Tag: Youths

  • ಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದ ಯುವಕರಿಗೆ ಗ್ರಾಮಸ್ಥರಿಂದ ಥಳಿತ

    ಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದ ಯುವಕರಿಗೆ ಗ್ರಾಮಸ್ಥರಿಂದ ಥಳಿತ

    ಚಿಕ್ಕಬಳ್ಳಾಪುರ: ಗ್ರಾಮದಲ್ಲಿ ಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದ ಮೂವರು ಯುವಕರನ್ನು ಹಿಡಿದು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಹಳೇಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ.

    ನಾಲ್ವರು ಯುವಕರು ಗ್ರಾಮದ ಸುತ್ತಮುತ್ತ ಅನುಮಾನಸ್ಪದವಾಗಿ ಓಡಾಡುತ್ತಿದ್ದನ್ನು ಕಂಡ ಗ್ರಾಮಸ್ಥರು ಯುವಕರನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಗ್ರಾಮಸ್ಥರ ಪ್ರಶ್ನೆಗಳಿಗೆ ಸಮಪರ್ಕವಾಗಿ ಉತ್ತರಿಸದ ಯುವಕರ ಮೇಲೆ ಮತ್ತಷ್ಟು ಅನುಮಾನಗೊಂಡ ಗ್ರಾಮಸ್ಥರು ನಾಲ್ವರು ಯುವಕರಲ್ಲಿ ಮೂವರನ್ನು ಹಿಡಿದುಕೊಂಡಿದ್ದಾರೆ.

    ನಾಲ್ವರಲ್ಲಿ ಓರ್ವ ಪರಾರಿಯಾಗಿದ್ದು, ಉಳಿದವರನ್ನು ಥಳಿಸಿ ಪೇರೇಸಂದ್ರ ಹೊರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕರು ತಾವು ಖಾಸಗಿ ಎಂಟರ್ ಪ್ರೈಸರ್ಸ್ ಫೈನಾನ್ಸ್ ವ್ಯವಹಾರ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಇದನ್ನು ನಂಬಲು ಒಪ್ಪದ ಗ್ರಾಮಸ್ಥರು ಮೂವರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ವಿಚಿತ್ರವಾಗಿ ಹೇರ್ ಕಟ್ಟಿಂಗ್- ಯುವಕನಿಗೆ ದಂಡ ಹಾಕಿದ ಮುಸ್ಲಿಂ ಮುಖಂಡರು

    ವಿಚಿತ್ರವಾಗಿ ಹೇರ್ ಕಟ್ಟಿಂಗ್- ಯುವಕನಿಗೆ ದಂಡ ಹಾಕಿದ ಮುಸ್ಲಿಂ ಮುಖಂಡರು

    ಮಡಿಕೇರಿ: ವಿಚಿತ್ರವಾಗಿ ಕೂದಲು ಕತ್ತರಿಸಿದ್ದಕ್ಕೆ ಮುಸ್ಲಿಂ ಮುಖಂಡರು ಕೊಡಗಿನ ಯುವಕನಿಗೆ ದಂಡ ಹಾಕಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇಟೋಳಿ ಅಂಚೆ ಗುಂಡಿಕೆರೆ ಗ್ರಾಮದ ‘ಶಾಫಿ ಮುಸ್ಲಿಂ ಜಮಾಯತ್’ ಕೆಲವು ತಿಂಗಳಿಂದ ಗ್ರಾಮದ ಯುವಕರಿಗೆ ‘ಪರಿವರ್ತನೆಯ ಪಾಠ’ ಮಾಡುತ್ತಿದೆ. ಗ್ರಾಮದ ಬಹುತೇಕ ಯುವಕರಲ್ಲಿ ಶಿಸ್ತು ತಂದ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಈ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೊರ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ನಿಜಾಂ ಎಂಬ ಯುವಕ ವಿಚಿತ್ರವಾಗಿ ಕೇಶ ವಿನ್ಯಾಸ ಮಾಡಿಸಿಕೊಂಡು ಗ್ರಾಮದಲ್ಲಿ ಓಡಾಡುತ್ತಿದ್ದ. ಅದನ್ನು ಗಮನಿಸಿದ ಜಮಾಯತ್ ಸದಸ್ಯರು, ಆ ಯುವಕ ಹಾಗೂ ಅವರ ಪೋಷಕರನ್ನು ಕರೆಸಿ ಬುದ್ಧಿಮಾತು ಹೇಳಿದ್ದರು. ಅದಕ್ಕೂ ಕ್ಯಾರೆ ಎನ್ನದಿದ್ದಾಗ ದಂಡ ಪ್ರಯೋಗದ ಅಸ್ತ್ರ ಬಳಸಿದ್ದರು.

    ಜೂನ್ 21ರಂದು ದಂಡದ ಆದೇಶ ಹೊರಡಿಸಿದ್ದು, ಅದರಲ್ಲಿ `ನೀವು ಜಮಾಯತ್‍ನ ಸದಸ್ಯರಾಗಿದ್ದು ನಮ್ಮ ತೀರ್ಮಾನದ ವಿರುದ್ಧವಾಗಿ ತಲೆ ಕೂದಲು ಬೆಳೆಸಿರುವ ಕಾರಣಕ್ಕೆ 5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿತ್ತು.

    ಪತ್ರದಿಂದ ಹೆದರಿದ ನಿಜಾಂ ಸೇರಿದಂತೆ ಮೂವರು ಯುವಕರು ಭಾನುವಾರ ನಡೆದ ಆಡಳಿತ ಮಂಡಳಿ ಸಭೆಯ ಸ್ಥಳಕ್ಕೆ ಕೂದಲು ತೆಗೆಸಿ ಶಿಸ್ತಿನಿಂದ ಬಂದಿದ್ದರು ಎಂದು ಜಮಾಯತ್ ಸದಸ್ಯರು ತಿಳಿಸಿದರು. ಗುಂಡಿಗೆರೆ ಜಿಲ್ಲೆಯಲ್ಲಿ ಮಾದರಿ ಗ್ರಾಮ. ಎಲ್ಲ ಧರ್ಮದ ಜನರೂ ಇಲ್ಲಿ ನೆಲೆಸಿದ್ದಾರೆ. ಸೌಹಾರ್ದ ಮೂಡಿಸುವ ಉದ್ದೇಶದಿಂದ ಕೆಲವು ನಿಯಮಗಳನ್ನು ಪಾಲಿಸಲಾಗುತ್ತಿದೆ. ಅದಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿದೆ. ಮಾದರಿ ಜಮಾಯತ್ ಆಗಿಯೂ ರೂಪುಗೊಂಡಿದೆ.

  • ಕೆಸರು ಗದ್ದೆಯಲ್ಲಿ ಆಡಿ, ಕುಣಿದಾಡಿ ಮಿಂದೆದ್ದ ಯುವಕ- ಯುವತಿಯರು

    ಕೆಸರು ಗದ್ದೆಯಲ್ಲಿ ಆಡಿ, ಕುಣಿದಾಡಿ ಮಿಂದೆದ್ದ ಯುವಕ- ಯುವತಿಯರು

    ಮಂಗಳೂರು: ಮಕ್ಕಳು, ಯುವಕ- ಯುವತಿಯರೆಲ್ಲ ಸೇರಿ ಗದ್ದೆಯ ಕೆಸರು ನೀರಿನಲ್ಲಿ ಆಡಿ, ಕುಣಿದಾಡಿದ ದೃಶ್ಯ ಮಂಗಳೂರಿನಲ್ಲಿ ಕಂಡು ಬಂದಿದೆ.

    ಮಂಗಳೂರು ನಗರ ಹೊರವಲಯದ ಪಾವಂಜೆಯಲ್ಲಿ ಹಳ್ಳಿ ಸೊಗಡಿನ ನೈಜ ಚಿತ್ರಣವನ್ನು ಉಣಬಡಿಸಿತ್ತು. ಇಲ್ಲಿ ನಗರದ ಬಹುತೇಕ ಶಾಲೆಗಳ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಸೇರಿದ್ದರು. ಯುವಕ- ಯುವತಿಯರು ಸೇರಿ ಕೆಸರಿನ ಪರಿವೇ ಇಲ್ಲದಂತೆ ಕುಣಿದಾಡುತ್ತಾ ಆಟವಾಡಿದ್ದಾರೆ. ನೀರಾಟದ ಜೊತೆಗೆ ಫಿಲ್ಮಿ ಹಾಡುಗಳಿಗೆ ವಿದ್ಯಾರ್ಥಿಗಳು ಗಡದ್ದಾಗಿ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆಯಿತು.

    ಪಾವಂಜೆ ಪಕ್ಕದ ಬಾಕಿಮಾರು ಗದ್ದೆಯಲ್ಲಿ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ 11ನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವ ನಗರದ ಮಕ್ಕಳಿಗೆ ವಿಭಿನ್ನ ಅನುಭವ ನೀಡಿತು. ಕೃಷಿ ಚಟುವಟಿಕೆಗಳು ಮಾಯವಾಗುತ್ತಿರುವ ಇಂದಿನ ಕಾಲದಲ್ಲಿ ನಗರ ವಾಸಿಗಳು ಹೀಗೆ ಕೆಸರಿನಾಟದಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಕೆಸರಿನಲ್ಲಿ ಹಗ್ಗ ಜಗ್ಗಾಟ, ವಾಲಿಬಾಲ್ ಆಟಗಳ ಜೊತೆ ಹಳ್ಳಿ ಮೂಲದ ಜನಪದ ಕ್ರೀಡೆಗಳು ನಗರದ ಮಕ್ಕಳು, ಮಹಿಳೆಯರಿಗೆ ಹಳ್ಳಿ ಬದುಕಿನ ಚಿತ್ರಣವನ್ನು ನೀಡುವಂತಿತ್ತು.

    ಚೆನ್ನಾಗಿ ಹದ ಮಾಡಿದ ಕೆಸರಗದ್ದೆಯನ್ನು ನಗರದ ಮಕ್ಕಳು ನೋಡೋದೆ ಅಪರೂಪ. ಅಂಥದರಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಮೈಯ ಪರಿವೇ ಇಲ್ಲದೆ ಕೆಸರಿನಲ್ಲಿ ಡ್ಯಾನ್ಸ್ ಮಾಡಿದ್ದರು. ಕೆಸರಿನ ಪರಿಮಳವನ್ನು ಆಘ್ರಾಣಿಸುತ್ತಾ ಪಿರಮಿಡ್ ರಚನೆ ಮೂಲಕ ಮಡಕೆ ಒಡೆಯುವುದು, ಹಿಮ್ಮುಖ ಓಟ, ಒಂಟಿ ಕಾಲಿನ ಓಟ, ನಿಧಿ ಹುಡುಕಾಟ, ಮಹಿಳೆಯರ ಹಗ್ಗಜಗ್ಗಾಟ ಹೀಗೆ ಹತ್ತು ಹಲವು ಕ್ರೀಡೆಗಳು ಒಂದೇ ದಿನದಲ್ಲಿ ಹಳ್ಳಿ ಹೈದರನ್ನು ಸೃಷ್ಟಿಸುವಂತೆ ಮಾಡಿತ್ತು. ಪರಸ್ಪರ ಕೆಸರಿನ ಎರಚಾಟ, ಕೆಸರಿನಲ್ಲಿ ಉರುಳಾಡಿದ್ದು ನಗರದ ವಿದ್ಯಾರ್ಥಿಗಳಿಗೆ ದೇಸಿ ಸೊಗಡನ್ನು ಪರಿಚಯ ಮಾಡಿತ್ತು.

    ಆಧುನಿಕ ಕ್ರೀಡೆಗಳ ಅಬ್ಬರದ ಮಧ್ಯೆ ಮರೆಯಾಗುತ್ತಿರುವ ತುಳುನಾಡಿನ ಗ್ರಾಮೀಣ ಕ್ರೀಡೆಗಳನ್ನು ನಗರದ ಮಂದಿಗೆ ಪರಿಚಯಿಸುವ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ದೊರೆಯಿತು.

  • ಜಲಕ್ಷಾಮದಿಂದ ಮದ್ವೆಯಾಗದೇ ಕುಳಿತ ಯುವಕರು

    ಜಲಕ್ಷಾಮದಿಂದ ಮದ್ವೆಯಾಗದೇ ಕುಳಿತ ಯುವಕರು

    ಜೈಪುರ: ರಾಜಸ್ಥಾನ ರಾಜ್ಯದ ಸಿಕಾರ್ ಜಿಲ್ಲೆಯ ಕೀರೋ ಕಿ ಧನಿ ಹಳ್ಳಿಯಲ್ಲಿನ ಯುವಕರನ್ನು ಮದುವೆಯಾಗಲು ಯುವತಿಯರು ನಿರಾಕರಿಸುತ್ತಿದ್ದಾರೆ.

    ಕೀರೋ ಕಿ ಧನಿ ಗ್ರಾಮದಲ್ಲಿ ನೀರಿನ ಅಭಾವವಿದ್ದು, ಹನಿ ನೀರಿಗೂ ಅಲ್ಲಿ ಪರದಾಡಬೇಕು. ಒಂದು ವೇಳೆ ಈ ಗ್ರಾಮಕ್ಕೆ ಮದುವೆಯಾಗಿ ಬಂದರೆ ನೀರು ಹೊರುವುದರಲ್ಲೇ ಜೀವನ ಸಾಗುತ್ತದೆ ಎಂಬ ಭಯದಿಂದ ಪೋಷಕರು ತಮ್ಮ ಪುತ್ರಿಯರನ್ನು ಇಲ್ಲಿಯ ಯುವಕರೊಂದಿಗೆ ಮದುವೆ ಮಾಡಿಸುತ್ತಿಲ್ಲ. ಕೆಲ ಯುವತಿಯರು ಕೀರೋ ಕಿ ಧನಿ ಗ್ರಾಮದ ಹುಡುಗ ಎಂದು ತಿಳಿದ್ರೆ ಸಾಕು ಈ ಮದುವೆ ಬೇಡ ಎಂದು ಹೇಳುತ್ತಾರೆ ಅಂತ ಗ್ರಾಮಸ್ಥರು ಹೇಳುತ್ತಾರೆ.


    ಈ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಒಂದೇ ಕೊಳವೆ ಬಾವಿಯಿದ್ದು, ಹಳ್ಳಿಯ 50 ಕುಟುಂಬಕ್ಕೂ ಅದೇ ನೀರಿನ ಮೂಲ. ಕೆಲವೊಮ್ಮೆ ಈ ಕೊಳವೆಬಾವಿಯಲ್ಲಿಯೂ ನೀರು ಸಿಗುವುದಿಲ್ಲ. ಹೀಗಾಗಿ ಕೆಲವೊಮ್ಮೆ ಕಿ.ಮೀ ಗಟ್ಟಲೆ ನೀರಿಗಾಗಿ ನಡೆಯುವ ಪರಿಸ್ಥಿತಿಗಳು ಎದುರಾಗುತ್ತವೆ.

    ನಾನು ನನ್ನ ಇಬ್ಬರು ಮಕ್ಕಳಿಗೆ ಮದುವೆ ಮಾಡಲು ಎರಡು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಇಲ್ಲಿ ನೀರಿಲ್ಲದ ಕಾರಣ ಮದುವೆ ಮುರಿದು ಬೀಳುತ್ತಿದೆ. ಇತ್ತೀಚೆಗಷ್ಟೆ ನನ್ನ ದೊಡ್ಡ ಮಗನಿಗೆ ಒಂದು ಕಡೆ ಒಪ್ಪಿಗೆಯಾಗಿದೆ. ಆದರೆ ಅವರು ಇಲ್ಲಿನ ಪರಿಸ್ಥಿತಿ ಕಂಡೂ ಮದುವೆ ಮಾಡುತ್ತಾರೆಂಬ ಭರವಸೆ ನನಗಿಲ್ಲ ಎಂದು ಗ್ರಾಮಸ್ಥೆ ರೇಖಾ ಹೇಳುತ್ತಾರೆ.

    ಗ್ರಾಮದ ಯುವಕ ನೇಮಿ ಚಂದ್, ನೀರಿಲ್ಲದ ಈ ಊರಿಗೆ ಮದುವೆಯಾಗಲು ಯಾರು ತಾನೆ ಬಯಸುತ್ತಾರೆ. ನನ್ನ ತಂದೆ-ತಾಯಿ ತುಂಬಾ ಪ್ರಯತ್ನ ಮಾಡಿ ಮದುವೆ ನಿಶ್ಚಯಿಸಿರುತ್ತಾರೆ. ಆದರೆ ನೀರಿಲ್ಲದ ಕಾರಣ ಎಲ್ಲ ಸಂಬಂಧಗಳು ಹಿಂದೆ ಸರಿದಿವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅಮ್ಯೂಸ್‍ಮೆಂಟ್ ಪಾರ್ಕಿನಲ್ಲಿ ರೋಲರ್ ಕ್ರಸರ್ ಮುಗುಚಿ ನಾಲ್ವರಿಗೆ ಗಾಯ

    ಅಮ್ಯೂಸ್‍ಮೆಂಟ್ ಪಾರ್ಕಿನಲ್ಲಿ ರೋಲರ್ ಕ್ರಸರ್ ಮುಗುಚಿ ನಾಲ್ವರಿಗೆ ಗಾಯ

    ರಾಮನಗರ: ಅಮ್ಯೂಸ್‍ಮೆಂಟ್ ಪಾರ್ಕಿನಲ್ಲಿ ರೋಲರ್ ಕ್ರಸರ್ ಮುಗುಚಿ ನಾಲ್ವರಿಗೆ ಗಾಯವಾಗಿರುವ ಘಟನೆ ಬಿಡದಿಯ ವಂಡರ್ ಲಾದಲ್ಲಿ ನಡೆದಿದೆ.

    ಯಂತ್ರ ತಿರುಗುವ ವೇಳೆ ಜನರಿದ್ದ ರೋಲರ್ ಮುಗುಚಿ ಬಿದ್ದಿದೆ. ಈ ವೇಳೆ ಐವರು ಯುವಕರು ನಾಲ್ಕೈದು ನಿಮಿಷಗಳ ಕಾಲ ಮುಗುಚಿದ ಯಂತ್ರದಡಿ ಸಿಲುಕಿದ್ದರು. ಯುವಕರ ಕಾಲುಗಳು ಆಟವಾಡುವ ರೋಲರ್ ಅಡಿ ಸಿಲುಕಿ ಗಾಯವಾಗಿದ್ದು, ನೋವಿನಿಂದ ಚೀರಾಡಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋದಲ್ಲಿ ಗಾಯಾಳುಗಳು ಅಳುತ್ತಿರುವುದು ಮನಕಲಕುವಂತಿದೆ.

    ಆಡಳಿತ ಮಂಡಳಿ ಗಾಯಾಳು ಯುವಕರಿಗೆ ಚಿಕಿತ್ಸೆ ನೀಡಿ ರಾಜಿ ಸಂಧಾನ ಮಾಡಿಕೊಂಡಿದ್ದಾರೆ. ಕಳೆದ ಸೋಮವಾರ ವಂಡರ್ ಲಾ ನಲ್ಲಿ ಈ ಘಟನೆ ನಡೆದಿದ್ದು, ಇದೀಗ ಯುವಕರು ಯಂತ್ರದಡಿ ಸಿಲುಕಿ ನರಳಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಚಹಾ ಕುಡಿಯೋ ವಿಚಾರವಾಗಿ ಯುವಕರ ಗುಂಪಿನ ಮಧ್ಯೆ ಮಾರಾಮಾರಿ

    ಚಹಾ ಕುಡಿಯೋ ವಿಚಾರವಾಗಿ ಯುವಕರ ಗುಂಪಿನ ಮಧ್ಯೆ ಮಾರಾಮಾರಿ

    ಬಾಗಲಕೋಟೆ: ಹೋಟೆಲ್‍ನಲ್ಲಿ ಚಹಾ ಕುಡಿಯುವ ವಿಚಾರವಾಗಿ ಎರಡು ಗುಂಪಿನ ಯುವಕರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ನಡೆದಿದೆ.

    ಭಾನುವಾರ ಸಂಜೆ ವಿದ್ಯಾಗಿರಿಯ ಅಕ್ಕಿಮರಡಿ ಎಂಬವರ ಪೆಟ್ರೋಲ್ ಬಂಕ್‍ನಲ್ಲಿ ಈ ಗಲಾಟೆ ನಡೆದಿದೆ. ಮುಚಖಂಡಿ ತಾಂಡ ಹಾಗೂ ಮುರನಾಳ ಗ್ರಾಮದ ಯುವಕರ ಗುಂಪು ಪರಸ್ಪರ ಕೋಲು ಹಾಗೂ ಕೈಯಿಂದ ಬಡಿದಾಡಿಕೊಂಡಿದ್ದಾರೆ. ಯುವಕರು ಬಡಿದಾಟದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಸದ್ಯ ಹೊಡೆದಾಡಿಕೊಂಡ ದೃಶ್ಯ ವೈರಲ್ ಆಗಿದೆ. ಚಹಾ ಕುಡಿಯೋಕೆ ಇದೇ ಹೋಟೆಲ್‍ಗೆ ಯಾಕೆ ಬಂದ್ರಿ ಎಂದು ಒಂದು ಗುಂಪಿನ ಯುವಕರು ಪ್ರಶ್ನಿಸಿದ್ರೆ, ನಾವ್ ಬರ್ತೀವಿ ಅದನ್ನ ಕೇಳೋಕೆ ನೀವ್ಯಾರು ಎಂದು ಇನ್ನೊಂದು ಗುಂಪಿನ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಜಗಳ ವಿಕೋಪಕ್ಕೆ ತೆರಳಿ ಮಾರಾಮಾರಿಯಾಗಿದೆ.

    ಎರಡು ಗುಂಪಿನ ನಡುವೆ ನಡೆದ ಗಲಾಟೆಯಿಂದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಬಾಗಲಕೋಟೆ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಕೆರೆ ಸ್ವಚ್ಛಗೊಳಿಸಿದ್ರೆ ಬಹಿರ್ದೆಸೆಗೆ ಜಾಗವಿರೋಲ್ಲ- ಯುವಕರಿಗೆ ತರಾಟೆ

    ಕೆರೆ ಸ್ವಚ್ಛಗೊಳಿಸಿದ್ರೆ ಬಹಿರ್ದೆಸೆಗೆ ಜಾಗವಿರೋಲ್ಲ- ಯುವಕರಿಗೆ ತರಾಟೆ

    ಧಾರಾವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಕೆರೆ ಸ್ವಚ್ಛ ಮಾಡಲು ಮುಂದಾದ ಯುವಕರನ್ನು ಅಲ್ಲಿಯ ಜನ ತರಾಟೆ ತೆಗೆದುಕೊಂಡಿದ್ದಾರೆ.

    ಸ್ವಯಂ ಪ್ರೇರಣೆಯಿಂದ ಸ್ವಚ್ಛ ಮಾಡಲು ಬಂದವರಿಗೆ ಶಹಬ್ಬಾಸ್‍ಗಿರಿ ಕೊಡುವುದನ್ನು ಬಿಟ್ಟು ಅವರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಕೆರೆ ಸ್ವಚ್ಛ ಮಾಡಿದರೆ ಬಯಲು ಬಹಿರ್ದೆಸೆಗೆ ಜಾಗ ಇರುವುದಿಲ್ಲ ಎಂದು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ.

    ಪಟ್ಟಣದ ಹೊರವಲಯದ ಅಣ್ಣಿಗನ ಕೆರೆಯಲ್ಲಿ ಸ್ವಚ್ಛ ಸೇವಾ ಸಮಿತಿಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಈ ವೇಳೆ ಅಲ್ಲಿನ ಕೆಲ ಸ್ಥಳೀಯರು ಕೆರೆ ಸ್ವಚ್ಛ ಮಾಡಿದ್ರೆ ಬಯಲು ಬಹಿರ್ದೆಸೆಗೆ ಜಾಗ ಸಿಗುವುದಿಲ್ಲ ಎಂದು ಹಠ ಹಿಡಿದರು.

    ಜನರ ಮಾತನ್ನು ಕೇಳಿ ಯುವಕರು ಕೆರೆಯಲ್ಲಿ ಬಹಿರ್ದೆಸೆ ಮಾಡದಂತೆ ಮನವಿ ಮಾಡಿದರು. ಆದರೆ ಜನರು ಯುವಕರ ಮಾತನ್ನು ನಿರಾಕರಿಸಿ ಕೆರೆ ಸ್ವಚ್ಛ ಮಾಡದಂತೆ ತಡೆದಿದ್ದಾರೆ. ಇದರಿಂದ ಸ್ವಯಂ ಪ್ರೇರಣೆಯಿಂದ ಕೆರೆ ಸ್ವಚ್ಛತೆಗೆ ಬಂದ ಯುವಕರಿಗೆ ನಿರಾಸೆ ಆಗಿದೆ.

  • ಅಪ್ರಾಪ್ತೆಗೆ ಯುವಕರಿಂದ ಕಿರುಕುಳ – ಮನನೊಂದು ಬಾಲಕಿ ಆತ್ಮಹತ್ಯೆ

    ಅಪ್ರಾಪ್ತೆಗೆ ಯುವಕರಿಂದ ಕಿರುಕುಳ – ಮನನೊಂದು ಬಾಲಕಿ ಆತ್ಮಹತ್ಯೆ

    ಬೆಂಗಳೂರು: ಪದೇ ಪದೇ ಪ್ರೀತಿಸು ಎಂದು ಇಬ್ಬರು ಯುವಕರ ಹಿಂಸೆ ತಾಳಲಾರದೇ ಅಪ್ರಾಪ್ತ ಬಾಲಕಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲ ತಾಲೂಕಿನ ಎಡೇಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಧನಲಕ್ಷ್ಮೀ (14) ಮೃತ ದುರ್ದೈವಿ. ಈಕೆ ನೆಲಮಂಗಲ ತಾಲೂಕಿನ ಎಡೇಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಆರೋಪಿಗಳಾದ ಜಗದೀಶ್ ಹಾಗೂ ರವಿಕುಮಾರ್ ಪ್ರೀತಿಸುವಂತೆ ಬಾಲಕಿಗೆ ಕಿರುಕುಳ ನೀಡುತ್ತಿದ್ದರು.

    ಯುವಕರ ಕಿರುಕುಳ ತಾಳಲಾರದೆ ಧನಲಕ್ಷ್ಮೀ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೀಮೆಎಣ್ಣೆ ಸುರಿದುಕೊಂಡ ನಂತರ ಬಾಲಕಿಯನ್ನು ಚಿಕಿತ್ಸೆಗೆಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.

    ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಧನಲಕ್ಷ್ಮೀ ಮೃತಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜಗದೀಶ್ ಹಾಗೂ ರವಿಕುಮಾರ್ ಎಂಬ ಇಬ್ಬರನ್ನೂ ಬಂಧಿಸಿದ್ದಾರೆ. ಈ ಬಗ್ಗೆ ಡಾಬಸ್‍ಪೇಟೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯುವಕರ ಮದ್ವೆ ಆಸೆಗೆ ಕಾಳಿ ನದಿ ಅಡ್ಡಿ

    ಯುವಕರ ಮದ್ವೆ ಆಸೆಗೆ ಕಾಳಿ ನದಿ ಅಡ್ಡಿ

    ಕಾರವಾರ: ಜಿಲ್ಲೆಯ ಕಾಳಿ ನದಿಯಿಂದಾಗಿ ಉಮ್ಮಳೆಜೂಗ ಗ್ರಾಮದ ಯುವಕರಿಗೆ ಯುವತಿಯರೇ ಸಿಗುತ್ತಿಲ್ಲ. ಹೀಗಾಗಿ ಮದುವೆ ಆಸೆಗೆ ತಣ್ಣೀರು ಬಿದ್ದಿದ್ದು, ಯುವಕರು ವಲಸೆ ಹೋಗುತ್ತಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಿಂದ ಕೇವಲ 20 ಕಿ.ಮೀ. ದೂರದ ವೈಲವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಮ್ಮಳೆಜೂಗ. ಈ ಭಾಗದ ಯುವಕರ ಮದುವೆ ಆಸೆಗೆ ಕಾಳಿ ನದಿ ತಣ್ಣೀರು ಎರಚುತ್ತಾಳೆ. ಮಳೆಗಾಲ ಪ್ರಾರಂಭವಾಯ್ತು ಅಂದರೆ ಈ ಗ್ರಾಮದ ಸುತ್ತಲೂ ಕಾಳಿ ನದಿ ನೀರು ತುಂಬಿ ಹರಿಯುತಿಯುತ್ತಾಳೆ. ದ್ವೀಪ ಪ್ರದೇಶವಾಗಿದ್ದರಿಂದ ಈ ಗ್ರಾಮಕ್ಕೆ ತೆರಳಬೇಕೆಂದರೆ ಸಣ್ಣ ಪಾತಿ ದೋಣಿಯಲ್ಲಿ ಕುಳಿತು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕು. ಸುಮಾರು 35 ಮನೆಗಳಿರುವ ಈ ದ್ವೀಪದಲ್ಲಿ 50 ಎಕರೆ ವಿಸ್ತೀರ್ಣ ಹೊಂದಿರುವ ಕೃಷಿ ಪ್ರದೇಶವಾಗಿದೆ. ಸುಮಾರು 250 ಜನರು ಈ ಗ್ರಾಮದಲ್ಲಿ ವಾಸವಾಗಿದ್ದು ವ್ಯವಸಾಯವನ್ನು ನಂಬಿ ಬದುಕುತ್ತಿದ್ದಾರೆ.

    ಇಷ್ಟೆಲ್ಲಾ ಜನರಿದ್ದರೂ ವಿದ್ಯುತ್ ಹೊರತುಪಡಿಸಿ ಸರ್ಕಾರದಿಂದ ಈ ಗ್ರಾಮಕ್ಕೆ ರಸ್ತೆಯಾಗಲಿ ಸೇತುವೆಯನ್ನಾಗಲಿ ನಿರ್ಮಿಸಿಲ್ಲ. ಹೀಗಾಗಿ ಈ ಗ್ರಾಮದ ಯುವಕರಿಗೆ ಹೊರಗಿನವರು ಹೆಣ್ಣು ಕೂಡ ಕೊಡುತ್ತಿಲ್ಲ. ಮೊದಲು ಒಪ್ಪಿದರೂ ಈ ಗ್ರಾಮವನ್ನು ನೋಡಿ ಮದುವೆ ಮಾತುಕತೆ ಮರಿದುಕೊಂಡ ನಿದರ್ಶನಗಳಿವೆ. ಹೀಗಾಗಿ 30 ವರ್ಷ ದಾಟಿದ 10ಕ್ಕೂ ಹೆಚ್ಚು ಯುವಕರು ಮದುವೆಯಾಗದೇ ಉಳಿದಿದ್ದಾರೆ. ಇಲ್ಲಿನ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೆಂದರೆ ಪಕ್ಕದ ಊರಿನಲ್ಲಿ ನೆಂಟರ ಮನೆಯಲ್ಲಿ ಇರಿಸಿ ವಿದ್ಯಾಭ್ಯಾಸ ಮಾಡಬೇಕಾಗುತ್ತದೆ.

    ಈ ಭಾಗದ ಜನರು ಭತ್ತ, ತೆಂಗು, ಬಾಳೆ ಫಸಲನ್ನು ಬೆಳೆಸುತ್ತಾರೆ. ಆದರೆ ಇವುಗಳನ್ನು ಮಾರಾಟ ಮಾಡಲು ಚಿಕ್ಕ ದೋಣಿಯಲ್ಲಿ ತೆಗೆದುಕೊಂಡು ಹೋಗಬೇಕು. ಹೀಗಾಗಿ ಹಲವರು ವ್ಯವಸಾಯ ಮಾಡುವುದು ಬಿಟ್ಟು ನಗರದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಸ್ವಲ್ಪ ವಿದ್ಯಾಭ್ಯಾಸ ಮಾಡಿದ ಯುವಕರು ನೆರೆಯ ಗೋವಾದಲ್ಲಿ ನೆಲೆ ಕಂಡುಕೊಂಡಿದ್ದಾರೆ. ನದಿ ಭಾಗದಿಂದ ಸುಮಾರು 150 ಮೀಟರ್ ಅಂತರವಿರುವ ಈ ಗ್ರಾಮದಿಂದ ಮೊತ್ತೊಂದೆಡೆ ಸಾಗಬೇಕಿದ್ದರೆ ದೋಣಿಗಾಗಿ ಕೂಗಿ ಕರೆಯಬೇಕು. ಈ ದ್ವನಿ ಮೊತ್ತೊಂದು ದಡದಲ್ಲಿ ಇರುವವರಿಗೆ ಕೇಳಿದರೆ ಮಾತ್ರ ದೋಣಿ ತೆಗೆದುಕೊಂಡು ಬರುತ್ತಾರೆ.

    ಮಳೆಗಾಲದಲ್ಲಿ ಪ್ರವಾಹ ಹೆಚ್ಚಾದಾಗ ಈ ಗ್ರಾಮದ ಸಂಚಾರವೇ ಸಂಪೂರ್ಣ ಬಂದ್ ಆಗುತ್ತದೆ. ಹೀಗಾಗಿ ಊರನ್ನು ಬಿಟ್ಟು ಬೇರೆಡೆ ಮನೆ ಮಾಡಿಕೊಂಡು ಮಳೆಗಾಲ ಮುಗಿಯುವವರೆಗೂ ಜನರು ಕಾಯಬೇಕು. ಅನೇಕ ವರ್ಷಗಳಿಂದ ತಮ್ಮ ಗ್ರಾಮಕ್ಕೆ ಸೇತುವೆ ಮಾಡಿಕೊಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರೂ ಇಲ್ಲಿವರೆಗೂ ಈಡೇರಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

  • ಚಲಿಸುತ್ತಿದ್ದ ಕಾರಿನಲ್ಲಿ ಮೂವರು ಯುವಕರ ಸ್ಟಂಟ್: ವಿಡಿಯೋ ನೋಡಿ

    ಚಲಿಸುತ್ತಿದ್ದ ಕಾರಿನಲ್ಲಿ ಮೂವರು ಯುವಕರ ಸ್ಟಂಟ್: ವಿಡಿಯೋ ನೋಡಿ

    ಮುಂಬೈ: ಚಲಿಸುತ್ತಿದ್ದ ಕಾರಿನಲ್ಲಿ ಸ್ಟಂಟ್ ಮಾಡಿದ್ದಕ್ಕೆ ಮುಂಬೈ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

    ಮೊಹಮ್ಮದ್ ಶೇಖ್(10), ಸಮೀರ್ ಸಹಿಬೋಲೆ(20) ಹಾಗೂ ಅನಸ್ ಶೇಖ್(19) ಸ್ಟಂಟ್ ಮಾಡಿದ ಯುವಕರು. ಪೊಲೀಸರು ಈ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಮೂವರಿಗೆ ಕೋರ್ಟ್ ಎಚ್ಚರಿಕೆ ನೀಡಿ ಜಾಮೀನು ಮಂಜೂರು ಮಾಡಿದೆ.

    ಯುವಕರು ತಮ್ಮ ಜೀವವನ್ನು ಸಹ ಲೆಕ್ಕಿಸದೇ ಈ ಸ್ಟಂಟ್ ಮಾಡಿದ್ದಾರೆ. ಮೂವರು ಯುವಕರು ಕಾರಿನ ಕಿಟಕಿಯ ಮೂಲಕ ಹೊರ ಬಂದು ಸ್ಟಂಟ್ ಮಾಡುತ್ತಿದ್ದರು. ಹಿಂಬದಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ಇಡೀ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ವಿಡಿಯೋವನ್ನು ಎರಡು ದಿನಗಳ ಹಿಂದೆ ಬಾಂದ್ರಾದಲ್ಲಿ ಸೆರೆ ಹಿಡಿಯಲಾಗಿತ್ತು. ಈ ವಿಡಿಯೋದಲ್ಲಿ ಮೂವರು ಯುವಕರು ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ಕಾರಿನ ಕಿಟಕಿ ಮೂಲಕ ಹೊರ ಬಂದಿದರು. ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ಇವರ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಇದು ಕೆಟ್ಟ ಸಂದೇಶ ಸಾರುತ್ತದೆ ಎಂದು ನಾವು ಯುವಕರನ್ನು ಹುಡುಕಲು ಶುರು ಮಾಡಿದ್ದೇವು. ವಿಡಿಯೋ ಮೂಲಕ ಕಾರಿನ ನಂಬರ್ ತಿಳಿದುಕೊಂಡು, ಆರ್ ಟಿಒ ಆಫೀಸ್‍ನಲ್ಲಿ ಅವರ ವಿಳಾಸ ಪಡೆದ್ದೇವು. ಬಳಿಕ ಕಾರಿನ ಚಾಲಕನನ್ನು ಬಿಟ್ಟು ಮೂವರು ಯುವಕರನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.

    ಮೂವರು ಯುವಕರನ್ನು ಖಾರ್ ಪೊಲೀಸರು ನ್ಯಾಯಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಲಯ ಮೂವರು ಯುವಕರಿಗೆ ಎಚ್ಚರಿಕೆ ನೀಡಿ ಜಾಮೀನು ಕೊಟ್ಟಿದೆ. ಮೂವರು ಯುವಕರು ಮುಂಬೈನ ಗೋವಂದಿ ಏರಿಯಾದವರಾಗಿದ್ದು, ನೈಟ್‍ಔಟ್‍ಗಾಗಿ ಬಾಂದ್ರಾಗೆ ತೆರಳುತ್ತಿದ್ದರು. ಯುವಕರು ಸ್ಟಂಟ್ ಮಾಡುತ್ತಿರುವ ವಿಡಿಯೋವನ್ನು ಮುಂಬೈ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.