Tag: youth

  • ವ್ಯಕ್ತಿಯ ವಿಚಿತ್ರ ದೂರಿಗೆ ತಬ್ಬಿಬ್ಬಾದ ಪೊಲೀಸ್ ಅಧಿಕಾರಿ..!

    ವ್ಯಕ್ತಿಯ ವಿಚಿತ್ರ ದೂರಿಗೆ ತಬ್ಬಿಬ್ಬಾದ ಪೊಲೀಸ್ ಅಧಿಕಾರಿ..!

    ನಾಗಪುರ: ಹಣ ಕಳುವಾಗಿದೆ, ವಾಹನ ಹಾಗೂ ಚಿನ್ನಾಭರಣ ಕದ್ದಿದ್ದಾರೆ ಅಂತ ಜನರು ಪೊಲೀಸ್ ಮೋರೆ ಹೋಗ್ತಾರೆ. ಆದ್ರೆ ಮಹಾರಾಷ್ಟ್ರದಲ್ಲಿ ಯುವಕನೊಬ್ಬ ತನ್ನ ಹೃದಯ ಕಳ್ಳತನವಾಗಿದೆ ಹುಡುಕಿಕೊಡಿ ಅಂತ ಪೊಲೀಸರಿಗೆ ದೂರು ನೀಡಿರುವ ವಿಚಿತ್ರ ಘಟನೆ ನಡೆದಿದೆ.

    ಹೌದು, ಮಹಾರಾಷ್ಟ್ರದ ನಾಗಪುರ ಪೊಲೀಸ್ ಠಾಣೆಗೆ ಇತ್ತೀಚೆಗೆ ಯುವಕನೊಬ್ಬ ತನ್ನ ಹೃದಯವನ್ನು ಹುಡುಗಿಯೊಬ್ಬಳು ಕದ್ದಿದ್ದಾಳೆ. ಅದನ್ನ ಹುಡುಕಿಕೊಡಿ ಅಂತ ದೂರು ನೀಡಿದ್ದಾನೆ. ಪ್ರೇಮಿಗಳು ತಮ್ಮ ಹೃದಯವು ಪ್ರೀತಿಯ ಬಲೆಗೆ ಸಿಕ್ಕಿ ಕಳೆದೋಗಿದೆ ಅಂತ ಡೈಲಾಗ್ ಹೇಳ್ತಿರ್ತಾರೆ. ಆದ್ರೆ ಯುವಕನೊಬ್ಬ ಅದನ್ನೇ ಗಂಭೀರವಾಗಿ ಪರಿಗಣಿಸಿ ನನ್ನ ಹೃದಯ ಹುಡುಗಿಯೊಬ್ಬಳು ಕದ್ದಿದ್ದಾಳೆ. ಅವಳನ್ನು ಹುಡುಕಿ ಕೊಡುವ ಮೂಲಕ ತನ್ನ ಹೃದಯ ವಾಪಸ್ ತನಗೆ ಕೊಡಿಸಿ ಅಂತ ಪೊಲೀಸರಿಗೆ ದೂರು ನೀಡಿದ್ದಾನೆ.

    ಇದೆಂಥಾ ದೂರಪ್ಪಾ ಅಂತ ಪೊಲೀಸರು ಕೊಂಚ ಕಾಲ ಕಂಗಲಾಗಿದ್ದಂತೂ ಸತ್ಯ. ಈ ವಿಚಿತ್ರ ಪ್ರಕರಣವನ್ನು ಹೇಗೆ ಪರಿಹರಿಸೋದು ಎಂದು ತಿಳಿಯದೆ ಹಿರಿಯ ಅಧಿಕಾರಿಗಳ ಸಲಹೆ ಪಡೆದಿದ್ದೆವು ಅಂತ ನಾಗಪುರ ಪೊಲೀಸರು ತಿಳಿಸಿದ್ದಾರೆ.

    ಬಳಿಕ ಉನ್ನತ ಅಧಿಕಾರಿ ಹತ್ತಿರ ಯುವಕನನ್ನು ಕಳುಹಿಸಿ ಮಾತನಾಡಿಸಿದ್ದೆವು. ಆಗ ಅಧಿಕಾರಿ ಭಾರತದ ಕಾನೂನಿನಲ್ಲಿ ಈ ರೀತಿಯ ದೂರುಗಳಿಗೆ ಯಾವುದೇ ಸೆಕ್ಷನ್ ಇಲ್ಲ. ಆದ್ದರಿಂದ ನಿಮ್ಮ ದೂರನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿ ಹೇಳಿದ್ದಾರೆ. ಕೊನೆಗೆ ಈ ದೂರಿಗೆ ಯಾವುದೇ ಪರಿಹಾರವಿಲ್ಲ ಎಂದು ತಿಳಿದ ನಂತರ ಆತ ವಾಪಸ್ ಹೋದನು ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ನಾಗಪುರ ಪೊಲೀಸ್ ಕಮಿಷನರ್ ಭೂಷಣ್ ಕುಮಾರ್ ಉಪಾಧ್ಯಾಯ ಈ ವಿಚಿತ್ರ ಘಟನೆಯನ್ನು ಹಂಚಿಕೊಂಡರು.

    ಈ ಕಾರ್ಯಕ್ರಮದಲ್ಲಿ ಪೊಲೀಸರು ಕಳವು ಪ್ರಕರಣಗಳನ್ನು ಭೇದಿಸಿ, ಸುಮಾರು 82 ಲಕ್ಷ ಮೌಲ್ಯದ ಕಳ್ಳತನವಾಗಿದ್ದ ವಸ್ತುಗಳನ್ನ ಮಾಲೀಕರಿಗೆ ಹಿಂದಿರುಗಿಸಿದರು. ಆಗ ಮಾಧ್ಯಮಗಳ ಜೊತೆ ಮಾತನಾಡಿದ ಅಧಿಕಾರಿ, ನಾವು ಕಳೆದುಹೋದ ವಸ್ತುಗಳನ್ನ ಹುಡುಕಿಕೊಡಬಹುದು. ಆದ್ರೆ ಕೆಲವೊಮ್ಮೆ ಇಂಥಹ ವಿಚಿತ್ರ ದೂರುಗಳು ಬಂದ್ರೆ ನಾವೇನೂ ಮಾಡೋಕೆ ಆಗಲ್ಲ ಎಂದು ಹಾಸ್ಯ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫೇಸ್‍ಬುಕ್ ಗೆಳತಿ ಜೊತೆಗಿನ ಮೊದಲ ಭೇಟಿಯಲ್ಲೇ ಓಡಿ ಹೋದ ಯುವಕ!

    ಫೇಸ್‍ಬುಕ್ ಗೆಳತಿ ಜೊತೆಗಿನ ಮೊದಲ ಭೇಟಿಯಲ್ಲೇ ಓಡಿ ಹೋದ ಯುವಕ!

    ಪಾಟ್ನಾ: ಯುವಕನೊಬ್ಬ ತನ್ನ ಫೇಸ್‍ಬುಕ್ ಗೆಳತಿಯನ್ನು ಮೊದಲ ಬಾರಿ ಭೇಟಿಯಾಗಲು ಹೋದಾಗ ಆಕೆಯನ್ನು ನೋಡಿ ಪಾರ್ಕ್ ನಿಂದಲೇ ಓಡಿ ಹೋದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ಯುವಕನೊಬ್ಬ ಫೇಸ್‍ಬುಕ್‍ನಲ್ಲಿ ಸುಂದರವಾದ ಯುವತಿಯ ಖಾತೆಯನ್ನು ನೋಡಿ ಆಕೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಯುವತಿ ಕೂಡ ಆ ಯುವಕನ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದಾಳೆ. ನಂತರ ಯುವಕ ಯುವತಿಗೆ ಮೆಸೇಜ್ ಮಾಡಲು ಆರಂಭಿಸಿ ಹತ್ತಿರವಾಗಿದ್ದಾನೆ. ಯುವತಿ ಕೂಡ ಆತನ ಮೆಸೇಜ್‍ಗೆ ಪ್ರತಿಕ್ರಿಯಿಸುತ್ತಿದ್ದಳು. ಹೀಗೆ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ.

    ಮದುವೆ ಆಗುವ ಮೊದಲು ನಾವಿಬ್ಬರು ಭೇಟಿ ಆಗೋಣ ಎಂದು ಯುವಕ ಯುವತಿ ಬಳಿ ಕೋರಿಕೆ ಇಟ್ಟಿದ್ದಾನೆ. ಯುವತಿ ಈ ಕೋರಿಕೆಯನ್ನು ಸ್ವೀಕರಿಸಿ ಭೇಟಿಗೆ ಒಪ್ಪಿಕೊಂಡಿದ್ದಾಳೆ. ಹೊಸ ವರ್ಷದಂದು ಇಬ್ಬರು ಪಾರ್ಕ್ ವೊಂದರಲ್ಲಿ ಭೇಟಿ ಆಗಲು ನಿರ್ಧರಿಸಿದ್ದಾರೆ. ಭೇಟಿಯಾದ ಬಳಿಕ ತಮ್ಮ ಮುಂದಿನ ಜೀವನದ ಬಗ್ಗೆ ಚರ್ಚೆ ನಡೆಸೋಣ ಎಂದು ಇಬ್ಬರು ಮಾತನಾಡಿಕೊಂಡಿದ್ದರು.

    ತನ್ನ ಫೇಸ್‍ಬುಕ್ ಗೆಳತಿಯನ್ನು ಭೇಟಿ ಮಾಡಲು ಯುವಕ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ಹೂಗುಚ್ಚವನ್ನು ತೆಗೆದುಕೊಂಡು ಪಾರ್ಕಿಗೆ ಬಂದಿದ್ದ. ಯುವತಿ ಪಾರ್ಕಿಗೆ ಬಂದ ಬಳಿಕ ಆಕೆಯನ್ನು ನೋಡಿ ಯುವಕ ಒಂದು ಕ್ಷಣ ದಂಗಾಗಿದ್ದಾನೆ. ಫೇಸ್‍ಬುಕ್ ನಲ್ಲಿದ್ದ ಯುವತಿ ಬೇರೆ ಹಾಗೂ ಎದುರಿಗೆ ಇದ್ದ ಯುವತಿ ಬೇರೆ ಎಂದು ತಿಳಿದ ಯುವಕ ಪಾರ್ಕಿನಿಂದಲೇ ಓಡಿ ಹೋಗಿದ್ದಾನೆ.

    ಯುವಕನಿಂದ ಮೋಸ ಹೋಗಿದ್ದೇನೆ ಎಂದು ಯುವತಿ ಜನವರಿ 2ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆಗ ಪೊಲೀಸರು ಯುವಕನನ್ನು ಠಾಣೆಗೆ ಕರೆಸಿ ಮಾತನಾಡಿಸಿದ್ದಾರೆ. ಆಗ ಯುವಕ “ಈ ಯುವತಿ ಫೇಸ್‍ಬುಕ್‍ನಲ್ಲಿ ಬೇರೆ ಫೋಟೋ ಹಾಕಿ ನನಗೆ ಮೋಸ ಮಾಡಿದಲ್ಲದೇ ನನ್ನ ಬಳಿ ಸುಳ್ಳು ಹೇಳಿದ್ದಾಳೆ. ನಾನು ಶ್ರೀಮಂತೆ ಎಂದು ಆಕೆ ನನ್ನ ಬಳಿ ಹೇಳಿದ್ದಳು. ಆದರೆ ಆಕೆ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಾಳೆ” ಎಂದು ತಿಳಿಸಿದ್ದಾನೆ.

    ಯುವಕನ ಮಾತು ಕೇಳಿ ಯುವತಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದಾಳೆ. ಅಲ್ಲದೇ ಇಬ್ಬರು ಪೊಲೀಸ್ ಠಾಣೆಯಲ್ಲೇ ಆರೋಪ, ಪ್ರತ್ಯಾರೋಪ ಮಾಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆಯನ್ನು ನಿಲ್ಲಿಸಿ, ಇಬ್ಬರಿಗೂ ಬುದ್ಧಿ ಹೇಳಿ ಅವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
  • ನೂತನ ಸಚಿವ ತುಕಾರಾಂ ದುರ್ವರ್ತನೆ

    ನೂತನ ಸಚಿವ ತುಕಾರಾಂ ದುರ್ವರ್ತನೆ

    ಬಳ್ಳಾರಿ: ನೂತನ ಸಚಿವರಾಗಿ ಸಂಪುಟ ಸೇರಿರುವ ಕಾಂಗ್ರೆಸ್ ಶಾಸಕ ತುಕಾರಾಂ ಅವರು ಇಂದು ಸಾರ್ವಜನಿಕವಾಗಿ ಸಂಬಂಧಿ ಯುವಕನಿಂದ ಶೂ ಹಾಕಿಸಿಕೊಳ್ಳುವ ಮೂಲಕ ಅಧಿಕಾರದ ದರ್ಪ ತೋರಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

    ಬಳ್ಳಾರಿಯ ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ದೇವರ ದರ್ಶನ ಪಡೆದರು. ಬಳಿಕ ದೇವಾಲಯದಿಂದ ಹಿಂದಿರುಗುವ ವೇಳೆ ಕಾರಿನ ಹಿಂಭಾಗದ ಡಿಕ್ಕಿಯಲ್ಲಿದ್ದ ಸಚಿವರ ಶೂವನ್ನು ಸಂಬಂಧಿ ಹುಡುಗ ಕೈಯಲ್ಲೇ ತಂದು ಕಾರಿನ ಮುಂಭಾಗದ ಸೀಟಿನಲ್ಲಿ ಕೂತಿದ್ದ ತುಕಾರಾಂ ಬಳಿ ತೆರಳಿ ಕಾಲಿನ ಮುಂದೆ ಇರಿಸಿದರು.

    ಶಾಸಕರಾಗಿದ್ದ ವೇಳೆ ತಮ್ಮ ಸರಳ ಸಜ್ಜನಿಕೆಯಿಂದಲೇ ತುಕಾರಾಂ ಅವರು ಹೆಸರು ಪಡೆದಿದ್ದರು. ಆದರೆ ಸಚಿವ ಸ್ಥಾನ ಸ್ವೀಕರಸಿದ ಬಳಿಕ ಈ ರೀತಿಯ ವರ್ತನೆಯನ್ನು ಸಾರ್ವಜನಿಕವಾಗಿ ತೋರಿದ್ದು, ಅಧಿಕಾರ ಬಂದ ಕೂಡಲೇ ಬದಲಾಗುತ್ತಾರೆ ಎಂದ ಮಾತಿಗೆ ಸಾಕ್ಷಿಯಾಗಿ ಕಂಡಿತು.

    ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ವ್ಯಕ್ತಿಯಾದ ನನಗೆ ಹೈಕಮಾಂಡ್ ನನ್ನ ಕಾರ್ಯಗಳನ್ನು ಮೆಚ್ಚಿ ಸಚಿವ ಸ್ಥಾನ ನೀಡಿದೆ. ವೈದ್ಯಕೀಯ ಶಿಕ್ಷಣ ಸಚಿವರಾಗಿ ನನಗೆ ಅವಕಾಶ ನೀಡಿದ್ದು, ಯುವ ಜನಾಂಗ ಹಾಗೂ ಬಡ ಜನರ ಸೇವೆ ಮಾಡಲು ಅವಕಾಶ ಲಭಿಸಿದೆ. 3 ಬಾರಿ ಶಾಸಕನಾಗಿ ನಾನು ಮಾಡಿದ ಕಾರ್ಯಗಳೇ ಸಚಿವ ಸ್ಥಾನ ನೀಡಲು ಕಾರಣ. ನಗರಕ್ಕೆ ಬಂದಾಗ ದೇವಾಲಯಕ್ಕೆ ಭೇಟಿ ನೀಡುವುದು ನನ್ನ ನಂಬಿಕೆ, ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದ್ರು.

    ಚುನಾವಣಾ ನೀತಿ ಸಂಹಿತೆ ಬಂದ ಕಾರಣ ಹಂಪಿ ಉತ್ಸವ ಆಚರಣೆ ಮಾಡಿಲ್ಲ. ಆದರೆ ಈಗ ಚರ್ಚೆ ನಡೆಸಿ ಉತ್ಸವ ನಡೆಸುವ ಚಿಂತನೆ ಇದೆ. ಜಿಲ್ಲೆಯ ಜನರ ಭಾವನೆಗೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಂಹಗಳನ್ನೇ ಬೆನ್ನಟ್ಟಿದ ಮೂವರು ಯುವಕರು..!

    ಸಿಂಹಗಳನ್ನೇ ಬೆನ್ನಟ್ಟಿದ ಮೂವರು ಯುವಕರು..!

    ಗಾಂಧಿನಗರ: ಮೂವರು ಯುವಕರು ಸಿಂಹಗಳನ್ನು ಬೆದರಿಸಿ ಅವುಗಳನ್ನು ಬೆನ್ನಟ್ಟಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ವಿಡಿಯೋವನ್ನು ಅಮ್ರೆಲಿ ಜಿಲ್ಲೆಯ ಲಿಲ್ಯಾ ತಾಲೂಕಿನ ಪ್ರದೇಶವೊಂದರಲ್ಲಿ ಸೆರೆ ಹಿಡಿಯಲಾಗಿದೆ ಅಂತ ಅರಣ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

    ವಿಡಿಯೋದಲ್ಲೇನಿದೆ..?
    ಇಬ್ಬರು ಬೈಕ್ ನಲ್ಲಿ ಕುಳಿತಿದ್ದು, ಹಿಂಬದಿ ಸವಾರ ಮೊಬೈಲ್ ಕ್ಯಾಮೆರಾ ಆನ್ ಮಾಡಿಟ್ಟುಕೊಂಡಿದ್ದಾನೆ. ಮತ್ತೊಬ್ಬ ಬೈಕ್ ನಲ್ಲಿ ಕುಳಿತಿರೋ ತನ್ನ ಸ್ನೇಹಿತರ ಜೊತೆಯೇ ತಾನೂ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಓಡುತ್ತಿದ್ದಾನೆ. ಈ ಮೂವರು ಸುಮಾರು 5 ಸಿಂಹಗಳನ್ನು ಬೆದರಿಸಿ ಮಣ್ಣಿನ ರೋಡ್ ನಲ್ಲಿ ಬೆನ್ನಟ್ಟಿದ್ದಾರೆ.

    ಸಿಂಹಗಳು ಓಡುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಇದರ ಹಿಂದೆಯೇ ಈ ಮೂವರು ಅವುಗಳು ಓಡುತ್ತಿರುವ ದೃಶ್ಯವನ್ನು ಸೆರೆಹಿಡಿಯುತ್ತಿರುವುದು ಕಂಡುಬರುತ್ತದೆ. ಆದ್ರೆ ಈ ಮೂವರ ವಿಡಿಯೋ ಮಾಡಿರುವುದು ಯಾರು ಅಂತ ತಿಳಿದುಬಂದಿಲ್ಲ.

    “ವೈರಲ್ ಆಗಿರೋ ವಿಡಿಯೋ ಬಗ್ಗೆ ನಮಗೆ ಸೋಮವಾರ ಸಂಜೆ ಮಾಹಿತಿ ಬಂದಿದೆ. ಈ ಕುರಿತು ತನಿಖೆ ನಡೆಸಿ ಮೂವರನ್ನು ಗುರುತಿಸಿ, ಶೀಘ್ರವೇ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಆರ್ ಟಿಓ ಮೂಲಕ ಬೈಕ್ ನಂಬರನ್ನು ಕಲೆ ಹಾಕಿದ್ದು, ಕೂಡಲೇ ಯುವಕರನ್ನು ಟ್ರ್ಯಾಕ್ ಮಾಡುತ್ತೇವೆ” ಅಂತ ಘಟನೆಯ ಕುರಿತು ಅರಣ್ಯಾಧಿಕಾರಿ ಎ ಸಿ ಪಟೇಲ್ ತಿಳಿಸಿದ್ದಾರೆ.

    ಕೆಲ ತಿಂಗಳ ಹಿಂದೆ ಸಿಂಹಗಳನ್ನು ಓಡಿಸಿ ಹೀರೋ ಆಗಲು ಹೊರಟಿದ್ದ ಮೂವರನ್ನು ಬಂಧಿಸಲಾಗಿತ್ತು. ಗಿರ್ ಅಭಯಾರಣ್ಯದಲ್ಲಿ ಬೈಕ್ ನಲ್ಲಿ ಸಿಂಹಗಳನ್ನು ಬೆದರಿಸಿ ಬೆನ್ನಟ್ಟಿದ್ದ ಅವಿವೇಕಿ ಯುವಕರ ಪೈಕಿ ಮೂವರನ್ನು ರಾಜ್ ಕೋಟ್ ನಲ್ಲಿ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಅಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಮದಿದೆ.

    ಅಮ್ರೇಲಿ ಜಿಲ್ಲೆ ಒಂದರಲ್ಲೇ ಸರಿ ಸುಮಾರು 100 ಸಿಂಹಗಳಿವೆ ಎಂಬುದಾಗಿ ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ ಮಾಡದ್ದಕ್ಕೆ ಗರ್ಭಿಣಿ ಪತ್ನಿ ಎದುರೇ ಪತಿಗೆ ಚಾಕು ಇರಿತ

    ವಿಶ್ ಮಾಡದ್ದಕ್ಕೆ ಗರ್ಭಿಣಿ ಪತ್ನಿ ಎದುರೇ ಪತಿಗೆ ಚಾಕು ಇರಿತ

    ಬೆಂಗಳೂರು: ಹೊಸ ವರ್ಷಕ್ಕೆ ಶುಭಾಶಯ ಹೇಳದಕ್ಕೆ ಗರ್ಭಿಣಿ ಪತ್ನಿ ಎದುರೇ ಪತಿಗೆ ಚಾಕು ಇರಿದ ಘಟನೆ ತಡರಾತ್ರಿ 12 ಗಂಟೆಗೆ ಬೆಂಗಳೂರಿನ ಕುರುಬರಹಳ್ಳಿಯ ಕಮಲಾನಗರದ ಶೆಟ್ಟಿ ಗಣಪತಿ ವಾರ್ಡ್ ನಲ್ಲಿ ನಡೆದಿದೆ.

    ಪ್ರವೀಣ್ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಮಧ್ಯರಾತ್ರಿ ಕಿಡಿಗೇಡಿಗಳು ಕುಡಿದು ಬೈಕಿನಲ್ಲಿ ಚಾಕು ಹಿಡಿದುಕೊಂಡು ತೂರಾಡಿಕೊಂಡು ಬಂದಿದ್ದಾರೆ. ಈ ವೇಳೆ ಅಡ್ಡ ಬಂದಿದ್ದ ಪ್ರವೀಣ್‍ಗೆ ನ್ಯೂ ಇಯರ್ ವಿಶ್ ಮಾಡಿದ್ದಾರೆ. ಬಳಿಕ ನಮಗೆ ವಿಶ್ ಮಾಡು ಎಂದು ಅವಾಜ್ ಹಾಕಿದ್ದಾರೆ.

    ಚಾಕು ಕಂಡು ಗಾಬರಿಯಾದ ಪ್ರವೀಣ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ನಮಗೆ ವಿಶ್ ಮಾಡುವುದಿಲ್ಲವಾ ನೀನು ಎಂದು ಅಡ್ಡಹಾಕಿ ಕೈ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಪ್ರವೀಣ್‍ಗೆ ಚಾಕುವಿನಿಂದ ಇರಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಗಾಯಗೊಂಡ ಪ್ರವೀಣ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಕಿಪೊಟ್ಟಣ ಕದ್ದ ಆರೋಪ- ಯುವಕ ನೇಣಿಗೆ ಶರಣು

    ಬೆಂಕಿಪೊಟ್ಟಣ ಕದ್ದ ಆರೋಪ- ಯುವಕ ನೇಣಿಗೆ ಶರಣು

    ಕೊಪ್ಪಳ: ಬೆಂಕಿ ಪೊಟ್ಟಣ ಕಳ್ಳತನ ಮಾಡಿದ್ದಾನೆ ಎಂಬ ಆರೋಪ ಹೊರಿಸಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೊಪ್ಪಳ ತಾಲೂಕಿನ ಜಿನ್ನಾಪುರ ತಾಂಡಾದಲ್ಲಿ ಈ ಘಟನೆ ನಡೆದಿದ್ದು, 20 ವರ್ಷದ ರಾಜೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಡಿಸೆಂಬರ್ 17 ರಂದು ಈ ಘಟನೆ ನಡೆದಿದೆ.

    ಡಿ.17 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಹೊಲಕ್ಕೆ ನೀರು ಕಟ್ಟಲು ಹೋಗುವಾಗ ಬೆಂಕಿಪೊಟ್ಟಣ ಇಲ್ಲ ಎಂದು ರಾಜೇಶ್, ಪಕ್ಕದಲ್ಲೆ ಇರುವ ಬುಡ್ಡಪ್ಪ ಎಂಬವರ ಹೋಟೆಲ್ ಗೆ ಬಂದು ಅಲ್ಲೆ ಇದ್ದ ಬೆಂಕಿ ಪೊಟ್ಟಣ ತೆಗೆದುಕೊಂಡು ಹೋಗುತ್ತಿದ್ದನು. ಈ ವೇಳೆ ಹೋಟೆಲ್ ಮಾಲೀಕರಾದ ಬುಡ್ಡಪ್ಪ, ಶೇಖರಪ್ಪ, ಶಾಂತಮ್ಮ, ಲಕ್ಷ್ಮಿ ಎಂಬವರು ರಾಜೇಶನನ್ನು ಹಿಡಿದು, ಬೆಂಕಿಪೊಟ್ಟಣ ಕಳವು ಮಾಡುತ್ತೀಯಾ ಎಂದು ಥಳಿಸಿದ್ದಾರೆ.

    ವಿಷಯ ತಿಳಿದ ರಾಜೇಶನ ತಂದೆ ಆ ಮೇಲೆ ಮಾತಾಡೋಣ ಎಂದು ಸಮಾಧಾನ ಮಾಡಿ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಇದರಿಂದ ಮನನೊಂದ ರಾಜೇಶ್ ಕೆಲ ಹೊತ್ತಿನಲ್ಲೇ ತಮ್ಮ ಹೊಲಕ್ಕೆ ಹೋಗಿ ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕೇವಲ ಬೆಂಕಿಪೊಟ್ಟಣ ಕಳ್ಳತನ ಆರೋಪ ಹೊರಿಸಿ ನನ್ನ ಮಗನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆಂದು ರಾಜೇಶ್ ತಂದೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಕಳ್ಳತನ ಆರೋಪ ಹೊರಿಸಿದ್ದ ಬುಡ್ಡಪ್ಪ, ಶೇಖರಪ್ಪ, ಲಕ್ಷ್ಮಿ, ಶಾಂತಮ್ಮ ಎಂಬರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಬ್ಬರ ಜೊತೆ ಸೇರಿ ಸೇರಿ 27ರ ಯುವಕನ ಮರ್ಮಾಂಗವನ್ನೇ ಕತ್ತರಿಸಿದ್ಳು ಆಂಟಿ..!

    ಇಬ್ಬರ ಜೊತೆ ಸೇರಿ ಸೇರಿ 27ರ ಯುವಕನ ಮರ್ಮಾಂಗವನ್ನೇ ಕತ್ತರಿಸಿದ್ಳು ಆಂಟಿ..!

    ಮುಂಬೈ: ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದಬೇಕೆಂದು ಪೀಡಿಸುತ್ತಿದ್ದ 27 ವರ್ಷದ ಯುವಕನೊಬ್ಬನ ಮರ್ಮಾಂಗವನ್ನೇ 42 ವರ್ಷದ ಆಂಟಿ ಕತ್ತರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

    ಈ ಘಟನೆ ಮುಂಬೈ ಸಮೀಪದ ದೊಂಬಿವಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಇಬ್ಬರು ಸಹಚರರನ್ನು ಮನ್ಪದಾ ಪೊಲೀಸರು ಬಂಧಿಸಿದ್ದಾರೆ. ಇನ್ನು ಗಾಯಾಳುವನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂಬುದಾಗಿ ವರದಿಯಾಗಿದೆ.

    ಘಟನೆ ವಿವರ:
    ದೊಂಬಿವಲಿಯ ನಂದಗಾವ್ ನಿವಾಸಿ ತುಷಾರ್ ಪೂಜಾರೆ(27) ಎಂಬಾತ 42 ವರ್ಷದ ಮಹಿಳೆಗೆ ಕಿರುಕುಳ ನೀಡುತ್ತಿದ್ದನು. ತನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಬೇಕು ಎಂದು ಯುವಕನ ಹಠ ಹಿಡಿದಿದ್ದಾನೆ. ಆದ್ರೆ ಮಹಿಳೆ ಇದಕ್ಕೆ ನಿರಾಕರಿಸಿದ್ದಾಳೆ.  ಇಷ್ಟಾದ್ರೂ ಬಿಡದ ಯುವಕ ಆಕೆಯ ಜೊತೆ ಮತ್ತಷ್ಟೂ ಕ್ಲೋಸ್ ಆಗಲು ಪ್ರಯತ್ನಿಸಿದ್ದಾನೆ.

    ಹೀಗೆ ಒಂದು ದಿನ ಯುವಕ ನೇರವಾಗಿ ಮಹಿಳೆಯ ಮನೆಗೆ ಬಂದಿದ್ದಾನೆ. ಅಲ್ಲದೇ ತಾನು ಮಹಿಳೆಯನ್ನು ಮದುವೆಯಾಗುವುದಾಗಿ ಆಕೆಯ ಪತಿ ಜೊತೆ ಹೇಳಿದ್ದಾನೆ. ಹೀಗಾಗಿ ಮಹಿಳೆ ಮತ್ತು ಆಕೆಯ ಪತಿ ಮಧ್ಯೆ ದೊಡ್ಡ ಜಗಳವೇ ನಡೆದು ಹೋಯಿತು. ಇದರಿಂದ ಬೇಸತ್ತ ಆಂಟಿ ಯುವಕನಿಗೆ ಪಾಠ ಕಲಿಸಬೇಕೆಂದು ಒಂದು ಉಪಾಯ ಹೂಡಿದಳು. ತನ್ನ ಈ ಪ್ಲಾನ್ ಗೆ ಇಬ್ಬರು ಯುವಕರ ಸಹಾಯನೂ ಪಡೆದುಕೊಂಡಳು.

    ಮಹಿಳೆ ತನ್ನ ಬೆನ್ನ ಹಿಂದೆ ಬೀಳದಂತೆ ಸಾಕಷ್ಟು ಬಾರಿ ತುಷಾರ್ ಗೆ ಎಚ್ಚರಿಕೆ ನೀಡಿದ್ದಳು. ಆದ್ರೆ ತುಷಾರ್ ಮಾತ್ರ ಮಹಿಳೆಯ ಮಾತನ್ನು ಕೇಳುವ ಗೋಜಿಗೆ ಹೋಗಿಲ್ಲ. ಅಲ್ಲದೇ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸುವ ಮೂಲಕ ಮಹಿಳೆಯನ್ನು ತನ್ನತ್ತ ಸೆಳೆಯುವ ಹಲವಾರು ವ್ಯರ್ಥ ಪ್ರಯತ್ನಗಳನ್ನು ಮಾಡಿದ್ದನು ಅಂತ ಪೊಲೀಸ್ ಅಧಿಕಾರಿ ಗಿರೀಶ್ ತಿಳಿಸಿದ್ದಾರೆ.

    ಇದೇ ತಿಂಗಳ 25ರಂದು ಸಂಜೆ 7 ಗಂಟೆ ಸುಮಾರಿಗೆ ನನ್ನ ಸಹೋದರನಿಗೆ ತೇಜಸ್ ಮರಾಠೆ ಎಂಬಾತನಿಂದ ಕರೆ ಬಂದಿತ್ತು. ಈ ವೇಳೆ ಲೋನ್ ವಿಚಾರವಾಗಿ ಸ್ವಲ್ಪ ಮಾತನಾಡಲು ಇದೆ. ಹೀಗಾಗಿ ತನ್ನನ್ನು ಭೇಟಿಯಾಗುವಂತೆ ತೇಜಸ್ ಹೇಳಿದ್ದಾನೆ. ಅಂತೆಯೇ ಆತನನ್ನು ಭೇಟಿಯಾಗಲು ತುಷಾರ್ ಹೋಗಿದ್ದನು. ರಾತ್ರಿ ಸುಮಾರು 9.40ರ ವೇಳೆಗೆ ಮತ್ತೊಂದು ಕರೆ ಬಂದಿದೆ. ಈ ಕರೆಯನ್ನು ಪತ್ನಿ ಸ್ವಪ್ನಾಲಿ ಸ್ವೀಕರಿಸಿದ್ದಾರೆ. ತುಷಾರ್ ನಂಬರಿನಿಂದಲೇ ಬಂದ ಕರೆ ಸ್ವೀಕರಿಸಿದಾಗ, ಆ ಕಡೆಯಿಂದ ತುಷಾರ್ ಗೆ ಗಂಭೀರ ಗಾಯಗಳಾಗಿವೆ. ಸದ್ಯ ಆತನನ್ನು ಸ್ಥಳೀಯ ಲೈಫ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ತಿಳಿಸಲಾಗಿತ್ತು ಅಂತ ತುಷಾರ್ ಸಹೋದರ ಸ್ವಪ್ನಿಲ್ ಪೂಜಾರೆ ತಿಳಿಸಿದ್ದಾರೆ.

    ಕರೆ ಕಟ್ ಆದ ತಕ್ಷಣವೇ ಸ್ವಪ್ನಿಲ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆದ್ರೆ ಅಲ್ಲಿ ತುಷಾರ್ ನನ್ನು ಕಂಡು ಆಘಾತಕ್ಕೀಡಾದ್ರು. ಯಾಕಂದ್ರೆ ತುಷಾರ್‍ಗೆ ಯಾರೋ ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೇ ಆತನ ಮರ್ಮಾಂಗವನ್ನೂ ಕತ್ತರಿಸಲಾಗಿತ್ತು. ಘಟನೆಯಿಂದ ಗಂಭೀರ ಸ್ಥೀತಿಯಲ್ಲಿದ್ದ ತುಷಾರ್‍ನನ್ನು ಆತನ ಕುಟುಂಬ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ದೂರು ಸ್ವೀಕರಿಸಿದ ಮನ್ಸಪದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    ತಪ್ಪೊಪ್ಪಿಕೊಂಡ ಆರೋಪಿಗಳು:
    ತನಿಖೆ ನಡೆಸಿದಾಗ ಈ ಘಟನೆಯಲ್ಲಿ ಮೂವರು ಈ ಕೃತ್ಯ ಎಸಗಿರುವುದಾಗಿ ಬೆಳಕಿಗೆ ಬಂದಿದೆ. ಇದರಲ್ಲಿ ಓರ್ವ ಮಹಿಳೆಯೂ ಸೇರಿರುವುದಾಗಿ ತಿಳಿದು ಬರುತ್ತದೆ. ಕೂಡಲೇ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಯಶವಂತ್ ನಗರ್ ಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಒಂದು ಪ್ರದೇಶಕ್ಕೆ ತುಷಾರ್ ನನ್ನು ಕರೆಸಿದ ಮಹಿಳೆ, ತನ್ನಿಬ್ಬರು ಸಹಚರರ ಜೊತೆ ಸೇರಿ ಆತನಿಗೆ ಚೆನ್ನಾಗಿ ಥಳಿಸಿದ್ದಾಳೆ. ಬಳಿಕ ಚಾಕುವಿನಿಂದ ತುಷಾರ್ ಮರ್ಮಾಂಗವನ್ನು ಕತ್ತರಿಸಿದ್ದಾಳೆ ಅನ್ನೋದು ಬೆಳಕಿಗೆ ಬಂದಿದೆ.

    ಘಟನೆಯ ಬಳಿಕ ಆರೋಪಿಗಳೇ ತುಷಾರ್ ನನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಪ್ರಕರಣ ಸಂಬಂಧ ರಚನಾ, ತೇಜಸ್ ಮರಾಠೆ ಹಾಗೂ ಸತೀಶ್ ವಿರುದ್ಧ 307(ಕೊಲೆ ಯತ್ನ), 120ಬಿ(ಪಿತೂರಿ), 325( ಸ್ವಯಂಪ್ರೇರಿತ ಹಾನಿ), 342(ಅಕ್ರಮವಾಗಿ ಕೂಡಿಹಾಕು), 352(ಕ್ರಿಮಿನಲ್) ಮೊದಲಾದ ಐಪಿಸಿ ಸೆಕ್ಷನ್ ಗಳನ್ನು ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೆಪ್ಪರ್ ಸ್ಪ್ರೇನಿಂದ ಪಾರಾದ ಯುವತಿ ಪ್ರಕರಣ- ವಿಚಾರಣೆ ವೇಳೆ ಆರೋಪಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ

    ಪೆಪ್ಪರ್ ಸ್ಪ್ರೇನಿಂದ ಪಾರಾದ ಯುವತಿ ಪ್ರಕರಣ- ವಿಚಾರಣೆ ವೇಳೆ ಆರೋಪಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ

    ಬೆಂಗಳೂರು: ಪೆಪ್ಪರ್ ಸ್ಪ್ರೇಯಿಂದ ಯುವತಿ ಪಾರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಆಘಾತಕಾರಿ ಮಾಹಿತಿ ಹೊರಬಂದಿದೆ. ಹೈಫೈ ಹುಡುಗ ಅಂತಾ ಲವ್ ಮಾಡಿದ್ದ ಹುಡುಗಿ, ತನ್ನ ಪ್ರೇಮಿ ಕಾರ್ಪೆಂಟರ್ ಅಂತಾ ಗೊತ್ತಾದ ತಕ್ಷಣ ಮೂರು ವರ್ಷದ ಪ್ರೀತಿಯನ್ನು ಬ್ರೇಕಪ್ ಮಾಡಿಕೊಂಡಿದ್ದಾಳೆ.

    ಕಳೆದ 21ರಂದು ಸಂಜೆ ಕಂಪ್ಯೂಟರ್ ಕ್ಲಾಸ್ ಮುಗಿಸಿಕೊಂಡು ಬರುತ್ತಿದ್ದ ಯುವತಿಯನ್ನು, ಅಡ್ಡಹಾಕಿದ ನಾಲ್ವರು ಯುವಕರ ತಂಡ ಆಕೆಯನ್ನು ಕಿಡ್ನ್ಯಾಪ್ ಮಾಡಿದರು. ಕಿಡ್ನ್ಯಾಪ್ ಮಾಡಿದ ಯುವಕರ ತಂಡ ನೈಸ್ ರೋಡ್‍ನ ಅದೊಂದು ಜಾಗದಲ್ಲಿ ಕಾರು ನಿಲ್ಲಿಸಿದರು. ಈ ವೇಳೆ ಕಾರಿನಲ್ಲಿದ್ದ ಸಚಿನ್ ಎನ್ನುವ ಯುವಕ, ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಯುವತಿಯ ಮುಖಕ್ಕೆ ಪೆಪ್ಪರ್ ಸ್ಪ್ರೈ ಹೊಡೆದಿದ್ದ. ಸಚಿನ್ ಹೊಡೆದ ಪೆಪ್ಪರ್ ಸ್ಪ್ರೈಗೆ ಸ್ವತಃ ಯುವಕ ಕೂಡ ಅಸ್ವಸ್ಥನಾಗಿ ಕಾರಿನಿಂದ ಹೊರಬಿದ್ದಿದ್ದ. ಆ ತಕ್ಷಣ ಕಾರಿನಿಂದ ಹೊರಬಂದ ಯುವತಿ, ರಸ್ತೆಯಲ್ಲಿ ಬರುತ್ತಿದ್ದ ಆಟೋ ಡ್ರೈವರ್ ಸಹಾಯದಿಂದ ಮನೆ ಸೇರಿದ್ದಳು. ಇದನ್ನೂ ಓದಿ: ರಕ್ಷಿಸು ಅಂದ್ರೆ ನಾನೇ ಕಿಡ್ನಾಪ್ ಮಾಡಿಸಿದ್ದು ಅಂದ- ಪೆಪ್ಪರ್ ಸ್ಪ್ರೇ ಉಳಿಸಿತು ಯುವತಿ ಪ್ರಾಣ

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ಆರೋಪಿ ಸಚಿನ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹೊಸದೊಂದು ಕಥೆ ಹುಟ್ಟಿಕೊಂಡಿದೆ. ಸದ್ಯ ಕಿಡ್ನ್ಯಾಪ್ ಆಗಿದ್ದ ಯುವತಿ ಮತ್ತು ಸಚಿನ್ ಮೂರು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಹುಡುಗ ಒಳ್ಳೆ ಹಣವಂತ ಅಂತಾ ತಿಳಿದುಕೊಂಡಿದ್ದ ಯುವತಿಗೆ ತನ್ನ ಹುಡುಗ ಕಾರ್ಪೆಂಟರ್ ಅಂತಾ ತಿಳಿದು ನೆಗ್ಲೆಕ್ಟ್ ಮಾಡುವುದ್ದಕ್ಕೆ ಶುರು ಮಾಡಿದ್ದಳು. ಇದರಿಂದ ನೊಂದ ಪ್ರೇಮಿ ಏನಾದರೂ ಮಾಡಿ ಯುವತಿಯನ್ನು ಪಡೆಯಲೇಬೇಕು ಅಂತಾ ಕಿಡ್ನ್ಯಾಪ್ ಮಾಡಿ ಮದುವೆ ಆಗುವಂತೆ ಒತ್ತಾಯಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ನಾಲ್ಕು ಆರೋಪಿಗಳ ವಿಚಾರಣೆ ಮುಂದುವರೆದಿದ್ದು, ಯುವತಿಯ ವಿಚಾರಣೆ ನಂತರವಷ್ಟೇ ಅಸಲಿ ವಿಚಾರ ತಿಳಿಯಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ಮಾರಾಮರಿ – ನಡುರಸ್ತೆಯಲ್ಲೇ ರಕ್ತ ಮಡುವಿನಲ್ಲಿ ಒದ್ದಾಡಿದ್ರು

    ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ಮಾರಾಮರಿ – ನಡುರಸ್ತೆಯಲ್ಲೇ ರಕ್ತ ಮಡುವಿನಲ್ಲಿ ಒದ್ದಾಡಿದ್ರು

    ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರಿಗೆ ನಡುರಸ್ತೆಯಲ್ಲೇ ಬೇರೊಂದು ಗುಂಪು ಚಾಕು ಇರಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ನಗರಸಭೆ ಹಿಂಭಾಗದ ಬಾರ್ ಬಳಿ ನಡೆದಿದೆ.

    ಸುನೀಲ್, ಮಹೇಶ್ ಇಬ್ಬರು ಹಲ್ಲೆಗೊಳಗಾದ ಯುವಕರು. ಮೂರ್ತಿ ಹಾಗೂ ಆತನ ಸ್ನೇಹಿತ ಮಹೇಶ್ ಎಂಬಾತ ಚಾಕುವಿನಿಂದ ಹಲ್ಲೆ ಮಾಡಿದ್ದು, ತಮ್ಮನ ಮೇಲೆ ಜಗಳ ಮಾಡಿದ ಕೋಪದ ಹಿನ್ನೆಲೆಯಲ್ಲಿ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಹಲ್ಲೆಗೊಳಗಾದ ಸುನೀಲ್ ಹಾಗೂ ಮಹೇಶ್‍ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಏನಿದು ಘಟನೆ? ಮೂರ್ತಿಯ ಸಹೋದರನಾದ ದೇವ ಮೇಲೆ ಕಳೆದ 2 ದಿನಗಳ ಹಿಂದೆ ಬೈಕ್ ಪಾರ್ಕಿಂಗ್ ವಿಚಾರದಲ್ಲಿ ಸುನೀಲ್ ಹಾಗೂ ಮಹೇಶ್ ಎಂಬುವವರು ಗಲಾಟೆ ನಡೆಸಿದ್ದರು. ಹೀಗಾಗಿ ತನ್ನ ಸಹೋದರನ ಮೇಲೆ ಗಲಾಟೆ ನಡೆಸಿದ ಕಾರಣಕ್ಕೆ ಸುನೀಲ್ ಹಾಗೂ ಮಹೇಶ್‍ಗೆ ಕರೆ ಮಾಡಿದ್ದ ಮೂರ್ತಿ ಇಂದು ಬಾರ್ ಬಳಿ ತನ್ನ ಮತ್ತೊಬ್ಬ ಸ್ನೇಹಿತ ಮಹೇಶ್ ಜೊತೆ ಸೇರಿ ಜಗಳ ನಡೆಸಿದ್ದ.

    ಈ ವೇಳೆ ಏಕಾಏಕಿ ಚಾಕುವಿನಿಂದ ಸುನೀಲ್ ಹಾಗೂ ಮಹೇಶ್ ಮೇಲೆ ದಾಳಿ ನಡೆಸಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ಗಾಯಗೊಂಡಿದ್ದ ಸುನೀಲ್, ಮಹೇಶ್ ಇಬ್ಬರು ಸೇರಿ ಮೂರ್ತಿ ಜೊತೆ ಬಂದಿದ್ದ ಆತನ ಸ್ನೇಹಿತ ಮಹೇಶ್ ನನ್ನ ಹಿಡಿದುಕೊಂಡಿದ್ದಾರೆ. ಈ ವೇಳೆ ಆತನ ಕೈಗೂ ಚಾಕುವಿನ ಸಣ್ಣ-ಪುಟ್ಟ ಗಾಯಗಳಾಗಿದ್ದು, ಮೂವರು ರಕ್ತದ ಮಡುವಿನಲ್ಲಿ ನಡುರಸ್ತೆಯಲ್ಲೇ ಒದ್ದಾಟ ನಡೆಸಿದ್ದಾರೆ. ಈ ಘಟನೆ ದೃಶ್ಯಗಳು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಘಟನೆ ಸಂಬಂಧ ಆರೋಪಿಗಳಾದ ಮಹೇಶ್ ನನ್ನು ಚಿಂತಾಮಣಿ ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೋಡೋಕೆ ಚೆನ್ನಾಗಿದ್ದಳಲ್ಲ, ಆದ್ರೆ ಯುವತಿ ಅಲ್ಲ..!

    ನೋಡೋಕೆ ಚೆನ್ನಾಗಿದ್ದಳಲ್ಲ, ಆದ್ರೆ ಯುವತಿ ಅಲ್ಲ..!

    ಮಲೇಶಿಯಾ: ಈ ಫೋಟೋ ನೋಡಿದ ತಕ್ಷಣ ಯುವತಿ ನೋಡುವುದಕ್ಕೆ ಸುಂದರವಾಗಿದ್ದಾಳೆ ಎಂದು ಎಲ್ಲರೂ ಎಂದುಕೊಳ್ಳುತ್ತಾರೆ. ಆದರೆ ಈ ಸುಂದರವಾಗಿರುವಾಕೆ ಯುವತಿ ಅಲ್ಲ. ಈ ಫೋಟೋ ನೋಡಿ ಯುವತಿ ಎಂದುಕೊಂಡವರು ಸತ್ಯ ತಿಳಿದುಕೊಂಡಾಗ ಬೆಚ್ಚಿಬೀಳುತ್ತಾರೆ.

    ಈ ಚಿತ್ರದಲ್ಲಿರುವುದು ಯುವಕನಾಗಿದ್ದು, ಈತನ ಹೆಸರು ಅಬ್ದುಸ್ ಸಲಾಂ ಫಿರ್ದೋಜ್ ಅಜೀಜ್. ಅಬ್ದುಸ್ ಮಲೇಶಿಯಾದಲ್ಲಿ ವಾಸಿಸುತ್ತಿದ್ದು, ಅಲ್ಲಿನ ಕೋಲಾ ಲಮ್‍ಪುರ್ ಯೂನಿರ್ವಸಿಟಿಯಲ್ಲಿ ಓದುತ್ತಿದ್ದಾನೆ. ಅಬ್ದುಸ್‍ನನ್ನು ಮೊದಲ ಬಾರಿ ನೋಡಿದವರು ಆತನನ್ನು ಯುವತಿ ಎಂದುಕೊಳ್ಳುತ್ತಾರೆ. ಆದರೆ ಅಬ್ದುಸ್ ತನ್ನ ಲಿಂಗವನ್ನು ಸಾಬೀತುಪಡಿಸಲು ಐಡಿ ಕಾರ್ಡ್ ತೋರಿಸಬೇಕಾಗುತ್ತದೆ.

    ಅಬ್ದುಸ್‍ನ ಮುಖ ಯುವತಿಯ ರೀತಿ ಕಾಣಿಸುತ್ತದೆ. ಹಾಗಾಗಿ ಆತನನ್ನು ಯುವತಿ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅಬ್ದುಸ್ ತನ್ನ ಪರಿಚಯ ಮಾಡಿಸಿಕೊಳ್ಳಲು ಐಡಿ ಕಾರ್ಡ್ ತೋರಿಸಬೇಕಾಗುತ್ತದೆ. ಈ ಹಿಂದೆ ಅಬ್ದುಸ್ ಫುಟ್ ಬಾಲ್ ಮ್ಯಾಚ್ ನೋಡಲು ಹೋಗಿದ್ದನು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಅಬ್ದುಸ್‍ನನ್ನು ಯುವತಿ ಎಂದು ತಿಳಿದು ಆತನನ್ನು ಪರಿಶೀಲಿಸಲು ನಿರಾಕರಿಸಿದ್ದರು. ಆಗ ಅಬ್ದುಸ್ ತನ್ನ ಲಿಂಗವನ್ನು ಸಾಬೀತುಪಡಿಸಲು ಐಡಿ ಕಾರ್ಡ್ ತೋರಿಸಿದ್ದಾನೆ.

    ಅಬ್ದುಸ್ ಇದರಿಂದ ಸಾಕಷ್ಟು ಬೇಸರಗೊಂಡಿದ್ದನು. ಅಲ್ಲದೇ ತನಗಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಆತ ತನ್ನ ಉದ್ದ ಕೂದಲನ್ನು ಕೂಡ ಕತ್ತರಿಸಿಕೊಂಡಿದ್ದನು. ಕೂದಲು ಕತ್ತರಿಸಿದ ಬಳಿಕ ಆತನಿಗೆ ಸಮಸ್ಯೆ ಕಡಿಮೆಯಾಗಲಿಲ್ಲ. ಬದಲಿಗೆ ಆತನನ್ನು ಟಾಮ್ ಬಾಯ್ ಎಂದು ಕರೆಯುತ್ತಿದ್ದರು. ಕೆಲವರು ಅಬ್ದುಸ್‍ನನ್ನು ಮೀಸೆ, ಗಡ್ಡ ಬಿಡು ಎಂದು ಸಲಹೆ ನೀಡಿದರು. ಆದರೆ ಗಡ್ಡ, ಮೀಸೆ ಬಿಟ್ಟರೆ ಕ್ಯಾಟ್‍ಫೀಶ್ ರೀತಿ ಕಾಣಿಸುತ್ತೇನೆ ಎಂದು ಅಬ್ದುಸ್ ಅವರ ಸಲಹೆಯನ್ನು ನಿರಾಕರಿಸಿದ್ದಾನೆ.

    ಅಬ್ದುಸ್ ತನ್ನ ಮುಖದಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದಾನೆ. ಅಲ್ಲದೇ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಆತನಿಗೆ ಫ್ಯಾನ್ ಫಾಲೋವಿಂಗ್ ಹೆಚ್ಚಾಗಿದ್ದಾರೆ. ಅಬ್ದುಸ್‍ನ ಈ ಸುಂದರವಾದ ಮುಖವನ್ನು ‘ವಲ್ರ್ಡ್ ಪ್ರೀಟಿಯಸ್ಟ್ ಮೆನ್’ ಎಂದು ಕರೆಯುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv