಿಸಿ, ಹಲ್ಲೆ!

    ಸಲಿಂಗ ಕಾಮ ಆರೋಪ- ದೈವ ಪಾತ್ರಿ ಕೂದಲು ಕತ್ತರಿಸಿ, ಹಲ್ಲೆ!

    ಮಂಗಳೂರು: ಅನುಚಿತ ವರ್ತನೆ ತೋರಿದ ದೈವ ಪಾತ್ರಿಯೋರ್ವರ ಕೂದಲನ್ನು ಭಕ್ತರು ಬಲವಂತವಾಗಿ ಕತ್ತರಿಸಿ, ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನಡೆದಿದೆ.

    ದೈವ ಪಾತ್ರಿ ಲೋಕೇಶ್ ಪೂಜಾರಿ ಅವರ ಮೇಲೆ ಈ ದೌರ್ಜನ್ಯ ನಡೆದಿದ್ದು, ದೈವದ ನರ್ತನ ಸೇವೆ ನಡೆದ ಬಳಿಕ ಕೆಲವರು ಸೇರಿ ಈ ಹಲ್ಲೆ ನಡೆಸಿದ್ದಾರೆ. ದೈವ ಪಾತ್ರಿ ಲೊಕೇಶ್ ಅವರಿಗೆ ಜನರ ಗುಂಪೊಂದು ಪ್ರಶ್ನಿಸಿದ್ದು, ಕೈಯಲ್ಲಿನ ಖಡಗ ತೆಗೆಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಬಲವಂತವಾಗಿ ಪಾತ್ರಿಯ ತಲೆ ಕೂದಲನ್ನು ಕತ್ತರಿಸಿದ್ದಾರೆ. ಈ ನಡುವೆ ಹಿರಿಯರು ತಡೆಯಲು ಯತ್ನಿಸಿದರೂ ಯುವಕರ ಗುಂಪು ಲೋಕೇಶ್ ಮೇಲೆ ಹಲ್ಲೆ ನಡೆಸಿದೆ.

    ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದೈವ ಪಾತ್ರಿಗೆ ಅವಮಾನ ಮಾಡಿರೋ ಬಗ್ಗೆ ವಿರೋಧ ಕೇಳಿಬಂದಿದೆ. ಆದರೆ ಕೃತ್ಯ ಎಸಗಿದವರು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.

    ಲೋಕೇಶ್ ಪೂಜಾರಿ ವೃತ್ತಿಯಲ್ಲಿ ದೈವದ ಪಾತ್ರಿಯಾಗಿದ್ದರೂ, ಸಲಿಂಗ ಕಾಮ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಯುವಕರು ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ದೈವದ ಪಾತ್ರಿಗಳು ಇಂಥ ವರ್ತನೆ ತೋರಿದರೆ ಹೇಗೆ ಎನ್ನುವ ಆಕ್ರೋಶದಿಂದ ಯುವಕರು ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

  • ಟ್ರೆಂಡ್ ಆಗ್ತಿದೆ ಮುಖದ್ಮೇಲೆ ಜಿರಳೆ ಬಿಡೋ ಚಾಲೆಂಜ್!- ಎಲ್ಲಿ ನೋಡಿದ್ರು ಜಿರಳೆಯದ್ದೇ ಹವಾ

    ಟ್ರೆಂಡ್ ಆಗ್ತಿದೆ ಮುಖದ್ಮೇಲೆ ಜಿರಳೆ ಬಿಡೋ ಚಾಲೆಂಜ್!- ಎಲ್ಲಿ ನೋಡಿದ್ರು ಜಿರಳೆಯದ್ದೇ ಹವಾ

    ನವದೆಹಲಿ: ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವ ಪೀಳಿಗೆ ವಿಚಿತ್ರ ಚಾಲೆಂಜ್‍ಗಳನ್ನ ಮಾಡೋಡು ಕಾಮನ್ ಆಗಿಬಿಟ್ಟಿದೆ. ಈಗ ಜಿರಳೆಯನ್ನು ಮುಖದ ಮೇಲೆ ಬಿಟ್ಟುಕೊಂಡು ಸೆಲ್ಫಿ ಹಾಕುವ ಹೊಸ ಚಾಲೆಂಜ್ ಸಖತ್ ಸದ್ದು ಮಾಡುತ್ತಿದೆ.

    ಹೌದು, ಮನೆಯಲ್ಲಿ ಜಿರಳೆ ಕಂಡರೆ ಹಿಟ್ ಅಥವಾ ಬೇರೆ ಏನಾದರೂ ಔಷಧಿ ಹೊಡೆದು ಸಾಯಿಸುತ್ತಾರೆ. ಆದ್ರೆ ಈಗ ಕಾಕ್ರೋಚ್ ಚಾಲೆಂಜ್ ಎಂದು ಶುರುಮಾಡಿ ಜಿರಳೆಯನ್ನ ಮುಖದ ಮೇಲೆ ಬಿಟ್ಕೋತ್ತಿದ್ದಾರೆ. ಫೇಸ್‍ಬುಕ್‍ನಲ್ಲಿ ಅಲೆಕ್ಸ್ ಅಂಗ್ ಎಂಬಾತ ಶುರುಮಾಡಿದ ಜಿರಳೆ ಚಾಲೆಂಜ್ ಇದೀಗ ಫುಲ್ ಫೇಮಸ್ಸಾಗುತ್ತಿದೆ. ಮುಖದ ಮೇಲೆ ಜೀರಳೆ ಬಿಟ್ಟುಕೊಂಡು ಅದರ ಸೆಲ್ಫಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದೇ ಈ ಚಾಲೆಂಜ್‍ನ ವಿಶೇಷವಾಗಿದೆ.

    ಏ.20ರಂದು ಇದನ್ನು ಪೋಸ್ಟ್ ಮಾಡಿದ್ದ ಅಂಗ್ ನೀವು ಹೀಗೆ ಮಾಡಲು ಸಾಧ್ಯವೇ? ನೆಟ್ಟಿಗರನ್ನು ಎಂದು ಪ್ರಶ್ನೆ ಮಾಡಿದ್ದ. ಆದಾದ ಬಳಿಕ ಈ ಚಾಲೆಂಜ್ ವೈರಲ್ ಆಗಿದ್ದು, ಯುವ ಪೀಳಿಗೆ ಈ ಚಾಲೆಂಜ್‍ನನ್ನು ಸ್ವಿಕರಿಸಿದ್ದಾರೆ. ಅಲ್ಲದೆ ತಮ್ಮ ಮುಖದ ಮೇಲೆ ಜಿರಳೆ ಬಿಟ್ಟುಕೊಂಡು ಸೆಲ್ಫಿ ತಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

    ಈವರೆಗೆ ಅಲೆಕ್ಸ್ ಅಂಗ್ ಹಾಕಿದ್ದ ಜಿರಳೆ ಚಾಲೆಂಜ್ ಫೋಸ್ಟ್ ಅನ್ನು 18 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

  • ಕುಡಿದ ಮತ್ತಿನಲ್ಲಿ ಯುವಕರಿಬ್ಬರಿಗೆ ಪೊಲೀಸಪ್ಪನಿಂದ ಹಲ್ಲೆ

    ಕುಡಿದ ಮತ್ತಿನಲ್ಲಿ ಯುವಕರಿಬ್ಬರಿಗೆ ಪೊಲೀಸಪ್ಪನಿಂದ ಹಲ್ಲೆ

    ಹಾಸನ: ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿದ ಘಟನೆ ಹಾಸನದ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯಲ್ಲಿ ನಡೆದಿದೆ.

    ನಾಗೇಶ್ ಹಲ್ಲೆ ಮಾಡಿದ ಪೇದೆ. ನಾಗೇಶ್ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾತ್ರಿ 12.30ರ ವೇಳೆ ಬಸ್ ಕಾಯುತ್ತಿದ್ದ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ.

    ಮಂಗಳವಾರ ರಾತ್ರಿ ಸುಮಾರು 12.30ಕ್ಕೆ ಪ್ರೀತಿ ಫ್ಯಾಷನ್ ಅಂಗಡಿಯ ಇಬ್ಬರು ಯುವಕರು ಬಸ್‍ಗಾಗಿ ಕಾಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪೇದೆ ಸುಖಾಸುಮ್ಮನೆ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಪೇದೆ ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

    ಇಬ್ಬರು ಯುವಕರು ಅಂಗಡಿಯಲ್ಲಿ ಮಲಗಿ ನಂತರ ಬಸ್‍ಗೆ ಹೋಗುವಾಗ ಪೊಲೀಸ್ ಪೇದೆ ದರ್ಪ ತೋರಿದ್ದಾರೆ. ಕುಡುಕ ಪೇದೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶ ಹೆಚ್ಚಾಗುತ್ತಿದ್ದು, ಪೇದೆ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

    ಕಳೆದ ವಾರ ಚನ್ನರಾಯಪಟ್ಟಣ ಎಎಸ್‍ಐ ಒಬ್ಬರು ಬಟ್ಟೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿ ಸುದ್ದಿ ಆಗಿತ್ತು.