Tag: youth

  • ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಯುವಕನಿಗೆ ಬೇಕಿದೆ ಸೂಕ್ತ ಚಿಕಿತ್ಸೆ

    ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಯುವಕನಿಗೆ ಬೇಕಿದೆ ಸೂಕ್ತ ಚಿಕಿತ್ಸೆ

    ಬೆಂಗಳೂರು: 25 ವರ್ಷದ ಯುವಕನಿಗೆ ಬದುಕಿನಲ್ಲಿ ಏನಾನದರೂ ಸಾಧಿಸಬೇಕು, ತಾಯಿ-ತಂಗಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಡಿಗ್ರಿ ಮಾಡುತ್ತಿದ್ದನು. ಅದರೆ ವಿಧಿಯಾಟವೇ ಬೇರೆಯಾಗಿತ್ತು. ವಾಂತಿ, ಭೇದಿ ಅಂತಾ ಆಸ್ಪತ್ರೆ ಸೇರಿದ್ದ ಯುವಕ ಕಳೆದ 6 ವರ್ಷದಿಂದ ಕಾಲುಗಳ ಸ್ವಾಧೀನ ಕಳೆದುಕೊಂಡು ಮನೆಗೆ ಆಸರೆಯಾಗಬೇಕಿದ್ದವ ತಾಯಿ ತಂಗಿಯ ಆರೈಕೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ.

    ಹೌದು. ಯುವಕ ಅಭಿಷೇಕ್ ಇದೀಗ ಅಮ್ಮ ಮತ್ತು ತಂಗಿಯ ಆರೈಕೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ. ಬೆಂಗಳೂರಿನ ನಾಗರಬಾವಿ ಸಮೀಪ ಕೆಂಗೆಂಟೆ ನಿವಾಸಿಯಾಗಿರೋ ಈತ ತಾಯಿ ಮಂಗಳ, ತಂಗಿ ಲಕ್ಷ್ಮೀಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಮಕ್ಕಳು ಸಣ್ಣವರಾಗಿದ್ದಾಗಲೇ ತಂದೆ ಕುಡಿತದ ಚಟಕ್ಕೆ ಬಿದ್ದು ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಕುಟುಂಬದ ಜವಾಬ್ದಾರಿಯನ್ನು ಹೊತ್ತ ತಾಯಿ ತನ್ನ ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಚೆನ್ನಾಗಿ ನೋಡಿಕೊಂಡಿದ್ದಾರೆ.

    6 ವರ್ಷಗಳ ಹಿಂದೆ ತಾಯಿಯ ಕಷ್ಟವನ್ನ ಅರಿತಿದ್ದ ಮಗ ಅಭಿಷೇಕ್, ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ. ಇನ್ನೇನು ತಾಯಿ ಮತ್ತು ತಂಗಿಯನ್ನು ಸುಖವಾಗಿ ನೋಡಿಕೊಳ್ಳಲು ಉದ್ಯೋಗ ಮಾಡಬೇಕೆಂಬ ಖುಷಿಯಲ್ಲಿದ್ದನು. ಆದ್ರೆ ಅಭಿಷೇಕ್‍ಗೆ ವಾಂತಿ-ಭೇದಿ ಶುರುವಾಗಿ ಮೂರ್ಛೆ ರೋಗ ಆವರಿಸಿತ್ತು. ಮಗನ ಅವಸ್ಥೆಯನ್ನು ಕಂಡು ತಾಯಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ವೈದ್ಯರ ಎಡವಟ್ಟೋ ಏನೋ ಡಾಕ್ಟರ್ ನೀಡಿದ ಮಾತ್ರೆ ಸೇವಿಸಿದ ಬಳಿಕ ಹಂತ ಹಂತವಾಗಿ ಎರಡೂ ಕಾಲುಗಳ ಶಕ್ತಿ ಕುಂಠಿತಗೊಂಡಿದ್ದು, ಮಾತನಾಡಲು, ಓಡಾಡಲು ಹಾಗೂ ತನ್ನ ಕೆಲಸವನ್ನೂ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಕಾಲುಗಳು ಸ್ವಾಧೀನತೆ ಇಲ್ಲದೇ ಅಭಿಷೇಕ್ ಹಾಸಿಗೆ ಹಿಡಿದಿದ್ದಾನೆ.

    ಮಗನಿಗೆ ಊಟ ತಿನ್ನಿಸುವುದರಿಂದ ಹಿಡಿದು ದಿನನಿತ್ಯ ಕರ್ಮಾದಿಗಳಿಗೆ ತಾಯಿ ಮತ್ತು ತಂಗಿ ಆರೈಕೆ ಮಾಡುತ್ತಿದ್ದಾರೆ. ಈತನನ್ನು ನೋಡಿಕೊಳ್ಳಲು ಒಬ್ಬರಾದರೂ ಮನೆಯಲ್ಲಿ ಇರಲೇಬೇಕು. ತಂಗಿ ಓದು ಮುಗಿಸಿ ಮನೇಲಿದ್ರೆ ತಾಯಿ ಖಾಸಗಿ ಶಾಲೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದಾರೆ. ಬರುವ ಹಣದಿಂದ ಮಗನ ಔಷಧಿ, ಬಾಡಿಗೆಗೆ ಸಾಕಾಗುತ್ತಿದೆ.

    ಗಂಡು ದಿಕ್ಕಿಲ್ಲದ ಮನೆಗೆ ಆಸರೆಯಾಗಬೇಕಿದ್ದ ಮಗ ಹಾಸಿಗೆ ಹಿಡಿದಿದ್ದು ಜೀವನ ಸಾಗಿಸಲು ಕಷ್ಟಕರವಾಗಿದೆ. ಕಷ್ಟಪಟ್ಟು ಮಾತನಾಡಲು ಯತ್ನಿಸಿದ ಅಭಿಷೇಕ್, ನನಗೆ ಸಹಾಯ ಮಾಡಿ, ನನ್ನ ಜೀವನಕ್ಕೆ ಆಧಾರವಾಗಿ ಎಂದು ಕೇಳಿಕೊಳ್ಳುತ್ತಿದ್ದಾನೆ. ಇತ್ತ ಮಗ ದುಡಿದು ಅವನ ಕಾಲ ಮೇಲೆ ನಿಂತು ಜೀವನ ಮಾಡಲು ಚಿಕಿತ್ಸೆ ಕೊಡಿಸಿ, ಪಿಂಚಣಿ ಸೌಲಭ್ಯ ಕೊಡಿಸಿ ಎಂದು ತಾಯಿ ಮತ್ತು ತಂಗಿ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಬಯಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=b2g_gWGZ4iQ

  • ಈಜಾಡಿ ಸುಸ್ತಾಗಿ ನೋಡನೋಡುತ್ತಲೇ ಕಣ್ಮರೆ- ಮೋಜಿಗಾಗಿ ಯುವಕನ ಜೀವವೇ ಹೋಯ್ತು!

    ಈಜಾಡಿ ಸುಸ್ತಾಗಿ ನೋಡನೋಡುತ್ತಲೇ ಕಣ್ಮರೆ- ಮೋಜಿಗಾಗಿ ಯುವಕನ ಜೀವವೇ ಹೋಯ್ತು!

    ಬೆಂಗಳೂರು: ಮೋಜಿಗಾಗಿ ಕೆರೆಯಲ್ಲಿ ಈಜಲು ಹೋದ ಯುವಕ ನೀರುಪಾಲಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಳೆ ನಿಜಗಲ್ ಕೆರೆಯಲ್ಲಿ ನಡೆದಿದೆ.

    ತುಮಕೂರು ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ಶ್ರೀನಿವಾಸ್ ಮೃತ ದುರ್ದೈವಿ. ಮೃತ ಶ್ರೀನಿವಾಸ್ ನಂದಿಹಳ್ಳಿ ಬಳಿಯ ರಿಲಯಾನ್ಸ್ ವೇರ್ ಔಸ್‍ನಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿಕೊಂಡು ಮುಂಜಾನೆ ತನ್ನ ಆರು ಮಂದಿ ಸ್ನೇಹಿತರಾದ ರಾಘವೇಂದ್ರ, ಮೋಹನ್ ಕುಮಾರ್, ವಿನಯ್ ಸಿಂಗ್, ಸಂತೋಷ್, ಸುರೇಶ್ ಬಾಬು ಮತ್ತು ತೇಜಸ್ ಎಲ್ಲರೊಂದಿಗೆ ಈಜಲು ತೆರಳಿದ್ದನು.

    ಈ ವೇಳೆ ಈಜಿ ಈಜಿ ಸುಸ್ತಾದ ಯುವಕ ನೋಡ ನೋಡುತ್ತಲೆ ಕಣ್ಮರೆಯಾಗಿದ್ದಾನೆ. ಶ್ರೀನಿವಾಸ್ ಕಣ್ಮೆರೆಯಾಗುವ ವಿಡಿಯೋ ಮತ್ತೊಬ್ಬ ಸ್ನೇಹಿತನ ಮೊಬೈಲ್‍ ನಲ್ಲಿ ಸೆರೆಯಾಗಿದೆ. ಈತನೊಂದಿಗೆ ಇತರ ಸ್ನೇಹಿತರು ಸಹ ಈಜುತ್ತಿದ್ದರು. ಆದರೆ ಯಾರು ಸಹ ಆತನನ್ನು ಉಳಿಸಲಾಗಲಿಲ್ಲ. ಶ್ರೀನಿವಾಸ್ ಮುಳುಗುತ್ತಿರುವಾಗ ದಡದಲ್ಲಿರುವ ಮತ್ತೊಬ್ಬ ಸ್ನೇಹಿತ, ಅವನು ಮುಳುಗುತ್ತಿದ್ದಾನೆ ಜುಟ್ಟು ಹಿಡಿದು ಮೇಲೆತ್ತಿ ಅನ್ನುತ್ತಾನೆ. ಆಗ ಮೇಲೆತ್ತಲಾಗುವುದಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ಸರೆಯಾಗಿದೆ.

    ಶ್ರೀನಿವಾಸ್‍ಗೆ ನೀರು ಎಂದರೆ ಭಯ, ಆತನಿಗೆ ಈಜು ಬರುತ್ತಿರಲಿಲ್ಲ ಎಂದು ಮೃತಳ ಚಿಕ್ಕಮ್ಮ ಆರೋಪಿಸಿದ್ದಾರೆ. ಆದರೆ ಆತನಿಗೆ ನೀರಿಗೆ ಇಳಿಯಬೇಡ ಎಂದರು ಸ್ವತಃ ಅವನೇ ಈಜಲು ತೆರಳಿದ್ದ ಎಂದು ಸ್ನೇಹಿತ ಸಂತೋಷ್ ತಿಳಿಸಿದ್ದಾನೆ. ಆದ್ದರಿಂದ ಈ ಘಟನೆಯ ಸುತ್ತ ಹಲವಾರು ಹನುಮಾನಗಳು ಸೃಷ್ಟಿಯಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಯುವಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿ ಮೃತ ಶ್ರೀನಿವಾಸ್ ದೇಹವನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಸದ್ಯಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಸ್ನೇಹಿತರನ್ನು ಡಾಬಸ್ ಪೇಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆಗೆ ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿರುದ್ಯೋಗದಿಂದ ಯುವಕರು ಅತ್ಯಾಚಾರ ಮಾಡ್ತಾರೆ – ಬಿಜೆಪಿ ಶಾಸಕಿ

    ನಿರುದ್ಯೋಗದಿಂದ ಯುವಕರು ಅತ್ಯಾಚಾರ ಮಾಡ್ತಾರೆ – ಬಿಜೆಪಿ ಶಾಸಕಿ

    ಚಂಡೀಗಢ: ನಿರುದ್ಯೋಗಿ ಯುವಕರು ಹತಾಶೆಗೆ ಒಳಗಾಗಿ ಸಾಮೂಹಿಕ ಅತ್ಯಾಚಾರಕ್ಕೆ ಮುಂದಾಗುತ್ತಾರೆ ಎಂದು ಹರ್ಯಾಣದ ಬಿಜೆಪಿ ಶಾಸಕಿ ಪ್ರೇಮಲತಾ ವಿವದಾತ್ಮಕ ಹೇಳಿಕೆ ನೀಡಿದ್ದಾರೆ.

    ಸಿಬಿಎಸ್‍ಎ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ರಾಜ್ಯದ ಯುವತಿಯೊಬ್ಬಳನ್ನು ಅಪಹರಿಸಿ ಕೆಲ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಪ್ರಕರಣದ ಕುರಿತು ಪ್ರೇಮಲತಾ ಅವರು ಪ್ರತಿಕ್ರಿಯೆ ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಪ್ರೇಮಲತಾ ಅವರು ಕೇಂದ್ರ ಸಚಿವ ಬಿರೇಂದ್ರ ಸಿಂಗ್ ಪತ್ನಿಯಾಗಿದ್ದಾರೆ.

    ಪ್ರೇಮಲತಾ ಹೇಳಿದ್ದು ಏನು?
    ಯುವತಿಯನ್ನ ನೋಡುತ್ತಿದ್ದಂತೆ ಯುವಕರ ದೃಷ್ಟಿಕೋನ ಬದಲಾಗುತ್ತಿದೆ. ಸಮಾಜದಲ್ಲಿ ಬದಲಾವಣೆ ಕಾಣುತ್ತಿದ್ದು, ಉದ್ಯೋಗ ಇಲ್ಲದ ಕಾರಣ ಯುವಕರು ಮಾನಸಿನ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅವರು ಭವಿಷ್ಯದ ಬಗ್ಗೆ ಯೋಚಿಸದೆ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ಹೇಳಿದ ಅವರು, ಕೃತ್ಯ ಎಸಗಿದವರನ್ನು ತಕ್ಷಣವೇ ಗಲ್ಲಿಗೆ ಏರಿಸುವಂತೆ ಜನತೆ ಒತ್ತಾಯಿಸುತ್ತಿದ್ದಾರೆ. ಆದರೆ ಅದಕ್ಕೆ ಕಾನೂನು ರಚನೆ ಆಗಲು ಸಮಯಬೇಕಾಗುತ್ತದೆ ಎಂದು ಪ್ರೇಮಲತಾ ಹೇಳಿದ್ದಾರೆ. ಇದನ್ನು ಓದಿ: ಗ್ಯಾಂಗ್ ರೇಪ್- ಪ್ರಮುಖ ಆರೋಪಿ ಓರ್ವ ರಕ್ಷಣಾ ಸಿಬ್ಬಂದಿ

    ಏನಿದು ಪ್ರಕರಣ?:
    ಹರಿಯಾಣದ ಮಹೇಂದ್ರಗಢ ಎಂಬಲ್ಲಿ ಸಿಬಿಎಸ್‍ಇ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿ, ರಾಷ್ಟ್ರಪತಿಯವರಿಂದ ಬಹುಮಾನ ಸ್ವೀಕರಿಸಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಬಳಿಕ ಅತ್ಯಾಚಾರವೆಸಗಿರುವ ಘಟನೆ ಬುಧವಾರ ನಡೆದಿತ್ತು. ಸಂತ್ರಸ್ತೆ 12ನೇ ತರಗತಿಯಲ್ಲಿ ಓದುತ್ತಿದ್ದಳು. ಈಕೆ ರಿವಾರಿಯಲ್ಲಿಯಲ್ಲಿರೋ ತನ್ನ ಗ್ರಾಮಕ್ಕೆ ಕೋಚಿಂಗ್ ಗೆಂದು ತೆರಳುತ್ತಿದ್ದಳು. ಈ ವೇಳೆ 3 ಮಂದಿ ಯುವಕರ ಗುಂಪೊಂದು ಕಾರಿನಲ್ಲಿ ಬಂದು ಆಕೆಯನ್ನು ಅಡ್ಡಹಾಕಿತ್ತು. ಅಲ್ಲದೇ ಬಳಿಕ ವಿದ್ಯಾರ್ಥಿನಿಯನ್ನು ತಮ್ಮ ಕಾರಿನೊಳಗೆ ಎಳೆದು ಹಾಕಿದ್ದಾರೆ. ಹೀಗೆ ಅಪಹರಣ ಮಾಡಿದ ಬಳಿಕ ಕಾರಿನಲ್ಲಿಯೇ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು ಅಂತ ವರದಿಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಂಪೂರ್ಣ ನಗ್ನನಾಗಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಯುವಕ ಪೊಲೀಸರ ವಶಕ್ಕೆ

    ಸಂಪೂರ್ಣ ನಗ್ನನಾಗಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಯುವಕ ಪೊಲೀಸರ ವಶಕ್ಕೆ

    ಬೆಂಗಳೂರು: ಬಟ್ಟೆ ತೆಗೆದು ಸಂಪೂರ್ಣ ನಗ್ನನಾಗಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ನಡೆದಿದೆ.

    ಈಶಾನ್ಯ ಮೂಲದ ಯುವಕ ಬಟ್ಟೆ ಬಿಚ್ಚಿ ಸಂಪೂರ್ಣ ನಗ್ನವಾಗಿ ತಿರುಗಾಡುತ್ತಿದ್ದನು. ಅಲ್ಲದೇ ಸೈಕೋ ರೀತಿ ವರ್ತಿಸುತ್ತಿದ್ದನು. ರಸ್ತೆಯಲ್ಲಿ ಈತನ ವರ್ತನೆಯಿಂದ ಸ್ಥಳೀಯರು ಬೇಸತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸದ್ಯ ಯುವಕನನ್ನು ಹೈಗ್ರೌಂಡ್ಸ್ ಪೋಲೀಸರು ವಶಕ್ಕೆ ಪಡೆದಿದ್ದು, ಯುವಕ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 9 ವರ್ಷದಿಂದ ಗಣೇಶನ ನಿರ್ಮಿಸ್ತಿದ್ದಾರೆ ರಾಯಚೂರಿನ ವ್ಯಕ್ತಿ!

    9 ವರ್ಷದಿಂದ ಗಣೇಶನ ನಿರ್ಮಿಸ್ತಿದ್ದಾರೆ ರಾಯಚೂರಿನ ವ್ಯಕ್ತಿ!

    ರಾಯಚೂರು: ಗಣೇಶ ಹಬ್ಬ ಅಂದ್ರೆ ಅದರ ಸಂಭ್ರಮ, ಮೆರವಣಿಗೆ ಅಬ್ಬರಾನೇ ಬೇರೆ. ಆದ್ರೆ ವಿನಾಯಕನ ಮೆರವಣಿಗೆ ವೇಳೆ ಕೋಮು ಸೌಹಾರ್ದ ಕದಡುವಂತಹ ಕಹಿ ಘಟನೆಗಳು ಅಲ್ಲಲ್ಲಿ ಈಗಲೂ ನಡೆಯುತ್ತಲೇ ಇರುತ್ತವೆ. ಪೊಲೀಸರಿಗಂತೂ ಕಾನೂನು ಸುವ್ಯವಸ್ಥೆ ಕಾಪಾಡುವುದು ದೊಡ್ಡ ಸವಾಲೇ ಸರಿ. ಆದ್ರೆ ರಾಯಚೂರಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಒಂಬತ್ತು ವರ್ಷಗಳಿಂದ ಗಣೇಶನನ್ನ ನಿರ್ಮಿಸುವ ಮೂಲಕ ಸೌಹಾರ್ದತೆಯ ಸಂಕೇತವಾಗಿದ್ದಾರೆ.

    ಹೌದು. ರಾಯಚೂರಿನ ಶಕ್ತಿನಗರದ ನಿವಾಸಿಯಾಗಿರುವ ಫಿರೋಜ್, ಧಾನ್ಯಗಳನ್ನ ಜೋಡಿಸಿ, ಗೋಣಿ ಚೀಲ ಹೊಲಿದು ಬಣ್ಣ ಬಳಿಯುವ ಮೂಲಕ ಕಳೆದ ಒಂಬತ್ತು ವರ್ಷಗಳಿಂದ ನಗರದ ತೀನ್‍ಕಂದಿಲ್‍ನ ಕಲ್ಲಾನೆ ಮೇಲೆ ಗಣೇಶನನ್ನ ನಿರ್ಮಿಸುತ್ತಿದ್ದಾರೆ. ಇದನ್ನೂ ಓದಿ: ಗಣೇಶ ಚತುರ್ಥಿಗೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್ ಮಾಡಿ

    ಕಲ್ಲಾನೆ ಗಜಾನನ ಮಹೋತ್ಸವ ಸಮಿತಿಯೂ ಸಹ ಸೌಹಾರ್ದತೆ ಮೆರೆದು ಫಿರೋಜ್ ನಿಂದ ಗಣೇಶನ ವಿಗ್ರಹ ನಿರ್ಮಾಣ ಕಾರ್ಯ ಮಾಡಿಸುತ್ತಿದೆ. ಉಳಿದ ಸಮಯದಲ್ಲಿ ಲಕ್ಷ್ಮಿ ವಿಗ್ರಹ ಸೇರಿ ಹೊಸ ಮನೆಗಳಿಗೆ ಕಬ್ಬಿಣದ ಕೆಲಸವನ್ನ ಮಾಡುವ ಫಿರೋಜ್ ಗಣೇಶನ ಹಬ್ಬಕ್ಕೆ ಮಾತ್ರ ಕಲ್ಲಾನೆ ಗಣೇಶನ ನಿರ್ಮಾಣಕ್ಕೆ ಹಾಜರಾಗಿರುತ್ತಾರೆ. ಕಾಯಕದಲ್ಲೇ ದೇವರನ್ನ ಕಾಣುವ ಫಿರೋಜ್ ಗಣೇಶನನ್ನ ನಂಬಿದ್ದಾರೆ. ಈ ಬಾರಿ ಒಂದೆಡೆ ಅತಿವೃಷ್ಠಿ ಇನ್ನೊಂದೆಡೆ ಅನಾವೃಷ್ಠಿ ಇರುವುದರಿಂದ ಫಿರೋಜ್ ಕೈಯಲ್ಲಿ 35 ಅಡಿ ಎತ್ತರದ ವಾಸ್ತು ನವಧಾನ್ಯ ಗಣೇಶನನ್ನ ಮಾಡಿಸಲಾಗಿದೆ.

    ಕಳೆದ 35 ವರ್ಷಗಳಿಂದ ಕಲ್ಲಾನೆಯ ಮೇಲೆ 35 ಅಡಿ ಎತ್ತರದ ಗಣೇಶನನ್ನ ಪ್ರತಿಷ್ಠಾಪಿಸುತ್ತಿರುವ ಕಲ್ಲಾನೆ ಗಜಾನನ ಸಮಿತಿ, ಈ ಬಾರಿ ನವಧಾನ್ಯಗಳ ಮೂಲಕ ವಿಘ್ನನಿವಾರಕನನ್ನ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ. ನಗರದಲ್ಲಿ ಈ ಬಾರಿಯ ಗಣೇಶ ಮಹೋತ್ಸವು ಹಲವು ವಿಶೇಷತೆಗಳನ್ನ ಹೊಂದಿದೆ. ಚಂದ್ರಮೌಳೇಶ್ವರ ವೃತ್ತದಲ್ಲಿ ಗಜಾನನ ಭಕ್ತ ಮಂಡಳಿ 3 ಕ್ವಿಂಟಾಲ್ ಗಣೇಶನನ್ನ ಕೂಡಿಸಿದ್ದು, ಆಂಧ್ರಪ್ರದೇಶದಿಂದ 300 ಮಣ್ಣಿನ ಗಣೇಶ ತಂದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಶ್ರೀರಾಮನಗರ ಕಾಲೋನಿಯಲ್ಲಿ ಗೋಲ್ಡನ್ ಟೆಂಪಲ್ ನಿರ್ಮಿಸಿ ಬೃಹದಾಕಾರದ ಗಣೇಶನನ್ನ ಕೂಡಿಸಲಾಗಿದೆ ಅಂತ ಗಜಾನನ ಭಕ್ತ ಮಂಡಳಿಯ ಅನಿಲ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಒಟ್ಟಿನಲ್ಲಿ ರಾಯಚೂರಿನಲ್ಲಿ ಹಿಂದೂ-ಮುಸ್ಲಿಂ ಎನ್ನದೆ ಧರ್ಮ-ಭೇದ ಮರೆತು ಗಣೇಶ ಹಬ್ಬ ಆಚರಣೆಗೆ ಮುಂದಾಗಿರುವುದು ನಿಜಕ್ಕೂ ಖುಷಿಯ ವಿಚಾರ. ಜೊತೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸದೆ ಪರಿಸರ ಸ್ನೇಹಿ ಗಣೇಶ ಕೂಡಿಸುವವರ ಸಂಖ್ಯೆ ಈ ಬಾರಿ ಹೆಚ್ಚಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶ್ರಾವಣ ಮುಗಿದ ಖುಷಿಗೆ ಒಂದೇ ಸಾರಿ 8 ಮೊಟ್ಟೆ ಸೇವಿಸಿದ ಯುವಕ

    ಶ್ರಾವಣ ಮುಗಿದ ಖುಷಿಗೆ ಒಂದೇ ಸಾರಿ 8 ಮೊಟ್ಟೆ ಸೇವಿಸಿದ ಯುವಕ

    ಬೆಳಗಾವಿ: ಶ್ರಾವಣ ಮಾಸ ಮುಗಿದ ಖುಷಿಗೆ ಯುವಕನೋರ್ವ ಒಂದೇ ಸಾರಿ 8 ಹಸಿ ಮೊಟ್ಟೆಗಳನ್ನು ಸೇವಿಸಿರುವ ವಿಡಿಯೋ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಹರಿದಾಡುತ್ತಿದೆ.

    ರಾಜು ಮುತ್ತಾ ಎಂಬ ಯುವನ ಬೇಯಿಸದ ಮೊಟ್ಟೆಗಳನ್ನು ಸೇವಿಸಿದ ಯುವಕ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದ ನಿವಾಸಿಯಾಗಿರುವ ರಾಜು ಸ್ನೇಹಿತರೊಂದಿಗೆ ಸವಾಲು ಹಾಕಿ ಮೊಟ್ಟೆಗಳನ್ನು ಸೇವಿಸಿದ್ದಾನೆ. ಶ್ರಾವಣ ಮಾಸ ಹಿನ್ನೆಲೆಯಲ್ಲಿ ಒಂದು ತಿಂಗಳು ರಾಜು ಮಾಂಸಾಹಾರವನ್ನು ತ್ಯಜಿಸಿದ್ದನು.

    ಮೊಟ್ಟೆಗಳನ್ನು ಸೇವಿಸುತ್ತಿರುವ ವಿಡಿಯೋ ರಾಜು ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರಿಂದ ಸದ್ಯ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೂವರ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ತಿರುವು

    ಮೂವರ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ತಿರುವು

    – ಇಬ್ಬರು ಯುವಕರನ್ನು ಪ್ರೀತಿಸುತ್ತಿದ್ದ ಯುವತಿ

    ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕು ದೊಡ್ಡನಾಯಕನ ಕೊಪ್ಪಲು ಗ್ರಾಮದಲ್ಲಿ ಕಳೆದ ತಿಂಗಳು ನಡೆದಿದ್ದ ಮೂವರ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ಆಗಸ್ಟ್ ನಲ್ಲಿ ಅದೇ ಊರಿನ ಯುವಕನೊಬ್ಬನ ಕೊಲೆಯಾಗಿತ್ತು. ಇದೇ ಕಾರಣಕ್ಕೆ ಮೃತನ ಪೋಷಕರು ನೀಡಿದ ಕಿರುಕುಳದಿಂದ ಮನನೊಂದು ಮೂವರು ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿತ್ತು. ಅದರೆ ಈಗ ಪೊಲೀಸ್ ತನಿಖೆ ವೇಳೆ ಇಡೀ ಘಟನೆಗೆ ಪ್ರೇಮ ಪುರಾಣ ಕಾರಣ ಎಂಬ ಅಸಲಿ ಸಂಗತಿ ಬಯಲಾಗಿದೆ.

    ಮೃತಪಟ್ಟ ಭೂಮಿಕಾ ಇಬ್ಬರು ಯುವಕರನ್ನು ಪ್ರೀತಿಸುತ್ತಿದ್ದಳು. ಇದನ್ನು ತಿಳಿದ ಆಕೆಯ ಪೋಷಕರು ಶ್ರೀಧರ್ ನನ್ನು ಕಳುಹಿಸಿ ನಾಗರಾಜ್ ನನ್ನು ಕೊಲೆ ಮಾಡಿಸಿದ್ದರು. ಈ ಗುಟ್ಟುರಟ್ಟಾಗುವ ಭಯದಿಂದ ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನಾಗರಾಜ್ ಕಡೆಯವರು ಆರೋಪಿಸಿದ್ದಾರೆ.

    ಅರಕಲಗೂಡು ತಾಲೂಕು ದೊಡ್ಡನಾಯಕನಕೊಪ್ಪಲಲ್ಲಿ ಕಳೆದ ತಿಂಗಳು ನಡೆದಿದ್ದ ಯುವಕನ ಕೊಲೆ ಮತ್ತು ಮೂವರ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕಳೆದ ಆಗಸ್ಟ್ 7ರಂದು ಅದೇ ಊರಿನ ನಾಗರಾಜ್ ಅನುಮಾನಾಸ್ಪದವಾಗಿ ಕೊಲೆಯಾಗಿದ್ದ. ಮಾರನೇ ದಿನ ಮೃತದೇಹ ಸಮೀಪದ ನಾಲೆಯಲ್ಲಿ ಪತ್ತೆಯಾಗಿತ್ತು. ಅದಾದ ಬಳಿಕ ಆಗಸ್ಟ್ 26 ರಂದು ಒಂದೇ ಬೀದಿಯ ಕೃಷ್ಣೇಗೌಡ, ಆತನ ಪತ್ನಿ ಮಂಜುಳಾ ಮತ್ತು ಪ್ರಥಮ ಪಿಯುಸಿ ಓದುತ್ತಿದ್ದ ಭೂಮಿಕಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

    ಸದ್ಯ ಇದಕ್ಕೆ ಬೇರೆಯದೇ ಕತೆ ಹೆಣೆಯಲಾಗಿತ್ತು. ಮಗನ ಕೊಲೆಗೆ ಕೃಷ್ಣೇಗೌಡ ಮತ್ತು ಅವರ ಮನೆಯವರು ಕಾರಣ ಎಂದು ನಾಗರಾಜ್ ತಂದೆ ದಾಸೇಗೌಡ, ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಇದರಿಂದ ಮನನೊಂದು ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ದೂರು ಕೇಳಿ ಬಂದಿತ್ತು. ಆದರೆ ಈಗ ಪೊಲೀಸ್ ತನಿಖೆಯ ನಂತರ ಬಯಲಾಗಿರುವ ಅಸಲಿ ವಿಷಯವೆನೆಂದರೆ ಮೃತ ಭೂಮಿಕಾ ಕೊಲೆಯಾದ ನಾಗರಾಜ್ ಮತ್ತು ಅರಕಲಗೂಡು ತಾಲೂಕು ಅಡಿಕೆ ಬೊಮ್ಮನಹಳ್ಳಿಯ ಶ್ರೀಧರ್ ಪ್ರೀತಿಸುತ್ತಿದ್ದಳು. ಈ ವಿಷಯ ಭೂಮಿಕಾ ಪೋಷಕರಿಗೂ ಗೊತ್ತಿತ್ತು. ಆದರೆ ನಾಗರಾಜ್ ಗೆ ಮಗಳನ್ನು ಕೊಟ್ಟು ಮದುವೆ ಮಾಡಲು ಒಪ್ಪದ ಕೃಷ್ಣೇಗೌಡ, ಶ್ರೀಧರ್ ಗೆ ಸುಪಾರಿ ಕೊಟ್ಟು ನಾಗರಾಜ್ ನನ್ನು ಕೊಲೆ ಮಾಡಿಸಿದ್ದಾರೆ.

    ಶ್ರೀಧರ್ ಅರೆಸ್ಟ್ ಆದರೆ ನಾಗರಾಜ್ ಕೊಲೆಯ ಅಸಲಿ ವಿಷಯ ಬಯಲಾಗಲಿದೆ ಎಂದು ಹೆದರಿ ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ನಾವು ಕಾರಣರಲ್ಲ ಎಂದು ನಾಗರಾಜ್ ಕಡೆಯವರು ಹೇಳುತ್ತಿದ್ದಾರೆ. ನಾಗರಾಜ್ ಕೊಲೆ ಸಂಬಂಧ ಶ್ರೀಧರ್ ಸೇರಿ ಮೂವರು ಆರೋಪಿಗಳನ್ನು ಅರಕಲಗೂಡು ಪೊಲೀಸರು ಬಂಧಿಸಿದ್ದಾರೆ. ವಯಸ್ಸು 18 ತುಂಬುವ ಮುನ್ನವೇ ಪ್ರೀತಿ ಪ್ರೇಮ ಅಂತ ಹುಚ್ಚಾಟ ಆಡುತ್ತಿದ್ದ ಮಗಳಿಗೆ ಬುದ್ಧಿವಾದ ಹೇಳಬೇಕಿದ್ದ ಪೋಷಕರು ಬೇರೇನೋ ಮಾಡಲು ಹೋಗಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 4 ಹೆಣ ಬೀಳಲು ಕಾರಣವಾಗಿದೆ. ಅಷ್ಟೇ ಅಲ್ಲ, ಹುಡಿಗಿಯಾಸೆಗೆ ತನ್ನದೇ ಓರಗೆಯವನ ಜೀವ ತೆಗೆದ ಶ್ರೀಧರ್ ಹಾಗೂ ಮೂವರು ಜೈಲು ಸೇರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತ್ರಿಬಲ್ ರೈಡ್ ಹೋಗುತ್ತಿದ್ದ ಯುವಕರಿಗೆ ಪಿಎಸ್‍ಐನಿಂದ ಥಳಿತ!

    ತ್ರಿಬಲ್ ರೈಡ್ ಹೋಗುತ್ತಿದ್ದ ಯುವಕರಿಗೆ ಪಿಎಸ್‍ಐನಿಂದ ಥಳಿತ!

    ವಿಜಯಪುರ: ತ್ರಿಬಲ್ ರೈಡ್ ಹೊರಟಿದ್ದ ಬೈಕ್ ಸವಾರರಿಗೆ ಪಿಎಸ್‍ಐ ಹಿಗ್ಗಮುಗ್ಗಾ ಥಳಿಸಿರುವ ಘಟನೆ ವಿಜಯಪುರದ ಇಂಡಿಯಲ್ಲಿ ನಡೆದಿದೆ.

    ಸೋಮವಾರ ರಾತ್ರಿ ಇಂಡಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಯುವಕರಿಗೆ ಪೈಪ್ ಮತ್ತು ಕಾಲಿನಿಂದ ಒದ್ದು ಅಶ್ಲೀಲ ಪದ ಬಳಸಿದ ಇಂಡಿ ನಗರ ಪಿಎಸ್‍ಐ ಯಡವಣ್ಣವರ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ರಸ್ತೆ ಮೇಲೆ ಹಲ್ಲೆ ಮಾಡಿದ್ದಲ್ಲದೇ ಪೊಲೀಸ್ ಠಾಣೆಯಲ್ಲಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿರುವುದಾಗಿ ಹಲ್ಲೆಗೊಳಗಾದ ಯುವಕರು ಆರೋಪಿಸಿದ್ದಾರೆ.

    ಹಂಜಗಿ ಮೂಲದ ಸಚಿನ್ ಪೊತೆ ಯುವಕರ ಮೇಲೆ ಹಲ್ಲೆ ನಡೆದಿದ್ದು, ಸದ್ಯಕ್ಕೆ ಆ ಯುವಕರು ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಡ ವಿಧಿಸದೇ ಹಲ್ಲೆ ಮಾಡಿದ ಪಿಎಸ್‍ಐ ಅಮಾನತು ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ 67 ಮಂದಿಗೆ ರೇಬೀಸ್!

    ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ 67 ಮಂದಿಗೆ ರೇಬೀಸ್!

    ಮಂಗಳೂರು: ರೇಬೀಸ್ ವೈರಾಣುವಿನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ಹೋಗಿ ಇಡೀ ಊರಿನ ಜನ ರೇಬೀಸ್ ಚುಚ್ಚುಮದ್ದು ಪಡೆದುಕೊಳ್ಳಬೇಕಾದ ಸ್ಥಿತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇಚ್ಲಂಪಾಡಿ ಎಂಬಲ್ಲಿ ಎದುರಾಗಿದೆ.

    ಯುವಕ ಆಶಿತ್ ಆಗಸ್ಟ್ 22 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ಈತನ ಮೃತದೇಹವನ್ನು ಮನೆ ಮಂದಿಗೆ ನೀಡುವ ಸಂದರ್ಭದಲ್ಲಿ, ರೇಬೀಸ್ ವೈರಾಣುವಿನಿಂದ ಯುವಕ ಮೃತಪಟ್ಟಿದ್ದಾನೆ ಎನ್ನುವ ಕಾರಣ ನೀಡಲಾಗಿತ್ತು. ಅಲ್ಲದೆ ಮೃತದೇಹವನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಎಂದು ಸೂಚನೆಯನ್ನೂ ಸಹ ವೈದ್ಯರು ನೀಡಿದ್ದರು. ಆದರೆ ಮನೆ ಮಂದಿ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ನಿರ್ವಹಿಸಿದ್ದರು.

    ಈ ಸಂದರ್ಭದಲ್ಲಿ ಪ್ಯಾಕ್ ಮಾಡಿದ್ದ ಮೃತದೇಹವನ್ನು ಬಿಚ್ಚಲಾಗಿದ್ದು, ಮೃತದೇಹದಿಂದ ರಕ್ತ ಮನೆಯ ಪ್ರದೇಶದಲ್ಲಿ ಚೆಲ್ಲಿತ್ತು. ಈ ಸಂದರ್ಭದಲ್ಲಿ ಮೃತ ಯುವಕನ ಸಂಬಂಧಿಕರು ಹಾಗೂ ಊರವರು ಭಾಗಿಯಾಗಿದ್ದರು. ಸಾವು ರೇಬೀಸ್ ರೋಗದಿಂದ ಸಂಭವಿಸಿದೆ ಎನ್ನುವ ವಿಚಾರವೀಗ ಊರವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇದೀಗ ಊರಿಡೀ ಆತಂಕಕ್ಕೆ ಕಾರಣವಾಗಿದೆ. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ 67 ಮಂದಿ ನೆಲ್ಯಾಡಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆ್ಯಂಟಿ ರೇಬೀಸ್ ಚುಚ್ಚುಮದ್ದನ್ನು ಪಡೆದಿದ್ದಾರೆ. ಕೆಲವು ಮಂದಿ ಖಾಸಗಿ ಚಿಕಿತ್ಸಾಲಯದಲ್ಲೂ ಇಂಜೆಕ್ಷನ್ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಅಂತ್ಯಸಂಸ್ಕಾರದ ವೇಳೆ ಮೃತದೇಹದಿಂದ ರಕ್ತ ಹಾಗೂ ಎಂಜಲು ಚೆಲ್ಲಿದ್ದಲ್ಲಿ ಇದರಿಂದ ರೇಬೀಸ್ ವೈರಾಣು ಹರಡುವ ಸಾಧ್ಯತೆಯಿದೆ ಎಂದು ನೆಲ್ಯಾಡಿ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆಶಿತ್ ಮನೆಗೆ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಭೇಟಿ ನೀಡಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

  • ಅಪ್ರಾಪ್ತ ಸೋದರಿಯರ ಕಿಡ್ನಾಪ್-ಅತ್ಯಾಚಾರಗೈದು ಊರಿಗೆ ಬಿಟ್ಟು ಹೋದ್ರು

    ಅಪ್ರಾಪ್ತ ಸೋದರಿಯರ ಕಿಡ್ನಾಪ್-ಅತ್ಯಾಚಾರಗೈದು ಊರಿಗೆ ಬಿಟ್ಟು ಹೋದ್ರು

    ಭೋಪಾಲ್: ಅಪ್ರಾಪ್ತ ಇಬ್ಬರು ಸಹೋದರಿಯರನ್ನು ಅಪಹರಿಸಿ, ಅತ್ಯಾಚಾರ ಎಸೆಗಿದ ಬಳಿಕ ಗ್ರಾಮಕ್ಕೆ ಬಿಟ್ಟು ಹೋದ ಘಟನೆ ಮಧ್ಯಪ್ರದೇಶ ರಾಜ್ಯದ ಅಷ್ಟತೆಹಸಿಲ್ ಎಂಬಲ್ಲಿ ನಡೆದಿದೆ.

    9 ಮತ್ತು 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಹೋದರಿಯರು ಅತ್ಯಾಚಾರಕ್ಕೊಳಗಾದ ಬಾಲಕಿಯರು. ಬಾಲಕಿ ಇಬ್ಬರನ್ನು ಅಪಹರಿಸಿದ ಇಂದೋರ್-ಭೋಪಾಲ್ ರಸ್ತೆಯ ಹೋಟೆಲ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾರೆ. ಈಗಾಗಲೇ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಅತ್ಯಾಚಾರಗೈದ ಇಬ್ಬರು ಯುವಕರು ಬಾಲಕಿಯರ ಗ್ರಾಮದ ನಿವಾಸಿಗಳಾಗಿದ್ದು, ಇನ್ನಿಬ್ಬರ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಲೋಕೇಂದ್ರ (19) ಮತ್ತು ಕ್ರಿಪಲ್ (21) ಬಂಧಿತ ಆರೋಪಿಗಳಾಗಿದ್ದು, ಸಂಜಯ್ ಹಾಗು ರಾಜ್ ಎಂಬಾತರು ಘಟನೆ ಬಳಿಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶುಕ್ರವಾರ ಬಾಲಕಿಯರಿಬ್ಬರನ್ನು ಅಪಹರಿಸಿದ ಯುವಕರು ಹೋಟೆಲ್ ಗೆ ಕರೆದುಕೊಂಡು ಹೋಗಿ ಇಬ್ಬರನ್ನ ಬೇರೆ ಬೇರೆ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಹೋಟೆಲ್‍ನಲ್ಲಿ ಕಿರುಚಿದ್ರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಕಾಮುಕರು ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸೆಗಿದ್ದಾರೆ. ಸಂಜೆ ಹೋಟೆಲಿಗೆ ಬಂದ ಮತ್ತಿಬ್ಬರು ಸಹ ಬಾಲಕಿಯರನ್ನು ಅತ್ಯಾಚಾರಗೈದಿದ್ದಾರೆ.

    ಆರೋಪಿಗಳು ಶನಿವಾರ ಇಬ್ಬರು ಸಹೋದರಿಯರನ್ನು ಅವರ ಗ್ರಾಮಕ್ಕೆ ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಮನೆ ತಲುಪಿದ ಸಹೋದರಿಯರ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪೊಲೀಸರು ಹೋಟೆಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv