Tag: youth

  • ಕೌನ್ ಬನೇಗಾ ಕರೋಡ್ ಪತಿ ಹೆಸರಿನಲ್ಲಿ ಯುವಕನಿಗೆ ವಂಚಿಸಲು ಯತ್ನ

    ಕೌನ್ ಬನೇಗಾ ಕರೋಡ್ ಪತಿ ಹೆಸರಿನಲ್ಲಿ ಯುವಕನಿಗೆ ವಂಚಿಸಲು ಯತ್ನ

    ಕೊಪ್ಪಳ: ಕೌನ್ ಬನೇಗಾ ಕರೋಡ್ ಪತಿ ಹೆಸರು ಹೇಳಿಕೊಂಡು ಯುವಕನಿಗೆ ವಂಚಿಸಲು ಯತ್ನಿಸಿದ ಘಟನೆ ಕೊಪ್ಪಳದಲ್ಲಿ ನೆಡದಿದೆ.

    ಕವಲೂರು ಗ್ರಾಮದ ಶ್ರೀಕಾಂತ್ ಎಂಬವರಿಗೆ ಕರೆಯೊಂದು ಬಂದಿದೆ. ನೀವು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಜಯಶಾಲಿ ಆಗಿದ್ದು, 25 ಲಕ್ಷ ರೂ. ನಿಮ್ಮದಾಗಿದೆ ಅಂತಾ ಹೇಳಿದ್ದಾರೆ. ಈ ವೇಳೆ ಕರೆ ಮಾಡಿದ್ದ ವ್ಯಕ್ತಿಯ ಪರಿಚಯ ಕೇಳಿದಾಗ ತನ್ನ ಹೆಸರು ರೋಹಿತ್, ಕೋಲ್ಕತ್ತಾ ಕಚೇರಿಯಿಂದ ಕರೆ ಮಾಡಿದ್ದಾಗಿ ಹೇಳಿದ್ದಾನೆ. 25 ಲಕ್ಷ ರೂ. ಹೇಳಿದ ಕ್ಷಣ ಶ್ರೀಕಾಂತ್ ಖಷಿಯಾಗಿದ್ದಾರೆ. 25 ಲಕ್ಷ ರೂ. ಇದೇ ವೇಳೆ ನಿಮ್ಮ ಖಾತೆಗೆ ಬರಬೇಕೆಂದು ಕೆಲವು ಕಂಡೀಷನ್ ಗಳನ್ನು ಹೇಳಿದ್ದಾನೆ.

    ಕಂಡೀಷನ್ ಕೇಳಿ ಸುಸ್ತಾದ ಶ್ರೀಕಾಂತ್?
    ಪ್ರತಿ ಒಂದು ಲಕ್ಷಕ್ಕೆ ಒಂದು ಪಿನ್ ಕೋಡ್ ಓಪನ್ ಆಗುತ್ತೆ. ಅಂದರೆ ಆ ಪಿನ್ ಕೋಡ್ ಓಪನ್ ಮಾಡಬೇಕಾದರೆ ನಾವು ಒಂದು ಲಕ್ಷಕ್ಕೆ ಒಂದು ಸಾವಿರ ರೂ. ಹಣವನ್ನು ಅವರ ಖಾತೆಗೆ ಹಾಕಬೇಕು. ಅದರಂತೆ ನಿಮ್ಮ 25 ಲಕ್ಷ ಹಣಕ್ಕಾಗಿ ನೀವು 25 ಸಾವಿರ ರೂ. ಹಣ ನಮ್ಮ ಖಾತೆಗೆ ಜಮಾ ಮಾಡಿದ ತಕ್ಷಣ ನಿಮ್ಮ ಖಾತೆಗೆ 25 ಲಕ್ಷ ಹಣ ಜಮಾ ಆಗುತ್ತೆ ಅಂತಾ ರೋಹಿತ್ ಹೇಳಿದ್ದಾನೆ. ಕಂಡೀಷನ್ ಕೇಳಿದ ಶ್ರೀಕಾಂತ್ ನಿಮ್ಮ ಹಣ ನನಗೆ ಬೇಡ ಅಂತಾ ಹೇಳಿ ಫೋನ್ ಕಟ್ ಮಾಡಿದ್ದಾರೆ.

    ಇಷ್ಟಕ್ಕೆ ಸುಮ್ಮನಾಗದ ವಂಚಕ ವಾಟ್ಸಪ್ ಮುಖಾಂತರ ತನ್ನ ಫೋಟೋ, 25 ಲಕ್ಷ ರೂ. ಬರೆದಿರುವ ನಕಲಿ ಚೆಕ್ ಮತ್ತು ಹಣದ ರಾಶಿ ಇರುವ ವಿಡಿಯೋ ಕಳುಹಿಸಿದ್ದಾನೆ. ಶ್ರೀಕಾಂತ್ ಅವರಿಗೆ ಪದೇ ಪದೇ ಕರೆ ಮಾಡುತ್ತಿರುವ ವಂಚಕರು 25 ಸಾವಿರ ರೂ. ಹಣ ಹಾಕುವಂತೆ ತಮ್ಮ ಮೃದುವಾದ ಮಾತುಗಳಿಂದ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮವನ್ನು ನಾನು ನೋಡುವುದಿಲ್ಲ. ಅದರ ಬಗ್ಗೆ ಕೇಳಿದ್ದೇನೆ ಹೊರತು ನೋಡಲು ನನಗೆ ಅದು ಅರ್ಥವಾಗಲ್ಲ. ಆದರೂ ರೋಹಿತ್ ಎಂಬಾತ ಕರೆ ಮಾಡುತ್ತಿದ್ದಾನೆ ಅಂತ ಶ್ರೀಕಾಂತ್ ಕಿಡಿಕಾರಿದ್ದಾರೆ.

    ಇತ್ತ ಮಂಗಳೂರು ಮೂಲದ ಯುವತಿಗೂ ಇದೇ ರೀತಿಯ ಮೆಸೇಜ್ ಬಂದಿದೆ. ವಾಟ್ಸಪ್ ಗೆ ಮೆಸೇಜ್ ಬಂದಾಗ ಯಾರಾದರೂ ಫ್ರೆಂಡ್ಸ್ ಮೆಸೇಜ್ ಮಾಡಿರಬಹುದು ಎಂದು ತಿಳಿದುಬಂದಿದೆ. ತದನಂತರ ಇದೊಂದು ಆನ್‍ಲೈನ್ ವಂಚಕರ ಗುಂಪು ಎಂಬುದು ನನಗೆ ಮನವರಿಕೆ ಆಯಿತು. ನಾನು ಕಾರ್ಯಕ್ರಮದ ಯಾವುದೇ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿಲ್ಲ. ನಾನು ಸ್ಪರ್ಧೆಯಲ್ಲಿಯೂ ಭಾಗಿಯಾಗಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಯುವತಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದಕರಿ ನಾಯಕರ ಪ್ರತಿಮೆಗೆ ಯುವಕನಿಂದ ಅವಮಾನ

    ಮದಕರಿ ನಾಯಕರ ಪ್ರತಿಮೆಗೆ ಯುವಕನಿಂದ ಅವಮಾನ

    ಚಿತ್ರದುರ್ಗ: ಯುವಕನೋರ್ವ ಮದಕರಿ ನಾಯಕರ ಪ್ರತಿಮೆ ಮೇಲೆ ಕುಳಿತು ಪೋಸ್ ಕೊಟ್ಟು ಅವಮಾನ ಎಸಗಿರುವ ಘಟನೆ ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆದಿದೆ.

    ಪುಷ್ಪಮಾಲೆ ಹಾಕಲೆಂದು ಪ್ರತಿಮೆ ಬಳಿ ಬಂದಿರುವ ಜೋಗಿಮಟ್ಟಿ ರಸ್ತೆಯ ನಾಗರಾಜ ಎಂಬ ಯುವಕ ಮದಕರಿ ಪ್ರತಿಮೆಯ ಕುದುರೆಯನ್ನೇರಿ ಅವಮಾನವೆಸಗಿದ್ದಾನೆ. ಸದ್ಯ ನಾಗರಾಜ ತೆಗೆದುಕೊಂಡ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿವೆ.

    ಫೋಟೋ ವೈರಲ್ ಆಗುತ್ತಿದ್ದಂತೆ ನಾಯಕ ಸಮುದಾಯ ಹಾಗು ದುರ್ಗದ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರತಿಮೆ ಬಳಿಗೆ ತೆರಳಲು ಮೆಟ್ಟಿಲು ಅಳವಡಿಸಿದ್ದ ನಗರಸಭೆ ವಿರುದ್ಧ ಕಿಡಿಕಾರಿದ್ದಾರೆ.

    ಈ ಹಿಂದೆ ನಾಗರೀಕರ ವಿರೋಧದ ನಡುವೆ ಕೆಲ ತಿಂಗಳ ಹಿಂದೆ ಮೆಟ್ಟಿಲು ಅಳವಡಿಸಲಾಗಿತ್ತು. ಮದಕರಿ ನಾಯಕ ಪ್ರತಿಮೆ ಬಳಿ ಅಳವಡಿಸಿರುವ ಮೆಟ್ಟಿಲು ತೆರವಿಗೆ ಕೂಡ ಆಗ್ರಹಿಸಲಾಗಿತ್ತು. ಆದರೆ ಜಾಣ ಕುರುಡು ಪ್ರದರ್ಶಿಸಿದ್ದ ನಗರಸಭೆಗೆ ಹಿಡಿಶಾಪ ಹಾಕಿ ಸುಮ್ಮನಾಗಿದ್ದ ಮದಕರಿನಾಯಕರ ಅಭಿಮಾನಿಗಳು ಇಂದು ಮೆಟ್ಟಿಲು ತೆರವಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋರ್ಟ್ ನಿಂದ ಸಮನ್ಸ್ – ಯುವಕ ನೇಣಿಗೆ ಶರಣು

    ಕೋರ್ಟ್ ನಿಂದ ಸಮನ್ಸ್ – ಯುವಕ ನೇಣಿಗೆ ಶರಣು

    ಚಾಮರಾಜನಗರ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ತಾಲೂಕಿನ ಗೂಳಿಪುರ ಗ್ರಾಮದಲ್ಲಿ ಜರುಗಿದೆ.

    ಗೂಳಿಪುರದ ಮಹೇಶ್ (25) ಆತ್ಮಹತ್ಯೆಗೆ ಶರಣಾದ ಯುವಕ. ಇಂದು ಬೆಳಗ್ಗೆ ಮನೆಯ ಹಿಂದೆ ಇರುವ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಮಹೇಶ್ ಒಂದು ವರ್ಷದ ಹಿಂದೆ ಅಪಘಾತ ಮಾಡಿದ್ದನು. ಈ ಸಂಬಂಧ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

    ಮೂರು ದಿನಗಳ ಹಿಂದೆ ಅಪಘಾತಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ನೀಡಿತ್ತು. ಅಂದಿನಿಂದಲೂ ಮಹೇಶ್ ಮಂಕಾಗಿದ್ದು, ಕೊನೆಗೆ ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣಾಗಿದ್ದಾನೆ ಎಂದು ಪೋಷಕರು ಮತ್ತು ಸ್ನೇಹಿತರು ಹೇಳಿದ್ದಾರೆ.

    ಈ ಕುರಿತು ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ವೆಯಾಗಲು ಹೆಣ್ಣು ಸಿಗದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

    ಮದ್ವೆಯಾಗಲು ಹೆಣ್ಣು ಸಿಗದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

    ಬಳ್ಳಾರಿ: ಮದುವೆಯಾಗಲು ಹೆಣ್ಣು ಸಿಗದೇ ಇದ್ದುದರಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಆರೀಫ್ ಅಷರಫಿ(30) ಆತ್ಮಹತ್ಯೆ ಮಾಡಿಕೊಂಡ ಯುವಕ. ಆರೀಫ್ ಬಳ್ಳಾರಿಯ ಸಿರಗುಪ್ಪ ನಿವಾಸಿಯಾಗಿದ್ದು, ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕುತ್ತಿದ್ದನು. ಆದರೆ ಆರೀಫ್‍ಗೆ ಇದುವರೆಗೂ ಯಾವುದೇ ಹೆಣ್ಣು ಸಿಗಲಿಲ್ಲ. ಹೀಗಾಗಿ ಆರೀಫ್ ತೀವ್ರವಾಗಿ ಮನನೊಂದಿದ್ದನು.

    ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳನ್ನು ಬೇಗ ಮದುವೆ ಮಾಡುತ್ತಾರೆ. ಹೀಗಿದ್ದರೂ ಸಹ ನನಗೆ ಮದುವೆಯಾಗಿಲ್ಲ. ನನ್ನ ಸ್ನೇಹಿತರೆಲ್ಲರಿಗೂ ಮದುವೆಯಾಗಿದೆ. ನನಗೆ ಇನ್ನೂ ಮದುವೆಯಾಗಿಲ್ಲ ಎಂದು ಆರೀಫ್ ಬೇಸರಗೊಂಡಿದ್ದನು. ಇದೇ ವಿಚಾರವಾಗಿ ಆರೀಫ್ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಆರೀಫ್ ಮೃತದೇಹ ಸಿರಗುಪ್ಪ ತಾಲೂಕಿನ ಕೆಚ್ಚನಗುಡ್ಡದ ನದಿಯಲ್ಲಿ ಪತ್ತೆಯಾಗಿದೆ. ಸದ್ಯ ಈ ಬಗ್ಗೆ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆಯ ಮೇಲಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ- ನಟಿ ರಶ್ಮಿ ಮೇಲೆ ಮೂಡಿದೆ ಅನುಮಾನ

    ಮನೆಯ ಮೇಲಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ- ನಟಿ ರಶ್ಮಿ ಮೇಲೆ ಮೂಡಿದೆ ಅನುಮಾನ

    ಬೆಂಗಳೂರು: ಮನೆ ಮೇಲಿನಿಂದ ಬಿದ್ದು ಯುವಕ ಸಾವನ್ನಪ್ಪಿದ ಪ್ರಕರಣದಲ್ಲಿ ಈಗ ದುನಿಯಾ ಸಿನಿಮಾ ನಟಿ ರಶ್ಮಿ ಹೆಸರು ತಳಕು ಹಾಕಿಕೊಂಡಿದೆ. ಅದು ಆತ್ಮಹತ್ಯೆಯೋ? ಆಕಸ್ಮಿಕ ಸಾವೋ? ಕೊಲೆಯೋ ನಿಟ್ಟಿನಲ್ಲಿ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.

    ಕಳೆದ ಭಾನುವಾರ ರಾತ್ರಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಡಿ ಬ್ಲಾಕ್‍ನಲ್ಲಿರುವ ರಶ್ಮಿ ಮನೆಗೆ ಬಂದಿದ್ದ ಫೋಟೋಗ್ರಾಫರ್ ಪ್ರತೀಕ್, ರಾತ್ರಿ ಸುಮಾರು 11.30 ಕ್ಕೆ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದನು. ಕುಡಿದ ಮತ್ತಿನಲ್ಲಿ ಕಾಲು ಜಾರಿ ಬಿದ್ದಿದ್ದಾನೆ ಎಂದು ದುನಿಯಾ ರಶ್ಮಿ ಹೇಳಿದ್ದರು. ಆದರೆ ಪ್ರಕರಣ ದಾಖಲಿಸಿಕೊಂಡ ಅನ್ನಪೂರ್ಣೇಶ್ವರಿನಗರ ಪೊಲೀಸರಿಗೆ ದುನಿಯಾ ರಶ್ಮಿಗೂ ಈ ಸಾವಿಗೂ ಏನಾದರೂ ಸಂಬಂಧ ಇದೆಯೇ ಎನ್ನುವ ಅನುಮಾನ ಮೂಡಿದೆ. ಇದನ್ನೂ ಓದಿ:  ದುನಿಯಾ ರಶ್ಮಿ ಮನೆ ಮೇಲಿಂದ ಬಿದ್ದು ಯುವಕ ಸಾವು

    ಅನುಮಾನ ಯಾಕೆ?
    ಸಾವನ್ನಪ್ಪಿದ ಪ್ರತೀಕ್ ಮತ್ತು ರಶ್ಮಿ ಹಲವು ವರ್ಷಗಳಿಂದ ಸ್ನೇಹಿತರು. ಹೀಗಾಗಿ ಇವರಿಬ್ಬರ ಮಧ್ಯೆ ಪ್ರೀತಿ, ಪ್ರೇಮ ಏನಾದರೂ ಇದೆಯೇ? ಈ ಕಾರಣಕ್ಕೆ ಗಲಾಟೆ ನಡೆದು ಪ್ರತೀಕ್ ಕೆಳಗೆ ಬಿದ್ದು ಮೃತಪಟ್ಟಿದ್ದಾನಾ ಎನ್ನುವ ಅನುಮಾನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಶ್ಮಿ ಅವರ ಮೊಬೈಲ್‍ನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‍ಎಸ್‍ಎಲ್) ಕಳುಹಿಸಲಾಗಿದೆ.

    ಮತ್ತೊಂದು ಶಾಕಿಂಗ್ ವಿಚಾರ ಎಂದರೆ ಪ್ರತೀಕ್ ಮನೆ ಮೇಲಿಂದ ಬಿದ್ದ ಕೆಲವೇ ಸೆಕೆಂಡ್‍ಗಳಲ್ಲಿ ಎದುರು ಮನೆಯ ಯುವತಿಯೊಬ್ಬರು ಮೊದಲ ಹಂತದಿಂದ ಕೆಳಗೆ ಬಿದ್ದಿದ್ದಾರೆ. ಸದ್ಯ ಆ ಯುವತಿ ಬಿಜಿಎಸ್ ಆಸ್ಪತ್ರೆಯ ಐಸಿಯೂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಇನ್ನು ಆಕೆಯಿಂದ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಅಂದು ರಾತ್ರಿ ಎದುರು ಮನೆಯ ಯುವತಿ ಪ್ರತೀಕ್ ಕೆಳಗೆ ಬಿಳೋದು ನೋಡಿದ್ಲಾ? ಅಥವಾ ಆ ಯುವತಿ ಮತ್ತು ಪ್ರತೀಕ್ ಮಧ್ಯೆ ಏನಾದರೂ ನಡೆದಿತ್ತಾ ಎನ್ನುವ ಅನುಮಾನ ಮೂಡಿದ್ದು ಸದ್ಯ ಆ ಯುವತಿ ಮೊಬೈಲನ್ನು ಕೂಡ ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿದೆ.

    ರಶ್ಮಿ ಕುಟುಂಬಸ್ಥರು, ಪ್ರತೀಕ್ ಮತ್ತು ಅರುಣ್ ತಡರಾತ್ರಿವರೆಗೂ ಕುಡಿದಿದ್ದಾರೆ. ಆ ಮತ್ತಿನಲ್ಲಿ ಪ್ರತೀಕ್ ಕಾಲು ಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಎಫ್‍ಎಸ್‍ಎಲ್ ವರದಿ ಬಂದ ನಂತರವಷ್ಟೇ ಪ್ರತೀಕ್ ಸಾವಿನ ರಹಸ್ಯ ಪತ್ತೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಬಾಲಕಿಯನ್ನ ರಕ್ಷಿಸಿದ ಯುವಕ-ವಿಡಿಯೋ ನೋಡಿ

    ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಬಾಲಕಿಯನ್ನ ರಕ್ಷಿಸಿದ ಯುವಕ-ವಿಡಿಯೋ ನೋಡಿ

    ಬೀಜಿಂಗ್: ನದಿಯಲ್ಲಿ ಮುಳುಗುತ್ತಿದ್ದ 6 ವರ್ಷದ ಬಾಲಕಿಯನ್ನು ಡೆಲಿವೆರಿ ಬಾಯ್ ರಕ್ಷಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ಯುವಕ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ಅಕ್ಟೋಬರ್ 13ರಂದು ಚೀನಾದ ಝೀಜಾಂಗ್ ಪ್ರಾಂತ್ಯದ ಶೌಕ್ಷಿಂಗ್ ನಗರದಲ್ಲಿ ನಡೆದಿದೆ. ಈ ವಿಡಿಯೋವನ್ನು ಸ್ಥಳೀಯ ಮಾಧ್ಯಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಶ್ವದಾದ್ಯಂತ ವೈರಲ್ ಆಗಿದೆ.

    ಇಬ್ಬರು ಮಕ್ಕಳು ನದಿಯ ದಡದಲ್ಲಿ ನಿಂತಿದ್ದು, ಅದರಲ್ಲಿ 6 ವರ್ಷದ ಬಾಲಕಿ ಮೆಟ್ಟಿಲು ಇಳಿದು ನದಿ ಬಳಿ ತೆರಳಿದ್ದಾಳೆ. ನೋಡ ನೋಡುತ್ತಿದ್ದಂತೆ ನೀರಿನ ರಭಸಕ್ಕೆ ಬಾಲಕಿ ಮುಳಗಲು ಆರಂಭಿಸಿದ್ದಾಳೆ. ಇದೇ ವೇಳೆ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಯುವಕ ಬಾಲಕಿ ಧ್ವನಿ ಕೇಳಿ ಬೈಕ್ ನಿಲ್ಲಿಸಿ ನೀರಿಗೆ ಧುಮುಕಿದ್ದಾನೆ. ಬಾಲಕಿಯನ್ನು ರಕ್ಷಿಸಿ ದಡಕ್ಕೆ ತಂದು ಮತ್ತು ಕೊಚ್ಚಿ ಹೋಗುತ್ತಿದ್ದ ಆಕೆ ಶೂ ಸಹವನ್ನು ಎತ್ತಿಕೊಂಡು ಬಂದಿದ್ದಾನೆ. ಇದನ್ನೂ ಓದಿ: ಕಟ್ಟಡದ ಬಾಲ್ಕನಿಯಲ್ಲಿ ನೇತಾಡ್ತಿದ್ದ ಕಂದನ ರಕ್ಷಣೆ-ವಿಡಿಯೋ ನೋಡಿ

    ಯುವಕನನ್ನು 23 ವರ್ಷದ ಲಿನ್‍ಫಿಂಗ್ ಎಂದು ಗುರುತಿಸಲಾಗಿದೆ. ಚೀನಾದ ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರವಾದ ಬಳಿಕ ಯುವಕನ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಯುವಕನನ್ನು ಸೂಪರ್ ಹೀರೋ ಅಂದರೆ, ಹಲವರು ಆತ ಬಾಲಕಿಗೆ ದೇವರ ರೂಪದಲ್ಲಿ ಬಂದ ವ್ಯಕ್ತಿ ಎಂದು ಕಮೆಂಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: 4ನೇ ಅಂತಸ್ತಿನ ಕಿಟಕಿಯಲ್ಲಿ ನೇತಾಡ್ತಿದ್ದ ಬಾಲಕಿಯನ್ನು ರಕ್ಷಿಸಿದ್ರು ಸೂಪರ್ ಹೀರೋಗಳು

    ಲಿನ್ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ ಆತನ ಕಂಪನಿ ‘ಮಾಡೆಲ್ ಡ್ರೈವರ್’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ಜೊತೆ ನಗದು ಬಹುಮಾನವನ್ನು ನೀಡಿದೆ ಎಂದು ಮಾಧ್ಯಮ ವರದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ರಶ್ಮಿ ಮನೆ ಮೇಲಿಂದ ಬಿದ್ದು ಯುವಕ ಸಾವು

    ದುನಿಯಾ ರಶ್ಮಿ ಮನೆ ಮೇಲಿಂದ ಬಿದ್ದು ಯುವಕ ಸಾವು

    ಬೆಂಗಳೂರು: ದುನಿಯಾ ಚಿತ್ರದ ನಟಿ ರಶ್ಮಿ ಮನೆ ಮೇಲಿಂದ ಬಿದ್ದು ಯುವಕ ಸಾವನಪ್ಪಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

    ಪ್ರತೀಕ್(25) ಮೃತಪಟ್ಟ ಯುವಕ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಪ್ರತೀಕ್, ರಶ್ಮಿ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ಫೋಟೋಶೂಟ್ ಮಾಡುತ್ತಿದ್ದನು. ಆದರೆ ಇದ್ದಕ್ಕಿದ್ದಂತೆ ಪ್ರತೀಕ್ ರಶ್ಮಿ ಅವರ ಮನೆಯ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ.

    ರಶ್ಮಿ ಸಹೋದರ ಅರುಣ್ ಹಾಗೂ ಪ್ರತೀಕ್ ಗೆಳೆಯರಾಗಿದ್ದರು. ಪ್ರತೀಕ್ ಭಾನುವಾರ ರಾತ್ರಿ ರಶ್ಮಿ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ರಶ್ಮಿ ತಮ್ಮ ಅರುಣ್ ಹಾಗೂ ಪ್ರತೀಕ್ ಟೆರೆಸ್ ಮೇಲೆ ಹೋಗಿ ಮದ್ಯಪಾನ ಪಾರ್ಟಿ ಮಾಡಿದ್ದಾರೆ.

    ಈ ವೇಳೆ ಎಣ್ಣೆ ಮತ್ತಿನಲ್ಲಿ ಪ್ರತೀಕ್ ಮನೆ ಮೇಲಿಂದ ಬಿದ್ದಿದ್ದಾನೆ. ತಕ್ಷಣ ಅವನನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲಿ ಪ್ರತೀಕ್ ಸಾವನ್ನಪ್ಪಿದ್ದಾನೆ. ಈ ಘಟನೆ ಸಂಬಂಧ ಪ್ರತೀಕ್ ಪೋಷಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ರಶ್ಮಿ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ.

    ಪೊಲೀಸರು ಘಟನೆ ನಡೆದ ಸ್ಥಳದ ಮರು ಸೃಷ್ಟಿ ಮಾಡಿ ತನಿಖೆ ಆರಂಭಿಸಿದ್ದಾರೆ. ನಾನು ಊಟ ತರುವುದಕ್ಕೆ ಕೆಳಗೆ ಹೋದಾಗ ಪ್ರತೀಕ್ ಕೆಳಗೆ ಬಿದ್ದಿದ್ದಾನೆ ಅಂತ ಪ್ರಾಥಮಿಕ ತನಿಖೆ ವೇಳೆ ಅರುಣ್ ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಂಡ ಕಟ್ಟಿಸ್ಕೊಂಡು ಗಾಡಿ ಬಿಡಲೇ, ಬಂಡವಾಳ ಹಾಕಿದ್ದು ನಮ್ಮಪ್ಪ, ನಿಮ್ಮಪ್ಪ ಅಲ್ಲ-ಪೇದೆಗೆ ಅವಾಜ್ ಹಾಕಿದ ಪುಂಡ

    ದಂಡ ಕಟ್ಟಿಸ್ಕೊಂಡು ಗಾಡಿ ಬಿಡಲೇ, ಬಂಡವಾಳ ಹಾಕಿದ್ದು ನಮ್ಮಪ್ಪ, ನಿಮ್ಮಪ್ಪ ಅಲ್ಲ-ಪೇದೆಗೆ ಅವಾಜ್ ಹಾಕಿದ ಪುಂಡ

    ರಾಮನಗರ: ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದಾಗ ಪೊಲೀಸರು ದಂಡ ಹಾಕುತ್ತಾರೆ. ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿದ್ರು ಅವುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಆದ್ರೆ ಜಿಲ್ಲೆಯ ಚನ್ನಪಟ್ಟಣದ ಸಾತನೂರು ಸರ್ಕಲ್ ಬಳಿ ಪುಂಡ ಯುವಕನೊಬ್ಬ ಪರಿಶೀಲನೆ ನಡೆಸುತ್ತಿದ್ದ ಕರ್ತವ್ಯ ನಿರರ ಪೇದೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೂ ಮುಂದಾಗಿದ್ದಾನೆ.

    ಪೊಲೀಸ್ ಪೇದೆ ಎಂದಿನಂತೆ ಸಾತನೂರು ಸರ್ಕಲ್ ಬಳಿ ವಾಹನಗಳ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಪೇದೆ ಯುವಕನ ಸ್ಕೂಟಿಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಸ್ಕೂಟಿಯನ್ನು ವಶಕ್ಕೆ ಪಡೆಯುತ್ತಿದ್ದಂತೆ ಕೋಪಗೊಂಡ ಯುವಕ ಗಾಡಿಗೆ ಬಂಡವಾಳ ಹಾಕಿದ್ದು ನಮ್ಮಪ್ಪ, ನಿಮ್ಮಪ್ಪ ಅಲ್ಲ. ನಿಮ್ಮ ಅಂತಹವರನ್ನು ಬೆಂಗಳೂರಲ್ಲಿ ಸಾಕಷ್ಟು ನೋಡಿದ್ದೇನೆ. ಫೈನ್ ಕಟ್ಟಿಸಿಕೊಂಡು ಗಾಡಿ ಬಿಡಲೇ ಎಂದು ಏಕವಚನದಲ್ಲಿಯೇ ಅವಾಜ್ ಹಾಕಿದ್ದಾನೆ. ಇದೇ ವೇಳೆ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ. ಇದನ್ನು ಓದಿ:  ಪೊಲೀಸರ ಮೇಲಿನ ಹಲ್ಲೆ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬಯಲು

     

    ಈ ಎಲ್ಲ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಪೇದೆ ಮತ್ತು ಯುವಕನ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಪುಂಡಾಟ ಮೆರೆದ ಯುವಕನ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಓದಿ: ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಕುಡುಕನಿಂದ ಹಲ್ಲೆ!- ವಿಡಿಯೋ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/Jo-g1Dw633M

  • ಕನ್ನಡ ಬರುತ್ತಾ ಅಂತ ಕೇಳಿ ಯುವಕನ ಎದೆಗೆ ಚಾಕು ಇರಿದು ಕೊಲೆಗೈದ್ರು!

    ಕನ್ನಡ ಬರುತ್ತಾ ಅಂತ ಕೇಳಿ ಯುವಕನ ಎದೆಗೆ ಚಾಕು ಇರಿದು ಕೊಲೆಗೈದ್ರು!

    ಬೆಂಗಳೂರು: ಕನ್ನಡ ಬರುತ್ತಾ ಅಂತ ಕೇಳಿ ಕೇರಳ ಮೂಲದ ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಗೌತಮ್ ಕೃಷ್ಣ ಕೊಲೆಗೀಡಾದ ಯುವಕ. ಈತ ಮೂರು ದಿನಗಳ ಹಿಂದೆ ನಗರದ ಕೊರಿಯರ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು.

    ನಡೆದಿದ್ದೇನು?:
    ಗೌತಮ್ ಹಾಗೂ ಆತನ ಗೆಳೆಯರು ವಾರದ ಹಿಂದೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದರು. ಮೊದಲು ಎರ್ನಾಕುಲಮ್ ನಲ್ಲಿ ಸ್ಯಾಮ್ ಸಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೌತಮ್ ಗೆ ಮೂರು ದಿನಗಳ ಹಿಂದೆಯಷ್ಟೇ ನಗರದ ಕೊರಿಯರ್ ಒಂದರಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಹಳೆ ಕಂಪನಿಯ ಸಂಬಳ ಬಂದ ಹಿನ್ನಲೆಯಲ್ಲಿ ಗೌತಮ್ ಮತ್ತು ಗೆಳೆಯರು ಮೆಜೆಸ್ಟಿಕ್ ನಲ್ಲಿ ಪಾರ್ಟಿ ಮಾಡಿದ್ದರು.

    ಪಾರ್ಟಿ ಮುಗಿಸಿ ಬರುವಾಗ ಕೆ.ಜಿ ರಸ್ತೆಯ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಡಿಯೊ ಬೈಕ್ ನಲ್ಲಿ ಬಂದ ಮೂರು ಜನ ಯುವಕರಲ್ಲಿ ಇಬ್ಬರು ಬೈಕಿನಿಂದ ಇಳಿದು ಕನ್ನಡ ಬರುತ್ತಾ ಎಂದು ಗೌತಮ್ ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಗೌತಮ್ ಉತ್ತರಿಸುತ್ತಿದ್ದಂತೆಯೇ ಆತನ ಎದೆಗೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಗೌತಮ್ ನೆಲಕ್ಕುರುಳಿದ್ದಾನೆ.

    ಕೂಡಲೇ ಗೌತಮ್ ನನ್ನು ಆಟೋ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಉಪ್ಪಾರಪೇಟೆ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಹಾಗೆಯೇ ಹತ್ಯೆ ಮಾಡಿ ಎಸ್ಕೇಪ್ ಆದ ಯುವಕರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನೇಹಿತನ ಪತ್ನಿಯ ಜೊತೆ ಲವ್ವಿಡವ್ವಿ – ಅಕ್ರಮ ಸಂಬಂಧ ಬಯಲು ಮಾಡಿದ್ದಕ್ಕೆ ಉಪನ್ಯಾಸಕಿಗೆ ಚೂರಿ ಇರಿದ!

    ಸ್ನೇಹಿತನ ಪತ್ನಿಯ ಜೊತೆ ಲವ್ವಿಡವ್ವಿ – ಅಕ್ರಮ ಸಂಬಂಧ ಬಯಲು ಮಾಡಿದ್ದಕ್ಕೆ ಉಪನ್ಯಾಸಕಿಗೆ ಚೂರಿ ಇರಿದ!

    ಬಳ್ಳಾರಿ: ಪಕ್ಕದ ಮನೆ ಉಪನ್ಯಾಸಕಿ ತನ್ನ ಅಕ್ರಮ ಸಂಬಂಧವನ್ನು ಸ್ನೇಹಿತನ ಬಳಿ ಬಯಲು ಮಾಡಿದ್ದಕ್ಕೆ ಸಿಟ್ಟಾಗಿ ಆಕೆಗೆ ಚಾಕು ಇರಿದ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದೆ.

    ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಪ್ರಶಾಂತ್ ತನ್ನ ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಸ್ನೇಹಿತ ಮನೆಯಲ್ಲಿ ಇಲ್ಲದ ವೇಳೆ ಮನೆಗೆಲ್ಲಾ ಹೋಗಿ ಬರುತ್ತಿದ್ದ. ಈ ವಿಚಾರವನ್ನು ಪಕ್ಕದ ಮನೆಯಲ್ಲಿದ್ದ ಉಪನ್ಯಾಸಕಿ ಸುಧಾರಾಣಿಯೇ ತನ್ನ ಅಕ್ರಮ ಸಂಬಂಧದ ಬಗ್ಗೆ ಸ್ನೇಹಿತನಿಗೆ ಚಾಡಿ ಹೇಳಿದ್ದಾಳೆ ಎಂದು ರೊಚ್ಚಿಗೆದ್ದು ಉಪನ್ಯಾಸಕಿಗೆ ಚಾಕು ಇರಿದಿದ್ದಾನೆ.

    ಗುಡೇಕೋಟೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಸುಧಾರಾಣಿ ಮಂಗಳವಾರ ಸಂಜೆ ಕಾಲೇಜು ಮುಗಿಸಿ ಮನೆಗೆ ತೆರಳುವ ವೇಳೆ ಪ್ರಶಾಂತ್ ದಾಳಿ ಮಾಡಿ ಚಾಕು ಇರಿದಿದ್ದಾನೆ. ಘಟನೆಯನ್ನು ನೋಡಿದ ಸ್ಥಳೀಯರು ಪ್ರಶಾಂತ್‍ಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಸದ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದ ಉಪನ್ಯಾಸಕಿಯನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ದಾಖಲಿಸಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿರುವ ಗುಡೇಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv