Tag: youth

  • ಚಳಿಯಲ್ಲಿ ನಡುಗುತ್ತಾ ರಸ್ತೆ ಬದಿಯಲ್ಲೇ ಮಲಗಿದ್ರು ಭಾವಿ ಸೈನಿಕರು..!

    ಚಳಿಯಲ್ಲಿ ನಡುಗುತ್ತಾ ರಸ್ತೆ ಬದಿಯಲ್ಲೇ ಮಲಗಿದ್ರು ಭಾವಿ ಸೈನಿಕರು..!

    ರಾಯಚೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಸೈನಿಕ ಹುದ್ದೆಗಳ ನೇಮಕಾತಿ ರ‍್ಯಾಲಿಯಲ್ಲಿ ಬಂದಿರುವ ಸಾವಿರಾರು ಯುವಕರು ರಾತ್ರಿ ಮಲಗಲು ಜಾಗವಿಲ್ಲದೆ ರಸ್ತೆ ಬದಿಯಲ್ಲಿ ಚಳಿಯಲ್ಲೇ ಸೂರಿಲ್ಲದೆ ಮಲಗುತ್ತಿದ್ದಾರೆ.

    ಇಲ್ಲಿನ ಕೃಷಿ ವಿವಿಯಲ್ಲಿ ನಡೆಯುತ್ತಿರುವ ಭಾರತೀಯ ಸೇನೆಯ ನೇಮಕಾತಿ ರ‍್ಯಾಲಿಗೆ ಒಟ್ಟು 34,492 ಸೇನಾ ಉದ್ಯೋಗಾರ್ಥಿಗಳು ಬಂದಿದ್ದಾರೆ. ಆದರೆ ಜಿಲ್ಲಾಡಳಿತವಾಗಲಿ, ಸೇನಾ ನೇಮಕಾತಿ ಅಧಿಕಾರಿಗಳಾಗಲಿ ಊಟ, ವಸತಿ ವ್ಯವಸ್ಥೆ ಮಾಡಿಲ್ಲ. ಡಿಸೆಂಬರ್ 11 ರಿಂದ 20ರ ವರೆಗೆ ನೇಮಕಾತಿ ರ‍್ಯಾಲಿ ನಡೆಯುತ್ತಿದ್ದು, ದೂರದ ಊರುಗಳಿಂದ ಬಂದ ಯುವಕರು ಮಲಗಲು ಜಾಗವಿಲ್ಲದೆ ರಸ್ತೆ ಬದಿಯಲ್ಲೇ ಚಳಿಯಲ್ಲಿ ನಡುಗುತ್ತಾ ಮಲಗುತ್ತಿದ್ದಾರೆ.

    ನಗರದ ಈಶ್ವರ ದೇವಾಲಯ ಸೇವಾ ಸಮಿತಿ ಊಟ, ತಿಂಡಿಯ ವ್ಯವಸ್ಥೆ ಹಾಗೂ ರೋಟರಿ ಕ್ಲಬ್ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಆದರೆ ವಸತಿ ವ್ಯವಸ್ಥೆಯಿಲ್ಲದೆ ಭಾವಿ ಸೈನಿಕರು ಈಗಾಗಲೇ ಚಳಿಯಲ್ಲಿ ನಡುಗುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹುಡುಗಿ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!

    ಹುಡುಗಿ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!

    ಬಾಗಲಕೋಟೆ: ಯುವಕನೊಬ್ಬನನ್ನು ಕೊಡಲಿಯಿಂದ ಬರ್ಬರವಾಗಿ ಕೊಲೆಗೈದ ಘಟನೆ ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದಲ್ಲಿ ನಡೆದಿದೆ. ಶಿರೂರ ಗ್ರಾಮದ ಶರಣಪ್ಪ ಹಿರೇಕೊಂಬಿ(18) ಕೊಲೆಯಾದ ಯುವಕ. ಅದೇ ಗ್ರಾಮದ ಆನಂದ ಬೆನ್ನೂರು (24) ಹತ್ಯೆ ಮಾಡಿದ ಆರೋಪಿ. ಕೊಲೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ ಇಬ್ಬರ ನಡುವೆ ಹುಡುಗಿಯ ವಿಚಾರಕ್ಕೆ ಜಗಳವಾಗಿತ್ತು ಎನ್ನಲಾಗಿದೆ.

    ಘಟನೆಯ ವಿವರ:
    ಶಿರೂರು ಗ್ರಾಮದ ಗುಳೇದಗುಡ್ಡ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ಶರಣಪ್ಪ ಕೆಲಸ ಮಾಡುತ್ತಿದ್ದ. ಎಂದಿನಂತೆ ಇಂದು ಕೂಡಾ ಶರಣಪ್ಪ ಕೆಲಸದಲ್ಲಿ ತೊಡಗಿದ್ದ. ಈ ವೇಳೆ ಅಲ್ಲಿಗೆ ಕೊಡಲಿ ಹಿಡಿದು ಬಂದ ಆನಂದ ಶರಣಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭಿರವಾಗಿ ಗಾಯಗೊಂಡಿದ್ದ ಶರಣಪ್ಪ ಅತಿಯಾದ ರಕ್ತಸ್ರಾವದಿಂದ ಸ್ಥಳಲ್ಲಿಯೇ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ಆರೋಪಿ ಯುವಕ ಅಲ್ಲಿಂದ ಪರಾರಿಯಾಗಿದ್ದ.

    ಪೆಟ್ರೋಲ್ ಬಂಕ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕೊಲೆಯ ದೃಶ್ಯ ಸೆರೆಯಾಗಿದೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೇನೆಗೆ ಸೇರೋ ಮಂದಿಗೆ ರಾಯಚೂರು ಜನರಿಂದ ಅನ್ನದಾಸೋಹ

    ಸೇನೆಗೆ ಸೇರೋ ಮಂದಿಗೆ ರಾಯಚೂರು ಜನರಿಂದ ಅನ್ನದಾಸೋಹ

    ರಾಯಚೂರು: ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಭಾರತೀಯ ಸೇನೆಯ ವಿವಿಧ ಸೈನಿಕ ಹುದ್ದೆಗಳ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸುವ ಯುವಕರಿಗೆ ನಗರದ ಜನ ಅನ್ನ ದಾಸೋಹವನ್ನ ಏರ್ಪಡಿಸಿದ್ದಾರೆ.

    ಡಿಸೆಂಬರ್ 10 ರಿಂದ 20 ರ ವರೆಗೆ ಕೃಷಿ ವಿವಿ ಆವರಣದಲ್ಲಿ ನೇಮಕಾತಿ ರ‍್ಯಾಲಿ ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸಿರುವ ರಾಯಚೂರಿನ 1,700 ಜನ ಯುವಕರು ಸೇರಿ ಒಟ್ಟು 34,492 ಸೇನಾ ಉದ್ಯೋಗಾರ್ಥಿಗಳಿಗೆ ಊಟ, ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

    ನಗರದ ಡ್ಯಾಡಿ ಕಾಲೋನಿಯ ಶ್ರೀ ಈಶ್ವರ ದೇವಾಲಯ ಸೇವಾ ಸಮಿತಿ ಊಟ, ತಿಂಡಿಯ ದಾಸೋಹ ಏರ್ಪಡಿಸಿದ್ದು, ರೋಟರಿ ಕ್ಲಬ್ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಸೇನೆ ಸೇರಿ ದೇಶ ಸೇವೆ ಮಾಡಲು ಮುಂದಾದ ಯುವಕರಿಗೆ ಅನಾನುಕೂಲವಾಗದಿರಲಿ ಎಂದು ದಾನಿಗಳು ಮುಂದೆ ಬಂದು ಅನ್ನದಾಸೋಹಕ್ಕೆ ಕೈ ಜೋಡಿಸಿದ್ದಾರೆ.

    ರಾಯಚೂರು ಜನರ ಸಹಕಾರ ಕಂಡು ಸೇನಾ ಅಧಿಕಾರಿಗಳು ಸಹ ಖುಷಿ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯ ಯುವಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ಬಳಿಕ ಅಂತಿಮ ಆಯ್ಕೆ ನಡೆಯಲಿದೆ. ಸೋಲ್ಜರ್ ಜಿ.ಡಿ, ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಟೆಕ್ನಿಕಲ್ ಎವಿಯೇಷನ್, ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಮತ್ತು ಸೋಲ್ಜರ್ ಸ್ಟಿವಾರ್ಡ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಆಯಸ್ಸು ಹೆಚ್ಚಾಗಲೆಂದು ಮುಸ್ಲಿಂ ಯುವಕರಿಂದ ವಿಶೇಷ ಪ್ರಾರ್ಥನೆ

    ಸಿದ್ದಗಂಗಾ ಶ್ರೀಗಳ ಆಯಸ್ಸು ಹೆಚ್ಚಾಗಲೆಂದು ಮುಸ್ಲಿಂ ಯುವಕರಿಂದ ವಿಶೇಷ ಪ್ರಾರ್ಥನೆ

    ವಿಜಯಪುರ: ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಆಯಸ್ಸು ಹೆಚ್ಚಾಗಲೆಂದು ಇಲ್ಲಿನ ಕೆಲವು ಮುಸ್ಲಿಂ ಯುವಕರು ಅಲ್ಲಾನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

    ನಗರದ ಮುರ್ತುಜ್ ಖಾದ್ರಿ ದರ್ಗಾದಲ್ಲಿ ಒಂಬತ್ತು ಜನ ಯುವಕರು ನಡೆದಾಡುವ ದೇವರು ಬೇಗ ಚೇತರಿಸಿಕೊಳ್ಳಲಿ ಎಂದು ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ದರ್ಗಾದಲ್ಲಿ ತೆಂಗಿನಕಾಯಿ ಒಡೆಯುವ ಪದ್ಧತಿ ವಿರಳ. ಆದರೆ ಈ ಯುವಕರು ತೆಂಗಿನಕಾಯಿ ಒಡೆದು, ಊದು ಬತ್ತಿ ಹಚ್ಚಿ ಅಲ್ಲಾನಿಗೆ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಶ್ರೀಗಳು ಸರ್ವ ಧರ್ಮಗಳ ಗುರುಗಳು. ಸಿದ್ದಗಂಗಾ ಮಠದಲ್ಲಿ ನಿತ್ಯವೂ ಶಿಕ್ಷಣ ದಾಸೋಹ, ಅನ್ನ ದಾಸೋಹ ನಡೆಯುತ್ತದೆ. ಇದು ಯಾವುದೇ ಜಾತಿ ಬೇಧವಿಲ್ಲದೆ ನಡೆಯುತ್ತದೆ. ಶಿಕ್ಷಣ ಹಾಗೂ ಅನ್ನ ದಾಸೋಹವನ್ನು ಸರ್ವ ಜನಾಂಗದವರಿಗೆ ಒದಗಿಸಿರುವ ಶ್ರೀಗಳು ಜಗತ್ತಿಗೆ ದೇವರಾಗಿದ್ದಾರೆ. ಅವರಿಗೆ ಆಯಸ್ಸು ಹಾಗೂ ಆರೋಗ್ಯ ದೇವರು ನೀಡಲೆಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಯುವಕರು ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ತಂಟೆಗೆ ಬರಬೇಡ ಬಿಟ್ಟು ಬಿಡು – ಮಿಂಚಿನ ಓಟ ಬೀರಿದ ಹೋರಿಗಳು

    ನನ್ನ ತಂಟೆಗೆ ಬರಬೇಡ ಬಿಟ್ಟು ಬಿಡು – ಮಿಂಚಿನ ಓಟ ಬೀರಿದ ಹೋರಿಗಳು

    ಹಾವೇರಿ: ಜನರ ಕೇಕೆ, ಸಿಳ್ಳೆಗಳ ಸುರಿಮಳೆಯ ನಡುವೆ ಅಲಂಕಾರಗೊಂಡಿದ್ದ ಒಂದೊಂದೇ ಹೋರಿಗಳು ಗೆಲುವು ನನ್ನದೇ ಅಂತಾ ಮಿಂಚಿನ ಓಟ ಪ್ರದರ್ಶಿಸುತ್ತಿದ್ದ ದೃಶ್ಯಗಳು ಹಾವೇರಿ ತಾಲೂಕು ದೇವಿಹೊಸೂರು ಗ್ರಾಮದಲ್ಲಿ ಕಂಡುಬಂದಿತು.

    ಕೊಬ್ಬರಿ ಹಾರ, ಪೀಪಿ, ಬಲೂನ್ ಸರಗಳನ್ನು ಹಾಕಿಕೊಂಡು ಶರವೇಗದಲ್ಲಿ ಓಡುತ್ತಿದ್ದ ಹೋರಿ ಓಟ ನೋಡುವುದೇ ನೆರೆದಿದ್ದ ಜನರಿಗೆ ಕಣ್ಣಿಗೆ ಹಬ್ಬವಾಗಿತ್ತು. ದೇವಿಹೊಸೂರು ಗ್ರಾಮದ ಗೆಳೆಯ ಬಳಗದವರು ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದ್ದರು. ಸುಮಾರು ಹತ್ತು ವರ್ಷಗಳಿಂದ ಇಂತಹ ಸ್ಪರ್ಧೆ ನಡೆಸಲಾಗುತ್ತಿದೆ.

    ಹಾವೇರಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ 400ಕ್ಕೂ ಅಧಿಕ ಹೋರಿಗಳು ಸ್ಪರ್ಧೆಗೆ ಬಂದಿದ್ದವು. ಹಿಂಗಾರು ಬಿತ್ತನೆ ನಂತರ ರೈತರಿಗೆ ಸ್ವಲ್ಪ ಬಿಡುವು ಇರುವುದರಿಂದ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಸಲಾಗುತ್ತದೆ. ಈ ಸ್ಪರ್ಧೆಗೆ ಶಿವಮೊಗ್ಗ, ಶಿಕಾರಿಪುರ, ಹಾವೇರಿ, ಬ್ಯಾಡಗಿ ಸೇರಿದಂತೆ ವಿವಿಧ ಭಾಗಗಳಿಂದ ಹೋರಿ ಹಿಡಿಯುವುದಕ್ಕೆ ಯುವಕರ ದಂಡೆ ಆಗಮಿಸಿತ್ತು.

    ಹೇಗಿತ್ತು ಹೋರಿಗಳ ಗತ್ತು?:
    ಮೈಕಟ್ಟು ತುಂಬಿಕೊಂಡಿದ್ದ ಹೋರಿಗಳು ಅಲಂಕಾರಗೊಂಡು ಕಣಕ್ಕೆ ಇಳಿದಿದ್ದವು. ನನ್ನ ತಂಟೆಗೆ ಬರಬೇಡ ಬಿಟ್ಟುಬಿಡು ಅಂತಾ ಗುರಾಯಿಸಿ ಯಾರ ಕೈಗೂ ಸಿಗದಂತೆ ಓದುತ್ತಿದ್ದವು. ಶರ ವೇಗದಲ್ಲಿ ಓಡುವ ಹೋರಿಗಳ ಹಿಂದೆ ಯುವಕರ ದಂಡು ಹಾಜರ ಇರುತ್ತಿತ್ತು. ಬಿದ್ದು, ಎದ್ದು ಸಾಹಸದ ಮೂಲಕ ಹೋರಿ ಹಿಡಿಯುವ ಯುವಕರು ಹರಸಾಹಸ ಪಡುತ್ತಿದ್ದರು. ಆದರೂ ಯಾರ ಕೈಗೂ ಹೋರಿಗಳು ಕಾಲುಕಿಳೂತ್ತಿದ್ದವು.

    ಈ ಸ್ಪರ್ಧೆಯಲ್ಲಿ ಯಾವುದೇ ರೀತಿಯ ಬಹುಮಾನ ಇಲ್ಲದಿದ್ದರೂ ಹೋರಿಗಳು ಭರ್ಜರಿಯಾಗಿ ಓಡಿಸಲಾಗುತ್ತದೆ. ಹೋರಿ ಹಿಡಿಯಲು ಯುವಕರ ಹರಸಾಹಸ, ಕೈಗೆ ಸಿಗದೇ ಓಡುವ ಹೋರಿಗಳ ದೃಶ್ಯಗಳು ನೆರೆದಿದ್ದ ಜನರಿಗೆ ಸಖತ್ ಮನರಂಜನೆ ನೀಡುತ್ತದೆ. ಜನರೂ ಸಹ ಕೇಕೆ, ಸಿಳ್ಳೆಗಳ ಮೂಲಕ ಹೋರಿಗಳನ್ನ ಮತ್ತಷ್ಟು ಹುರಿದುಂಬಿಸುತ್ತಾರೆ.

    ಹೋರಿ ತಯಾರಿ ಹೇಗಿರುತ್ತೆ?:
    ಸ್ಪರ್ಧೆಗೆ ಅಂತಲೇ ಮಾಲೀಕರು ತಮ್ಮ ಹೋರಿಗಳಿಗೆ ಗೋಧಿ ನುಚ್ಚು, ಜೋಳ, ಹಿಂಡಿ ಸೇರಿದಂತೆ ವಿವಿಧ ಆಹಾರ ನೀಡುತ್ತಾರೆ. ಹೋರಿಗಳನ್ನು ಕಟ್ಟು ಮಸ್ತಾಗಿ ತಯಾರು ಮಾಡುತ್ತಾರೆ. ಬಲೂನ್, ಪೀಪಿ, ಕೊಬ್ಬರಿ ಹಾರ, ಜೂಲಾ ಸೇರಿದಂತೆ ವಿವಿಧ ವಸ್ತುಗಳಿಂದ ಹೋರಿಯನ್ನು ಅಲಂಕರಿಸಿ ಸ್ಪರ್ಧೆಗೆ ಅಣಿ ಮಾಡಿರುತ್ತಾರೆ. ಸಂಘಟಕರು ಹೋರಿ ಹೆಸರುಗಳನ್ನು ಕೂಗುತ್ತಿದ್ದಂತೆ ಹೋರಿಗಳನ್ನು ಅಖಾಡಕ್ಕೆ ಮಾಲೀಕರು ಬಿಡುತ್ತಾರೆ.

    ಅಖಾಡದಲ್ಲಿ ಬಿಡುತ್ತಿದ್ದಂತೆ ಹೋರಿಗಳು ಧೂಳೆಬ್ಬಿಸಿಕೊಂಡು ಒಂದಕ್ಕಿಂತ ಒಂದು ನಾವೇನು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಭರ್ಜರಿಯಾಗಿ ಓಡಿದವು. ಯುವಕರು ಹೋರಿ ಹಿಡಿಯುದಕ್ಕೆ ಪ್ರಯತ್ನಿಸಿದರೂ ಯಾರ ಕೈಗೂ ಸಿಗದಂತೆ ಗೆಲುವಿನ ದಡ ಮುಟ್ಟಿದವು. ಗ್ರಾಮದ ಇಕ್ಕಟ್ಟಾದ ರಸ್ತೆಯಲ್ಲಿ ಓಡುವ ಹೋರಿಗಳು ಯಾರ ಕೈಗೂ ಸಿಗದಂತೆ ಒಂದು ನಿಮಿಷದಲ್ಲಿ ಗೆಲುವಿನ ದಡ ಮುಟ್ಟಬೇಕು. ಒಂದು ವೇಳೆ ಹೋರಿಯನ್ನು ಯಾರಾದರೂ ಹಿಡಿದರೆ ಅಂತಹ ಹೋರಿಯನ್ನ ಸ್ಪರ್ಧೆಯಿಂದ ಔಟ್ ಮಾಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪರಿಚಯಸ್ಥನ ಬೈಕನ್ನೇ ಕದ್ದು ಯುವಕ ಎಸ್ಕೇಪ್..!

    ಪರಿಚಯಸ್ಥನ ಬೈಕನ್ನೇ ಕದ್ದು ಯುವಕ ಎಸ್ಕೇಪ್..!

    ಮೈಸೂರು: ಪರಿಚಯಸ್ಥನ ಬೈಕನ್ನೇ ಯುವಕನೊಬ್ಬ ಕದ್ದ ಪ್ರಕರಣ ಮೈಸೂರಿನ ಹೆಬ್ಬಾಳಿನಲ್ಲಿ ನಡೆದಿದೆ.

    ಆಕಾಶ್ ಪರಿಚಯಸ್ಥನ ಬೈಕ್ ಕದ್ದ ಖತರ್ನಾಕ್ ಕಳ್ಳ. ಆಕಾಶ್ ಮೂಲತಃ ಬೆಂಗಳೂರಿನವನಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಬುದಾಗಿ ತಿಳಿದುಬಂದಿದೆ. ಆಕಾಶ್ ತನ್ನ ಜೊತೆ ಕೆಲಸ ಮಾಡುತ್ತಿದ್ದ ಸ್ನೇಹಿತನ ಬೈಕನ್ನೇ ಕದ್ದಿದ್ದಾನೆ.

    ಕಡಕೊಳ ನಿವಾಸಿ ಸುನೀಲ್ ಜೊತೆ ಆಕಾಶ್ ಕೆಲಸ ಮಾಡುತ್ತಿದ್ದನು. ಇದೀಗ ಸುನೀಲ್ ಬೈಕನ್ನೇ ಕದ್ದು ಸಿಕ್ಕಿಬಿದ್ದಿದ್ದಾನೆ. ಹಾಡುಹಗಲೇ ಕಳ್ಳತನ ನಡೆಸಿದ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುನೀಲ್ ಬಳಿಯಿಂದ ಕೀ ಕದ್ದು ನಂತರ ಆತನ ಹೊಸ ಬೈಕಿನೊಂದಿಗೆ ಪರಾರಿಯಾಗಿದ್ದಾನೆ.

    ಸದ್ಯ ಈ ಬಗ್ಗೆ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಡ್ಡೆ ಹುಡುಗನ ಜೊತೆ ಹಾಡಹಗಲೇ ಅಪ್ರಾಪ್ತೆಯ ಲವ್ವಿ ಡವ್ವಿ- ಬಸ್ ನಿಲ್ದಾಣದ ಪಕ್ಕದಲ್ಲೇ ವಿದ್ಯಾರ್ಥಿನಿ ಕಿಸ್

    ಪಡ್ಡೆ ಹುಡುಗನ ಜೊತೆ ಹಾಡಹಗಲೇ ಅಪ್ರಾಪ್ತೆಯ ಲವ್ವಿ ಡವ್ವಿ- ಬಸ್ ನಿಲ್ದಾಣದ ಪಕ್ಕದಲ್ಲೇ ವಿದ್ಯಾರ್ಥಿನಿ ಕಿಸ್

    ಚಿಕ್ಕಬಳ್ಳಾಪುರ: ಶಾಲೆಗೆ ಹೋಗುತ್ತಿರುವ ನಿಮ್ಮ ಹದಿಹರೆಯದ ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಎನ್ನುವ ಮಾತಿಗೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಚಿಕ್ಕಬಳ್ಳಾಪುರ ವಿದ್ಯಾರ್ಥಿನಿಯ ವಿಡಿಯೋ ವೈರಲ್ ಆಗಿದೆ.

    ಪಡ್ಡೆ ಯುವಕನೊಬ್ಬ ಅಪ್ರಾಪ್ತ ಬಾಲಕಿ ಜೊತೆ ಹಾಡಹಗಲೇ ಲವ್ವಿ ಡವ್ವಿ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲೇ ಯುವಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯ ಜೊತೆ ಲವ್ವಿ ಡವ್ವಿ ನಡೆಸಿರುವ ವಿಡಿಯೋ ಮೊಬೈಲ್‍ನಲ್ಲಿ ರೆಕಾರ್ಡ್ ಆಗಿದೆ.

    ಶಾಲೆಗೆ ಹೋಗುತ್ತಿರುವ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ತನ್ನ ಪ್ರೇಮಪಾಶಕ್ಕೆ ಸೆಳೆದುಕೊಂಡಿರುವ ಪಡ್ಡೆ ಯುವಕನೊಬ್ಬ ಆಕೆಯನ್ನು ತನ್ನ ಕಾಮತೃಷೆಗೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ. ಶಾಲೆಗೆ ಹೋಗುವುದ್ದಕ್ಕೆ ಅಂತ ಮನೆಯಿಂದ ಬಂದಿರುವ ವಿದ್ಯಾರ್ಥಿನಿ ಬಸ್ ನಿಲ್ದಾಣದ ಪಕ್ಕದಲ್ಲೇ ಪಡ್ಡೆ ಹುಡುಗನ ಜೊತೆ ಮಾತಿಗಿಳಿದಿದ್ದಾಳೆ.

    ಈ ವೇಳೆ ಆಕೆಯ ಕೈ ಮೈ ಮುಟ್ಟಿದ ಯುವಕ ಆಕೆಯನ್ನು ಮುತ್ತು ಕೊಡುವಂತೆ ಪ್ರೇರೇಪಿಸಿದ್ದಾನೆ. ಈ ವೇಳೆ ಅಕ್ಕ-ಪಕ್ಕ ಯಾರು ನೋಡುತ್ತಿಲ್ಲ ಎನ್ನುವುದನ್ನು ಗಮನಿಸಿದ ಅಪ್ರಾಪ್ತ ಬಾಲಕಿ ಯುವಕನ ಜೊತೆ ಮುತ್ತಿನಾಟ ಶುರುವಿಟ್ಟಿಕೊಂಡಿದ್ದಾಳೆ. ಈ ವೇಳೆ ಪರಸ್ಪರರು ಮುತ್ತಿನಾಟ ನಡೆಸಿದ್ದು ಈ ದೃಶ್ಯ ಅಲ್ಲೇ ಕಾರಿನ ಓಳಭಾಗದಲ್ಲಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮೆ ಎದುರೇ ಟೆಕ್ಕಿ ಆತ್ಮಹತ್ಯೆ

    ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮೆ ಎದುರೇ ಟೆಕ್ಕಿ ಆತ್ಮಹತ್ಯೆ

    ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮೆ ಎದುರೇ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ನಡೆದಿದೆ.

    ರೋಷನ್(23) ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ. ರೋಷನ್ ಮೂಲತಃ ಹೈದರಾಬಾದ್ ನಿವಾಸಿಯಾಗಿದ್ದು, ಎಚ್‍ಎಸ್‍ಆರ್ ಲೇಔಟ್‍ನ ಐಟಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ರೋಷನ್ ಅದೇ ಕಂಪನಿಯ ಮುಸ್ಲಿಂ ಯುವತಿಯನ್ನು ಪ್ರೀತಿಸುತಿದ್ದ.

    ರೋಷನ್ ಪದೇ ಪದೇ ಪ್ರೀತಿಸು ಎಂದು ಯುವತಿಗೆ ಪೀಡಿಸುತ್ತಿದ್ದನು. ಆದರೆ ಯುವತಿ ರೋಷನ್ ಪ್ರೀತಿಯನ್ನು ನಿರಾಕರಿಸಿದ್ದಳು. ಆಗ ರೋಷನ್ ಯುವತಿಗೆ ಪೀಡಿಸಲು ಶುರು ಮಾಡಿದ್ದನು. ರೋಷನ್ ಕಾಟ ತಾಳಲಾರದೇ ಯುವತಿ ಕೆಲಸ ಬಿಟ್ಟಿದ್ದಳು.

    ಯುವತಿ ಕೆಲಸ ಬಿಟ್ಟು ಅದೇ ಬಿಲ್ಡಿಂಗ್‍ನ ಮೂರನೇ ಮಹಡಿಯ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ರೋಷನ್ ಐದನೇ ಮಹಡಿಯಿಂದ ಮೂರನೇ ಮಹಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೋಷನ್ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಈ ಬಗ್ಗೆ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೂಲ್ ಕೂಲ್ ಬೆಂಗ್ಳೂರಿನ ವಾತಾವರಣಕ್ಕೆ ಸಿಟಿ ಮಂದಿ ಫಿದಾ!

    ಕೂಲ್ ಕೂಲ್ ಬೆಂಗ್ಳೂರಿನ ವಾತಾವರಣಕ್ಕೆ ಸಿಟಿ ಮಂದಿ ಫಿದಾ!

    ಬೆಂಗಳೂರು: ಮನೆ ಹೊರಗೆ ಮೋಡ ಮುಸುಕಿದ ವಾತಾವರಣ. ಜೊತೆಗೆ ತುಂತುರು ಮಳೆಯ ಸಿಂಚನ. ಹಾಸಿಗೆ ಮೇಲಿಂದ ಎದ್ದು ಬರಲು ಆಗದೆ ಇರುವಷ್ಟು ಚಳಿ. ಬೆಂಗಳೂರು ನಗರದ ಮಂದಿಯನ್ನು ಈ ರೀತಿಯಲ್ಲಿ ಕಾಡುತ್ತಿರುವ ವಾತಾವರಣಕ್ಕೆ ಜನ ಫುಲ್ ಫಿದಾ ಆಗಿದ್ದಾರೆ. ಆದರೆ ಇದೇ ರೀತಿ ವಾತಾವರಣ ಮುಂದುವರಿದರೆ ಆರೋಗ್ಯದ ಮೇಲೆ ಪರಿಣಾಮವಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

    ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮವಾಗಿ ಉದ್ಯಾನ ನಗರಿಯಲ್ಲಿ ಮುಂಜಾನೆಯಿಂದ ತುಂತುರು ಮಳೆಯಾಗುತ್ತಿದೆ. ಬೆಳಗ್ಗೆ 10 ಗಂಟೆಯಾದರೂ ಮೋಡ ಮುಸುಕಿದ ವಾತಾವರಣದಿಂದ ಕೂಡಿದ್ದು, ತಣ್ಣನೆಯ ಗಾಳಿ, ಚಳಿಯ ಜೊತೆಗೆ ತುಂತುರು ಹನಿಗಳ ಸಿಂಚನವಾಗುತ್ತಿದೆ. ಇದು ಜನರಿಗೆ ನಾವು ಬೆಂಗಳೂರಿನಲ್ಲಿದ್ದೇವಾ ಅಥವಾ ಯಾವುದೋ ಮಲೆನಾಡಿನಲ್ಲಿದ್ದೇವಾ ಎನ್ನುವ ಅನುಭವವನ್ನು ಉಂಟು ಮಾಡಿದೆ.

    ಈ ರೀತಿಯ ವಾತಾವರಣ ಇರುವುದರಿಂದ ಆರೋಗ್ಯದ ಮೇಲೆ ಬಹುಬೇಗ ಪರಿಣಾಮ ಬಿರುವ ಸಾಧ್ಯತೆ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದು, ತುಂತುರು ಮಳೆ, ಶೀತಗಾಳಿಯಿಂದ ಪ್ರಮುಖವಾಗಿ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುವ ಕುರಿತು ಸೂಚನೆ ನೀಡಿದ್ದಾರೆ. ಚಳಿಗಾಲದ ಮಳೆಯಲ್ಲಿ ನೆನೆಯುವುದರಿಂದ ನೆಗಡಿ, ಕೆಮ್ಮು, ಗಂಟಲು ನೋವು ಆರೋಗ್ಯದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವ ಲಕ್ಷಣಗಳಿದ್ದು, ಮಕ್ಕಳು ಮತ್ತು ವೃದ್ಧರು ಅದಷ್ಟು ಬೆಚ್ಚಗಿನ ವಾತಾವರಣದಲ್ಲಿ ಇರುವಂತೆ ನೋಡಿಕೊಳ್ಳಿ ಎಂದಿದ್ದಾರೆ.

    ತುಂತುರು ಮಳೆಯ ಹವಾಮಾನ ಯುವ ಜನತೆಗೆ ಉಲ್ಲಾಸ ತಂದಿದೆ. ನಗರದಲ್ಲಿ ಇನ್ನು ಎರಡು ದಿನಗಳ ಕಾಲ ಹೀಗೆ ತುಂತುರು ಮಳೆ ಮತ್ತು ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲಸ ತೆರಳುವವರು ತುಂತುರು ಮಳೆಯಿಂದ ಸ್ವಲ್ಪ ಎಚ್ಚರ ವಹಿಸಿ ಕುಲ್ ಕುಲ್ ವಾತಾವರಣ ಎಂಜಾಯ್ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸೆಕ್ಸ್​ಗೆ ಕರೆದವನ ಮರ್ಮಾಂಗವನ್ನ ಕಚ್ಚಿದ್ಳು

    ಸೆಕ್ಸ್​ಗೆ ಕರೆದವನ ಮರ್ಮಾಂಗವನ್ನ ಕಚ್ಚಿದ್ಳು

    – ಮಹಿಳೆಯ ರೌದ್ರಾವತಾರ ನೋಡಿ ಎದ್ನೊ ಬಿದ್ನೊ ಅಂತಾ ಯುವಕ ಎಸ್ಕೇಪ್

    ನ್ಯೂಯಾರ್ಕ್: ಯುವಕನೋರ್ವ ಓರಲ್ ಸೆಕ್ಸ್ ಗೆ ಬಲವಂತಪಡಿಸಿದ್ದಕ್ಕೆ ರೊಚ್ಚಿಗೆದ್ದ ಆಂಟಿ ಆತನ ಮರ್ಮಾಂಗವನ್ನು ಕಚ್ಚಿದ್ದಾಳೆ. ಮಹಿಳೆಯ ರೌದ್ರಾವತಾರ ನೋಡಿದ ಯುವಕ ಎದ್ನೊ ಬಿದ್ನೊ ಅಂತಾ ಶರ್ಟ್ ಕೈಯಲ್ಲಿ ಹಿಡಿದುಕೊಂಡು ಓಡಿ ಹೋಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    21 ವರ್ಷದ ನಿಕೋಲಸದ ಸ್ಯಾಮರೋ ಮಹಿಳೆಯಿಂದ ಹಲ್ಲೆಗೊಳಗಾದ ಯುವಕ. ನವೆಂಬರ್ 8ರಂದು ನಿಕೋಲಸ್, 39 ವರ್ಷದ ಮಹಿಳೆಯೊಂದಿಗೆ ಬಾರ್ ನಲ್ಲಿ ಮದ್ಯ ಸೇವನೆ ಮಾಡಿದ್ದಾನೆ. ಮದ್ಯಪಾನ ಮಾಡಿದ ಇಬ್ಬರು ಮಹಿಳೆ ವಾಸವಾಗಿದ್ದ 101ನೇ ಅವೆನ್ಯೂ, ರಿಚ್‍ಮಂಡ್‍ಹಿಲ್ ಅಪಾರ್ಟ್ ಮೆಂಟ್ ಗೆ ಬಂದಿದ್ದಾರೆ.

    ಈ ಮೊದಲು ಮನೆಯಲ್ಲಿದ್ದ ಮಹಿಳೆಯ ಫ್ರೆಂಡ್ ಹೊರಗೆ ಹೋಗಿದ್ದಾನೆ. ಫ್ರೆಂಡ್ ಹೊರಹೋದ ನಂತರ ಬಾಗಿಲು ಹಾಕಿಕೊಂಡ ನಿಕೋಲಸ್ ಮಹಿಳೆಗೆ ಓರಲ್ ಸೆಕ್ಸ್ ಮಾಡುವಂತೆ ಒತ್ತಾಯಿಸಿ ಪ್ಯಾಂಟ್ ಬಿಚ್ಚಿದ್ದಾನೆ. ಈ ವೇಳೆ ನಶೆಯಲ್ಲಿದ್ದ ಮಹಿಳೆ ಕೋಪದಿಂದ ಆತನ ಮರ್ಮಾಂಗವನ್ನೇ ಕಚ್ಚಿದ್ದಾಳೆ.

    ಇದರಿಂದ ಕೋಪಗೊಂಡ ಯುವಕ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಮಹಿಳೆಗೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಈ ವೇಳೆ ಚಪ್ಪಲಿಯನ್ನು ಧರಿಸದೇ ಯುವಕ ಶರ್ಟ್ ಕೈಯಲ್ಲಿ ಹಿಡಿದುಕೊಂಡು ಪರಾರಿಯಾಗಿದ್ದಾನೆ. ಮರುದಿನ ಬೆಳಗ್ಗೆ ಮಹಿಳೆಗೆ ಜ್ಞಾನ ಬಂದಿದ್ದು, ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಯುವಕನ ಪತ್ತೆಗೆ ವಿಶೇಷ ಜಾಲ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv