Tag: youth

  • ಚಪ್ಪಲಿ ಕೊಳ್ಳಲು ಬಂದ ಯುವತಿ ಜೊತೆ ಅಸಭ್ಯ ವರ್ತನೆ!

    ಚಪ್ಪಲಿ ಕೊಳ್ಳಲು ಬಂದ ಯುವತಿ ಜೊತೆ ಅಸಭ್ಯ ವರ್ತನೆ!

    ಶಿವಮೊಗ್ಗ: ಚಪ್ಪಲಿ ಕೊಳ್ಳಲು ಬಂದ ಯುವತಿ ಜೊತೆ ಅಂಗಡಿ ಕೆಲಸಗಾರ ಅನುಚಿತವಾಗಿ ವರ್ತಿಸಿದ್ದು, ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ನಗರದ ಕಸ್ತೂರ ಬಾ ರಸ್ತೆಯಲ್ಲಿರುವ ಅಂಗಡಿಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪು ಚದುರಿಸಿದ್ರು.

    ಈ ವೇಳೆ ಮಾಲತೇಶ್ ಹಾಗೂ ಮಹ್ಮದ್ ಅಯಾಜ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟ್ರೈನಲ್ಲಿ Love at First Sight- ಯುವತಿಯನ್ನು ಹುಡುಕಲು ಹಾಕಿದ 4 ಸಾವಿರ ಪೋಸ್ಟರ್

    ಟ್ರೈನಲ್ಲಿ Love at First Sight- ಯುವತಿಯನ್ನು ಹುಡುಕಲು ಹಾಕಿದ 4 ಸಾವಿರ ಪೋಸ್ಟರ್

    ಕೋಲ್ಕತ್ತಾ: ಟ್ರೈನಿನಲ್ಲಿ ಯುವತಿಯನ್ನು ನೋಡಿ ಲವ್ ಅಟ್ ಫಸ್ಟ್ ಸೈಟ್ ಆದ ಯುವಕನೊಬ್ಬ ಆಕೆಯನ್ನು ಹುಡುಕಲು ಒಂದು ಸಿನಿಮಾ ಮಾಡಿ 4,000 ಪೋಸ್ಟರ್ ಅಂಟಿಸಿದ ಪ್ರಕರಣವೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬೆಳಕಿಗೆ ಬಂದಿದೆ.

    ಬಿಸ್ವಜಿತ್ ಪೊದಾರ್(29) ಕೋಲ್ಕತ್ತಾದಲ್ಲಿ ಸರ್ಕಾರಿ ಕೆಲಸ ಮಾಡುತ್ತಿದ್ದಾರೆ. ಬುಸ್ವಜಿತ್ ಜುಲೈ ತಿಂಗಳಿನಲ್ಲಿ ಕೆಲಸದಿಂದ ಮನೆಗೆ ಹಿಂತಿರುಗುವ ವೇಳೆ ರೈಲಿನಲ್ಲಿ ತನ್ನ ಮುಂದೆ ಯುವತಿ ಪೋಷಕರ ಜೊತೆ ಕುಳಿತ್ತಿದ್ದಳು. ಆ ಯುವತಿಯನ್ನು ನೋಡಿದ ಮೊದಲ ನೋಟದಲ್ಲೇ ಬಿಸ್ವಜಿತ್‍ಗೆ ಆಕೆಯ ಮೇಲೆ ಪ್ರೀತಿಯಾಗಿದೆ.

    ಬಿಸ್ವಜಿತ್‍ಗೆ ಆ ಯುವತಿ ಮೇಲೆ ಮೊದಲ ನೋಟದಲ್ಲೇ ಪ್ರೀತಿಯಾಗಿದ್ದು, ಈಗ ಆ ಯುವತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಯುವತಿಯನ್ನು ಹುಡುಕಲು ಬಿಸ್ವಜಿತ್ 4,000 ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಆ ಪೋಸ್ಟರ್ ನಲ್ಲಿ ಬಿಸ್ವಜಿತ್ ತನ್ನ ಮೊಬೈಲ್ ನಂಬರ್ ಹಾಗೂ ತನ್ನ ಸಿನಿಮಾದ ಯೂಟ್ಯೂಬ್ ಲಿಂಕ್ ಕೂಡ ಹಾಕಿದ್ದಾನೆ.

    ಯುವತಿ ಈ ಪೋಸ್ಟರ್ ನೋಡಿ ನಾನು ಆಕೆಯನ್ನು ಹುಡುಕುತ್ತಿದ್ದೇನೆ ಎಂಬುದು ಗೊತ್ತಾಗಲಿ ಎಂಬ ಉದ್ದೇಶದಿಂದ ನಾನು ಈ ರೀತಿ ಮಾಡುತ್ತಿದ್ದೇನೆ. ನಾನು ಆಕೆಯನ್ನು ಹುಡುಕುತ್ತಿದ್ದೇನೆ ಹಾಗೂ ಆಕೆಗೆ ಇಷ್ಟವಿದ್ದರೆ ಆಕೆ ನನ್ನನ್ನು ಸಂರ್ಪಕಿಸಲಿ ಎಂದು ಬಿಸ್ವಜಿತ್ ಪ್ರತಿಕ್ರಿಯಿಸಿದ್ದಾರೆ.

    ಆ ಯುವತಿಯನ್ನು ಹುಡುಕಲು ಬಿಸ್ವಜಿತ್ ಒಂದು ಕಿರುಚಿತ್ರವನ್ನು ಕೂಡ ಮಾಡಿದ್ದಾರೆ. ಆ ಚಿತ್ರಕ್ಕೆ ‘ಕೋನ್‍ಗರ್ ಕೋನೆ’ ಎಂದು ಹೆಸರಿಟ್ಟಿದ್ದಾರೆ. ಬೆಂಗಾಲಿಯಲ್ಲಿ ಕೋನ್‍ಗರ್ ಕೋನೆ ಎಂದರೆ ‘ಕೋನ್‍ಗರ್ ನ ವಧು’ ಎಂದರ್ಥ. ಈ ಕಿರುಚಿತ್ರ 6 ನಿಮಿಷ 23 ಸೆಕೆಂಡ್‍ಗಳಿದ್ದು, ಬಿಸ್ವಜಿತ್ ಈ ಚಿತ್ರದಲ್ಲಿ ಯುವತಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ.

    ಬಿಸ್ವಜಿತ್ ಆ ಯುವತಿಯನ್ನು ಪ್ರೀತಿಸುತ್ತಿರುವುದು ಹಾಗೂ ಭೇಟಿಯಾಗಲೂ ಕಾತುರದಿಂದ ಕಾಯುತ್ತಿರುವುದನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಆ ಯುವತಿಯ ಪಾತ್ರವನ್ನು ಬಿಸ್ವಜಿತ್‍ರ ಸ್ನೇಹಿತೆ ಅಭಿನಯಿಸಿದ್ದಾರೆ. ಈ ಚಿತ್ರದ ಕೊನೆಯಲ್ಲಿ “ನೀವು ಈ ಕಿರುಚಿತ್ರ ನೋಡಿದರೆ ನನಗೆ ಸಂರ್ಪಕಿಸಿ” ಎಂದು ಬಿಸ್ವಜಿತ್ ತಿಳಿಸಿದ್ದಾರೆ. ಯುವತಿ ತನ್ನನ್ನು ಗುರುತಿಸಲಿ ಎಂದು ಬಿಸ್ವಜಿತ್ ಆಕೆಯನ್ನು ಭೇಟಿ ಮಾಡಿದ ದಿನ ಧರಿಸಿದ ಟಿ-ಶರ್ಟ್ ಅನ್ನು ಇದೂವರೆಗೂ ತೆಗೆಯಲಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

    ಈ ಹಿಂದೆ ಪುಣೆಯಲ್ಲಿ ನಿಲೇಶ್ ಖೇಡೇಕರ್ ಎಂಬಾತ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಒಲಿಸಿಕೊಳ್ಳಲು ಬರೋಬ್ಬರಿ 300 ಸಾರಿ ಬ್ಯಾನರ್ ಗಳನ್ನು ರಸ್ತೆಯಲ್ಲಿ ಹಾಕಿದ್ದನು. ನಿಲೇಶ್ ಓರ್ವ ಉದ್ಯಮಿ ಆಗಿದ್ದು, ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ ನಲ್ಲಿ ಪ್ರದೇಶದಲ್ಲಿ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಒಲಿಸಿಕೊಳ್ಳಲು ಸಾರಿ ಬ್ಯಾನರ್ ಹಾಕುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೇವಣ ಸಿದ್ದೇಶ್ವರ ಬೆಟ್ಟದಿಂದ ಬಿದ್ದು ಯುವಕ ಸಾವು

    ರೇವಣ ಸಿದ್ದೇಶ್ವರ ಬೆಟ್ಟದಿಂದ ಬಿದ್ದು ಯುವಕ ಸಾವು

    ರಾಮನಗರ: ರೇವಣ ಸಿದ್ದೇಶ್ವರ ಬೆಟ್ಟದಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿ ನಡೆದಿದೆ.

    ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿ ಭರತ್(28) ಮೃತ ದುರ್ದೈವಿ. ಏಕಶಿಲಾ ಬೆಟ್ಟವಾಗಿರುವ ರೇವಣಸಿದ್ದೇಶ್ವರ ಬೆಟ್ಟದ ವಿಕ್ಷಣೆಗೆಂದು ನಾಲ್ಕು ಜನ ಸ್ನೇಹಿತರ ಜೊತೆ ಬಂದಿದ್ದರು. ಈ ವೇಳೆ ಬೆಟ್ಟ ಹತ್ತುತ್ತಿರುವಾಗ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಭರತ್ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಪೈ ಇಂಟರ್ ನ್ಯಾಷನಲ್ ಕಂಪೆನಿಯಲ್ಲಿ ಸೇಲ್ಸ್ ಎಕ್ಷುಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು.

    ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲವ್ ಜಿಹಾದ್ ಶಂಕೆ- ಹಿಂದೂ ಯುವತಿಯನ್ನು ಮದ್ವೆಯಾಗಿ ಕೈ ಕೊಟ್ಟ ಮುಸ್ಲಿಂ ಯುವಕ!

    ಲವ್ ಜಿಹಾದ್ ಶಂಕೆ- ಹಿಂದೂ ಯುವತಿಯನ್ನು ಮದ್ವೆಯಾಗಿ ಕೈ ಕೊಟ್ಟ ಮುಸ್ಲಿಂ ಯುವಕ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲವ್ ಜಿಹಾದ್ ಶಂಕೆಯ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಮುಸ್ಲಿಂ ಯುವಕ ಕೈ ಕೊಟ್ಟು ಓಡಿ ಹೋದ ಪ್ರಕರಣ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.

    ಗರೀಬ್ ಪ್ರೀತಿಸಿ ಕೈಕೊಟ್ಟ ಮುಸ್ಲಿಂ ಯುವಕ. ಗರೀಬ್ ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಯುವತಿ ನಾಲ್ಕು ತಿಂಗಳು ಗರ್ಭಿಣಿಯಾದ ಮೇಲೆ ಬಕ್ರೀದ್ ಹಬ್ಬಕ್ಕೆ ಹೋಗಿ ಬರುವುದಾಗಿ ಹೇಳಿ ಗರೀಬ್ ಎಸ್ಕೇಪ್ ಆಗಿದ್ದಾನೆ.

    ಯುವತಿ ಕಾಲ್ ಮಾಡಿ ಅಂಗಲಾಚಿದರೂ ಗರೀಬ್ ಮನೆಗೆ ಬಾರದೆ ಯುವತಿಯನ್ನು ಸತಾಯಿಸುತ್ತಿದ್ದಾನೆ. ಕಳೆದ ಫೆ. 6ರಂದು ಗರೀಬ್ ಮತ್ತು ಹಿಂದೂ ಯುವತಿ ಮದುವೆಯಾಗಿದ್ದರು. ಆದರೆ ಈಗ ಗರೀಬ್ ಪ್ರೀತಿಸಿ ಮದುವೆಯಾದ ತನ್ನ ಪತ್ನಿಗೆ ಕೈ ಕೊಟ್ಟು ಓಡಿ ಹೋಗಿದ್ದಾನೆ. ಸದ್ಯ ನೊಂದ ಯುವತಿ ಉತ್ತರ ವಿಭಾಗದ ಡಿಸಿಪಿಗೆ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?
    ನಾನು ಹಾಗೂ ನನ್ನ ಗಂಡ ಗರೀಬ್ 1 ವರ್ಷದಿಂದ ಪ್ರೀತಿಸುತ್ತಿದ್ದು, ಫೆಬ್ರವರಿ 16ರಂದು ಶಿವಗಂಗೆಯ ಬೆಟ್ಟದ ದೇವಸ್ಥಾನದಲ್ಲಿ ಮದುವೆಯಾಗಿ ಒಟ್ಟಿಗೆ ಬಾಳುತ್ತಿದ್ದೇವು. ಈಗ ನಾನು ನಾಲ್ಕು ತಿಂಗಳ ಗರ್ಭಿಣಿ ಆಗಿದ್ದೇನೆ. ಆದರೆ ಅವರು ಬಕ್ರೀದ್ ಹಬ್ಬಕ್ಕೆ ಅವರ ತಂದೆ-ತಾಯಿಯ ಮನೆಗೆ ಹೋಗಿ ಮತ್ತೇ ಹಿಂದಿರುಗಿ ಬಂದಿಲ್ಲ. ತಂದೆ-ತಾಯಿ ಜೊತೆ ಸೇರಿಕೊಂಡು ನನಗೆ ಮೋಸ ಮಾಡಿದ್ದಾನೆ. ಈಗ ಅವರಿಗೆ ಫೋನ್ ಮಾಡಿದರು ತೆಗೆಯುವುದಿಲ್ಲ.

    ಇಲ್ಲವೇ ಅವರ ತಂದೆ-ತಾಯಿ ಅವನನ್ನು ಕೂಡಿ ಹಾಕಿ ಬೇರೆ ಮದುವೆ ಮಾಡಲು ಹೊರಟಿದ್ದಾರಂತೆ. ದಯಮಾಡಿ ನನಗೆ ಅವನ ಜೊತೆ ಜೀವನ ನಡೆಸಲು ಸಹಕರಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ತಾಯಿ-ತಂದೆ ಇಲ್ಲದ ತಬ್ಬಲಿ ಹೆಣ್ಣು ಮಗಳು. ನನಗೆ ಅವರ ಜೊತೆ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಕೈಮುಗಿದು ಬೇಡಿಕೊಳ್ಳುತ್ತೇನೆ. ಅತಿ ಶೀಘ್ರವಾಗಿ ಕ್ರಮ ಕೈಗೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ.

    ನನಗೆ ಏನಾದರು ಮುಂದೆ ತೊಂದರೆಯಾದರೆ ಅದಕ್ಕೆ ನೇರ ಹೊಣೆ ಅವರು ಹಾಗೂ ಅವನ ತಂದೆ, ತಾಯಿ, ಅಕ್ಕ ತಂಗಿಯರು ಆಗಿರುತ್ತಾರೆ. ದಯಮಾಡಿ ನ್ಯಾಯ ಒದಗಿಸಬೇಕೆಂದು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮರ್ಮಾಂಗದ ಫೋಟೋವನ್ನು ಕ್ಲಿಕ್ಕಿಸಿ ಮಿಸ್ ಆಗಿ ಕ್ಲಾಸ್ ಗ್ರೂಪ್‍ಗೆ ಕಳುಹಿಸಿ ಟ್ವಿಟ್ಟರ್‌ನಲ್ಲಿ ಸ್ಟೋರಿ ಹೇಳ್ದ!

    ಮರ್ಮಾಂಗದ ಫೋಟೋವನ್ನು ಕ್ಲಿಕ್ಕಿಸಿ ಮಿಸ್ ಆಗಿ ಕ್ಲಾಸ್ ಗ್ರೂಪ್‍ಗೆ ಕಳುಹಿಸಿ ಟ್ವಿಟ್ಟರ್‌ನಲ್ಲಿ ಸ್ಟೋರಿ ಹೇಳ್ದ!

    ಯುವಕನೊಬ್ಬ ತನ್ನ ಒಡೆದ ಫೋನಿನಲ್ಲಿ ಮರ್ಮಾಂಗದ ಫೋಟೋ ಕ್ಲಿಕಿಸಿ ಅದು ಮಿಸ್ಸಾಗಿ ಕ್ಲಾಸ್ ಗ್ರೂಪ್‍ನಲ್ಲಿ ಶೇರ್ ಆಗಿದ್ದು ಹೇಗೆ ಎಂಬುದರ ಬಗ್ಗೆ ಟ್ವಿಟ್ಟರಿನಲ್ಲಿ ಹೇಳಿಕೊಂಡಿದ್ದಾನೆ.

    ಟ್ವಿಟ್ಟರಿನಲ್ಲಿ ಯುವಕ, ಹೌದು ನನ್ನ ಮರ್ಮಾಂಗದ ಫೋಟೋವನ್ನು ನಾನು ಕ್ಲಿಕ್ಕಿಸಿದೆ. ಆದರೆ ನಾನು ಬೇಕೆಂದು ಆ ಫೋಟೋವನ್ನು ಕ್ಲಾಸ್ ಗ್ರೂಪಿಗೆ ಶೇರ್ ಮಾಡಲಿಲ್ಲ. ಅದು ತಪ್ಪಾಗಿ ಗ್ರೂಪ್‍ನಲ್ಲಿ ಆ ಫೋಟೋ ಶೇರ್ ಆಗಿದೆ. ನನ್ನ ಫೋನ್ ಒಡೆದು ಹೋಗಿತ್ತು. ಹೊಸ ಫೋನ್ ಖರೀದಿಸಲು ನನ್ನ ಬಳಿ ಹಣವಿರಲಿಲ್ಲ ಹಾಗೂ ಫೋನಿನ ಇನ್ಯೂರೆನ್ಸ್ ಸಹ ಇರಲಿಲ್ಲ ಎಂದು ವಿವರಿಸಿದ್ದಾನೆ.

    ನಾನು ನನ್ನ ಮರ್ಮಾಂಗದ ಫೋಟೋ ಕ್ಲಿಕಿಸಿ ನಂತರ ಮಲಗಿದೆ. ಮರುದಿನ ಎದ್ದ ತಕ್ಷಣ ನನ್ನ ಕ್ಲಾಸ್ ಸ್ನೇಹಿತರು ಮೆಸೆಜ್ ಮಾಡಲು ಶುರು ಮಾಡಿದ್ದರು. ಮೊದಲಿಗೆ ಏನು ಆಗುತ್ತಿದೆ, ಏಕೆ ಹೀಗೆ ಮೆಸೆಜ್ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಾಗಲಿಲ್ಲ. ರಾತ್ರಿ ನಾನು ನನ್ನ ಗುಪ್ತಾಂಗದ ಫೋಟೋ ಕ್ಲಿಕಿಸಿದ್ದು, ನಾನು ಮರೆತು ಹೋಗಿದ್ದೆ. ನಂತರ ಪರಿಶೀಲಿಸಿದ್ದಾಗ ನಾನು ಮಲಗಿದ ವೇಳೆ ಆ ಫೋಟೋ ಮಿಸ್ಸಾಗಿ ಕ್ಲಾಸ್ ಗೂಪ್‍ಗೆ ಶೇರ್ ಆಗಿತ್ತು ಎಂದು ಹೇಳಿಕೊಂಡಿದ್ದಾನೆ.

    ನಾನು ನನ್ನ ಕ್ಲಾಸ್ ಗ್ರೂಪಿನಲ್ಲಿ ಈ ಘಟನೆ ಬಗ್ಗೆ ವಿವರಿಸಲು ಯತ್ನಿಸಿದೆ. ಆದರೆ ಯಾರೂ ನನ್ನ ಮಾತು ಕೇಳಲು ಒಪ್ಪಲಿಲ್ಲ. ನಾನು ಈ ಫೋಟೋವನ್ನು ಬೇಕೆಂದು ಕ್ಲಾಸ್ ಗ್ರೂಪಿಗೆ ಕಳುಹಿಸಿದೆ ಎಂದು ಅಂದುಕೊಂಡರು. ಈ ಘಟನೆಯಿಂದ ನನಗೆ ಬಹಳ ಮುಜುಗರ ಹಾಗೂ ನಾಚಿಕೆ ಆಯ್ತು. ಹಾಗಾಗಿ ನಾನು ಈ ಘಟನೆಯನ್ನು ಟ್ವಿಟ್ಟರಿನಲ್ಲಿ ಹೇಳಿಕೊಳ್ಳುತ್ತಿದ್ದೇನೆ ಎಂದು ಯುವಕ ಹೇಳಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫೇಸ್‍ಬುಕ್‍ನಲ್ಲಿ ನಾಳೆ ನನ್ನ ಸಾವು ಅಂತ ಪೋಸ್ಟ್- ಪೊಲೀಸರ ಅತಿಥಿಯಾದ ಯುವಕ

    ಫೇಸ್‍ಬುಕ್‍ನಲ್ಲಿ ನಾಳೆ ನನ್ನ ಸಾವು ಅಂತ ಪೋಸ್ಟ್- ಪೊಲೀಸರ ಅತಿಥಿಯಾದ ಯುವಕ

    ಚಿಕ್ಕಬಳ್ಳಾಪುರ: ನಾಳೆ ನನ್ನ ಸಾವು ಅಂತ ಫೇಸ್‍ಬುಕ್‍ನಲ್ಲಿ ಯುವಕನೊರ್ವ ಪೋಸ್ಟ್ ಮಾಡಿ ಪೇಚೆಗೆ ಸಿಲುಕಿರೋ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.

    ಚಿಕ್ಕಬಳ್ಳಾಪುರ ಮೂಲದ ಜಯಚಂದ್ರ ರೆಡ್ಡಿ ತನ್ನ ಫೇಸ್‍ಬುಕ್ ಅಕೌಂಟ್‍ನಲ್ಲಿ “ಈ ಜೀವನ ಸಾಕಾಗಿದೆ ನಾಳೆ ನನ್ನ ಸಾವು” ಅಂತ ಪೋಸ್ಟ್ ಮಾಡಿದ್ದಾನೆ. ಇದನ್ನು ಗಮನಿಸಿದ ಫೇಸ್‍ಬುಕ್‍ನ ಸ್ನೇಹಿತರು ಯಾಕೆ ಏನು ಎತ್ತ ಅಂತ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಕೆಲ ಪರಿಚಯಸ್ಥರು ಫೋನ್ ಮಾಡಿ ಕೇಳಿದ್ದಾರೆ.

    ಜಯಚಂದ್ರ ರೆಡ್ಡಿ ಇದರಿಂದ ಕೂಡಲೇ ಎಚ್ಚೆತ್ತುಕೊಂಡು ತನ್ನ ಪೋಸ್ಟ್ ಡಿಲೀಟ್ ಮಾಡಿ ಸುಮ್ಮನಾಗಿದ್ದಾನೆ. ಆದರೆ ಅಷ್ಟರಲ್ಲೇ ಈ ಪೋಸ್ಟ್ ಸ್ಕ್ರೀನ್ ಶಾಟ್ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಅವರ ಗಮನಕ್ಕೆ ಬಂದಿದ್ದು, ಜಯಚಂದ್ರನನ್ನು ಠಾಣೆಗೆ ಕರೆಸಿ ವಿಚಾರ ನಡೆಸಿ ಬುದ್ಧಿವಾದ ಹೇಳುವಂತೆ ಡಿಸಿಬಿ ಪೊಲೀಸರಿಗೆ ತಿಳಿಸಿದ್ದಾರೆ.

    ಸದ್ಯ ಡಿಸಿಬಿ ಪೊಲೀಸರು ಜಯಚಂದ್ರನಿಗೆ ಕರೆ ಮಾಡಿದ್ದು, ಆತ ತಾನು ಸೇಟ್ ದಿನ್ನೆ ಬಳಿಯ ಲಿಂಪಾಕ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಪೊಲೀಸ್ ಠಾಣೆ ಬಂದ ಜಯಚಂದ್ರ ವಿಚಾರಣೆ ವೇಳೆ ಜಯಚಂದ್ರ ಸುಮ್ಮನೆ ಪೋಸ್ಟ್ ಮಾಡಿದೆ ಅಂತ ಪೊಲೀಸರ ಬಳಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಅಂದಹಾಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಸೇರಿದಂತೆ ಅತ್ಮಹತ್ಯೆಗೆ ಪ್ರಚೋದನೆ ನೀಡುವುದು ಕೂಡ ಅಪರಾಧವಾಗಿದೆ. ಯುವಕರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾವಿನ ಸಂದೇಶಗಳನ್ನು ಸಾರೋದು ಜಾಸ್ತಿಯಾಗುತ್ತಿದ್ದು, ಇದು ಪೊಲೀಸರಿಗೆ ಒಂದೆಡೆ ತಲೆನೋವಾಗಿ ಪರಿಣಮಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸರಿಗೆ ರಾಖಿ ಕಟ್ಟಿ ಮದುವೆಗೆ ಬೇಡಿಕೆಯಿಟ್ಟ ಯುವತಿ!

    ಪೊಲೀಸರಿಗೆ ರಾಖಿ ಕಟ್ಟಿ ಮದುವೆಗೆ ಬೇಡಿಕೆಯಿಟ್ಟ ಯುವತಿ!

    ಲಕ್ನೋ: ರಕ್ಷಾಬಂಧನ ಹಬ್ಬದಂದು ಪೊಲೀಸರಿಗೆ ರಾಖಿ ಕಟ್ಟಿ ಉತ್ತರ ಪ್ರದೇಶದ ಯುವತಿಯೊಬ್ಬಳು ತನ್ನ ಮದುವೆಗೆ ಬೇಡಿಕೆಯಿಟ್ಟು ಸುದ್ದಿಯಾಗಿದ್ದಾಳೆ.

    ನರ್ಗೀಸ್ ಶಹಾಜಪುರ್ ನಿವಾಸಿ ರಾಜುನನ್ನು ಪ್ರೀತಿಸುತ್ತಿದ್ದಳು. ರಾಜು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲದೇ ಇಬ್ಬರ ಕುಟುಂಬದವರು ಸಂಬಂಧಿಕರಾಗಿದ್ದು, ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು.

    ನಾಲ್ಕು ತಿಂಗಳ ಹಿಂದೆ ಇಬ್ಬರ ಕುಟುಂಬದವರು ಒಪ್ಪಿ ಮದುವೆಯನ್ನು ನಿಶ್ಚಯಿಸಿದ್ದರು. ದೀಪಾವಳಿ ಮೊದಲು ಇಬ್ಬರ ಮದುವೆಯಾಗಬೇಕಿತ್ತು. ಆದರೆ ಮದುವೆ ಮೊದಲು ಇಬ್ಬರು ಓಡಾಡುವುದು ನೋಡಿ ನರ್ಗೀಸ್ ಪೋಷಕರು ಮದುವೆಯನ್ನು ಕ್ಯಾನ್ಸಲ್ ಮಾಡಿದ್ದರು. ಅಲ್ಲದೇ ಆಕೆಯ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದರು. ಶನಿವಾರ ಒತ್ತಾಯಪೂರ್ವಕವಾಗಿ ಬೇರೆ ಯುವಕನೊಂದಿಗೆ ನರ್ಗೀಸ್ ಮದುವೆ ಮಾಡಲು ಮುಂದಾಗಿದ್ದರು.

    ಮದುವೆ ನಿಶ್ಚಯ ಆಗುವ ಮೊದಲು ನರ್ಗೀಸ್ ತಂದೆ ರಾಜುವಿಗೆ ನೋಯ್ಡಾದಲ್ಲಿ ಒಂದು ಮನೆಯನ್ನು ಕಟ್ಟಿಸಬೇಕೆಂದು ಷರತ್ತು ಹಾಕಿದ್ದರು. ಈ ಮನೆ ಕಟ್ಟಲು ಒಂದು ವರ್ಷ ಅವಧಿಯನ್ನು ಕೂಡ ನೀಡಿದ್ದರು. ಆದರೆ ರಾಜುಗೆ ಸೈಟ್ ಖರೀದಿಸಿ ಮನೆ ಕಟ್ಟಲು ಹಣವಿರಲಿಲ್ಲ. ಇದ್ದರಿಂದ ನರ್ಗೀಸ್ ತಂದೆ ಬೇಸರಗೊಂಡು ಮದುವೆ ಮುರಿದ್ದರು. ಅಲ್ಲದೇ ತನ್ನ ಮಗಳನ್ನು ಬೇರೆ ಯುವಕನ ಜೊತೆ ಮದುವೆ ಮಾಡಿಸಲು ಮುಂದಾಗಿದ್ದರು.

    ಈ ವಿಚಾರ ತಿಳಿಯುತ್ತಿದ್ದಂತೆ ರಾಜುವನ್ನೇ ಮದುವೆಯಾಗಬೇಕೆಂದು ನರ್ಗೀಸ್ ಹಠ ಹಿಡಿದು ರಾತ್ರೋರಾತ್ರಿ ಮನೆಯಿಂದ ಓಡಿ ಹೋಗಿ ಪರಿಚಿತರ ಮನೆಯಲ್ಲಿ ರಾತ್ರಿ ಕಳೆದಿದ್ದಾಳೆ. ನಂತರ ಬೆಳಗ್ಗೆ ರಾಜುವನ್ನು ಕರೆದುಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ನರ್ಗೀಸ್, ರಾಜು ಜೊತೆ ಸೆಕ್ಟರ್ 49 ಪೊಲೀಸ್ ಠಾಣೆಗೆ ಹೋಗಿ ಕ್ಷೇತ್ರಾಧಿಕಾರಿ ಶ್ವೇತಾಬ್ ಪಾಂಡೆ ಹಾಗೂ ಅಲ್ಲಿದ್ದ ಎಲ್ಲ ಪೊಲೀಸರಿಗೆ ರಾಖಿ ಕಟ್ಟಿದ್ದಾಳೆ. ಪೊಲೀಸರಿಗೆ ರಾಖಿ ಕಟ್ಟಿ ನರ್ಗೀಸ್ ತನ್ನ ಪೋಷಕರು ಇಷ್ಟವಿಲ್ಲದ ಮದುವೆ ಮಾಡಿಸುತ್ತಿದ್ದಾರೆ. ಹೀಗಾಗಿ ನಮಗೆ ರಕ್ಷಣೆ ನೀಡಿ ಎಂದು ಕೇಳಿಕೊಂಡಿದ್ದಾಳೆ.

    ನಂತರ ಪೊಲೀಸರು ಇಬ್ಬರ ಕುಟುಂಬದವರನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಿದ್ದಾರೆ. ಎರಡು ಕುಟುಂಬದವರು ಈ ಮದುವೆಗೆ ಒಪ್ಪಿದ ಬಳಿಕ ರಾಜು ಮತ್ತು ನರ್ಗೀಸ್ ಮನೆಗೆ ತೆರಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಗ್ಳೂರಿನಲ್ಲಿ ನೈತಿಕ ಪೊಲೀಸ್‍ಗಿರಿ -ಬಕ್ರೀದ್ ಆಚರಿಸಲು ಬಂದ ಯುವಕ, ಯುವತಿಯರನ್ನು ತಡೆದು ಹಲ್ಲೆ

    ಮಂಗ್ಳೂರಿನಲ್ಲಿ ನೈತಿಕ ಪೊಲೀಸ್‍ಗಿರಿ -ಬಕ್ರೀದ್ ಆಚರಿಸಲು ಬಂದ ಯುವಕ, ಯುವತಿಯರನ್ನು ತಡೆದು ಹಲ್ಲೆ

    ಮಂಗಳೂರು: ಬಕ್ರೀದ್ ಆಚರಿಸಲು ಬಂದ ಅನ್ಯಧರ್ಮೀಯ ಯುವಕ, ಯುವತಿಯರನ್ನು ತಡೆದು ಹಲ್ಲೆಗೈಯುವ ಮೂಲಕ ನೈತಿಕ ಪೊಲೀಸ್‍ಗಿರಿ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಟ್ಯಾರ್ ಸಮೀಪದ ರೆಂಜದಲ್ಲಿ ನಡೆದಿದೆ.

    ಮಂಗಳವಾರ ಬಕ್ರೀದ್ ಆಚರಣೆ ಇದ್ದ ಕಾರಣ 5 ಯುವತಿಯರು ಮತ್ತು 5 ಯುವಕರು ಆಗಮಿಸಿದ್ದರು. ಈ ವೇಳೆ ಗುಂಪೊಂದು ತಡೆದು ಯುವತಿಯರನ್ನು ನಿಂದಿಸಿದ್ದಾರೆ. ಇದನ್ನು ತಡೆಯಲು ಬಂದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಪ್ಯ ಪೊಲೀಸರು ಏಳು ಮಂದಿ ಆರೋಪಿಗಳ ಬಂಧಿಸಿದ್ದಾರೆ. ರುಕ್ಮ, ಗಣೇಶ್, ಕುಂಞ, ದುಗ್ಗಪ್ಪ, ಪುರುಷೋತ್ತಮ್, ಸತೀಶ್, ಶೇಷಪ್ಪ ಬಂಧಿತ ಆರೋಪಿಗಳಾಗಿದ್ದಾರೆ.

    ನಡೆದಿದ್ದು ಏನು?
    ಹಲ್ಲೆಗೊಳಾಗದ ಯುವಕ, ಯುವತಿಯರು ಮಂಗಳೂರಿನ ಮೂಲದವರಾಗಿದ್ದು, ಸ್ನೇಹಿತನ ಆಹ್ವಾನ ಮೇಲೆ ಪುತ್ತೂರು ಬಳಿಯ ನಿದ್ಬಪಳ್ಳಿ ಗ್ರಾಮದ ಅಬ್ದುಲ್ ಎಂಬವರ ಮನೆಗೆ ಬಕ್ರೀದ್ ಆಚರಿಸಲು ಮಂಗಳವಾರ ಮಧ್ಯಾಹ್ನದ ವೇಳೆ ಬಂದಿದ್ದರು. ಮನೆಗೆ ತೆರಳಲು ಆಟೋದಲ್ಲಿ ಹೋಗುವ ವೇಳೆ ಇದನ್ನು ಆಕ್ಷೇಪಿಸಿದ ಸ್ಥಳೀಯ ಆಟೋ ಚಾಲಕ ಯುವತಿಯರನ್ನು ನಿಂದನೆ ಮಾಡಿದ್ದಾನೆ. ಈ ವೇಳೆ ಅಡ್ಡ ಬಂದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ.

    ಬಳಿಕ ಹಲ್ಲೆಗೊಳಗಾದ ಯುವಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿ ತೆರಳಿದ್ದು, ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಯುವತಿಯರು ನೀಡಿದ ದೂರಿನ ಮೇಲೆ ಪೊಲೀಸರು ಕ್ರಮಗೈಗೊಂಡಿದ್ದಾರೆ. ಘಟನೆ ಕುರಿತು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ತ್ಯಾಜ್ಯ ವಿಲೇವಾರಿಗೆ ಆಗ್ರಹಿಸಿ ಮೊಬೈಲ್ ಟವರ್ ಏರಿ ಕುಳಿತ ಯುವಕರು!

    ತ್ಯಾಜ್ಯ ವಿಲೇವಾರಿಗೆ ಆಗ್ರಹಿಸಿ ಮೊಬೈಲ್ ಟವರ್ ಏರಿ ಕುಳಿತ ಯುವಕರು!

    ಚೆನ್ನೈ: ಸ್ಥಳೀಯ ಪ್ರದೇಶಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದನ್ನು ಹಾಗೂ ಅಧಿಕಾರಿಗಳ ಉದಾಸೀನತೆಯ ವಿರುದ್ಧ ಕಿಡಿಕಾರಿದ ಮೂವರು ಯುವಕರು 150 ಅಡಿ ಎತ್ತರ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ್ದಾರೆ.

    ಈ ಘಟನೆ ನಗರದ ಹೊರವಲಯದಲ್ಲಿ ಬುಧವಾರ ನಡೆದಿದೆ. ಪ್ರತಿಭಟನಾಕಾರರನ್ನು ದಿನಕರನ್(35), ಪ್ರಭಾಕರನ್(24) ಹಾಗೂ ವಿಕ್ರಮ್(36) ಎಂದು ಗುರುತಿಸಲಾಗಿದ್ದು, ಈ ಮೂವರು ಕಸದ ರಾಶಿಯನ್ನು ವಿಲೇವಾರಿ ಮಾಡುವಂತೆ ಆಗ್ರಹಿಸಿದ್ದಾರೆ.

    ದಿನಕರನ್, ಪ್ರಭಾಕರನ್ ಹಾಗೂ ವಿಕ್ರಮ್ ಈ ಮೂವರು ಬುಧವಾರ ಬೆಳಗ್ಗೆ 6.30ರ ಸುಮಾರಿಗೆ ತಿರುಮಲೈ ಅಲ್ವಾಪುರಂ ಮುಖ್ಯರಸ್ತೆಯಲ್ಲಿರುವ ಮೊಬೈಲ್ ಟವರ್ ಏರಿ ಕುಳಿತಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಈ ಮೂವರನ್ನು ಟವರ್ ನಿಂದ ಟವರ್ ನಿಂದ ಕೆಳಗಿಳಿಯುವಂತೆ ಕೇಳಿಕೊಂಡಿದ್ದಾರೆ. ಅಲ್ಲದೇ ಕೂಡಲೆ ಈ ಬಗ್ಗೆ ಶಂಕರ್ ನಗರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕೆಳಗಿಳಿಯುವಂತೆ ಯುವಕರನ್ನು ಪರಿಪರಿಯಾಗಿ ಬೇಡಿಕೊಂಡ್ರೂ, ಯಾವುದೇ ಪ್ರಯೋಜನವಾಗಿಲ್ಲ. ಮೂವರು ಪೊಲೀಸರ ಮಾತನ್ನು ನಿರಾಕರಿಸಿದ್ದಾರೆ. ಅಲ್ಲದೇ ನಮ್ಮ ಪ್ರದೇಶದಲ್ಲಿ ತ್ಯಾಜ್ಯ ಸುರಿಯುತ್ತಿರುವ ಲಾರಿ ಚಾಲಕರ ವಿರುದ್ಧ ಕ್ರಮಕೈಗೊಳ್ಳುವಂತೆ ಬೇಡಿಕೆಯಿಟ್ಟಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಈಗಾಗಲೇ ಲಾರಿ ಮಾಲಕ ಅರೋಕಿಯಾ ರಾಜ(40) ಎಂಬಾತನನ್ನು ಬಂಧಿಸಲಾಗಿದ್ದು, ಸದ್ಯ ವಿಚಾರಣೆ ನಡೆಸುತ್ತಿದ್ದಾರೆ ಅಂತ ಪ್ರತಿಭಟನಾಕಾರರಿಗೆ ಪೊಲೀಸರು ಮಾಹಿತಿ ನೀಡಿದ್ರು. ಪೊಲೀಸರ ಹೇಳಿಕೆಯ ಬಳಿಕ ಮೂವರು ಟವರ್ ನಿಂದ ಕೆಳಗಿಳಿದಿದ್ದಾರೆ. ಆದ್ರೆ ಈ ವೇಳೆ ಪ್ರತಿಭಟನಾಕಾರ ದಿನಕರನ್ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಉಳಿದ ಇಬ್ಬರನ್ನು ಶಂಕರ್ ನಗರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 1.5 ಲಕ್ಷರೂ. ದೇಣಿಗೆ ನೀಡಿದ್ಳು ಮೀನು ಮಾರಿ ಟ್ರೋಲಾಗಿದ್ದ ಕೇರಳ ಯುವತಿ!

    1.5 ಲಕ್ಷರೂ. ದೇಣಿಗೆ ನೀಡಿದ್ಳು ಮೀನು ಮಾರಿ ಟ್ರೋಲಾಗಿದ್ದ ಕೇರಳ ಯುವತಿ!

    ತಿರುವನಂತಪುರಂ: ಕಳೆದ ಕೆಲ ದಿನಗಳ ಹಿಂದೆ ಕಾಲೇಜು ಶಿಕ್ಷಣ ಪಡೆಯಲು ಮೀನು ಮಾರಾಟ ಮಾಡಿ ಟ್ರೋಲ್ ಆಗಿದ್ದ ಹಾನನ್ ಹಮೀದ್ ಎಂಬ ಯುವತಿ ಕೇರಳ ಪ್ರವಾಹ ಸಂತ್ರಸ್ತ ನಿಧಿಗೆ 1.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಾನನ್ ಹಮೀದ್, ಜನರು ತನಗಾಗಿ ನೀಡಿದನ್ನು ದೇಣಿಗೆಯಾಗಿ ನೀಡಿದ್ದೇನೆ. ನನಗೆ ಸಹಾಯ ಮಾಡಿದ ಹಲವು ಮಂದಿ ಸದ್ಯ ಸಂಕಷ್ಟದಲ್ಲಿದ್ದು. ಅವರ ಸಹಾಯವನ್ನು ಹಿಂದಿರುಗಿಸುವ ಅಗತ್ಯವಿದೆ. ನನ್ನಿಂದ ಇದನ್ನಷ್ಟೇ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.

    ನಾನು ಈ ಹಣವನ್ನು ನೇರ ಸಿಎಂ ಅವರ ನಿಧಿಗೆ ವರ್ಗಾಹಿಸುತ್ತಿದ್ದೆ. ಆದರೆ ಸದ್ಯ ಮೊಬೈಲ್ ಹಾಗೂ ಬ್ಯಾಕಿಂಗ್ ಸೇವೆ ಲಭ್ಯವಿಲ್ಲ. ಅದ್ದರಿಂದ ನೇರ ಸಿಎಂ ಬಳಿ ತೆರಳಿ ಚೆಕ್ ನೀಡಲಿದ್ದೆನೆ. ನಾನಿರುವ ಪ್ರದೇಶದಲ್ಲಿ ಓಡಾಟ ನಡೆಸಲು ಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಹಲವರ ಮನೆ ಕೊಚ್ಚಿ ಹೋಗಿದೆ, ಆದರೆ ನನಗೆ ಆ ಸಮಸ್ಯೆ ಇಲ್ಲ. ಏಕೆಂದರೆ ಪ್ರವಾಹದಲ್ಲಿ ಕೊಚ್ಚಿ ಹೋಗಲು ತಮಗೆ ಮನೆಯೇ ಇಲ್ಲ ಎಂದು ಹೇಳಿದ್ದಾರೆ.

    ಅಂದಹಾಗೇ ಕಳೆದ ಆಗಸ್ಟ್ ತಿಂಗಳಿನಲ್ಲಿ ಕಾಲೇಜು ಸಮವಸ್ತ್ರ ಧರಿಸಿ ಮೀನು ಮಾರಾಟ ಮಾಡುತ್ತಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದರು. ಬಳಿಕ ಶಿಕ್ಷಣಕ್ಕೆ ನೆರವು ಮಂದಿ ಮುಂದೇ ಬಂದು ಸಹಾಯದ ಅಸ್ತ ಚಾಚಿದ್ದರು. ಬಡ ಕುಟುಂಬ ಯುವತಿಯಾಗಿರುವ ಹಮೀದ್ ತನ್ನ ತಾಯಿ ಹಾಗೂ ತಮ್ಮನ ಜೊತೆ ಜೀವನ ನಿರ್ವಹಣೆ ಹಾಗೂ ಶಿಕ್ಷಣಕ್ಕಾಗಿ ಕಾಲೇಜು ಮುಗಿದ ಬಳಿಕ ಸಣ್ಣ ಸಣ್ಣ ಕೆಲಸ ಮಾಡುತ್ತಾ ಹಣ ಗಳಿಸಿ ತಾಯಿಗೆ ನೆರವಾಗುತ್ತಿದ್ದರು. ಈ ವೇಳೆ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv