Tag: youth

  • ಬೈಕ್ ಅಡ್ಡಗಟ್ಟಿ ಯುವಕನ ಮೇಲೆ ಚಾಕು, ಮಚ್ಚಿನಿಂದ ಹಲ್ಲೆ!

    ಬೈಕ್ ಅಡ್ಡಗಟ್ಟಿ ಯುವಕನ ಮೇಲೆ ಚಾಕು, ಮಚ್ಚಿನಿಂದ ಹಲ್ಲೆ!

    – ಹಣ, ವಾಚ್ ದರೋಡೆ

    ತುಮಕೂರು: ಯುವಕನೋರ್ವನ ಬೈಕ್ ಅಡ್ಡಗಟ್ಟಿ, ಚಾಕು ಮತ್ತು ಮಚ್ಚಿನಿಂದ ಹಲ್ಲೆ ನಡೆಸಿ ಹಣ ಮತ್ತು ವಾಚ್ ದೋಚಿದ ಘಟನೆ ನಡೆದಿದೆ.

    ತುಮಕೂರು ನಗರದ ಶಾಂತಿ ನಗರದಲ್ಲಿ ಭಾನುವಾರ ರಾತ್ರಿ ಈ ದರೋಡೆ ನಡೆದಿದೆ. ಗಿರೀಶ್ ಎಂಬ ಯುವಕ ಅಮರ ಜ್ಯೋತಿನಗರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಶಾಂತಿ ನಗರದಲ್ಲಿ ನಾಲ್ವರು ದುಷ್ಕರ್ಮಿಗಳು ಗಿರೀಶ್ ನ ಬೈಕ್ ಅಡ್ಡಗಟ್ಟಿದ್ದಾರೆ. ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ.

    ಹಣ ನೀಡಲು ನಿರಾಕರಿಸಿದಾಗ ಚಾಕು ಮತ್ತು ಮಚ್ಚಿನಿಂದ ಹಲ್ಲೆ ನಡೆಸಿ 24 ಸಾವಿರ ನಗದು ಹಾಗೂ ವಾಚ್ ದೋಚಿದ್ದಾರೆ. ಘಟನೆಯಲ್ಲಿ ಗಿರೀಶ್ ಗೆ ಗಂಭೀರ ಗಾಯವಾಗಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ದರೋಡೆ ನಡೆಸಿದವರನ್ನು ಧನಂಜಯ್ ಕುಮಾರ್, ರಂಗ ಮತ್ತು ಗೊಗ್ಗ ಶಶಿ ಎಂದು ಗುರುತಿಸಲಾಗಿದ್ದು, ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಯಾಣಿಕರಿದ್ರೂ ಸರ್ಕಾರಿ ಬಸ್‍ನಲ್ಲಿ ಪ್ರೇಮಿಗಳ ರೊಮ್ಯಾನ್ಸ್- ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಪ್ರಯಾಣಿಕರಿದ್ರೂ ಸರ್ಕಾರಿ ಬಸ್‍ನಲ್ಲಿ ಪ್ರೇಮಿಗಳ ರೊಮ್ಯಾನ್ಸ್- ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಕೋಲಾರ: ಸರ್ಕಾರಿ ಬಸ್‍ನಲ್ಲಿ ಯುವಕ-ಯುವತಿ ರೊಮ್ಯಾನ್ಸ್ ಮಾಡಿದ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕೋಲಾರದಿಂದ ಗದಗಕ್ಕೆ ಹೊರಟಿದ್ದ ಸರ್ಕಾರಿ ಬಸ್‍ನಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸಿದ್ದಾರೆ. ಬಸ್‍ನಲ್ಲಿ ಹತ್ತಾರು ಪ್ರಯಾಣಿಕರ ಮಧ್ಯೆ ಯುವಕ ಹಾಗೂ ಯುವತಿ ಪ್ರೀತಿ ಹೆಸರಲ್ಲಿ, ಸಹ ಪ್ರಯಾಣಿಕರನ್ನೂ ಲೆಕ್ಕಿಸದೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ.

    ಅಕ್ಟೋಬರ್ 2 ರಂದು ಅಂದರೆ ಗಾಂಧಿ ಜಯಂತಿ ದಿನದಂದು ಯುವತಿಯ ಮೈ-ಕೈ ಮುಟ್ಟಿ ಯುವಕ ಅಸಭ್ಯವಾಗಿ ವರ್ತನೆ ತೋರಿದ್ದಾನೆ. ಸೋಮವಾರ ಬೆಳಗ್ಗೆ ಬೆಂಗಳೂರಿನತ್ತ ಹೊರಟಿದ್ದ ಸರ್ಕಾರಿ ಬಸ್‍ನಲ್ಲಿ ಪ್ರೇಮಿಗಳು ಮೈ ಮರೆತಿದ್ದರು. ಈ ವೇಳೆ ಪ್ರೇಮಿಗಳ ಈ ಪ್ರಸಂಗವನ್ನು ಸಹ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

    ಸದ್ಯ ಈ ಪ್ರೇಮ ಪಕ್ಷಿಗಳ ವರ್ತನೆ ಕಂಡು ಮುಜುಗರಕ್ಕೆ ಒಳಗಾದ ಸಹ ಪ್ರಯಾಣಿಕರು ಬುದ್ಧಿ ಹೇಳಲಾಗದೆ ಅಸಾಹಯಕತೆ ತೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ನನ್ನ ಕಿಡ್ನಿ ಮಾರಾಟಕ್ಕಿದೆ, ಹಣ ನೀಡಿ ಖರೀದಿಸಿ’ – ಟೀ ಅಂಗಡಿ ಮುಂದೆ ಯುವಕನ ಫಲಕ

    `ನನ್ನ ಕಿಡ್ನಿ ಮಾರಾಟಕ್ಕಿದೆ, ಹಣ ನೀಡಿ ಖರೀದಿಸಿ’ – ಟೀ ಅಂಗಡಿ ಮುಂದೆ ಯುವಕನ ಫಲಕ

    ಮಂಡ್ಯ: ಸಾಲದಿಂದ ಬೇಸತ್ತಿರುವ ಮಂಡ್ಯ ನಗರದ ವ್ಯಕ್ತಿಯೊಬ್ಬರು ನನ್ನ ಕಿಡ್ನಿ ಸೇಲ್‍ಗಿದೆ ಎಂದು ಟೀ ಅಂಗಡಿ ಮುಂದೆ ಫಲಕ ಹಾಕಿದ್ದಾರೆ.

    ವಿನೋದ್ ಕುಮಾರ್(26) ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಬಳಿ ಮಧುರ ಟೀ ಸ್ಟಾಲ್ ಅಂಗಡಿ ಇಟ್ಟುಕೊಂಡಿದ್ದಾರೆ. ಮಂಡ್ಯ ಸಮೀಪದ ತಗ್ಗಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ವಿನೋದ್ ಕುಮಾರ್ ಮನೆ ಕಟ್ಟಿಸುವುದು ಸೇರಿದಂತೆ ಹಲವಾರು ಕಾರಣಗಳಿಗೆ ಸಾಲ ಮಾಡಿಕೊಂಡಿದ್ದಾನೆ.

    ತಾನು ಮಾಡಿಕೊಂಡಿರುವ ಸಾಲಕ್ಕೆ ಬಡ್ಡಿ ಕಟ್ಟಲೂ ಕಷ್ಟವಾಗಿದೆ. ಹಣ ಕೊಟ್ಟವರಿಗೆ ಹಣ ವಾಪಸ್ ಕೊಡುವುದು ನ್ಯಾಯ. ಹೀಗಾಗಿ ನಮ್ಮ ಜಮೀನನ್ನು ಅಡವಿಟ್ಟು ಸಾಲ ತೀರಿಸೋಣ ಅಂತಿದ್ದೇನೆ. ಆದರೆ ನಾಡ ಕಚೇರಿಯಲ್ಲಿ ಜಮೀನಿನ ಸ್ಕೆಚ್ ಕೊಡಲು ಲಂಚ ಕೇಳುತ್ತಿದ್ದಾರೆ. ಲಂಚ ಕೊಡಲು ನನ್ನ ಬಳಿ ಹಣವಿಲ್ಲ. ಹೀಗಾಗಿ ನಾನು ನನ್ನ ಕಿಡ್ನಿ ಸೇಲ್ ಮಾಡುತ್ತೇನೆ. ಯಾರಾದ್ರು ಕಿಡ್ನಿ ಬೇಕಾದವರು ನನಗೆ ಹಣ ನೀಡಿ ಕಿಡ್ನಿ ಕೊಂಡುಕೊಳ್ಳಿ ಎಂದು ವಿನೋದ್ ಕುಮಾರ್ ತನ್ನ ಟೀ ಅಂಗಡಿ ಮುಂದೆ ಬರೆದು ಅಂಟಿಸಿದ್ದಾರೆ.

    ವಿನೋದ್ ಕುಮಾರ್ ಕಿಡ್ನಿ ಮಾರಾಟಕ್ಕಿದೆ ಎಂದು ಬರೆದು ಅಂಟಿಸಿರುವುದನ್ನು ನೋಡಿದ ಸ್ಥಳೀಯರು, ಈ ರೀತಿ ಮಾಡುವುದು ತಪ್ಪು ಎಂದು ಬುದ್ದಿ ಹೇಳಿದ್ದಾರೆ. ಆದರೆ ಯಾರ ಬುದ್ಧಿ ಮಾತಿಗೂ ಕಿವಿಗೊಡದ ವಿನೋದ್ ಕುಮಾರ್, ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ಹೀಗಾಗಿ ಕಿಡ್ನಿ ಮಾರಾಟ ಮಾಡಿ ಸಾಲ ತೀರಿಸಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಸಿಎಂ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸ್ತಿದ್ದ ಯುವಕನ ಜೊತೆ ಸೆಲ್ಫಿ ತೆಗೆದುಕೊಂಡ್ರು!

    ಸಿಎಂ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸ್ತಿದ್ದ ಯುವಕನ ಜೊತೆ ಸೆಲ್ಫಿ ತೆಗೆದುಕೊಂಡ್ರು!

    ಭೋಪಾಲ್: ಯುವಕನೊಬ್ಬ ಸಿಎಂ ಮನೆಯ ಹತ್ತಿರ ಹೈ ವೊಲ್ಟೇಜ್ ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವೊಂದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ವಿಚಿತ್ರವೆಂದರೆ ಆತನನ್ನು ರಕ್ಷಿಸಲು ಹೋದ ರಕ್ಷಣಾ ಸಿಬ್ಬಂದಿ ಆತನ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

    ವಿರೇಂದ್ರ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಕಳೆದ 5 ವರ್ಷದಿಂದ ಜಮೀನಿನ ವಿಷಯಕ್ಕಾಗಿ ವಿರೇಂದ್ರ ಸರ್ಕಾರಿ ಕಚೇರಿಗಳಿಗೆ ತಿರುಗಾಡುತ್ತಿದ್ದನು. ಈ ಕೆಲಸದಿಂದ ಬೇಸತ್ತು ವಿರೇಂದ್ರ ಗುರುವಾರ ಆತ್ಮಹತ್ಯಗೆ ಯತ್ನಿಸಲು ಸಿಎಂ ಮನೆ ಹತ್ತಿರದ ಹೈವೊಲ್ಟೇಜ್ ವಿದ್ಯುತ್ ಕಂಬವನ್ನು ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ವಿರೇಂದ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ರಕ್ಷಣಾ ಸಿಬ್ಬಂದಿ ಆತನನ್ನು ರಕ್ಷಿಸಲು ಮುಂದಾದರು. ಈ ವೇಳೆ ವಿರೇಂದ್ರನನ್ನು ರಕ್ಷಿಸುವ ಮೊದಲು ಆತನ ಜೊತೆ ಸೆಲ್ಫಿ ತೆಗೆದುಕೊಂಡು ನಂತರ ಆತನನ್ನು ರಕ್ಷಿಸಿದ್ದಾರೆ.

    ಸದ್ಯ ರಕ್ಷಣಾ ಸಿಬ್ಬಂದಿ ಯುವಕನ ಜೊತೆ ಸೆಲ್ಫೀ ತೆಗೆದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಬೈಕ್ ವ್ಹೀಲಿಂಗ್ ವೇಳೆ ಪಾದಾಚಾರಿಗೆ ಡಿಕ್ಕಿ – ಆಕ್ರೋಶಗೊಂಡ ಸಾರ್ವಜನಿಕರು ಮಾಡಿದ್ದೇನು?

    ಬೈಕ್ ವ್ಹೀಲಿಂಗ್ ವೇಳೆ ಪಾದಾಚಾರಿಗೆ ಡಿಕ್ಕಿ – ಆಕ್ರೋಶಗೊಂಡ ಸಾರ್ವಜನಿಕರು ಮಾಡಿದ್ದೇನು?

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೈಕ್ ವೀಲ್ಹಿಂಗ್ ಹಾವಳಿ ಹೆಚ್ಚಾಗಿದ್ದು, ವ್ಹೀಲಿಂಗ್ ಮಾಡುವ ವೇಳೆ ಯುವಕನೊಬ್ಬ ಪಾದಾಚಾರಿಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಹೆಚ್‍ಬಿಆರ್ ಲೇಔಟ್‍ನಲ್ಲಿ ನಡೆದಿದೆ.

    ಅಪಘಾತವಾಗುತ್ತಿದ್ದಂತೆಯೇ ಡಿಕ್ಕಿಯಾದ ವ್ಯಕ್ತಿಗೆ ಏನಾಗಿದೆ ಎಂದು ಬಂದು ನೋಡದ ಯುವಕ ಸ್ಥಳದಲ್ಲೇ ಬೈಕ್ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಘಟನೆ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆದರೆ ಸರಿಯಾದ ಸಮಯಕ್ಕೆ ಪೊಲೀಸರು ಆಗಮಿಸದ ಕಾರಣ ಅಸಮಾಧಾನಗೊಂಡ ಸಾರ್ವಜನಿಕರು ಬೈಕ್ ಅನ್ನು ಅದೇ ಮಾರ್ಗದ ಮರವೊಂದಕ್ಕೆ ಕಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೈಕ್ ಮರಕ್ಕೆ ಕಟ್ಟಿ ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆಯನ್ನು ನೀಡಿರುವ ಸಾರ್ವಜನಿಕರು. ವ್ಹೀಲಿಂಗ್ ಮಾಡಿದವರಿಗೂ ಹೀಗೆ ಮಾಡುತ್ತೇವೆ ಎಂದು ಫಲಕ ಬರೆದು ಬೈಕಿಗೆ ನೇತು ಹಾಕಿದ್ದಾರೆ. ಸೆಪ್ಟೆಂಬರ್ 25ರ ರಾತ್ರಿ 10.30ಕ್ಕೆ ಈ ಘಟನೆ ನಡೆದಿದ್ದು, ನಗರದ ಹಲವೆಡೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೂವರಿಗೆ ಮರು ಜನ್ಮ ನೀಡಿದ 19ರ ಯುವಕ!

    ಮೂವರಿಗೆ ಮರು ಜನ್ಮ ನೀಡಿದ 19ರ ಯುವಕ!

    ಪಾಟ್ನಾ: ಅಪಘಾತದಲ್ಲಿ ಸಾವನ್ನಪ್ಪಿದ್ದ 19 ವರ್ಷದ ಯುವಕನ ದೇಹದ ಅಂಗಾಂಗಳನ್ನು ದಾನ ಮಾಡುವ ಮೂಲಕ ಪೋಷಕರು ಮೂವರು ವ್ಯಕ್ತಿಗಳಿಗೆ ಮರುಜನ್ಮವನ್ನು ನೀಡಿದ್ದಾರೆ.

    ಬಿಹಾರದ ನಳಂದ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿ ಯುವಕ ಮೃತಪಟ್ಟಿದ್ದ. ಮೃತಪಟ್ಟ ಯುವಕನ ತಂದೆ ಎಸ್ ಭೂಷಣ್ ಪ್ರಸಾದ್ ಅವರು ಪಾಟ್ನಾದಲ್ಲಿರುವ ಇಂದಿರಾ ಗಾಂಧಿ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಗೆ ಮಗನ ಅಂಗಾಂಗಳನ್ನು ದಾನ ಮಾಡಿದ್ದಾರೆ. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಮಗನ ಹೃದಯ, ಕಣ್ಣುಗಳು ಮತ್ತು ಲಿವರ್(ಯಕೃತ್ತು) ಬೇರೆ ವ್ಯಕ್ತಿಗಳ ಜೀವನಕ್ಕೆ ಆಸರೆಯಾಗುತ್ತದೆ ಎಂದು ದಾನ ಮಾಡಲು ನಿರ್ಧರಿಸಿದೆವು ಎಂದು ಹೇಳಿದ್ದಾರೆ.

    ಮೃತ ಪಟ್ಟ ಯುವಕನ ತಾಯಿ ಮಗನ ದೇಹವನ್ನು ದಾನ ಮಾಡಲು ಒಪ್ಪಿಕೊಂಡಿದ್ದು, ಆಕೆಯ ತೀರ್ಮಾನ ಇತರರಿಗೆ ಸ್ಫೂರ್ತಿಯಾಗಿದೆ. ದೇಹವನ್ನು ದಾನ ಮಾಡುವುದರಿಂದ ಮೂರು ವ್ಯಕ್ತಿಗಳಿಗೆ ಮರುಜನ್ಮ ನೀಡಿದಂತೆ ಆಗುತ್ತದೆ ಎಂದು ಆಸ್ಪತ್ರೆಯ ಅಧೀಕ್ಷಕ ಮನೀಶ್ ಮಂಡಲ್ ತಿಳಿಸಿದರು.

    ಮೃತಪಟ್ಟ ಯುವಕನ ಕಣ್ಣುಗಳನ್ನು ಇನ್ ಸ್ಟಿಟ್ಯೂಟ್ ನಲ್ಲೇ ಇರಿಸಲಾಗಿದೆ. ಹೃದಯವನ್ನು ಕೋಲ್ಕತ್ತಾಗೆ ಕಳುಹಿಸಲಾಗಿದ್ದು, ಅಗತ್ಯವಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಲಿವರ್ ಅನ್ನು ದೆಹಲಿಗೆ ಕಳುಹಿಸಲಾಗಿದೆ ಎಂದು ಮಂಡಲ್ ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪ್ರಾಪ್ತೆಯ ಕಿಡ್ನಾಪ್ ಕೇಸ್‍ಗೆ ಟ್ವಿಸ್ಟ್ – ಯುವತಿ ನನಗೆ ಬೇಕೆಂದು ಹಠ ಹಿಡಿದ ಯುವಕ

    ಅಪ್ರಾಪ್ತೆಯ ಕಿಡ್ನಾಪ್ ಕೇಸ್‍ಗೆ ಟ್ವಿಸ್ಟ್ – ಯುವತಿ ನನಗೆ ಬೇಕೆಂದು ಹಠ ಹಿಡಿದ ಯುವಕ

    ಹಾಸನ: ಜಿಲ್ಲೆಯ ಆಲೂರು ತಾಲೂಕಿನಲ್ಲಿ 7 ತಿಂಗಳ ಹಿಂದಿನ ಅಪ್ರಾಪ್ತೆ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ಅನ್ಯ ಕೋಮಿನ ಹುಡುಗಿಯನ್ನು ಕರೆದುಕೊಂಡು ಹೋಗಿದ್ದ ಮತ್ತೊಂದು ಕೋಮಿನ ಯುವಕ ಆಕೆಯೊಂದಿಗೆ ಲವ್ ಮ್ಯಾರೇಜ್ ಆಗಿದ್ದಾನೆ ಎನ್ನಲಾಗಿದೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರಿಂದ ಹಾಸನದ ಬಾಲ ಭವನದಲ್ಲಿ ಆಶ್ರಯ ಪಡೆದಿದ್ದ ಆಕೆಯನ್ನು ಪೋಷಕರು ಕರೆದೊಯ್ಯಲು ಬಂದಾಗ ಎರಡೂ ಕಡೆಯವರ ನಡುವೆ ವಾಗ್ವಾದ, ತಳ್ಳಾಟದಿಂದಾಗಿ ದೊಡ್ಡ ಹೈಡ್ರಾಮವೇ ನಡೆದು ಹೋಗಿದೆ. ಈ ಮಧ್ಯೆ ನಾನು ಮೆಚ್ಚಿರುವ ಹುಡುಗಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗುತ್ತಿದೆ. ನನಗೆ ಆಕೆಯೇ ಬೇಕು. ಇಲ್ಲವಾದರೆ ಸಾಯುತ್ತೇನೆ ಎಂದು ರಘು ಅಳಲು ತೋಡಿಕೊಂಡಿದ್ದಾನೆ.

    ತಂದೆಯಿಂದ ಕಿಡ್ನಾಪ್ ದೂರು:
    ಆಲೂರು ತಾಲೂಕು ಕರಡೀಬೈಲು ಗ್ರಾಮದ ಮಹಮದ್ ಅಲಿ ಪುತ್ರಿ ರಂಶೀನಾ, ನವೆಂಬರ್ 2017ರ 13ರಂದು ಏಕಾಏಕಿ ಕಾಣೆಯಾಗಿದ್ದಳು. 2ನೇ ಪಿಯುಸಿ ಓದುತ್ತಿದ್ದ 17 ವರ್ಷದ ಮಗಳು ಏಕಾಏಕಿ ನಾಪತ್ತೆಯಾಗಿದ್ದರಿಂದ ಸಹಜವಾಗಿಯೇ ಪೋಷಕರು ಆತಂಕಗೊಂಡಿದ್ದರು. ಅದಾದ ಕೆಲ ದಿನಗಳ ನಂತರ ಆಲೂರು ಪೊಲೀಸರಿಗೆ ದೂರು ನೀಡಿದ್ದ ಪೋಷಕರು, ಪಕ್ಕದ ಕಾಗನೂರು ಹೊಸಳ್ಳಿ ಗ್ರಾಮದ ರಘು ತಮ್ಮ ಮಗಳನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದು, ಕೂಡಲೇ ಮಗಳನ್ನು ಹುಡುಕಿಕೊಡಿ ಎಂದು ಮೊರೆ ಇಟ್ಟಿದ್ದರು.

    ಹೈಕೋರ್ಟ್ ಮೆಟ್ಟಿಲೇರಿದ ರಂಶೀನಾ ಪೋಷಕರು:
    ನಂತರ ತಮ್ಮ ಮಗಳ ಪತ್ತೆ ಸಂಬಂಧ ಪೊಲೀಸ್ ಪ್ರಯತ್ನ ಆಗದ ಹಿನ್ನೆಲೆಯಲ್ಲಿ ರಂಶೀನಾ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ಸ್ವೀಕರಿಸಿದ ಹೈಕೋರ್ಟ್ ಕೂಡಲೇ ಅಪ್ರಾಪ್ತೆಯನ್ನು ಹುಡುಕಿ ಎಂದು ಪೊಲೀಸರಿಗೆ ತಾಕೀತು ಮಾಡಿತ್ತು. ಅದಾದ ಕೆಲ ದಿನಗಳ ಬಳಿಕ ರಂಶೀನಾ ಪತ್ತೆಯಾದ ಬಳಿಕ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಆಗ ಹುಡುಗಿಗೆ 18 ವರ್ಷ ತುಂಬುವವರೆಗೂ ಸರ್ಕಾರಿ ಬಾಲ ಮಂದಿರದಲ್ಲಿ ಉಳಿಸುವಂತೆ ಹೈಕೋರ್ಟ್ ಆದೇಶ ಮಾಡಿತ್ತು.

    ಅದರಂತೆ ಬಾಲಭವನದಲ್ಲಿದ್ದ ರಂಶೀನಾಗೆ ಮೊನ್ನೆಯಷ್ಟೇ 18 ವರ್ಷ ತುಂಬಿದ್ದರಿಂದ ಆಕೆಯನ್ನು ನನ್ನೊಂದಿಗೆ ಕಳಿಸಿಕೊಡುವಂತೆ ಪ್ರಿಯಕರ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದ. ಮಗಳು ಬಾಲ ಭವನದಲ್ಲಿರುವ ಸುದ್ದಿ ತಿಳಿದ ಆಕೆಯ ಪೋಷಕರು ಇಂದು ಅಲ್ಲಿಗೆ ಆಗಮಿಸಿ ಮಗಳನ್ನು ಜೊತೆಯಲ್ಲಿ ಕರೆದೊಯ್ಯಲು ಮುಂದಾದರು. ಈ ಸಂಬಂಧ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ, ನೂಕಾಟ-ತಳ್ಳಾಟ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

    ಯುವತಿ ನನ್ನನ್ನು ಮೆಚ್ಚಿ ಮದುವೆಯಾಗಿದ್ದಾಳೆ. ಆದರೆ ಆಕೆಯ ಪೋಷಕರು ಬಲವಂತ ಮಾಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳೂ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ರಘು ಆರೋಪಿಸಿದ್ದಾನೆ. ನಾನು ಇಲ್ಲದೆ ಹೋದರೆ ಆಕೆ ಸಾಯುತ್ತಾಳೆ. ಆಕೆ ಇಲ್ಲದೇ ಹೋದರೆ ನಾನೂ ಸಾಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ.

    ಆದರೆ ಮಗಳು ನಮಗೆ ಬೇಕು. ಆಕೆ ತುಂಬಾ ಬುದ್ದಿವಂತೆ. ಓದಿ ದೊಡ್ಡವಳಾದ ನಂತರ ನಮ್ಮನ್ನು ಸಾಕುತ್ತೇನೆ ಎಂದಿದ್ದಳು. ಆದರೀಗ ನಡೆಯಬಾರದ ಘಟನೆ ನಡೆದು ಹೋಗಿದೆ. ನಮಗೆ ನಮ್ಮ ಮಗಳು ಬೇಕು. ಆಕೆಯ ಕೊರಗಲ್ಲೇ ತಾಯಿ ಹಾಸಿಗೆ ಹಿಡಿದಿದ್ದಾಳೆ ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ. ಹೀಗಾಗಿ ಪ್ರಕರಣ ಒಂದು ರೀತಿಯಲ್ಲಿ ಕಗ್ಗಂಟಾಗಿದ್ದು ಮುಂದೆ ಯಾವ ರೀತಿ ಅಂತ್ಯ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣೇಶ ವಿಸರ್ಜನೆ ವೇಳೆ ಭಜರಂಗದಳದ ತಾಲೂಕು ಸಂಚಾಲಕ ದುರ್ಮರಣ

    ಗಣೇಶ ವಿಸರ್ಜನೆ ವೇಳೆ ಭಜರಂಗದಳದ ತಾಲೂಕು ಸಂಚಾಲಕ ದುರ್ಮರಣ

    ದಾವಣಗೆರೆ: ಗಣಪತಿ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಗೆ ವಿದ್ಯುತ್ ತಗುಲಿದ ಪರಿಣಾಮ ಭಜರಂಗ ದಳದ ತಾಲೂಕು ಸಂಚಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ನಡೆದಿದೆ.

    ಹರಪನಹಳ್ಳಿ ನಿವಾಸಿ ಭಜರಂಗಿ ಹನುಮಂತು (27) ಮೃತಪಟ್ಟ ದುರ್ದೈವಿ. ಭಾನುವಾರ ರಾತ್ರಿ ಪಟ್ಟಣದ ಹಿಂದೂ ಮಹಾ ಗಣಪತಿ ವಿಸರ್ಜನೆಯನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮೆರವಣಿಗೆ ಮುಗಿಸಿ ತಡರಾತ್ರಿ 11 ಸುಮಾರಿಗೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಹೋಗುತ್ತಿರುವಾಗ ಮಿನಿ ವಿಧಾನಸೌಧದ ಬಳಿ ಟ್ರ್ಯಾಕ್ಟರ್ ಗೆ ವಿದ್ಯುತ್ ತಂತಿ ತಗುಲಿದೆ. ಕೂಡಲೇ ಟ್ರಾಕ್ಟರ್ ನಲ್ಲಿದ್ದ ಹಲವರು ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಹನುಮಂತು ಇಳಿಯುವ ಹೊತ್ತಿಗೆ ಟ್ರಾಕ್ಟರ್ ಗೆ ವಿದ್ಯುತ್ ಸ್ಪರ್ಶಿಸಿದ್ದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದರು.

    ಕೂಡಲೇ ಸಂಘಟನೆಯ ಯುವಕರು ಹನುಮಂತುರವರನ್ನು ಆಸ್ಪತ್ರೆಗೆ ಸಾಗಿಯಲು ಯತ್ನಿಸಿದಾದರೂ ಮಾರ್ಗಮಧ್ಯೆಯೇ ಅಸುನೀಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈಜಲು ಆಗದೆ, ದಡಕ್ಕೂ ಬರಲಾಗದೆ ಉಸಿರುಗಟ್ಟಿ ಯುವಕ ಸಾವು

    ಈಜಲು ಆಗದೆ, ದಡಕ್ಕೂ ಬರಲಾಗದೆ ಉಸಿರುಗಟ್ಟಿ ಯುವಕ ಸಾವು

    ಚಿಕ್ಕಮಗಳೂರು: ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಅಯ್ಯನಕೆರೆಯಲ್ಲಿ ನಡೆದಿದೆ.

    ಮೃತ ಯುವಕನನ್ನ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯ ಪೂರ್ಣೇಶ್(25) ಎಂದು ಗುರುತಿಸಲಾಗಿದೆ. ಪೂರ್ಣೇಶ್ ಶನಿವಾರ ಸಂಜೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಅಯ್ಯನಕೆರೆಯಲ್ಲಿ ಈಜಲು ತೆರಳಿದ್ದನು. ಕೆರೆಯಲ್ಲಿ ಸ್ವಲ್ಪ ಹೊತ್ತು ಈಜಿದ್ದಾನೆ. ನಂತರ ಈಜಲು ಸಾಧ್ಯವಾಗದೆ ಇತ್ತ ದಡಕ್ಕೂ ಬರಲಾಗದೆ ಕೆರೆಯಲ್ಲಿ ಮುಳುಗಿದ್ದಾನೆ.

    ಸ್ನೇಹಿತ ಮುಳುಗುತ್ತಿದ್ದಾಗ ಉಳಿದ ಸ್ನೇಹಿತರು ಕಾಡಾಲು ಯತ್ನಿಸಿದ್ದಾರೆ. ಆದರೆ ಮೂವರು ಸ್ನೇಹಿತರಿಗೂ ಈಜು ಬರುತ್ತಿರಲಿಲ್ಲ. ಇದರಿಂದ ಅವರು ಮುಳುಗುತ್ತಿದ್ದ ಪೂರ್ಣೇಶ್ ನನ್ನು ಕಾಪಾಡಲು ಬಟ್ಟೆ, ಮರದ ಬಳ್ಳಿಯನ್ನು ಎಸೆಯುತ್ತಾರೆ. ಪೂರ್ಣೇಶ್ ತುಂಬಾ ದೂರ ಹೋಗಿ ಈಜಾಡುತ್ತಿದ್ದ ಕಾರಣ ಮುಳುಗಿ ಸಾವನ್ನಪ್ಪಿದ್ದಾನೆ.

    ಸ್ನೇಹಿತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ರಾತ್ರಿ ಆಗಿದ್ದರಿಂದ ಹುಡುಕಲು ಸಾಧ್ಯವಾಗಿಲ್ಲ. ಇಂದು ಮುಂಜಾನೆಯಿಂದನೇ ಹುಡುಕಾಟ ಶುರುಮಾಡಿದ್ದು, ಸದ್ಯ ಯುವಕನ ಮೃತದೇಹ ಪತ್ತೆಯಾಗಿದೆ.

    ಈ ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದ ಯುವಕನಿಗೆ ಚಾಕು ಇರಿತ

    ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದ ಯುವಕನಿಗೆ ಚಾಕು ಇರಿತ

    ಕಲಬುರಗಿ: ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಕಡಗಂಚಿ ಬಳಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಬಳಿ ನಡೆದಿದೆ.

    ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಮನೋಜ್ ಮೃತ ದುರ್ದೈವಿ. ಇವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮನೋಜ್ ಹೈದರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದು, ಭಾಲ್ಕಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದನು. ಈಕೆ ಎಂ.ಎ ಎಕನಾಮಿಕ್ಸ್ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಹೀಗಾಗಿ ಆಕೆಯನ್ನು ಭೇಟಿಯಾಗಲು ಬಂದಿದ್ದನು. ಶನಿವಾರ 7.30ರ ಸುಮಾರಿಗೆ ಇಬ್ಬರು ದುಷ್ಕರ್ಮಿಗಳು ಮನೋಜ್ ಗೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಮನೋಜ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

    ಘಟನಾ ಸ್ಥಳಕ್ಕೆ ಎಸ್‍ಪಿ ಎನ್.ಶಶಿಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ನರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv